Tag: ಪುರೋಹಿತರು

  • ಪುರೋಹಿತರ ಮಾತಿಗೆ ಮರುಳಾಗಿ ಸಮಾಧಿಯಾಗಿದ್ದವನ ರಕ್ಷಿಸಿದ ಪೊಲೀಸರು

    ಪುರೋಹಿತರ ಮಾತಿಗೆ ಮರುಳಾಗಿ ಸಮಾಧಿಯಾಗಿದ್ದವನ ರಕ್ಷಿಸಿದ ಪೊಲೀಸರು

    ಲಕ್ನೋ: ನವರಾತ್ರಿ ಹಬ್ಬ ಆರಂಭವಾಗುವ ಮುನ್ನ ಸಮಾಧಿ ತೋಡಿಕೊಂಡರೆ ಜ್ಞಾನೋದಯವಾಗುತ್ತದೆ ಎಂದು ಪುರೋಹಿತರೊಬ್ಬರು ಹೇಳಿದರು ಎಂಬ ಕಾರಣಕ್ಕೆ ಆರು ಅಡಿ ಆಳದಲ್ಲಿ ಹೂತಿದ್ದ ವ್ಯಕ್ತಿಯನ್ನು ಉತ್ತರಪ್ರದೇಶ ಪೊಲೀಸರು ರಕ್ಷಿಸಿದ್ದಾರೆ.

    ಲಕ್ನೋದಿಂದ 45 ಕಿ.ಮೀ ದೂರದಲ್ಲಿರುವ ಉನ್ನಾವೋ ಜಿಲ್ಲೆಯ ತಾಜ್‍ಪುರ ಗ್ರಾಮದ ಮೂವರು ಪುರೋಹಿತರು ಹಣ ಗಳಿಸುವ ದುರುದ್ದೇಶದಿಂದ ಯುವಕನೊಬ್ಬನಿಗೆ ಐಕ್ಯವಾಗುವಂತೆ ತಿಳಿಸಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಯುವಕನನ್ನು ಸಮಾಧಿಯಿಂದ ಹೊರ ಕರೆತಂದಿದ್ದಾರೆ. ವೀಡಿಯೋದಲ್ಲಿ ವ್ಯಕ್ತಿಯನ್ನು ಸಮಾಧಿ ಮಾಡಿರುವ ಮಣ್ಣು ಮತ್ತು ಬಿದಿರಿನ ಹೊದಿಕೆಯನ್ನು ತೆಗೆದುಹಾಕುವುದನ್ನು ಕಾಣಬಹುದಾಗಿದೆ.

    ಹಿಂದೂಗಳು ಆಚರಿಸುವ ಅದ್ದೂರಿ ಹಬ್ಬಗಳಲ್ಲಿ ನವರಾತ್ರಿ ಹಬ್ಬ ಕೂಡ ಒಂದು. ಈ ಹಬ್ಬದ ಸಮಯದಲ್ಲಿ ಹಣ ಗಳಿಸುವ ದುರಾಸೆಯಿಂದ ಈ ರೀತಿಯ ಸಂಚುಗಳನ್ನು ರೂಪಿಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದೀಗ ಸಮಾಧಿಯಾಗಿದ್ದ ಯುವಕ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.  ಇದನ್ನೂ ಓದಿ: ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಪ್ರಧಾನಿ ಮೋದಿ

    POLICE JEEP

    ಆರು ಅಡಿ ಆಳದ ಹೊಂಡದಲ್ಲಿ ಸಮಾಧಿಯಾಗಿದ್ದ ಅಸಿವಾನ್ ಪೊಲೀಸ್ ಠಾಣೆ ವ್ಯಾಪ್ತಿಯ ತಾಜ್‍ಪುರ ಗ್ರಾಮದ ನಿವಾಸಿ ಶುಭಂ ಗೋಸ್ವಾಮಿಯನ್ನು ಇದೀಗ ಪೊಲೀಸರು ಹೊರ ಕರೆತಂದಿದ್ದಾರೆ. ಗೋಸ್ವಾಮಿ ಅವರ ತಂದೆ ವಿನೀತ್ ಗೋಸ್ವಾಮಿ ಕೂಡ ಈ ಕೃತ್ಯದಲ್ಲಿ ಪಾಲುದಾರರಾಗಿದ್ದಾರೆ. ಇದನ್ನೂ ಓದಿ : ರಾಜ್ಯದಲ್ಲಿ ಧಾರ್ಮಿಕ ಗುರುಗಳು, ಉಲೇಮಾಗಳು ದಾಳಿ ಬಗ್ಗೆ ಅಪಸ್ವರ ಎತ್ತಿಲ್ಲ: ಖಾದರ್

    ಸುಮಾರು ಐದು ವರ್ಷಗಳಿಂದ ಗ್ರಾಮದ ಹೊರಗಿದ್ದ ಗುಡಿಸಲಿನಲ್ಲಿ ಶುಭಂ ಗೋಸ್ವಾಮಿ ವಾಸವಾಗಿದ್ದ. ನಂತರ ಪುರೋಹಿತರೊಂದಿಗೆ ಸಂಪರ್ಕ ಬೆಳೆದ ಬಳಿಕ ತಮ್ಮನ್ನು ಧಾರ್ಮಿಕ ಆಚರಣೆಗಳಲ್ಲಿ ತೊಡಗಿಸಿಕೊಳ್ಳಲು ಪ್ರಾರಂಭಿಸಿದರು. ಆದರೆ ಶುಭಂ ಗೋಸ್ವಾಮಿ ನಂಬಿಕೆಯನ್ನೇ ಬಂಡವಾಳವಾಗಿಸಿಕೊಂಡು ಪುರೋಹಿತರಾದ ಮುನ್ನಾಲಾಲ್ ಮತ್ತು ಶಿವಕೇಶ್ ದೀಕ್ಷಿತ್ ಹಣ ಗಳಿಸಲು ಪ್ರಯತ್ನಿಸಿದರು. ಹೀಗಾಗಿ ಭೂ ಸಮಾಧಿ ಮಾಡಿಕೊಳ್ಳುವಂತೆ ತಿಳಿಸಿದರು.

    ಹೀಗಾಗಿ ಭಾನುವಾರ ಸಂಜೆ 6 ಅಡಿ ಸಮಾಧಿಗೆ ಶುಭಂ ಗೋಸ್ವಾಮಿ ಪ್ರವೇಶಿಸಿದರು. ಈ ವಿಚಾರ ತಿಳಿಯುತ್ತಿದ್ದಂತೆ ಗ್ರಾಮದ ಜನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ಗಾಬರಿಗೊಂಡ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಮಾಧಿಯಿಂದ ವ್ಯಕ್ತಿಯನ್ನು ಹೊರ ಕರೆ ತಂದಿದ್ದಾರೆ. ನಂತರ ಈ ವಿಚಾರವಾಗಿ ಯುವಕನನ್ನು ವಿಚಾರಣೆ ನಡೆಸಿದ ಬಳಿಕ ಆರ್ಚಕರ ಕೃತ್ಯ ಬೆಳಕಿಗೆ ಬಂದಿದೆ.

    Live Tv
    [brid partner=56869869 player=32851 video=960834 autoplay=true]

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಯೋಧನ ಕುಟುಂಬದ ಸಹಾಯಕ್ಕೆ ಬಂದ ಆರ್ಮಿ ಫೋರಂ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಯೋಧನ ಕುಟುಂಬದ ಸಹಾಯಕ್ಕೆ ಬಂದ ಆರ್ಮಿ ಫೋರಂ

    – ಯೋಧನ ಮದ್ವೆ ಮಾಡಿಸ್ತೀವಿ ಎಂದ ಪುರೋಹಿತರು

    ಬೆಳಗಾವಿ/ಬೆಂಗಳೂರು: ಗಡಿ ಕಾಯುವ ಯೋಧನ ಮದುವೆ ಮಾಡಿಸಲು ಪೂಜಾರಿಗಳೇ ಬರ್ತಿಲ್ಲ. ಜಮೀನಿನ ವಿಷಯಕ್ಕೆ ಯೋಧ ಹಾಗೂ ಅವರ ಕುಟುಂಬಕ್ಕೆ ಬಹಿಷ್ಕಾರ ಸುದ್ದಿ ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾಗುತ್ತಿದ್ದಂತೆ ಯೋಧನ ಕಣ್ಣೀರಿಗೆ ಆರ್ಮಿ ಪೋರಂ ಮಿಡಿದಿದೆ.

    ಬೆಳಗಾವಿ ಜಿಲ್ಲೆ ರಾಮದುರ್ಗದ ತೋಟಗಿಟ್ಟಿಯಲ್ಲಿ ಯೋಧ ವಿಠ್ಠಲ್ ಕಡಕೋಳ ಅವರಿಗೆ ತಿರುಪತಿ ತಿರುಮಲ ದೇವಸ್ಥಾನದ ಅರ್ಚಕರನ್ನೇ ಕರೆಸಿ ಮದುವೆ ಮಾಡ್ತೀವಿ. ಈ ಊರವರು ಮದುವೆ ಮಾಡಿಸದೇ ಇದ್ದರೆ ಅಷ್ಟೇ ಹೋಯ್ತ ಅಂತ ಆರ್ಮಿ ಪೋರಂ ಅಧ್ಯಕ್ಷ ಶಶಾಂಕ್ ಕಿಡಿಕಾರಿದ್ದಾರೆ.

    ಯೋಧನ ಮದುವೆ ನಾವು ಮಾಡಿಸ್ತೀವಿ ಎಂದ ರಾಜ್ಯದ ಪುರೋಹಿತರು:
    ಪಬ್ಲಿಕ್ ಟಿವಿಯಲ್ಲಿ ಯೋಧ ವಿಠಲ್ ಹಾಗೂ ಅವರ ಕುಟುಂಬಕ್ಕೆ ಊರಿನವರು ಬಹಿಷ್ಕರಿಸಿ, ಯೋಧ ಹಾಗೂ ಅವರ ಅಣ್ಣನ ಮದುವೆ ಮಾಡಿಸಲು ಪುರೋಹಿತರು ಮುಂದೆ ಬರುತ್ತಿಲ್ಲ ಎಂಬ ಸುದ್ದಿ ಪ್ರಸಾರವಾಗುತ್ತಿದ್ದಂತೆ ಕರುನಾಡು ಮಿಡಿದಿದೆ. ಯೋಧನ ಮದುವೆ ನಾವು ಮಾಡಿಸ್ತೀವಿ. ನೂರು ಜನ ಪುರೋಹಿತರನ್ನು ಕರೆಸ್ತೀವಿ ಎಂದು ರಾಜ್ಯದ ಪುರೋಹಿತರು ಮುಂದೆ ಬಂದಿದ್ದಾರೆ.

    ಪಬ್ಲಿಕ್ ಟಿವಿಗೆ ಕರೆ ಮಾಡಿ ಯೋಧನ ಮದುವೆಯನ್ನು ನಾವೇ ಉಚಿತವಾಗಿ ಮಾಡಿಕೊಡುತ್ತೇವೆ. ನೂರು ಜನ ಪುರೋಹಿತರನ್ನು ನಾವು ಕರೆಸಿ ಮದುವೆ ಮಾಡುತ್ತೇವೆ ಎಂದು ಪುರೋಹಿತ ಸಂಘದ ಸದಸ್ಯ ತೇಜಸ್ ಅವರು ಹೇಳಿದ್ದಾರೆ.

    ಗ್ರಾಮಕ್ಕೆ ಭೇಟಿ ನೀಡಿದ ತಹಶೀಲ್ದಾರ್:
    ಯೋಧನ ಕುಟುಂಬವನ್ನು ಬಹಿಷ್ಕರಿಸಿ ದ್ವೇಷ ಕಾರುತ್ತಿರುವ ಗ್ರಾಮಕ್ಕೆ ರಾಮದುರ್ಗ ತಹಶೀಲ್ದಾರ್ ಗಿರೀಶ್ ಸ್ವಾಧಿ ಭೇಟಿ ನೀಡಿದ್ದಾರೆ. ಗ್ರಾಮಸ್ಥರಿಂದ ನೊಂದಿರುವ ಯೋಧ ವಿಠಲ್ ಕುಟುಂಬದವರೊಂದಿಗೆ ತಹಶೀಲ್ದಾರ್ ಮಾತುಕತೆ ನಡೆಸಿದ್ದಾರೆ.

    ಏನಿದು ಸುದ್ದಿ?
    ಬೆಳಗಾವಿಯ ರಾಮದುರ್ಗದ ತೋಟಗಿಟ್ಟಿ ಗ್ರಾಮಸ್ಥರು ಯೋಧ ವಿಠಲ್ ಕಡಕೋಳ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ. ಹೀಗಾಗಿ ಈ ಕುಟುಂಬದ ಜೊತೆ ಯಾರಾದರೂ ಮಾತನಾಡಿದರೆ ಅವರಿಗೆ ಐದು ಸಾವಿರ ದಂಡ ವಿಧಿಸಲಾಗುತ್ತೆ. ಜೊತೆಗೆ ಯೋಧನ ಕುಟುಂಬಕ್ಕೆ ಯಾರೋಬ್ಬರ ಮನೆಯಲ್ಲೂ ನೀರು ಸಿಗಲ್ಲ, ಊರಿನ ಜಾತ್ರೆ, ದೇಗುಲಕ್ಕೆ ಕೂಡ ಯೋಧನ ಕುಟುಂಬದವರಿಗೆ ಪ್ರವೇಶ ನಿಷೇಧಿಸಲಾಗಿದೆ.

    ಒಂದು ಜಾಗದ ವಿಚಾರಕ್ಕೆ ಪ್ರಾಣದ ಹಂಗು ತೊರೆದು ದೇಶಕ್ಕಾಗಿ ದುಡಿಯುವ ಯೋಧ ವಿಠಲ್ ಹಾಗೂ ಅವರ ಕುಟುಂಬಕ್ಕೆ ಗ್ರಾಮಸ್ಥರು ಬಹಿಷ್ಕಾರ ಹಾಕಿದ್ದಾರೆ. ವಿಠಲ್ ಅವರ ತಂದೆಗೆ ಸೇರಿದ ಜಾಗವನ್ನು ಕಬಳಿಸಿ, ಅಲ್ಲಿ ಅಂಗನವಾಡಿ ನಿರ್ಮಿಸೋಕೆ ಕೆಲ ಊರಿನ ಮುಖಂಡರು ಮುಂದಾಗಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದನ್ನೇ ದೊಡ್ಡದು ಮಾಡಿಕೊಂಡ ಊರವರು ಇದೊಂದು ಯೋಧನ ಕುಟುಂಬ ಎನ್ನುವ ಗೌರವ ಮರೆತು, ಕನಿಷ್ಠ ಪಕ್ಷ ಮಾನವೀಯತೆಯನ್ನು ಮರೆತು ಕಳೆದ ಮೂರು ವರ್ಷದಿಂದ ಈ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ.

    ಅಷ್ಟೇ ಅಲ್ಲದೇ ಈಗ ವಿಠಲ್ ಹಾಗೂ ಅವರ ಅಣ್ಣನಿಗೆ ಮುಂದಿನ ತಿಂಗಳು ಮದುವೆ ನಿಗದಿ ಆಗಿದೆ. ಮದುವೆ ಶಾಸ್ತ್ರಕ್ಕೆ ಈ ಊರಿನ ಪೂಜಾರಿಯನ್ನೇ ಕರೆಯಬೇಕು ಎನ್ನುವುದು ಇಲ್ಲಿನ ಸಂಪ್ರದಾಯ. ಅವರನ್ನು ಬಿಟ್ಟು ಯಾರನ್ನೂ ಕರೆಯುವಂತಿಲ್ಲ. ಆ ಪೂಜಾರಿ ಬಾರದೇ ಇದ್ದರೆ ಮದುವೆ ಸಂಪ್ರದಾಯ ನಡೆಯೋದು ಕಷ್ಟ. ಆದರೆ ಗ್ರಾಮಸ್ಥರು ಈ ಕುಟುಂಬದ ಮೇಲೆ ಎಷ್ಟರ ಮಟ್ಟಿಗೆ ದ್ವೇಷ ಸಾಧಿಸುತ್ತಿದ್ದಾರೆ ಎಂದರೆ ಯೋಧನ ಮದುವೆ ಮಾಡಿಸೋಕೆ ಪೂಜಾರಿಗೂ ದಿಗ್ಭಂಧನ ಹಾಕಿದ್ದಾರೆ. ಯೋಧನ ಮದ್ವೆಗೆ ನಾನು ಬರೋದೇ ಇಲ್ಲ, ಇದು ದೈವ ನಿರ್ಣಯ ನಾನು ಮದುವೆ ಮಾಡಿಸಲ್ಲ ಅಂತ ಪೂಜಾರಿ ಹಠ ಹಿಡಿದು ಕುಳಿತಿದ್ದಾರೆ. ಅಯ್ಯೋ ಇಡೀ ಊರವರು ಬೇಡ ಅಂತಾರೆ ನಾನ್ಯಾಕೆ ಊರವರನ್ನು ಎದುರು ಹಾಕಿಕೊಂಡು ಬಾಳಲಿ ಎಂದು ಪೂಜಾರಿ ಹೇಳುತ್ತಿದ್ದಾರೆ.

  • ದೇವಸ್ಥಾನದಲ್ಲಿಯೇ ಪುರೋಹಿತರಿಂದ 5ರ ಬಾಲಕಿ ಮೇಲೆ ಅತ್ಯಾಚಾರ

    ದೇವಸ್ಥಾನದಲ್ಲಿಯೇ ಪುರೋಹಿತರಿಂದ 5ರ ಬಾಲಕಿ ಮೇಲೆ ಅತ್ಯಾಚಾರ

    ಭೋಪಾಲ್: ದೇವಸ್ಥಾನದ ಆವರಣದಲ್ಲಿಯೇ 5 ವರ್ಷದ ಬಾಲಕಿಯ ಮೇಲೆ ಎಸಗಿದ್ದ ಇಬ್ಬರು ಪುರೋಹಿತರನ್ನು ಮಧ್ಯಪ್ರದೇಶದ ಪೊಲೀಸರು ಬಂಧಿಸಿದ್ದಾರೆ.

    ರಾಜು ಪಂಡಿತ್ (55) ಹಾಗೂ ಬಟೋಲಿ ಪ್ರಜಾಪತಿ ಬಂಧಿತ ಆರೋಪಿಗಳು. ಇಬ್ಬರು ದಾಟಿಯಾ ಜಿಲ್ಲೆಯ ಗೋರ್‍ಘಾಟ್‍ದ ದೇವಸ್ಥಾನವೊಂದರ ಅರ್ಚಕಗಾರಿದ್ದು, ಇದೇ ತಿಂಗಳ 2ರಂದು ಕೃತ್ಯ ಎಸಗಿದ್ದಾರೆ.

    ಘಟನೆ ವಿವರ:
    ರಾಜು ಹಾಗೂ ಬಟೋಲಿ ಎಂಬ ಇಬ್ಬರು ಪುರೋಹಿತರು 5 ವರ್ಷದ ಬಾಲಕಿಗೆ ಸಿಹಿ ಪ್ರಸಾದ ನೀಡಲು ಕರೆದಿದ್ದಾರೆ. ಬಾಲಕಿ ದೇವಸ್ಥಾನದ ಒಳಗೆ ಬರುತ್ತಿದ್ದಂತೆ ಕೂಡಿಹಾಕಿ, ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಈ ವೇಳೆ ಯಾರಿಗೂ ಅತ್ಯಾಚಾರ ಮಾಡಿದ ಕುರಿತು ತಿಳಿಸಿದಂತೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಯಾರಿಗೂ ಗೊತ್ತಾಗದಂತೆ ದೇವಸ್ಥಾನದಿಂದ ಬಾಲಕಿಯನ್ನು ಕರೆತಂದು ಆಕೆಯ ಮನೆಯ ಎದುರು ಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾರೆ.

    ಬಾಲಕಿ ಅಸ್ವಸ್ಥವಾಗಿ ಕಾಣುತ್ತಿದ್ದರಿಂದ ತಾಯಿ ವಿಚಾರಿಸಿದ್ದಾರೆ. ಆದ್ರೆ ಬಾಲಕಿ ಮಾತ್ರ ಘಟನೆಯ ಕುರಿತು ವಿವರಿಸಲು ಹಿಂದೇಟು ಹಾಕಿದ್ದಾಳೆ. ಆದರೆ ಏನಾಗಿದೆ ನಿನಗೆ ಅಂತಾ ತಾಯಿ ಗದರಿಸಿದಾಗ, ತನ್ನ ಮೇಲೆ ಇಬ್ಬರು ಪುರೋಹಿತರು ಅತ್ಯಾಚಾರ ಎಸಗಿದ್ದಾರೆ ಅಂತಾ ಬಾಲಕಿ ಹೇಳಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪೋಷಕರು ತಕ್ಷಣವೇ ಬಾಲಕಿಯನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಕುರಿತು ದಾಟಿಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತನಿಖೆ ಚುರುಕುಗೊಳಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಇಬ್ಬರು ಆರೋಪಿ ಪುರೋಹಿತರ ವಿರುದ್ಧ ಪೋಕ್ಸೋ ಕಾಯ್ದೆ ಹಾಗೂ ಐಪಿಸಿ ವಿಧಿ 376 (ಅತ್ಯಾಚಾರ) ಅಡಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv