Tag: ಪುಲಕೇಶಿನಗರ

  • ಉದ್ಯೋಗಿಗಳಿಗೆ ವಂಚನೆ – ರಾಬಿನ್‌ ಉತ್ತಪ್ಪ ವಿರುದ್ಧ ಅರೆಸ್ಟ್‌ ವಾರೆಂಟ್‌ ಜಾರಿ

    ಉದ್ಯೋಗಿಗಳಿಗೆ ವಂಚನೆ – ರಾಬಿನ್‌ ಉತ್ತಪ್ಪ ವಿರುದ್ಧ ಅರೆಸ್ಟ್‌ ವಾರೆಂಟ್‌ ಜಾರಿ

    ಬೆಂಗಳೂರು: ಉದ್ಯೋಗಿಗಳಿಗೆ ಸರ್ಕಾರಕ್ಕೆ ವಂಚನೆ ಎಸಗಿದ ಆರೋಪದಲ್ಲಿ ಟೀಂ‌ ಇಂಡಿಯಾ (Team India) ಮಾಜಿ ಆಟಗಾರ ರಾಬಿನ್ ಉತ್ತಪ್ಪ (Robin Uthappa) ಬಂಧನಕ್ಕೆ ವಾರೆಂಟ್ (Arrest Warrent) ಜಾರಿಯಾಗಿದೆ.

    ಪಿಎಫ್ಓ ರಿಜಿನಲ್ ಕಮಿಷನರ್ ಷಡಕ್ಷರಿ ಗೋಪಾಲ ರೆಡ್ಡಿ ಪುಲಕೇಶಿ ನಗರ ಪೊಲೀಸರಿಗೆ (Pulakeshinagar Police Station) ಪತ್ರ ಬರೆದಿದ್ದಾರೆ. ಇದೇ ತಿಂಗಳು ನಾಲ್ಕರಂದು ಅರೆಸ್ಟ್‌ ವಾರೆಂಟ್ ಜಾರಿಯಾಗಿದ್ದು ರಾಬಿನ್‌ ಉತ್ತಪ್ಪ ಪುಲಕೇಶಿ ನಗರದ ನಿವಾಸಿಯಾಗಿರುವ ಕಾರಣ ಅಲ್ಲಿನ ಠಾಣೆಗೆ ಪತ್ರ ಬರೆಯಲಾಗಿದೆ. ಇದನ್ನೂ ಓದಿ: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಬಂಧನ

    ಏನಿದು ಆರೋಪ?
    ಸೆಂಚುರಿಸ್ ಲೈಫ್ ಸ್ಟೈಲ್ ಬ್ರಾಂಡ್ ಪ್ರೈವೆಟ್ ಲಿಮಿಟೆಡ್ ಎಂಬ ಖಾಸಗಿ ಕಂಪನಿಯನ್ನು ಉತ್ತಪ್ಪ ನಡೆಸುತ್ತಿದ್ದಾರೆ. ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಹಲವರ ಫಿಎಫ್ ಹಣ ಪಾವತಿಸಿಲ್ಲ.

    ಸಂಬಳದಲ್ಲಿ ಪಿಎಫ್ ಹಣ ಕಟ್ ಮಾಡಿಕೊಂಡು ಉದ್ಯೋಗಿಗಳ ಖಾತೆಗೆ ಹಾಕದೇ 23 ಲಕ್ಷ ರೂ. ಪಿಎಫ್ ಹಣ ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

  • ಸಿದ್ದು, ಡಿಕೆಶಿ ಫೈಟ್‌ನಲ್ಲಿ ಗೆದ್ದ ಪರಮೇಶ್ವರ್‌!

    ಸಿದ್ದು, ಡಿಕೆಶಿ ಫೈಟ್‌ನಲ್ಲಿ ಗೆದ್ದ ಪರಮೇಶ್ವರ್‌!

    ಬೆಂಗಳೂರು: ಪುಲಕೇಶಿನಗರದಲ್ಲಿ (Pulakeshinagar) ಇಬ್ಬರ ಜಗಳದಲ್ಲಿ ಮೂರನೇಯವರಿಗೆ ಲಾಭವಾಗಿದ್ದು ಪರಮೇಶ್ವರ್‌ (Parameshwar) ಆಪ್ತನಿಗೆ ಕಾಂಗ್ರೆಸ್‌ ಟಿಕೆಟ್‌ ಸಿಕ್ಕಿದೆ.

    ಮನೆಗೆ ಬೆಂಕಿ ಬಿದ್ದವರಿಗೂ ಇಲ್ಲ. ಬೆಂಕಿ ಹಾಕಿದ ಆರೋಪ ಹೊತ್ತವರಿಗೂ ಟಿಕೆಟ್ ಸಿಕ್ಕಿಲ್ಲ. ಇಬ್ಬರ ನಡುವಿನ ಜಗಳ ಎರಡು ಬಣದ ನಡುವಿನ ಫೈಟ್ ಮೂರನೇ ಬಣಕ್ಕೆ ನೆರವಾಗಿದೆ.

    ಕೆಜಿಹಳ್ಳಿ ಡಿಜೆಹಳ್ಳಿ ಗಲಾಟೆಯ ಸಂದರ್ಭದಲ್ಲಿ ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ (Akhanda Srinivas Murthy) ಮನೆಗೆ ಬೆಂಕಿ ಬಿದ್ದಿತ್ತು. ಸಂಪತ್‌ ರಾಜ್‌ ಮೇಲೆ ಬೆಂಕಿ ಹಾಕಿಸಿದ ಆರೋಪ ಬಂದಿತ್ತು.

    ಪರಿಶಿಷ್ಟ ವರ್ಗಕ್ಕೆ ಮೀಸಲಾಗಿರುವ ಈ ಕ್ಷೇತ್ರದಲ್ಲಿ ಅನುಕಂಪದ ಆಧಾರದ ಮೇಲೆ ಶ್ರೀನಿವಾಸ ಮೂರ್ತಿ ಅವರಿಗೆ ಟಿಕೆಟ್‌ ನೀಡುವಂತೆ ಸಿದ್ದರಾಮಯ್ಯ (Siddaramaiah) ಲಾಬಿ ಮಾಡಿದ್ದರೆ ಮಾಜಿ ಬಿಬಿಎಂಪಿ ಮೇಯರ್‌ ಸಂಪತ್‌ ರಾಜ್‌ (Sampath Raj) ಪರ ಡಿಕೆ ಶಿವಕುಮಾರ್‌ ಬ್ಯಾಟ್‌ ಬೀಸಿದ್ದರು.

    ಇಬ್ಬರ ನಡುವಿನ ಹಗ್ಗಜಗ್ಗಾಟ ಈಗ ಪರಮೇಶ್ವರ್ ಆಪ್ತ ಎ.ಸಿ ಶ್ರೀನಿವಾಸ್‍ಗೆ ಪುಲಿಕೇಶಿನಗರದ ಟಿಕೆಟ್‌ ಸಿಕ್ಕಿದೆ. ಶ್ರೀನಿವಾಸ್‌ ಅವರು ದೇವನಹಳ್ಳಿ ಕ್ಷೇತ್ರದಿಂದ ಕಣಕ್ಕೆ ಇಳಿಯಲು ಮುಂದಾಗಿದ್ದರು. ಆದರೆ ಅಲ್ಲಿಯ ಟಿಕೆಟ್‌ ಕೈ ತಪ್ಪಿದ್ದರೂ ಈಗ ಪುಲಕೇಶಿನಗರದ ಟಿಕೆಟ್‌ ಸಿಕ್ಕಿದೆ. ಇದನ್ನೂ ಓದಿ: ಬಿಜೆಪಿ ಅಂತಿಮ ಪಟ್ಟಿ ಬಿಡುಗಡೆ – ಈಶ್ವರಪ್ಪಗೆ ಹೈಕಮಾಂಡ್‌ ಶಾಕ್‌

     

    ಕಾಂಗ್ರೆಸ್‌ ಬಿಡುಗಡೆ ಮಾಡಿದ ಮೂರು ಪಟ್ಟಿಯಲ್ಲಿ ತನ್ನ ಹೆಸರು ಇಲ್ಲದ ಕಾರಣ ಅಖಂಡ ಶ್ರೀನಿವಾಸಮೂರ್ತಿ ಈಗಾಗಲೇ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

    ಕಳೆದ ಬಾರಿ ಚುನಾವಣೆಯಲ್ಲಿ ಅಖಂಡ 81 ಸಾವಿರ ಮತಗಳ ಅಂತರದಿಂದ ಭರ್ಜರಿ ಜಯಗಳಿಸಿದ್ದರು. ಶ್ರೀನಿವಾಸಮೂರ್ತಿಗೆ 97,574 ಮತಗಳು ಬಿದ್ದಿದ್ದರೆ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಪ್ರಸನ್ನಕುಮಾರ್‌ಗೆ 15,948 ಮತಗಳು ಸಿಕ್ಕಿತ್ತು. ಬಿಜೆಪಿಯಿಂದ ಸ್ಪರ್ಧಿಸಿದ್ದ ಸುಶೀಲಾ ದೇವರಾಜ್‌ಗೆ 9,479 ಮತಗಳು ಬಿದ್ದಿದ್ದವು.

  • ಕನಕಪುರದಲ್ಲಿ ನಾನು ಅಭ್ಯರ್ಥಿಯಲ್ಲ: ಡಿಕೆ ಶಿವಕುಮಾರ್

    ಕನಕಪುರದಲ್ಲಿ ನಾನು ಅಭ್ಯರ್ಥಿಯಲ್ಲ: ಡಿಕೆ ಶಿವಕುಮಾರ್

    ಬೆಂಗಳೂರು: ಕನಕಪುರದಲ್ಲಿ (Kanakapura) ನಾನು ಅಭ್ಯರ್ಥಿ ಅಲ್ಲ. ಇಲ್ಲಿ ಪ್ರತಿಯೊಂದು ಮನೆಯವರೂ ಅಭ್ಯರ್ಥಿಗಳೇ. 40 ವರ್ಷಗಳಿಂದ ನನ್ನನ್ನು ಸಾಕಿದ್ದಾರೆ. 8 ಚುನಾವಣೆಗಳಲ್ಲಿ (Election) ನನಗೆ ಮತಗಳನ್ನು ನೀಡಿದ್ದಾರೆ. ಪ್ರತಿಯೊಂದು ಮನೆಯವರೂ ಅಭ್ಯರ್ಥಿಗಳಾಗಿದ್ದು, ಅವರೇ ಚುನಾವಣೆಯನ್ನು ಮಾಡುತ್ತಾರೆ ಎಂದು ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ಹೇಳಿದ್ದಾರೆ.

    ನಾಮಪತ್ರ (Nomination Papers) ಸಲ್ಲಿಕೆಗೆ ಇನ್ನೆರಡು ದಿನ ಬಾಕಿಯಿದೆ. ಕಾಂಗ್ರೆಸ್ (Congress) ಅಂತಿಮ ಪಟ್ಟಿ ರಿಲೀಸ್ ಕುರಿತು ಬೆಂಗಳೂರಿನ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಐದು ಬೆರಳಿದೆ. ಹಾಗಾಗಿ ನಾವು ಐದು ಪಟ್ಟಿ ರಿಲೀಸ್ ಮಾಡುತ್ತೇವೆ. ಬುಧವಾರ ಅಂತಿಮ ಪಟ್ಟಿ ಬಿಡುಗಡೆಯಾಗಲಿದೆ. ಉಳಿದ ಎಂಟು ಕ್ಷೇತ್ರಕ್ಕೂ ಅಂದೇ ಘೋಷಣೆಯಾಗುತ್ತದೆ. ನಾನು ಹುಟ್ಟಿರೋದೆ ಅಮವಾಸ್ಯೆಯಲ್ಲಿ. ದಿನೇಶ್ ಗುಂಡೂರಾವ್ ಹಾಗೂ ರಾಮಕೃಷ್ಣ ಹೆಗಡೆ ಹುಟ್ಟಿದ್ದೂ ಅವಮಾಸ್ಯೆಯಂದೇ. ನಾಮಪತ್ರ ಸಲ್ಲಿಸಲು ಅದೆಲ್ಲಾ ನಮಗೆ ಮ್ಯಾಟರ್ ಆಗಲ್ಲ ಎಂದರು. ಇದನ್ನೂ ಓದಿ: ಕೃಷ್ಣನೂರು ಉಡುಪಿಗೆ ಯಾರು ಅಧಿಪತಿ? ಅಖಾಡ ಹೇಗಿದೆ? ಬಲಾಬಲ ಏನು? 

    ಪುಲಕೇಶಿನಗರದಲ್ಲಿ (Pulakeshinagar) ಟಿಕೆಟ್ ಕೊಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪುಲಕೇಶಿನಗರದಲ್ಲಿ ಹೊಸ ಮುಖಕ್ಕೆ ಪ್ರಾಮುಖ್ಯತೆ ಕೊಡುತ್ತೇವೆ. ಕನಕಪುರದಲ್ಲಿ ಆರ್.ಅಶೋಕ್ (R.Ashok) ನಾಮಪತ್ರ ಸಲ್ಲಿಸಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದು ಶುಭಹಾರೈಸಿದರು. ಇದನ್ನೂ ಓದಿ: ಯುವ ಕಾಂಗ್ರೆಸ್ ಮುಖ್ಯಸ್ಥ ಬಿವಿ ಶ್ರೀನಿವಾಸ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ – ರಾಹುಲ್ ವಿರುದ್ಧವು ಕಿಡಿಕಾರಿದ ಯುವ ನಾಯಕಿ 

    ಅನಿಲ್ ಲಾಡ್ (Anil Lad) ಪಕ್ಷ ಬಿಡುವ ವಿಚಾರವಾಗಿ ಮಾತನಾಡಿದ ಅವರು, ಗಾಳಿ, ನೀರು, ಬೆಳಕು, ಸೂರ್ಯ ಉದಯಿಸುವುದು ಹಾಗೂ ಕತ್ತಲಾಗುವುದು, ರಾಜಕಾರಣಿಗಳು ಪಕ್ಷ ಬದಲಿಸುವುದು ಎಲ್ಲಾ ಇದ್ದೇ ಇರುತ್ತದೆ. ಇದನ್ನು ಯಾರೂ ತಡೆಯಲಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ರಾಜ್ಯಕ್ಕೆ ಬರಲಿದ್ದಾರೆ ಮೋದಿ, ಯೋಗಿ – ಬಿಜೆಪಿ ತಾರಾ ಪ್ರಚಾರಕರ ಪಟ್ಟಿಯಲ್ಲಿ ಯಾರಿದ್ದಾರೆ? 

    ಮಂಡ್ಯದಲ್ಲಿ ಕುಮಾರಸ್ವಾಮಿ (H.D.Kumaraswamy) ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಾರೇ ಸ್ಪರ್ಧೆ ಮಾಡಿದರೂ ನಾವು ಈಗಾಗಲೇ ನಮ್ಮ ಅಭ್ಯರ್ಥಿಗೆ ಬಿ ಫಾರಂ ಕೊಟ್ಟಿದ್ದೇವೆ. ಅವರೇ ಸ್ಪರ್ಧೆ ಮಾಡಲಿದ್ದಾರೆ. ಕುಮಾರಸ್ವಾಮಿ ಎದುರು ಅಭ್ಯರ್ಥಿ ಬದಲಾವಣೆ ಊಹಾಪೋಹ. ಈಗಿರುವ ಅಭ್ಯರ್ಥಿಯೇ ಮುಂದುವರೆಯಲಿದ್ದಾರೆ. ಅಲ್ಲದೇ ಚಿಕ್ಕಮಗಳೂರಿನಲ್ಲಿ (Chikkamagaluru) ಬಿಜೆಪಿಯವರೇ (BJP) ಹೆಚ್‌.ಡಿ.ತಮ್ಮಯ್ಯನವರಿಗೆ (H.D.Thammaiah) ಟಿಕೆಟ್ ಕೊಡಬೇಕು ಎಂದು ಒತ್ತಾಯ ಮಾಡಿದರು. ಅವರೆಲ್ಲರ ಒತ್ತಾಯದ ಮೇರೆಗೆ ತಮ್ಮಯ್ಯನವರಿಗೆ ಟಿಕೆಟ್ ನೀಡಲಾಗಿದೆ ಎಂದರು. ಇದನ್ನೂ ಓದಿ: ಟಿವಿಯವರು ಮುಖ, ಲೋಗೋ ತೋರ್ಸೋವರ್ಗೂ ಕೆಳಗಿಳಿಯಲ್ಲ – ಟಿಕೆಟ್ ಸಿಗದ್ದಕ್ಕೆ ಟವರ್ ಏರಿ ವೀಡಿಯೋ ಮಾಡಿದ ಬಿಜೆಪಿ ಕಾರ್ಯಕರ್ತ