Tag: ಪುರಸಭಾ ಸದಸ್ಯ

  • ಕ್ಷುಲಕ ವಿಚಾರಕ್ಕೆ ಯುವಕನಿಗೆ ಥಳಿಸಿದ ಬಿಜೆಪಿ ಪುರಸಭಾ ಸದಸ್ಯ, ಪತ್ನಿ

    ಕ್ಷುಲಕ ವಿಚಾರಕ್ಕೆ ಯುವಕನಿಗೆ ಥಳಿಸಿದ ಬಿಜೆಪಿ ಪುರಸಭಾ ಸದಸ್ಯ, ಪತ್ನಿ

    ತುಮಕೂರು: ಕ್ಷುಲ್ಲಕ ವಿಚಾರಕ್ಕೆ ಬಿಜೆಪಿ(BJP) ಪುರಸಭಾ ಸದಸ್ಯ ಹಾಗೂ ಆತನ ಪತ್ನಿ ಯುವಕನೊಬ್ಬನಿಗೆ ಥಳಿಸಿರುವ ಘಟನೆ ತುಮಕೂರು(Tumakuru) ಜಿಲ್ಲೆಯ ಗುಬ್ಬಿ ಪಟ್ಟಣದ ಸುಭಾಷ್ ನಗರದಲ್ಲಿ ನಡೆದಿದೆ.

    ನಗರದಲ್ಲಿ ಯುವಕರು ಗಣಪತಿ ವಿಸರ್ಜನೆ ಮಾಡಿ, ವಾಪಸ್ಸಾಗುತ್ತಿದ್ದ ವೇಳೆ ಕಾರ್ಪೋರೇಟರ್ ಕೃಷ್ಣಮೂರ್ತಿ ಹಾಗೂ ಆತನ ಪತ್ನಿ ಯುವಕನೊಬ್ಬನಿಗೆ ಥಳಿಸಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಇದನ್ನೂ ಓದಿ: ಬೆಂಗಳೂರಿನ ಎಕೋಸ್ಪೇಸ್‍ನಲ್ಲಿ ಮುಳುಗಿದ 40 ಐಷಾರಾಮಿ ಕಾರುಗಳು!

    ಕಾರ್ಪೋರೇಟರ್ ಹಾಗೂ ಆತನ ಪತ್ನಿ ಯುವಕನಿಗೆ ಥಳಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ಗಣೇಶ ವಿಸರ್ಜನೆಯಲ್ಲಿ ಗಲಾಟೆ- ಯುವಕನ ಕೊಲೆಯಲ್ಲಿ ಅಂತ್ಯ

    Live Tv
    [brid partner=56869869 player=32851 video=960834 autoplay=true]

  • 1 ಎಕರೆ ಜಮೀನು ನೀಡಲು ಸಿದ್ಧ, ರಾಮಮಂದಿರ ಕಟ್ಟಿ ತೋರಿಸಿ – ಸಿದ್ದುಗೆ ಪುರಸಭಾ ಸದಸ್ಯ ಚಾಲೆಂಜ್

    1 ಎಕರೆ ಜಮೀನು ನೀಡಲು ಸಿದ್ಧ, ರಾಮಮಂದಿರ ಕಟ್ಟಿ ತೋರಿಸಿ – ಸಿದ್ದುಗೆ ಪುರಸಭಾ ಸದಸ್ಯ ಚಾಲೆಂಜ್

    ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದ ಬಿಜೆಪಿ ಪುರಸಭಾ ಸದಸ್ಯ ಚಾಲೆಂಜ್ ಹಾಕಿದ್ದಾರೆ.

    ಬಾದಾಮಿ ಪಟ್ಟಣದ ಬಸವರಾಜ್ ಗೊರಕೊಪ್ಪನವರ್ ಅವರೇ ಮಾಜಿ ಸಿಎಂಗೆ ಸವಾಲೆಸೆದ ಬಿಜೆಪಿ ಪುರಸಭಾ ಸದಸ್ಯ. ನಿಮ್ಮ ಕ್ಷೇತ್ರದ ಬನಶಂಕರಿ ರಸ್ತೆ ಬದಿಯೇ ನನ್ನದು ಹೊಲವಿದೆ. ಆ ಹೊಲದಲ್ಲಿ ಒಂದು ಎಕರೆ ಜಮೀನನ್ನು ನಾನು ದೇಣಿಗೆ ಕೊಡಲು ಸಿದ್ಧನಿದ್ದೇನೆ. ನೀವು ಅಲ್ಲಿ ರಾಮ ಮಂದಿರ ಕಟ್ಟಿ ತೋರಿಸಿ ಎಂದು ಸವಾಲ್ ಹಾಕಿದ್ದಾರೆ. ಇದನ್ನೂ ಓದಿ: ನನ್ನ ಹುಟ್ಟೂರಿನಲ್ಲಿ ರಾಮ ಮಂದಿರ ಕಟ್ಟಿಸುತ್ತಿದ್ದೇನೆ: ಸಿದ್ದರಾಮಯ್ಯ

    ಟ್ವೀಟ್ ಮೂಲಕ ಸವಾಲ್ ಹಾಕಿರುವ ಬಸವರಾಜ್, 1 ಎಕರೆ ಜಮೀನು ಜಾಗ ಉಚಿತ ದೇಣಿಗೆ ಕೊಡಲು ನಾನು ಸಿದ್ಧ. ಸಿದ್ದರಾಮಯ್ಯನವರೇ ಇಲ್ಲಿ ರಾಮ ಮಂದಿರ ಕಟ್ಟಿಸಿ ತೋರಿಸಿ. ಈ ಮೂಲಕ ಬಾದಾಮಿ ಬಳಿಯ ಬನಶಂಕರಿ ರಸ್ತೆಯ ಪಕ್ಕದಲ್ಲಿ ತಮ್ಮ 9 ಎಕರೆ ಜಮೀನು ಇದ್ದು, ಅದ್ರಲ್ಲಿ 1 ಎಕರೆ ಜಮೀನನ್ನ ಮಿನಿ ರಾಮ ಮಂದಿರಕ್ಕಾಗಿ ದೇಣಿಗೆ ಕೊಡಲು ವಾಗ್ದಾನ ನೀಡಿದ್ದಾರೆ. ಅಲ್ಲದೇ ರಾಮ ಮಂದಿರ ಕಟ್ಟಲು ತಾಯಿ ಬನಶಂಕರಿ ದೇವಿ ಮೇಲೆ ಆಣೆ ಮಾಡಿರುವ ಬಸವರಾಜ್ 1 ಎಕರೆ ಜಮೀನು ಕೊಡ್ತೀನಿ ಎಂದು ವಾಗ್ದಾನ ನೀಡಿದ್ದಾರೆ.

    ಸುಪ್ರೀಂ ಕೋರ್ಟ್ ತೀರ್ಪು ಬಳಿಕವೂ ರಾಮ ಜನ್ಮ ಭೂಮಿ ವಿವಾದಿತ ಎಂದು ಸಿದ್ದರಾಮಯ್ಯ ಹೇಳಿದ್ದಕ್ಕೆ ನನಗೆ ನೋವಾಗಿದೆ. ಹೀಗಾಗಿ ಉಚಿತವಾಗಿ ನಾನು ಕೊಟ್ಟ ಜಮೀನಿನಲ್ಲಿ ಸಿದ್ದರಾಮಯ್ಯ ಸ್ವಂತ ಹಣದಲ್ಲಿ ಶ್ರೀರಾಮ ಮಂದಿರ ಕಟ್ಟಿಸಲಿ. ಆ 1 ಎಕರೆ ಜಮೀನು ಹಕ್ಕು ಬಿಟ್ಟು ಕೊಡ್ತೀನಿ ಎಂದು ಬಸವರಾಜ್ ಮನ ಮಾಡಿಕೊಂಡು ಟ್ವೀಟ್ ಮಾಡಿ ಸುದ್ದಿಯಾಗಿದ್ದಾರೆ.