Tag: ಪುಲ್ಕಿತ್ ಸಾಮ್ರಾಟ್

  • ಹಳದಿ ಸಮಾರಂಭದಲ್ಲಿ ನಟಿ ಕೃತಿ ಬಳಸಿದ್ದು ಹಳದಿಯಲ್ಲ

    ಹಳದಿ ಸಮಾರಂಭದಲ್ಲಿ ನಟಿ ಕೃತಿ ಬಳಸಿದ್ದು ಹಳದಿಯಲ್ಲ

    ನ್ನಡವೂ ಸೇರಿದಂತೆ ಹಲವಾರು ಭಾಷೆಗಳಲ್ಲಿ ನಟಿಸಿರುವ ಕೃತಿ ಕರಬಂಧ ಇತ್ತೀಚೆಗಷ್ಟೇ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಎರಡ್ಮೂರು ದಿನಗಳ ಕಾಲ ನಡೆದ ಮದುವೆ ಶಾಸ್ತ್ರದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿಕೊಂಡು ಹಸೆಮಣೆ ಏರಿದ್ದಾರೆ. ಅದರಲ್ಲೂ ಅವರು ಹಳದಿ ಶಾಸ್ತ್ರದಲ್ಲಿ ಹಳದಿಯನ್ನೇ ಬಳಸಿಲ್ಲ ಎನ್ನುವುದು ವಿಶೇಷ.

    ಸಾಮಾನ್ಯವಾಗಿ ಹಳದಿ ಶಾಸ್ತ್ರದಲ್ಲಿ ಅರಿಶಿನಕ್ಕೆ ಮಹತ್ವ ನೀಡಲಾಗುತ್ತದೆ. ಆದರೆ, ಕೃತಿ ಹಳದಿ (Haladi) ಬದಲು ಮಿಲ್ತಾನಿ ಮಿಟ್ಟಿ ಮಣ್ಣು ಬಳಕೆ ಮಾಡಿ, ಶಾಸ್ತ್ರದಂತೆ ಕೊಂಚ ಅರಿಶಿನ ಮಾತ್ರ ಬೆರೆಸಿದ್ದಾರಂತೆ. ಅದಕ್ಕೆ ಅವರದ್ದೇ ಆದ ಕಾರಣವನ್ನೂ ನೀಡಿದ್ದಾರೆ. ಮಿಲ್ತಾನಿ ಮಿಟ್ಟಿಗೆ ಹೊಳಪಿನ ಗುಣವಿದೆ ಎಂದಿದ್ದಾರೆ.

    ಕೃತಿ ಕರಬಂಧ (Kriri Kharbanda) ಅವರು ಬಾಲಿವುಡ್ ನಟ ಪುಲ್ಕಿತ್ ಸಾಮ್ರಾಟ್ (Pulkit Samrat)  ಜೊತೆ ಮಾರ್ಚ್ 15ರಂದು ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ಮೊನ್ನೆಯಷ್ಟೇ ಮದುವೆಯ ಸುಂದರ ಫೋಟೋಗಳನ್ನು ನಟಿ ಹಂಚಿಕೊಂಡಿದ್ದರು.

    ಇದೀಗ ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದಾರೆ. ಪಿಂಕ್ ಬಣ್ಣದ ಲೆಹೆಂಗಾದಲ್ಲಿ ಕೃತಿ ಕಂಗೊಳಿಸಿದ್ರೆ, ಉಸಿರು ಬಣ್ಣದ ಉಡುಗೆಯಲ್ಲಿ ಪುಲ್ಕಿತ್ ಹೈಲೆಟ್ ಆಗಿದ್ದರು. ನವಜೋಡಿಗೆ ಬಾಲಿವುಡ್ ಸೆಲೆಬ್ರಿಟಿಗಳು, ಅಭಿಮಾನಿಗಳು ಶುಭಕೋರಿದ್ದರು.

    ಮಾರ್ಚ್ 13ರಂದು ಮೆಹಂದಿ ಕಾರ್ಯಕ್ರಮ ನಡೆದಿದ್ದು, ಮಾರ್ಚ್ 14ರಂದು ಹಳದಿ ಶಾಸ್ತ್ರ ಮತ್ತು ಕಾಕ್‌ಟೈಲ್ ಪಾರ್ಟಿ ಆಯೋಜನೆ ಮಾಡಲಾಗಿತ್ತು. mನಿನ್ನೆ ಸುಮಾರು 300 ಎಕರೆಯಲ್ಲಿ ನಿರ್ಮಾಣಗೊಂಡಿರುವ ರೆಸಾರ್ಟ್‌ನಲ್ಲಿ ಈ ಜೋಡಿ ಹಸಮಣೆ ತುಳಿದಿದೆ. ದೆಹಲಿಯಲ್ಲಿರುವ ಐಟಿಸಿ ಗ್ರ‍್ಯಾಂಡ್ ಐಷಾರಾಮಿ ರೆಸಾರ್ಟ್‌ನಲ್ಲಿ ಮದುವೆ ನಡೆದಿತ್ತು.

     

    ಗ್ರ್ಯಾಂಡ್ ಭಾರತ್ ರೆಸಾರ್ಟ್‌ನಲ್ಲಿ ಸುಮಾರು 4 ಪ್ರೆಸಿಡೆಂನ್ಸಿಯಲ್ ವಿಲ್ಲಾವಿದೆ. ಐಷಾರಾಮಿ ಸ್ಪಾಗಳು ಸೇರಿದಂತೆ ಅನೇಕ ಸೌಲಭ್ಯಗಳಿವೆ. ಇನ್ನೂ ಕೃತಿ, ಪುಲ್ಕಿತ್ ಇಬ್ಬರೂ ದೆಹಲಿಯಲ್ಲೇ ಹುಟ್ಟಿ ಬೆಳೆದಿದ್ದಾರೆ. ಇವರ ಕುಟುಂಬ ದೆಹಲಿಯಲ್ಲಿಯೇ ನೆಲೆಸಿರುವುದರಿಂದ ಇದೇ ಸೂಕ್ತ ಆಯ್ಕೆ ಎಂದು ಜೋಡಿ ನಿರ್ಧರಿಸಿತ್ತು.

  • ‘ಗೂಗ್ಲಿ’ ಬೆಡಗಿ ಕೃತಿ ಕರಬಂಧ ಮದುವೆ ಆಲ್ಬಂ

    ‘ಗೂಗ್ಲಿ’ ಬೆಡಗಿ ಕೃತಿ ಕರಬಂಧ ಮದುವೆ ಆಲ್ಬಂ

    ನ್ನಡದ ‘ಗೂಗ್ಲಿ’ ನಟಿ ಕೃತಿ ಕರಬಂಧ (Kriri Kharbanda) ಅವರು ಬಾಲಿವುಡ್ ನಟ ಪುಲ್ಕಿತ್ ಸಾಮ್ರಾಟ್ (Pulkit Samrat) ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ಮಾರ್ಚ್ 15ರಂದು ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಮದುವೆಯ ಸುಂದರ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಅಲ್ಲು ಅರ್ಜುನ್ ಹೊಸ ಚಿತ್ರಕ್ಕೆ ಕೀರ್ತಿ ಸುರೇಶ್ ನಾಯಕಿ

    ಇದೀಗ ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದಾರೆ. ಪಿಂಕ್ ಬಣ್ಣದ ಲೆಹೆಂಗಾದಲ್ಲಿ ಕೃತಿ ಕಂಗೊಳಿಸಿದ್ರೆ, ಉಸಿರು ಬಣ್ಣದ ಉಡುಗೆಯಲ್ಲಿ ಪುಲ್ಕಿತ್ ಹೈಲೆಟ್ ಆಗಿದ್ದಾರೆ. ನವಜೋಡಿಗೆ ಬಾಲಿವುಡ್ ಸೆಲೆಬ್ರಿಟಿಗಳು, ಅಭಿಮಾನಿಗಳು ಶುಭಕೋರುತ್ತಿದ್ದಾರೆ.

    ಮಾರ್ಚ್ 13ರಂದು ಮೆಹಂದಿ ಕಾರ್ಯಕ್ರಮ ನಡೆದಿದ್ದು, ಮಾರ್ಚ್ 14ರಂದು ಹಳದಿ ಶಾಸ್ತ್ರ ಮತ್ತು ಕಾಕ್‌ಟೈಲ್ ಪಾರ್ಟಿ ಆಯೋಜನೆ ಮಾಡಲಾಗಿತ್ತು.

    ನಿನ್ನೆ ಸುಮಾರು 300 ಎಕರೆಯಲ್ಲಿ ನಿರ್ಮಾಣಗೊಂಡಿರುವ ರೆಸಾರ್ಟ್‌ನಲ್ಲಿ ಈ ಜೋಡಿ ಹಸಮಣೆ ತುಳಿದಿದೆ. ದೆಹಲಿಯಲ್ಲಿರುವ ಐಟಿಸಿ ಗ್ರ‍್ಯಾಂಡ್ ಐಷಾರಾಮಿ ರೆಸಾರ್ಟ್‌ನಲ್ಲಿ ಮದುವೆ ನಡೆದಿದೆ.

    ಗ್ರ‍್ಯಾಂಡ್ ಭಾರತ್ ರೆಸಾರ್ಟ್‌ನಲ್ಲಿ ಸುಮಾರು 4 ಪ್ರೆಸಿಡೆಂನ್ಸಿಯಲ್ ವಿಲ್ಲಾವಿದೆ. ಐಷಾರಾಮಿ ಸ್ಪಾಗಳು ಸೇರಿದಂತೆ ಅನೇಕ ಸೌಲಭ್ಯಗಳಿವೆ. ಇನ್ನೂ ಕೃತಿ, ಪುಲ್ಕಿತ್ ಇಬ್ಬರೂ ದೆಹಲಿಯಲ್ಲೇ ಹುಟ್ಟಿ ಬೆಳೆದಿದ್ದಾರೆ. ಇವರ ಕುಟುಂಬ ದೆಹಲಿಯಲ್ಲಿಯೇ ನೆಲೆಸಿರುವುದರಿಂದ ಇದೇ ಸೂಕ್ತ ಆಯ್ಕೆ ಎಂದು ಜೋಡಿ ನಿರ್ಧರಿಸಿತ್ತು.

  • ಬಹುಕಾಲದ ಗೆಳೆಯನ ಜೊತೆ ಹೊಸ ಜೀವನಕ್ಕೆ ಕಾಲಿಟ್ಟ ಗೂಗ್ಲಿ ಬೆಡಗಿ

    ಬಹುಕಾಲದ ಗೆಳೆಯನ ಜೊತೆ ಹೊಸ ಜೀವನಕ್ಕೆ ಕಾಲಿಟ್ಟ ಗೂಗ್ಲಿ ಬೆಡಗಿ

    ಬಾಲಿವುಡ್ ನಟಿ, ಯಶ್ (Yash) ನಾಯಕಿ ಕೃತಿ ಕರಬಂಧ (Kriti Kharbanda) ನಿನ್ನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ದೆಹಲಿಯಲ್ಲಿ ಅದ್ಧೂರಿಯಾಗಿ ಪುಲ್ಕಿತ್ ಸಾಮ್ರಾಟ್ (Pulkit Samrat) ಜೊತೆ ಹಸೆಮನೆ ಏರಿರುವ ಕೃತಿ ಕರಬಂಧ, ಬಹುಕಾಲದ ಗೆಳೆಯನ ಜೊತೆ ಮದುವೆ ಆಗಿದ್ದು ಅತ್ಯಂತ ಸಂಭ್ರಮ ತಂದಿದೆ ಎಂದಿದ್ದಾರೆ.

    ಹಲವು ವರ್ಷಗಳ ಪ್ರೀತಿಗೆ ಮದುವೆಯ (Wedding) ಮುದ್ರೆ ಒತ್ತಿರುವ ಈ ಜೋಡಿಯನ್ನು ಶುಭ ಹಾರೈಸುವುದಕ್ಕಾಗಿ ಬಾಲಿವುಡ್ ಸ್ಟಾರ್‌ಗಳಾದ ರಿಚಾ ಚಡ್ಡಾ, ಅಲಿ ಫಜಲ್, ಫರ್ಹಾನ್ ಅಖ್ತರ್, ಶಿಬಾನಿ ದಾಂಡೇಕರ್, ಜೋಯಾ ಅಕ್ತರ್, ರಿತೇಶ್ ಸಿದ್ವಾನಿ, ಲವ್ ರಂಜನ್ ಸೇರಿದಂತೆ ಸಾಕಷ್ಟು ಕಲಾವಿದರು ಮತ್ತು ತಂತ್ರಜ್ಞರು ಭಾಗಿಯಾಗಿದ್ದರು. ಹೊಸ ಜೋಡಿಗೆ ಶುಭ ಹಾರೈಸಿದ್ದಾರೆ.

    ಮಾರ್ಚ್ 13ರಂದು ಮೆಹಂದಿ ಕಾರ್ಯಕ್ರಮ ನಡೆದಿದ್ದು, ಮಾರ್ಚ್ 14ರಂದು ಹಳದಿ ಶಾಸ್ತ್ರ ಮತ್ತು ಕಾಕ್‌ಟೈಲ್ ಪಾರ್ಟಿ ಆಯೋಜನೆ ಮಾಡಲಾಗಿತ್ತು. ನಿನ್ನೆ ಸುಮಾರು 300 ಎಕರೆಯಲ್ಲಿ ನಿರ್ಮಾಣಗೊಂಡಿರುವ ರೆಸಾರ್ಟ್‌ನಲ್ಲಿ ಈ ಜೋಡಿ ಹಸಮಣೆ ತುಳಿದಿದೆ. ದೆಹಲಿಯಲ್ಲಿರುವ ಐಟಿಸಿ ಗ್ರ್ಯಾಂಡ್ ಐಷಾರಾಮಿ ರೆಸಾರ್ಟ್‌ನಲ್ಲಿ ಮದುವೆ ನಡೆದಿದೆ.

     

    ಗ್ರ್ಯಾಂಡ್ ಭಾರತ್ ರೆಸಾರ್ಟ್‌ನಲ್ಲಿ ಸುಮಾರು 4 ಪ್ರೆಸಿಡೆಂನ್ಸಿಯಲ್ ವಿಲ್ಲಾವಿದೆ. ಐಷಾರಾಮಿ ಸ್ಪಾಗಳು ಸೇರಿದಂತೆ ಅನೇಕ ಸೌಲಭ್ಯಗಳಿವೆ. ಇನ್ನೂ ಕೃತಿ, ಪುಲ್ಕಿತ್ ಇಬ್ಬರೂ ದೆಹಲಿಯಲ್ಲೇ ಹುಟ್ಟಿ ಬೆಳೆದಿದ್ದಾರೆ. ಇವರ ಕುಟುಂಬ ದೆಹಲಿಯಲ್ಲಿಯೇ ನೆಲೆಸಿರುವುದರಿಂದ ಇದೇ ಸೂಕ್ತ ಆಯ್ಕೆ ಎಂದು ಜೋಡಿ ನಿರ್ಧರಿಸಿದೆ.

  • ಕೃತಿ ಕರಬಂಧ ಮದುವೆಗೆ ಯಾರಿಗೆಲ್ಲಾ ಆಹ್ವಾನವಿದೆ?

    ಕೃತಿ ಕರಬಂಧ ಮದುವೆಗೆ ಯಾರಿಗೆಲ್ಲಾ ಆಹ್ವಾನವಿದೆ?

    ಶ್ (Yash) ನಾಯಕಿ, ಗೂಗ್ಲಿ ಬೆಡಗಿ ಕೃತಿ ಕರಬಂಧ (Kriti Kharbanda) ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇದೇ ಮಾರ್ಚ್ 15ಕ್ಕೆ ದೆಹಲಿಯಲ್ಲಿ ಅದ್ಧೂರಿಯಾಗಿ ಪುಲ್ಕಿತ್ ಸಾಮ್ರಾಟ್ (Pulkit Samrat) ಜೊತೆ ಮದುವೆಯಾಗುತ್ತಿದ್ದಾರೆ. ಹಾಗಾದ್ರೆ ಯಾರಿಗೆಲ್ಲಾ ಕೃತಿಯ ಮದುವೆಗೆ ಆಹ್ವಾನವಿದೆ. ಯಾರೆಲ್ಲಾ ‘ಗೂಗ್ಲಿ’ (Googly) ನಟಿಯ ಮದುವೆಗೆ ಹಾಜರಿ ಹಾಕಲಿದ್ದಾರೆ.

    ಹಲವು ವರ್ಷಗಳ ಪ್ರೀತಿಗೆ ಮದುವೆಯ (Wedding) ಮುದ್ರೆ ಒತ್ತಲು ನಟಿ ಸಜ್ಜಾಗಿದ್ದಾರೆ. ಇನ್ನೂ ಬಾಲಿವುಡ್ ಸ್ಟಾರ್‌ಗಳಾದ ರಿಚಾ ಚಡ್ಡಾ, ಅಲಿ ಫಜಲ್, ಫರ್ಹಾನ್ ಅಖ್ತರ್, ಶಿಬಾನಿ ದಾಂಡೇಕರ್, ಜೋಯಾ ಅಕ್ತರ್, ರಿತೇಶ್ ಸಿದ್ವಾನಿ, ಲವ್ ರಂಜನ್ ಸೇರಿದಂತೆ ಆಪ್ತರನ್ನು ಕೃತಿ-ಪುಲ್ಕಿತ್ ಜೋಡಿ ಮದುವೆಗೆ ಆಮಂತ್ರಣ ನೀಡಿದ್ದಾರೆ. ಇದನ್ನೂ ಓದಿ:‘ಕಾಂತಾರ’ ಪ್ರೀಕ್ವೇಲ್‌ನಲ್ಲಿ ರಿಷಬ್ ಶೆಟ್ಟಿ ಜೊತೆ ಜ್ಯೂ.ಎನ್‌ಟಿಆರ್

    ಮಾರ್ಚ್ 13ರಂದು ಮೆಹಂದಿ ಕಾರ್ಯಕ್ರಮ ನಡೆಯಲಿದೆ. ಮಾರ್ಚ್ 14ರಂದು ಹಳದಿ ಶಾಸ್ತ್ರ ಮತ್ತು ಕಾಕ್‌ಟೈಲ್ ಪಾರ್ಟಿ ಆಯೋಜನೆ ಮಾಡಲಾಗಿದೆ. ಮಾರ್ಚ್ 15ರಂದು ಕೃತಿ-ಪುಲ್ಕಿತ್ ಮದುವೆ ನಡೆಯಲಿದೆ. ಈಗ ಈ ಜೋಡಿ ಮದುವೆ ಆಗುತ್ತಿರುವ ಸ್ಥಳದ ಬಗ್ಗೆ ಮಾಹಿತಿ ಹೊರಬಿದ್ದಿದೆ. ಸುಮಾರು 300 ಎಕರೆಯಲ್ಲಿ ನಿರ್ಮಾಣಗೊಂಡಿರುವ ರೆಸಾರ್ಟ್‌ನಲ್ಲಿ ಈ ಜೋಡಿ ಹಸಮಣೆ ತುಳಿಯಲಿದ್ದಾರೆ.

    ಕೃತಿ ಕರಬಂಧ ಹಾಗೂ ಪುಲ್ಕಿತ್ ಸಮರ್ಥ್ ದೆಹಲಿಯಲ್ಲಿರುವ ಐಟಿಸಿ ಗ್ರ‍್ಯಾಂಡ್ ಐಷಾರಾಮಿ ರೆಸಾರ್ಟ್‌ನಲ್ಲಿ ಮದುವೆ ಆಗುತ್ತಿದ್ದಾರೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. ಈ ರೆಸಾರ್ಟ್ 300 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿದೆ. ಈ ಭವ್ಯವಾದ ರೆಸಾರ್ಟ್ ಅರಮನೆಯ ವಾಸ್ತುಶಿಲ್ಪವನ್ನು ಹೊಂದಿದೆ. ಪ್ರಾಚೀನ ಶೈಲಿಯಲ್ಲಿ ಸುಂದರವಾದ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿದೆ.

    ಗ್ರ‍್ಯಾಂಡ್ ಭಾರತ್ ರೆಸಾರ್ಟ್‌ನಲ್ಲಿ ಸುಮಾರು 4 ಪ್ರೆಸಿಡೆಂನ್ಸಿಯಲ್ ವಿಲ್ಲಾವಿದೆ. ಐಷಾರಾಮಿ ಸ್ಪಾಗಳು ಸೇರಿದಂತೆ ಅನೇಕ ಸೌಲಭ್ಯಗಳಿವೆ. ಇನ್ನೂ ಕೃತಿ, ಪುಲ್ಕಿತ್ ಇಬ್ಬರೂ ದೆಹಲಿಯಲ್ಲೇ ಹುಟ್ಟಿ ಬೆಳೆದಿದ್ದಾರೆ. ಇವರ ಕುಟುಂಬ ದೆಹಲಿಯಲ್ಲಿಯೇ ನೆಲೆಸಿರುವುದರಿಂದ ಇದೇ ಸೂಕ್ತ ಆಯ್ಕೆ ಎಂದು ಜೋಡಿ ನಿರ್ಧರಿಸಿದೆ.

  • ‘ಗೂಗ್ಲಿ’ ನಟಿ ಕೃತಿ ಕರಬಂಧ ಮದುವೆ ಯಾವಾಗ, ಎಲ್ಲಿ?

    ‘ಗೂಗ್ಲಿ’ ನಟಿ ಕೃತಿ ಕರಬಂಧ ಮದುವೆ ಯಾವಾಗ, ಎಲ್ಲಿ?

    ನ್ನಡದ ನಟಿ, ಬಾಲಿವುಡ್ ಬೆಡಗಿ ಕೃತಿ ಕರಬಂಧ (Kriti Kharbanda) ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಬಹುಕಾಲದ ಗೆಳೆಯ ಪುಲ್ಕಿತ್ ಸಾಮ್ರಾಟ್ (Pulkit Samrat) ಜೊತೆ ಕೃತಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಹಾಗಾದ್ರೆ ಕೃತಿ ಯಾವಾಗ, ಎಲ್ಲಿ? ಇಲ್ಲಿದೆ ಮಾಹಿತಿ.

    ‘ಗೂಗ್ಲಿ’ ಬೆಡಗಿ ಕೃತಿ ಜೊತೆ ಪುಲ್ಕಿತ್ ಇದೇ ಮಾರ್ಚ್ 15ರಂದು ದೆಹಲಿಯಲ್ಲಿ ಗ್ರ‍್ಯಾಂಡ್ ಆಗಿ ಮದುವೆ (Wedding) ಆಗುತ್ತಿದ್ದಾರೆ. ಈ ಜೋಡಿ ತಮ್ಮ ಆಪ್ತರಿಗೆ, ಬಾಲಿವುಡ್‌ನ ನಟ-ನಟಿಯರಿಗೆ ಆಮಂತ್ರಣ ನೀಡಿದ್ದಾರೆ.

    ಈಗ ಈ ಜೋಡಿ ಮದುವೆ ಆಗುತ್ತಿರುವ ಸ್ಥಳದ ಬಗ್ಗೆ ಮಾಹಿತಿ ಹೊರಬಿದ್ದಿದೆ. ಸುಮಾರು 300 ಎಕರೆಯಲ್ಲಿ ನಿರ್ಮಾಣಗೊಂಡಿರುವ ರೆಸಾರ್ಟ್‌ನಲ್ಲಿ ಕೃತಿ ಮದುವೆಯಾಗುತ್ತಿದ್ದಾರೆ. ಮಾರ್ಚ್ 13ರಿಂದ ಮಾರ್ಚ್ 16ರವರೆಗೆ ಮದುವೆ ಶಾಸ್ತ್ರಗಳು ನಡೆಯಲಿದೆ. ಮಾರ್ಚ್‌ 15ರಂದು ಹೊಸ ಬಾಳಿಗೆ ಕಾಲಿಡಲಿದ್ದಾರೆ. ಇದನ್ನೂ ಓದಿ:Bigg Boss: ತೆಲುಗು ನಿರ್ದೇಶಕ ಸೂರ್ಯ ಕಿರಣ್ ನಿಧನ

    ‘ಗೂಗ್ಲಿ’ ಬ್ಯೂಟಿ ಕೃತಿ ಕರಬಂಧ ಹಾಗೂ ಪುಲ್ಕಿತ್ ಸಮರ್ಥ್ ದೆಹಲಿಯಲ್ಲಿರುವ ಐಟಿಸಿ ಗ್ರ‍್ಯಾಂಡ್ ಐಷಾರಾಮಿ ರೆಸಾರ್ಟ್‌ನಲ್ಲಿ ಮದುವೆ ಆಗುತ್ತಿದ್ದಾರೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. ಈ ರೆಸಾರ್ಟ್ 300 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿದೆ. ಪ್ರಾಚೀನ ಶೈಲಿಯಲ್ಲಿ ಸುಂದರವಾದ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿದೆ.

    ಗ್ರ‍್ಯಾಂಡ್ ಭಾರತ್ ರೆಸಾರ್ಟ್‌ನಲ್ಲಿ ಸುಮಾರು 4 ಪ್ರೆಸಿಡೆಂನ್ಸಿಯಲ್ ವಿಲ್ಲಾವಿದೆ. ಐಷಾರಾಮಿ ಸ್ಪಾಗಳು ಸೇರಿದಂತೆ ಅನೇಕ ಸೌಲಭ್ಯಗಳಿವೆ. ಇನ್ನೂ ಕೃತಿ, ಪುಲ್ಕಿತ್ ಇಬ್ಬರೂ ದೆಹಲಿಯಲ್ಲೇ ಹುಟ್ಟಿ ಬೆಳೆದಿದ್ದಾರೆ. ಇವರ ಕುಟುಂಬ ದೆಹಲಿಯಲ್ಲಿಯೇ ನೆಲೆಸಿರುವುದರಿಂದ ಇದೇ ಸೂಕ್ತ ಆಯ್ಕೆ ಎಂದು ಜೋಡಿ ನಿರ್ಧರಿಸಿದೆ.

    2019ರಲ್ಲಿ ತೆರೆಕಂಡ ‘ಪಾಗಲ್‌ಪಂತಿ’ ಸಿನಿಮಾದಲ್ಲಿ ಪುಲ್ಕಿತ್ ಸಾಮ್ರಾಟ್, ಕೃತಿ ಜೋಡಿಯಾಗಿ ನಟಿಸಿದ್ದರು. ಈ ವೇಳೆ, ಇಬ್ಬರ ಪರಿಚಯವಾಗಿತ್ತು. ಈ ಪರಿಚಯ ಪ್ರೀತಿಗೆ ತಿರುಗಿದೆ. ಹಲವು ವರ್ಷಗಳ ಡೇಟಿಂಗ್ ನಂತರ ಇದೀಗ ಗುರುಹಿರಿಯರ ಸಮ್ಮತಿಯ ಮೇರೆಗೆ ಈ ಜೋಡಿ ಮದುವೆಯಾಗುತ್ತಿದ್ದಾರೆ.

  • ಮಾರ್ಚ್‌ 13ಕ್ಕೆ ‘ಗೂಗ್ಲಿ’ ನಟಿ ಕೃತಿ ಕರಬಂಧ ಮದುವೆ

    ಮಾರ್ಚ್‌ 13ಕ್ಕೆ ‘ಗೂಗ್ಲಿ’ ನಟಿ ಕೃತಿ ಕರಬಂಧ ಮದುವೆ

    ನ್ನಡದ ನಟಿ ಕೃತಿ ಕರಬಂಧ (Kriti Kharbanda) ಅವರು ಬಹುಕಾಲದ ಗೆಳೆಯ ಪುಲ್ಕಿತ್ ಸಾಮ್ರಾಟ್ (Pulkit Samrat) ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇದೇ ಮಾರ್ಚ್ 13ಕ್ಕೆ ದಾಂಪತ್ಯ ಜೀವನಕ್ಕೆ ಕೃತಿ ಕಾಲಿಡಲಿದ್ದಾರೆ. ಮದುವೆ (Wedding) ಬಗ್ಗೆ ನಟಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.

    ಇತ್ತೀಚೆಗೆ ನಟಿ ಕೃತಿ ಅವರು ಗುಟ್ಟಾಗಿ ಎಂಗೇಜ್‌ಮೆಂಟ್ ಆಗಿದ್ದಾರೆ ಎಂದು ಸುದ್ದಿಯಾಗಿತ್ತು. ಈ ಬೆನ್ನಲ್ಲೇ ಮದುವೆ ಬಗ್ಗೆ ನಟಿ ಅಧಿಕೃತ ಅಪ್‌ಡೇಟ್ ನೀಡಿದ್ದಾರೆ. ಕನ್ನಡ ಸಿನಿಮಾಗಳ ನಂತರ ಕೃತಿ ಬಾಲಿವುಡ್‌ಗೆ ಕಾಲಿಟ್ಟ ಮೇಲೆ ಪುಲ್ಕಿತ್ ಪರಿಚಯವಾಯ್ತು. ಆ ಪರಿಚಯ ಪ್ರೀತಿಗೆ ತಿರುಗಿ ಪುಲ್ಕಿತ್‌ ಜೊತೆ 5 ವರ್ಷಗಳ ಕಾಲ ಕೃತಿ ಡೇಟಿಂಗ್ ಮಾಡಿದ್ದಾರೆ. ಬಳಿಕ ಇದೀಗ ಹೊಸ ಬಾಳಿಗೆ ಬೆಂಗಳೂರಿನ ಬೆಡಗಿ ಕಾಲಿಡುತ್ತಿದ್ದಾರೆ. ಇದನ್ನೂ ಓದಿ:ಹೃದಯ ಸ್ತಂಭನದಿಂದ ಕಿರುತೆರೆ ನಟ ರಿತುರಾಜ್ ಸಿಂಗ್ ನಿಧನ

    ಇತ್ತೀಚೆಗೆ ಗೂಗ್ಲಿ ಬೆಡಗಿ ಕೃತಿ ಅವರು ಪುಲ್ಕಿಟ್ ಸಾಮ್ರಾಟ್ ಜೊತೆ ಇರುವ ಫೋಟೋ ಹಂಚಿಕೊಂಡು, ‘ಕೈಜೋಡಿಸಿ ಒಟ್ಟಾಗಿ ಸಾಗೋಣ’ ಎಂದು ಅಡಿಬರಹ ನೀಡಿದ್ದರು. ಅವರು ಬೇಕಂತಲೇ ‘ಮಾರ್ಚ್’ ಎಂಬ ಪದವನ್ನು ಬಳಸಿದ್ದರು. ಈಗಾಗಲೇ ಮದುವೆಗೆ ಸಕಲ ತಯಾರಿ ನಡೆಯುತ್ತಿದೆ ಎಂದು ಎನ್ನಲಾಗುತ್ತಿದೆ. ಆದರೆ ಮದುವೆ ನಡೆಯುವ ಸ್ಥಳದ ಬಗ್ಗೆ ಮಾಹಿತಿ ಸಿಗುವುದು ಬಾಕಿ ಇದೆ.


    ಯಶ್‌ಗೆ (Yash) ನಾಯಕಿಯಾಗಿ ‘ಗೂಗ್ಲಿ’ ಸಿನಿಮಾ ಮೂಲಕ ಕೃತಿ ಕರಬಂಧ (Kriti Kharbanda) ಸೌಂಡ್ ಮಾಡಿದ್ದರು. ದಳಪತಿ, ಪ್ರೇಮ್ ಅಡ್ಡ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

  • ಸೀಕ್ರೆಟ್ ಆಗಿ ಎಂಗೇಜ್‌ಮೆಂಟ್ ಮಾಡಿಕೊಂಡ್ರಾ ‘ಗೂಗ್ಲಿ’ ನಟಿ

    ಸೀಕ್ರೆಟ್ ಆಗಿ ಎಂಗೇಜ್‌ಮೆಂಟ್ ಮಾಡಿಕೊಂಡ್ರಾ ‘ಗೂಗ್ಲಿ’ ನಟಿ

    ನ್ನಡದ ‘ಗೂಗ್ಲಿ’ (Googly) ನಟಿ ಕೃತಿ ಕರಬಂಧ(Kriti Kharabanda), ಬಹುಕಾಲದ ಗೆಳೆಯ ಪುಲ್ಕಿತ್ ಸಾಮ್ರಾಟ್ ಜೊತೆ ಸೀಕ್ರೆಟ್ ಆಗಿ ಎಂಗೇಜ್‌ಮೆಂಟ್ (Engagement) ಮಾಡಿಕೊಂಡ್ರಾ ಎಂಬ ಅನುಮಾನ ಅಭಿಮಾನಿಗಳಲ್ಲಿ ಕಾಡ್ತಿದೆ. ನಿಶ್ಚಿತಾರ್ಥ ಆಗಿದೆ ಎನ್ನಲಾದ ಫೋಟೋಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

    ಯಶ್ (Yash) ನಾಯಕಿ ‘ಗೂಗ್ಲಿ’ ಬೆಡಗಿ ಇದೀಗ ಬಾಲಿವುಡ್‌ನಲ್ಲಿ ನಾಯಕಿಯಾಗಿ ಮಿಂಚ್ತಿದ್ದಾರೆ. ಇದರ ನಡುವೆ ನಟಿಯ ಎಂಗೇಜ್‌ಮೆಂಟ್ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಕಳೆದ ಹಲವು ವರ್ಷಗಳಿಂದ ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ. ಈ ಹಿಂದೆಯೇ ನಿಶ್ಚಿತಾರ್ಥ ಆಗಿದ್ರೂ ಕೂಡ ಎಲ್ಲೂ ಸೀಕ್ರೆಟ್ ರಿವೀಲ್ ಮಾಡದೇ ಸುಮ್ಮನೆ ಇದ್ರಾ ಎಂಬ ಅನುಮಾನ ನೆಟ್ಟಿಗರಲ್ಲಿದ್ದು, ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಂದಹಾಗೆ, ಈ ವರ್ಷವೇ ಪುಲ್ಕಿತ್ ಸಾಮ್ರಾಟ್- ಕೃತಿ ಜೋಡಿ ಮದುವೆಯಾಲಿದ್ದಾರೆ ಎನ್ನಲಾಗುತ್ತಿದೆ.

    ಕನ್ನಡದ ಗೂಗ್ಲಿ, ಸೂಪರ್ ರಂಗಾ, ಬೆಳ್ಳಿ, ಗಲಾಟೆ, ಮಾಸ್ತಿಗುಡಿ, ಸೇರಿದಂತೆ ಹಲವು ಸಿನಿಮಾಗಳಲ್ಲಿ ಕೃತಿ ನಟಿಸಿದ್ದಾರೆ. ಇದೀಗ ತೆಲುಗು ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ:Bigg Boss: ಫಿನಾಲೆಯಲ್ಲಿ ಅಪ್ಪ, ಮಗಳ ಸ್ಪೆಷಲ್‌ ಫೋಟೋಶೂಟ್‌

    ಹಿಂದಿ ‘ರಿಸ್ಕಿ ರೊಮಿಯೋ’ ಸೇರಿದಂತೆ ಹಲವು ಸಿನಿಮಾಗಳು ಕೃತಿ ಕೈಯಲ್ಲಿದೆ. ಪುಲ್ಕಿತ್ (Pulkit Samrat) ಕೂಡ ಹಿಂದಿಯಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದಾರೆ.

  • ಶೀಘ್ರದಲ್ಲೇ ನಡೆಯಲಿದೆ ಪುಲ್ಕಿತ್ ಜೊತೆ `ಗೂಗ್ಲಿ’ ನಟಿ ಕೃತಿ ಮದುವೆ

    ಶೀಘ್ರದಲ್ಲೇ ನಡೆಯಲಿದೆ ಪುಲ್ಕಿತ್ ಜೊತೆ `ಗೂಗ್ಲಿ’ ನಟಿ ಕೃತಿ ಮದುವೆ

    ಚಿತ್ರರಂಗದಲ್ಲಿ ಒಬ್ಬರ ಹಿಂದೆ ಒಬ್ಬರು ಹಸೆಮಣೆ ಏರುತ್ತಿದ್ದಾರೆ. ಅಥಿಯಾ ಶೆಟ್ಟಿ- ಕೆ.ಎಲ್ ರಾಹುಲ್, ಸಿದ್ ಮತ್ತು ಕಿಯಾರಾ ಇತ್ತೀಚಿಗೆ ಮದುವೆಯಾದರು. ಈ ಬೆನ್ನಲ್ಲೇ ಕನ್ನಡದ ಗೂಗ್ಲಿ ನಟಿ ಕೃತಿ ಮದುವೆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಇದೀಗ ಪುಲ್ಕಿತ್ ಸಾಮ್ರಾಟ್  (Pulkit Samrat) ಜೊತೆ ಕೃತಿ ಕರಬಂದ (Kriti Kharbanda) ಮದುವೆ (Wedding) ಮಾತು ಚಾಲ್ತಿಯಲ್ಲಿದೆ.

    ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲೂ `ಗೂಗ್ಲಿ’ (Googly) ಚಿತ್ರದಲ್ಲಿ ಯಶ್‌ಗೆ (Yash) ನಾಯಕಿಯಾಗಿ ಕೃತಿ ಮೋಡಿ ಮಾಡಿದ್ದರು. ಇದೀಗ ಬಾಲಿವುಡ್ (Bollywood) ಸಿನಿಮಾದಲ್ಲಿ ನಟಿಸುತ್ತ ಅಲ್ಲಿಯೇ ಸೆಟಲ್ ಆಗಿದ್ದಾರೆ. ಇನ್ನೂ ಪುಲ್ಕಿತ್ ಸಾಮ್ರಾಟ್ ಜೊತೆಗಿನ ಕೃತಿ ಡೇಟಿಂಗ್ ವಿಚಾರವೇನು ಇದೀಗ ಗುಟ್ಟಾಗಿ ಉಳಿದಿಲ್ಲ. ಬಾಲಿವುಡ್‌ನಲ್ಲಿ ಸದ್ಯದಲ್ಲಿಯೇ ಈ ಜೋಡಿ ಮದುವೆಯಾಗುತ್ತಿದ್ದಾರೆ ಎಂದು ಹರಿದಾಡುತ್ತಿದೆ. ಇದನ್ನೂ ಓದಿ: ವರುಣ್ ತೇಜ್ ಜೊತೆ ಲಾವಣ್ಯ ಮದುವೆ? ಸ್ಪಷ್ಟನೆ ನೀಡಿದ ನಟಿ

    ಪುಲ್ಕಿತ್ ಮತ್ತು ಕೃತಿ ಈ ವರ್ಷದ ಅಂತ್ಯದೊಳಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ. ಸದ್ಯದಲ್ಲಿಯೇ ಈ ಕುರಿತು ಅಧಿಕೃತ ಅಪ್‌ಡೇಟ್ ಕೂಡ ಹೊರಬೀಳಲಿದೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಈ ಮದುವೆ ಅದೆಷ್ಟರ ಮಟ್ಟಿಗೆ ನಿಜಾ ಎಂದು ಈ ಜೋಡಿಯೇ ತಿಳಿಸಬೇಕಿದೆ.

    ಇನ್ನೂ ಎಲ್ಲರ ಮದುವೆಯಾಯ್ತು ಮುಂದಿನ ಮದುವೆ ಜೋಡಿ ನೀವೇ.. ಬೇಗ ಮದುವೆಯ ಗುಡ್ ನ್ಯೂಸ್ ಕೊಡಿ ಎಂದು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡ್ತಿದ್ದಾರೆ.

     

     

  • ಬಾಲಿವುಡ್‌ನ ಈ ನಟನ ಜೊತೆ ಹಸೆಮಣೆ ಏರಲು ರೆಡಿಯಾದ `ಗೂಗ್ಲಿ’ ನಟಿ

    ಬಾಲಿವುಡ್‌ನ ಈ ನಟನ ಜೊತೆ ಹಸೆಮಣೆ ಏರಲು ರೆಡಿಯಾದ `ಗೂಗ್ಲಿ’ ನಟಿ

    ಚಂದನವನದ ಬ್ಯೂಟಿ ಕ್ವೀನ್ ಕೃತಿ ಕರಬಂಧ (Kriti Kharbhanda) ಇದೀಗ ಹಿಂದಿ ಮತ್ತು ದಕ್ಷಿಣದ ಚಿತ್ರರಂಗದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ತಮ್ಮ ಮದುವೆಯ ವಿಚಾರವಾಗಿ ನಟಿ ಕೃತಿ ಸುದ್ದಿಯಲ್ಲಿದ್ದಾರೆ. ಬಾಲಿವುಡ್‌ನ ಸ್ಟಾರ್ ನಟನ ಜತೆ `ಗೂಗ್ಲಿ ನಟಿ’ ಹಸೆಮಣೆ ಏರಲಿದ್ದಾರೆ.

     

    View this post on Instagram

     

    A post shared by Kriti Kharbanda (@kriti.kharbanda)

    ಕನ್ನಡದ ಚಿರು, ಗೂಗ್ಲಿ, ಪ್ರೇಮ ಅಡ್ಡಾ, ಸೂಪರ್ ರಂಗಾ, ಬೆಳ್ಳಿ, ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅದರಲ್ಲೂ ಯಶ್‌ಗೆ ನಾಯಕಿಯಾಗಿ ನಟಿಸಿದ್ದ `ಗೂಗ್ಲಿ’ (Googly Film) ಚಿತ್ರದ ಕೃತಿಗೆ ದೊಡ್ಡ ಮಟ್ಟದಲ್ಲಿ ಬ್ರೇಕ್ ಕೊಟ್ಟಿತ್ತು. ಸದ್ಯ ಬಿಟೌನ್ ಅಡ್ಡಾದಲ್ಲಿ ಒಂದರ ಹಿಂದೆ ಒಂದು ಸಿನಿಮಾ ಮಾಡುತ್ತಾ ಮಾಡುತ್ತಾ ಬ್ಯುಸಿಯಾಗಿದ್ದಾರೆ. ಈಗ ಮದುವೆ ವಿಷ್ಯವಾಗಿ ಈ ನಟಿ ಸಂಚಲನ ಮೂಡಿಸುತ್ತಿದ್ದಾರೆ. ಇದನ್ನೂ ಓದಿ:`ಗಿಚ್ಚಿ ಗಿಲಿಗಿಲಿ’ ವಿನ್ನರ್ ಆದ ವನ್ಷಿಕಾ, ರನ್ನರ್ ಅಪ್ ಆಗಿ ನಿವೇದಿತಾ ಗೌಡ

    ಬಾಲಿವುಡ್ ನಟ ಪುಲ್ಕಿತ್ ಸಾಮ್ರಾಟ್(Pulkit Samrat)  ಜೊತೆ ನಟಿ ಕೃತಿ ಕರಬಂಧ ಕಳೆದ 4 ವರ್ಷಗಳಿಂದ ಡೇಟಿಂಗ್‌ನಲ್ಲಿದ್ದಾರೆ. ಈ ಜೋಡಿ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಎನ್ನಲಾಗುತ್ತಿದೆ. ಕುಟುಂಬದ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ಕೃತಿ ಮತ್ತು ಪುಲ್ಕಿತ್ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

    ಸಲ್ಮಾನ್ ಖಾನ್ (Salman Khan) ಮಾಜಿ ಬಾಮೈದ ಪುಲ್ಕಿತ್ ಜೊತೆ ಕೃತಿ ಕರಬಂಧ ಮದುವೆ ಆಗುತ್ತಿರುವುದು ಅದೆಷ್ಟರ ಮಟ್ಟಿಗೆ ನಿಜ ಎಂಬುದನ್ನು ಈ ಜೋಡಿ ಅಧಿಕೃತವಾಗಿ ತಿಳಿಸುವವೆರೆಗೂ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಜೊತೆಗಿರದ ಜೋಡಿಗಳು ಲಾಕ್‍ಡೌನ್ ಹೇಗೆ ಕಳೆಯುತ್ತಿದ್ದಾರೆ ಊಹಿಸಲು ಆಗುತ್ತಿಲ್ಲ: ಕೃತಿ

    ಜೊತೆಗಿರದ ಜೋಡಿಗಳು ಲಾಕ್‍ಡೌನ್ ಹೇಗೆ ಕಳೆಯುತ್ತಿದ್ದಾರೆ ಊಹಿಸಲು ಆಗುತ್ತಿಲ್ಲ: ಕೃತಿ

    – ಅವನು ನನ್ನ ಜೊತೆ ಇರುವುದಕ್ಕೆ ಖುಷಿಯಿದೆ

    ಮುಂಬೈ: ಲಾಕ್‍ಡೌನ್ ಸಮಯದಲ್ಲಿ ಬೇರೆ ಬೇರೆ ಇರುವ ಜೋಡಿಗಳು ಹೇಗೆ ಕಾಲ ಕಳೆಯುತ್ತಿದ್ದಾರೆ ನನಗೆ ಗೊತ್ತಿಲ್ಲ ಎಂದು ಗೂಗ್ಲಿ ಬೆಡಗಿ ಕೃತಿ ಕರಬಂಧ ಹೇಳಿದ್ದಾರೆ.

    ಕೊರೊನಾ ವೈರಸ್ ಭಯದಿಂದ ದೇಶವೇ ಲಾಕ್‍ಡೌನ್ ಆಗಿದೆ. ಯಾರೂ ಕೂಡ ತಮ್ಮ ಮನೆಬಿಟ್ಟು ಆಚೆಗೆ ಬರುತ್ತಿಲ್ಲ. ನಟಿ-ನಟಿಯರು ಕೂಡ ಸಿನಿಮಾ ಕೆಲಸವನ್ನು ಬಿಟ್ಟು ಗೂಡ ಸೇರಿದ್ದಾರೆ. ಈ ವೇಳೆ ಬಾಲಿವುಡ್‍ನ ಕ್ಯೂಟ್ ಕಪಲ್ಸ್ ಕೃತಿ ಕರಬಂಧ ಮತ್ತು ಪುಲ್ಕಿತ್ ಸಾಮ್ರಾಟ್ ಲಾಕ್‍ಡೌನ್ ಸಮಯವನ್ನು ಒಂದೇ ಮನೆಯಲ್ಲಿ ಉಳಿದು ಎಂಜಾಯ್ ಮಾಡುತ್ತಿದ್ದಾರೆ.

    ಈ ವಿಚಾರವಾಗಿ ಮಾಧ್ಯಮವೊಂದರ ಜೊತೆ ಮಾತನಾಡಿರುವ ಕೃತಿ, ನಾವು ಮೊದಲೇ ಟ್ರಾಫಿಕ್ಸ್ ಸಮಸ್ಯೆಯಿಂದ ಒಂದೇ ಮನೆಯಲ್ಲಿ ಇರಲು ತೀರ್ಮಾನಿಸಿದ್ದೆವು. ಈಗ ಲಾಕ್‍ಡೌನ್ ಸಮಯದಲ್ಲೂ ಒಂದೇ ಮನೆಯಲ್ಲಿ ಇರುವುದಕ್ಕೆ ನನಗೆ ಬಹಳ ಸಂತೋಷವಾಗಿದೆ. ಆದರೆ ಈ ಲಾಕ್‍ಡೌನ್ ಸಮಯದಲ್ಲಿ ಬೇರೆ ಬೇರೆ ಇರುವ ಜೋಡಿಗಳು ಹೇಗೆ ಕಾಲ ಕಳೆಯುತ್ತಿದ್ದಾರೆ ಎಂದೂ ನನಗೆ ಊಹಿಸಲು ಆಗುತ್ತಿಲ್ಲ ಎಂದು ಕೃತಿ ಹೇಳಿದ್ದಾರೆ.

    ಲಾಕ್‍ಡೌನ್ ಸಮಯದಲ್ಲಿ ಒಟ್ಟಿಗೆ ಇರುವ ಕೃತಿ ಮತ್ತು ಪುಲ್ಕಿತ್ ಬಹಳ ಎಂಜಾಯ್ ಮಾಡುತ್ತಿದ್ದಾರೆ. ಮನೆಯಲ್ಲೇ ಕುಳಿತು ವಿಡಿಯೋ ಗೇಮ್ ಆಡುತ್ತಿದ್ದಾರೆ. ಗುರುವಾರ ಪುಲ್ಕಿತ್ ಸಾಮ್ರಾಟ್ ಇಬ್ಬರು ಜೊತೆಗೆ ಪಿಯಾನೋ ನುಡಿಸುತ್ತಿರುವ ಮತ್ತು ಜೊತೆಗೆ ಹಳೆಯ ಸಾಂಗ್ ಗಳಿಗೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದರು. ಈ ನಡುವೆ ಕೃತಿ ಇನ್‍ಸ್ಟಾಗ್ರಾಮ್ ಮೂಲಕ ಮಾಧ್ಯಮಗಳಿಗೆ ಸಂದರ್ಶನವನ್ನು ನೀಡುತ್ತಿರುತ್ತಾರೆ.

    https://www.instagram.com/p/B-u3YMUhYoO/

    ಈ ಹಿಂದೆ ಮಾಧ್ಯಮವೊಂದಕ್ಕೆ ಕೃತಿ ಇನ್‍ಸ್ಟಾ ಲೈವ್‍ನಲ್ಲಿ ಸಂದರ್ಶನ ನೀಡಿದ್ದರು. ಈ ವೇಳೆ ನಟ ಪುಲ್ಕಿತ್ ಸಾಮ್ರಾಟ್ ಅವರಿಗೆ ಈಗಲೇ ಮದುವೆಯಾಗಲು ಇಷ್ಟವಿಲ್ಲ. ನಾನು ಕೂಡ ಮದುವೆಗೆ ರೆಡಿಯಾಗಿಲ್ಲ. ಆತ ಇನ್ನೂ ಬಚ್ಚಾ. ಹಾಗಾಗಿ ಮದುವೆಯಾಗಲು ನಾವು ಈಗಲೇ ರೆಡಿ ಇಲ್ಲ. ಪುಲ್ಕಿತ್ ನನ್ನನ್ನು ಕೇರ್ ಮಾಡುವಂತೆ ಇದುವರೆಗೂ ಯಾರು ಮಾಡಿಲ್ಲ. ಲಾಕ್‍ಡೌನ್ ಆಗಿದ್ದು, ನಾವಿಬ್ಬರು ಒಟ್ಟಿಗೆ ಇದ್ದೇವೆ. ಈ ವೇಳೆ ಪುಲ್ಕಿತ್ ನನಗೆ ಮನೆ ಕೆಲಸ ಮಾಡಲು ಬಿಡುತ್ತಿಲ್ಲ ಎಂದಿದ್ದರು.

    ಕ್ಯೂಟ್ ಬೆಡಗಿ ಕೃತಿ `ಚಿರು’ ಸಿನಿಮಾದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ನೀಡಿ ಗೂಗ್ಲಿ ಚಿತ್ರದ ಮೂಲಕ ಪ್ರಖ್ಯಾತಿ ಪಡೆದಿದ್ದಾರೆ. ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. `ಮಾಸ್ತಿಗುಡಿ’ ಚಿತ್ರದ ನಂತರ ಕೃತಿ ಬೇರೆ ಯಾವ ಕನ್ನಡ ಸಿನಿಮಾದಲ್ಲಿ ನಟಿಸಲಿಲ್ಲ. ಸದ್ಯ ಕೃತಿ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದಾರೆ. ಅಲ್ಲದೇ ಬಾಲಿವುಡ್‍ನಲ್ಲಿ 2019ರಿಂದ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ.