Tag: ಪುರಿ

  • 46 ವರ್ಷದ ನಂತರ ತೆರೆಯಲಿದೆ ಪುರಿ ಜಗನ್ನಾಥ ದೇಗುಲ ರತ್ನ ಭಂಡಾರದ ಬಾಗಿಲು!

    46 ವರ್ಷದ ನಂತರ ತೆರೆಯಲಿದೆ ಪುರಿ ಜಗನ್ನಾಥ ದೇಗುಲ ರತ್ನ ಭಂಡಾರದ ಬಾಗಿಲು!

    – 1985ರ ಜುಲೈ 14ರಂದು ಕೊನೆಯ ಬಾರಿ ಓಪನ್‌
    – ಸುಪ್ರೀಂ ಆದೇಶದಂತೆ ರತ್ನ ಭಂಡಾರ ತೆರೆಯಲು ಮುಂದಾದ ಸರ್ಕಾರ

    ಭುವನೇಶ್ವರ: ತಿರುವಂತನಪುರಂನಲ್ಲಿರುವ ಪದ್ಮನಾಭ ದೇವಸ್ಥಾನ (Padmanabhaswamy Temple Thiruvananthapuram) ತಳ ಮಹಡಿಯಲ್ಲಿ ದೊಡ್ಡ ಪ್ರಮಾಣ ಪುರಾತನ ಕಾಲದ ಚಿನ್ನಾಭರಣ ಪತ್ತೆಯಾಗಿತ್ತು. ಇದು ಇಡೀ ದೇಶದ ಗಮನ ಸೆಳೆದಿತ್ತು. ಅಂತಹದೇ ಮತ್ತೊಂದು ಘಟನೆ ಈಗ ಒಡಿಶಾದ (Odisha) ಪುರಿಯಲ್ಲಿ ನಡೆಯಬಹುದಾ ಎನ್ನುವ ಕುತೂಹಲ ಮನೆ ಮಾಡಿದೆ. 46 ವರ್ಷಗಳ ಬಳಿಕ ಪುರಿಯ ಜಗನ್ನಾಥ ದೇವಾಲಯದ (Puri Jagannath Temple) ರತ್ನ ಭಂಡಾರದ ಬಾಗಿಲನ್ನು ತೆರೆಯಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು ಅಲ್ಲಿರುವ ಪುರಾತನ ಚಿನ್ನಾಭರಣ, ವಜ್ರ, ವೈಡೂರ್ಯದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಹೆಚ್ಚಾಗತೊಡಗಿದೆ.

    1985ರ ಜುಲೈ 14ರಂದು ಬಲಭದ್ರ ದೇವರ ಚಿನ್ನಾಭರಣಗಳ ಪತ್ತೆಗಾಗಿ ರತ್ನ ಭಂಡಾರವನ್ನು ಕೊನೆಯ ಬಾರಿಗೆ ತೆರೆಯಲಾಗಿತ್ತು. ರತ್ನ ಭಂಡಾರದಲ್ಲಿ ಎಷ್ಟು ನಿಧಿಗಳಿವೆ ಎಂಬ ಬಗ್ಗೆ 1978ರ ಮೇ 13ರಿಂದ ಜುಲೈ 13ರವರೆಗೆ ಲೆಕ್ಕಾಚಾರ ಹಾಕಲಾಗಿದ್ದು, ಇದು ಕೊನೆಯದಾಗಿ ನಡೆದ ಲೆಕ್ಕಾಚಾರವಾಗಿತ್ತು. ಆ ಬಳಿಕ ರತ್ನ ಭಂಡಾರದೊಳಗೆ ವಿಷಕಾರಿ ಸರ್ಪಗಳು, ನಾಗರ ಹಾವುಗಳು ಕಾವಲು ಕಾಯುತ್ತಿರುವ ಬಗ್ಗೆ ದಂತಕಥೆಗಳು, ಜಾನಪದ ಕಥೆಗಳು ಹುಟ್ಟಿಕೊಂಡಿದ್ದವು, ಹೀಗಾಗೀ ಬಾಗಿಲು ತೆರೆಯುವ ಸಾಹಸ ಮಾಡಲು ಯಾವ ಸರ್ಕಾರ ಹೋಗಿರಲಿಲ್ಲ.

    ಬರೋಬ್ಬರಿ 45 ವರ್ಷಗಳ ಬಳಿಕ ರತ್ನ ಭಂಡಾರದ ಬಾಗಿಲು ತೆರೆಯಲ್ಲಿದ್ದು, ಅಲ್ಲಿರುವ ಪುರಾತನ ಚಿನ್ನಾಭರಣ, ವಜ್ರ, ವೈಡೂರ್ಯದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಹೆಚ್ಚಾಗತೊಡಗಿದೆ. ಅದರ ಜೊತೆಗೆ ಅಲ್ಲಿ ವಾಸವಾಗಿರುವ ಹಾವುಗಳ ಬಗ್ಗೆಯೂ ಅಧಿಕಾರಿಗಳಿಗೆ ಅಷ್ಟೇ ಭಯ ಹುಟ್ಟಿಸಿದೆ. ಹೀಗಾಗೀ ನುರಿತ ಉರಗ ತಜ್ಞರು ವೈದ್ಯರ ತಂಡ, ಅಂಬುಲೆನ್ಸ್‌ ಸನ್ನದ್ಧವಾಗಿಟ್ಟುಕೊಳ್ಳಲಾಗಿದೆ.

    ಸಂಪತ್ತು ಎಷ್ಟಿದೆ?
    ಜಗನ್ನಾಥ ದೇವಸ್ಥಾನದ ರತ್ನ ಭಂಡಾರದಲ್ಲಿ ಇರುವ ಅಮೂಲ್ಯ ವಜ್ರ ವೈಡೂರ್ಯ, ಚಿನ್ನಾಭರಣಗಳನ್ನು ಬಳಸಿಕೊಂಡರೆ ವಿಶ್ವದ ಹಲವು ಬಡ ರಾಷ್ಟ್ರಗಳ ಆರ್ಥಿಕತೆಯನ್ನು ಸುಧಾರಿಸಬಹುದಂತೆ.  2018 ರಲ್ಲಿ, ಆಗಿನ ಕಾನೂನು ಸಚಿವ ಪ್ರತಾಪ್ ಜೆನಾ ಅವರು ‘ರತ್ನ ಭಂಡಾರ್’ 12,831 ಭಾರಿ (ಒಂದು ಭಾರಿ 11.66 ಗ್ರಾಂಗೆ ಸಮ) ಚಿನ್ನಾಭರಣಗಳನ್ನು ಹೊಂದಿದೆ. 22,153 ಭಾರಿ ಬೆಳ್ಳಿ ಪಾತ್ರೆಗಳು ಮತ್ತು ಇತರ ವಸ್ತುಗಳನ್ನು ಅಮೂಲ್ಯವಾದ ಕಲ್ಲುಗಳಿಂದ ಅಳವಡಿಸಲಾಗಿದೆ ಎಂದು ರಾಜ್ಯ ವಿಧಾನಸಭೆಗೆ ತಿಳಿಸಿದ್ದರು.

    ದೇವಾಲಯದಲ್ಲಿ ಕೆಲಸ ಮಾಡುತ್ತಿರುವ ಹಿರಿಯ ವ್ಯಕ್ತಿಗಳ ಪ್ರಕಾರ ರತ್ನ ಭಂಡಾರವು ಮೂರು ಭಾಗಗಳನ್ನು ಒಳಗೊಂಡಿದೆ. ಹೊರಗಿನ ಕೋಣೆಯಲ್ಲಿ ದೇವಸ್ಥಾನದ ಆಚರಣೆಗಳಲ್ಲಿ ಬಳಸುವ ಆಭರಣ, ಒಳಗಗಿನ ಕೊಠಡಿಯಲ್ಲಿ ದೇವಸ್ಥಾನ ಬಳಸದ ಆಭರಣ ಮತ್ತು ರಾಜರು ಮತ್ತು ಭಕ್ತರು ದಾನ ಮಾಡಿದ ಇತರ ಅಮೂಲ್ಯ ವಸ್ತುಗಳನ್ನು ಹೊಂದಿದೆ.

     

    ಬಾಗಿಲು ತೆರೆಯಿರಿ ಎಂದಿದ್ದ ಸುಪ್ರೀಂ
    2018ರಲ್ಲಿ ಸುಪ್ರೀಂಕೋರ್ಟ್ ಪುರಾತತ್ವ ಇಲಾಖೆಗೆ ರತ್ನ ಭಂಡಾರದ ಆಭರಣಗಳನ್ನು ಪರಿಶೀಲಿಸುವಂತೆ ಆದೇಶಿಸಿತ್ತು. ಈ ಸಂದರ್ಭದಲ್ಲಿ ದೇವಾಲಯಕ್ಕೆ ಪರಿಶೀಲನೆಗಾಗಿ ಆಗಮಿಸಿದ್ದ ಎಎಸ್ಐ ಅಧಿಕಾರಿಗಳ ತಂಡಕ್ಕೆ ದೇವಾಲಯದ ಕೀಲಿ ಕೈ ನಾಪತ್ತೆಯಾಗಿದೆ ಎಂದು ತಿಳಿಸಿದ್ದರು‌. ಇದೀಗ ಹೆಚ್ಚುವರಿಯಾಗಿ ಇರುವ ಕೀ ಮೂಲಕ ಬೀಗ ತೆರೆಯಲು ಪ್ರಯತ್ನ ನಡೆಯಲಿದೆ. ಒಂದು ವೇಳೆ ಆ ಕೀಯಿಂದಲೂ ಬಾಗಿಲು ತೆರೆಯದಿದ್ದರೆ, ಬಾಗಿಲನ್ನು ಒಡೆದು ರತ್ನ ಭಂಡಾರದಲ್ಲಿರುವ ಚಿನ್ನಾಭರಣಗಳ ಲೆಕ್ಕಾಚಾರ ನಡೆಯಲಿದೆ.

  • ಪುರಿ ಜಗನ್ನಾಥ ಚಂದನ್ ಜಾತ್ರಾ ಉತ್ಸವದಲ್ಲಿ ಪಟಾಕಿ ಅವಘಡ – 15 ಮಂದಿಗೆ ಗಾಯ

    ಪುರಿ ಜಗನ್ನಾಥ ಚಂದನ್ ಜಾತ್ರಾ ಉತ್ಸವದಲ್ಲಿ ಪಟಾಕಿ ಅವಘಡ – 15 ಮಂದಿಗೆ ಗಾಯ

    – ನಾಲ್ವರ ಸ್ಥಿತಿ ಗಂಭೀರ

    ಭುವನೇಶ್ವರ್: ಒಡಿಶಾದ (Odisha) ಪುರಿಯಲ್ಲಿ (Puri) ಭಗವಾನ್ ಜಗನ್ನಾಥ ದೇವಾಲಯದಲ್ಲಿ ಚಂದನ್ ಜಾತ್ರಾ ಉತ್ಸವದ (Lord Jagannath’s Chandan Jatra festival) ವೇಳೆ ಪಟಾಕಿಯ ರಾಶಿಗೆ ಬೆಂಕಿ ತಗುಲಿ ಸ್ಫೋಟಗೊಂಡ (Firecrackers exploded) ಪರಿಣಾಮ 15 ಜನ ಗಾಯಗೊಂಡಿದ್ದು, ಅದರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

    ಜಾತ್ರಾ ಉತ್ಸವದ ವೇಳೆ ಭಕ್ತರು ಪಟಾಕಿ ಸಿಡಿಸುತ್ತಿದ್ದರು. ಈ ವೇಳೆ ರಾಶಿ ಹಾಕಿದ್ದ ಪಟಾಕಿಗೆ ಬೆಂಕಿ ತಗುಲಿದೆ. ಇದು ಸ್ಫೋಟಕ್ಕೆ ಕಾರಣವಾಯಿತು. ಅವಘಡದ ವೇಳೆ ನೂರಾರು ಭಕ್ತರು ಜಲಧಾರೆ ನರೇಂದ್ರ ಪುಷ್ಕರಿಣಿಯ ದಡದಲ್ಲಿ ನಿಂತಿದ್ದರು. ಪಟಾಕಿ ರಾಶಿಗೆ ಬೆಂಕಿ ತಗಲುತ್ತಿದ್ದಂತೆ ಕೆಲವರು ಜೀವ ಉಳಿಸಿಕೊಳ್ಳಲು ನದಿಗೆ ಜಿಗಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ಸ್ಫೋಟಿಸುವ ಬೆದರಿಕೆ: ಅಪ್ರಾಪ್ತ ವಶಕ್ಕೆ

    ಘಟನೆ ಬಗ್ಗೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೇ ಚಿಕಿತ್ಸೆಯ ವೆಚ್ಚವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಭರಿಸಲಾಗುವುದು ಎಂದು ತಿಳಿಸಿದ್ದಾರೆ.

    ಘಟನೆಯಲ್ಲಿ ಗಾಯಗೊಂಡವರನ್ನು ಪುರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 88 ಕೋಟಿ ಅಕ್ರಮ – ಎಂಡಿ, ಲೆಕ್ಕಾಧಿಕಾರಿ ಅಮಾನತು

  • ಹೊಸ ರೀತಿಯ ‘ಆಲೂ ಮಸಾಲಾ ಪುರಿ’ ಮಾಡುವ ವಿಧಾನ

    ಹೊಸ ರೀತಿಯ ‘ಆಲೂ ಮಸಾಲಾ ಪುರಿ’ ಮಾಡುವ ವಿಧಾನ

    ಇಂದು ನಾವು ಹೇಳಿಕೊಡುತ್ತಿರುವ ರೆಸಿಪಿಯನ್ನು ನೀವು ಯಾವುದೇ ಉಪ್ಪಿನಕಾಯಿ ಅಥವಾ ಸಬ್ಜಿಯೊಂದಿಗೆ ಸವಿಯಬಹುದು. ಇದು ಗರಿಗರಿ ಮತ್ತು ರುಚಿಕರವಾಗಿದ್ದು, ಹೊಸ ರೀತಿಯ ಪುರಿಯಾಗಿದೆ. ಏನಿದು ಈ ಪುರಿ ಅಷ್ಟು ರುಚಿಯಾಗಿರುತ್ತೆ ಎಂದು ಯೋಚನೆ ಮಾಡುತ್ತೀದ್ದೀರಾ. ಹೌದು, ಇದು ನಿಜಕ್ಕೂ ತುಂಬಾ ರುಚಿಯಾಗಿರುತ್ತೆ. ನೀವು ಇಂದು ನಿಮ್ಮ ಮನೆಯಲ್ಲಿ ‘ಆಲೂ ಮಸಾಲಾ ಪುರಿ’ ಮಾಡಿ ರುಚಿ ಸವಿಯಿರಿ.

    ಬೇಕಾಗಿರುವ ಪದಾರ್ಥಗಳು:
    * ಬೇಯಿಸಿದ ಆಲೂಗಡ್ಡೆ – 1 ಕಪ್
    * ಗೋಧಿ – 1 ಕಪ್
    * ರವೆ – ಅರ್ಧ ಕಪ್
    * ಜೀರಿಗೆ – 1 ಟೀಚಮಚ


    * ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
    * ಅರಿಶಿನ ಪುಡಿ – ಅರ್ಧ ಟೀಸ್ಪೂನ್
    * ಧನಿಯಾ ಪುಡಿ – 1 ಟೀಸ್ಪೂನ್
    * ಗರಂ ಮಸಾಲಾ – 1 ಟೀಸ್ಪೂನ್
    * ಕಸೂರಿ ಮೇಥಿ – 1 ಟೀಸ್ಪೂನ್
    * ರೆಡ್ ಚಿಲ್ಲಿ ಫ್ಲೇಕ್ಸ್ – 1 ಟೀಸ್ಪೂನ್
    * ಎಳ್ಳು – 2 ಟೀಸ್ಪೂನ್

    ಮಾಡುವ ವಿಧಾನ:
    * ಆಲೂ ಮಸಾಲಾ ಪುರಿ ಪಾಕವಿಧಾನವನ್ನು ತಯಾರಿಸಲು ಪ್ರಾರಂಭಿಸುವ ಮೊದಲು ಆಲೂಗಡ್ಡೆಯನ್ನು ಚೆನ್ನಾಗಿ ಸ್ಮ್ಯಾಶ್ ಮಾಡಿಕೊಳ್ಳಿ. ನಂತರ ಅದನ್ನು ಗೋಧಿ ಹಿಟ್ಟಿನೊಂದಿಗೆ ಕಲಸಿ ಅದಕ್ಕೆ ಕೆಂಪು ಮೆಣಸಿನ ಪುಡಿ, ಧನಿಯಾ ಪುಡಿ, ಇಂಗು, ಅರಿಶಿನ ಪುಡಿ, ಕಸೂರಿ ಮೇಥಿ, ಎಳ್ಳು, ಕೊತ್ತಂಬರಿ ಸೊಪ್ಪು, ಉಪ್ಪು ಮತ್ತು ಎಣ್ಣೆಯನ್ನು ಸೇರಿಸಿ ಅವುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ.

    * ಕೊನೆಗೆ ಹಿಟ್ಟಿಗೆ ನೀರನ್ನು ಸೇರಿಸಿ ಕಲಸಿ. ಕೆಲವು ನಿಮಿಷಗಳ ಕಾಲ ಅದನ್ನು ಪಕ್ಕಕ್ಕೆ ಇರಿಸಿ.
    * ಈ ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ಮಾಡಿ, ಅವುಗಳನ್ನು ಪುರಿಯ ರೂಪದಲ್ಲಿ ಒತ್ತಿ.
    * ಅವುಗಳನ್ನು ಡೀಪ್ ಫ್ರೈ ಪ್ಯಾನ್‍ನಲ್ಲಿ ಫ್ರೈ ಮಾಡಿ ಮತ್ತು ಅದು ಬಡಿಸಲು ಸಿದ್ಧವಾಗಿದೆ.

    – ಆಲೂ ಮಸಾಲಾ ಪುರಿಯನ್ನು ಬೆಳಗಿನ ಉಪಾಹಾರ ಅಥವಾ ಊಟಕ್ಕೆ ಬಡಿಸಿ.

    Live Tv

  • ಪುರಿ ಜಗನ್ನಾಥ್ ಜೊತೆ ವಿಜಯ್ ದೇವರಕೊಂಡ ಮತ್ತೊಂದು ಸಿನಿಮಾ

    ಪುರಿ ಜಗನ್ನಾಥ್ ಜೊತೆ ವಿಜಯ್ ದೇವರಕೊಂಡ ಮತ್ತೊಂದು ಸಿನಿಮಾ

    ಟಾಲಿವುಡ್ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಹಾಗೂ ಸೂಪರ್ ಸ್ಟಾರ್ ವಿಜಯ್ ದೇವರಕೊಂಡ ಕಾಂಬೋದ ಮತ್ತೊಂದು ಮೆಗಾ ಪ್ರಾಜೆಕ್ಟ್ ಅನೌನ್ಸ್ ಆಗಿದೆ. ಲೈಗರ್ ಸಿನಿಮಾ ರಿಲೀಸ್ ಗೆ ಎದುರು ನೋಡುತ್ತಿರುವ ಅಭಿಮಾನಿಗಳಿಗೆ ವಿಜಯ್ ಹಾಗೂ ಪುರಿ ಜಗನ್ನಾಥ್ ಜೋಡಿ JGM ಎಂಬ ಆಕ್ಷನ್ ಡ್ರಾಮಾ ಸಿನಿಮಾ ಉಣಬಡಿಸಲು ತಯಾರಾಗುತ್ತಿದ್ದಾರೆ. ಅದರ ಮೊದಲ ಭಾಗವೆಂಬಂತೆ ಇವತ್ತು ಮುಂಬೈನಲ್ಲಿ ಅದ್ಧೂರಿಯಾಗಿ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಜನಗಣಮನ ಸಿನಿಮಾಗೆ ಮುನ್ನುಡಿ ಬರೆಯಲಾಯಿತು.

    JGM ಸಿನಿಮಾಗೆ ಪುರಿ ಜಗನ್ನಾಥ್ ಚಿತ್ರಕಥೆ, ಡೈಲಾಗ್ ಬರೆದು ಆಕ್ಷನ್ ಕಟ್ ಹೇಳಲಿದ್ದು, ಪುರಿ ಕನೆಕ್ಟ್ ಹಾಗೂ ಶ್ರೀಕರ ಸ್ಟುಡಿಯೋ ಪ್ರೊಡಕ್ಷನ್ ನಡಿ ಚಾರ್ಮಿ ಕೌರ್, ವಂಶಿ ಪಡಿಪೆಲ್ಲಿ ಬಂಡವಾಳ ಹೂಡ್ತಿದ್ದು, ತೆಲುಗು, ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ಮೂಡಿ ಬರಲಿದೆ. ಇದನ್ನೂ ಓದಿ: ‘Lockup’ ಶೋಗೆ ಬರುವಂತೆ ವಿಲ್ ಸ್ಮಿತ್‍ಗೆ ಆಫರ್ ಕೊಟ್ಟ ಕ್ವಿನ್ ಕಂಗನಾ

    ನಮ್ಮ ಮುಂದಿನ ಸಿನಿಮಾ JGM  ಬಗ್ಗೆ  ಮಾಹಿತಿ ಹಂಚಿಕೊಂಡಿರುವುದು ಖುಷಿಯಾಗ್ತಿದೆ. ವಿಜಯ್ ಜೊತೆ ಮತ್ತೆ ಕೈ ಜೋಡಿಸಿದ್ದೇನೆ. ಇದು ಪಕ್ಕಾ ಆಕ್ಷನ್ ಎಂಟರ್ ಟೈನರ್ ಸಿನಿಮಾವಾಗಿದೆ ಎಂದು ನಿರ್ದೇಶಕ ಪುರಿ ಜಗನ್ನಾಥ್ ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ಏಪ್ರಿಲ್ 2ಕ್ಕೆ ಕಿಚ್ಚನ ‘ವಿಕ್ರಾಂತ್ ರೋಣ’ ಟೀಸರ್ ರಿಲೀಸ್

    ವಿಜಯ್ ದೇವರಕೊಂಡ, ಪುರಿ ಪ್ರಾಜೆಕ್ಟ್ ಭಾಗವಾಗಿರೋದು ಖುಷಿಯಾಗಿದೆ. ಪ್ರತಿಯೊಬ್ಬ ಭಾರತೀಯರಿಗೂ ಈ ಕಥೆ ಮನ ಮುಟ್ಟುತ್ತದೆ. ಇದು ಸವಾಲಿನ ಕಥೆಯಾಗಿದ್ದು, ಚಾರ್ಮಿ ಹಾಗೂ ಇಡೀ ತಂಡದ ಜೊತೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ. ವಂಶಿ ಪಡಿಪೆಲ್ಲಿ, JGM ಅದ್ಭುತ ಕಥೆಯಾಗಿದ್ದು, ಇದು ಭಾರತೀಯರ ಮನತಟ್ಟುತ್ತದೆ. ವಿಜಯ್, ಪುರಿ, ಚಾರ್ಮಿ ಜೊತೆ ಪ್ರಾಜೆಕ್ಟ್ ಕೆಲಸ‌ ಮಾಡುತ್ತಿರುವುದು ಖುಷಿಕೊಟ್ಟಿದೆ ಎಂದರು. ಇದನ್ನೂ ಓದಿ: ಮೂರು ದಿನಕ್ಕೆ 500 ಕೋಟಿ ಬಾಚಿದ ಆರ್.ಆರ್.ಆರ್: ಬಾಕ್ಸ್ ಆಫೀಸ್ ಚಿಂದಿಚಿತ್ರಾನ್ನ

    ವಿದೇಶದ ನಾನಾ ಭಾಗಳಲ್ಲಿ ಶೂಟಿಂಗ್ ನಡೆಸಲು ಪ್ಲ್ಯಾನ್ ಹಾಕಿದ್ದು, ಎಪ್ರಿಲ್ ತಿಂಗಳಿನಿಂದ ಶೂಟಿಂಗ್ ಶುರುವಾಗಲಿದೆ. ಆಕ್ಷನ್ ಎಂಟರ್ ಟೈನರ್ ಕಥಾನಕ ಹೊಂದಿರುವ JGM ಸಿನಿಮಾ ಆಗಸ್ಟ್ 3 2023 ವರ್ಲ್ಡ್ ವೈಡ್ ತೆರೆಗಪ್ಪಳಿಸಲಿದೆ.

  • ಕ್ರಿಸ್‌ಮಸ್‌ ವಿಶೇಷ – ಸಮುದ್ರ ತೀರದ ಮರಳಿನಲ್ಲಿ 5,400 ಗುಲಾಬಿ ಹೂಗಳಿಂದ ಅರಳಿದ ಸಂತಾ ಕ್ಲಾಸ್‌ ಕಲಾಕೃತಿ

    ಕ್ರಿಸ್‌ಮಸ್‌ ವಿಶೇಷ – ಸಮುದ್ರ ತೀರದ ಮರಳಿನಲ್ಲಿ 5,400 ಗುಲಾಬಿ ಹೂಗಳಿಂದ ಅರಳಿದ ಸಂತಾ ಕ್ಲಾಸ್‌ ಕಲಾಕೃತಿ

    ಭುವನೇಶ್ವರ: ವಿಶ್ವದೆಲ್ಲೆಡೆ ಇಂದು ಕ್ರಿಸ್‌ಮಸ್‌ ಸಂಭ್ರಮ ಮನೆಮಾಡಿದೆ. ಈ ನಡುವೆ ಕಲಾವಿದರೊಬ್ಬರು ತಮ್ಮ ವಿಶಿಷ್ಟ ಕಲೆಯ ಮೂಲಕ ಕ್ರೈಸ್ತ ಬಾಂಧವರಿಗೆ ಕ್ರಿಸ್‌ಮಸ್‌ ಶುಭಾಶಯ ತಿಳಿಸಿದ್ದಾರೆ.

    ಹೌದು, ಅಂತಾರಾಷ್ಟ್ರೀಯ ಮರಳು ಶಿಲ್ಪ ಕಲಾವಿದ ಸುದರ್ಶನ್‌ ಪಾಟ್ನಾಯಕ್‌ ಅವರು, ಪುರಿ ಕಡಲ ತೀರದಲ್ಲಿ ಸುಮಾರು 5,400 ಗುಲಾಬಿಗಳನ್ನು ಬಳಸಿ ಸಂತಾ ಕ್ಲಾಸ್‌ ಅವರ ಕಲಾಕೃತಿ ರೂಪಿಸಿ ಗಮನ ಸೆಳೆದಿದ್ದಾರೆ. ಆ ಮೂಲಕ ಕ್ರೈಸ್ತ ಬಾಂಧವರಿಗೆ ವಿಶಿಷ್ಟ ರೀತಿಯಲ್ಲಿ ಕ್ರಿಸ್‌ಮಸ್‌ ಶುಭಕೋರಿದ್ದಾರೆ. ಇದನ್ನೂ ಓದಿ: ಕೊರೊನಾ ಟೈಮ್ ನಲ್ಲಿ ನೀವು ಮಾಡಿದ ಕೆಲಸಕ್ಕೆ ಹ್ಯಾಂಡ್ ಸಾಫ್ ಎಂದ ರಚಿತಾ

    ಕೆಂಪು ಹಾಗೂ ಬಿಳಿ ಗುಲಾಬಿ ಹೂಗಳನ್ನು ಬಳಸಿಕೊಂಡು ಸಮುದ್ರ ತೀರದ ಮರಳಿನಲ್ಲಿ ಸಂತಾ ಕ್ಲಾಸ್‌ ಕಲಾಕೃತಿ ಮೂಡಿಸಿದ್ದಾರೆ. ಜೊತೆಗೆ ʼಕ್ರಿಸ್‌ಮಸ್‌ ಶುಭಾಶಯಗಳು, ಕೋವಿಡ್‌ ನಿಯಮಗಳನ್ನು ಪಾಲಿಸಿ ಕ್ರಿಸ್‌ಮಸ್‌ ಆಚರಿಸಿʼ ಎಂಬ ಸಾಲುಗಳನ್ನು ಬರೆದು ವಿಶ್‌ ಮಾಡಿದ್ದಾರೆ.

    ಸುಮಾರು 28 ಅಡಿ ಅಗಲ ಮತ್ತು 50 ಅಡಿ ಉದ್ದದಲ್ಲಿ ಸಂತಾ ಕ್ಲಾಸ್‌ ಅವರ ಕಲಾಕೃತಿ ಮೂಡಿಬಂದಿದೆ. ಈ ಕಲಾಕೃತಿಯನ್ನು ರೂಪಿಸಲು ಸುದರ್ಶನ್‌ ಅವರು ಸುಮಾರು 8 ಗಂಟೆಗಳ ಸಮಯ ತೆಗೆದುಕೊಂಡಿದ್ದಾರೆ. ಇದಕ್ಕಾಗಿ ಮರಳು ಶಿಲ್ಪ ಕಲಾಸಂಸ್ಥೆಯ ಸಹಕಾರವನ್ನೂ ಪಡೆದಿದ್ದಾರೆ. ಇದನ್ನೂ ಓದಿ: ರಾಜಸ್ಥಾನದಲ್ಲಿ ಮಿಗ್-21 ವಿಮಾನ ಪತನ – ಪೈಲಟ್‍ ಹುತಾತ್ಮ

    ಕೊರೊನಾ ಸಾಂಕ್ರಾಮಿಕ ಇಡೀ ವಿಶ್ವವನ್ನು ವ್ಯಾಪಿಸಿ ಸಂಕಷ್ಟ ಉಂಟುಮಾಡಿರುವುದು ನಮಗೆಲ್ಲರಿಗೂ ತಿಳಿದಿದೆ. ಆದರೂ ನಾವು ಹಬ್ಬ ಆಚರಣೆಗಳನ್ನು ಮಾಡುತ್ತಿದ್ದೇವೆ. ಕೋವಿಡ್‌ ನಿಯಮಗಳನ್ನು ಪಾಲಿಸಿ ಕ್ರಿಸ್‌ಮಸ್‌ ಆಚರಿಸುವಂತೆ ಕಲಾಕೃತಿ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದೇವೆ. ಈ ಕಲಾಕೃತಿಯು ದಾಖಲೆ ಪುಸ್ತಕದಲ್ಲಿ ಹೆಸರಾಗುತ್ತದೆ ಎಂದು ಕಲಾವಿದ ಸುದರ್ಶನ್‌ ಪ್ರತಿಕ್ರಿಯಿಸಿದ್ದಾರೆ.

  • ರೂಮಿನಲ್ಲಿ ಕೂಡಿ ಹಾಕಿ 12 ಮಂದಿ ಕಾಮುಕರಿಂದ 10 ದಿನ ಗ್ಯಾಂಗ್‍ರೇಪ್

    ರೂಮಿನಲ್ಲಿ ಕೂಡಿ ಹಾಕಿ 12 ಮಂದಿ ಕಾಮುಕರಿಂದ 10 ದಿನ ಗ್ಯಾಂಗ್‍ರೇಪ್

    ಪುರಿ: ಯುವತಿಯೊಬ್ಬಳನ್ನು 12ಕ್ಕೂ ಹೆಚ್ಚು ಮಂದಿ ಕಾಮುಕರು ಸುಮಾರು 10 ದಿನಗಳ ಕಾಲ ರೂಮಿನಲ್ಲಿ ಕೂಡಿ ಹಾಕಿ ಸಾಮೂಹಿಕವಾಗಿ ಅತ್ಯಾಚಾರವೆಸಗಿದ ದಾರುಣ ಘಟನೆಯೊಂದು ನಡೆದಿದೆ.

    ಈ ಘಟನೆ ಒಡಿಶಾದ ಪುರಿ ಜಿಲ್ಲೆಯ ಕೋನಾರ್ಕ್ ಪ್ರದೇಶದಲ್ಲಿ ನಡೆದಿದೆ. ಯುವತಿ ಕೋಲ್ಕತ್ತಾ ನಿವಾಸಿ ಎನ್ನಲಾಗುತ್ತಿದ್ದು, ಕೆಲಸ ಹುಡುಕಿಕೊಂಡು ಒಡಿಶಾಗೆ ತೆರಳಿದ್ದಳು ಎಂಬುದಾಗಿ ವರದಿಯಾಗಿದೆ.

    ಒಡಿಶಾದಲ್ಲಿ ಪ್ರಸಿದ್ಧ ಸೂರ್ಯ ದೇವಾಲಯದಿಂದ 2 ಕಿಲೋಮೀಟರ್ ದೂರದಲ್ಲಿರುವ ಮಾರ್ಕೆಟ್ ಕಾಂಪ್ಲೆಕ್ಸ್ ನ ಕೊಠಡಿಯೊಂದರಲ್ಲಿ ಯುವತಿಯನ್ನು ಕೂಡಿ ಹಾಕಿ ಕೃತ್ಯ ಎಸಗಲಾಗಿದೆ.

    ಕೊಠಡಿಯ ಛಾವಣಿಯ ಮೂಲಕ ಬಂಧಿತಳಾದ ಯುವತಿ ಸಹಾಯಕ್ಕಾಗಿ ಸ್ಥಳೀಯರ ಬಳಿ ಅಂಗಲಾಚಿದ್ದಾಳೆ. ಇದರಿಂದ ಕೂಡಲೇ ಎಚ್ಚೆತ್ತ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಈ ವೇಳೆ ನಡೆದ ಘಟನೆ ಬೆಳಕಿಗೆ ಬಂದಿದೆ.

    ಸಾರ್ವಜನಿಕರಿಂದ ಮಾಹಿತಿ ಪಡೆದ ಪೊಲೀಸರು ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಜೊತೆ ಸ್ಥಳಕ್ಕೆ ದೌಡಾಯಿಸಿ ಕೊಠಡಿಯ ಬಾಗಿಲು ಒಡೆದು ಯುವತಿಯನ್ನು ರಕ್ಷಿಸಿದ್ದಾರೆ. ಈ ವೇಳೆ ಯುವತಿ ನೋವಿನಿಂದ ಬಳಲುತ್ತಿದ್ದಳು. ಹೀಗಾಗಿ ಇನ್ನು ಕಾಲಹರಣ ಮಾಡುವುದು ಸರಿಯಲ್ಲ ಅಂತ ತಿಳಿದು ತಕ್ಷಣವೇ ಯುವತಿಯನ್ನು ಜಿಲ್ಲೆಯ ಆಸ್ಪತ್ರೆಯೊಂದಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಅಲ್ಲಿಂದ ಪುರಿಯಲ್ಲಿರೋ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಯುವತಿಯನ್ನು ಕಳುಹಿಸಿದ್ದಾರೆ. ನಂತರ ಅಲ್ಲಿ ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.

    ಹುಡುಗಿಯೊಬ್ಬಳು ನನ್ನ ಬಳಿ ಬಂದು ಕೆಲಸ ಹುಡುಕಿ ಕೊಡುವುದಾಗಿ ಭರವಸೆ ನೀಡಿದ್ದಳು. ಅಲ್ಲದೇ ಸ್ವಲ್ಪ ದಿನಗಳ ಕಾಲ ನೀನು ಲಾಡ್ಜ್ ನಲ್ಲಿರಬೇಕು ಅಂತ ಹೇಳಿದಳು. ನಂತರ ಆಕೆ ನನ್ನನ್ನು ವೇಶ್ಯಾವಾಟಿಕೆಗೆ ತಳ್ಳಿದ್ದಾಳೆ. ಆಕೆ ಸುಭಾಷ್, ಕೃಷ್ಣ ಹಾಗೂ ರಾಜು ಮತ್ತಿತರ ಜೊತೆ ಸೇರಿಕೊಂಡು ವೇಶ್ಯವಾಟಿಕೆ ನಡೆಸುತ್ತಿದ್ದಳು. ಹೀಗಾಗಿ ಆಕೆ ನನ್ನನ್ನು ಯಾರಿಗೂ ತಿಳಿಯದಂತೆ ಒಡಿಶಾಕ್ಕೆ ಕರೆತಂದಿದ್ದಾಳೆ. ಅಂತ ಯುವತಿ ನಡೆದ ಘಟನೆಯನ್ನು ಪೊಲೀಸರ ಬಳಿ ವಿವರಿಸಿದ್ದಾಳೆ.

    ಸದ್ಯ ಯುವತಿಯ ಹೇಳಿಕೆಯಂತೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಧರ್ಮಸ್ಥಳವನ್ನು ನೋಡಿ ಕಲಿಯಿರಿ: ಪುರಿ ದೇವಾಲಯಕ್ಕೆ ಸುಪ್ರೀಂ ಸೂಚನೆ

    ಧರ್ಮಸ್ಥಳವನ್ನು ನೋಡಿ ಕಲಿಯಿರಿ: ಪುರಿ ದೇವಾಲಯಕ್ಕೆ ಸುಪ್ರೀಂ ಸೂಚನೆ

    ನವದೆಹಲಿ: ದೇವಸ್ಥಾನ ನಿರ್ವಹಣೆ ವಿಚಾರದಲ್ಲಿ ಕರ್ನಾಟಕದ ಧರ್ಮಸ್ಥಳದ ಆಡಳಿತ ನೋಡಿ ಕಲಿಯಿರಿ ಎಂದು ಒಡಿಶಾದ ಪುರಿ ಜಗನ್ನಾಥ ದೇವಸ್ಥಾನದ ಆಡಳಿತ ಮಂಡಳಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.

    ದೇವಸ್ಥಾನದಲ್ಲಿ ದೇವಾಳದ ಸಿಬ್ಬಂದಿಯಿಂದ ಭಕ್ತರ ಮೇಲೆ ಆಗುತ್ತಿರುವ ಶೋಷಣೆಯ ವಿರುದ್ಧವಾಗಿ ಮೃಣಾಲಿನಿ ಪಧಿ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ ಆದರ್ಶ ಗೋಯಲ್ ಮತ್ತು ನ್ಯಾ ಅಶೋಕ್ ಭೂಷಣ್ ಅವರಿದ್ದ ಪೀಠ ದೇವಸ್ಥಾನದ ಆಡಳಿತ ಮಂಡಳಿಗೆ ಹಲವು ನಿರ್ದೇಶನಗಳನ್ನು ನೀಡಿದೆ.

    ಕರ್ನಾಟಕದ ಧರ್ಮಸ್ಥಳ ದೇವಸ್ಥಾನ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ ವೈಷ್ಣವ ದೇವಿ, ಆಂಧ್ರಪ್ರದೇಶದ ತಿರುಪತಿ ದೇವಸ್ಥಾನದ ನಿರ್ವಹಣೆ ವ್ಯವಸ್ಥೆಯನ್ನು ಅಧ್ಯಯನ ನಡೆಸುವಂತೆ ಒಡಿಶಾ ಸರ್ಕಾರಕ್ಕೆ ಪೀಠ ನಿರ್ದೇಶನ ನೀಡಿದೆ.

    ದೇವಸ್ಥಾನದ ಸುತ್ತಲಿನ ಪರಿಸರ ಹಾಳಾಗಿದ್ದು ದೇವಾಲಯಕ್ಕೆ ಸೇರಿದ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ. ಅಷ್ಟೇ ಅಲ್ಲದೇ ದೇವರ ಸೇವಾ ಕಾರ್ಯಗಳು ಸಂಪೂರ್ಣ ವಾಣಿಜ್ಯೀಕರಣಗೊಂಡಿದೆ ಎಂದು ಅರ್ಜಿಯಲ್ಲಿ ದೂರುದಾರರು ಉಲ್ಲೇಖಿಸಿದ್ದರು.

    ಲಕ್ಷಾಂತರ ಭಕ್ತರು ಪ್ರತಿ ವರ್ಷ ದೇವಸ್ಥಾನಕ್ಕೆ ಭೇಟಿ ಕೊಟ್ಟು ಪ್ರಾರ್ಥನೆ ಸಲ್ಲಿಸಿ ದಾನವನ್ನು ಅರ್ಪಣೆ ಮಾಡುತ್ತಾರೆ. ಹಾಗಾಗಿ ಭಕ್ತರ ಸೇವಾದರ್ಶನಕ್ಕೆ ಮುಕ್ತ ಅವಕಾಶ ಮಾಡಿಕೊಡುವುದು ಹಾಗೂ ದೇವಸ್ಥಾನದ ವಾತಾವರಣವನ್ನು ಸರಿಯಾಗಿ ಇಟ್ಟುಕೊಳ್ಳುವುದು ಆಡಳಿತ ಮಂಡಳಿಯ ಕರ್ತವ್ಯವಾಗಿದೆ ಎಂದು ಪೀಠ ತಿಳಿಸಿದೆ.

    ದೇವಸ್ಥಾನದಲ್ಲಿ ಭಕ್ತರು ಎದುರಿಸುತ್ತಿರುವ ಸಮಸ್ಯೆಗಳು, ಶೋಷಣೆಗಳು ಹಾಗೂ ಆಡಳಿತ ಮಂಡಳಿಯಲ್ಲಿರುವ ನ್ಯೂನತೆಗಳನ್ನು ಜೂನ್ 30 ರೊಳಗೆ ಮಧ್ಯಂತರ ವರದಿ ಮಾಡುವಂತೆ ಪೂರಿ ಜಿಲ್ಲಾ ನ್ಯಾಯಾಧೀಶರಿಗೆ ಪೀಠ ಆದೇಶಿಸಿದೆ.

    1954 ರ ಶ್ರೀ ಜಗನ್ನಾಥ ದೇವಸ್ಥಾನದ ಕಾಯ್ದೆ ಪ್ರಕಾರ ಭಕ್ತರು ನೇರವಾಗಿ ಸಿಬ್ಬಂದಿಗೆ ಹಣವನ್ನು ನೀಡಿ ಸೇವೆ ಮಾಡುವಂತಿಲ್ಲ. ಹಣ ಹಾಕುವುದಿದ್ದರೆ ಹುಂಡಿಯಲ್ಲಿ ಹಾಕಬೇಕು ಅಥವಾ ಸೇವಾ ಕೌಂಟರ್ ನಲ್ಲಿ ಹಣವನ್ನು ಪಾವತಿಸಿ ಸೇವೆ ಮಾಡಬೇಕು.

    ದೇವಸ್ಥಾನದಲ್ಲಿ ನಡೆಯುತ್ತಿರುವ ಆಚರಣೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಮಾರ್ಪಾಡು ಅವಶ್ಯಕತೆ ಇದ್ದಲ್ಲಿ ಸೂಚಿಸುವಂತೆ ಕೇಂದ್ರಕ್ಕೆ ಪೀಠ ತಿಳಿಸಿದೆ. ಹಿರಿಯ ನ್ಯಾಯವಾದಿ ಗೋಪಾಲ ಸುಬ್ರಮಣಿಯಮ್ ಅವರನ್ನು ಅಮಿಕಸ್ ಕ್ಯೂರಿಯಾಗಿ ಪೀಠ ನೇಮಿಸಿದೆ. ಎಲ್ಲಾ ವರದಿಗಳನ್ನು ನೋಡಿ ಅಭಿಪ್ರಾಯವನ್ನು ತಿಳಿಸುವಂತೆ ಸೂಚಿಸಿದೆ.