Tag: ಪುನೀತ ಪರ್ವ

  • ಪುನೀತ ಪರ್ವಕ್ಕೆ ಜಗ್ಗೇಶ್ ಗೈರು: ವಿಪರೀತ ದುಃಖವಾಯಿತು

    ಪುನೀತ ಪರ್ವಕ್ಕೆ ಜಗ್ಗೇಶ್ ಗೈರು: ವಿಪರೀತ ದುಃಖವಾಯಿತು

    ಪುನೀತ್ ರಾಜ್ ಕುಮಾರ್ ನೆನಪಿನ ಪುನೀತ ಪರ್ವ (Puneetha Parva) ಕಾರ್ಯಕ್ರಮಕ್ಕೆ ನಟ ಜಗ್ಗೇಶ್ (Jaggesh) ಕೂಡ ಹಾಜರಿರಲಿಲ್ಲ. ಅಪ್ಪು ಮತ್ತು ಡಾ.ರಾಜ್ ಕುಟುಂಬದ ಬಗ್ಗೆ ಅಪಾರ ಪ್ರೀತಿ, ಅಭಿಮಾನ ಹೊಂದಿದ್ದ ಜಗ್ಗೇಶ್, ಈ ಕಾರ್ಯಕ್ರಮಕ್ಕೆ ಗೈರು (absent) ಹಾಜರಿದ್ದದ್ದು ಪುನೀತ್ ಅಭಿಮಾನಿಗಳಲ್ಲಿ ಬೇಸರ ಮೂಡಿತ್ತು. ಆ ಬೇಸರವನ್ನು ಕೆಲವರು ಹಂಚಿಕೊಂಡಿದ್ದರು. ಅದಕ್ಕೆ ಜಗ್ಗೇಶ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘವಾಗಿ ಅವರು ಬರೆದುಕೊಂಡಿದ್ದಾರೆ.

    ನನ್ನ ಬದುಕಿಗೆ ಪುನೀತ್ ಬದಲಾವಣೆಯ ಮಾರ್ಗದರ್ಶನದ ಬೆಳಕಾದ. ನನ್ನಲ್ಲಿದ್ದ ಕೋಪ, ಆವೇಶ ನಿರ್ನಾಮವಾಯಿತು. ಒಟ್ಟಿನಲ್ಲಿ ಪುನೀತ ನನಗೆ ಗುರವಾದ. ಅಮೆರಿಕಾದಿಂದ (America) ಹಿಂದಿರುಗುವ ಟಿಕೆಟ್ಟು ಸಿಗದೆ ಆತನ ಕೊನೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಲಿಲ್ಲವೆಂದು ವಿಪರೀತ ದುಃಖವಾಯಿತು. ಅಪ್ಪನ ಹೆಸರಿನ ಗಂಧದಗುಡಿ ಚಿತ್ರ ಮತ್ತೊಮ್ಮೆ ಪುನೀತನಿಂದ ಕೊನೆಯ ಚಿತ್ರವಾಗಿ ಹೊರ ಬರುತ್ತಿದೆ. ಆ ಚಿತ್ರಕ್ಕೆ ನನ್ನ ಹೃದಯಪೂರ್ವಕ ಶುಭಕಾಮನೆಗಳು. ಎಲ್ಲರೂ ಒಂದು ದಿನ ಕಡ್ಡಾಯ ನಿರ್ಗಮಿಸಲೇಬೇಕು. ಆದರೆ, ಕೆಲವರು ಮಾತ್ರ ನಿರ್ಗಮಿಸಿದ ಮೇಲೆಯೂ ಉಳಿಯುತ್ತಾರೆ. ಆ ಕೆಲವರಲ್ಲಿ ಪುನೀತ್ (Puneeth Rajkumar) ನಮ್ಮಗಳಿಗೆ ದೇವರಾದ. ನಿನ್ನ ಪ್ರೀತಿಯ ನೆನಪು ನನ್ನ ಕೊನೆ ಉಸಿರಿನವರೆಗೂ ನನ್ನ ಮಾನಸದಲ್ಲಿ’ ಎಂದು ಭಾವನಾತ್ಮಕವಾಗಿ ಜಗ್ಗೇಶ್ ಬರೆದಿದ್ದಾರೆ. ಇದನ್ನೂ ಓದಿ:ಪುನೀತ ಪರ್ವ ಕಾರ್ಯಕ್ರಮಕ್ಕೆ ರಿಷಬ್ ಶೆಟ್ಟಿ ಗೈರು ಹಾಜರಿ : ಕ್ಷಮಿಸಿ ಅಪ್ಪು ಸರ್

    ನಿನ್ನೆ ಬೆಂಗಳೂರಿನಲ್ಲಿ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು. ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಹಲವು ಅಚ್ಚರಿಗಳು ನಡೆದಿವೆ. ಪುನೀತ್ ರಾಜ್ ಕುಮಾರ್ ಜೊತೆಗಿನ ಒಡನಾಟವನ್ನು ಅನೇಕ ಕಲಾವಿದರು ಮತ್ತು ತಂತ್ರಜ್ಞರ ನೆನಪಿಸಿಕೊಂಡರು. ಅಲ್ಲದೇ, ಪ್ರಕಾಶ್ ರೈ, ಯಶ್ ಸೇರಿದಂತೆ ಹಲವು ಕಲಾವಿದರು ಪುನೀತ್ ಅವರ ಜನಪರ ಕಾಳಜಿಯನ್ನು ಮುಂದುವರೆಸಿಕೊಂಡು ಹೋಗುವ ಕುರಿತು ಮಾತನಾಡಿದರು. ಪುನೀತ್ ಅವರ ಗಂಧದ ಗುಡಿ ಚಿತ್ರಕ್ಕೆ ತೆರಿಗೆ ವಿನಾಯಿತಿಯನ್ನು ಮುಖ್ಯಮಂತ್ರಿಗಳು ಘೋಷಿಸಿದರು.

    ಈ ವರ್ಣರಂಜಿತ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್, ರಮ್ಯಾ ಸೇರಿದಂತೆ ಹಲವು ಕಲಾವಿದರು ನೃತ್ಯ ಮಾಡಿದರೆ, ಗುರುಕಿರಣ್, ವಿಜಯ ಪ್ರಕಾಶ್ ಅಪ್ಪು ಹಾಡುಗಳನ್ನು ಹೇಳಿದರು. ಗೊಂಬೆ ಹೇಳುತೈತಿ ಹಾಡುವಾಗ ಡಾ.ರಾಜ್ ಅವರ ಅಷ್ಟೂ ಕುಟುಂಬ ಭಾಗಿಯಾಗಿತ್ತು. ಹಾಡು ಕೇಳುತ್ತಲೇ ಪುನೀತ್ ಪತ್ನಿ ಅಶ್ವಿನಿ ಕಣ್ಣೀರು ಹಾಕಿದರು. ಇಡೀ ಕಾರ್ಯಕ್ರಮ ಈ ಕ್ಷಣ ಭಾವುಕ ಪ್ರಪಂಚಕ್ಕೆ ಕರೆದುಕೊಂಡು ಹೋಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಅಪ್ಪು ಹೆಸರಿನಲ್ಲಿ ಆಂಬ್ಯುಲೆನ್ಸ್ ಸೇವೆ: ಪ್ರಕಾಶ್ ರೈ, ಯಶ್ ಘೋಷಣೆ

    ಅಪ್ಪು ಹೆಸರಿನಲ್ಲಿ ಆಂಬ್ಯುಲೆನ್ಸ್ ಸೇವೆ: ಪ್ರಕಾಶ್ ರೈ, ಯಶ್ ಘೋಷಣೆ

    ಪುನೀತ್ ರಾಜ್ ಕುಮಾರ್ (Puneeth Rajkumar) ಹೆಸರಿನಲ್ಲಿ ಈಗಾಗಲೇ ಪ್ರಕಾಶ್ ರೈ ಅಪ್ಪು ಎಕ್ಸ್ ಪ್ರೆಸ್ ಆಂಬ್ಯುಲೆನ್ಸ್ ಸೇವೆ ಶುರು ಮಾಡಿದ್ದಾರೆ. ಜಿಲ್ಲೆಗೊಂದು ಆಂಬ್ಯುಲೆನ್ಸ್ (Ambulance) ಕೊಡಬೇಕು ಎನ್ನುವುದು ಪ್ರಕಾಶ್ ರೈ ಸಂಕಲ್ಪವಾಗಿತ್ತು. ಈಗಾಗಲೇ ಮೈಸೂರು ಜಿಲ್ಲೆಗೆ ಅದನ್ನು ಮಾಡಿದ್ದಾರೆ. ಈ ಸಂಗತಿಯನ್ನು ಅವರು ನಿನ್ನೆ ನಡೆದ ಪುನೀತ ಪರ್ವ ಕಾರ್ಯಕ್ರಮದಲ್ಲಿ ಹಂಚಿಕೊಂಡರು. ಅಲ್ಲದೇ, ತಮಿಳು ನಟ ಸೂರ್ಯ, ತೆಲುಗು ನಟ ಚಿರಂಜೀವಿ ಮತ್ತು ಶಿವರಾಜ್ ಕುಮಾರ್ ಕೂಡ ತಲಾ ಒಂದು ಆಂಬ್ಯುಲೆನ್ಸ್ ಕೊಡುವುದಾಗಿ ಹೇಳಿರುವ ವಿಚಾರವನ್ನೂ ಹಂಚಿಕೊಂಡರು.

    ಪ್ರಕಾಶ್ ರೈ (Prakash Raj) ಅವರು ಈ ವಿಚಾರವನ್ನು ಪ್ರಸ್ತಾಪಿಸುತ್ತಿದ್ದಂತೆಯೇ ಯಶ್ (Yash) ಕೂಡ ಅದಕ್ಕೆ ಕೈ ಜೋಡಿಸಿದರು. ಯಶ್ ವೇದಿಕೆಯ ಮೇಲೆ ಬಂದು ಪ್ರಕಾಶ್ ರೈ ಅವರು ಮಾಡುತ್ತಿರುವ ಕೆಲಸವನ್ನು ಮೆಚ್ಚಿಕೊಂಡು ಅದಕ್ಕೆ ತಾವೂ ಕೈ ಜೋಡಿಸುತ್ತೇನೆ ಅಂದರು. ಅಲ್ಲದೇ, ಉಳಿದಿರುವ 25 ಜಿಲ್ಲೆಗಳಿಗೆ ತಾವೇ ಆಂಬ್ಯುಲೆನ್ಸ್ ಕೊಡುವುದಾಗಿ ಘೋಷಣೆ ಮಾಡಿದರು. ಯಶ್ ಮಾತಿಗೆ ಎದ್ದು ನಿಂತು ಚೆಪ್ಪಾಳೆ ತಟ್ಟಿ, ವೇದಿಕೆಗೆ ಬಂದು ಯಶ್ ನನ್ನು ತಬ್ಬಿಕೊಂಡರು ಪ್ರಕಾಶ್ ರೈ.  ಇದನ್ನೂ ಓದಿ: ಕಾಂತಾರ ನೋಡಿ, ಆದ್ರೆ ಓ.. ಎಂದು ಕೂಗ್ಬೇಡಿ – ಆಚಾರಕ್ಕೆ ಧಕ್ಕೆಯಾಗುತ್ತೆ ಎಂದ ರಿಷಬ್

    ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಹಲವು ಅಚ್ಚರಿಗಳು ನಡೆದಿವೆ. ಪುನೀತ್ ರಾಜ್ ಕುಮಾರ್ ಜೊತೆಗಿನ ಒಡನಾಟವನ್ನು ಅನೇಕ ಕಲಾವಿದರು ಮತ್ತು ತಂತ್ರಜ್ಞರ ನೆನಪಿಸಿಕೊಂಡರು. ಅಲ್ಲದೇ, ಪ್ರಕಾಶ್ ರೈ, ಯಶ್ ಸೇರಿದಂತೆ ಹಲವು ಕಲಾವಿದರು ಪುನೀತ್ ಅವರ ಜನಪರ ಕಾಳಜಿಯನ್ನು ಮುಂದುವರೆಸಿಕೊಂಡು ಹೋಗುವ ಕುರಿತು ಮಾತನಾಡಿದರು. ಪುನೀತ್ ಅವರ ಗಂಧದ ಗುಡಿ ಚಿತ್ರಕ್ಕೆ ತೆರಿಗೆ ವಿನಾಯತಿಯನ್ನು ಮುಖ್ಯಮಂತ್ರಿಗಳು ಘೋಷಿಸಿದರು.

    ಈ ವರ್ಣರಂಜಿತ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್, ರಮ್ಯಾ ಸೇರಿದಂತೆ ಹಲವು ಕಲಾವಿದರು ನೃತ್ಯ ಮಾಡಿದರೆ, ಗುರುಕಿರಣ್, ವಿಜಯ ಪ್ರಕಾಶ್ ಅಪ್ಪು ಹಾಡುಗಳನ್ನು ಹೇಳಿದರು. ಗೊಂಬೆ ಹೇಳುತೈತಿ ಹಾಡುವಾಗ ಡಾ.ರಾಜ್ ಅವರ ಅಷ್ಟೂ ಕುಟುಂಬ ಭಾಗಿಯಾಗಿತ್ತು. ಹಾಡು ಕೇಳುತ್ತಲೇ ಪುನೀತ್ ಪತ್ನಿ ಅಶ್ವಿನಿ ಕಣ್ಣೀರು ಹಾಕಿದರು. ಇಡೀ ಕಾರ್ಯಕ್ರಮ ಈ ಕ್ಷಣ ಭಾವುಕ ಪ್ರಪಂಚಕ್ಕೆ ಕರೆದುಕೊಂಡು ಹೋಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಪುನೀತ ಪರ್ವ ಕಾರ್ಯಕ್ರಮಕ್ಕೆ ರಿಷಬ್ ಶೆಟ್ಟಿ ಗೈರು ಹಾಜರಿ : ಕ್ಷಮಿಸಿ ಅಪ್ಪು ಸರ್

    ಪುನೀತ ಪರ್ವ ಕಾರ್ಯಕ್ರಮಕ್ಕೆ ರಿಷಬ್ ಶೆಟ್ಟಿ ಗೈರು ಹಾಜರಿ : ಕ್ಷಮಿಸಿ ಅಪ್ಪು ಸರ್

    ಪುನೀತ್ ರಾಜ್ ಕುಮಾರ್ ಕನಸಿನ ಪ್ರಾಜೆಕ್ಟ್ ಗಂಧದ ಗುಡಿ ಡಾಕ್ಯುಮೆಂಟರಿ ಪ್ರಿ ರಿಲೀಸ್ ಇವೆಂಟ್ ನಿನ್ನೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಿತು. ಭಾರತೀಯ ಸಿನಿಮಾ ರಂಗದ ಅನೇಕ ಕಲಾವಿದರು ಇದರಲ್ಲಿ ಭಾಗಿಯಾಗಿದ್ದರು. ಆದರೆ, ರಿಷಬ್ ಶೆಟ್ಟಿ (Rishabh Shetty) ಗೈರು ಹಾಜರಿದ್ದರು. ಹಾಗಂತ ಅವರು ಬೇಕು ಅಂತ ಈ ಕಾರ್ಯಕ್ರಮದಿಂದ ತಪ್ಪಿಸಿಕೊಂಡಿಲ್ಲ. ಈ ದೇಶದಲ್ಲೂ ಅವರಿಲ್ಲ. ಹಾಗಾಗಿ ಕಾರ್ಯಕ್ರಮಕ್ಕೆ ಹಾಜರಾಗುತ್ತಿಲ್ಲ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಅವರು ಬರೆದುಕೊಂಡಿದ್ದಾರೆ. ಕ್ಷಮೆ ಕೂಡ ಕೇಳಿದ್ದಾರೆ.

    ಪುನೀತ ಪರ್ವ (Puneetha Parva) ಕಾರ್ಯಕ್ರಮಕ್ಕೆ ಯಾಕೆ ಹಾಜರಾಗುತ್ತಿಲ್ಲ ಎನ್ನುವ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದಿರುವ ರಿಷಬ್ ‘ಪೂರ್ವನಿರ್ಧರಿತ ಕಾರ್ಯಕ್ರಮವೊಂದಕ್ಕಾಗಿ ಬರ್ಹೇನ್ ನಲ್ಲಿರುವ ಕಾರಣ ಇಂದಿನ ಪುನೀತ ಪರ್ವದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಕಾರ್ಯಕ್ರಮದ ಲೈವ್ ನೋಡುತ್ತಾ ಕಣ್ತುಂಬಿ ಬಂದವು. ನಾನೂ ಅಲ್ಲಿ ಆ ನೆನಪುಗಳ ನಡುವೆ ಇರಬೇಕಿತ್ತು ಎನ್ನಿಸಿತು. ಅಪ್ಪು ಸರ್ ಕ್ಷಮೆ ಇರಲಿ. ಮೊದಲ ದಿನವೇ ಗಂಧದ ಗುಡಿಯಲ್ಲಿ ಭೇಟಿಯಾಗೋಣ’ ಎಂದು ಬರೆದಿದ್ದಾರೆ. ಇದನ್ನೂ ಓದಿ: ‘ಕಾಂತಾರ’ ಚಿತ್ರವನ್ನು ಡೈರೆಕ್ಟ್ ಆಗಿ ಆಸ್ಕರ್ ಗೆ ಕಳುಹಿಸಿ: ಕಂಗನಾ ರಣಾವತ್

    ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಹಲವು ಅಚ್ಚರಿಗಳು ನಡೆದಿವೆ. ಪುನೀತ್ ರಾಜ್ ಕುಮಾರ್ (Puneeth Rajkumar) ಜೊತೆಗಿನ ಒಡನಾಟವನ್ನು ಅನೇಕ ಕಲಾವಿದರು ಮತ್ತು ತಂತ್ರಜ್ಞರ ನೆನಪಿಸಿಕೊಂಡರು. ಅಲ್ಲದೇ, ಪ್ರಕಾಶ್ ರೈ, ಯಶ್ ಸೇರಿದಂತೆ ಹಲವು ಕಲಾವಿದರು ಪುನೀತ್ ಅವರ ಜನಪರ ಕಾಳಜಿಯನ್ನು ಮುಂದುವರೆಸಿಕೊಂಡು ಹೋಗುವ ಕುರಿತು ಮಾತನಾಡಿದರು. ಪುನೀತ್ ಅವರ ಗಂಧದ ಗುಡಿ ಚಿತ್ರಕ್ಕೆ ತೆರಿಗೆ ವಿನಾಯತಿಯನ್ನು ಮುಖ್ಯಮಂತ್ರಿಗಳು ಘೋಷಿಸಿದರು.

    ಈ ವರ್ಣರಂಜಿತ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್, ರಮ್ಯಾ ಸೇರಿದಂತೆ ಹಲವು ಕಲಾವಿದರು ನೃತ್ಯ ಮಾಡಿದರೆ, ಗುರುಕಿರಣ್, ವಿಜಯ ಪ್ರಕಾಶ್ ಅಪ್ಪು ಹಾಡುಗಳನ್ನು ಹೇಳಿದರು. ಗೊಂಬೆ ಹೇಳುತೈತಿ ಹಾಡುವಾಗ ಡಾ.ರಾಜ್ ಅವರ ಅಷ್ಟೂ ಕುಟುಂಬ ಭಾಗಿಯಾಗಿತ್ತು. ಹಾಡು ಕೇಳುತ್ತಲೇ ಪುನೀತ್ ಪತ್ನಿ ಅಶ್ವಿನಿ ಕಣ್ಣೀರು ಹಾಕಿದರು. ಇಡೀ ಕಾರ್ಯಕ್ರಮ ಈ ಕ್ಷಣ ಭಾವುಕ ಪ್ರಪಂಚಕ್ಕೆ ಕರೆದುಕೊಂಡು ಹೋಗಿತ್ತು.

    Live Tv
    [brid partner=56869869 player=32851 video=960834 autoplay=true]

  • `ಗಂಧದ ಗುಡಿ’ಗೆ ತೆರಿಗೆ ವಿನಾಯಿತಿ – ಸಿಎಂ ಘೋಷಣೆ

    `ಗಂಧದ ಗುಡಿ’ಗೆ ತೆರಿಗೆ ವಿನಾಯಿತಿ – ಸಿಎಂ ಘೋಷಣೆ

    ಬೆಂಗಳೂರು: ನಿಸರ್ಗ ಕಾಳಜಿ ಉದ್ದೇಶದಿಂದ ‘ಗಂಧದ ಗುಡಿ’ (Gandhadagudi) ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಘೋಷಣೆ ಮಾಡಿದರು.

    ಅರಮನೆ ಮೈದಾನದಲ್ಲಿ ನಡೆಯುತ್ತಿರುವ `ಪುನೀತ ಪರ್ವ’ (Puneetha Parva) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಅಪ್ಪು ಎಲ್ಲರಿಗೂ ಪ್ರಿಯವಾಗಿರೋರು. ಅವರ ಪ್ರಯೋಗ ಇಂದು ನನಸಾಗುತ್ತಿದೆ. ಅಪ್ಪು ಅವರಂತಹ ವ್ಯಕ್ತಿತ್ವಕ್ಕೆ ದೇವರು ಶಾಂತಿ ನೀಡಲಿ. ಸಣ್ಣ ವಯಸ್ಸಿನಲ್ಲೇ ಬಣ್ಣ ಹಚ್ಚಿರೋ ಖ್ಯಾತಿ ಅಪ್ಪು ಅವರದ್ದು. ಅವರ ಆದರ್ಶಗಳು ಇಂದಿಗೂ ಜನಮಾನಸದಲ್ಲಿ ಜೀವಂತ ಎಂದು ಸ್ಮರಿಸಿದರು.

    ಇದೇ ವೇಳೆ ಗಂಧದ ಗುಡಿ ಚಿತ್ರಕ್ಕೆ (Cinema) ತೆರಿಗೆ ವಿನಾಯಿತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿಎಂ, ನಿಸರ್ಗದ ಬಗ್ಗೆ ಕಾಳಜಿ ವಹಿಸುವ ಅಗತ್ಯವಿದೆ. ಮುಂದಿನ ಪೀಳಿಗೆಗೆ ನಿಸರ್ಗದ ಬಗ್ಗೆ ಜಾಗೃತಿ ಮೂಡಿಸೋ ಕೆಲಸದ ಅಗತ್ಯವಿದೆ. ಹಾಗಾಗಿ ಗಂಧದ ಗುಡಿಗೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ ಎಂದು ಘೋಷಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಭಿಮಾನಿಗಳ ಮೂಲಕ ಅಪ್ಪು ಇನ್ನೂ ಜೀವಂತವಾಗಿದ್ದಾರೆ: ನಟಿ ರಮ್ಯಾ

    ಅಭಿಮಾನಿಗಳ ಮೂಲಕ ಅಪ್ಪು ಇನ್ನೂ ಜೀವಂತವಾಗಿದ್ದಾರೆ: ನಟಿ ರಮ್ಯಾ

    `ಗಂಧದಗುಡಿ’ (Gandadagudi) ಸಿನಿಮಾ ಇದೇ ಅ.28ಕ್ಕೆ ತೆರೆಗೆ ಬರುತ್ತಿದೆ. ಈ ಪ್ರಯುಕ್ತ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರವನ್ನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಆಯೋಜಿಸಲಾಗಿದೆ. `ಪುನೀತ ಪರ್ವ’ ಕಾರ್ಯಕ್ರಮಕ್ಕೆ ಅಪ್ಪು ಸಹನಟಿ ಮೋಹಕತಾರೆ ರಮ್ಯಾ(Sandalwood Queen Ramya) ಸಾಥ್ ನೀಡಿದ್ದಾರೆ. ಅಪ್ಪು ಜೊತೆಗಿನ ನೆನಪನ್ನ ಬಿಚ್ಚಿಟ್ಟಿದ್ದಾರೆ.

    ಪುನೀತ ಪರ್ವ(Puneetha Parva) ಕಾರ್ಯಕ್ರಮದಲ್ಲಿ ನಟಿ ರಮ್ಯಾ ಕೂಡ ಭಾಗವಹಿಸಿದ್ದಾರೆ. ಅಭಿಮಾನಿಗಳ ಮುಂದೆ ಲೈವ್ ಡ್ಯಾನ್ಸ್ ಅರಸು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇನ್ನೂ ನನಗೆ ಅಷ್ಟಾಗಿ ಡ್ಯಾನ್ಸ್ ಬರುತ್ತಿರಲಿಲ್ಲ. ಅಪ್ಪು ನನಗೆ ಸಲಹೆ ನೀಡುತ್ತಿದ್ದರು. ನನ್ನ ಕೋ ಸ್ಟಾರ್ ನನಗೆ ತುಂಬಾ ಬೆಂಬಲ ನೀಡಿದ್ದಾರೆ. ನಾನು ಇಂದು ಈ ವೇದಿಕೆಯಲ್ಲಿ ನಿಂತಿದ್ದೇನೆ ಅಂದ್ರೆ ಅದಕ್ಕೆ ಡಾ.ರಾಜ್‌ಕುಮಾರ್ ಕುಟುಂಬವೇ ಕಾರಣ ಎಂದು ರಮ್ಯಾ ಮಾತನಾಡಿದ್ದಾರೆ. ಇದನ್ನೂ ಓದಿ:ಅಪ್ಪು ದೇವರಾಗಿದ್ದಾರೆ ಎಂದು ಭಾವುಕರಾದ ಶರತ್ ಕುಮಾರ್

    ಅಪ್ಪು ಕುಟುಂಬದ ಧೀರೇನ್, ಯುವ, ಡಿಂಪಿ, ಅಮ್ಮುನ ನೋಡಿದಾಗ ಖುಷಿಯಾಗುತ್ತದೆ. ಏಲ್ಲೋ ಒಂದು ಕಡೆ ಅಪ್ಪುನ ಮಿಸ್ ಮಾಡಿಕೊಂಡರೂ ಕೂಡ ಅವರ ಫ್ಯಾಮಿಲಿ ಮತ್ತು ಅಭಿಮಾನಿಗಳ ಮೂಲಕ ಅಪ್ಪು ಬದುಕಿದ್ದಾರೆ ಎಂದು ಅನಿಸುತ್ತದೆ ಎಂದು ರಮ್ಯಾ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಪ್ಪಾಜಿ ಗಂಧದ ಗುಡಿ ಸಿನಿಮಾ ಅಪ್ಪುಗೆ ಇಷ್ಟ: ಪುನೀತ್ ಸಹೋದರಿ ಲಕ್ಷ್ಮಿ

    ಅಪ್ಪಾಜಿ ಗಂಧದ ಗುಡಿ ಸಿನಿಮಾ ಅಪ್ಪುಗೆ ಇಷ್ಟ: ಪುನೀತ್ ಸಹೋದರಿ ಲಕ್ಷ್ಮಿ

    ಪುನೀತ್ ರಾಜ್ ಕುಮಾರ್ (Puneeth Rajkumar) ನಟಿಸಿ, ನಿರ್ಮಾಣ ಮಾಡಿರುವ ಗಂಧದ ಗುಡಿ (Gandhad Gudi) ಪ್ರಿ ರಿಲೀಸ್ ಇವೆಂಟ್ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿದೆ. ಈ ಅದ್ಧೂರಿ ಸಮಾರಂಭಕ್ಕೆ ಸಾಕ್ಷಿಯಾಗಲು ಭಾರತೀಯ ಸಿನಿಮಾ ರಂಗವೇ ಸಿದ್ಧವಾಗಿದೆ. ಈ ಹೊತ್ತಿನಲ್ಲಿ ಪುನೀತ್ ಸಹೋದರಿ ಲಕ್ಷ್ಮಿ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ತಂದೆಯ ಗಂಧದ ಗುಡಿ ಸಿನಿಮಾ ಮತ್ತು ತಮ್ಮನ ಗಂಧದ ಗುಡಿ ಡಾಕ್ಯುಮೆಂಟರಿ ಬಗ್ಗೆ ಮಾತನಾಡಿದ್ದಾರೆ.

    ಅಪ್ಪು ಕನಸಿನ‌ ಚಿತ್ರವಿದು. ಅವನಿಗೆ ಅಪ್ಪಾಜಿ ಗಂಧದಗುಡಿ ತುಂಬಾ ಇಷ್ಟ ಆಗಿತ್ತು. ಎಲ್ಲಾ ಅಭಿಮಾನಿಗಳು ಕಾಯ್ತಿರೋ ಹಾಗೆನಾನು  ಗಂಧದ ಗುಡಿಗಾಗಿ ಕಾಯ್ತಿದ್ದೀನಿ. ಗಂಧದಗುಡಿ ರಿಲೀಸ್ ಆಗುವಾಗ ಅಪ್ಪು ಇನ್ನೂ ಹುಟ್ಟಿರಲಿಲ್ಲ. ಆಮೇಲೆ ದೊಡ್ಡವನಾದ ಮೇಲೆ ನೋಡ್ದಾಗ ತುಂಬಾ ಖುಷಿ ಪಡ್ತಿದ್ದ. ಅದೇ ಕನಸು ಈ ಥರ ಕರೆದುಕೊಂಡು ಹೋಗಿರಬೇಕು. ಗಂಧದಗುಡಿ ಶೂಟಿಂಗ್ ಆಗುವಾಗ ನಾನು, ಪೂರ್ಣಿಮಾ, ರಾಘು ಎಲ್ಲರೂ ಹೋಗಿದ್ದೆವು. ಅಪ್ಪು ಗಂಧದಗುಡಿ ಶೂಟಿಂಗ್ ಆಗುವಾಗ ಕಾಡಿಗೆ ಹೋದಾಗ ಹೇಳಿದ್ದ. ನಾನು ಜೋಪಾನ ಇರ್ತೀನಿ ಅಂತ ಅವ್ನೇ ಹೇಳಿದ್ದ. ಅಪ್ಪು ಇಲ್ಲದೆ ಈ ಒಂದು ವರ್ಷ ಹೇಗಿದ್ದೆವೋ ಗೊತ್ತಿಲ್ಲ. ಪ್ರತಿ ದಿನ ಪ್ರತಿ ಕ್ಷಣ ನೆನಪಾಗ್ತಾನೆ. ನಮ್ಮ ಜೊತೆ ಇರುವ ಅಭಿಮಾನಿಗಳಿಗೆ ನಾವು ಚಿರಋಣಿ’ ಎಂದರು ಲಕ್ಷ್ಮಿ (Lakshmi). ಇದನ್ನೂ ಓದಿ: ರಿಷಬ್ ಹೇಳಿದ ಹಿಂದೂ ಪದ ಒಪ್ಪಲ್ಲ, ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ: ಸಮರ್ಥಿಸಿದ ಚೇತನ್

    ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ಪುನೀತ್ ರಾಜ್ ಕುಮಾರ್ ನೆನಪಿನಲ್ಲಿ ‘ಪುನೀತ್ ಪರ್ವ’ (Puneetha Parva) ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಪುನೀತ್ ನಟನೆಯ ಕಟ್ಟಕಡೆಯ ಡಾಕ್ಯುಮೆಂಟರಿ ಮಾದರಿಯ ಸಿನಿಮಾದ ಪ್ರಿ ರಿಲೀಸ್ ಇವೆಂಟ್ ಕೂಡ ಇದಾಗಿದ್ದು, ಭಾರತೀಯ ಸಿನಿಮಾ ರಂಗದ ಅನೇಕ ದಿಗ್ಗಜರು ಸಮಾರಂಭದಲ್ಲಿ ಭಾಗಿ ಆಗುತ್ತಿದ್ದಾರೆ. ಅಲ್ಲದೇ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಆಹ್ವಾನ ನೀಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಬಾಬುರಾಯನ ಕೊಪ್ಪಲಿನ ಜೈ ಭುವನೇಶ್ವರಿ ಹೊಟೇಲ್ ಅಪ್ಪು ಫೇವರೆಟ್

    ಬಾಬುರಾಯನ ಕೊಪ್ಪಲಿನ ಜೈ ಭುವನೇಶ್ವರಿ ಹೊಟೇಲ್ ಅಪ್ಪು ಫೇವರೆಟ್

    ವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ (Puneeth Rajkumar) ಅವರು ನಮ್ಮನ್ನ ಅಗಲಿ ಒಂದು ವರ್ಷ ಕಳೆದಿದೆ. ಹೀಗಿದ್ರು ಸಹ ಪುನೀತ್ ಅವರು ಓಡಾಡಿದ ಜಾಗಗಳು ಅವರು ಊಟ ಮಾಡಲು ಹೋಗುತ್ತಿದ್ದ ಹೊಟೇಲ್‌ಗಳು ಇಂದಿಗೂ ಸಹ ನಮ್ಮನ್ನ ಕಾಡುತ್ತಿವೆ. ಅಪ್ಪುಗೆ ಮಂಡ್ಯ ಬಾಡೂಟ ಎಂದ್ರೆ ಪಂಚಪ್ರಾಣ. ಅದ್ರಲ್ಲೂ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಬಾಬುರಾಯನಕೊಪ್ಪಲಿನಲ್ಲಿ (Baburayan Koppalu) ಇರುವ ಜೈ ಭುವನೇಶ್ವರಿ ಹೊಟೇಲ್‌ನ (Jai Bhubaneswari Hotel) ಮಂಸಹಾರ ಎಂದರೆ ಪುನೀತ್ ಅವರಿಗೆ ಅಚ್ಚುಮೆಚ್ಚಿನ ಊಟ.

    ಈ ಹೊಟೇಲ್‌ನ ಕಾಲ್ ಸೂಫ್, ಬೋಟಿಗೊಜ್ಜು, ಮಟನ್ ಕುರ್ಮ, ಮುದ್ದೆ ಎಂದ್ರೆ ಪಂಚಪ್ರಾಣ. ಮೈಸೂರಿಗೆ ತೆರಳುವ ಮುನ್ನ ಹಾಗೂ ಈ ಭಾಗದಲ್ಲಿ ಶೂಟಿಂಗ್ ಮಾಡುವಾಗ ಈ ಹೊಟೇಲ್‌ನಲ್ಲಿ ಅವರು ಊಟ ಮಾಡಿ ಮುಂದಿನ ಕೆಲಸ ಮಾಡುತ್ತಿದ್ರು. ಜನ ಜಾಸ್ತಿ ಇದ್ದ ವೇಳೆಯಲ್ಲಿ ಕಾರಿಗೆ ತರಿಸಿಕೊಂಡು ತಿಂದು ಹೋದ ಎಷ್ಟೋ ಉದಾಹರಣೆಗಳು ಸಹ ಇವೆ. ಪುನೀತ್ ರಾಜ್‍ಕುಮಾರ್ ಅವರಿಗೆ ಈ ಹೊಟೇಲ್ ಪರಿಚಯ ಮಾಡಿಸಿದ್ದು, ಅವರ ತಂದೆಯಾದ ರಾಜ್‌ಕುಮಾರ್ ಅವರು ಎನ್ನುವುದು ವಿಶೇಷವಾಗಿದೆ. ಇದನ್ನೂ ಓದಿ:ವಿಯೆಟ್ನಾಂನಲ್ಲೂ ಕಾಂತಾರ ಕಂಪು – ಮೊದಲ ಬಾರಿಗೆ ಕನ್ನಡ ಚಿತ್ರ ಬಿಡುಗಡೆ 

    ರಾಜ್‌ಕುಮಾರ್ ಅವರಿಗೂ ಸಹ ಜೈ ಭುವನೇಶ್ವರಿ ಹೊಟೇಲ್ ಊಟ ಎಂದ್ರೆ ಪಂಚಪ್ರಾಣವಾಗಿತ್ತು. ಹೀಗಾಗಿ ತಮ್ಮ ಕುಟುಂಬ ಸಮೇತರಾಗಿ ಸಾಕಷ್ಟು ಬಾರಿ ಈ ಹೊಟೇಲ್‌ಗೆ ಬಂದಿದ್ದಾರೆ. 1970 ರಲ್ಲಿ ಆರಂಭವಾಗಿರುವ ಈ ಹೊಟೇಲ್ ಆರಂಭದಲ್ಲಿ ಶೆಡ್ ಹೊಟೇಲ್ ಆಗಿತ್ತು. ಇದೀಗ ಮಾರ್ಪಾಡಾಗಿದೆ. ಈ ಹೊಟೇಲ್‌ಗೆ ರಾಜ್‌ಕುಮಾರ್ ಅವರು ಹೆಚ್ಚಾಗಿ ಬರುತ್ತಿದ್ದ ಕಾರಣ ಈ ಭಾಗದ ಜನರು ಇಂದಿಗೂ ಈ ಹೊಟೇಲ್‌ನ್ನು ರಾಜ್‌ಕುಮಾರ್ ಹೊಟೇಲ್ ಎಂದೆ ಕರೆಯುತ್ತಾರೆ.

    ಇಲ್ಲಿನ‌ ಮಾಲೀಕರು ಹಾಗೂ ಸಿಬ್ಬಂದಿಗಳು ಅಪ್ಪು ಈ ಹೊಟೇಲ್‌ಗೆ ಬರುತ್ತಿದ್ದದ್ದು, ಇವರೊಂದಿಗೆ ಬೆರೆತು ಮಾತನಾಡುತ್ತಿದ್ದದು ಯಾವುದನ್ನು ಮರೆತಿಲ್ಲ. ಅದ್ರಲ್ಲೂ ಪುನೀತ್ ರಾಜ್‍ಕುಮಾರ್ ಅವರು ಸಿಬ್ಬಂದಿಗಳಿಗೆ ಯಾರಿಗೂ ಕಾಣದ ಹಾಗೆ ಟಿಪ್ಸ್ ಕೊಟ್ಟು ಬೆನ್ನು ತಟ್ಟಿ ಹೀಗೆ ಕೆಲಸ ಮಾಡಿಕೊಂಡು ಹೋಗಿ ಎಂದು ಹೇಳುತ್ತಿದ್ದ ಮಾತನ್ನಿ ಇಲ್ಲಿನ ಮಾಲೀಕರು ಇಂದು ಮರೆತಿಲ್ಲ. ಅಪ್ಪು ಅವರನ್ನು ಇಂದು ಎಂದೂ ಮರೆಯಲು ಸಾಧ್ಯವಿಲ್ಲ. ನಮ್ಮೊಂದಿಗೆ ಅವರು ಯಾವಾಗಲೂ ಇರುತ್ತಾರೆ ಎಂದು ಈ ಹೊಟೇಲ್ ಮಾಲೀಕರು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • `ಗಂಧದಗುಡಿ’ ಟೀಸರ್ ನೋಡಿದಾಗ ನೋವು, ಖುಷಿ ಎರಡೂ ಆಗುತ್ತದೆ: ಶಿವಣ್ಣ

    `ಗಂಧದಗುಡಿ’ ಟೀಸರ್ ನೋಡಿದಾಗ ನೋವು, ಖುಷಿ ಎರಡೂ ಆಗುತ್ತದೆ: ಶಿವಣ್ಣ

    ಸ್ಯಾಂಡಲ್‌ವುಡ್ ನಟ ಶಿವರಾಜ್‌ಕುಮಾರ್ (Shivarajkumar) ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಮಧ್ಯೆ ಶಕ್ತಿಧಾಮದ ಜವಾಬ್ದಾರಿ ಕೂಡ ನಿರ್ವಹಿಸುತ್ತಿದ್ದಾರೆ. ಪುನೀತ ಪರ್ವ ಕಾರ್ಯಕ್ರಮಕ್ಕೂ ನಟ ಸಾಥ್ ನೀಡುತ್ತಿದ್ದಾರೆ. ಇದೀಗ ಶಕ್ತಿಧಾಮಕ್ಕೆ ಭೇಟಿ ಕೊಟ್ಟ ವೇಳೆ `ಗಂಧದಗುಡಿ'(Gandagudi film) ಟೀಸರ್ ಬಗ್ಗೆ ಶಿವಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

    ಹ್ಯಾಟ್ರಿಕ್ ಹೀರೋ ಶಿವಣ್ಣ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆ ಆಗಾಗ ಶಕ್ತಿಧಾಮಕ್ಕೂ ಭೇಟಿ ಕೊಡುತ್ತಾರೆ. ಇದೀಗ ಮೈಸೂರಿನ ಶಕ್ತಿಧಾಮಕ್ಕೆ ಶಿವಣ್ಣ ಬಂದಿದ್ದಾರೆ. ಶಕ್ತಿಧಾಮದಲ್ಲಿ ಶಾಲಾ ಕಟ್ಟಡ ಕಟ್ಟುತ್ತಿದ್ದಾರೆ. ಭರದಿಂದ ಕಾರ್ಯ ನಡೆಯುತ್ತಿದೆ. ಪತ್ನಿ ಗೀತಾ ಅವರು ಶಕ್ತಿಧಾಮದಲ್ಲಿ ನಿರಂತರವಾಗಿ ಮಕ್ಕಳಿಗೆ ಕ್ಲಾಸ್ ಮಾಡ್ತಿದ್ದಾರೆ. ಮಕ್ಕಳಿಗೆ ಒಂದು ಸ್ಪೇಷಲ್ ಪ್ರಾಡೆಕ್ಟ್ ತಯಾರಿ ಬಗ್ಗೆ ಕಲಿಸುತ್ತಿದ್ದಾರೆ. ಒಂದು ಪ್ರಾಡೆಕ್ಟ್ ಶೀಘ್ರದಲ್ಲೇ ಲಾಂಚ್ ಮಾಡುವುದಾಗಿ ತಿಳಿಸಿದ್ದಾರೆ.

    ಈ ವೇಳೆ `ಗಂಧದಗುಡಿ’ ಟೀಸರ್ ನೋಡಿದ್ದಾಗ ನನಗೆ ನೋವು, ಖುಷಿ ಎರಡೂ ಆಗುತ್ತಿದೆ. ಚಿತ್ರದ ಟೀಸರ್‌ನಲ್ಲಿ ಅಪ್ಪು ನಗು ಮುಖ ನೋಡಿದ್ದಾಗ ಎಂಥವರಿಗೂ ನೋವು ಉಂಟಾಗುತ್ತದೆ. ಅಪ್ಪು ಹೋಗಿ ಒಂದು ವರ್ಷವಾಯ್ತಾ ಅಂತಾ ಅನ್ನಿಸುತ್ತಿದೆ. ಇದನ್ನೂ ಓದಿ:ʻಕಾಂತಾರʼ ಸಿನಿಮಾ ನೋಡದ ರಶ್ಮಿಕಾ ಮಂದಣ್ಣ ಬಗ್ಗೆ ಪ್ರಮೋದ್‌ ಶೆಟ್ಟಿ ಪ್ರತಿಕ್ರಿಯೆ

    ಜನ ಅಪ್ಪು ಬಗ್ಗೆ ತೋರಿಸಿದ ಪ್ರೀತಿಗೆ ಬೆಲೆ ಕಟ್ಟಲು ಆಗಲ್ಲ. ಅಭಿಮಾನಿಗಳ ಪ್ರೀತಿಗೆ ಏನು ಕೊಟ್ಟರೂ ಸಮವಿಲ್ಲ. ಇಂಥ ಪ್ರೀತಿ ಪಡೆಯೋಕೆ ನಾವು ಏನು ಪುಣ್ಯ ಮಾಡಿದ್ದೇವೂ ಗೊತ್ತಿಲ್ಲ. ಅಪ್ಪು ಪರ್ವದಲ್ಲಿ ಅಪ್ಪು ನಟಿಸಿದ ಸಿನಿಮಾ ಹಾಡಿಗೆ ಪುನೀತ ಪರ್ವದಲ್ಲಿ (Puneetha Parva) ನಾನು ಡ್ಯಾನ್ಸ್ ಮಾಡ್ತೀನಿ ಎಂದು ಶಿವಣ್ಣ ಭಾವುಕರಾಗಿದ್ದಾರೆ.

    ಇನ್ನೂ `ಗಂಧದ ಗುಡಿ’ ಚಿತ್ರದ ಪ್ರಿ ರಿಲೀಸ್ ಕಾರ್ಯಕ್ರಮ ಇದೇ ಅ.21ಕ್ಕೆ ಅರಮನೆ ಮೈದಾನದಲ್ಲಿ ನಡೆಯಲಿದೆ. ದಕ್ಷಿಣ ಸ್ಟಾರ್ಸ್ ಕೂಡ ಅಪ್ಪು ಕಾರ್ಯಕ್ರಮಕ್ಕೆ ಸಾಥ್ ನೀಡುತ್ತಿದ್ದಾರೆ. ಅಪ್ಪು ಕನಸಿನ ಸಿನಿಮಾ `ಗಂಧದಗುಡಿ’ ಅಕ್ಟೋಬರ್ 28ಕ್ಕೆ ತೆರೆಗೆ ಅಪ್ಪಳಿಸಲಿದೆ.

    Live Tv
    [brid partner=56869869 player=32851 video=960834 autoplay=true]

  • `ಪುನೀತ ಪರ್ವ’ ಕಾರ್ಯಕ್ರಮಕ್ಕೆ ಸಿಎಂಗೆ ಆಹ್ವಾನ ನೀಡಿದ ಅಣ್ಣಾವ್ರ ಕುಟುಂಬ

    `ಪುನೀತ ಪರ್ವ’ ಕಾರ್ಯಕ್ರಮಕ್ಕೆ ಸಿಎಂಗೆ ಆಹ್ವಾನ ನೀಡಿದ ಅಣ್ಣಾವ್ರ ಕುಟುಂಬ

    ವರ್ ಸ್ಟಾರ್ ಪುನೀತ್ ರಾಜ್‌ಕುಮಾರ್(Puneeth Rajkumar) ನಟನೆಯ `ಗಂಧದಗುಡಿ’ (Gandadagudi) ಸಾಕ್ಷ್ಯ ಚಿತ್ರ ತೆರೆಗೆ ಬರಲು ಕೌಂಟ್ ಡೌನ್ ಶುರುವಾಗಿದೆ. ಈ ಚಿತ್ರದ ಪ್ರೀ ರಿಲೀಸ್ ಇವೆಂಟ್‌ಗೆ ಭರ್ಜರಿ ತಯಾರಿ ಕೂಡ ನಡೆಯುತ್ತಿದೆ. ಈ ಅಂಗವಾಗಿ `ಪುನೀತ ಪರ್ವ’ (Puneeth Parva) ಕಾರ್ಯಕ್ರಮಕ್ಕೆ ಸಿಎಂ ಬೊಮ್ಮಾಯಿ ಅವರಿಗೆ ಡಾ.ರಾಜ್ ಕುಟುಂಬ ಆಹ್ವಾನ ನೀಡಿದ್ದಾರೆ.

    ಅಪ್ಪು ಅವರ ಕನಸಿನ ಪ್ರಾಜೆಕ್ಟ್ `ಗಂಧದ ಗುಡಿ'(Gandadagudi) ಹಾಗಾಗಿ ರಾಜ್ ಕುಟುಂಬದವರು ತುಂಬಾ ಕಾಳಜಿ ವಹಿಸಿ ಇದನ್ನು ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡುತ್ತಿದ್ದಾರೆ. ಸಿನಿಮಾದ ರೀತಿ ಚಿತ್ರಮಂದಿರದಲ್ಲೇ ಇದು ಬಿಡುಗಡೆ ಆಗಲಿದೆ. `ಗಂಧದಗುಡಿ’ ಟ್ರೈಲರ್ ಬಿಡುಗಡೆ ಆದ ಬಳಿಕ ಅನೇಕ ಗಣ್ಯರು ಪ್ರತಿಕ್ರಿಯೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಕನ್ನಡದ ಸ್ಟಾರ್ಸ್ ಜೊತೆ ದಕ್ಷಿಣದ ಸ್ಟಾರ್ಸ್ ಹಲವರು ಈ ಬಗ್ಗೆ ಟ್ವೀಟ್ ಮಾಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಅ.21ರಂದು ನಡೆಯಲಿರುವ ಪ್ರೀ-ರಿಲೀಸ್ ಕಾರ್ಯಕ್ರಮಕ್ಕೆ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆ ವಹಿಸಿಕೊಳ್ಳಬೇಕು ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ (Ashwini PuneethRajkumar) ಅವರು ವಿನಂತಿಸಿಕೊಂಡಿದ್ದಾರೆ. ಇನ್ನೂ ಈ ವೇಳೆ ರಾಘವೇಂದ್ರ ರಾಜ್‌ಕುಮಾರ್ (Raghavendra Rajkumar) ಮತ್ತು ಯುವ ರಾಜ್‌ಕುಮಾರ್ (Yuva Rajkumar) ಕೂಡ ಸಾಥ್ ನೀಡಿದ್ದಾರೆ. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು `ಪುನೀತ ಪರ್ವ’ ಎಂದು ಕರೆಯಲಾಗುತ್ತಿದೆ. ಅದಕ್ಕೆ ಭಾರತೀಯ ಚಿತ್ರರಂಗದ ಅನೇಕ ದಿಗ್ಗಜರು ಆಗಮಿಸುವ ನಿರೀಕ್ಷೆ ಇದೆ. ಈಗಾಗಲೇ ಹಲವರಿಗೆ ಆಮಂತ್ರಣ ಪತ್ರಿಕೆ ನೀಡಲಾಗಿದೆ. ಕರುನಾಡಿನ ಅರಣ್ಯ ಸಂಪತ್ತು, ವನ್ಯಜೀವಿಗಳ ಜಗತ್ತು, ಕಾಡಿನ ಜನರ ಬದುಕು ಸೇರಿದಂತೆ ಅನೇಕ ವಿಚಾರಗಳ ಮೇಲೆ ʻಗಂಧದ ಗುಡಿʼ ಸಾಕ್ಷ್ಯಚಿತ್ರ ಬೆಳಕು ಚೆಲ್ಲಿರೋದು ವಿಶೇಷ. ಇದನ್ನೂ ಓದಿ:ಮಿಡ್‌ನೈಟ್‌ನಲ್ಲಿ ಸಾನ್ಯ -ರೂಪೇಶ್‌ ಲವ್ವಿ ಡವ್ವಿ

    ಇನ್ನೂ `ಪುನೀತ ಪರ್ವ'(Puneeth Parva) ಕಾರ್ಯಕ್ರಮದ ಆಹ್ವಾನ ಪತ್ರಿಕೆ ವಿಶೇಷವಾಗಿದ್ದು, ಗಂಧದಿಂದ ಪುನೀತ್ ಪುತ್ಥಳಿ ಮಾಡಲಾಗಿದೆ. ಪುನೀತ್ ರಾಜ್‌ಕುಮಾರ್ ಎಂದು ಬರೆದಿರುವ ಹಸ್ತಾಕ್ಷರವಿದೆ. ಒಟ್ನಲ್ಲಿ ʻಪುನೀತ ಪರ್ವʼ ಕಾರ್ಯಕ್ರಮಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]