Tag: ಪುಲಿಕೇಶಿ ನಗರ

  • ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಸಿಲಿಂಡರ್ ಬ್ಲಾಸ್ಟ್ – ಮೂವರು ಗಂಭೀರ

    ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಸಿಲಿಂಡರ್ ಬ್ಲಾಸ್ಟ್ – ಮೂವರು ಗಂಭೀರ

    ಬೆಂಗಳೂರು: ಅಪಾರ್ಟ್‌ಮೆಂಟ್‌ನಲ್ಲಿ (Apartment) ಸಿಲಿಂಡರ್ ಸ್ಫೋಟಗೊಂಡ (Cylinder Blast) ಪರಿಣಾಮ ಮನೆಯಲ್ಲಿದ್ದ ಮೂವರು ಗಂಭೀರ ಗಾಯಗೊಂಡ ಘಟನೆ ಪುಲಿಕೇಶಿ ನಗರದ (Pulikeshi Nagar) ಡೆವೀಸ್ ರಸ್ತೆಯಲ್ಲಿ ನಡೆದಿದೆ.

    ವಿಶ್ರಾಂ ಅಪಾರ್ಟ್‌ಮೆಂಟ್‌ನಲ್ಲಿ ಘಟನೆ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಮನೆ ಸಂಪೂರ್ಣ ಜಕ್ಕಂ ಆಗಿದೆ. ಬುಧವಾರ ಮುಂಜಾನೆ 5 ಗಂಟೆಯ ಸುಮಾರಿಗೆ ಘಟನೆ ಸಂಭವಿಸಿದೆ. ಘಟನೆಯಲ್ಲಿ ಸಿದ್ದೇಶ್, ಸಿಲಿಕಾ ಹಾಗೂ ಮತ್ತೊಬ್ಬರು ಗಾಯಗೊಂಡಿದ್ದಾರೆ. ಇದನ್ನೂ ಓದಿ: ಬೆಳಗಾವಿ | ಎಂಬಿಎ ಪದವೀಧರೆ ಪಿ.ಜಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ

    ಬ್ಲಾಸ್ಟ್ ಆದ ಗ್ಯಾಸ್‌ನ ಪೀಸ್ ಕೂಡ ಪತ್ತೆ ಆಗದೆ ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ಸ್ಫೋಟದ ತೀವ್ರತೆಗೆ ಕಿಟಕಿ ಗ್ರಿಲ್‌ಗಳೆಲ್ಲಾ ರಸ್ತೆಗೆ ಬಿದ್ದಿದೆ. ಇದನ್ನೂ ಓದಿ: ಏ.1ರಿಂದ ಟೋಲ್ ದರದಲ್ಲಿ ರಿಯಾಯಿತಿ – ನಿತಿನ್ ಗಡ್ಕರಿ

  • ಕಾಂಗ್ರೆಸ್ ಶಾಸಕರ ಮನೆ ಧ್ವಂಸ- ಘಟನೆ ಖಂಡಿಸದೆ ಮೌನ ತಾಳಿದ ಕೈ ನಾಯಕರು

    ಕಾಂಗ್ರೆಸ್ ಶಾಸಕರ ಮನೆ ಧ್ವಂಸ- ಘಟನೆ ಖಂಡಿಸದೆ ಮೌನ ತಾಳಿದ ಕೈ ನಾಯಕರು

    ಬೆಂಗಳೂರು: ಪುಲಿಕೇಶಿ ನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿಯವರ ಮನೆ ಧ್ವಂಸಗೊಂಡರೂ ಕೈ ನಾಯಕರು ಮೌನ ವಹಿಸಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

    ಹೌದು. ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ವಿರುದ್ಧ ಒಂದು ಸಮುದಾಯದ ಜನ ದಾಂಧಲೆ ನಡೆಸಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು ಮೌನವಾಗಿದ್ದು, ಈ ಮೂಲಕ ಧರ್ಮ ಸೂಕ್ಷ್ಮ ವಿಚಾರದಲ್ಲಿ ಮಧ್ಯಪ್ರವೇಶ ಮಾಡದೇ ಸುಮ್ಮನಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಕೆ.ಜಿ.ಹಳ್ಳಿ ಗಲಭೆ ಪ್ರಕರಣ – ಪೊಲೀಸರ ಗೋಲಿಬಾರ್‌ಗೆ ಮೂವರು ಬಲಿ, 110 ಮಂದಿ ಅರೆಸ್ಟ್

    ದುರ್ಘಟನೆ ಬಗ್ಗೆ ಇದೂವರೆಗೆ ಕೈ ನಾಯಕರು ಚಕಾರ ಎತ್ತಿಲ್ಲ. ಟ್ವೀಟ್ ಮೂಲಕ ಪ್ರತಿಯೊಂದು ವಿಷಯದ ಬಗ್ಗೆಯೂ ಪ್ರಶ್ನೆ ಮಾಡ್ತಿದ್ದ ಕೈ ನಾಯಕರು ಇದೀಗ ಮೌನವಹಿಸಿದ್ದು, ಭಾರೀ ಕುತೂಹಲಕ್ಕೆ ಕಾರಣವಾಗಿದೆ. ದಿನೇಶ್ ಗುಂಡೂರಾವ್ ಒಬ್ಬರು ಟ್ವೀಟ್ ಮಾಡಿ ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಂಡಿದ್ದು ಬಿಟ್ಟರೆ ಉಳಿದವರು ಘಟನೆ ಖಂಡಿಸದೇ ಮೌನ ತಾಳಿರುವುದು ಅಚ್ಚರಿಗೆ ಕಾರಣವಾಗಿದೆ. ಇದನ್ನೂ ಓದಿ: ಕೆಜಿ ಹಳ್ಳಿ ಗಲಭೆ ಪ್ರಕರಣ – ಎಸ್‍ಡಿಪಿಐ ಮುಖಂಡ ಅರೆಸ್ಟ್

    ನಿನ್ನೆ ರಾತ್ರಿ ಗುಂಪೊಂದು ಶಾಸಕರ ಮನೆಗೆ ಕಲ್ಲು ತೂರಾಟ ನಡೆಸಿ ಬೆಂಕಿ ಹಚ್ಚಿದೆ. ಘಟನೆಯಿಂದ ಶಾಸಕರ ಮೂರು ಅಂತಸ್ತಿನ ಮನೆ ಸಂಪೂರ್ಣವಾಗಿ ಧ್ವಂಸಗೊಂಡಿದೆ. ಆದರೆ ಈ ವೇಳೆ ಸಾಸಕರು ಮನೆಯಲ್ಲಿ ಇರಲಿಲ್ಲ. ಗಲಭೆಗೂ ಮುನ್ನ ಶಾಸಕರು ತಮ್ಮ ಪುಲಿಕೇಶಿ ನಗರದ ಮನೆ ಖಾಲಿ ಮಾಡಿದ್ದರು. ಹೀಗಾಗಿ ಶಾಸಕಹಾಗೂ ಕುಟುಂಬ ಭಾರೀ ಅನಾಹುತದಿಂದ ಪಾರಾಗಿದೆ. ಇದನ್ನೂ ಓದಿ: ಕಾವಲ್‌ ಭೈರಸಂದ್ರ ಉದ್ವಿಗ್ನ – ಪಕ್ಕಾ ಪ್ಲಾನ್ ಮಾಡಿ ವಿಕೃತಿ ಮೆರೆದ ಪುಂಡರು

  • ಮುಂಬೈನ ಧಾರಾವಿ ಸ್ಲಂ ಸ್ಥಿತಿ ಬೆಂಗ್ಳೂರಿಗೂ ಬರುತ್ತಾ?

    ಮುಂಬೈನ ಧಾರಾವಿ ಸ್ಲಂ ಸ್ಥಿತಿ ಬೆಂಗ್ಳೂರಿಗೂ ಬರುತ್ತಾ?

    – ಸ್ಲಂ‌ನಲ್ಲಿ ಯಾವುದೇ ಸಂಪರ್ಕ ಇಲ್ಲದೇ ಕೊರೊನಾ ಪತ್ತೆ

    ಬೆಂಗಳೂರ: ಮುಂಬೈ ಮಹಾನಗರಕ್ಕೆ ಭಾರೀ ಸಂಕಷ್ಟ ತಂದಿದ್ದು ಧಾರಾವಿ ಸ್ಲಂ ಪ್ರದೇಶ. ಅದೇ ಸಮಸ್ಯೆ ಬೆಂಗಳೂರಿಗೂ ಎದುರಾಗುತ್ತಾ ಎನ್ನುವ ಅನುಮಾನ ಶುರುವಾಗಿದೆ.

    ಪುಲಿಕೇಶಿ ನಗರ ಕ್ಷೇತ್ರದ ಎಸ್.ಕೆ. ಗಾರ್ಡನ್ ಸ್ಲಂ ಪ್ರದೇಶದ 38 ವರ್ಷದ ಮಹಿಳೆಗೆ ಕೊರೊನಾ ತಗುಲಿದೆ. ಅವರನ್ನು ರೋಗಿ-2180 ಎಂದು ಗುರುತಿಸಲಾಗಿದೆ. ಅವರು ತೀವ್ರ ಉಸಿರಾಟದ ಸಮಸ್ಯೆಯಿಂದಾಗಿ ಬೌರಿಂಗ್ ಆಸ್ಪತ್ರೆಗೆ ದಾಖಲಾಗಿದ್ದರು. ಇದರಿಂದಾಗಿ ಕೊರೊನಾ ಟೆಸ್ಟ್ ಮಾಡಲಾಗಿದ್ದು, ರಿಪೋರ್ಟ್ ಪಾಸಿಟಿವ್ ಬಂದಿದೆ.

    ಮಹಿಳೆ ಪ್ರಾಥಮಿಕ ಸಂಪರ್ಕಿದಲ್ಲಿ 35 ಜನರಿದ್ದರು. ಅವರನ್ನು ಕ್ವಾರಂಟೈನ್ ಮಾಡಲಾಗಿದೆ. ಉಳಿದಂತೆ ದ್ವಿತೀಯ ಸಂಪರ್ಕಿತರ ಮಾಹಿತಿ ಕಲೆ ಹಾಕಲಾಗುತ್ತಿದೆ. ಆದರೆ ಮಹಿಳೆಗೆ ಕೊರೊನಾ ಸೋಂಕು ತಗುಲಿರುವುದು ನಿಗೂಢವಾಗಿದೆ. ಹೀಗಾಗಿ ಎಸ್.ಕೆ. ಗಾರ್ಡನ್ ಸ್ಲಂನಿಂದ ಬೆಂಗಳೂರಿಗೆ ಕಂಟಕ ಹೆಚ್ಚಾಗುತ್ತೆ ಎಂಬ ಮಾತುಗಳು ಕೇಳಿ ಬರುತ್ತಿವೆ.