Tag: ಪುನೀತ್

  • ಅಪ್ಪು ಸಮಾಧಿ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್‍ಕುಮಾರ್

    ಅಪ್ಪು ಸಮಾಧಿ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್‍ಕುಮಾರ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಡಾ.ಪುನೀತ್ ರಾಜ್‍ಕುಮಾರ್ ಸಮಾಧಿಗೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಭೇಟಿ ನೀಡಿ ದರ್ಶನ ಪಡೆದರು.

    ಇಂದು ಪುನೀತ್ ರಾಜ್‍ಕುಮಾರ್ 47ನೇ ಹುಟ್ಟುಹಬ್ಬದ ಹಿನ್ನೆಲೆ ನಗರದ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು ಭೇಟಿ ನೀಡಿ ಪ್ರದಕ್ಷಿಣೆ ಹಾಕಿ ನಮನ ಸಲ್ಲಿಸಿದರು. ಇದೇ ವೇಳೆ ವರನಟ ಡಾ. ರಾಜ್‍ಕುಮಾರ್ ಹಾಗೂ ಪಾರ್ವತಮ್ಮ ರಾಜ್‍ಕುಮಾರ್ ಅವರ ಸಮಾಧಿಯ ದರ್ಶನವನ್ನು ಸಹ ಪಡೆದರು. ಇದನ್ನೂ ಓದಿ: ರಾಜ್ಯದ 400 ಥಿಯೇಟರ್‌ಗಳಲ್ಲಿ ಜೇಮ್ಸ್ ರಿಲೀಸ್

    ಅಪ್ಪು ಜನುಮ ದಿನದ ಪ್ರಯುಕ್ತ ಇಂದು ಪುನೀತ್ ಅಭಿನಯದ ಬಹುನಿರೀಕ್ಷಿತ ಜೇಮ್ಸ್ ಸಿನಿಮಾ ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ನೋಡಲು ಮುಂಜಾನೆಯಿಂದಲೇ ಚಿತ್ರಮಂದಿರದತ್ತ ಜನ ಸಾಗರವೇ ಹರಿದುಬರುತ್ತಿದೆ. ಒಟ್ಟಾರೆ ಅಪ್ಪು ಹುಟ್ಟುಹಬ್ಬವನ್ನು ಕರುನಾಡಿನ ಜನತೆ ಹಬ್ಬದಂತೆ ಆಚರಿಸುತ್ತಿದ್ದಾರೆ. ಇದನ್ನೂ ಓದಿ:  ಡಾ.ಪುನೀತ್ ರಾಜ್‍ಕುಮಾರ್ 47ನೇ ಜನ್ಮದಿನ – ಸಮಾಧಿ ಬಳಿ ಕೇಕ್ ಕತ್ತರಿಸಿದ ದೊಡ್ಮನೆ ಕುಟುಂಬ

  • ಪವರ್ ಫುಲ್ ಜೇಮ್ಸ್ ಟೀಸರ್ ಔಟ್ – ಅಪ್ಪು ಎಂಟ್ರಿಗೆ ಅಭಿಮಾನಿಗಳು ಫಿದಾ

    ಪವರ್ ಫುಲ್ ಜೇಮ್ಸ್ ಟೀಸರ್ ಔಟ್ – ಅಪ್ಪು ಎಂಟ್ರಿಗೆ ಅಭಿಮಾನಿಗಳು ಫಿದಾ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಬಹು ನಿರೀಕ್ಷಿತ ಜೇಮ್ಸ್ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ.

    ಪುನೀತ್ ಅಭಿನಯದ ಕೊನೆಯ ಸಿನಿಮಾ ಇದಗಿದ್ದು, ಈ ಸಿನಿಮಾ ನೋಡಲು ಕರುನಾಡಿನ ಜನತೆ ಕಾತುರದಿಂದ ಕಾಯುತ್ತಿದ್ದಾರೆ. ಸದ್ಯ ಜೇಮ್ಸ್ ಸಿನಿಮಾದ ಟೀಸರ್ ಇದೀಗ ಬಿಡುಗಡೆಯಾಗಿದ್ದು, ಈ ಟೀಸರ್ ಅನ್ನು ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ, ಮೂಗುತಿ ಸುಂದರಿ ಸುಷ್ಮಿತಾ ಗೌಡ

    ಟೀಸರ್‍ನಲ್ಲಿ ಮೊದಲಿಗೆ ಅಂಡರ್ ವರ್ಲ್ಡ್, ಮಾಫಿಯಾ ದೃಶ್ಯಗಳು ಮೂಡಿಬಂದಿದ್ದು, ನಂತರ ಬೈಕ್ ಮೇಲೆ ಎಂಟ್ರಿ ಕೊಡುವ ಪುನೀತ್ ಲುಕ್‍ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಜೊತೆಗೆ ಪುನೀತ್ ಕಾರಿನಿಂದ ಇಳಿಯುವ ದೃಶ್ಯ, ಗನ್ ಹಿಡಿಯುವ ಸ್ಟೈಲ್, ಪುನೀತ್ ಸ್ಟಂಟ್ಸ್ ಸಿನಿಮಾದಲ್ಲಿ ಬಹಳ ಅದ್ಭುತವಾಗಿ ಮೂಡಿಬಂದಿದೆ. ಇನ್ನೂ ಟೀಸರ್‌ನ ಕೊನೆಯಲ್ಲಿ ನನಗೆ ಮೊದಲಿನಿಂದಲೂ ರೆಕಾರ್ಡ್ ಬ್ರೇಕ್ ಮಾಡಿಯೇ ಅಭ್ಯಾಸ ಎಂಬ ಶಿವಣ್ಣನ ವಾಯ್ಸ್ ಟೀಸರ್ ಮತ್ತಷ್ಟು ರಿಚ್ ಗೊಳಿಸಿದೆ. ಒಟ್ಟಾರೆ ಜೇಮ್ಸ್ ಟೀಸರ್ ಒಂದು ರೀತಿ ಹಾಲಿವುಡ್ ರೇಂಜ್‍ನಲ್ಲಿ ಮೂಡಿಬಂದಿದೆ ಎಂದರೆ ತಪ್ಪಾಗಲಾರದು. ಇದನ್ನೂ ಓದಿ: ಫೆ.11ಕ್ಕೆ ಬಿಡುಗಡೆಯಾಗಲಿದೆ ಜೇಮ್ಸ್ ಸಿನಿಮಾದ ಟೀಸರ್

    ಇಂದು ಬೆಳಗ್ಗೆ 11 ಗಂಟೆ 11 ನಿಮಿಷಕ್ಕೆ `ಜೇಮ್ಸ್’ ಟೀಸರ್ ಪಿಆರ್‌ಕೆ ಆಡಿಯೋ ಸಂಸ್ಥೆಯಡಿ ಅನಾವರಣಗೊಳಿಸಿರುವ ಮೂಲಕ ಅಭಿಮಾನಿಗಳಿಗೆ ಗಿಫ್ಟ್ ನೀಡಿರುವ ಚಿತ್ರತಂಡ ಜೇಮ್ಸ್ ಸಿನಿಮಾ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲು ತಯಾರಿ ನಡೆಸುತ್ತಿದೆ. ಇನ್ನೂ ಹೊಸ ಲುಕ್‍ನಲ್ಲಿ ಕಾಣಿಸಿಕೊಂಡಿರುವ ಪುನೀತ್ ಅವರನ್ನು ಬಿಗ್‍ಸ್ಕ್ರೀನ್ ಮೇಲೆ ಬರಮಾಡಿಕೊಳ್ಳಲು ಅಪ್ಪು ಅಭಿಮಾನಿಗಳು ಕಾತುರರಾಗಿದ್ದಾರೆ. ಇದನ್ನೂ ಓದಿ: ಸಲಾಂ ಸೋಲ್ಜರ್, ದೇಶಕ್ಕೆ ನೀನೇ ಪವರ್ – ಪುನೀತ್ ಖದರ್

    ಜೇಮ್ಸ್ ಸಿನಿಮಾಕ್ಕೆ ನಿರ್ದೇಶಕ ಚೇತನ್ ಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದು, ರಾಜಕುಮಾರ ಸಿನಿಮಾದಲ್ಲಿ ನಟಿಸಿದ್ದ ಪ್ರಿಯಾ ಆನಂದ್ ಅವರೇ ಜೇಮ್ಸ್ ಚಿತ್ರದಲ್ಲಿ ಅಪ್ಪುಗೆ ಜೋಡಿಯಾಗಿದ್ದಾರೆ. ಚಿತ್ರದಲ್ಲಿ ಶ್ರೀಕಾಂತ್, ಆದಿತ್ಯ ಮೆನನ್ ಹಾಗೂ ಅನು ಪ್ರಭಾಕರ್, ಮುಖೇಶ್ ರಿಷಿ ಸೇರಿದಂತೆ ಹಲವಾರು ಕಲಾವಿದರು ನಟಿಸಿದ್ದಾರೆ.

  • ಇಂದು ಪುನೀತ್ 11ನೇ ದಿನದ ಪುಣ್ಯಾರಾಧನೆ – ಮಧ್ಯಾಹ್ನವರೆಗೆ ಅಭಿಮಾನಿಗಳಿಗೆ ಸಮಾಧಿಗೆ ನಿರ್ಬಂಧ

    ಇಂದು ಪುನೀತ್ 11ನೇ ದಿನದ ಪುಣ್ಯಾರಾಧನೆ – ಮಧ್ಯಾಹ್ನವರೆಗೆ ಅಭಿಮಾನಿಗಳಿಗೆ ಸಮಾಧಿಗೆ ನಿರ್ಬಂಧ

    ಬೆಂಗಳೂರು: ಇಂದು ಪುನೀತ್ 11ನೇ ದಿನದ ಪುಣ್ಯಾರಾಧನೆ ಇರುವುದರಿಂದ ಅಭಿಮಾನಿಗಳಿಗೆ ಮಧ್ಯಾಹ್ನದವರೆಗೂ ಅಪ್ಪು ಸಮಾಧಿ ನಿರ್ಬಂಧ ಹೇರಲಾಗಿದೆ.

    ದೊಡ್ಮನೆ ಹುಡುಗ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಗಲಿ ಇಂದಿಗೆ 11 ದಿನ ಕಳೆದಿದೆ. ಇಂದು ಪುನೀತ್ 11ನೇ ದಿನ ಪುಣ್ಯಸ್ಮರಣೆಯಾಗಿದ್ದು, ಸದಾಶಿವನಗರದ ಅಪ್ಪು ನಿವಾಸದ ಪುನೀತ್ ಫೋಟೋಗೆ ಕುಟುಂಬಸ್ಥರು ಪೂಜೆ ಸಲ್ಲಿಸಲಿದ್ದಾರೆ. ಇದನ್ನೂ ಓದಿ: ಆತ್ಮಹತ್ಯೆ ಮಾಡ್ಕೊಂಡ ಅಪ್ಪು ಅಭಿಮಾನಿ ಮನೆಗೆ ರಾಘಣ್ಣ ಭೇಟಿ, ಸಾಂತ್ವನ

    ಪುನೀತ್ 11ನೇ ದಿನದ ಪುಣ್ಯಾರಾಧನೆಯ ವಿಧಿವಿಧಾನವನ್ನು ವಿನಯ್ ರಾಜ್‍ಕುಮಾರ್ ನೆರವೇರಿಸಲಿದ್ದು, 11 ಗಂಟೆ ಬಳಿಕ ಅಪ್ಪು ಸಮಾಧಿಗೆ ಎಡೆ ಅರ್ಪಣೆ ಮಾಡಲಾಗುತ್ತದೆ. ಇನ್ನೂ ಈ ಕಾರ್ಯಕ್ರಮದಲ್ಲಿ ಕೇವಲ ಕುಟುಂಬಸ್ಥರಷ್ಟೇ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ರಾಜ್ಯದ ಎಲ್ಲ ಥಿಯೇಟರ್‌‌ಗಳಲ್ಲಿ ಏಕಕಾಲಕ್ಕೆ ಅಪ್ಪುಗೆ ಶ್ರದ್ಧಾಂಜಲಿ

    puneeth

    ಮಧ್ಯಾಹ್ನ 12 ಗಂಟೆವರೆಗೆ ಅಭಿಮಾನಿಗಳಿಗೆ ಸಮಾಧಿ ದರ್ಶನವನ್ನು ನಿಷೇಧಿಸಲಾಗಿದ್ದು, ಕಂಠೀರವ ಸ್ಟುಡಿಯೋ ಸುತ್ತ ಪೊಲೀಸ್ ಬಿಗಿ ಭದ್ರತೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಪುನೀತ್ ಅಂತ್ಯಸಂಸ್ಕಾರಕ್ಕೆ ಶ್ರಮಿಸಿದ ಎಲ್ಲರಿಗೂ ಅಶ್ವಿನಿ ಧನ್ಯವಾದ

  • ಅಪ್ಪು ಸದಾ ನಮ್ಮ ಹೃದಯದಲ್ಲಿ ನಗುತ್ತಿರುತ್ತಾರೆ – ಪುನೀತ್ ನೆನೆದು ಬಿಕ್ಕಿ, ಬಿಕ್ಕಿ ಅತ್ತ ಸೂರ್ಯ

    ಅಪ್ಪು ಸದಾ ನಮ್ಮ ಹೃದಯದಲ್ಲಿ ನಗುತ್ತಿರುತ್ತಾರೆ – ಪುನೀತ್ ನೆನೆದು ಬಿಕ್ಕಿ, ಬಿಕ್ಕಿ ಅತ್ತ ಸೂರ್ಯ

    ಬೆಂಗಳೂರು: ಕಾಲಿವುಡ್ ಖ್ಯಾತ ನಟ ಸೂರ್ಯ ಅವರು ಇಂದು ಅಪ್ಪು ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಿದರು.

    surya

    ಬೆಂಗಳೂರಿನ ಕಂಠೀರವ ಸ್ಟುಡಿಯೋಗೆ ಭೇಟಿ ಕೊಟ್ಟ ತಮಿಳಿನ ನಟ ಸೂರ್ಯ ಆತ್ಮೀಯ ಗೆಳೆಯ ಪುನೀತ್ ಜೊತೆಗೆ ಕಳೆದ ಸಿಹಿ ಕ್ಷಣಗಳನ್ನು ನೆನಪಿಸಿಕೊಂಡು ಸಮಾಧಿ ಎದುರು ನಿಂತು ಬಿಕ್ಕಿಬಿಕ್ಕಿ ಕಣ್ಣೀರು ಹಾಕಿದರು.

    ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದು ಬಹಳ ಅನ್ಯಾಯ. ಈ ರೀತಿ ಆಗಬಾರದಿತ್ತು. ಏನು ಜರುಗಿದೆ ಅದನ್ನು ಈಗಲೂ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಮ್ಮ ಹಾಗೂ ಡಾ. ರಾಜ್ ಕುಮಾರ್ ಅವರ ಕುಟುಂಬ ಬಹಳ ಆತ್ಮೀಯತೆ ಮತ್ತು ಉತ್ತಮ ಬಾಂಧವ್ಯ ಹೊಂದಿದ್ದೇವೆ. ಅಪ್ಪ ಅವರ ಫ್ಯಾಮಿಲಿ ಜೊತೆ ಕಳೆದಂತಹ ಬಹಳಷ್ಟು ಸಮಯಗಳು ಸದಾ ನೆನಪಾಗುತ್ತಿರುತ್ತದೆ. ನನಗೆ 4 ತಿಂಗಳು ಆಗಿದ್ದಾಗ ಅಪ್ಪುಗೆ 7 ತಿಂಗಳಾಗಿತ್ತು ಎಂದು ಅಮ್ಮ ಹೇಳುತ್ತಿದ್ದ ಮಾತು ನನಗೆ ಈಗಲೂ ಕೂಡ ನೆನಪಿನಲ್ಲಿದೆ. ಅಪ್ಪ, ಅಮ್ಮನ ಯಾವುದೇ ಫೋಟೋ ಅಥವಾ ವೀಡಿಯೋ ನೋಡಿದರೂ ಇಬ್ಬರು ಸದಾ ನಗುತ್ತಲೇ ಇರುವುದನ್ನೇ ಕಾಣುತ್ತೇವೆ.  ಇದನ್ನೂ ಓದಿ: ನನಗೆ ಅರ್ಥ ಮಾಡಿಕೊಳ್ಳಲು, ಈ ಸತ್ಯವನ್ನ ಅರಗಿಸಿಕೊಳ್ಳಲು ಆಗ್ತಿಲ್ಲ: ರಾಮ್ ಚರಣ್ ತೇಜಾ

    ಸಮಾಜಕ್ಕೆ ಪುನೀತ್ ಅದ್ಭುತವಾದಂತಹ ಕೆಲಸಗಳನ್ನೇ ಮಾಡಿದ್ದಾರೆ. ಯಾರು ಪುನೀತ್‍ರನ್ನು ನಿಜವಾಗಿಯೂ ಪ್ರೀತಿಸುತ್ತಾರೆ ಅವರ ನೆನಪುಗಳನ್ನು ಸದಾ ಮನದಲ್ಲಿಟ್ಟುಕೊಂಡಿರುತ್ತಾರೆ. ಅಪ್ಪು ಯಾವಾಗಲೂ ನಮ್ಮ ಹೃದಯದಲ್ಲಿ ನಗುತ್ತಲೇ ಇರುತ್ತಾರೆ. ನಾನು ಪುನೀತ್‍ರನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ. ದೇವರು ಅವರ ಪತ್ನಿ, ಮಕ್ಕಳು ಮತ್ತು ಕುಟುಂಬಕ್ಕೆ ದುಃಖವನ್ನು ಸಹಿಸಿಕೊಳ್ಳುವ ಶಕ್ತಿ ನೀಡಲಿ. ಪುನೀತ್ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಪ್ರಾರ್ಥಿಸುತ್ತೇನೆ ಎಂದು ಭಾವುಕರಾಗಿ ಹೇಳಿದರು. ಇದೇ ವೇಳೆ ಸೂರ್ಯ ಅವರಿಗೆ ಶಿವರಾಜ್ ಕುಮಾರ್  ಸಾಥ್ ನೀಡಿದರು. ಇದನ್ನೂ ಓದಿ: ಪುನೀತ್ ಭೇಟಿಯಾಗುವ ಸೌಭಾಗ್ಯ ನನಗೆ ಸಿಕ್ಕಿಲ್ಲ: ವಿಜಯ್ ಸೇತುಪತಿ

  • ನೇತ್ರದಾನಕ್ಕೆ ಸ್ಫೂರ್ತಿಯಾದ ” ರಾಜರತ್ನ” – ಅಪ್ಪು ಬಳಿಕ ಹೆಚ್ಚಾಗ್ತಿದೆ ನೇತ್ರದಾನಿಗಳ ಸಂಖ್ಯೆ

    ನೇತ್ರದಾನಕ್ಕೆ ಸ್ಫೂರ್ತಿಯಾದ ” ರಾಜರತ್ನ” – ಅಪ್ಪು ಬಳಿಕ ಹೆಚ್ಚಾಗ್ತಿದೆ ನೇತ್ರದಾನಿಗಳ ಸಂಖ್ಯೆ

    ಬೆಂಗಳೂರು: ದೊಡ್ಮನೆ ಹುಡುಗ ನಟ ಪುನೀತ್ ರಾಜ್‍ಕುಮಾರ್ ನಿಧನದ ನಂತರ ನೇತ್ರದಾನ ಮಾಡಲು ನೂರಾರು ಸಂಖ್ಯೆಯಲ್ಲಿ ಜನ ಮುಂದಾಗಿದ್ದಾರೆ.

     puneeth rajkumar

    ಪುನೀತ್ ರಾಜ್‍ಕುಮಾರ್ ಅವರು, ವಿಧಿವಶರಾದ ಬಳಿಕ ನೇತ್ರದಾನ ಮಾಡಿ ನಾಲ್ವರ ಬಾಳಿಗೆ ಬೆಳಕಾಗಿದ್ದಾರೆ. ಇದೀಗ ಪ್ರತಿದಿನ ನಾರಾಯಣ ನೇತ್ರಾಲಯದಲ್ಲಿ ನೇತ್ರದಾನ ಮಾಡಲು ಜನರ ದಂಡು ಹರಿದು ಬರುತ್ತಿದ್ದು, ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ನೇತ್ರದಾನ ಮಾಡಲು ಜನ ನೊಂದಾಯಿಸಿದ್ದಾರೆ ಎಂದು ಡಾ. ಭುಜಂಗ ಶೆಟ್ಟಿ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ನಾಲ್ವರ ಬಾಳಿಗೆ ಬೆಳಕಾದ ಅಪ್ಪು

     puneeth rajkumar

    ಈ ಕುರಿತಂತೆ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಪುನೀತ್ ಸಮಾಧಿಗೆ ಭೇಟಿ ಕೊಟ್ಟು ಬಂದವರೆಲ್ಲ ಬಹುತೇಕರು ನೇರವಾಗಿ ನಾರಾಯಣ ನೇತ್ರಾಲಯಕ್ಕೆ ಬಂದು ಕಣ್ಣಿನ ದಾನ ಮಾಡುತ್ತಿದ್ದಾರೆ. ದಿನಕ್ಕೆ 3 ರಿಂದ 4 ಜನ ನೇತ್ರದಾನ ಮಾಡಿದರೆ ಅದೇ ದೊಡ್ಡದು. ಆದರೀಗ ನಿತ್ಯ 200 ಜನದಂತೆ ನೇತ್ರದಾನ ಮಾಡಲು ಬರುತ್ತಿದ್ದಾರೆ. ಇದು ಅಪ್ಪು ಬಿಟ್ಟು ಹೋದ ಸ್ಫೂರ್ತಿ. ಪುನೀತ್ ಸಾವಿನ ಬಳಿಕ 30 ಜನರ ಕಣ್ಣನ್ನು ನಾವು ಬೇರೆಯವರಿಗೆ ಜೋಡಿಸಿದ್ದೇವೆ. ಸಾವಿನ ಮನೆಯಿಂದಲೂ ಕರೆ ಬರುತ್ತಿದೆ. ಇಷ್ಟರಮಟ್ಟಿಗೆ ಜನ ಜಾಗೃತಿಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪುನೀತ್ ಓದಿಸುತ್ತಿದ್ದ 1,800 ಮಕ್ಕಳ ಜವಾಬ್ದಾರಿ ಹೊತ್ತ ನಟ ವಿಶಾಲ್

  • ಯುವಕರ ಕಣ್ಮಣಿ, ಯೂತ್ ಐಕಾನ್ ಆಗಿದ್ರು ಪುನೀತ್- ಸಿಎಂ

    ಯುವಕರ ಕಣ್ಮಣಿ, ಯೂತ್ ಐಕಾನ್ ಆಗಿದ್ರು ಪುನೀತ್- ಸಿಎಂ

    ಬೆಂಗಳೂರು: ಅತ್ಯಂತ ಕಿರಿಯ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದ ಮೇರು ನಟನನ್ನು ಕರ್ನಾಟಕ ಕಳೆದುಕೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಷಾದಿಸಿದರು.

    PUNEET RAJKUMAR

    ಹೃದಯಾಘಾತದಿಂದ ಶುಕ್ರವಾರ ಆಸ್ಪತ್ರೆಗೆ ದಾಖಲಾಗಿದ್ದ ಪುನೀತ್ ರಾಜ್‍ಕುಮಾರ್ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, ನಿಜಕ್ಕೂ ಇದೊಂದು ಆಘಾತಕಾರಿ ಸುದ್ದಿ. ಅತ್ಯಂತ ಕಿರಿಯ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದ ಮೇರು ನಟನನ್ನು ಕರ್ನಾಟಕ ಕಳೆದುಕೊಂಡಿದೆ. ಅವರ ಕುಟುಂಬ ಹಾಗೂ ಇಡೀ ಕರ್ನಾಟಕದ ಜನ ದುಃಖದಲ್ಲಿದ್ದಾರೆ ಎಂದು ಸಂತಾಪ ಸೂಚಿಸಿದರು. ಇದನ್ನೂ ಓದಿ: ಪ್ರೀತಿಯ ಅಪ್ಪು ಇನ್ನಿಲ್ಲ

    ಪುನೀತ್ ಯುವಕರ ಕಣ್ಮಣಿ, ಯೂತ್ ಐಕಾನ್ ಆಗಿದ್ದರು. ನವೆಂಬರ್ 1ಕ್ಕೆ ವೆಬ್‍ಸೈಟ್‍ವೊಂದನ್ನು ಉದ್ಘಾಟನೆ ಮಾಡುವ ಸಂಬಂಧ ನಿನ್ನೆ ನನ್ನೊಂದಿಗೂ ಮಾತನಾಡಿದ್ದರು. ನಾನು ಅವರನ್ನು ಭೇಟಿಯಾಗಲು ಆಗಲಿಲ್ಲ. ಡಾ.ರಾಜ್‍ಕುಮಾರ್ ಅವರ ಸಂಸ್ಕಾರದಲ್ಲಿ ಪುನೀತ್ ಬೆಳೆದಿದ್ದರು. ತಂದೆಯಂತೆಯೇ ವಿನಯವಂತ. ನನಗೂ ರಾಜ್‍ಕುಮಾರ್ ಕುಟುಂಬಕ್ಕೂ ಹಳೆಯ ಬಾಂಧವ್ಯವಿದೆ. ಅಪ್ಪುನನ್ನು ಸಣ್ಣವಯಸ್ಸಿನಿಂದಲೂ ನೋಡಿದ್ದೇನೆ. ಬಹಳ ಎತ್ತರಕ್ಕೆ ಬೆಳೆದಿದ್ದ, ಇನ್ನೂ ಉಜ್ವಲ ಭವಿಷ್ಯವಿತ್ತು. ಅಪ್ಪು ಅಗಲಿಕೆಯಿಂದ ಕಲಾರಂಗಕ್ಕೆ ದೊಡ್ಡ ಪ್ರಮಾಣದ ನಷ್ಟವುಂಟಾಗಿದೆ. ಚಿತ್ರರಂಗದಲ್ಲಿ ನಾಯಕತ್ವದ ಗುಣವುಳ್ಳಂತಹ ವ್ಯಕ್ತಿಯನ್ನು ನಾವಿಂದು ಕಳೆದುಕೊಂಡಿದ್ದೇವೆ ಎಂದು ದುಃಖಿಸಿದರು. ಇದನ್ನೂ ಓದಿ: ತಂದೆ ಹಾದಿ ಹಿಡಿದ ಮಗ- ನೇತ್ರದಾನ ಮಾಡಿ ಸಾವಲ್ಲೂ ಸಾರ್ಥಕತೆ ಮೆರೆದ ಅಪ್ಪು
    PUNEET RAJKUMAR

    ಕಂಠೀರವ ಸ್ಟೇಡಿಯಂನಲ್ಲಿ ಪುನೀತ್ ರಾಜ್‍ಕುಮಾರ್ ಅಂತಿಮ ದರ್ಶನಕ್ಕೆ ಅಭಿಮಾನಿಗಳಿಗೆ ಸೂಕ್ತ ವ್ಯವಸ್ಥೆಯೊಂದಿಗೆ ಅವಕಾಶ ಮಾಡಿಕೊಡಲಾಗುವುದು. ಯಾರೂ ಸಹ ಅತಿಯಾದ ಭಾವನೆಗೆ ಒಳಗಾಗದೇ, ಸಂಯಮ ಕಳೆದುಕೊಳ್ಳದೆ ಶಾಂತಿಯಿಂದ ವರ್ತಿಸಬೇಕು. ಶಾಂತಿ, ಸುವ್ಯವಸ್ಥೆಯಿಂದ ಪುನೀತ್ ರಾಜ್‍ಕುಮಾರ್‍ರನ್ನು ಬೀಳ್ಕೊಡೋಣ. ಆಗ ಮಾತ್ರ ನಿಜವಾಗಿಯೂ ನಾವು ಅವರಿಗೆ ಸಲ್ಲಿಸುವ ಗೌರವವಾಗುತ್ತದೆ ಎಂದು ಮನವಿ ಮಾಡಿದರು.

  • ಪುನೀತ್ ಜೊತೆ ಗನ್ ಹಿಡಿದು ಫೋಟೋಗೆ ವಿದೇಶಿ ಹುಡ್ಗೀರ ಪೋಸ್

    ಪುನೀತ್ ಜೊತೆ ಗನ್ ಹಿಡಿದು ಫೋಟೋಗೆ ವಿದೇಶಿ ಹುಡ್ಗೀರ ಪೋಸ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯಿಸುತ್ತಿರುವ ಜೇಮ್ಸ್ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಮಧ್ಯೆ ಚಿತ್ರೀಕರಣದ ವೇಳೆ ಪುನೀತ್ ಜೊತೆ ವಿದೇಶಿ ಹುಡುಗಿರು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯಿಸಿದ್ದ ಬಹದ್ದೂರ್, ಭರ್ಜರಿ ಹಾಗೂ ನಟ ಶ್ರೀ ಮುರಳಿ ಅಭಿನಯಿಸಿದ್ದ ಭರಾಟೆ ಸಿನಿಮಾವನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದ, ನಿರ್ದೇಶಕ ಚೇತನ್ ಕುಮಾರ್ ಜೇಮ್ಸ್ ಸಿನಿಮಾ ಮೂಲಕ ಇದೇ ಮೊದಲ ಬಾರಿಗೆ ಪುನೀತ್‍ಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದನ್ನೂ ಓದಿ: ತನ್ನದೇ ಹೊಸ ಸಾಮಾಜಿಕ ಮಾಧ್ಯಮ ‘TRUTH Social’ ಆರಂಭಿಸಿದ ಟ್ರಂಪ್

     

     ಜೇಮ್ಸ್ ​ವೊಂದು ಆ್ಯಕ್ಷನ್ ಕಮರ್ಷಿಯಲ್ ಸಿನಿಮಾವಾಗಿದ್ದು, ಈಗಾಗಲೇ ಸಿನಿಮಾದ ಚಿತ್ರೀಕರಣ ಜೋರಾಗಿ ನಡೆಯುತ್ತಿದೆ. ಸದ್ಯ ಚಿತ್ರೀಕರಣದ ನಡುವೆ ಪುನೀತ್ ಜೊತೆ ಇಬ್ಬರು ವಿದೇಶಿ ಹುಡುಗಿಯರು ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಫೋಟೋದಲ್ಲಿ ಇಬ್ಬರು ಹುಡುಗಿರು ಗ್ರೇ ಕಲರ್ ಶಾರ್ಟ್ ಟಾಪ್, ಬ್ಲಾಕ್ ಕಲರ್ ಪ್ಯಾಂಟ್ ಹಾಗೂ ಬ್ಲಾಕ್ ಕಲರ್ ಜಾಕೆಟ್ ತೊಟ್ಟು, ಕೈಯಲ್ಲಿ ಗನ್ ಹಿಡಿದುಕೊಂಡು ಪುನೀತ್ ಅಕ್ಕಪಕ್ಕ ನಿಂತು ಪೋಸ್ ನೀಡಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ದೇವಭೂಮಿ ಉತ್ತರಾಖಂಡ್‍ನಲ್ಲಿ ಮೇಘಸ್ಫೋಟ – 12 ಮಂದಿ ಸಾವು, 20 ಮಂದಿ ನಾಪತ್ತೆ

    ಈ ಫೋಟೋ ನೋಡುತ್ತಿದ್ದರೆ, ಬಹುಶಃ ಇದು ಫೈಟಿಂಗ್ ಅಥವಾ ಹಾಡಿನ ಚಿತ್ರೀಕರಣದ ವೇಳೆ ಸೆರೆಹಿಡಿದಿರುವಂತೆ ಕಾಣಿಸುತ್ತದೆ. ಒಟ್ಟಾರೆ ಈ ಫೋಟೋ ನೋಡಿ ಅಭಿಮಾನಿಗಳು ಥ್ರೀಲ್ ಆಗಿದ್ದು, ಸಿನಿಮಾದ ಬಗ್ಗೆ ಮತ್ತಷ್ಟು ನಿರೀಕ್ಷೆ ಹೆಚ್ಚಾಗುತ್ತಿದೆ. ಇದನ್ನೂ ಓದಿ: ಮಂಡ್ಯದಲ್ಲಿ ಧಾರಾಕಾರ ಮಳೆ – 400ಕ್ಕೂ ಹೆಚ್ಚು ಮನೆಗಳಿಗೆ ನೀರು

    ಈ ಸಿನಿಮಾದಲ್ಲಿ ಪುನೀತ್‍ಗೆ ಜೋಡಿಯಾಗಿ ಕಾಲಿವುಡ್ ನಟಿ ಪ್ರಿಯಾ ಆನಂದ್ ಅಭಿನಯಿಸುತ್ತಿದ್ದು, ಚೇತನ್ ಕುಮಾರ್‌ಗೆ ಆ್ಯಕ್ಷನ್ ಕಟ್ ಹೇಳುತ್ತಿರುವ ನಾಲ್ಕನೇ ಸಿನಿಮಾವಾಗಿದೆ. ಚಿತ್ರಕ್ಕೆ ಎ. ಹರ್ಷ ನೃತ್ಯ ನಿರ್ದೇಶಿಸಲಿದ್ದು, ಸ್ಟಂಟ್ ಮಾಸ್ಟರ್ ವಿಜಯ್ ಫೈಟಿಂಗ್ ದೃಶ್ಯಾವಳಿಗಳನ್ನು ನಿರ್ದೇಶಿಸಲಿದ್ದಾರೆ ಹಾಗೂ ನಿರ್ಮಾಪಕ ಕಿಶೋರ್ ಪತಿಕೊಂಡ ಬಂಡವಾಳ ಹೂಡಿದ್ದಾರೆ.

  • ಸಂತೋಷ್ ಆನಂದ್ ರಾಮ್ ಕಚೇರಿಗೆ ಪುನೀತ್, ಜಗ್ಗೇಶ್ ಭೇಟಿ

    ಸಂತೋಷ್ ಆನಂದ್ ರಾಮ್ ಕಚೇರಿಗೆ ಪುನೀತ್, ಜಗ್ಗೇಶ್ ಭೇಟಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ನವರಸ ನಾಯಕ ಜಗ್ಗೇಶ್ ಅವರು ನಿರ್ದೇಶಕ ಸಂತೋಷ್ ಆನಂದ್ ರಾಮ್ ಕಚೇರಿಗೆ ಭೇಟಿ ನೀಡಿದ್ದಾರೆ.

    ಇದೇ ವೇಳೆ ಪುನೀತ್ ಹಾಗೂ ಜಗ್ಗೇಶ್ ಜೊತೆ ಟೈಮ್ ಪಾಸ್ ಮಾಡಿದ ಸಂತೋಷ್ ಆನಂದ್‍ರಾಮ್ ಇಬ್ಬರೊಟ್ಟಿಗೆ ಫೋಟೋ ಕ್ಲಿಕ್ಕಿಸಿಕೊಂಡು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ಜೊತೆಗೆ ಪುನೀತ್ ರಾಜ್‍ಕುಮಾರ್ ಹಾಗೂ ಜಗ್ಗೇಶ್ ಅವರೊಂದಿಗೆ ನಮ್ಮ ಕಚೇರಿಯಲ್ಲಿ ಉತ್ತಮ ಸಮಯ ಕಳೆದೆ ಎಂದು ಹಾರ್ಟ್ ಎಮೋಜಿ ಹಾಕಿ ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:  ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ

    ಇತ್ತೀಚೆಗಷ್ಟೇ ಸಂತೋಷ್ ಆನಂದ್ ರಾಮ್, ಪುನೀತ್ ಮತ್ತು ಹೊಂಬಾಳೆ ಫಿಲ್ಮ್ ಕಾಂಬಿನೇಷನ್‍ನಲ್ಲಿ ಮತ್ತೊಂದು ಹೊಸ ಸಿನಿಮಾ ಸೆಟ್ಟೇರುತ್ತಿರುವ ಬಗ್ಗೆ ಮಾಹಿತಿ ನೀಡುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದರು.

    ಈ ಮುನ್ನ 2017ರಲ್ಲಿ ತೆರೆಕಂಡ ಪುನೀತ್ ಅಭಿನಯದ ರಾಜಕುಮಾರ ಸಿನಿಮಾಕ್ಕೆ ಸಂತೋಷ್ ಆನಂದ್ ರಾಮ್ ಆ್ಯಕ್ಷನ್ ಕಟ್ ಹೇಳಿದ್ದರು. ಈ ಸಿನಿಮಾ ಸ್ಯಾಂಡಲ್‍ವುಡ್ ಬಾಕ್ಸ್ ಆಫೀಸ್‍ನಲ್ಲಿ ಸಾಕಷ್ಟು ಸದ್ದು ಮಾಡುವುದರ ಜೊತೆಗೆ ಫ್ಯಾಮಿಲಿ ಪ್ರೇಕ್ಷಕರ ಮನ ಗೆದ್ದಿತ್ತು. ನಂತರ ಯುವರತ್ನ ಸಿನಿಮಾದ ಮೂಲಕ ಸಂತೋಷ್ ಆನಂದ್ ರಾಮ್ ಪುನೀತ್‍ಗೆ ಮತ್ತೊಮ್ಮೆ ಆ್ಯಕ್ಷನ್ ಕಟ್ ಹೇಳಿದ್ದರು. ಇದೀಗ ಮತ್ತೆ ಈ ಜೋಡಿ ಹೊಸ ಸಿನಿಮಾಕ್ಕೆ ಕೈ ಜೋಡಿಸಲಿದ್ದಾರೆ. ಇದನ್ನೂ ಓದಿ: ಫಸ್ಟ್ ಟೈಂ ಭಾರತೀಯ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಮೈಕ್ ಟೈಸನ್

  • ಯಶ್, ಪುನೀತ್ ಅಲ್ಲ, ಸೈನಿಕರು ನಿಜವಾದ ಹೀರೋಗಳು: ಹನುಮಂತಪ್ಪ ಕೊಪ್ಪದ್ ಪತ್ನಿ

    ಯಶ್, ಪುನೀತ್ ಅಲ್ಲ, ಸೈನಿಕರು ನಿಜವಾದ ಹೀರೋಗಳು: ಹನುಮಂತಪ್ಪ ಕೊಪ್ಪದ್ ಪತ್ನಿ

    ಚಿಕ್ಕಮಗಳೂರು: ಸಿನಿಮಾಗಳಲ್ಲಿ ಮೂರು ಗಂಟೆ ನಟನೆ ಮಾಡುವ ಯಶ್, ಪುನೀತ್ ನಿಜವಾದ ಹೀರೋಗಳಲ್ಲ. ದೇಶಕ್ಕಾಗಿ ಹೋರಾಡುವ ಸೈನಿಕರು ಹಾಗೂ ದೇಶಕ್ಕಾಗಿ ಬೆವರು ಹರಿಸಿ ದುಡಿಯೋ ರೈತರು ನಿಜವಾದ ಹೀರೋಗಳು ಎಂದು ಮೃತ ಯೋಧ ಹನುಂತಪ್ಪ ಕೊಪ್ಪದ್ ಪತ್ನಿ ಹೇಳಿದ್ದಾರೆ.

    ನಗರದ ವಂದೇ ಮಾತರಂ ಟ್ರಸ್ಟ್ ಆಯೋಜಿಸಿದ್ದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು. ಇಂದಿನ ಯುವಕರಿಗೆ ಸಿನಿಮಾ ನಟರೇ ಹಿರೋಗಳು. ಆದರೆ, ಸೈನಿಕರು ತನಗಾಗಿ ದುಡಿಯೋದಿಲ್ಲ. ಮನೆಗಾಗಿ ದುಡಿಯೋದಿಲ್ಲ. ಬಂಧುಗಳಿಗಾಗಿ ದುಡಿಯೋದಿಲ್ಲ. ಬದಲಾಗಿ ಅವರು ದೇಶಕ್ಕಾಗಿ ದುಡಿಯುತ್ತಾರೆ, ದೇಶಕ್ಕಾಗಿ ಪ್ರಾಣ ಕೊಡುತ್ತಾರೆ. ಹೀಗಾಗಿ ಅವರು ನಿಜವಾದ ಹೀರೋಗಳು ಎಂದರು.

    ಸಿನಿಮಾ ನಟರು ಕೇವಲ ನಟರಷ್ಟೆ ಹೀರೋಗಳಲ್ಲ. ಈಗ ಇಲ್ಲಿಗೆ ಸಿನಿಮಾ ನಟ-ನಟಿಯರು ಬಂದಿದ್ದರೆ ನಿಮ್ಮ ಕೇಕೆ, ಶಿಳ್ಳೆಯನ್ನ ಕೇಳೋದಕ್ಕೆ ಆಗುತ್ತಿರಲಿಲ್ಲ. ಅದೇ ಓರ್ವ ಯೋಧ ಬಂದು ನಿಂತು ಮಾತನಾಡಿದರೆ ಅಷ್ಟು ಕೇಕೆ, ಶಿಳ್ಳೆ ಬರೋದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಬೆಂಗಳೂರಿನಲ್ಲೂ ನೋಡಿದ್ದೇನೆ. ಅಲ್ಲಿ ಹುಡುಗ-ಹುಡುಗಿಯರು ಬರೀ ಯಶ್, ಪುನೀತ್ ಅಂತಾರೆ. ಅವರು ನಿಜವಾದ ಹೀರೋಗಳಲ್ಲ. ನಿಜವಾದ ಹೀರೋಗಳು ಸೈನಿಕರು, ರೈತರು ಎಂದು ಮತ್ತೊಮ್ಮೆ ಉಚ್ಛರಿಸಿದರು.

    2016ರಲ್ಲಿ ಸಿಯಾಚಿನ್‍ನಲ್ಲಿ ಸಂಭವಿಸಿದ್ದ ಭಾರೀ ಹಿಮಪಾತದಲ್ಲಿ ಸಿಲುಕಿ ಕರ್ನಾಟಕದ ವೀರಯೋಧ ಹನುಮಂತಪ್ಪ ಕೊಪ್ಪದ್ 6 ದಿನಗಳ ಬಳಿಕ ಪತ್ತೆಯಾಗಿದ್ದರು. ಅವರನ್ನು ಜೀವಂತವಾಗಿ ಪತ್ತೆ ಮಾಡಿದ್ದರೂ ಬಹು ಅಂಗಾಂಗ ವೈಫಲ್ಯದಿಂದ ಅವರು ವೀರ ಮರಣ ಹೊಂದಿದ್ದರು. ಸಾವಿಗೆ ಸವಾಲೊಡ್ಡಿ ಮಂಜುಗಡ್ಡೆಗಳ ಮಧ್ಯೆ ಜೀವನ್ಮರಣ ಹೋರಾಟ ನಡೆಸಿದ್ದ ವೀರಯೋಧ ಹನುಮಂತಪ್ಪ ಅವರಿಗೆ ಮರಣೋತ್ತರ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

  • ಹೊಂಬಾಳೆ ಫಿಲಂಸ್‌ಗೆ 6ನೇ ವಸಂತ – ಯಶ್, ಪುನೀತ್ ಸಮಾಗಮ

    ಹೊಂಬಾಳೆ ಫಿಲಂಸ್‌ಗೆ 6ನೇ ವಸಂತ – ಯಶ್, ಪುನೀತ್ ಸಮಾಗಮ

    ಬೆಂಗಳೂರು: ಹೊಂಬಾಳೆ ಫಿಲಂಸ್‌ ಬ್ಯಾನರ್‌ಗೆ ಆರನೇ 6ನೇ ವಸಂತ ಸಂಭ್ರಮ. ಹೀಗಾಗಿ ನಗರದಲ್ಲಿ ಭರ್ಜರಿಯಾಗಿ ಔತಣ ಕೂಟ ನಡೆದಿದೆ. ಈ ಸಮಾರಂಭದಲ್ಲಿ ಸೂಪರ್ ಸ್ಟಾರ್‌ಗಳ ಸಮಾಗಮವಾಗಿದೆ.

    ಹೊಂಬಾಳೆ ಫಿಲಂಸ್‌ ಶನಿವಾರ ಆರನೇ ವಸಂತದ ಸಂಭ್ರಮದಲ್ಲಿತ್ತು. ಹೀಗಾಗಿ ಖಾಸಗಿ ಹೋಟೆಲಿನಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರ್ ಔತಣ ಕೂಟವನ್ನು ಏರ್ಪಡಿಸಿದ್ದರು. ಈ ಅದ್ಧೂರಿ ಪಾರ್ಟಿಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರಾಕಿಂಗ್ ಸ್ಟಾರ್ ಯಶ್, ರಾಧಿಕಾ ಪಂಡಿತ್ ಸೇರಿದಂತೆ ‘ರಾಜಕುಮಾರ’ ಹಾಗೂ ‘ಕೆಜಿಎಫ್’ ಚಿತ್ರತಂಡ ಭಾಗಿಯಾಗಿತ್ತು.

    ಹೊಂಬಾಳೆ ಸ್ಯಾಂಡಲ್‍ವುಡ್‍ನ ಜನಪ್ರಿಯ ಬ್ಯಾನರ್ ಆಗಿದ್ದು, ‘ನಿನ್ನಿಂದಲೇ’, ‘ಮಾಸ್ಟರ್ ಪೀಸ್’, ‘ರಾಜಕುಮಾರ’, ‘ಕೆಜಿಎಫ್’ ನಂತಹ ಸೂಪರ್ ಹಿಟ್ ಸಿನಿಮಾ ಕೊಟ್ಟಿರುವ ಕೀರ್ತಿ ಈ ಬ್ಯಾನರ್‌ಗೆ ಸಲ್ಲುತ್ತದೆ. ಇಡೀ ಭಾರತೀಯ ಚಿತ್ರರಂಗ ತಿರುಗಿ ನೋಡುವಂತಹ ಸಿನಿಮಾವನ್ನು ಬ್ಯಾನರ್ ಹೊಂಬಾಳೆ ಕೊಟ್ಟಿದೆ.

    ಸದ್ಯಕ್ಕೆ ಹೊಂಬಾಳೆ ಬ್ಯಾನರ್ ಅಡಿಯಲ್ಲಿ ‘ಕೆಜಿಎಫ್ ಚಾಪ್ಟರ್ 2’ ಹಾಗೂ ‘ಯುವರತ್ನ’ ಸಿನಿಮಾ ನಿರ್ಮಾಣಗೊಳ್ಳುತ್ತಿವೆ. ಕಳೆದ ದಿನವೇ ‘ಕೆಜಿಎಫ್ ಚಾಪ್ಟರ್ 2’ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಕಳೆದ ವರ್ಷ ಇದೇ ದಿನದಂದು ‘ಕೆಜಿಎಫ್’ ಸಿನಿಮಾ ರಿಲೀಸ್ ಆಗಿತ್ತು. ಈ ಸಿನಿಮಾ ಇಡೀ ದೇಶ ಚಂದನವನದತ್ತ ತಿರುಗಿ ನೋಡುವಂತೆ ಮಾಡಿತ್ತು. ಈಗ ‘ಕೆಜಿಎಫ್ ಚಾಪ್ಟರ್ 2’ ಚಿತ್ರದ ಫಸ್ಟ್ ಲುಕ್ ನೋಡಿ ಮತ್ತೆ ದಂಗಾಗುವಂತೆ ಮಾಡಿದೆ.

    ಡಿಸೆಂಬರ್ 21 ‘ಕೆಜಿಎಫ್’ ರಿಲೀಸ್ ಆದ ದಿನ. ‘ಕೆಜಿಎಫ್ ಚಾಪ್ಟರ್ 2’ ಫಸ್ಟ್ ಲುಕ್ ಬಿಡುಗಡೆಯಾಗಿರುವ ದಿನ. ಎಲ್ಲದಕ್ಕಿಂತ ಹೆಚ್ಚಾಗಿ ಹೊಂಬಾಳೆ ಎಂಬ ಬ್ಯಾನರ್ ಲಾಂಚ್ ಆದ ದಿನ. ಇದೇ ಖುಷಿಯಲ್ಲಿ ಎಲ್ಲಾ ಒಟ್ಟಾಗಿ ಸೇರಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಕರುನಾಡ ಮಂದಿಗೆ, ಸಿನಿಮಾ ಪ್ರೇಮಿಗಳಿಗೆ, ಸಪೋರ್ಟ್ ಮಾಡಿದ ಎಲ್ಲರಿಗೂ ನಿರ್ಮಾಪಕ ವಿಜಯ್ ಕಿರಗಂದೂರ್ ಧನ್ಯವಾದ ತಿಳಿಸಿದ್ದಾರೆ. ತಮ್ಮ ಬ್ಯಾನರ್ ನಲ್ಲಿ ಕೆಲಸ ಮಾಡಿದ ಸುಮಾರು 400 ಮಂದಿಗೆ ಭರ್ಜರಿ ಔತಣ ಕೂಟ ಏರ್ಪಡಿಸಿದ್ದರು.