Tag: ಪುರುಷತ್ವ

  • ಪುರುಷತ್ವಕ್ಕೆ ಕುತ್ತಾಗುವ ಸ್ಟಿರಾಯ್ಡ್ ಮಾರಾಟ – ಬೆಂಗ್ಳೂರಿನ ಜಿಮ್ ಟ್ರೈನರ್ ಬಂಧನ

    ಪುರುಷತ್ವಕ್ಕೆ ಕುತ್ತಾಗುವ ಸ್ಟಿರಾಯ್ಡ್ ಮಾರಾಟ – ಬೆಂಗ್ಳೂರಿನ ಜಿಮ್ ಟ್ರೈನರ್ ಬಂಧನ

    ಬೆಂಗಳೂರು: ಹಲವರು ಫಿಟ್‍ನೆಸ್ ಮೂಲಕ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕು ಹಾಗೂ ದಪ್ಪ ಆಗಬೇಕು ಎಂಬ ಉದ್ದೇಶದಿಂದ ಜಿಮ್‍ಗೆ ಹೋಗುತ್ತಾರೆ. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಳ್ಳುವ ಜಿಮ್‍ಗಳು ಹಾನಿಕಾರಕ ಔಷಧಿಗಳನ್ನು ನೀಡಿ ಜಿಮ್‍ಗೆ ತೆರಳುವವರ ಜೀವನವನ್ನೇ ಹಾಳು ಮಾಡುತ್ತಿವೆ. ಇಂತಹ ಹಾನಿಕಾರಕ ಔಷಧಿ ನೀಡುತ್ತಿದ್ದ ಜಿಮ್ ಮೇಲೆ ಪೊಲೀಸರು ದಾಳಿ ನಡೆಸಿ ತರಬೇತುದಾರನನ್ನು ಬಂಧಿಸಿದ್ದಾರೆ.

    ನಗರದ ಚಾಮರಾಜಪೇಟೆಯ ನಾಲ್ಕನೇ ಮುಖ್ಯ ರಸ್ತೆಯಲ್ಲಿರುವ ಅಲ್ಟಿಮೇಟ್ ಫಿಟ್ನೆಸ್ ಹೆಸರಿನ ಜಿಮ್ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಜಿಮ್ ತರಬೇತುದಾರ ಶಿವಕುಮಾರ್ ನನ್ನು ಬಂಧಿಸಿದ್ದಾರೆ. ಈತ ಜಿಮ್‍ಗೆ ಬರುವವರಿಗೆಲ್ಲ ಹಾನಿಕಾರಕ ಔಷಧಿ ಸ್ಟಿರಾಯ್ಡ್ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಆಗಸ್ಟ್ 21ರಂದು ಜಿಮ್ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಜಿಮ್‍ನಲ್ಲಿ ಹಲವು ಸ್ಟಿರಾಯ್ಡ್ ಔಷಧಿಯ ಬಾಕ್ಸ್ ಗಳು ಪತ್ತೆಯಾಗಿದ್ದವು.

    ದಾಳಿ ವೇಳೆ ದೇಹವನ್ನು ಹುರಿಗೊಳಿಸುವ ಮಾತ್ರೆಗಳು ಮತ್ತು ಇಂಜೆಕ್ಷನ್‍ಗಳು ಜೊತೆಗೆ ಕೆಲವು ಪ್ರೊಟೀನ್ ಬಾಟಲ್‍ಗಳು ಸಹ ಪತ್ತೆಯಾಗಿವೆ. ಆನ್‍ಲೈನ್ ಮೂಲಕ ಸ್ಟಿರಾಯ್ಡ್ ತರಿಸಿಕೊಳ್ತಿದ್ದ ಆರೋಪಿ ಗ್ರಾಹಕರ ಇಚ್ಛೆಗೆ ಅನುಗುಣವಾಗಿ ಸ್ಟಿರಾಯ್ಡ್ ನೀಡುತ್ತಿದ್ದ. ಈ ಭಯಾನಕ ಔಷಧಿಯಿಂದ ಪುರುಷತ್ವಕ್ಕೆ ಕುತ್ತು ಉಂಟಾಗಲಿದೆ. ಆರೋಪಿ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 406 ಮತ್ತು 420ರ ಅಡಿ ಪ್ರಕರಣ ದಾಖಲಿಸಿದ್ದಾರೆ. ಔಷಧ ನಿಯಂತ್ರಣ ಇಲಾಖೆಗೆ ಪತ್ರ ಬರೆದು ಜಪ್ತಿಯಾದ ಔಷಧಗಳ ತಪಾಸಣೆ ನಡೆಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

  • ಫಸ್ಟ್ ನೈಟಲ್ಲಿ ‘ನರಕ ದರ್ಶನ’ ಮಾಡಿಸಿದವನಿಗೆ ಇಂದು ಪುರುಷತ್ವ ಪರೀಕ್ಷೆ!

    ಫಸ್ಟ್ ನೈಟಲ್ಲಿ ‘ನರಕ ದರ್ಶನ’ ಮಾಡಿಸಿದವನಿಗೆ ಇಂದು ಪುರುಷತ್ವ ಪರೀಕ್ಷೆ!

    ಹೈದರಾಬಾದ್: ಮದುವೆಯ ಈ ಬಂಧಾ, ಅನುರಾಗದ ಅನುಬಂಧಾ, ಏಳೇಳು ಜನುಮದಲೂ ತೀರದ ಸಂಬಂಧ ಎಂಬಂತೆ ಮದುವೆಯ ಬಗ್ಗೆ ಅಪಾರ ಕನಸು ಕಟ್ಟಿಕೊಂಡು ತಾಳಿ ಕಟ್ಟಿಸಿಕೊಂಡು ಪತಿಯ ಕಿರಾತಕ ಕೃತ್ಯಗಳಿಂದ ಫಸ್ಟ್ ನೈಟಲ್ಲೇ ಚಿತ್ರ ಹಿಂಸೆ ಅನುಭವಿಸಿದ ಯುವತಿಯ ಪತಿಯ ಪುರುಷತ್ವ ಪರೀಕ್ಷೆ ಮಾಡುವಂತೆ ಚಿತ್ತೂರ್ ಕೋರ್ಟ್ ಆದೇಶ ನೀಡಿದೆ. ಹೈದರಾಬಾದ್ ನಲ್ಲಿರುವ ಮೆಡಿಕಲ್ ಬೋರ್ಡ್ ನಲ್ಲಿ ಪುರುಷತ್ವ ಪರೀಕ್ಷೆ ಮಾಡುವಂತೆ ನ್ಯಾಯಾಲಯ ಸೂಚಿಸಿದ್ದು, ಪೊಲೀಸರು ಆರೋಪಿಯನ್ನು ಇಂದು ಪುರುಷತ್ವ ಪರೀಕ್ಷೆಗೆ ಹಾಜರುಪಡಿಸಲಿದ್ದಾರೆ.

    ಫಸ್ಟ್ ನೈಟಲ್ಲಿ ಏನಾಗಿತ್ತು?: ಚಿತ್ತೂರು ಜಿಲ್ಲೆಯ ಗಂಗಾಧರ ನೆಲ್ಲೂರು ಮಂಡಲದ ಮೋತರಂಗನಪಲ್ಲಿಯ ರಾಜೇಶ್ ಎಂಬಾತನಿಗೆ ಚಿನ್ನದಮರಗುಂಟ ಎಂಬಲ್ಲಿನ ಶೈಲಜಾ ಎಂಬಾಕೆಯ ಜೊತೆಯ ಡಿಸೆಂಬರ್ 1ರಂದು ಶುಕ್ರವಾರ ಮದುವೆ ನಡೆದಿತ್ತು. ರಾಜೇಶ್ ವೃತ್ತಿಯಲ್ಲಿ ಸರ್ಕಾರಿ ಶಾಲಾ ಶಿಕ್ಷಕನಾಗಿದ್ದರೆ, ಶೈಲಜಾ ಎಂಬಿಎ ವ್ಯಾಸಂಗ ಮಾಡುತ್ತಿದ್ದಳು. ಮದುವೆ ಆದ ತಕ್ಷಣ ದಂಪತಿ ಕನಿಪಾಕಂನಲ್ಲಿ ಪೂಜೆ ಸಲ್ಲಿಸಲು ತೆರಳಿದ್ದರು. ಅಲ್ಲಿಯವರೆಗೆ ಎಲ್ಲವೂ ಸರಿಯಾಗಿತ್ತು. ಆದರೆ ರಾಜೇಶನ ಕರಾಳ ಮುಖದ ಪರಿಚಯ ಶೈಲಜಾಗೆ ರಾತ್ರಿಯಾಗುತ್ತಿದ್ದಂತೆಯೇ ಅರಿವಾಯಿತು. ಫಸ್ಟ್ ನೈಟ್‍ನಲ್ಲೇ ರಾಕ್ಷಸನಾದ ಪತಿ- ಚೂರಿಯಿಂದ ಇರಿದು, ಅಂಗಾಂಗ ಕಚ್ಚಿ ಹಲ್ಲೆ

    ಫಸ್ಟ್ ನೈಟ್ ಗೆಂದು ಸಿದ್ಧಳಾಗಿ ಬಂದ ಶೈಲಜಾ ಮುಂದೆ ರಾಜೇಶ್ ತನ್ನ ವೈಯಕ್ತಿಕ ವಿಚಾರಗಳನ್ನು ಹಂಚಿಕೊಂಡಿದ್ದಾನೆ. ನಾನು ನಪುಂಸಕ, ನನಗೆ ಪುರುಷತ್ವ ಇಲ್ಲ. ಆದರೆ ಇದನ್ನು ನೀನು ಯಾರಿಗೂ ಹೇಳಬೇಡ ಎಂದು ಬೆದರಿಕೆ ಹಾಕಿದ್ದಾನೆ. ಆದರೆ ಶೈಲಜಾ ಫೋನ್ ಮಾಡಿ ಈ ವಿಚಾರವನ್ನು ತನ್ನ ಪೋಷಕರಿಗೆ ತಿಳಿಸುತ್ತಾಳೆ. ಇದನ್ನೂ ಓದಿ: ಯುವಕರೊಂದಿಗೆ ಸೆಕ್ಸ್ ಮಾಡುವಾಗ ಪತ್ನಿ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪತಿರಾಯ!

    ಇದರಿಂದ ತನ್ನ ಮರ್ಯಾದೆ ಹರಾಜಾಯಿತು ಎಂದು ಸಿಟ್ಟಿಗೆದ್ದ ಪತಿರಾಯ ಪತ್ನಿಯ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದಾನೆ. ಆಕೆಯ ಮುಖಕ್ಕೆ ಹೊಡೆದಿದ್ದಾನೆ. ಕಣ್ಣು, ಕೆನ್ನೆ, ತಲೆ ಹಾಗೂ ದೇಹ ಪೂರ್ತಿ ಹಲ್ಲೆ ಮಾಡಿದ್ದಾನೆ. ಇಷ್ಟು ಸಾಲದೆಂಬಂತೆ ಆಕೆಯ ದೇಹ ಪೂರ್ತಿ ಕಚ್ಚಿ ತನ್ನ ವಿಕೃತಿ ಮೆರೆದಿದ್ದಾನೆ. ಆತನ ಹೊಡೆತದ ತೀವ್ರತೆ ಎಷ್ಟಿತ್ತೆಂದರೆ ಹಲ್ಲೆ ನಡೆದ ಕೆಲವೇ ಗಂಟೆಗಳಲ್ಲಿ ಸುಂದರವಾಗಿದ್ದ ಮುಖ ಹಾಗೂ ಕಣ್ಣು ಊದಿಕೊಂಡಿತ್ತು. ಕಣ್ಣಿನ ಕೆಳಭಾಗ ಕಪ್ಪು ಬಣ್ಣಕ್ಕೆ ತಿರುಗಿತ್ತು. ಇನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದಾದಾಗ ಶೈಲಜಾ ತನ್ನ ಪೋಷಕರಿಗೆ ಫೋನ್ ಮಾಡಿ ವಿವರಿಸುತ್ತಾಳೆ. ಇದನ್ನೂ ಓದಿ: ಪತಿಯನ್ನು ಕೊಂದು, ಪ್ರೇಮಿಯನ್ನೇ ತನ್ನ ಗಂಡ ಎಂದು ನಂಬಿಸಲು ಆತನ ಮುಖಕ್ಕೆ ಆ್ಯಸಿಡ್ ಸುರಿದ ಪತ್ನಿ

    ತಕ್ಷಣ ಆಕೆಯ ಮನೆಯವರು ರಾಜೇಶ್ ಮನೆಗೆ ಆಗಮಿಸುತ್ತಾರೆ. ಅದರೆ ಬೆಡ್ ರೂಂ ಬಾಗಿಲು ತೆಗೆಯಲು ನಿರಾಕರಿಸಿದಾಗ ಬಾಗಿಲು ಒಡೆದು ಒಳ ಹೋಗುವ ವೇಳೆ ರಾಜೇಶ್ ಪರಾರಿಯಾಗಿದ್ದ. ಇದನ್ನೂ ಓದಿ: ಸೆಕ್ಸ್, ಸೆಕ್ಸ್.. ಎಂದು ಹಾತೊರೆಯುತ್ತಿದ್ದ ಬಾಯ್ ಫ್ರೆಂಡ್ ನ ಕತ್ತುಹಿಸುಕಿ ಕೊಂದ್ಳು..!

    ಇದೇ ವೇಳೆ ನೋವಿನಿಂದ ನರಳಾಡುತ್ತಿದ್ದ ಆಕೆಯನ್ನು ಆಸ್ಪತ್ರೆಗೆ ಸೇರಿದ್ದಾರೆ. ಆದರೆ ತುಟಿಯನ್ನು ಕಚ್ಚಿ, ಹಲ್ಲೆ ಮಾಡಿದ್ದರಿಂದ ಆಕೆಯ ತುಟಿ ಊದಿಕೊಂಡಿದ್ದರಿಂದ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಸದ್ಯ ಶೈಲಜಾ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಪತ್ನಿಗೆ ಬ್ಲೂಫಿಲ್ಮ್ ತೋರಿಸಿ, ಮದ್ಯ ಕುಡಿಸಿ ಸೆಕ್ಸ್ ಗೆ ಬರುವಂತೆ ಟೆಕ್ಕಿ ಗಂಡನ ಕಿರಿಕ್

    ಬೆಡ್ ರೂಂನಿಂದ ಪರಾರಿಯಾಗಿದ್ದ ರಾಜೇಶನನ್ನು ಬಳಿಕ ಪೊಲೀಸರು ಬಂಧಿಸಿದ್ದರು. ಆದರೆ ಪುರುಷತ್ವ ಪರೀಕ್ಷೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಪೊಲೀಸರು ಕೋರ್ಟ್ ಮೊರೆ ಹೋಗಿದ್ದರು. ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಪುರುಷತ್ವ ಪರೀಕ್ಷೆ ನಡೆಸಲು ಸೂಚಿಸಿದೆ. ಇದನ್ನೂ ಓದಿ: ಕಾಲ್ ಮಾಡಿ ಸೆಕ್ಸ್ ಗೆ ಕರೀತಿದ್ದ ವ್ಯಕ್ತಿ ಅರೆಸ್ಟ್-ಆರೋಪಿಯನ್ನ ನೋಡಿದ ಮಹಿಳೆ ಶಾಕ್!

  • ನನ್ನ ಗಂಡನಿಗೆ ಪುರುಷತ್ವ ಇಲ್ಲ ಎಂದು ಪೊಲೀಸರಿಗೆ ಪತ್ನಿ ದೂರು

    ನನ್ನ ಗಂಡನಿಗೆ ಪುರುಷತ್ವ ಇಲ್ಲ ಎಂದು ಪೊಲೀಸರಿಗೆ ಪತ್ನಿ ದೂರು

    ಬೆಂಗಳೂರು: ‘ನನ್ನ ಗಂಡನಿಗೆ ಪುರುಷತ್ವ ಇಲ್ಲ’ ಎಂದು ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ವಿಚಾರ ಮೊದಲೇ ಗೊತ್ತಿದ್ದರೂ ತನ್ನ ಮಾವ ಹಾಗೂ ಅತ್ತೆ ನನ್ನ ಜೊತೆ ಮದುವೆ ಮಾಡಿಸಿದ್ದರು. ಈ ಮೂಲಕ ಇವರೆಲ್ಲಾ ಸೇರಿ ನನಗೆ ಮೋಸ ಮಾಡಿದ್ದಾರೆ ಎಂದು ಮಹಿಳೆ ಬಾಣಸವಾಡಿ ಪೊಲೀಸರಿಗೆ ದೂರು ನೀಡಿದ್ದಾರೆ.

    ದೂರಿನಲ್ಲೇನಿದೆ?: 2014ರ ಜೂನ್ 5ರಂದು ನನಗೆ (ವಾಣಿ – ಹೆಸರು ಬದಲಿಸಲಾಗಿದೆ) ಎಡ್ವಿನ್ ಎಂಬಾತನ ಜೊತೆ ಮದುವೆ ಮಾಡಿಸಿದ್ದಾರೆ. ಮದುವೆ ಸಂದರ್ಭ ವರದಕ್ಷಿಣೆಯನ್ನೂ ನೀಡಿದ್ದೆವು.

    ಮದುವೆಯಾದ ಫಸ್ಟ್ ನೈಟಲ್ಲೇ ಪತಿಗೆ ಪುರುಷತ್ವ ಇಲ್ಲ. ಒಬ್ಬ ಗಂಡಸಿಗೆ ಇರಬೇಕಾದ ಯಾವುದೇ ರೀತಿಯ ಭಾವನೆಗಳಾಗಲೀ, ಲಕ್ಷಣಗಳಾಗಲೀ ಇಲ್ಲ ಎಂದು ನನಗೆ ಗೊತ್ತಾಯಿತು. ಇದರಿಂದ ನಾನು ತೀವ್ರ ಆಘಾತಕ್ಕೆ ಒಳಗಾಗಿ, ಮಾನಸಿಕವಾಗಿ ನೊಂದಿದ್ದೇನೆ.

    ನನ್ನ ಪತಿ ದುರ್ಬಲ ಎಂದು ಎಡ್ವಿನ್ ತಂದೆ ಆರೋಕ್ಯದಾಸ್ ಹಾಗೂ ತಾಯಿ ಸೆಲ್ವಿ ಅವರಿಗೆ ಗೊತ್ತಿತ್ತು. ಆದರೂ ಅವರು ಮದುವೆ ಮಾಡಿ ನನಗೆ ಮೋಸ ಮಾಡಿದ್ದಾರೆ. ಹಾಗಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ಮಾರ್ಚ್ 15ರಂದು ನೀಡಿರುವ ದೂರಿನಲ್ಲಿ ಮಹಿಳೆ ಮನವಿ ಮಾಡಿಕೊಂಡಿದ್ದಾರೆ.