Tag: ಪುರಸಭೆ ಕಚೇರಿ

  • ಪುರಸಭೆಗೆ ಆಗಮಿಸಿ ಅಧಿಕಾರಿಗೆ ಚಾಕು ತೋರಿಸಿ ಬೆದರಿಕೆ ಹಾಕ್ದ!

    ಪುರಸಭೆಗೆ ಆಗಮಿಸಿ ಅಧಿಕಾರಿಗೆ ಚಾಕು ತೋರಿಸಿ ಬೆದರಿಕೆ ಹಾಕ್ದ!

    ಚಿಕ್ಕಬಳ್ಳಾಪುರ: ಮದ್ಯ ಕುಡಿದ ಅಮಲಿನಲ್ಲಿ ಜಿಲ್ಲೆಯ ಬಾಗೇಪಲ್ಲಿ ಪುರಸಭೆ ಕಚೇರಿಗೆ ಆಗಮಿಸಿ, ಪುರಸಭೆ ಮುಖ್ಯಾಧಿಕಾರಿ ಮಧುಕರ್ ಅವರಿಗೆ ಖಾತೆ ಮಾಡಿಕೊಡುವಂತೆ ಚಾಕು ತೋರಿಸಿ ಪ್ರಾಣಬೆದರಿಕೆ ಹಾಕಿದ ಆರೋಪದಡಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.

    ಖಾತೆ ವಿಳಂಬ ವಿಚಾರಕ್ಕೆ ಸಂಬಂಧಿಸಿದಂತೆ ಪುರಸಭೆ ಮುಖ್ಯಾಧಿಕಾರಿ ಜೊತೆ ಗೋವಿಂದ್ ವಾಗ್ವಾದ ನಡೆಸಿದ್ದನು. ಈ ವೇಳೆ ಆತ ಚಾಕು ತೋರಿಸಿ ಪ್ರಾಣ ಬೆದರಿಕೆ ಹಾಕುತ್ತಿದ್ದಾನೆ ಅಂತ ಪುರಸಭೆ ಮುಖ್ಯಾಧಿಕಾರಿ ಪೊಲೀಸರಿಗೆ ಕರೆ ಮಾಡಿ ಮೌಖಿಕ ದೂರು ನೀಡಿದ್ದಾರೆ. ಇದನ್ನೂ ಓದಿ: ಕಪಿಲೇಶ್ವರ ಮಂದಿರ ಕೆಡವಿ ಏನು ಕಟ್ಟಿದ್ದಾರೆ ಎಂಬ ಬಗ್ಗೆಯೂ ಸರ್ವೇ ಆಗಲಿ: ಲತೀಫ್‍ಖಾನ್ ಹೊಸ ಬಾಂಬ್ 

    ಈ ವೇಳೆ ಘಟನಾ ಸ್ಥಳಕ್ಕೆ ಬಂದ ಎಎಸ್‍ಐ ಅಮರೇಶ್ ಬಾಬು, ಎಷ್ಟೇ ಹೇಳಿದರೂ ಕಚೇರಿಯಿಂದ ಹೊರ ಹೋಗದೇ ಏರು ಧ್ವನಿಯಲ್ಲಿ ಮಾತನಾಡುತ್ತಿದ್ದ ಗೋವಿಂದ್‍ಗೆ ಹಿಗ್ಗಾ ಮುಗ್ಗ ಥಳಿಸಿ ಕಪಾಳ ಮೋಕ್ಷ ಮಾಡಿ ಎಎಸ್‍ಐ ಕಚೇರಿಯಿಂದ ಹೊರದಬ್ಬಿದ್ದಾರೆ. ಇದನ್ನೂ ಓದಿ: ವಿದ್ಯಾಭ್ಯಾಸ ಕೊಡಿಸಲು ಆತ್ಮಹತ್ಯೆಗೆ ಶರಣಾಗಿದ್ದ ರೈತನ ಮಗಳು ಯುಪಿಎಸ್‍ಸಿಯಲ್ಲಿ ಟಾಪರ್

    ಈ ಸಂಬಂಧ ಪುರಸಭೆ ಮುಖ್ಯಾಧಿಕಾರಿ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು. ದೂರಿನ ಮೇರೆಗೆ ಗೋವಿಂದನನ್ನು ಪೊಲೀಸರು ಬಂಧಿಸಿದ್ದಾರೆ.

  • ನಾಮಪತ್ರ ಸಲ್ಲಿಸುವ ವೇಳೆ ಕಪಿರಾಯನ ಎಂಟ್ರಿ- ಚಹಾ ನೀಡಿ ಸತ್ಕರಿಸಿದ ಸಿಬ್ಬಂದಿ

    ನಾಮಪತ್ರ ಸಲ್ಲಿಸುವ ವೇಳೆ ಕಪಿರಾಯನ ಎಂಟ್ರಿ- ಚಹಾ ನೀಡಿ ಸತ್ಕರಿಸಿದ ಸಿಬ್ಬಂದಿ

    ಗದಗ: ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣಾ ನಾಮಪತ್ರ ಸಲ್ಲಿಸುವ ವೇಳೆ ಪುರಸಭೆ ಕಚೇರಿಗೆ ಕೋತಿ ಎಂಟ್ರಿ ಕೊಟ್ಟಿದೆ.

    ಪಟ್ಟಣದಲ್ಲಿ ಪುರಸಭೆ ಚುನಾವಣೆ ಹಿನ್ನೆಲೆ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಈ ವೇಳೆ ಮಂಗವೊಂದು ಪುರಸಭೆ ಕಚೇರಿಗೆ ನುಗ್ಗಿ ಟೇಬಲ್ ಮೇಲೆ ಕುಳಿತು ಚೇಷ್ಟೆ ಮಾಡಿದೆ. ಅಲ್ಲದೆ ಅಧಿಕಾರಿಗಳ ಕೈ ಎಳೆದು, ಮೊಬೈಲ್ ಹಿಡಿದು ಟೇಬಲ್ ಮೇಲೆ ಕುಳಿತು, ಕಚೇರಿಯಲ್ಲಿ ಸುಮಾರು ಅರ್ಧ ಗಂಟೆ ಕಾಲ ತನ್ನ ದರ್ಬಾರ್ ನಡೆಸಿದೆ.

    ಹೊರಗಡೆ ಪೊಲೀಸರ ಕಂಗಾವಲಿನಲ್ಲೇ ಚುನಾವಣೆ ಕಚೇರಿಗೆ ಕೋತಿ ನುಗ್ಗಿ ತನ್ನ ತುಂಟಾಟ ನಡೆಸಿದೆ. ನಂತರ ತುಂಟ ಕಪಿರಾಯನಿಗೆ ಚುನಾವಣಾ ಸಿಬ್ಬಂದಿ ಚಹಾ ಕುಡಿಸಿ ಕಳುಹಿಸಿದ್ದಾರೆ. ಈ ದೃಶ್ಯವನ್ನು ಸಿಬ್ಬಂದಿ ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.