Tag: ಪುನೀತ್

  • ಐರಾಳ ಹುಟ್ಟುಹಬ್ಬದ ಪಾರ್ಟಿಯಲ್ಲಿ ದರ್ಶನ್, ಪುನೀತ್

    ಐರಾಳ ಹುಟ್ಟುಹಬ್ಬದ ಪಾರ್ಟಿಯಲ್ಲಿ ದರ್ಶನ್, ಪುನೀತ್

    ಬೆಂಗಳೂರು: ರಾಕಿಂಗ್ ದಂಪತಿ ಐರಾ ತನ್ನ ಮೊದಲ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾಳೆ. ಐರಾಳ ಮೊದಲ ಹುಟ್ಟುಹಬ್ಬಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಪವರ್ ಸ್ಟಾರ್ ಪುನೀತ್ ಸೇರಿದಂತೆ ಸ್ಯಾಂಡಲ್‍ವುಡ್‍ನ ಹಲವು ಕಲಾವಿದರು ಭಾಗಿಯಾಗಿದ್ದರು.

    ಐರಾಳ ಹುಟ್ಟುಹಬ್ಬಕ್ಕಾಗಿ ವಿಶೇಷವಾದ ದೊಡ್ಡ ಕೇಕ್ ತಯಾರಿಸಲಾಗಿತ್ತು. ಐರಾ ಈ ಕೇಕ್ ಅನ್ನು ಕಟ್ ಮಾಡಿ ತನ್ನ ಮೊದಲ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾಳೆ. ಐರಾಳ ಹುಟ್ಟುಹಬ್ಬದ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಬರ್ತ್ ಡೇಗೂ ಮುನ್ನವೇ ಐರಾಳ ಕ್ಯೂಟ್ ಫೋಟೋಶೂಟ್

     

    View this post on Instagram

     

    Ayra birthday party. . @thenameisyash @iamradhikapandit @dhruva_sarjaa @ayra_yashofficial @ayra_yashofficial @ayra_yashofficial

    A post shared by #Ayra Yash???? (@ayra_yashofficial) on

    ಯಶ್ ಮಗಳ ಹುಟ್ಟುಹಬ್ಬಕ್ಕೆ ನಟಿ ಭಾರತಿ ವಿಷ್ಣುವರ್ಧನ್, ಸಂಸದೆ ಸುಮಲತಾ ಅಂಬರೀಶ್, ನಟರಾದ ದರ್ಶನ್, ಪುನೀತ್ ರಾಜ್‍ಕುಮಾರ್, ಧ್ರುವ ಸರ್ಜಾ,  ಅನಿರುದ್ಧ, ಅಭಿಷೇಕ್ ಅಂಬರೀಶ್ ಹಾಗೂ ಉದ್ಯಮಿಯಾದ ಅಶೋಕ್ ಖೇಣಿ ಭಾಗಿಯಾಗಿದ್ದಾರೆ. ಇವರ ಹೊರತಾಗಿ ಐರಾ ಹುಟ್ಟುಹಬ್ಬಕ್ಕೆ ಯಶ್ ಹಾಗೂ ರಾಧಿಕಾ ಕುಟುಂಬಸ್ಥರು ಆಗಮಿಸಿದ್ದರು. ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮದಲ್ಲಿ ರಾಕಿಂಗ್ ದಂಪತಿಯ ಪುತ್ರಿ

     

    View this post on Instagram

     

    To the one who is a piece of my heart, a part of my soul ♥️ HAPPY BIRTHDAY my angel ???? #radhikapandit #nimmaRP

    A post shared by Radhika Pandit (@iamradhikapandit) on

    ಮಗಳ ಮೊದಲ ಹುಟ್ಟುಹಬ್ಬವಿರುವ ಹಿನ್ನೆಲೆಯಲ್ಲಿ ರಾಧಿಕಾ ತಮ್ಮ ಇನ್‍ಸ್ಟಾದಲ್ಲಿ ಮಗಳ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದರು. ಅದಕ್ಕೆ, “ನನ್ನ ಹೃದಯದ ಹಾಗೂ ಆತ್ಮದ ಒಂದು ಭಾಗ ನೀನು, ನನ್ನ ಏಂಜೆಲ್‍ಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆದುಕೊಂಡಿದ್ದರು.

    ಇತ್ತ ಯಶ್ ಕೂಡ ಮಗಳನ್ನು ಎತ್ತಿಕೊಂಡಿರುವ ಫೋಟೋವನ್ನು ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದರು. “ನಿನ್ನ ತಂದೆ ಆಗಿರುವುದರಿಂದ ನನ್ನಲ್ಲಿರುವ ಮೃದುವಾದ ಭಾಗವನ್ನು ಹೊರ ತಂದಿದೆ. ನೀನು ನನ್ನ ಶಕ್ತಿ, ನನ್ನ ದೌರ್ಬಲ್ಯ, ನನ್ನ ಸರ್ವಸ್ವವೂ ನೀನೇ. ನನ್ನ ರಾಜಕುಮಾರಿಗೆ ಹುಟ್ಟುಹಬ್ಬದ ಶುಭಾಶಯಗಳು” ಎಂದು ಬರೆದು ಪೋಸ್ಟ್ ಮಾಡಿದ್ದರು.

  • ತಂದೆ ಹೇಳಿದ್ದನ್ನ ಅಪ್ಪು ಸರ್ ನಿರೂಪಿಸಿದ್ರು: ಶಂಕರ್ ಅಶ್ವಥ್

    ತಂದೆ ಹೇಳಿದ್ದನ್ನ ಅಪ್ಪು ಸರ್ ನಿರೂಪಿಸಿದ್ರು: ಶಂಕರ್ ಅಶ್ವಥ್

    ಮೈಸೂರು: ನಟ ಪುನೀತ್ ರಾಜ್‍ಕುಮಾರ್ ಅವರು ಶನಿವಾರ ಹಿರಿಯ ನಟ ಶಂಕರ್ ಅಶ್ವಥ್ ಮನೆಗೆ ಭೇಟಿ ನೀಡಿದ್ದರು. ಆ ಸಂತಸದ ಕ್ಷಣವನ್ನು ತಮ್ಮ ತಂದೆ ಮತ್ತು ಡಾ.ರಾಜ್‍ಕುಮಾರ್ ಬಗ್ಗೆ ನೆನೆದು ಫೇಸ್‍ಬುಕ್ ಪೋಸ್ಟ್ ಮಾಡಿದ್ದಾರೆ.

    ಮೈಸೂರಿನ ಸರಸ್ವತಿ ಪುರಂನಲ್ಲಿನ ನಟ ಶಂಕರ್ ಅಶ್ವಥ್ ಮನೆಗೆ ಶನಿವಾರ ಬೆಳಗ್ಗೆ ಪುನೀತ್ ಹೋಗಿದ್ದು, ಅವರ ಮೆನೆಯಲ್ಲಿಯೇ ಉಪ್ಪಿಟ್ಟು ಕೇಸರಿಬಾತ್ ಸವಿದಿದ್ದರು.

    ಫೇಸ್‍ಬುಕ್ ಪೋಸ್ಟ್:
    ಇದು ನಾ ಕಂಡ ಸತ್ಯ ಎಂದು ಮೊದಲಿಗೆ ಶುರು ಮಾಡಿದ್ದು, ತಂದೆ ಮಹಾರಾಜ, ಮಗ ರಾಜಕುಮಾರ, ಡಾ.ರಾಜ್ ಅವರಲ್ಲಿ ಇದ್ದ ಅತಿ ದೊಡ್ಡ ಶಕ್ತಿ ಎಂದರೆ ವಿನಯ, ತಾಳ್ಮೆ, ಸಹನೆ, ಸೈರಣೆ, ವಿಶಾಲತೆ, ಬಹುಶಃ ಅದು ಅವರ ಹುಟ್ಟಿನಿಂದಲೇ ಬಂದಿರಬಹುದು ಎಂದು ನಾನು ಹೇಳುತ್ತಿರುವುದಲ್ಲಾ ಇದು ನನ್ನ ತಂದೆ ನನಗೆ ಹೇಳಿದ್ದು. ಒಬ್ಬ ಮಹಾರಾಜನಿಗೆ ಇರಬೇಕಾದ ಗುಣಗಳ ಕೆಲವೊಂದು ಅಂಶಗಳು ಅವರ ವಂಶದ ಕುಡಿಯಲ್ಲೂ ಕಾಣಬಹುದು.

    ನನ್ನ ತಂದೆ ಅಪ್ಪು ಸರ್ ಜೊತೆಯಲ್ಲಿ ಮೊದಲನೆಯ ಬಾರಿಗೆ ನಟಿಸುವಾಗ “ಈ ಮಗುವಿಗೆ ಅಣ್ಣಾ ಅವರ ಎಲ್ಲಾ ಅಂಶಗಳು ಇದೆ. ಮುಂದೆ ಇನ್ನೊಬ್ಬ ರಾಜಕುಮಾರ ಆಗುತ್ತಾನೆ” ಎಂದು ಹೇಳಿದ್ದರು. ಅದನ್ನು ಇಂದು ಅಪ್ಪು ಸರ್ ನಿರೂಪಿಸಿದರು. ಮೇಲಿರುವ ಆ ಎರಡು ಜೀವಗಳು ಇದನ್ನು ನೋಡಿ ಎಷ್ಟು ಸಂತುಷ್ಟರಾಗಿರಬಹುದು ಎಂದು ತಮ್ಮ ತಂದೆ ಮತ್ತು ರಾಜ್‍ಕುಮಾರ್ ಬಗ್ಗೆ ನೆನೆದು ಬರೆದುಕೊಂಡಿದ್ದಾರೆ.

    https://www.facebook.com/shankaraswath7/photos/a.873271889456171/2185407634909250/?type=3&theater

    ಮೈಸೂರಿನಲ್ಲಿ ನಡೆಯುತ್ತಿದ್ದ `ಯುವರತ್ನ’ ಸಿನಿಮಾ ಶೂಟಿಂಗ್‍ನಲ್ಲಿ ಪುನೀತ್ ಭಾಗಿಯಾಗಿದ್ದರು. ಈ ವಿಚಾರ ತಿಳಿದ ಶಂಕರ್ ಅಶ್ವಥ್, ಪುನೀತ್ ಅವರನ್ನು ಮನೆಗೆ ಬರುವಂತೆ ಮನವಿ ಮಾಡಿಕೊಂಡಿದ್ದರು. ಅವರ ಮನವಿ ಮೇರೆಗೆ ಪುನೀತ್ ನಿನ್ನೆ ಶಂಕರ್ ಅವರ ಮನೆಗೆ ಭೇಟಿ ನೀಡಿದ್ದರು.

    ಮನೆಗೆ ಹೋದಾಗ ಶಂಕರ್ ಅಶ್ವಥ್ ತಾಯಿ ಶಾರದಮ್ಮ ಅವರ ಕಾಲಿಗೆ ನಮಸ್ಕಾರ ಮಾಡಿ ಪುನೀತ್ ಆಶೀರ್ವಾದ ಪಡೆದುಕೊಂಡಿದ್ದಾರೆ. ನಂತರ ಅರ್ಧ ಗಂಟೆಗಳ ಕಾಲ ಶಂಕರ್ ಅಶ್ವಥ್ ಮನೆಯವರ ಜೊತೆ ಕಾಲ ಕಳೆದಿದ್ದರು.

  • ಶಂಕರ್ ಅಶ್ವಥ್ ಮನೆಗೆ ಅಪ್ಪು -ಉಪ್ಪಿಟ್ಟು, ಕೇಸರಿಬಾತ್ ಸವಿದು ಆಶೀರ್ವಾದ ಪಡೆದ್ರು

    ಶಂಕರ್ ಅಶ್ವಥ್ ಮನೆಗೆ ಅಪ್ಪು -ಉಪ್ಪಿಟ್ಟು, ಕೇಸರಿಬಾತ್ ಸವಿದು ಆಶೀರ್ವಾದ ಪಡೆದ್ರು

    ಮೈಸೂರು: ನಟ ಪುನೀತ್ ರಾಜ್‍ಕುಮಾರ್ ಅವರು ಹಿರಿಯ ನಟ ಶಂಕರ್ ಅಶ್ವಥ್ ಮನೆಗೆ ತೆರಳಿ ಅವರ ಕುಟುಂಬದವರನ್ನು ಭೇಟಿ ಮಾಡಿದ್ದಾರೆ.

    ಮೈಸೂರಿನ ಸರಸ್ವತಿ ಪುರಂನಲ್ಲಿನ ನಟ ಶಂಕರ್ ಅಶ್ವಥ್ ಮನೆಗೆ ಇಂದು ಬೆಳಗ್ಗೆ ಪುನೀತ್ ಹೋಗಿದ್ದು, ಅವರ ಮೆನೆಯಲ್ಲಿಯೇ ಉಪ್ಪಿಟ್ಟು ಕೇಸರಿಬಾತ್ ಸವಿದಿದ್ದಾರೆ. ಮೈಸೂರಿನಲ್ಲಿ ನಡೆಯುತ್ತಿದ್ದ ‘ಯುವರತ್ನ’ ಸಿನಿಮಾ ಶೂಟಿಂಗ್‍ನಲ್ಲಿ ಪುನೀತ್ ಭಾಗಿಯಾಗಿದ್ದರು. ಈ ವಿಚಾರ ತಿಳಿದ ಶಂಕರ್ ಅಶ್ವಥ್, ಪುನೀತ್ ಅವರನ್ನು ಮನೆಗೆ ಬರುವಂತೆ ಮನವಿ ಮಾಡಿಕೊಂಡಿದ್ದರು.

    ಅವರ ಮನವಿ ಮೇರೆಗೆ ಪುನೀತ್ ಇಂದು ಶಂಕರ್ ಅವರ ಮನೆಗೆ ಭೇಟಿ ನೀಡಿದ್ದಾರೆ. ಮನೆಗೆ ಹೋದಾಗ ಶಂಕರ್ ಅಶ್ವಥ್ ತಾಯಿ ಶಾರದಮ್ಮ ಅವರ ಕಾಲಿಗೆ ನಮಸ್ಕಾರ ಮಾಡಿ ಪುನೀತ್ ಆಶೀರ್ವಾದ ಪಡೆದುಕೊಂಡಿದ್ದಾರೆ. ನಂತರ ಅರ್ಧ ಗಂಟೆಗಳ ಕಾಲ ಶಂಕರ್ ಅಶ್ವಥ್ ಮನೆಯವರ ಜೊತೆ ಕಾಲ ಕಳೆದಿದ್ದಾರೆ.

    ಇತ್ತೀಚೆಗಷ್ಟೆ ಪುನೀತ್ ಮತ್ತು ಯಶ್ ಕೂಡ ಭೇಟಿಯಾಗಿದ್ದು, ಅವರಿಬ್ಬರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ನಂತರ ಮರುದಿನ ಮತ್ತೆ ಯಶ್ ಮತ್ತು ಅಪ್ಪು ಒಟ್ಟಿಗೆ ಭೇಟಿಯಾಗಿ ಊಟ ಕೂಡ ಮಾಡಿದ್ದರು. ಯಶ್ ಅಭಿನಯದ ‘ಕೆಜಿಎಫ್ 2’ ಚಿತ್ರದ ಚಿತ್ರೀಕರಣ ಕೂಡ ಮೈಸೂರಿನಲ್ಲಿ ನಡೆಯುತ್ತಿದೆ. ಹೀಗಾಗಿ ಇಬ್ಬರು ನಟರು ಭೇಟಿಯಾಗಿ ಮಾತುಕತೆ ನಡೆಸಿದ್ದರು.

  • ಮನೆಯಿಂದ ಹೊರ ಹೋಗ್ತಿದ್ದಂತೆ ಪುನೀತ್‍ರಿಂದ ಎಫ್‍ಬಿ ಲೈವ್

    ಮನೆಯಿಂದ ಹೊರ ಹೋಗ್ತಿದ್ದಂತೆ ಪುನೀತ್‍ರಿಂದ ಎಫ್‍ಬಿ ಲೈವ್

    ಬೆಂಗಳೂರು: ನಟ ಪುನೀತ್ ರಾಜ್‍ಕುಮಾರ್ ಅವರು ಐಟಿ ದಾಳಿ ಮುಗಿದ ತಕ್ಷಣ ಮನೆಯಿಂದ ಹೊರ ಬಂದು ಅಭಿಮಾನಿಗಳನ್ನು ಮಾತನಾಡಿಸಿ ಹುಬ್ಬಳ್ಳಿಗೆ ತೆರಳಿದ್ದಾರೆ. ಈ ವೇಳೆ ಕಾರಿನಲ್ಲಿಯೇ ಫೇಸ್‍ಬುಕ್ ಲೈವ್ ಮಾಡಿ ಮಾತನಾಡಿದ್ದಾರೆ.

    ನಟ ಪುನೀತ್ ಮನೆಯಿಂದ ಹೊರ ಬರುತ್ತಿದ್ದಂತೆ ಮಾಧ್ಯಮಗಳ ಜೊತೆ ಕೆಲವು ಕ್ಷಣ ಮಾತನಾಡಿದ್ದು, ಐಟಿ ಅಧಿಕಾರಿಗಳು ಬಂದು ಅವರ ಕೆಲಸ ಏನು ಅದನ್ನು ಮಾಡಿದ್ದಾರೆ. ಅವರಿಗೆ ನಾವು ಸಹಕರಿಸಿದ್ದೇವೆ. ಐಟಿ ಅಧಿಕಾರಿಗಳು ತುಂಬಾ ಪ್ರೊಫೆಶನಲ್ ಆಗಿ ಕೆಲಸ ಮಾಡಿದ್ದಾರೆ. ಏನು ತೊಂದರೆ ಆಗಿಲ್ಲ ಎಂದು ಕಾರು ಹತ್ತಿ ಹೊರಟ್ಟಿದ್ದಾರೆ.

    ಕಾರ ಹತ್ತಿದ ತಕ್ಷಣ ಪುನೀತ್ ಫೇಸ್‍ಬುಕ್‍ನಲ್ಲಿ ಲೈವ್ ಬಂದು, ಎಲ್ಲರಿಗೂ ನಮಸ್ಕಾರ, ಇಂದು ಸಂಜೆ ನಮ್ಮ ಸಿನಿಮಾ ‘ನಟಸಾರ್ವಭೌಮ’ ಆಡಿಯೋ ರಿಲೀಸ್ ಹುಬ್ಬಳ್ಳಿಯಲ್ಲಿ ಆಗುತ್ತಿದೆ. ಆದ್ದರಿಂದ ನಾವೆಲ್ಲ ಬರುತ್ತಿದ್ದೇವೆ. ನಿಮ್ಮನ್ನು ಅಲ್ಲಿಯೇ ಭೇಟಿ ಮಾಡುತ್ತೇವೆ. ಎಲ್ಲರೂ ಬನ್ನಿ ಕಾರ್ಯಕ್ರಮವನ್ನು ಎಂಜಾಯ್ ಮಾಡಿ” ಎಂದು ಹೇಳಿದ್ದಾರೆ.

    ಇಂದು ಹುಬ್ಬಳ್ಳಿಯ ನೆಹರು ಕ್ರೀಡಾಂಗಣದಲ್ಲಿ ಸಂಜೆ ಸುಮಾರು 5 ಗಂಟೆಗೆ ಪುನೀತ್ ಅಭಿನಯದ `ನಟಸಾರ್ವಭೌಮ’ ಸಿನಿಮಾದ ಧ್ವನಿಸುರುಳಿ ಬಿಡುಗಡೆಯಾಗುತ್ತಿದೆ. ಪುನೀತ್ ಮನೆಯ ಐಟಿ ದಾಳಿ ಶುಕ್ರವಾರ ರಾತ್ರಿ ಅಂತ್ಯಗೊಂಡಿರುವ ಹಿನ್ನೆಲೆಯಲ್ಲಿ ಇಂದು ಕಾರ್ಯಕ್ರಮಕ್ಕೆ ಹೋಗಲು ಅಧಿಕಾರಿಗಳು ಅವಕಾಶ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಟ ಪುನೀತ್ ಹುಬ್ಬಳ್ಳಿಗೆ ಹೊರಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಟ ಪುನೀತ್, ಯಶ್ ಮನೆಯಲ್ಲಿ ಎಷ್ಟು ಆಸ್ತಿ ಪತ್ತೆಯಾಗಿದೆ?

    ನಟ ಪುನೀತ್, ಯಶ್ ಮನೆಯಲ್ಲಿ ಎಷ್ಟು ಆಸ್ತಿ ಪತ್ತೆಯಾಗಿದೆ?

    ಬೆಂಗಳೂರು: ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ನಿರಂತರವಾಗಿ ಸ್ಟಾರ್ ಗಳ ಮನೆಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು ಪುನೀತ್ ರಾಜ್ ಕುಮಾರ್ ಮನೆಯ ತಪಾಸಣೆ ಮುಗಿದಿದೆ.

    ಪ್ರತಿ ದಾಖಲೆ ಪತ್ರಗಳ ಪರಿಶೀಲನೆ ನಡೆಸುತ್ತಿದ್ದು, ಸಂಪಾದಿಸಿದ್ದ, ಸಂಪಾದನೆ ಮಾಡುತ್ತಿರುವ ಲೆಕ್ಕವನ್ನೆಲ್ಲಾ ಕ್ರೋಢೀಕರಿಸುತ್ತಿದ್ದಾರೆ. ಸ್ಟಾರ್ ನಟರು ಕೇವಲ ಆಕ್ಟಿಂಗ್‍ನಲ್ಲಿ ಮಾತ್ರ ತೊಡಗಿಸಿಕೊಂಡಿಲ್ಲ. ಆಕ್ಟರ್ ಕಮ್ ಬಿಸಿನೆಸ್‍ಮೆನ್‍ಗಳಾಗಿದ್ದೇ ಇವತ್ತಿನ ಐಟಿ ರೇಡ್‍ಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ತೆರಿಗೆ ಇಲಾಖೆಗೆ ನಾವು ನಾಗರಿಕರಾಗಿ ಸಹಕಾರ ನೀಡಿದ್ದೇವೆ – ಪುನೀತ್ ಮೊದಲ ಪ್ರತಿಕ್ರಿಯೆ

    ನಟ ಪುನೀತ್ ಮತ್ತು ಯಶ್ ಮನೆಯಲ್ಲಿ ದೊರೆತ ಆಸ್ತಿಯ ಲೆಕ್ಕಗಳನ್ನು ನೋಡುವುದಾದರೆ, ಬೆಂಗಳೂರಿನಲ್ಲಿ ಪುನೀತ್ ಹೆಸರಲ್ಲಿ 10 ಆಸ್ತಿ ಪತ್ತೆಯಾಗಿದೆ. ಗಾಂಧಿನಗರದ 6ನೇ ಕ್ರಾಸ್, ಹೆಣ್ಣೂರು, ಥಣಿಸಂದ್ರ, ಕೆಂಪಾಪುರ, ಚಿರಂಜೀವಿ ಲೇಔಟ್, ರಾಜಾಜಿನಗರದ 1ನೇ ಬ್ಲಾಕ್‍ನಲ್ಲಿ ಆಸ್ತಿ ಹೊಂದಿದ್ದು, ಕೆಂಪಾಪುರ, ಚಿರಂಜೀವಿ ಲೇಔಟ್‍ನಲ್ಲಿ 3, ಕೋರಮಂಗಲದಲ್ಲಿ ಕಮರ್ಷಿಯಲ್ ಪ್ರಾಪರ್ಟಿ ಮಾಡಿದ್ದಾರೆ. ಇನ್ನೂ ಪಿಆರ್ ಕೆ ಪ್ರೊಡಕ್ಷನ್, ಪಿಆರ್ ಕೆ ಆಡಿಯೋ ವ್ಯವಹಾರ ಬಗ್ಗೆ ಮಾಹಿತಿ ಸಂಗ್ರಹವಾಗಿದೆ. ಇಡೀ ವ್ಯವಹಾರದ ಬಗ್ಗೆ ಮಾಹಿತಿ ನೀಡಲು ನಟ ಪುನೀತ್ ಐಟಿ ಅಧಿಕಾರಿಗಳ ಬಳಿ ಕಾಲಾವಕಾಶ ಕೋರಿದ್ದಾರೆ. ಇದನ್ನೂ ಓದಿ: 20ಕೆಜಿ ಬೆಳ್ಳಿ, 450ಗ್ರಾಂ ಚಿನ್ನ, 1 ವಜ್ರದ ಸರ, 2 ಪ್ಲಾಟಿನಂ ಸರ- ಯಶ್ ಮನೆಯಲ್ಲಿ ಪತ್ತೆ..?

    ಇತ್ತ ಯಶ್ ಮನೆಯಲ್ಲಿ 20 ಕೆಜಿಗೂ ಅಧಿಕ ಬೆಳ್ಳಿ, ಸುಮಾರು 450 ಗ್ರಾಂ ಚಿನ್ನ, 1 ವಜ್ರದ ಸರ, 2 ಪ್ಲಾಟಿನಮ್ ಸರ ಪತ್ತೆಯಾಗಿವೆ. ಅಷ್ಟೇ ಅಲ್ಲದೇ 2 ಬ್ಯಾಂಕ್‍ಗಳಲ್ಲಿ 40 ಕೋಟಿ ಸಾಲ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಲಭಿಸಿದೆ. 8 ಬ್ಯಾಂಕ್ ಖಾತೆ ಹೊಂದಿರುವ ಯಶ್, ತಾಯಿ ಜೊತೆ 4 ಜಂಟಿ ಖಾತೆಯನ್ನು ಹೊಂದಿದ್ದಾರೆ. ಮಂಡ್ಯದಲ್ಲಿ 8 ಎಕರೆ ಜಮೀನು ಖರೀದಿ ಮಾಡಿದ್ದಾರೆ. ಅಧಿಕಾರಿಗಳ ಪ್ರತಿ ಪ್ರಶ್ನೆಗೂ ಸಹನೆಯಿಂದ ಯಶ್ ತಾಯಿ ಉತ್ತರಿಸಿದ್ದಾರೆ ಐಟಿ ಮೂಲಗಳಿಂದ ತಿಳಿದು ಬಂದಿದೆ.

    ಸದ್ಯಕ್ಕೆ ಇಬ್ಬರ ನಟರ ಆಸ್ತಿ ಮಾಹಿತಿ ಲಭ್ಯವಾಗಿದ್ದು, ಇನ್ನಿಬ್ಬರ ಮಾಹಿತಿಯನ್ನು ಐಟಿ ಅಧಿಕಾರಿಗಳು ಕಲೆಹಾಕಲಾಗುತ್ತಿದೆ. ನಟ ಪುನೀತ್ ರಾಜ್‍ಕುಮಾರ್ ಮನೆಯ ಮೇಲಿನ ಐಟಿ ರೇಡ್ ಮುಗಿದಿದ್ದು, ನಟ ಯಶ್, ಸುದೀಪ್ ಮತ್ತು ಶಿವರಾಜ್‍ಕುಮಾರ್ ಮನೆಯಲ್ಲಿ ಮೂರನೇ ದಿನವೂ ಐಟಿ ದಾಳಿ ಮುಂದುವರಿದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತೆರಿಗೆ ಇಲಾಖೆಗೆ ನಾವು ನಾಗರಿಕರಾಗಿ ಸಹಕಾರ ನೀಡಿದ್ದೇವೆ – ಪುನೀತ್ ಮೊದಲ ಪ್ರತಿಕ್ರಿಯೆ

    ತೆರಿಗೆ ಇಲಾಖೆಗೆ ನಾವು ನಾಗರಿಕರಾಗಿ ಸಹಕಾರ ನೀಡಿದ್ದೇವೆ – ಪುನೀತ್ ಮೊದಲ ಪ್ರತಿಕ್ರಿಯೆ

    – 1984ರಲ್ಲಿಯೇ ನಮ್ಮ ಮನೆಯ ಮೇಲೆ ಐಟಿ ದಾಳಿ ನಡೆದಿತ್ತು
    – ಅಧಿಕಾರಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದೇವೆ

    ಬೆಂಗಳೂರು: ನಟ ಪುನೀತ್ ರಾಜ್‍ಕುಮಾರ್ ಮನೆಯಲ್ಲಿ ಐಟಿ ರೇಡ್ ಶುಕ್ರವಾರ ರಾತ್ರಿ 11.30ಕ್ಕೆ ಅಂತ್ಯವಾಗಿದ್ದು, ಈ ಬಗ್ಗೆ ಮೊದಲ ಬಾರಿಗೆ ನಟ ಪುನೀತ್ ಪ್ರತಿಕ್ರಿಯೆ ನೀಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ತೆರಿಗೆ ಇಲಾಖೆ ಅವರು ಬಂದು ನಮ್ಮ ಮನೆಯನ್ನು ರೇಡ್ ಮಾಡಿದ್ದಾರೆ. ನಾವು ನಾಗರಿಕರಾಗಿ ಅವರಿಗೆ ಸಹಕರಿಸಬೇಕು. ಈಗ ರೇಡ್ ಮುಗಿದಿದ್ದು, ಅದರ ಪ್ರಕ್ರಿಯೆ ಇನ್ನೂ ಒಂದು ಗಂಟೆ ನಡೆಯುತ್ತದೆ. ನಾವು ಅವರಿಗೆ ಏನು ತೊಂದರೆ ಕೊಟ್ಟಿಲ್ಲ. ಅದೇ ರೀತಿ ಅವರು ಕೂಡ ನಮಗೆ ಯಾವುದೇ ರೀತಿಯ ತೊಂದರೆ ಮಾಡಿಲ್ಲ. ತೆರಿಗೆ ಇಲಾಖೆಗೆ ನಾಗರಿಕರಾಗಿ ಸಹಕರಿಸಿದ್ದೇವೆ ಅಷ್ಟೇ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಂತಿಮ ಹಂತಕ್ಕೆ ತಲುಪಿದ ಪುನೀತ್, ಶಿವಣ್ಣ ಮನೆ ರೇಡ್

    ಯಾರೇ ಆಗಲಿ ಅವರ ಅಕೌಂಟ್ ವಿಚಾರದಲ್ಲಿ ವ್ಯತ್ಯಾಸ ಕಂಡು ಬಂದರೆ ತೆರಿಗೆ ಇಲಾಖೆ ಅವರು ರೇಡ್ ಮಾಡುತ್ತಾರೆ. ಅವರಿಗೆ ಬಂದಿದ್ದ ಮಾಹಿತಿ ಮೇರೆಗೆ ನಮ್ಮ ಮನೆಯ ಮೇಲೆ ರೇಡ್ ಮಾಡಿದ್ದಾರೆ. ಅವರು ಕೇಳಿದ ಎಲ್ಲ ಪ್ರಶ್ನೆಗಳಿಗೂ ನಾವು ಸಂಪೂರ್ಣವಾಗಿ ಉತ್ತರ ಕೊಟ್ಟಿದ್ದೇವೆ. ನಮ್ಮ ಮನೆಯ ಮೇಲೆ 1984ರಲ್ಲಿ ಚೆನ್ನೈ, ಬೆಂಗಳೂರು ಮತ್ತು ನಮ್ಮ ಫಾರ್ಮ್ ಹೌಸ್ ನಲ್ಲಿ ನಡೆದಿತ್ತು. ಅದೇ ರೀತಿ ಈಗಲೂ ಮಾಡಿದ್ದಾರೆ ಅಷ್ಟೇ ಎಂದು ಪುನೀತ್ ಐಟಿ ದಾಳಿಯ ಬಗ್ಗೆ ಹೇಳಿದ್ದಾರೆ. ಇದನ್ನೂ ಓದಿ: ಐಟಿ ಅಧಿಕಾರಿಗಳ ಬಳಿ ಕಾಲಾವಕಾಶ ಕೇಳಿದ ಪುನೀತ್

    ಇಂದು ಹುಬ್ಬಳ್ಳಿಯಲ್ಲಿ ಪುನೀತ್ ಅಭಿನಯದ ‘ನಟಸಾರ್ವಭೌಮ’ ಸಿನಿಮಾದ ಧ್ವನಿಸುರುಳಿ ಬಿಡುಗಡೆಯಾಗುತ್ತಿದೆ. ಪುನೀತ್ ಮನೆಯ ಐಟಿ ದಾಳಿ ಶುಕ್ರವಾರ ಅಂತ್ಯಗೊಂಡಿರುವ ಹಿನ್ನೆಲೆಯಲ್ಲಿ ಇಂದು ಕಾರ್ಯಕ್ರಮಕ್ಕೆ ಹೋಗಲು ಅಧಿಕಾರಿಗಳು ಅವಕಾಶ ನೀಡಿದ್ದಾರೆ. ಹುಬ್ಬಳ್ಳಿಯ ನೆಹರು ಕ್ರೀಡಾಂಗಣದಲ್ಲಿ ಸಂಜೆ ಸುಮಾರು 5 ಗಂಟೆಗೆ ಕಾರ್ಯಕ್ರಮ ನಡೆಯಲಿದೆ.

    ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್, ಕವಿರಾಜ್ ಮತ್ತು ಪವನ್ ವಡೆಯರ್ ಅವರ ಸಾಹಿತ್ಯದಲ್ಲಿ ಹಾಡುಗಳು ಮೂಡಿಬಂದಿವೆ. ಹೀಗಾಗಿ ಧ್ವನಿ ಸುರುಳಿ ಬಿಡುಗಡೆಗಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಇನ್ನು ಕಾರ್ಯವನ್ನು ಕಣ್ತುಂಬಿಕೊಳ್ಳಲು ಇಡೀ ಹುಬ್ಬಳ್ಳಿಯ ಜನತೆ ಕಾದು ಕುಳಿತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗೊಂದಲ ಬೇಡ, ಶನಿವಾರ ನಟಸಾರ್ವಭೌಮ ಆಡಿಯೋ ರಿಲೀಸ್ – ಪವನ್ ಒಡೆಯರ್ ಸ್ಪಷ್ಟನೆ

    ಗೊಂದಲ ಬೇಡ, ಶನಿವಾರ ನಟಸಾರ್ವಭೌಮ ಆಡಿಯೋ ರಿಲೀಸ್ – ಪವನ್ ಒಡೆಯರ್ ಸ್ಪಷ್ಟನೆ

    ಹುಬ್ಬಳ್ಳಿ: ನಟ ಪುನೀತ್ ರಾಜ್ ಕುಮಾರ್ ಮತ್ತು ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ನಿವಾಸದ ಮೇಲೆ ಐಟಿ ದಾಳಿಯಾದ ಹಿನ್ನೆಲೆಯಲ್ಲಿ ಶನಿವಾರ ನಡೆಯಬೇಕಿದ್ದ ನಟಸಾರ್ವಭೌಮ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮ ಮುಂದೂಡಿಕೆ ಆಗಲಿದೆ ಎನ್ನುವ ಗಾಳಿ ಸುದ್ದಿಗೆ ನಿರ್ದೇಶಕ ಪವನ್ ಒಡೆಯರ್ ಬ್ರೇಕ್ ಹಾಕಿದ್ದಾರೆ.

    ಪವನ್ ಒಡೆಯರ್ ಅವರು ಫೇಸ್‍ಬುಕ್ ನಲ್ಲಿ ಲೈವ್ ಬಂದು, ಎಲ್ಲರಿಗೂ ನಮಸ್ಕಾರ, ನಾಳೆ ‘ನಟಸಾರ್ವಭೌಮ’ ಸಿನಿಮಾದ ಆಡಿಯೋ ರಿಲೀಸ್ ಆಗುತ್ತಾ ಎಂಬ ಎಲ್ಲರಿಗೂ ಗೊಂದಲ ಇದೆ. ಶನಿವಾರ ಹುಬ್ಬಳ್ಳಿಯ ನೆಹರು ಕ್ರೀಡಾಂಗಣದಲ್ಲಿ ನಟಸಾರ್ವಭೌಮ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮ ನಿಮ್ಮೆಲ್ಲರ ಸಮ್ಮುಖದಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.

    ಎಲ್ಲ ಕನ್ನಡಿಗರ ಆಶೀರ್ವಾದ ನಮ್ಮ ಸಿನಿಮಾದ ಧ್ವನಿ ಸುರುಳಿ ಬಿಡುಗಡೆಯ ಕಾರ್ಯಕ್ರಮದ ಮೇಲೆ ಇರಲಿ. ನಿಮ್ಮ ನೆಚ್ಚಿನ ಸ್ಟಾರ್ ಗಳ ಡ್ಯಾನ್ಸ್ ನಾಳೆ ಇರುತ್ತದೆ. ಆದ್ದರಿಂದ ಯಾರಿಗೂ ಯಾವುದೇ ಗೊಂದಲ ಬೇಡ. ಈ ಮೂಲಕ ನಾನು ನಾಳೆ ಎಲ್ಲ ಕನ್ನಡಾಭಿಮಾನಿಗಳು ನೆಹರೂ ಕ್ರಿಡಾಂಗಣಕ್ಕೆ ಬನ್ನಿ ಅಂತ ಹೇಳಲು ಇಷ್ಟಪಡುತ್ತೇನೆ ಎಂದು ಕಾರ್ಯಕ್ರಮ ನಡೆಯುವ ಬಗ್ಗೆ ಪವನ್ ಒಡೆಯರ್ ಸ್ಪಷ್ಟನೆ ಕೊಟ್ಟಿದ್ದಾರೆ.

    ಹುಬ್ಬಳ್ಳಿಯ ನೆಹರು ಕ್ರೀಡಾಂಗಣದಲ್ಲಿ ಶನಿವಾರ ಸಂಜೆ 5 ಗಂಟೆಗೆ ಬಿಡುಗಡೆಯ ಕಾರ್ಯಕ್ರಮ ನಡೆಯಲಿದೆ. ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್, ಕವಿರಾಜ್, ಮತ್ತು ಪವನ್ ವಡೆಯರ್ ಅವರ ಸಾಹಿತ್ಯದಲ್ಲಿ ಮೂಡಿ ಬಂದಿರುವ ಹಾಡುಗಳು ಹೇಗಿರಬಹುದು ಎನ್ನುವ ಕುತೂಹಲ ಹೆಚ್ಚಾಗಿದೆ.


    ಈ ಹಿಂದೆ ಪವನ್ ಒಡೆಯರ್, ಪುನೀತ್ ರಾಜ್‍ಕುಮಾರ್ ಅವರ `ರಣವಿಕ್ರಮ’ ಚಿತ್ರವನ್ನು ನಿರ್ದೇಶಿಸಿದ್ದರು. ಪುನೀತ್ ಜೊತೆ ರಚಿತಾ ರಾಮ್, ಅನುಪಮಾ ಪರಮೇಶ್ವರ್, ಸಾಧುಕೋಕಿಲಾ, ಬಿ. ಸರೋಜಾ ದೇವಿ, ಚಿಕ್ಕಣ್ಣ, ರವಿಶಂಕರ್ ನಟಿಸಿದ್ದು, ಫೆಬ್ರವರಿ 9 ರಂದು ಚಿತ್ರ ಬಿಡುಗಡೆಯಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾತ್ರೋರಾತ್ರಿ ಪುನೀತ್ ಮನೆ ಮುಂದೆ ಡಿಕೆಶಿ ಪ್ರತ್ಯಕ್ಷ

    ರಾತ್ರೋರಾತ್ರಿ ಪುನೀತ್ ಮನೆ ಮುಂದೆ ಡಿಕೆಶಿ ಪ್ರತ್ಯಕ್ಷ

    ಬೆಂಗಳೂರು: ಗುರುವಾರ ಸ್ಯಾಂಡಲ್‍ವುಡ್ ಸ್ಟಾರ್ ಗಳ ಮನೆಗೆ ಲಗ್ಗೆ ಇಟ್ಟ ಐಟಿ ಅಧಿಕಾರಿಗಳು ಬಿಗ್ ಶಾಕ್ ನೀಡಿದ್ದು, ಇಂದೂ ಮಂದುವರಿದಿದೆ. ಆದರೆ ಅಚ್ಚರಿ ಎಂಬಂತೆ ನಿನ್ನೆ ರಾತ್ರಿ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರು ನಟ ಪುನೀತ್ ರಾಜ್‍ಕುಮಾರ್ ಮನೆ ಮುಂದೆ ಪ್ರತ್ಯಕ್ಷವಾಗಿದ್ದರು.

    ಪುನೀತ್ ರಾಜ್‍ಕುಮಾರ್ ಮನೆ ಬಳಿಯೇ ಸಚಿವರು ತಮ್ಮ ಕಾರಿನಿಂದ ಇಳಿದಿದ್ದಾರೆ. ಬಳಿಕ ಇನ್ನೂ ಮುಗಿದಿಲ್ವಾ ಅಂತ ಮಾಧ್ಯಮದವರನ್ನು ಪ್ರಶ್ನಿಸಿದ್ದಾರೆ. ನಂತರ ಏನೂ ಆಗೋದಿಲ್ಲ ತಲೆ ಕೆಡಿಸಿಕೊಳ್ಳಬೇಡಿ ಅಂತ ಅಪ್ಪು ಅಭಿಮಾನಿಗಳಲ್ಲಿ ಧೈರ್ಯ ತುಂಬಿ ನಡೆದುಕೊಂಡೇ ಮನೆಗೆ ಹೋಗಿದ್ದಾರೆ. ಇದಕ್ಕೂ ಮುನ್ನ ಡಿ.ಕೆ ಶಿವಕುಮಾರ್ ಅವರನ್ನು ಐಟಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು. ಇದನ್ನೂ ಓದಿ: ಶಿವಣ್ಣ, ಪುನೀತ್, ಸುದೀಪ್, ಯಶ್, ರಾಧಿಕಾ ಮನೆಯಲ್ಲಿ ಐಟಿ ರೇಡ್ ಆಗಿದ್ದು ಯಾಕೆ?

    ಕನ್ನಡ ಚಿತ್ರರಂಗದಲ್ಲಿ ಬಹುಕೋಟಿ ಸಿನಿಮಾ ಮಾಡುವ ನಿರ್ಮಾಪಕರ ಮನೆಗಳ ಮೇಲೂ ಐಟಿ ರೇಡ್ ಮಾಡಿದ್ದರು. ಗುರುವಾರ ಬೆಳಗ್ಗೆ 6 ಗಂಟೆಗೆ ಶುರುವಾದ ದಾಳಿ, ರಾತ್ರಿ 11 ಗಂಟೆವರೆಗೂ ಮುಂದುವರಿದಿತ್ತು. ಕನ್ನಡ ಸಿನಿಮಾ ಇಂಡಸ್ಟ್ರಿಯನ್ನು ನಡುಗಿಸಿದ ಐಟಿ ದಾಳಿಗೆ ಹೈ ಬಜೆಟ್ಟಿನ ಮೂರು ಸಿನಿಮಾಗಳೇ ಕಾರಣ ಎನ್ನಲಾಗಿದೆ.

    ಇತ್ತ ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿಯ ಡಿಕೆಶಿ ಮನೆ ಹಾಗೂ ಕೋಡಿಹಳ್ಳಿಯ ಡಿ.ಕೆ ಸುರೇಶ್ ಮನೆಗೆ ನಾಲ್ಕು ಜನ ಅಧಿಕಾರಿಗಳು ಬುಧವಾರ ಭೇಟಿ ನೀಡಿದ್ದರು. ಈ ವೇಳೆ ಮನೆಯಲ್ಲಿ ಯಾರೂ ಇಲ್ಲದ ಕಾರಣ ಸಚಿವ ಡಿ.ಕೆ ಶಿವಕುಮಾರ್ ಮನೆಯ ಬಾಗಿಲಿಗೆ ನೋಟಿಸ್ ಅಂಟಿಸಿ ತೆರಳಿದ್ದರು. ಮನೆಯ ಬಾಗಿಲ ಮೇಲೆ ಐಟಿ ಅಧಿಕಾರಿಗಳು ನೋಟಿಸ್ ಅಂಟಿಸಿರುವ ಹಿನ್ನೆಲೆಯಲ್ಲಿ ಸಚಿವ ಡಿಕೆಶಿ ತಾಯಿ ಗೌರಮ್ಮ ಅವರು ಬೆಂಗಳೂರಿಗೆ ತೆರಳಿದ್ದು, ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ ಎಂಬ ಮಾಹಿತಿ ಸಚಿವರ ಆಪ್ತ ವಲಯದಿಂದ ಮಾಹಿತಿ ತಿಳಿದು ಬಂದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾತ್ರೋರಾತ್ರಿ ಬಂತು 1 ಕಾಲ್ – `ನಟ ಸಾರ್ವಭೌಮ’ ನಿಗೆ ಡಿಂಪಲ್ ಕ್ವೀನ್ ಗ್ರೀನ್ ಸಿಗ್ನಲ್!

    ರಾತ್ರೋರಾತ್ರಿ ಬಂತು 1 ಕಾಲ್ – `ನಟ ಸಾರ್ವಭೌಮ’ ನಿಗೆ ಡಿಂಪಲ್ ಕ್ವೀನ್ ಗ್ರೀನ್ ಸಿಗ್ನಲ್!

    ಬೆಂಗಳೂರು: ದರ್ಶನ್, ಸುದೀಪ್, ಪುನೀತ್, ಮತ್ತು ಶ್ರೀಮುರಳಿ ನಾಯಕರ ಜೊತೆ ಅಭಿನಯಿಸಿದ್ದ ಡಿಂಪಲ್ ಕ್ವೀನ್ ರಚಿತಾ ರಾಮ್ ಈಗ ಮತ್ತೊಮ್ಮ ಪುನೀತ್ ರಾಜ್‍ಕುಮಾರ್ ಜೊತೆ ಅಭಿನಯಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

    ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮಾಡುತ್ತಿರುವ `ನಟ ಸಾರ್ವಭೌಮ’ ಸಿನಿಮಾದ ನಾಯಕಿ ಪಾತ್ರಕ್ಕೆ ಮಹಾರಾಷ್ಟ್ರದ ಹುಡುಗಿ ಪ್ರಿಯಾಂಕಾ ಜ್ವಾಲಕರ್ ಆಯ್ಕೆಯಾಗಿದ್ದರು. ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಪ್ರಿಯಾಂಕಾರನ್ನ ಚಿತ್ರತಂಡ ಕೈಬಿಟ್ಟಿತ್ತು. ಆದರೆ ಈಗ `ನಟ ಸಾರ್ವಭೌಮ’ ಸಿನಿಮಾಗೆ ರಚಿತಾ ರಾಮ್ ಆಯ್ಕೆಯಾಗಿದ್ದಾರೆ.

    `ನಟ ಸಾರ್ವಭೌಮ’ ಸಿನಿಮಾದ ಮುಹೂರ್ತ ಮುಗಿದ ಮೇಲೆ ಮಾರನೇ ದಿನ ರಾತ್ರೋರಾತ್ರಿ ಬಂದ ಒಂದೇ ಒಂದು ಫೋನ್ ಕಾಲ್ ಸಿನಿಮಾಗಾಗಿ ರಚಿತಾ ರಾಮ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ರಾತ್ರಿ ಸುಮಾರು 10.30 ಕ್ಕೆ ರಾಕ್‍ಲೈನ್ ವೆಂಕಟೇಶ್ ಅವರು ರಚಿತಾ ರಾಮ್ ಗೆ ಫೋನ್ ಮಾಡಿ ಚಿತ್ರದ ಆಫರ್ ಕೊಟ್ಟಿದ್ದಾರೆ. ನಂತರ ರಚಿತಾ ರಾಮ್ ಕೂಡಲೇ ಒಪ್ಪಿಗೆ ಸೂಚಿಸಿದ್ದಾರೆ.

    ಈಗಾಗಲೇ ರಚಿತಾ ರಾಮ್ `ಬುಲ್ ಬುಲ್’, `ಅಂಬರೀಶ’, `ರನ್ನ’, `ರಥಾವರ’ ಮತ್ತು `ಭರ್ಜರಿ’ ಅಂತಹ ಸಾಲು ಸಾಲು ಹಿಟ್ ಸಿನಿಮಾಗಳನ್ನು ಮಾಡಿದ್ದಾರೆ. ಈಗ ಸದ್ಯಕ್ಕೆ ನೀನಾಸಂ ಸತೀಸ್ ಅಭಿನಯದ `ಅಯೋಗ್ಯ’, `ಉಪ್ಪಿ ರುಪಿ’ ಮತ್ತು `ಸೀತಾ ರಾಮ ಕಲ್ಯಾಣ’ ಸಿನಿಮಾಗಳ ಜೊತೆಗೆ `ನಟ ಸಾರ್ವಭೌಮ’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

  • ಪವರ್ ಸ್ಟಾರ್ ಗೆ ಚಿನ್ನಲೇಪಿತ ವೆಂಕಟೇಶ್ವರ ದೇವರ ಫೋಟೋ ಉಡುಗೊರೆ ನೀಡಿದ ಪ್ರಥಮ್

    ಪವರ್ ಸ್ಟಾರ್ ಗೆ ಚಿನ್ನಲೇಪಿತ ವೆಂಕಟೇಶ್ವರ ದೇವರ ಫೋಟೋ ಉಡುಗೊರೆ ನೀಡಿದ ಪ್ರಥಮ್

    ಬೆಂಗಳೂರು: ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಜನರ ಮಧ್ಯೆ ಗುರುತಿಸಿಕೊಂಡಿರುವ ನಟ ನಿರ್ದೇಶಕ ಪ್ರಥಮ್ ಅವರು ಪುನೀತ್ ಅವರಿಗೆ ಉಡುಗೊರೆಯನ್ನು ನೀಡಿದ್ದಾರೆ.

    ಕನ್ನಡ ಸಿನಿಮಾರಂಗದಲ್ಲಿ ಯಾವುದೇ ಸ್ಟಾರ್ ಹುಟ್ಟುಹಬ್ಬವಾದರೂ ಪ್ರಥಮ್ ಅವರಿಗೆ ತಮ್ಮದೇ ಆದ ರೀತಿಯಲ್ಲಿ ಶುಭಾಶಯ ತಿಳಿಸುತ್ತಾರೆ. ಇದೀಗ ನಟ ಪುನೀತ್ ರಾಜ್ ಕುಮಾರ್ ಅವರು ಶನಿವಾರ ತಮ್ಮ 43ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಥಮ್ ಅವರು ಪವರ್ ಸ್ಟಾರ್ ಪುನೀತ್ ಅವರಿಗೆ ವಿಶೇಷವಾಗಿ ಹುಟ್ಟುಹಬ್ಬದ ಶುಭಾಶಯವನ್ನು ಕೋರುವುದರ ಜೊತೆಗೆ ವಿಭಿನ್ನವಾಗಿರುವ ಉಡುಗೊರೆಯನ್ನು ನೀಡಿದ್ದಾರೆ.

    ಬಂಗಾರದ ಮನುಷ್ಯನ ಪುತ್ರನಿಗೆ ಪ್ರಥಮ್ ಮತ್ತೆ ಬಂಗಾರದ ಉಡುಗೊರೆಯನ್ನು ನೀಡಿದ್ದಾರೆ. ಕಳೆದ ಬಾರಿಯೂ ಪ್ರಥಮ್ ಅಪ್ಪು ಅವರಿಗೆ ಚಿನ್ನ ಉಂಗುರವನ್ನು ನೀಡಿ ಶುಭ ಕೋರಿದ್ದರು. ಈ ಬಾರಿ ಚಿನ್ನ ಲೇಪಿತ ವೆಂಕಟೇಶ್ವರ ದೇವರ ಫೋಟೋವನ್ನು ಕೊಟ್ಟಿದ್ದಾರೆ. ಪ್ರಥಮ್ ಜೊತೆಯಲ್ಲಿ ಸಾರಾ ಗೋವಿಂದು ಹಾಗೂ ಪುತ್ರ ಅನೂಪ್ ಕೂಡ ಪವರ್ ಸ್ಟಾರ್ ಗೆ ಶುಭಾಶಯ ಕೋರಿದ್ದಾರೆ.

    ಪುನೀತ್ ಪ್ರಥಮ್ ಅವರ ಉಡುಗೊರೆಯನ್ನ ಸ್ವೀಕರಿಸಿ ಸಂತೋಷ ವ್ಯಕ್ತಪಡಿಸಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಫ್ಯಾಮಿಲಿ ಪವರ್ ಕಾರ್ಯಕ್ರಮದಲ್ಲಿ ಪುನೀತ್, ಪ್ರಥಮ್ ಅವರಿಗೆ ಶೋ ನಲ್ಲಿ ಹಾಕಿಕೊಂಡಿದ್ದ ಬ್ಲೇಜರ್ ಅನ್ನು ಉಡುಗೊರೆಯಾಗಿ ನೀಡಿದ್ದರು.