Tag: ಪುನುಗು ಬೆಕ್ಕು

  • ಮನೆಗೆ ಬಂದ ಸುಗಂಧ ಸೂಸುವ ಪುನುಗು ಬೆಕ್ಕು

    ಮನೆಗೆ ಬಂದ ಸುಗಂಧ ಸೂಸುವ ಪುನುಗು ಬೆಕ್ಕು

    ಚಾಮರಾಜನಗರ: ಸುಗಂಧ ಸೂಸುವ ಅಪರೂಪದ ಪ್ರಾಣಿಯಾದ ಪುನುಗು ಬೆಕ್ಕು ದಿಢೀರನೇ ಮನೆಗೆ ಎಂಟ್ರಿ ಕೊಟ್ಟಿದ್ದ ಘಟನೆ ಚಾಮರಾಜನಗರದ ರಾಮಸಮುದ್ರದಲ್ಲಿ ನಡೆದಿದೆ.

    ರಾಮಸಮುದ್ರ ಗ್ರಾಮದ ಶಿವಮ್ಮ ಎಂಬುವರ ಮನೆಗೆ ದಿಢೀರ್ ಆಗಿ ಪುನುಗು ಬೆಕ್ಕು ಎಂಟ್ರಿಕೊಟ್ಟಿತ್ತು. ಪುನುಗು ಬೆಕ್ಕು ಸುಗಂಧ ಹೊರ ಸೂಸುವ ಪ್ರಾಣಿಯಾಗಿದ್ದು, ಬೆಕ್ಕಿನಂತೆಯೇ ದೇಹ ರಚನೆ, ಉದ್ದನೆಯ ಬಾಲ ಮತ್ತು ಮುಖ ಲಕ್ಷಣಗಳನ್ನು ಹೊಂದಿದೆ. ಇದು ದಟ್ಟ ಕಾಡುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದನ್ನೂ ಓದಿ: ಡೋಲೋ 650 ಮಾತ್ರೆ ತಯಾರಿಕಾ ಸಂಸ್ಥೆ ಮೈಕ್ರೋ ಲ್ಯಾಬ್ಸ್ ಮೇಲೆ ಐಟಿ ದಾಳಿ


    ಪುನುಗು ಬೆಕ್ಕನ್ನು ಕಂಡ ಮನೆಯವರು ಉರಗಪ್ರೇಮಿ ಸ್ನೇಕ್ ಚಾಂಪ್‍ಗೆ ತಿಳಿಸಿದ್ದಾರೆ. ಸ್ನೇಕ್ ಚಾಂಪ್ ಬೆಕ್ಕನ್ನು ರಕ್ಷಿಸಿ ಬಿಆರ್‌ಟಿ ಅರಣ್ಯಕ್ಕೆ ಬಿಟ್ಟು ಬಂದಿದ್ದಾರೆ. ಪುನುಗು ಬೆಕ್ಕು ಜನನಾಂಗದ ಗ್ರಂಥಿಯಿಂದ ಸುಗಂಧ ದ್ರವ್ಯ ಬಿಡುಗಡೆ ಮಾಡುತ್ತದೆ. ಹಳದಿ ಬಣ್ಣದಿಂದ ಕೂಡಿರುವ ಸುವಾಸನೆ ಯುಕ್ತ ಇದರ ಮೂತ್ರ ಜೇನು ತುಪ್ಪದಂತಿರುತ್ತದೆ. ಇದನ್ನು ಸುವಾಸನೆ ದ್ರವ್ಯಗಳಲ್ಲಿ ಪರಿಮಳ ಹೆಚ್ಚಿಸುವ ವಸ್ತುವಾಗಿ ಬಳಕೆ ಮಾಡಲಾಗುತ್ತದೆ. ಅಳಿವಿನಂಚಿನಲ್ಲಿರುವ ಪ್ರಾಣಿ ಇದಾಗಿದೆ ಎಂದು ಬೆಕ್ಕಿನ ಕುರಿತಾಗಿ ಸ್ನೇಕ್ ಚಾಂಪ್ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಜೀಸಸ್‌ ಸುಪ್ರೀಂ ಎಂದಿದ್ದ ವ್ಯಕ್ತಿಗೆ ಪಾಕ್‌ನಲ್ಲಿ ಗಲ್ಲು ಶಿಕ್ಷೆ

    Live Tv
    [brid partner=56869869 player=32851 video=960834 autoplay=true]

  • ಮಾಂಸಕ್ಕಾಗಿ ಅಪರೂಪದ ಪುನುಗು ಬೆಕ್ಕಿಗೆ ಗುಂಡು- ಇಬ್ಬರು ಆರೋಪಿಗಳ ಬಂಧನ!

    ಮಾಂಸಕ್ಕಾಗಿ ಅಪರೂಪದ ಪುನುಗು ಬೆಕ್ಕಿಗೆ ಗುಂಡು- ಇಬ್ಬರು ಆರೋಪಿಗಳ ಬಂಧನ!

    ಮಡಿಕೇರಿ: ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಸಮೀಪದ ಮಾಲಂಬಿ ರಕ್ಷಿತ ಅರಣ್ಯದಲ್ಲಿ ಅಪರೂಪದ 6 ತಿಂಗಳ ಮಲಬಾರ್ ಪುನುಗುಬೆಕ್ಕನ್ನು ಮಾಂಸಕ್ಕಾಗಿ ಗುಂಡಿಟ್ಟ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ವಲಯ ಅರಣ್ಯಾಧಿಕಾರಿ ಕೆ.ಕೊಟ್ರೇಶ್ ಹಾಗೂ ಸಿಬ್ಬಂದಿ ಬಂಧಿಸಿದ್ದಾರೆ.

    ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿತ್ತಲಕೇರಿ ಗ್ರಾಮದ ಎಚ್.ಎಸ್.ಲೋಹಿತ್ ಹಾಗೂ ಎಚ್.ಆರ್.ಸುರೇಶ್ ಬಂಧಿತರು. ಕೋವಿಯಿಂದ ಗುಂಡು ಹೊಡೆದು ಮಾಂಸ ಮಾಡಿ ತಿನ್ನಲು ಮನೆಗೆ ಕೊಂಡೊಯ್ಯುತ್ತಿದ್ದ ಖಚಿತ ಮಾಹಿತಿ ಅನ್ವಯ ರಾತ್ರಿ ಗಸ್ತಿನಲ್ಲಿದ್ದ ಅರಣ್ಯಾಧಿಕಾರಿಗಳು ಆರೋಪಿಗಳನ್ನು ಬಂಧಿಸಿದ್ದಾರೆ.

    ಆರೋಪಿಗಳಿಂದ ಸ್ಥಳದಲ್ಲಿದ್ದ ಮೃತ ಪುನುಗು ಬೆಕ್ಕು, ಕೋವಿ, 1 ಟಾರ್ಚ್ ಹಾಗೂ ಬೈಕ್ ವಶಪಡಿಸಿಕೊಂಡಿದ್ದಾರೆ. ಶನಿವಾರಸಂತೆ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಲಬಾರ್ ಪುನುಗು ಬೆಕ್ಕು ಭಾರತದಲ್ಲೇ ವಿರಳವಾದ 300-400 ಸಂಖ್ಯೆಯಲ್ಲಿರುವ ಪ್ರಾಣಿ. ವನ್ಯಜೀವಿ ಸಂರಕ್ಷಣೆ ಕಾಯಿದೆ 1972 ರ ಪ್ರಕಾರ ಇದು ಅತಿ ವಿರಳ ಪ್ರಾಣಿಯಾಗಿದೆ.

  • ಅಪರೂಪದ ಪುನುಗು ಬೆಕ್ಕು ಕಳ್ಳಸಾಗಣೆ- ಇಬ್ಬರ ಬಂಧನ

    ಅಪರೂಪದ ಪುನುಗು ಬೆಕ್ಕು ಕಳ್ಳಸಾಗಣೆ- ಇಬ್ಬರ ಬಂಧನ

    ಉಡುಪಿ: ಪಶ್ಚಿಮಘಟ್ಟ ದಟ್ಟ ಕಾಡು, ಅಭಯಾರಣ್ಯಗಳಲ್ಲಿ ಮಾತ್ರ ಕಾಣಸಿಗುವ ಅಪರೂಪದ ಪುನುಗು ಬೆಕ್ಕನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರ ಮೇಲೆ ಅರಣ್ಯಾಧಿಕಾರಿಗಳು ದಾಳಿ ಮಾಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಅರಣ್ಯ ಸಂಚಾರಿ ದಳ ಇಲ್ಲಿನ ಅಧಿಕಾರಿ ಹಾಗೂ ಸಿಬ್ಬಂದಿ ಪುನುಗು ಬೆಕ್ಕು ಸಹಿತ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

    ಬ್ರಹ್ಮಾವರ ತಾಲೂಕಿನ ಹಿಲಿಯಾಣ ಗ್ರಾಮದ ಹೈಕಾಡಿ ಎಂಬಲ್ಲಿ ಈ ಘಟನೆ ನಡೆದಿದೆ. ಕುಂದಾಪುರ ವೆಸ್ಟ್ ಬ್ಲಾಕ್ ರಸ್ತೆ ದತ್ತಾತ್ರೇಯ ನಗರದ ನಿವಾಸಿ ಅಸ್ಗರ್ ಅಲಿ ಹಾಗೂ ಬಿದ್ಕಲಕಟ್ಟೆ ನಿವಾಸಿ ಶರತ್ ಬಂಧಿತ ಆರೋಪಿಗಳು. ಬಂಧಿತರಿಂದ ಜೀವಂತ ಪುನುಗು ಬೆಕ್ಕು, ಪಂಜರ, ಮಾರುತಿ ಇಕೋ ಕಾರು, ಮೊಬೈಲ್ ಫೋನುಗಳನ್ನು ವಶಕ್ಕೆ ಪಡೆಯಲಾಗಿದೆ.

    ದಾಳಿಯ ವೇಳೆ ಇನ್ನೋರ್ವ ಆರೋಪಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಈ ಪ್ರಕರಣವು ವನ್ಯಜೀವಿ ಅರಣ್ಯ ಸಂರಕ್ಷಣಾ ಕಾಯ್ದೆಗೆ ಸಂಬಂಧಿಸಿದ ಪ್ರಕರಣವಾದ್ದರಿಂದ ಆರೋಪಿಗಳನ್ನು ಮತ್ತು ಸ್ವತ್ತುಗಳನ್ನು ಮುಂದಿನ ತನಿಖೆ ಬಗ್ಗೆ ನ್ಯಾಯಾಲಯದ ಅನುಮತಿ ಪಡೆದು ಶಂಕರನಾರಾಯಣ ವಲಯ ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.

    ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಮಾತ್ರ ಹೆಚ್ಚಾಗಿ ಕಂಡು ಬರುವ ಪುನುಗು ಬೆಕ್ಕು ವಿನಾಶದಂಚಿನಲ್ಲಿರುವ ಜೀವಿಗಳ ಪಟ್ಟಿಯಲ್ಲಿದೆ. ಲಕ್ಷಾಂತರ ಬೆಲೆ ಬಾಳುವ ಪುನುಗು ಬೆಕ್ಕನ್ನು ಕಳ್ಳ ಸಾಗಣೆ ಮಾಡುವ ದೊಡ್ಡ ಜಾಲವೇ ಈ ಭಾಗದಲ್ಲಿದೆ ಎನ್ನುತ್ತಾರೆ ಪ್ರಾಣಿಪ್ರಿಯರು. ಜಿಂಕೆ ಕೊಂಬು, ಚಿರತೆ ಚರ್ಮದಂತೆ ಪುನುಗು ಬೆಕ್ಕಿನ ಮಾಂಸ ಮತ್ತು ಎಣ್ಣೆಗೆಯ ತಯಾರಿಗೆ ಉಪಯೋಗಿಸುತ್ತಾರೆ ಎಂಬ ಮಾಹಿತಿಯಿದೆ.

  • ಧಾರವಾಡ ಎಸಿ ಕಚೇರಿಯಲ್ಲಿ ಪುನುಗು ಬೆಕ್ಕು ಪ್ರತ್ಯಕ್ಷ

    ಧಾರವಾಡ ಎಸಿ ಕಚೇರಿಯಲ್ಲಿ ಪುನುಗು ಬೆಕ್ಕು ಪ್ರತ್ಯಕ್ಷ

    ಧಾರವಾಡ: ನಗರದ ಉಪವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ಇಂದು ಪುನುಗು ಬೆಕ್ಕನ್ನು ಕಂಡು ಅಧಿಕಾರಿಗಳು ಹಾಗೂ ಸಾರ್ವಜನಿಕರು ಒಂದು ಕ್ಷಣ ಗಾಬರಿಯಾಗಿದ್ದಾರೆ.

    ಪುನುಗು ಬೆಕ್ಕು ಕಂಡು ಕೆಲವರು ಹೌಹಾರಿದರೆ, ಇನ್ನೂ ಕೆಲವರು ಕುತೂಹಲದಿಂದ ನೋಡುತ್ತ ನಿಂತಿದ್ದರು. ಬೆಳ್ಳಂಬೆಳ್ಳಗ್ಗೆ ಉಪವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ನಾಲ್ಕು ಗಂಟೆಗೂ ಅಧಿಕ ಕಾಲ ಪುನುಗು ಬೆಕ್ಕು ಕಾಣಿಸಿಕೊಂಡಿದೆ.

    ಕಚೇರಿಗೆ ಬರುತ್ತಿದ್ದ ಸಿಬ್ಬಂದಿ ಹಾಗೂ ಜನ ಪುನುಗು ಬೆಕ್ಕನ್ನು ಕುತೂಹಲದಿಂದ ನೋಡುತ್ತಲೇ ನಿಂತಿದ್ದರು. ಸುಮಾರು ನಾಲ್ಕು ಗಂಟೆಗಳ ಈ ಬೆಕ್ಕು ಕಚೇರಿ ಆವರಣದಲ್ಲಿಯೇ ಓಡಾಡುತ್ತಿತ್ತು. ಬಳಿಕ ಉರಗ ತಜ್ಞ ಯಲ್ಲಪ್ಪ ಸ್ಥಳಕ್ಕಾಗಮಿಸಿ, ಈ ಅಪರೂಪದ ಬೆಕ್ಕನ್ನು ಸೆರೆ ಹಿಡಿದು ಅರಣ್ಯದಲ್ಲಿ ಬಿಟ್ಟು ಬಂದಿದ್ದಾರೆ. ಇತ್ತೀಚೆಗೆ ಧಾರವಾಡದಲ್ಲಿ ಅಲ್ಲಲ್ಲಿ ಪುನುಗು ಬೆಕ್ಕುಗಳು ಕಂಡು ಬರುತ್ತಿದ್ದು, ಇದರ ಸಂತತಿ ಧಾರವಾಡದಲ್ಲಿ ಹೆಚ್ಚಾಗಿದೆಯಾ ಎನ್ನುವ ಸಂಶಯ ವ್ಯಕ್ತವಾಗಿದೆ.

  • ಪಾಳು ಬಾವಿಗೆ ಬಿದ್ದ ಅಪರೂಪದ ಪುನುಗು ಬೆಕ್ಕಿನ ರಕ್ಷಣೆ!

    ಪಾಳು ಬಾವಿಗೆ ಬಿದ್ದ ಅಪರೂಪದ ಪುನುಗು ಬೆಕ್ಕಿನ ರಕ್ಷಣೆ!

    ತುಮಕೂರು: ಪಾಳು ಬಾವಿಗೆ ಬಿದ್ದು ಮೇಲಕ್ಕೆ ಬಾರದೇ ಪರದಾಡುತ್ತಿದ್ದ ಅಪರೂಪದ ಪುನುಗು ಬೆಕ್ಕನ್ನು ವನ್ಯಜೀವಿ ಜಾಗೃತಿ ಹಾಗೂ ಉರಗ ಸಂರಕ್ಷಣಾ ಸಂಸ್ಥೆಯ ಸಿಬ್ಬಂದಿ ರಕ್ಷಿಸಿರುವ ಘಟನೆ ಜಿಲ್ಲೆಯ ಶಿರಾ ತಾಲೂಕಿನ ಅಮಲಗೊಂದಿ ಗ್ರಾಮದಲ್ಲಿ ನಡೆದಿದೆ.

    ಅಮಲಗೊಂದಿ ಗ್ರಾಮದ ತೋಟದವೊಂದರ ಪಾಳು ಬಾವಿಯಲ್ಲಿ ಪುನುಗು ಬೆಕ್ಕು ಪತ್ತೆಯಾಗಿತ್ತು. ಕಾಡಂಚಿನ ಗ್ರಾಮವಾಗಿರುವುದರಿಂದ ಈ ಅಪರೂಪದ ಬೆಕ್ಕು ಕಾಣಿಸಿಕೊಂಡಿದೆ. ಬಹುತೇಕ ಕಾಡಿನಲ್ಲಿಯೇ ವಾಸಿಸುವ ಈ ಪ್ರಾಣಿ ಆಹಾರ ಅರಸಿ ನಾಡಿನತ್ತ ಬಂದಿತ್ತು. ಅಮಲಗೊಂದಿ ನಿವಾಸಿ ಮಂಜುನಾಥ್ ಪ್ರಸಾದ್ ಎಂಬುವರಿಗೆ ಸೇರಿದ ತೋಟದಲ್ಲಿದ್ದ ಪಾಳು ಬಾವಿಯಲ್ಲಿ ಈ ಪುನುಗು ಬೆಕ್ಕು ಬಿದ್ದಿತ್ತು. ಅಲ್ಲದೆ ಭಯಗೊಂಡು ಬಾವಿಯಿಂದ ಮೇಲಕ್ಕೆ ಬಾರದೇ ಪರದಾಡುತಿತ್ತು.

    ಮುಂಜಾನೆ ತೋಟದ ಕಡೆ ಮಂಜುನಾಥ್ ಅವರು ಹೋಗಿದ್ದಾಗ ಬಾವಿಯಿಂದ ಶಬ್ದ ಕೇಳಿಬಂದಿದೆ. ಆಗ ಬಾವಿಯಲ್ಲಿ ಇಣುಕಿದಾಗ ಪುನುಗು ಬೆಕ್ಕನ್ನು ನೋಡಿದ್ದಾರೆ. ಬಳಿಕ ಪಾಳು ಬಾವಿಯೊಳಗೆ ಏಣಿ ಇಟ್ಟು ಬೆಕ್ಕು ರಕ್ಷಣೆಗೆ ಮುಂಜುನಾಥ್ ಮುಂದಾಗಿದ್ದಾರೆ. ಅಷ್ಟೇ ಅಲ್ಲದೆ ವನ್ಯಜೀವಿ ಜಾಗೃತಿ ಹಾಗೂ ಉರಗ ಸಂರಕ್ಷಣಾ ಸಂಸ್ಥೆಗೆ ಮಾಹಿತಿ ತಿಳಿಸಿದ್ದಾರೆ. ಕೊನೆಗೆ ಸ್ಥಳಕ್ಕೆ ಬಂದ ವನ್ಯಜೀವಿ ಜಾಗೃತಿ ಹಾಗೂ ಉರಗ ಸಂರಕ್ಷಣಾ ಸಂಸ್ಥೆಯ ಸಿಬ್ಬಂದಿ ಪುನುಗು ಬೆಕ್ಕನ್ನು ಬಾವಿಯಿಂದ ರಕ್ಷಿಸಿ ಮೇಲಕ್ಕೆ ಎತ್ತಿದ್ದಾರೆ.

    ನಂತರ ಪುನುಗು ಬೆಕ್ಕನ್ನು ಜಿಲ್ಲೆಯ ದೇವರಾಯನದುರ್ಗ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಟ್ಟು ಬರಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv