Tag: ಪುರಸಭೆ ಅಧಿಕಾರಿಗಳು

  • ಬಿಡದಿ ಪಟ್ಟಣದಲ್ಲಿ ಜೆಸಿಬಿಗಳ ಘರ್ಜನೆ – ಅಧಿಕಾರಿಗಳಿಂದ ಫುಟ್‌ಪಾತ್ ಒತ್ತುವರಿ ತೆರವು

    ಬಿಡದಿ ಪಟ್ಟಣದಲ್ಲಿ ಜೆಸಿಬಿಗಳ ಘರ್ಜನೆ – ಅಧಿಕಾರಿಗಳಿಂದ ಫುಟ್‌ಪಾತ್ ಒತ್ತುವರಿ ತೆರವು

    ರಾಮನಗರ: ಬಿಡದಿ (Bidadi) ಪಟ್ಟಣದಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿಗಳು ಘರ್ಜನೆ ಮಾಡಿದ್ದು, ಪುರಸಭೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಫುಟ್‌ಪಾತ್ ಒತ್ತುವರಿ ತೆರವು ಮಾಡಿದ್ದಾರೆ.

    ಬಿಡದಿಯ ಬಿಜಿಎಸ್ ಸರ್ಕಲ್‌ನಿಂದ ಸಿಲ್ಕ್ ಫಾರಂವರೆಗೆ ಫುಟ್‌ಪಾತ್ (Footpath) ಮೇಲೆ ಅಂಗಡಿ ಮಳಿಗೆಗಳ ನಿರ್ಮಾಣ ಮಾಡಿಕೊಂಡು ವ್ಯಾಪಾರ-ವಹಿವಾಟು ನಡೆಸಲಾಗುತ್ತಿತ್ತು. ಇದರಿಂದ ಪಾದಚಾರಿಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆ ಫುಟ್‌ಪಾತ್ ತೆರವು ಮಾಡುವಂತೆ ಅಂಗಡಿ ಮಾಲೀಕರಿಗೆ ಪುರಸಭೆ ನೋಟಿಸ್ ನೀಡಿತ್ತು. ಇದನ್ನೂ ಓದಿ: ದೇಶ ತೊರೆಯಿರಿ ಅಥವಾ ಜೈಲು ಶಿಕ್ಷೆ ಅನುಭವಿಸಿ: ವಿದೇಶಿ ಭಯೋತ್ಪಾದಕರಿಗೆ ಅಮೆರಿಕ ಎಚ್ಚರಿಕೆ

    ನೋಟಿಸ್‌ಗೂ ಬಗ್ಗದ ಅಂಗಡಿ ಮಾಲೀಕರಿಗೆ ಇಂದು ಪುರಸಭೆ ಶಾಕ್ ನೀಡಿದ್ದು, ಬೆಳ್ಳಂಬೆಳಗ್ಗೆ ಜೆಸಿಬಿ ಮೂಲಕ ಪುರಸಭೆ ಅಧಿಕಾರಿಗಳೇ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಫುಟ್‌ಪಾತ್ ಒತ್ತುವರಿ ತೆರವು ಮಾಡಿ, ಸಾರ್ವಜನಿಕರ ಓಡಾಟಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ. ಪೊಲೀಸ್ ಬಂದೋಬಸ್ತ್‌ನಲ್ಲಿ ತೆರವು ಕಾರ್ಯಾಚರಣೆ ನಡೆಸಿ, ಅಂಗಡಿ ಮಾಲೀಕರಿಗೆ ಮತ್ತೆ ಒತ್ತುವರಿ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಗ್ಯಾಸ್ ಕಟರ್ ಬಳಸಿ ಎಟಿಎಂನಿಂದ 18 ಲಕ್ಷ ರೂ. ದೋಚಿದ ಖದೀಮರು

  • ಮಾನವೀಯತೆ ಮರೆತ ಅಥಣಿ ಪುರಸಭೆ ಅಧಿಕಾರಿಗಳು

    ಮಾನವೀಯತೆ ಮರೆತ ಅಥಣಿ ಪುರಸಭೆ ಅಧಿಕಾರಿಗಳು

    ಬೆಳಗಾವಿ: ನಗರದ ಅಥಣಿ ಪಟ್ಟಣದಲ್ಲಿ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜೀವದ ಹಂಗು ತೊರೆದು ಚರಂಡಿಗಳಿಗೆ ಇಳಿದು ಪೌರ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ.

    ಯಾವುದೇ ಸೇಫ್ಟಿ ಕಿಟ್ ಇಲ್ಲದೆ ಪೌರ ಕಾರ್ಮಿಕರು ಚರಂಡಿಗಳಲ್ಲಿ ಇಳಿದು ಕಾರ್ಯನಿರ್ವಹಿಸುತ್ತಿದ್ದಾರೆ. ಈಗಾಗಲೇ ರಾಜ್ಯಾದ್ಯಂತ ಹಲವು ಚರಂಡಿಗಳಲ್ಲಿ ಸಿಬ್ಬಂದಿ ಸಾವನ್ನಪ್ಪಿದ್ದರೂ ಅಥಣಿ ಪಟ್ಟಣದಲ್ಲಿ ಪುರಸಭೆ ಅಧಿಕಾರಿಗಳ ಎಚ್ಚೆತ್ತುಕೊಂಡಿಲ್ಲ. ಅಧಿಕಾರಿಗಳ ಅಚಾತುರ್ಯದಿಂದ ಜೀವದ ಹಂಗು ತೊರೆದು ಪೌರ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ: ಹರ್ಷನ ಹತ್ಯೆ- ಡೀಟೈಲ್ಸ್ ಎಲ್ಲ ಹೇಳೋಕೆ ಆಗಲ್ಲ: ಆರಗ ಜ್ಞಾನೇಂದ್ರ

    ನೌಕರಿ ಖಾಯಂ ಆಸೆಗೆ ಬಿದ್ದು ಜೀವದ ಹಂಗು ತೊರೆದು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಹ್ಯಾಂಡ್ ಗ್ಲೌಜ್, ಗಮ್ ಶೂಜ್, ಮಾಸ್ಕ್ ಏನೂ ಇಲ್ಲದೆ ಚರಂಡಿಯ ಆಳಕ್ಕೆ ಇಳಿದು ಪುರಸಭೆ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ಜನಾಕ್ರೋಶಕ್ಕೆ ಕಾರಣವಾಗಿದೆ. ಮಾನವೀಯತೆ ಮರೆತ ಪುರಸಭೆ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

  • ಮುಂಬೈನಲ್ಲಿ ಮಾಸ್ಕ್ ಕಡ್ಡಾಯ – ಧರಿಸದೇ ಹೊರಬಂದರೆ ಅರೆಸ್ಟ್

    ಮುಂಬೈನಲ್ಲಿ ಮಾಸ್ಕ್ ಕಡ್ಡಾಯ – ಧರಿಸದೇ ಹೊರಬಂದರೆ ಅರೆಸ್ಟ್

    – ಮನೆಯಲ್ಲಿ ತಯಾರಿಸಿದ ಮಾಸ್ಕ್ ಧರಿಸಬಹುದು
    – ಹೆಚ್ಚಾಗುತ್ತಿರುವ ಕೊರೊನಾ ತಡೆಗಟ್ಟಲು ಕ್ರಮ

    ಮುಂಬೈ: ಭಾರತದಲ್ಲಿ ಕೊರೊನಾ ವೈರಸ್ ನ ಹಾಟ್‍ಸ್ಪಾಟ್ ಆಗಿರುವ ಮುಂಬೈನಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ. ಒಂದೇ ವೇಳೆ ಮಾಸ್ಕ್ ಧರಿಸದೇ ಹೊರಬಂದರೆ ಅಂತವರನ್ನು ಅರೆಸ್ಟ್ ಮಾಡಲಾಗುವುದು ಎಂದು ಮಹಾನಗರ ಪಾಲಿಕೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

    ಜನರು ಧರಿಸುವ ಮಾಸ್ಕ್ ಗಳು ಕೆಮಿಕಲ್ ಇರುವ ಉತ್ತಮ ಗುಣಮಟ್ಟದ್ದು ಆಗಿರಬಹುದು ಅಥವಾ ಮನೆಯಲ್ಲಿ ತಯಾರಿಸಿದ ತೊಳೆಯಬಹುದಾದ ಮಾಸ್ಕ್ ಗಳನ್ನಾದರು ಧರಿಸಬಹುದು. ಆದರೆ ಎಲ್ಲಾ ಸಾರ್ವಜನಿಕ ಸ್ಥಳಗಳು, ಕಚೇರಿಗಳು, ಸಭೆಗಳು ಮತ್ತು ವಾಹನಗಳ ಒಳಗೂ ಮಾಸ್ಕ್ ಗಳನ್ನು ಧರಿಸುವುದು ಕಡ್ಡಾಯವಾಗಿರುತ್ತದೆ ಎಂದು ಮುಂಬೈ ನಗರ ಪಾಲಿಕೆ ಆಯುಕ್ತ ಪ್ರವೀಣ್ ಪರದೇಶಿ ಆದೇಶಿಸಿದ್ದಾರೆ.

    ಈ ವಿಚಾರವಾಗಿ ಇಂದು ಮಾತನಾಡಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು, ಜನರು ದಿನಬಳಕೆ ವಸ್ತುಗಳನ್ನು ಕೊಂಡುಕೊಳ್ಳಲು ತಮ್ಮ ಮನೆಗಳಿಂದ ಹೊರಗೆ ಹೋಗುವಾಗ ಮಾಸ್ಕ್ ಬಳಸಬೇಕೆಂದು ಒತ್ತಾಯಿಸಿದ್ದರು.

    ಈಗಾಗಲೇ ಚಂಡೀಗಢ, ನಾಗಾಲ್ಯಾಂಡ್ ಮತ್ತು ಒಡಿಶಾದಲ್ಲಿ ಅಲ್ಲಿನ ಅಧಿಕಾರಿಗಳು ಮಾಸ್ಕ್ ಧರಿಸುವುದನ್ನು ಕಡ್ಡಾಯ ಎಂದು ಆದೇಶ ಮಾಡಿದ್ದಾರೆ.

    2 ಕೋಟಿಗಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಮುಂಬೈ ಮತ್ತು ಅದರ ಉಪನಗರಗಳಲ್ಲಿ ಇಲ್ಲಿಯವರೆಗೆ 782 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಇದರ ಜೊತೆಗೆ 50 ಜನರು ಕೊರೊನಾದಿಂದ ಸಾವನ್ನಪ್ಪಿದ್ದಾರೆ ಎಂದು ಇಂದಿನ ಆರೋಗ್ಯ ಬುಲೆಟಿನ್ ನಲ್ಲಿ ವರದಿಯಾಗಿದೆ. ಈ ಅಂಕಿಅಂಶಗಳ ಮೂಲಕ ಮಹಾರಾಷ್ಟ್ರ ದೇಶದಲ್ಲೇ ಅತಿ ಹೆಚ್ಚು ಕೊರೊನಾ ಪ್ರಕರಣ ಹೊಂದಿರುವ ರಾಜ್ಯ ಎಂದು ಗುರುತಿಸಿಕೊಂಡಿದೆ.

    ಮಹಾರಾಷ್ಟ್ರದಲ್ಲಿ ಇನ್ನೊಂದು ಅಘಾತಕಾರಿ ಸಂಗತಿ ಎಂದರೆ, ಇಂದು ಕೂಡ ಹೆಚ್ಚು ಜನರು ವಾಸಿಸುವ ಧಾರವಿ ಸ್ಲಂನಲ್ಲಿ ಎರಡು ಹೊಸ ಕೊರೊನಾ ಪ್ರಕರಣಗಳು ಕಂಡು ಬಂದಿವೆ. ಈ ಮೂಲಕ ಏಷ್ಯಾದ ಅತೀ ದೊಡ್ಡ ಸ್ಲಂ ಆಗಿರುವ ಧಾರವಿಯಲ್ಲಿ ಸುಮಾರು 9 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.

  • ಕೆಆರ್ ಪೇಟೆಯಲ್ಲಿ ಒಂದೇ ದಿನ ನಾಲ್ವರು ಮಕ್ಕಳಿಗೆ ಕಚ್ಚಿತು ನಾಯಿ- ತಾಯಿ ಜೊತೆ ಇದ್ದ ಮಕ್ಕಳನ್ನು ಬಿಡಲಿಲ್ಲ

    ಕೆಆರ್ ಪೇಟೆಯಲ್ಲಿ ಒಂದೇ ದಿನ ನಾಲ್ವರು ಮಕ್ಕಳಿಗೆ ಕಚ್ಚಿತು ನಾಯಿ- ತಾಯಿ ಜೊತೆ ಇದ್ದ ಮಕ್ಕಳನ್ನು ಬಿಡಲಿಲ್ಲ

    ಮಂಡ್ಯ: ಜಿಲ್ಲೆಯ ಕೆಆರ್ ಪೇಟೆ ಪಟ್ಟಣದಲ್ಲಿ ಹುಚ್ಚು ನಾಯಿ ಹಾವಳಿಯನ್ನು ನಿಯಂತ್ರಿಸದ್ದಕ್ಕೆ ಪುರಸಭೆ ಸದಸ್ಯರು ಹಾಗೂ ಅಧಿಕಾರಿಗಳ ವಿರುದ್ಧ ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಳೆದ ಒಂದು ವಾರದಿಂದ ಐವರು ಮಕ್ಕಳು ಸೇರಿ ಒಟ್ಟು ಏಳು ಜನರಿಗೆ ನಾಯಿ ಕಚ್ಚಿವೆ. ಇಂದು ಒಂದೇ ದಿನದಲ್ಲಿ ಕೆಆರ್ ಪೇಟೆಯ ಸುಭಾಷ್‍ನಗರದಲ್ಲಿ ನಾಲ್ವರು ಮಕ್ಕಳು ಸೇರಿ ಓರ್ವ ಮಹಿಳೆ ಮೆಲೆ ನಾಯಿಯೊಂದು ಏಕಾಏಕಿ ದಾಳಿ ಮಾಡಿದೆ.

    ತಾಯಿ ಜೊತೆ ಇದ್ದ ಮಕ್ಕಳನ್ನೂ ಬಿಡದೇ ನಾಯಿ ಕಚ್ಚಿದೆ. ನಾಯಿ ಕಚ್ಚಿದ ಪರಿಣಾಮ ಓರ್ವ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಇನ್ನುಳಿದವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ದಾಳಿ ಮಾಡಿರುವ ನಾಯಿಗೆ ಬಹುಶಃ ಹುಚ್ಚು ಹಿಡಿದಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.

    ಜಿಲ್ಲೆಯಲ್ಲಿ ನಾಯಿ ಕಾಟ ಹೆಚ್ಚಾಗಿದ್ದು, ನಾಯಿ ದಾಳಿಗೆ ಭಯಭೀತರಾದ ಪೋಷಕರು ತಮ್ಮ ಮಕ್ಕಳನ್ನು ಹೊರಗೆ ಕಳುಹಿಸಲು ಹೆದರುತ್ತಿದ್ದಾರೆ. ನಗರದಲ್ಲಿ ನಾಯಿಗಳ ದಾಳಿ ನಿರಂತರವಾಗಿ ನಡೆಸುತ್ತಿದ್ದರೂ ಕ್ರಮ ಕೈಗೊಳ್ಳದೇ ಪುರಸಭೆ ಸದಸ್ಯರು, ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿದ್ದಾರೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv