Tag: ಪುಲ್ಕಿಟ್ ಸಾಮ್ರಾಟ್

  • ನಟ ಪುಲ್ಕಿಟ್ ಸಾಮ್ರಾಟ್ ಜೊತೆ ಎಂಗೇಜ್ ಆದ ಕೃತಿ ಕರಬಂಧ

    ನಟ ಪುಲ್ಕಿಟ್ ಸಾಮ್ರಾಟ್ ಜೊತೆ ಎಂಗೇಜ್ ಆದ ಕೃತಿ ಕರಬಂಧ

    ಲವು ವರ್ಷಗಳಿಂದ ನಟ ಪುಲ್ಕಿಟ್ ಸಾಮ್ರಾಟ್ (Pulkit Samrat) ಜೊತೆ ಡೇಟ್ ಮಾಡುತ್ತಿದ್ದ ಗೂಗ್ಲಿ ಚೆಲುವೆ ಕೃತಿ ಕರಬಂಧ (Kriti Karabandha) ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥದ (Engagement) ಫೋಟೋಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕುಟುಂಬಸ್ಥರನ್ನು ಒಪ್ಪಿಸಿಯೇ ಈ ಜೋಡಿ ಒಂದಾಗುತ್ತಿರುವುದು ವಿಶೇಷ.

    ರಾಕಿಂಗ್ ಸ್ಟಾರ್ ಯಶ್ ನಟನೆಯ ಗೂಗ್ಲಿ ಸಿನಿಮಾದ ಈ ಚೆಲುವೆ 2021ರಲ್ಲೇ ಮದುವೆ ಬಗ್ಗೆ ಸುಳಿವು ನೀಡಿದ್ದರು. ನಟ ಪುಲ್ಕಿಟ್ ಸಾಮ್ರಾಟ್ ಜೊತೆ ಡೇಟ್ ಮಾಡುತ್ತಿರುವ ವಿಚಾರವನ್ನು ಒಪ್ಪಿಕೊಳ್ಳುತ್ತಾ ಮದುವೆ ಆಗಲಿರುವ ಕುರಿತು ಅಂದೇ ಮೌನ ಮುರಿದಿದ್ದರು.

    ಪ್ರಿಯಕರ ಪುಲ್ಕಿತ್ ಸಾಮ್ರಾಟ್ ಜೊತೆಗಿನ ಮದುವೆಯ ಯೋಚನೆಯ ಕುರಿತು ಮಾಧ್ಯಮವೊಂದರಲ್ಲಿ ಅವರು ಮಾತನಾಡಿ, ತಾನು ಸಾಮ್ರಾಟ್ ಜೊತೆ ಒಡನಾಟದಲ್ಲಿರುವುದು ಮುಕ್ತವಾಗಿ ಹೇಳಿಕೊಂಡಿದ್ದರೂ ಸಹ ಉಳಿದ ವಿಚಾರಗಳನ್ನು ಗೌಪ್ಯವಾಗಿಯೇ ಇಡಲು ಬಯಸುವುದಾಗಿ ತಿಳಿಸಿದ್ದರು.

    ಪುಲ್ಕಿತ್ ಸಾಮ್ರಾಟ್ ಜೊತೆಗಿನ ಮದುವೆಯ ವಿಚಾರವನ್ನು ಕೇವಲ ಪೋಷಕರೊಂದಿಗೆ ಮಾತ್ರ ಮಾತನಾಡುವುದಾಗಿ ತಿಳಿಸಿದ್ದ ಅವರು, ತಾನು ಖಾಸಗಿ ವಿಚಾರಗಳನ್ನು ಎಂದಿಗೂ ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ. ತಾನು ಪುಲ್ಕಿತ್ ಜೊತೆಗೆ ಡೇಟಿಂಗ್ ಆರಂಭಿಸಿದಾಗ ಅದನ್ನು ಮುಕ್ತವಾಗಿ ಒಪ್ಪಿಕೊಂಡೆ ಮತ್ತು ಎಲ್ಲರೆದುರು ಹೇಳಿಕೊಂಡೆ. ಅದಕ್ಕೆ ನನಗೇನೂ ಹಿಂಜರಿಕೆ ಇಲ್ಲ. ಆದರೆ ಅದರ ನಂತರದ್ದು ತೀರಾ ವೈಯಕ್ತಿಕ ವಿಷಯ. ಅದು ಬಹಳ ಪವಿತ್ರವಾದದ್ದು ಎಂಬ ಭಾವನೆ ನನ್ನದು. ಅದನ್ನು ನನ್ನ ತೀರಾ ಆಪ್ತ ವಲಯದೊಂದಿಗೆ ಮಾತ್ರ ಹಂಚಿಕೊಳ್ಳಬಲ್ಲನೇ ಹೊರತು ಮತ್ಯಾರಿಗೂ ತಿಳಿಸುವ ಅವಶ್ಯಕತೆ ನನಗೆ ಕಾಣುವುದಿಲ್ಲ ಎಂದು ಕೃತಿ ಹೇಳಿದ್ದರು.

     

    ನೀವು ಅದ್ದೂರಿ ಮದುವೆಯನ್ನು ಇಷ್ಟಪಡುತ್ತೀರಾ ಎಂಬ ಪ್ರಶ್ನೆಗೆ ಕೃತಿ ಸ್ಪಷ್ಟವಾದ ಉತ್ತರವನ್ನು ನೀಡಿರಿಲಿಲ್ಲ. ತಾನು ಆ ಕ್ಷಣದ್ದನ್ನು ಮಾತ್ರ ಯೋಚಿಸಬಲ್ಲೆ. ಹೀಗಾಗಿ ಆ ಕುರಿತು ತಾನಿನ್ನೂ ತೀರ್ಮಾನ ಕೈಗೊಂಡಿಲ್ಲ ಎಂದಿದ್ದರು.  ಇದೀಗ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಎಲ್ಲ ಉಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

  • ಗೆಳೆಯನ ಬರ್ತ್ ಡೇಗೆ ಗೂಗ್ಲಿ ಬೆಡಗಿಯಿಂದ ರೊಮ್ಯಾಂಟಿಕ್ ಫೋಟೋ

    ಗೆಳೆಯನ ಬರ್ತ್ ಡೇಗೆ ಗೂಗ್ಲಿ ಬೆಡಗಿಯಿಂದ ರೊಮ್ಯಾಂಟಿಕ್ ಫೋಟೋ

    ಮುಂಬೈ: ಗೂಗ್ಲಿ ಬೆಡಗಿ ಕೃತಿ ಕರಬಂಧ್ ಗೆಳೆಯ ಪುಲ್ಕಿಟ್ ಸಾಮ್ರಾಟ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದು, ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಬಾಲಿವುಡ್ ನಟ ಪುಲ್ಕಿಟ್ ಸಾಮ್ರಾಟ್ ಡಿಸೆಂಬರ್ 29ರಂದು ತಮ್ಮ 37ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

    ಇನ್‍ಸ್ಟಾಗ್ರಾಂನಲ್ಲಿ ಗೆಳೆಯನಿಗೆ ಕಿಸ್ ಮಾಡುತ್ತಿರುವ ಫೋಟೋ ಹಂಚಿಕೊಂಡಿರುವ ಕೃತಿ, ನೀನು ಮತ್ತೆ ಒಂದು ವರ್ಷ ಚಿಕ್ಕವನಾದಂತೆ ಇದ್ದಿಯಾ. ನೀನು ಕೋಟಿಗೊಬ್ಬನಾಗಿದ್ದು, ನಿನ್ನ ಹಾಗೆ ಬೇರೆ ಯಾರೂ ಇಲ್ಲ. ಐ ಲವ್ ಯು ಬೇಬಿ ಎಂದು ಕೃತಿ ಬರೆದುಕೊಂಡಿದ್ದಾರೆ. ಇತ್ತ ಪುಲ್ಕಿಟ್ ಸಹ ಬರ್ತ್ ಡೇ ಸೂಟ್ ಹಾಕಿರೋ ಫೋಟೋ ಹಾಕಿಕೊಂಡು ಸಂಭ್ರಮಿಸಿದ್ದಾರೆ.

    ಚಿರು ಸಿನಿಮಾ ಮೂಲಕ ಚಂದನವನಕ್ಕೆ ಬಂದ ಕೃತಿ ಕರಬಂದ್ ಮೊದಲ ಚಿತ್ರದಲ್ಲಿಯೇ ನಿರ್ದೇಶಕರ ಮೆಚ್ಚಿನ ನಾಯಕಿಯಾದರು. ತದನಂತರ ಶಿವರಾಜ್‍ಕುಮಾರ್, ಯಶ್ ಸೇರಿದಂತೆ ಹಲವು ಟಾಪ್ ಹೀರೋಗಳ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಹಿಂದಿಯಲ್ಲಿಯೂ ಶಾದಿ ಮೇ ಜರೂರ್ ಆನಾ ಮತ್ತು ಹೌಸ್‍ಫುಲ್ ಸಿನಿಮಾದಲ್ಲಿ ಕೃತಿ ನಟಿಸಿದ್ದಾರೆ.

     

    View this post on Instagram

     

    A post shared by Kriti Kharbanda (@kriti.kharbanda)

  • ಕೃತಿ ಕರಬಂದ, ಸಾಮ್ರಾಟ್ ಲವ್- ನನಗೆ ಲಾಭವಾಯ್ತು ಎಂದ ನಿರ್ದೇಶಕ

    ಕೃತಿ ಕರಬಂದ, ಸಾಮ್ರಾಟ್ ಲವ್- ನನಗೆ ಲಾಭವಾಯ್ತು ಎಂದ ನಿರ್ದೇಶಕ

    ಮುಂಬೈ: ಚಂದನವನದ ಗೂಗ್ಲಿ ಬೆಡಗಿ ಕೃತಿ ಕರಬಂದ ಪ್ರೇಮ ವ್ಯೂಹದಲ್ಲಿ ಸಿಲುಕಿರೋದು ನನಗೆ ಲಾಭವಾಗಿದೆ ಎಂದು ನಿರ್ದೇಶಕ ಅನೀಸ್ ಬಜ್ಮೀ ಹೇಳಿದ್ದಾರೆ.

    ಬಾಲಿವುಡ್ ನಟ ಪುಲ್ಕಿಟ್ ಸಾಮ್ರಾಟ್ ಪ್ರೇಮ ಪಾಶದಲ್ಲಿ ಕೃತಿ ಸಿಲುಕಿದ್ದು, ಇಬ್ಬರು ಕಳೆದ ಆರೇಳು ತಿಂಗಳಿನಿಂದ ಡೇಟ್‍ನಲ್ಲಿದ್ದಾರೆ. ಇಬ್ಬರು ಜೊತೆಯಾಗಿ ನಟಿಸಿರುವ ಪಾಗಲ್ ಪಂತಿ ಸಿನಿಮಾ ಸಹ ಬಿಡುಗಡೆಗೆ ಸಿದ್ಧಗೊಂಡಿದ್ದು, ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದೆ. ಇಬ್ಬರ ಪ್ರೇಮ ವಿಚಾರವಾಗಿ ಪ್ರತಿಕ್ರಿಯಿಸಿರುವ ಪಾಗಲ್‍ಪಂತಿ ಸಿನಿಮಾ ನಿರ್ದೇಶಕ ಅನೀಸ್ ಬಜ್ಮೀ, ನನ್ನ ಚಿತ್ರದಲ್ಲಿ ಇಬ್ಬರು ಜೊತೆಯಾಗಿ ನಟಿಸುತ್ತಿದ್ದಾರೆ. ತೆರೆಯ ಹಿಂದೆಯೂ ಸಹ ಇಬ್ಬರು ಪ್ರೇಮಿಸುತ್ತಿರುವ ಕಾರಣ ನನಗೆ ಹೆಚ್ಚು ಲಾಭವಾಯ್ತು ಎಂದಿದ್ದಾರೆ.

    ಕೃತಿ ಮತ್ತು ಸಾಮ್ರಾಟ್ ಜೋಡಿಯಾಗಿ ನಟಿಸಿದ್ದು, ಸಿನಿಮಾದಲ್ಲಿ ರೊಮ್ಯಾಂಟಿಕ್ ದೃಶ್ಯಗಳಿದ್ದವು. ಇಬ್ಬರು ಪ್ರೇಮದಲ್ಲಿ ಇರೋದರಿಂದ ರೊಮ್ಯಾಂಟಿಕ್ ಮತ್ತು ಕಿಸ್ಸಿಂಗ್ ಸೀನ್ ಗಳು ನ್ಯಾಚೂರಲ್ ಆಗಿಯೇ ಮೂಡಿಬಂದಿವೆ. ತೆರೆಯ ಮೇಲೆಯೂ ಸಹ ಜೋಡಿ ನೋಡುಗರನ್ನು ಮೋಡಿ ಮಾಡಲಿದೆ ಎಂದು ಅನೀಸ್ ಬಜ್ಮೀ ಹೇಳುತ್ತಾರೆ.

    ಕಳೆದ ಎರಡು ತಿಂಗಳಿನಿಂದ ಕೃತಿ ಮತ್ತು ಸಾಮ್ರಾಟ್ ನಡುವಿನ ಸಂಬಂಧದ ಬಗ್ಗೆ ಹಲವು ಸುದ್ದಿಗಳು ಹರಿದಾಡಿದ್ದವು. ಈ ಕುರಿತು ಸ್ಪಷ್ಟನೆ ನೀಡಿರುವ ಕೃತಿ, ನೀವು ಕೇಳಿರುವ ಸುದ್ದಿಗಳು. ಕಳೆದ ಆರು ತಿಂಗಳಿನಿಂದ ಸಾಮ್ರಾಟ್ ಜೊತೆ ಡೇಟ್ ನಲ್ಲಿದ್ದೇನೆ ಎಂದಿದ್ದಾರೆ.

    ಪಾಗಲ್ ಪಂತಿ ಸಿನಿಮಾದಲ್ಲಿ ಎರಡನೇ ಬಾರಿ ಜೊತೆಯಾಗಿರುವ ಕೃತಿ ಮತ್ತು ಸಾಮ್ರಾಟ್ ಒಬ್ಬರಿಗೊಬ್ಬರು ಮೆಸೇಜ್, ಹೂಗುಚ್ಛ ಕಳುಹಿಸುವ ಮೂಲಕ ತಮ್ಮ ಪ್ರೀತಿಯ ಸುಳಿವು ನೀಡಿದ್ದರು. ಸಾಮ್ರಾಟ್ ಪ್ರತಿದಿನ ಶೂಟಿಂಗ್ ಮುನ್ನ ಕೃತಿ ಮೇಕಪ್ ಕೋಣೆಗೆ ಚಾಕೋಲೇಟ್ ಮತ್ತು ಹೂಗುಚ್ಛ ಕಳುಹಿಸುತ್ತಿದ್ದರು. 2018ರಲ್ಲಿ ಬಿಡುಗಡೆಯಾಗಿದ್ದ ‘ವೀರೇ ಕೀ ವೆಡ್ಡಿಂಗ್’ ಸಿನಿಮಾದಲ್ಲಿ ಜೋಡಿ ಮೊದಲ ಬಾರಿಗೆ ತೆರೆಯ ಮೇಲೆ ಒಂದಾಗಿತ್ತು.

    29 ವರ್ಷದ ಕೃತಿ ಕರಬಂದ ಇದೂವರೆಗೂ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ, ತೆಲಗು, ಹಿಂದಿ, ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಿರು ಚಿತ್ರದ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದ ಕೃತಿ ತಮ್ಮ ಮುಗುಳ್ನಗೆ ಮೂಲಕವೇ ಕನ್ನಡಿಗರ ಹೃದಯ ಕದ್ದಿದ್ದರು. ಪ್ರೇಮ ಅಡ್ಡ, ಗಲಾಟೆ, ಸೂಪರ್ ರಂಗ, ಬೆಳ್ಳಿ, ಗೂಗ್ಲಿ, ಮಾಸ್ತಿಗುಡಿ ಸಿನಿಮಾಗಳಲ್ಲಿ ನಟಿಸಿದ್ದಾರೆ.