Tag: ಪುರುಷರ ಕುರ್ತಾ

  • ಪುರುಷರ ಸಾಂಪ್ರದಾಯಿಕ ಉಡುಗೆಯ ಲೇಟೆಸ್ಟ್ ಡಿಸೈನ್‍ಗಳು

    ಪುರುಷರ ಸಾಂಪ್ರದಾಯಿಕ ಉಡುಗೆಯ ಲೇಟೆಸ್ಟ್ ಡಿಸೈನ್‍ಗಳು

    ಫ್ಯಾಷನ್ ವಿಚಾರಕ್ಕೆ ಬಂದರೆ, ಮಹಿಳೆಯರಿಗಿಂತ ಪುರುಷರಿಗೆ ಆಯ್ಕೆಗಳು ಕಡಿಮೆ. ಆದರೂ ಪುರುಷರು ಕೂಡ ಧರಿಸಬಹುದಾದ ಕೆಲವೊಂದಷ್ಟು ಸಾಂಪ್ರದಾಯಿಕ ಉಡುಪುಗಳಿದೆ.

    kurta

    ಸಾಮಾನ್ಯವಾಗಿ ಪುರುಷರು ಪ್ಯಾಂಟ್ ಹಾಗೂ ಶರ್ಟ್, ಟಿ-ಶರ್ಟ್ ಅನ್ನೇ ಹೆಚ್ಚಾಗಿ ಧರಿಸುತ್ತಾರೆ. ಮೊದಲೆಲ್ಲಾ ಪುರುಷರಿಗಿರುವ ಸಾಂಪ್ರದಾಯಿಕ ಉಡುಪು ಅಂದರೆ ಪಂಚೆ ಹಾಗೂ ಕಚ್ಚೆ ಮಾತ್ರ ಎಂದು ಹೇಲಲಾಗುತ್ತಿತ್ತು. ಆದರೆ ಇದೀಗ ಪುರುಷರಿಗೆ ಹಲವಾರು ಶೈಲಿಯ ಸಾಂಪ್ರದಾಯಿಕ ಉಡುಗೆಗಳು ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಆದರೆ ಕೆಲವರಿಗೆ ತಮಗೆ ಸೂಟ್ ಆಗುವಂತಹ ಸಾಂಪ್ರದಾಯಿಕ ಉಡುಪುಗಳು ಯಾವುದು? ಯಾವ ರೀತಿಯ ಡಿಸೈನರ್ ಡ್ರೆಸ್ ಖರೀದಿಸಬೇಕು ಎಂಬುವುದರ ಬಗ್ಗೆ ಗೊಂದಲ ಹೊಂದಿರುತ್ತಾರೆ. ಅಂತವರಿಗೆ ಕೆಲವೊಂದಷ್ಟು ಮಾಹಿತಿ ಈ ಕೆಳಗಿನಂತಿದೆ.

    ಕಾಟಲ್ ಮತ್ತು ಲಿನಿನ್ ಆಂಗ್ರಾಖಾ ಶಾರ್ಟ್ ಕುರ್ತಾ
    ಸಾಂಪ್ರದಾಯಿಕ ಉಡುಪು ಧರಿಸಲು ಬಯಸುವವರು ಈ ಆಂಗ್ರಾಖಾ ಶಾರ್ಟ್ ಕುರ್ತಾವನ್ನು ಧರಿಸಬಹುದು. ಇದೊಂದು ಕ್ಯಾಶುಯಲ್ ವೇರ್ ಆಗಿ ನೀವು ಉಪಯೋಗಿಸಬಹುದು. ಈ ಕುರ್ತಾವನ್ನು ಕಾಟನ್ ತಯಾರಿಸಲಾಗಿದ್ದು, ಇದು ಧರಿಸಿದಾಗ ನಿಮಗೆ ಶೇಕಡಾ 100ರಷ್ಟು ಕಂಫರ್ಟ್ ಫೀಲ್ ನೀಡುತ್ತದೆ. ಈ ಸಾಂಪ್ರದಾಯಿಕ ಉಡುಪು ಕೊಲ್ಹಾಪುರಿ ಮತ್ತು ಡರ್ಬಿ ಶೂಗಳೊಂದಿಗೆ ಸುಂದರವಾಗಿ ಕಾಣಿಸುತ್ತದೆ.  ಇದನ್ನೂ ಓದಿ: ಕ್ಯೂಟ್ ಡ್ರೆಸ್ ಧರಿಸಿ ಬೊಂಬೆಯಂತೆ ರಾಯನ್ ಪೋಸ್

    pyjama

    ಸಿಲ್ಕ್ ಕುರ್ತಾ ಪೈಜಾಮ ಮತ್ತು ಪ್ರಿಂಟೆಡ್ ಜಾಕೆಟ್
    ಕಂಪ್ಲೀಟ್ ಟ್ರೆಡಿಶನ್ ಲುಕ್ ನೀಡುವಂತಹ ಉಡುಪನ್ನೇ ಧರಿಸಬೇಕು ಎಂದು ಬಯಸುವವರು ಈ ಸಿಲ್ಕ್ ಕುರ್ತಾ ಪೈಜಾಮ ಮತ್ತು ಪ್ರಿಂಟೆಡ್ ಜಾಕೆಟ್ ಧರಿಸಬಹುದಾಗಿದೆ. ಕುರ್ತಾ, ಚೂಡಿದಾರ್‌ನಂತಿರುವ ಪೈಜಾಮ ಮತ್ತು ಫ್ಲವರ್ ಪ್ರಿಂಟೆಡ್ ಇರುವ ಜಾಕೆಟ್ ಎಲ್ಲರ ಮಧ್ಯೆ ಸಖತ್ ಹೈಲೆಟ್ ಆಗಿ ಕಾಣಿಸುತ್ತದೆ. ಈ ಕುರ್ತಾ ಮೊಣಕಾಲಿನಷ್ಟು ಉದ್ದ ಬರುತ್ತದೆ ಮತ್ತು ಇದಕ್ಕೆ ನೀಡಿರುವ ಜಾಕೆಟ್ ಅನ್ನು ನೀವು ಇತರ ಉಡುಪಿನೊಂದಿಗೆ ಸಹ ಧರಿಸಬಹುದಾಗಿದೆ. ಈ ಸಾಂಪ್ರದಾಯಿಕ ಉಡುಪು ನಿಮಗೆ ಸಖತ್ ಸ್ಟೈಲಿಶ್ ಲುಕ್ ನೀಡುತ್ತದೆ.

    pyjama

    ಚೂಡಿದಾರ್ ಸೆಟ್‍ನಂತಿರುವ ಕಾಟನ್ ಕುರ್ತಾ
    ಕಾಟನ್ ಕುರ್ತಾ ಸಿಂಪಲ್ ಲುಕ್ ನೀಡುವುದರ ಜೊತೆಗೆ ಬಹಳ ಸುಂದರವಾಗಿ ಕಾಣಿಸುತ್ತದೆ. ಈ ಕುರ್ತಾದ ಸೈಡ್‍ನಲ್ಲಿ ಬಟನ್‍ಗಳನ್ನು ಸಾಲಾಗಿ ಉದ್ದನೆ ಜೋಡಿಸಲಾಗಿರುತ್ತದೆ. ಈ ಡ್ರೆಸ್ ಅನ್ನು ನೀವು ಯಾವ ಸೀಸನ್‍ನಲ್ಲಿ ಬೇಕಾದರೂ ಕೂಡ ಧರಿಸಬಹುದಾಗಿದೆ ಮತ್ತು ಇದಕ್ಕೆ ವೈಟ್ ಕಲರ್ ಪ್ಯಾಂಟ್ ಸುಂದರವಾಗಿ ಕಾಣಿಸುತ್ತದೆ.  ಇದನ್ನೂ ಓದಿ: ಸ್ಪೆಷಲ್‌ ಚಿಕನ್ ಸೂಪ್ ಸಖತ್ ಟೇಸ್ಟಿ

    pyjama

    ಕಾಟಲ್ ಬ್ಲೆಂಡ್ ಕುರ್ತಾ ಪೈಜಾಮ ಸೆಟ್
    ಕಾಟಲ್ ಕುರ್ತಾ ಪೈಜಾಮಕ್ಕೆಂದೇ ಪ್ರತ್ಯೇಕ ಅಭಿಮಾನಿಗಳಿದ್ದಾರೆ. ಯಾವುದೇ ಚಿಕ್ಕ ಅಥವಾ ದೊಡ್ಡ ಸಮಾರಂಭಗಳಲ್ಲಿ ಧರಿಸಿದಾಗ ಇದು ನಿಮಗೆ ಕಂಪ್ಲೀಟ್ ಲುಕ್ ನೀಡುತ್ತದೆ. ಇದು ಎಲ್ಲರಿಗೂ ಇಷ್ಟವಾಗುವಂತಹ ಹಾಗೂ ಕಡಿಮೆ ಬೆಲೆ ಕೊಳ್ಳಬಹುದಾದ ಕುರ್ತಾ ಪೈಜಾಮವಾಗಿದೆ.

    pyjama