Tag: ಪುಲಿಟ್ಜರ್‌ ಪ್ರಶಸ್ತಿ ಪುರಸ್ಕೃತ

  • ತಾಲಿಬಾನ್‌ ವಿರುದ್ಧ ಅಂತಾರಾಷ್ಟ್ರೀಯ ಕೋರ್ಟ್‌ಗೆ ದೂರು ಕೊಟ್ಟ ಫೋಟೋ ಜರ್ನಲಿಸ್ಟ್‌ ಡ್ಯಾನಿಶ್‌ ಸಿದ್ಧಿಕಿ ಪೋಷಕರು

    ತಾಲಿಬಾನ್‌ ವಿರುದ್ಧ ಅಂತಾರಾಷ್ಟ್ರೀಯ ಕೋರ್ಟ್‌ಗೆ ದೂರು ಕೊಟ್ಟ ಫೋಟೋ ಜರ್ನಲಿಸ್ಟ್‌ ಡ್ಯಾನಿಶ್‌ ಸಿದ್ಧಿಕಿ ಪೋಷಕರು

    ನವದೆಹಲಿ: ಪುಲಿಟ್ಜರ್‌ ಪ್ರಶಸ್ತಿ ಪುರಸ್ಕೃತ ಭಾರತದ ಫೋಟೋ ಜರ್ನಲಿಸ್ಟ್‌ ಡ್ಯಾನಿಶ್‌ ಸಿದ್ಧಿಕಿ ಸಾವಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ತಾಲಿಬಾನ್‌ ವಿರುದ್ಧ ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯಕ್ಕೆ ಸಿದ್ಧಿಕಿ ಪೋಷಕರು ದೂರು ನೀಡಿದ್ದಾರೆ.

    ಡ್ಯಾನಿಶ್ ಸಿದ್ಧಿಕಿಯ ಪೋಷಕರಾದ ಪ್ರೊ. ಅಖ್ತರ್ ಸಿದ್ಧಿಕಿ ಮತ್ತು ಶಾಹಿದಾ ಅಖ್ತರ್ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯಕ್ಕೆ (ICC) ದೂರು ಸಲ್ಲಿಸಿದ್ದಾರೆ. ಹತ್ಯೆ ಕುರಿತು ತನಿಖೆ ಆಗಬೇಕು. ತಾಲಿಬಾನ್‌ನ ನಾಯಕರು ಮತ್ತು ಉನ್ನತ ಮಟ್ಟದ ಕಮಾಂಡರ್‌ಗಳು ಸೇರಿದಂತೆ ಹತ್ಯೆಗೆ ಕಾರಣರಾದವರನ್ನು ನ್ಯಾಯಾಲಯಕ್ಕೆ ಕರೆತರಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಲಾಲೂ ಪ್ರಸಾದ್ ಯಾದವ್ ಆರೋಗ್ಯದಲ್ಲಿ ಏರುಪೇರು – ದೆಹಲಿಯ ಏಮ್ಸ್‌ಗೆ ಶಿಫ್ಟ್‌

    2021ರ ಜುಲೈ 16 ರಂದು ಡ್ಯಾನಿಶ್ ಸಿದ್ಧಿಕಿಯನ್ನು ತಾಲಿಬಾನ್ ಅಕ್ರಮವಾಗಿ ಬಂಧಿಸಿ, ಚಿತ್ರಹಿಂಸೆ ನೀಡಿ ಕೊಂದಿದೆ. ಅವರ ದೇಹವನ್ನು ವಿರೂಪಗೊಳಿಸಲಾಗಿತ್ತು. ಇದು ಪ್ರತ್ಯೇಕ ಘಟನೆಯಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ವಕೀಲ ಅವಿ ಸಿಂಗ್ ಕೋರಿದ್ದಾರೆ.

    ಸಿದ್ಧಿಕಿ ಮಾನವೀಯತೆಯ ವಿರುದ್ಧದ ಅಪರಾಧಗಳು ಮತ್ತು ಸರ್ಕಾರಿ ವಿರೋಧಿ ಶಕ್ತಿಗಳ ಕೈಗೆ ಬಲಿಯಾಗಿದ್ದಾನೆ ಎಂದು ಕುಟುಂಬದವರು ನೋವು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಇನ್ಮುಂದೆ 60 ಕಿ.ಮೀ. ವ್ಯಾಪ್ತಿಯೊಳಗೆ ಟೋಲ್ ತೆರಿಗೆ ಇರಲ್ಲ: ನಿತಿನ್‌ ಗಡ್ಕರಿ

    ನಮ್ಮ ಪ್ರೀತಿಯ ಮಗ ತನ್ನ ಪತ್ರಿಕೋದ್ಯಮ ಕರ್ತವ್ಯ ನಿರ್ವಹಿಸುತ್ತಿದ್ದಾಗ ತಾಲಿಬಾನ್‌ನಿಂದ ಹತ್ಯೆಗೀಡಾಗಿದ್ದಾನೆ. ತಾಲಿಬಾನ್‌ ವಶದಲ್ಲಿದ್ದಾಗ ಚಿತ್ರಹಿಂಸೆಗೆ ಒಳಪಡಿಸಲಾಗಿತ್ತು. ಸಿದ್ಧಿಕಿ ಯಾವಾಗಲೂ ತನ್ನ ಕೆಲಸದಲ್ಲಿ ಪ್ರಾಮಾಣಿಕವಾಗಿರುತ್ತಿದ್ದ. ತನ್ನ ಛಾಯಾಚಿತ್ರಗಳ ಮೂಲಕ ಜನರ ನೋವನ್ನು ಬಿಂಬಿಸುತ್ತಿದ್ದ ಎಂದು ಸಿದ್ದಿಕಿ ತಾಯಿ ಶಾಹಿದಾ ಅಖ್ತರ್‌ ಹೇಳಿಕೊಂಡಿದ್ದಾರೆ.

    ಸಂಘರ್ಷ ವಲಯಗಳಿಂದ ವರದಿ ಮಾಡುವಲ್ಲಿ ಪತ್ರಕರ್ತರು ಎದುರಿಸುತ್ತಿರುವ ತೀವ್ರ ಸವಾಲುಗಳು ಮತ್ತು ಬೆದರಿಕೆಗಳನ್ನು ಜಗತ್ತು ಗಮನಿಸುತ್ತದೆ ಎಂದು ನಾವು ಭಾವಿಸುತ್ತೇವೆ. ನಮ್ಮ ಮಗ ಹಿಂದಿರುಗಿ ಬಾರದಿದ್ದರೂ, ಎಂದಾದರೂ ನ್ಯಾಯ ಸಿಗುತ್ತದೆ ಎಂಬ ಭರವಸೆಯಲ್ಲಿ ಈ ಮನವಿ ಮಾಡಿದ್ದೇವೆ ಎಂದು ಸಿದ್ಧಿಕಿ ತಂದೆ ಆಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಜನರೇ ಬಿಜೆಪಿ ಆಡಳಿತ ಮೆಚ್ಚಿದ್ದಾರೆ, ಅದ್ಕೆ ನಾವು ಜಾಸ್ತಿ ಮಾತಾಡಲ್ಲ: ಡಿ.ಕೆ ಸುರೇಶ್ ವ್ಯಂಗ್ಯ

    ಅಫ್ಗಾನಿಸ್ತಾನದ ಸೇನೆ ಮತ್ತು ತಾಲಿಬಾನಿಗಳ ನಡುವೆ ಸಂಘರ್ಷ ನಡೆಯುತ್ತಿರುವ ಪ್ರದೇಶಗಳ ಸ್ಥಿತಿಗತಿ ಕುರಿತು ವರದಿ ಮಾಡಲು ತೆರಳಿದ್ದ ಪುಲಿಟ್ಜರ್‌ ಪ್ರಶಸ್ತಿ ಪುರಸ್ಕೃತ ಭಾರತೀಯ ಫೋಟೊ ಜರ್ನಲಿಸ್ಟ್‌, ರಾಯಿಟರ್ಸ್‌ ಸುದ್ದಿ ಸಂಸ್ಥೆಗಾಗಿ ಕೆಲಸ ಮಾಡುತ್ತಿದ್ದ ಡ್ಯಾನಿಶ್‌ ಸಿದ್ಧಿಕಿ (40) ಹತ್ಯೆಯಾಗಿದ್ದರು.