Tag: ಪುನೀತ್ ರಾಜ್‍ಕುಮಾರ್

  • ಭತ್ತದ ಬೆಳೆಯಲ್ಲಿ ಮೂಡಿ ಬಂದ ಅಪ್ಪು ಚಿತ್ರ – ವಿಭಿನ್ನ ಕಲೆ ಮೂಲಕ ಅಭಿಮಾನ ಮೆರೆದ ರೈತ

    ಭತ್ತದ ಬೆಳೆಯಲ್ಲಿ ಮೂಡಿ ಬಂದ ಅಪ್ಪು ಚಿತ್ರ – ವಿಭಿನ್ನ ಕಲೆ ಮೂಲಕ ಅಭಿಮಾನ ಮೆರೆದ ರೈತ

    ರಾಯಚೂರು: ಕರ್ನಾಟಕ ರತ್ನ, ಕನ್ನಡ ಚಿತ್ರರಂಗದ ದೊಡ್ಮನೆ ಕಣ್ಮಣಿ ಪುನೀತ್ ರಾಜಕುಮಾರ್ (Puneeth Rajkumar) ಅಂದ್ರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ. ಸಾಕಷ್ಟು ಅಭಿಮಾನಿಗಳು ಈಗಾಗಲೇ ಭಿನ್ನ ವಿಭಿನ್ನ ರೀತಿಯಲ್ಲಿ ಅಪ್ಪು ಮೇಲಿನ ಅಭಿಮಾನ ಮೆರೆದಿದ್ದಾರೆ. ಆದರೆ ರಾಯಚೂರಿನ (Raichur) ಅಭಿಮಾನಿ ರೈತ ಕಲಾವಿದ ಸತ್ಯನಾರಾಯಣ ಮಾತ್ರ ವಿಶೇಷವಾಗಿ ನಿಲ್ಲುತ್ತಾರೆ.

    ಸಿರವಾರ ತಾಲೂಕಿನ ಡೋಣಿ ಬಸವಣ್ಣ ಕ್ಯಾಂಪ್‌ನ ರೈತ, ಅಪ್ಪು ಅಭಿಮಾನಿ ಸತ್ಯನಾರಾಯಣ ತನ್ನ ಎರಡು ಎಕರೆ ಗದ್ದೆಯಲ್ಲಿ ಜಪಾನ್ ತಂತ್ರಜ್ಞಾನ ಮೂಲಕ ವಿವಿಧ ಭತ್ತದ ತಳಿಗಳನ್ನು ಬೆಳೆದು ಅಪ್ಪು ಚಿತ್ರ ಬಿಡಿಸಿದ್ದಾರೆ. ಈ ಮೂಲಕ ಭತ್ತದ ಬೆಳೆಯಲ್ಲಿ ಪುನೀತ್ ರಾಜಕುಮಾರ್‌ನ ಜೀವಂತವಿರಿಸಿದ್ದಾರೆ.

    ತೆಲಂಗಾಣ, ಗುಜರಾತ್‌ನಿಂದ ತಂದ ಕಾವೇರಿ, ಗೋಲ್ಡನ್ ರೋಸ್, ಕಾಲ ಭಟ್ಟಿ ಹೆಸರಿನ 100 ಕೆ.ಜಿ ಭತ್ತದ ಬೀಜಗಳನ್ನು ನೆಟ್ಟು ಸಾವಯವ ಪದ್ಧತಿಯಲ್ಲಿ ಬೆಳೆದು ಅಪ್ಪು ಮೇಲಿನ ಅಭಿಮಾನ ಮೆರೆದಿದ್ದಾರೆ. ಬರದ ನಡುವೆಯೇ ಟ್ಯಾಂಕರ್ ಮೂಲಕ ಗದ್ದೆಗೆ ನೀರು ಹಾಯಿಸಿ ಸುಮಾರು 3 ಲಕ್ಷ ರೂ. ಖರ್ಚು ಮಾಡಿ, ನಿತ್ಯ ನಿಗಾವಹಿಸಿ 90 ದಿನದ ಬೆಳೆಯಲ್ಲಿ ಅದ್ಭುತ ಕಲಾಚಿತ್ರ ಮೂಡಿಸಿದ್ದಾರೆ. ಭಾವಚಿತ್ರದ ಕೆಳಗೆ ‘ಕರ್ನಾಟಕ ರತ್ನ’ ಅನ್ನೋ ಅಕ್ಷರಗಳನ್ನೂ ಬೆಳೆಯಲ್ಲೇ ಬರೆದಿದ್ದಾರೆ. ಒಂದೊಂದು ಅಕ್ಷರ 40 ಅಡಿ ಇದೆ. ತನ್ನ ಅಂಗವೈಕಲ್ಯ ಮೆಟ್ಟಿ ನಿಂತು ಉತ್ತಮ ಬೆಳೆ ಬೆಳೆಯುವ ಮೂಲಕ ಅಪ್ಪು ದ್ವಿತೀಯ ಪುಣ್ಯಸ್ಮರಣೆಗೆ ಅಭಿಮಾನಿಗಳಿಗೆ ವಿಶೇಷ ಉಡುಗೊರೆ ನೀಡಿದ್ದಾರೆ. ಇದನ್ನೂ ಓದಿ: Operation Ajay: ಇಸ್ರೇಲ್‌ನಿಂದ 230 ಮಂದಿ ಭಾರತೀಯರ ಆಗಮನ – ಕನ್ನಡಿಗರಿಗೆ ಟಿ.ಬಿ ಜಯಚಂದ್ರ ಆತ್ಮೀಯ ಸ್ವಾಗತ

    ರೈತ (Farmer) ಸತ್ಯನಾರಾಯಣ ಅವರಿಗೆ ಅಪ್ಪು ಮೇಲೆ ಇರುವ ಅಭಿಮಾನಕ್ಕೆ ಇಡೀ ಗ್ರಾಮವೇ ಮೆಚ್ಚುಗೆ ವ್ಯಕ್ತಪಡಿಸಿದೆ. ಚಪ್ಪಲಿ ಹಾಕದೆ ಬರಿಗಾಲಲ್ಲೇ ಉಳುಮೆ ಮಾಡಿರುವ ರೈತ ಸತ್ಯನಾರಾಯಣ, ಗದ್ದೆಗೆ ಪೂಜೆ ಮಾಡುವ ಮೂಲಕ ಅಪ್ಪು ಮೇಲಿನ ಅಭಿಮಾನದ ಭಕ್ತಿಯನ್ನೂ ಮೆರೆಯುತ್ತಿದ್ದಾರೆ. ಸಾಮಾನ್ಯ ಕಣ್ಣಿಗೆ ಕಪ್ಪು, ಹಸಿರು ಬೆಳೆ ಮಾತ್ರ ಕಾಣುತ್ತಿದ್ದರೂ ಡ್ರೋನ್ ಕ್ಯಾಮೆರಾ ಕಣ್ಣಿಲ್ಲಿ ಅಪ್ಪು ಚಿತ್ರ ಮನಮೋಹಕವಾಗಿ ಮೂಡಿಬಂದಿದೆ.

    ಈಗಾಗಲೇ ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ಭೇಟಿಯಾಗಿರುವ ಸತ್ಯನಾರಾಯಣ ಮೆಚ್ಚುಗೆಯನ್ನೂ ಪಡೆದಿದ್ದಾರೆ. ಅಶ್ವಿನಿಯವರ ಕೈಯಿಂದ ಅಪ್ಪು ಭಾವಚಿತ್ರವನ್ನು ಲೋಕಾರ್ಪಣೆ ಮಾಡಿಸುವ ಇಂಗಿತ ಹೊಂದಿದ್ದಾರೆ. ಒಟ್ಟಿನಲ್ಲಿ ಇಡೀ ದೇಶದಲ್ಲೇ ಅಪರೂಪದ ಕಲೆಯ ಮೂಲಕ ಅಪ್ಪು ಅಭಿಮಾನಿ ತನ್ನ ಅಭಿಮಾನವನ್ನು ಜಗತ್ತಿಗೆ ತೋರಿಸಿದ್ದಾರೆ. ಇದನ್ನೂ ಓದಿ: ಐಟಿ ಭರ್ಜರಿ ಬೇಟೆ- ಬಾಕ್ಸ್‌ಗಳಲ್ಲಿ ಕಂತೆ ಕಂತೆ ಸಂಗ್ರಹಿಸಿಟ್ಟಿದ್ದ 42 ಕೋಟಿ ರೂ. ಸೀಜ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪುನೀತ್‌ ನೆನಪಲ್ಲಿ ಅನದಾನ ಮಾಡಿದ ಅಪ್ಪು ಅಭಿಮಾನಿಗೆ ಭೇಷ್‌ ಎಂದ ಫ್ಯಾನ್ಸ್

    ಪುನೀತ್‌ ನೆನಪಲ್ಲಿ ಅನದಾನ ಮಾಡಿದ ಅಪ್ಪು ಅಭಿಮಾನಿಗೆ ಭೇಷ್‌ ಎಂದ ಫ್ಯಾನ್ಸ್

    ಪ್ಪು (Appu) ಸದಾ ಕಣ್ಣ ಮುಂದಿನ ದೀಪ. ಅದು ಯಾವತ್ತೂ ಆರುವುದಿಲ್ಲ. ಅದೆಂಥ ಬಿರುಗಾಳಿ ಬಂದರೂ ಅಲುಗಾಡುವುದಿಲ್ಲ. ಅದಕ್ಕೆ ಆ ಜೀವವನ್ನು ಅಪ್ಪು ಎನ್ನುತ್ತಾರೆ. ಆ ಕನ್ನಡದ ಕಂದ ಮಾಡಿದ ಸಮಾಜ ಸೇವೆಯೆಷ್ಟೋ? ಹಸಿದವರಿಗೆ ಅನ್ನ ಬಡಿಸಿದ್ದೆಷ್ಟೊ? ದೇಹಿ ಎಂದವರಿಗೆ ಕೈ ತುಂಬಾ ಕೊಟ್ಟಿದ್ದೆಷ್ಟೋ? ಈಗ ಅದೇ ನೆನಪಲ್ಲಿ ಆಂಧ್ರ ಪ್ರದೇಶದ ಅಪ್ಪು ಅಭಿಮಾನಿ(Appu Fan) ನಿತ್ಯ ನೂರಾರು ಹಸಿದ ಹೊಟ್ಟೆಗಳಿಗೆ ಅನ್ನ ಕೊಡುತ್ತಿದ್ದಾರೆ. ಏನಿದು ಅಪ್ಪು ಅಭಿಮಾನಿ ಅನ್ನ ದಾನದ ಕಥೆ. ಇಲ್ಲಿದೆ ಮಾಹಿತಿ.

    ಆ ಕೂಸು ಜೀವಂತ ಇದ್ದಾಗ ಗೊತ್ತಾಗಲಿಲ್ಲ. ಆ ಕೂಸು ಉಸಿರಾಡುತ್ತಿದ್ದಾಗ ಅರಿವಿಗೆ ಬರಲಿಲ್ಲ. ಆ ಕೂಸು ನಡೆದಾಡುತ್ತಿದ್ದಾಗ…ಎರಡು ಕಣ್ಣಿಗೆ ನಿಲುಕಲಿಲ್ಲ. ಬಹುಶಃ ಈ ಗುಣವೇ ಇಂದು ಅವರನ್ನು ದೇವರ ಮುಂದಿನ ನಂದಾದೀಪವಾಗಿಸಿದೆ. ಸೂರ್ಯ ಚಂದ್ರ ಇರೋವರೆಗೂ ಮರೆಯದಂಥ ಪಾಠ ಕಲಿಸಿ ಹೋಗಿದೆ. ಪುನೀತ್ ರಾಜ್‌ಕುಮಾರ್ ಈ ರೀತಿ ನಮ್ಮನ್ನು ಈ ಕ್ಷಣಕ್ಕೂ ಕಾಡುತ್ತಿದ್ದಾರೆ, ಕಂಗಾಲಾಗಿಸುತ್ತಾರೆ, ಬೆರಗು ಮೂಡಿಸುತ್ತಾರೆ. ಕೊನೆಗೆ ನಿಷ್ಕಲ್ಮಶ ನಗುವಿನಿಂದ ಕಣ್ಣ ಪಾಪೆಯಲ್ಲಿ ಹನಿ ನೀರಾಗುತ್ತಾರೆ. ಜೊತೆಗೆ ಇರದ ಜೀವ ಎಂದೆಂದೂ ಜೀವಂತ. ಈ ಸಾಲು ನಮ್ಮ ಹೃದಯ ಬಡಿತವಾಗುವುದು ಹೀಗೆ. ತಾಯಿಯ ಸೀರೆ ಸೆರಗಲ್ಲಿ ಮಲಗಿದ ಹಸಗೂಸಿನ ಹಾಗೆ. ಇದನ್ನೂ ಓದಿ:ಅಕ್ಷಯ್ ನಟನೆಯ ‘ವೆಲ್‌ಕಮ್ 3’ ಸಿನಿಮಾದಲ್ಲಿ ಸ್ಟಾರ್ ಕಲಾವಿದರ ದಂಡು

    ಪುನೀತ್‌ ರಾಜ್‌ಕುಮಾರ್ (Puneeth Rajkumar) ಹೋಗಿ 2 ವರ್ಷ ಸಮೀಪ. ಕಂಠೀರವ ಸ್ಟುಡಿಯೋದಲ್ಲಿ ಅವರ ಸಮಾಧಿ ಮುಂದೆ ನಿತ್ಯ ನೂರಾರು ಜನರು ಹಣತೆ ಬೆಳಗುತ್ತಾರೆ. ಮಗುವಿನ ನಾಮಕರಣ ಮಾಡುತ್ತಾರೆ. ಜೋಡಿಗಳು ದಾಂಪತ್ಯಕ್ಕೆ ಕಾಲಿಡುತ್ತಾರೆ. ಇದ್ದಾಗ ನೋಡಲಾಗಲಿವಲ್ಲ ಅಣ್ಣಾವ್ರ ಮಗನೇ ಎನ್ನುತ್ತಾ ಬಿಕ್ಕುತ್ತಾರೆ. ಯಾರು ಏನು ಮಾಡಿದರೂ ಅಪ್ಪು ಅದೇ ರಾಜಕುಮಾರನ ನಗೆ ಚೆಲ್ಲುತ್ತಾ ನಿದ್ದೆ ಮಾಡುತ್ತಿದ್ದಾರೆ. ಪಕ್ಕದಲ್ಲಿ ಅಪ್ಪ-ಅಮ್ಮ ಅನಿವಾರ್ಯವಾಗಿ ಜೋಗುಳ ಹಾಡುತ್ತಾರೆ. ಜೀವಂತ ಇರುವ ಇಡೀ ಕರುನಾಡು ದೇವರು ಗೀಚಿದ ಕಪ್ಪು ಅಕ್ಷರಕ್ಕೆ ಹಿಡಿ ಶಾಪ ಹಾಕುತ್ತದೆ. ಆದರೆ ಅಪ್ಪು ಬಿಟ್ಟು ಹೋದ ದಾನ ಧರ್ಮದ ಪಾಠ. ಹೊಸ ದಿಕ್ಕಿಗೆ ದಾರಿ ತೋರಿಸುತ್ತದೆ. ಅದಕ್ಕೆ ಸಾಕ್ಷಿ ಆಂಧ್ರಪ್ರದೇಶ ಅನಂತಪುರದ ರನ್ನ ರೆಡ್ಡಿಯ(Ranna Reddy) ಅನ್ನ ದಾಸೋಹ.

    ಅಪ್ಪು ಕರುನಾಡಿನಲ್ಲಿ ಹುಟ್ಟಿ ಇಲ್ಲೇ ಮಣ್ಣಾದರು. ಆದರೆ ಅವರು ಹೋದ ಮೇಲೆ ನಡೆದ ಮನ್ವಂತರ ಇದೆಯಲ್ಲ. ಅದನ್ನು ಊಹಿಸಿಕೊಳ್ಳಲೂ ಸಾಧ್ಯ ಇಲ್ಲ. ಒಬ್ಬ ವ್ಯಕ್ತಿ ಜೀವಂತ ಇದ್ದಾಗ ಇಷ್ಟೆಲ್ಲ ಮಾಡಿದ್ದರಾ? ಒಂದು ಕೈಯಿಂದ ಕೊಟ್ಟಿದ್ದು ಇನ್ನೊಂದು ಕೈಗೆ ಗೊತ್ತಾಗಬಾರದು. ಹಾಗೆ ಬಿಚ್ಚುಗೈಯಾಗಿ ಬದುಕಿದ್ದರಾ? ಇದೆಲ್ಲವೂ ಹೊರಬಿದ್ದದ್ದು ಅವರು ಲೋಕ ಬಿಟ್ಟು ಹೋದ ಮೇಲೆ. ಅದೇ ಕೋಟಿ ಕೋಟಿ ಜನರಿಗೆ ಸ್ಪೂರ್ತಿಯಾಯಿತು. ಅನ್ನದಾನದಿಂದ ಹಿಡಿದು ನೇತ್ರದಾನವರೆಗೆ. ಮಾದರಿಯಾಯಿತು. ಅದನ್ನೆಲ್ಲ ನೋಡಿಯೇ ರನ್ನ ರೆಡ್ಡಿ ಸಂಜೀವಿನಿ ಟ್ರಸ್ಟ್ ಮೂಲಕ ಅನಂತಪುರದ ಸಾವಿರಾರು ಹಸಿದ ಹೊಟ್ಟೆಗಳಿಗೆ ನಿತ್ಯ ತಾಯಿಯಾಗಿದ್ದಾರೆ. ಬಡವರು, ವೃದ್ಧರು, ಅನಾಥರು ಇವರನ್ನು ಹುಡುಕಿಕೊಂಡು ಹೋಗಿ ತುತ್ತು ತಿನ್ನಿಸಿ ಪುನೀತರಾಗುತ್ತಾರೆ.

    ಒಬ್ಬ ವ್ಯಕ್ತಿ ಬಳಿ ಕೋಟಿ ಕೋಟಿ ಹಣ ಇರಬಹುದು. ಆದರೆ ಅದರ ಮುಷ್ಟಿ ಪಾಲನ್ನು ಹಂಚುವ ಗುಣ ಇರದಿದ್ದರೆ ಹೇಗೆ? ಆ ಆಕಾಂಕ್ಷೆ ಇದ್ದಿದ್ದರಿಂದಲೇ ಅಪ್ಪು ನೊಂದವರ ಪಾಲಿಗೆ ದೇವರು ಕೊಟ್ಟ ಮಗನಾದರು. ಅದನ್ನೆಲ್ಲ ನೋಡಿ ಕೇಳಿ ಓದಿಯೇ ರನ್ನ ರೆಡ್ಡಿ ಅನ್ನ ಸಂತರ್ಪಣೆಗೆ ಮನಸು ಮಾಡಿದರು. ಕೈಯಾರೆ ಕಾಸು ಸುರಿದು ಹಸಿದ ಜೀವಗಳಿಗೆ ಅಮೃತ ನೀಡಿದರು. ಅಪ್ಪು ನನ್ನ ಪಾಲಿನ ದೇವರು ಬದುಕು ಕಲಿಸಿದ ಹೆತ್ತವ್ವ ಹೀಗೆ ಹೇಳುತ್ತಾರೆ ಅವರು. ಇದು ನೋಡಿ ಒಬ್ಬ ಮನುಷ್ಯ ಕಲಿಯಬೇಕಾದ ನೀತಿ ಪ್ರೀತಿ. ಇಷ್ಟೆಲ್ಲ ಕೊಟ್ಟು ಕೆಲವನ್ನು ಇಲ್ಲೇ ಬಿಟ್ಟು ಅಪ್ಪು ಆಕಾಶದ ನಕ್ಷತ್ರವಾಗಿದ್ದಾರೆ. ಆ ನಕ್ಷತ್ರದ ಬೆಳಕಿನಲ್ಲಿ ದಾರಿ ಹುಡುಕುತ್ತಾ ನಡೆಯುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಪ್ಪು ಕನಸಿಗೆ ಮಹತ್ವದ ನಿರ್ಧಾರ ಕೈಗೊಂಡ ಅಶ್ವಿನಿ ಪುನೀತ್‌ ರಾಜ್‌ಕುಮಾರ್

    ಅಪ್ಪು ಕನಸಿಗೆ ಮಹತ್ವದ ನಿರ್ಧಾರ ಕೈಗೊಂಡ ಅಶ್ವಿನಿ ಪುನೀತ್‌ ರಾಜ್‌ಕುಮಾರ್

    ಪ್ಪು (Appu) ಮಹಾ ಕನಸನ್ನು ನನಸಾಗಿಸುತ್ತಿದ್ದಾರೆ ಪತ್ನಿ ಅಶ್ವಿನಿ. ಅಂದು ಪಾರ್ವತಮ್ಮ ಮಾಡಿದ ಕಾಯಕವನ್ನು ಮುಂದವರೆಸಿಕೊಂಡು ಹೋಗುತ್ತಿದ್ದಾರೆ. ರಾಜ್ ಹೇಗೆ ಪತ್ನಿ ಯನ್ನು ಬೆಂಬಲಿಸಿದ್ದರೊ ಅದೇ ರೀತಿ ಅಶ್ವಿನಿ(Ashwini Puneeth Rajkumar) ಹಿಂದೆ ಪುನೀತ್ ಇದ್ದರು. ಮೂವರು ದೇವರ ಆಶೀರ್ವಾದದಿಂದ ಇಂದು ಅಶ್ವಿನಿ ಹೊಸ ಸಾಹಸ ಮಾಡುತ್ತಿದ್ದಾರೆ.

    ಅಪ್ಪು ಜೊತೆಗಿರದ ಜೀವ ಎಂದೆಂದಿಗೂ ಜೀವಂತ. ಹೀಗೊಂದು ಮಾತನ್ನು ಎಲ್ಲರೂ ಹೇಳುತ್ತಿದ್ದಾರೆ. ಆದರೆ ಕಣ್ಣ ಮುಂದೆ ಇಲ್ಲದ ಜೀವವನ್ನು ನೆನೆಸಿಕೊಂಡು ಸಂಕಟ ಪಡುತ್ತಾರೆ. ಒಂದೊಂದು ದಿನವನ್ನು ಒಂದೊಂದು ವರ್ಷದಂತೆ ಕಳೆಯುತ್ತಿದ್ದಾರೆ. ಇನ್ನು ಅಶ್ವಿನಿ ಹಾಗೂ ಮಕ್ಕಳ ಸ್ಥಿತಿ ಏನಾಗಿರಬೇಡ? ಎಲ್ಲವೂ ದೈವೆಚ್ಛೆ. ಹೀಗಂತ ಅಂದುಕೊಂಡು ಅಪ್ಪು ಕನಸನ್ನು ನನಸು ಮಾಡುವತ್ತ ಹೊಸ ಹೆಜ್ಜೆ ಇಟ್ಟಿದ್ದಾರೆ ಅಶ್ವಿನಿ. ಮಹಿಳೆಯರ ಶಕ್ತಿಯನ್ನು ಕರುನಾಡಿಗೆ ತೋರಿಸಲು ಸಜ್ಜಾಗಿದ್ದಾರೆ.

    ಪಾರ್ವತಮ್ಮ ರಾಜ್‌ಕುಮಾರ್ (Parvatamma Rajkumar) ಕನ್ನಡದ ಧೀಮಂತ ನಿರ್ಮಾಪಕಿ. ಅವರಿಗೆ ಬೆಂಬಲವಾಗಿ ನಿಂತಿದ್ದರು ಅಣ್ಣಾವ್ರು. ಒಬ್ಬ ಹೆಣ್ಣು ಮಗಳು ನಿರ್ಮಾಪಕಿಯಾಗಲು ಹೇಗೆ ಸಾಧ್ಯ? ಆಡಿಕೊಂಡವರು ಇದ್ದರು. ಅದಕ್ಕೆಲ್ಲ ಸೊಪ್ಪು ಹಾಕದೆ, ಎದೆಗುಂದದೆ ಮುಂದಿಟ್ಟ ಹೆಜ್ಜೆ ಹಿಂದಿಡದ ಕಾರಣಕ್ಕೆ ಪಾರ್ವತಮ್ಮ ಹೆಡ್ಡಾಫೀಸ್ ಎಂದು ಕರೆಸಿಕೊಂಡರು. ಮಹಿಳೆಯರಿಗಾಗಿ ಅವರು ಶಕ್ತಿಧಾಮವನ್ನು ಸ್ಥಾಪಿಸಿದ್ದು ಗೊತ್ತು. ಹಾಗೆಯೇ ಬಣ್ಣದ ಲೋಕದಲ್ಲಿ ಅನೇಕ ಹೊಸ ನಟಿಯರಿಗೆ ಅವಕಾಶ ಕೊಟ್ಟು ಗಾಢ್‌ ಮದರ್ ಎಂದು ಕರೆಸಿಕೊಡರು. ಇದನ್ನೂ ಓದಿ:ತಮಿಳಿಗೆ ಹಾರಿದ ‘ಸೀತಾರಾಮಂ’ ನಟಿ- ಶಿವಕಾರ್ತಿಕೇಯನ್‌ಗೆ ಮೃಣಾಲ್ ನಾಯಕಿ

    ರಾಜ್‌ಕುಮಾರ್ ಸಿನಿಮಾಗಳಿಗೆ ನಾಯಕಿಯರನ್ನು ಆಯ್ಕೆ ಮಾಡುತ್ತಿದ್ದರು ಪಾರ್ವತಮ್ಮ. ಜಯಮಾಲಾ, ಮಂಜುಳಾ, ಆರತಿ. ಇವರನ್ನು ರಾಜ್ ಚಿತ್ರಗಳಿಗೆ ಆಯ್ಕೆ ಮಾಡಿ ಅವರಿಗೆಲ್ಲ ಸ್ಟಾರ್ ಪಟ್ಟ ನೀಡಿದರು. ಶಿವಣ್ಣನಿಗಾಗಿ ಸುಧಾರಾಣಿ, ಆಶಾರಾಣಿ, ಅನು ಪ್ರಭಾಕರ್ ಸೇರಿದಂತೆ ಹಲವು ನಟಿಯರು ಪಾರ್ವತಮ್ಮನವರ ಆಶೀರ್ವಾದ ಪಡೆದರು. ರಾಘಣ್ಣನ ನಂಜುಂಡಿ ಕಲ್ಯಾಣ್‌ಕ್ಕೆ ಮಾಲಾಶ್ರೀ. ಅಪ್ಪು ಚಿತ್ರಗಳಿಗೆ ರಕ್ಷಿತಾ, ರಮ್ಯಾ ಬಂದು ಈಗಲೂ ಹೆಸರು ಉಳಿಸಿಕೊಂಡಿರು. ಈ ನಟಿಯರಿಗೆ ಸ್ತ್ರಿ ಶಕ್ತಿಯಾಗಿದ್ದು ಪಾರ್ವತಮ್ಮ.

    ಇದೀಗ ಅಶ್ವಿನಿ ಇನ್ನೊಂದು ರೂಪದಲ್ಲಿ ಮಹಿಳೆಯರಿಗೆ ಬಲ ನೀಡಲು ತಯಾರಾಗಿದ್ದಾರೆ. ಪಿಆರ್‌ಕೆ ಬ್ಯಾನರ್‌ನಲ್ಲಿ ಮಹಿಳೆಯರಿಗೆ ಹೆಚ್ಚು ಒತ್ತು ನೀಡಲು ನಿರ್ಧರಿಸಿದ್ದಾರೆ. ಮಹಿಳಾ ನಿರ್ದೇಶಕಿರು, ಕತೆಗಾರರು, ಸಂಭಾಷಣೆಕಾರರು, ನಟಿಯರು. ಹೀಗೆ ಎಷ್ಟು ಸಾಧ್ಯವೋ ಅಷ್ಟು ಕಡೆ ಮಹಿಳೆಯರಿಗೆ ಮೊದಲ ಆದ್ಯತೆ ನೀಡುತ್ತೇನೆ ಎಂದು ಘೋಷಿಸಿದ್ದಾರೆ. ಅಪ್ಪು ಕೂಡ ಪತ್ನಿಯನ್ನು ಅನುಮೋದಿಸುತ್ತಿದ್ದರು. ಈಗದನ್ನು ಇನ್ನಷ್ಟು ಪ್ರಬುದ್ಧವಾಗಿ ಮಾಡುತ್ತಿದ್ಧಾರೆ ಅಶ್ವಿನಿ. ಮೂವರು ದೇವರು ಹಾರೈಸುತ್ತಿದ್ದಾರೆ. ಅಶ್ವಿನಿ ಅವರ ನಿಷ್ಕಲ್ಮಶ ಮನಸ್ಸಿಗೆ ಕನ್ನಡಿಗರು ಕೈ ಹಿಡಿಯದಿರುತ್ತಾರಾ ಹೇಳಿ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಕ್ತದಲ್ಲಿ ಪುನೀತ್ ಚಿತ್ರ ಬರೆದ ಅಭಿಮಾನಿ ದೇವರು

    ರಕ್ತದಲ್ಲಿ ಪುನೀತ್ ಚಿತ್ರ ಬರೆದ ಅಭಿಮಾನಿ ದೇವರು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ದಿ ಕೇರಳ ಸ್ಟೋರಿ’ ಸಕ್ಸಸ್ ಬೆನ್ನಲ್ಲೇ ಮದುಮಗಳಾದ ಅದಾ ಶರ್ಮಾ

    ‘ದಿ ಕೇರಳ ಸ್ಟೋರಿ’ ಸಕ್ಸಸ್ ಬೆನ್ನಲ್ಲೇ ಮದುಮಗಳಾದ ಅದಾ ಶರ್ಮಾ

    ಬಾಲಿವುಡ್ ನಟಿ ಅದಾ ಶರ್ಮಾ (Adah Sharma) ಅವರು ‘ದಿ ಕೇರಳ ಸ್ಟೋರಿ’ (The Kerala Story)  ಸಿನಿಮಾ ಸೂಪರ್ ಸಕ್ಸಸ್ ನಂತರ ಕೈ ತುಂಬಾ ಅವಕಾಶಗಳು ಅರಸಿ ಬರುತ್ತಿದೆ. ಈ ನಡುವೆ ಮದುಮಗಳಾಗಿ ನಟಿ ಮಿಂಚ್ತಿದ್ದಾರೆ. ಈ ಕುರಿತ ವೀಡಿಯೋ ಎಲ್ಲೆಡೆ ಸದ್ದು ಮಾಡುತ್ತಿದೆ. ಹೌದಾ.? ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ್ರಾ ಅದಾ ಶರ್ಮಾ?

    ಬಹುಭಾಷಾ ನಟಿಯಾಗಿ ಗಮನ ಸೆಳೆಯುತ್ತಿರೋ ಈ ಮುದ್ದು ಮುಖದ ಚೆಲುವೆ ಅದಾ, ಕನ್ನಡದ ‘ರಣವಿಕ್ರಮ’ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಪುನೀತ್ ರಾಜ್‌ಕುಮಾರ್‌ಗೆ (Puneeth Rajkumar) ನಾಯಕಿಯಾಗಿ ನಟಿಸಿದ್ದ ಅದಾ ಶರ್ಮಾ ಇತ್ತೀಚಿಗೆ ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ನಟಿಸಿ ದೇಶದೆಲ್ಲೆಡೆ ಸಂಚಲನ ಮೂಡಿಸಿದ್ರು. ಮೀನಾಕ್ಷಿ ಎಂಬ ಪಾತ್ರದ ಮೂಲಕ ಮನೆ ಮಾತಾದರು. ಲವ್ ಜಿಹಾದ್ ಕುರಿತ ಈ ಕಥೆಯನ್ನ ಅಭಿಮಾನಿಗಳು ಮೆಚ್ಚಿಕೊಂಡಿದ್ರು. ಇದನ್ನೂ ಓದಿ:ಕಾರವಾರದಲ್ಲಿ ಬದುಕಿದ್ದ ವಿಲಕ್ಷಣ ವ್ಯಕ್ತಿಯ ಕಥೆಯೇ ‘ಟೋಬಿ’ : ಗುಟ್ಟು ರಟ್ಟು

    ‘ದಿ ಕೇರಳ ಸ್ಟೋರಿ’ ಸಕ್ಸಸ್ ನಂತರ ಬಂಪರ್ ಆಫರ್ಸ್‌ಗಳು ನಟಿ ಅದಾಗೆ ಅರಸಿ ಬರುತ್ತಿದೆ. ಈ ಚಿತ್ರದ ಯಶಸ್ಸಿನಿಂದ ಚಿತ್ರರಂಗದಲ್ಲಿ ಗಟ್ಟಿ ನೆಲೆ ಗಿಟ್ಟಿಸಿಕೊಳ್ಳುವ ಅವಕಾಶ ಸಿಗುತ್ತಿದೆ. ಹೀಗಿರುವಾಗ ವೈವಾಹಿಕ ಜೀವನಕ್ಕೆ ಅದಾ ಕಾಲಿಡುವ ತಾಲೀಮು ನಡೆಸುತ್ತಿದ್ದಾರೆ. ಹಸಿರು ಬಣ್ಣದ ಸೀರೆಯುಟ್ಟು ಸ್ಲೀವ್‌ಲೆಸ್ ಬ್ಲೌಸ್ ಧರಿಸಿ ಮದುಮಗಳಾಗಿ ಬೈಕ್ ಮೇಲೆ ಕುಳಿತು ಪೋಸ್ ನೀಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    ಅಯ್ಯೋ.. ಅದಾ ಶರ್ಮಾ ಮದುವೆಯಾಗುತ್ತಿದ್ದಾರಾ.? ಅಂತಾ ಗಾಬರಿಯಾಗಬೇಡಿ. ಜಾಹಿರಾತು ಶೂಟ್‌ವೊಂದಕ್ಕಾಗಿ ನಟಿ ಅದಾ ಮದುಮಗಳ ಗೆಟಪ್‌ನಲ್ಲಿ ಕಂಗೊಳಿಸಿದ್ದಾರೆ. ಮದುಮಗಳ ಲುಕ್‌ನಲ್ಲಿ ನಟಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಆ್ಯಡ್ ಶೂಟ್‌ಗೆ ಎಂದು ತಿಳಿದ ಮೇಲೆ ಮೇಲ್ ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಎದೆಯ ಮೇಲೆ ಅಪ್ಪು ಹೆಸರು ಟ್ಯಾಟೂ ಹಾಕಿಸಿಕೊಂಡ ರಾಘಣ್ಣ- ಟೊಟೊ, ನುಕ್ಕಿ ಅಂದ್ರೆ ಯಾರು?

    ಎದೆಯ ಮೇಲೆ ಅಪ್ಪು ಹೆಸರು ಟ್ಯಾಟೂ ಹಾಕಿಸಿಕೊಂಡ ರಾಘಣ್ಣ- ಟೊಟೊ, ನುಕ್ಕಿ ಅಂದ್ರೆ ಯಾರು?

    ದಿವಂಗತ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರು ನಮ್ಮನ್ನ ಅಗಲಿ 2 ವರ್ಷಗಳಾಗಿದೆ. ಆದರೆ ಅಪ್ಪು ನೆನಪು ಮಾತ್ರ ಮಾಸಿಲ್ಲ. ಅಭಿಮಾನಿಗಳ ಮನದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಇಂದಿಗೂ ಪುನೀತ್ ಕುಟುಂಬಕ್ಕೆ ಅಪ್ಪು ಅಗಲಿಕೆಯನ್ನ ಒಪ್ಪಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ಅಪ್ಪು (Appu) ಹೆಸರನ್ನ ಎದೆಯ ಮೇಲೆ ಟ್ಯಾಟೂ (Tatto) ಹಾಕಿಸಿಕೊಂಡಿದ್ದಾರೆ.

    ಪುನೀತ್ (Puneeth) ಅಗಲಿಕೆಯ ನೋವಿನಿಂದ ಅಭಿಮಾನಿಗಳು ಇನ್ನು ಹೊರಬಂದಿಲ್ಲ. ಇನ್ನು ದೊಡ್ಮನೆ ಸದಸ್ಯರಿಗೆ ಆ ನೋವು ನೂರು ಪಟ್ಟು ಹೆಚ್ಚಿದೆ. ಶಿವಣ್ಣ, ರಾಘಣ್ಣ ಸಹೋದರನ ನೆನಪಿನಲ್ಲೇ ದಿನದೂಡುತ್ತಿದ್ದಾರೆ. ಇದೀಗ ಸಹೋದರನ ಹೆಸರನ್ನು ಎದೆಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅಪ್ಪು ಜೊತೆಗೆ ಅವರ ಮಕ್ಕಳಾದ ಧೃತಿ, ವಂದಿತಾ (Vanditha) ಮುದ್ದಿನ ಹೆಸರನ್ನು ಕೂಡ ಎದೆ ಮೇಲೆ ಹಚ್ಚೆ ಹಾಕಿಸಿದ್ದಾರೆ. ಈ ಕುರಿತ ಫೋಟೋ ಎಲ್ಲೆಡೆ ಸದ್ದು ಮಾಡುತ್ತಿದೆ.

    ಪುನೀತ್ ಮೇಲೆ ರಾಘಣ್ಣ ಅವರಿಗೆ ಬೆಟ್ಟದಷ್ಟು ಪ್ರೀತಿಯಿತ್ತು. ಅದರಲ್ಲೂ ರಾಘಣ್ಣ- ಅಪ್ಪು ಮಕ್ಕಳು ತುಸು ಹೆಚ್ಚಾಗಿಯೇ ಅಟ್ಯಾಚ್ ಆಗಿದ್ದರು. ರಾಘಣ್ಣ ಅವರಿಗೆ ಇಬ್ಬರು ಗಂಡು ಮಕ್ಕಳು ಇರುವ ಕಾರಣ, ಅಪ್ಪು ಮಕ್ಕಳು ಧೃತಿ- ವಂದಿತಾ ಇಬ್ಬರೂ ಹೆಣ್ಣು ಮಕ್ಕಳನ್ನ ತನ್ನ ಮಕ್ಕಳಂತೆಯೇ ಪ್ರೀತಿಸುತ್ತಾರೆ. ಅದಕ್ಕೆ ತಾಜಾ ಉದಾಹರಣೆ ರಾಘಣ್ಣ ಎದೆ ಮೇಲಿರುವ ಹಚ್ಚೆ. ಇದನ್ನೂ ಓದಿ:ಸರಕಾರದ ಮುಂದೆ ಹಳೆ ಬೇಡಿಕೆ ಇಟ್ಟ ರಿಷಬ್ ಶೆಟ್ಟಿ

    ತಮಗೆ ಹಚ್ಚೆ ಹಾಕಿದ ಯುವ ಟ್ಯಾಟೂ ಆರ್ಟಿಸ್ಟ್ ಜೊತೆಗೂ ರಾಘವೇಂದ್ರ ರಾಜ್‌ಕುಮಾರ್ (Raghavendra Rajkumar) ಫೊಟೊ ತೆಗೆಸಿಕೊಂಡಿದ್ದಾರೆ. ಈ ವಯಸ್ಸಿನಲ್ಲಿ, ಆರೋಗ್ಯ ಸಮಸ್ಯೆಗಳ ನಡುವೆ ಸಹೋದರ, ಅವರ ಮಕ್ಕಳ ಹೆಸರನ್ನು ಹಚ್ಚೆ ಹಾಕಿಸಿಕೊಂಡ ರಾಘವೇಂದ್ರ ಅವರ ಪ್ರೀತಿಯನ್ನು ಅಪ್ಪು ಅಭಿಮಾನಿಗಳು ಕೊಂಡಾಡಿದ್ದಾರೆ. ಅಂದಹಾಗೆ, ಟೊಟೊ ಹಾಗೂ ನುಕ್ಕಿ ಎಂಬುದು ಅಪ್ಪು ಅವರ ಇಬ್ಬರು ಹೆಣ್ಣು ಮಕ್ಕಳ ನಿಕ್ ನೇಮ್ ಆಗಿದೆ. ಇದನ್ನೇ ಅಪ್ಪು ಹೆಸರಿನ ಜೊತೆ ಹಚ್ಚೆ ಹಾಕಿಸಿದ್ದಾರೆ.

  • ‘ಅಭಿ’ ಚಿತ್ರಕ್ಕೆ 20 ವರ್ಷ- ಅಪ್ಪು ಜೊತೆಗಿನ ನೆನಪು ಬಿಚ್ಚಿಟ್ಟ ರಮ್ಯಾ

    ‘ಅಭಿ’ ಚಿತ್ರಕ್ಕೆ 20 ವರ್ಷ- ಅಪ್ಪು ಜೊತೆಗಿನ ನೆನಪು ಬಿಚ್ಚಿಟ್ಟ ರಮ್ಯಾ

    ಪುನೀತ್ ರಾಜ್‌ಕುಮಾರ್‌ಗೆ (Puneeth Rajkumar)  ‘ಅಭಿ’ ಸಿನಿಮಾಗೆ ನಾಯಕಿಯಾಗುವ ಮೂಲಕ ರಮ್ಯಾ ಚಂದನವನಕ್ಕೆ ಎಂಟ್ರಿ ಕೊಟ್ಟರು. ಇದೀಗ ‘ಅಭಿ’ (Abhi Film) ಸಿನಿಮಾ ತೆರೆಕಂಡು ಇಂದಿಗೆ 20 ವರ್ಷಗಳಾಗಿದೆ. ಅಪ್ಪು ಜೊತೆಗಿನ ಚಿತ್ರೀಕರಣದ ಸಮಯ ನೆನಪುಗಳನ್ನ ರಮ್ಯಾ (Ramya) ಮೆಲುಕು ಹಾಕಿದ್ದಾರೆ.

    20 ವರ್ಷದ ಹಿಂದಿನ ಫೋಟೋಗಳನ್ನ ಶೇರ್ ಮಾಡುತ್ತಿದ್ದೇನೆ. ನನ್ನ ಮೊದಲ ಸಿನಿಮಾ ಅಭಿ ಚಿತ್ರದ ಫೋಟೋಗಳಿವು. ಮೊದಲ ಫೋಟೋ ಸೈಂಟ್ ಜೋಸೆಫ್ ಕಾಲೇಜ್‌ನಲ್ಲಿ ತೆಗೆದಿದ್ದು. ‘ಸುಮ್ ಸುಮ್ನೆ’ ಸಾಂಗ್ ಶೂಟಿಂಗ್ ಸಮಯದ್ದು ಎಂದಿದ್ದಾರೆ. 2ನೇ ಫೋಟೋ ಚಿಕ್ಕಮಗಳೂರು ಶೂಟಿಂಗ್‌ನ ಕೊನೆಯ ದಿನ ಕ್ಲಿಕ್ ಮಾಡಿದ್ದು. ‘ಈ ನನ್ನ ಕಣ್ಣನೆ’ ಹಾಡಿಗಾಗಿ ನಾವು ಶೂಟಿಂಗ್ ಮಾಡಿದ್ದೆವು ಎಂದು ರಮ್ಯಾ ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ:ವಿಜಯ್‌ ವರ್ಮಾ ಜೊತೆ KGF ನಟಿ ತಮನ್ನಾ ಡಿನ್ನರ್‌ ಡೇಟ್‌

     

    View this post on Instagram

     

    A post shared by Ramya|Divya Spandana (@divyaspandana)

    ಮೂರನೇ ಫೋಟೋ ಸಿನಿಮಾದ ಪ್ರೈವೇಟ್ ಸ್ಕ್ರೀನಿಂಗ್ ನಂತರ ನನ್ನ ತಂದೆ ಆಯೋಜಿಸಿದ ಪಾರ್ಟಿಯದ್ದು ಎಂದು ಹೇಳಿದ್ದಾರೆ ರಮ್ಯಾ. ಅವರ ಫೋಟೋಗಳು ಅಭಿಮಾನಿಗಳನ್ನೂ ಹಳೆಯ ದಿನಗಳಿಗೆ ಕರೆದೊಯ್ದಿದೆ.ನಾಲ್ಕನೇ ಫೋಟೋ ಸಿನಿಮಾ 100 ದಿನ ತಲುಪಿದ ಸಂಭ್ರಮದ್ದು. ಅಪ್ಪಾಜಿ ನನಗೆ ಮೊಮೆಂಟೋ ಕೊಟ್ಟರು. ಶೂಟಿಂಗ್‌ನ ಮೊದಲ ದಿನ ನಾನು ನರ್ವಸ್ ಆಗಿ ಜೋರಾಗಿ ಅತ್ತಿದ್ದೆ. ಆದರೆ ಕೊನೆಯ ದಿನ ಆ ತಂಡದೊಂದಿಗೆ ತುಂಬಾ ಅಟ್ಯಾಚ್ಡ್ ಆಗಿ ಅಲ್ಲಿಂದ ಬರುವಾಗ ಅತ್ತಿದ್ದೆ ಎಂದು ರಮ್ಯಾ ನೆನಪಿಸಿಕೊಂಡಿದ್ದಾರೆ.

    ನನಗೆ ಅವಕಾಶ ಕೊಟ್ಟ ಡಾ.ರಾಜ್ (Rajkumar Family) ಕುಟುಂಬಕ್ಕೆ ಸದಾ ಚಿರಋಣಿ ಎಂದು ರಮ್ಯಾ ಎಂದಿದ್ದಾರೆ. ಅಪ್ಪು ಅವರು ನನ್ನ ಮೊದಲ ಸ್ನೇಹಿತ ಮತ್ತು ನನ್ನ ಬೆಸ್ಟ್ ಕೋ ಸ್ಟಾರ್ ಎಂದು ಪುನೀತ್ ಅವರನ್ನ ರಮ್ಯಾ (Ramya) ಸ್ಮರಿಸಿದ್ದಾರೆ. ಈ ಮೂಲಕ ಅಪ್ಪು ಬಗ್ಗೆ ರಮ್ಯಾ ಭಾವುಕರಾಗಿದ್ದಾರೆ.

  • ಅಪ್ಪು ಹೆಸರಿನಲ್ಲಿ ಅಂಬುಲೆನ್ಸ್ ವಿತರಣೆ: ನುಡಿದಂತೆ ನಡೆದುಕೊಂಡ ಯಶ್, ಪ್ರಕಾಶ್ ರಾಜ್

    ಅಪ್ಪು ಹೆಸರಿನಲ್ಲಿ ಅಂಬುಲೆನ್ಸ್ ವಿತರಣೆ: ನುಡಿದಂತೆ ನಡೆದುಕೊಂಡ ಯಶ್, ಪ್ರಕಾಶ್ ರಾಜ್

    ಪುನೀತ್ ರಾಜ್‌ಕುಮಾರ್‌ಗೆ (Puneeth Rajkumar) ಆಪ್ತರಾಗಿದ್ದ ಬಹುಭಾಷಾ ನಟ ಪ್ರಕಾಶ್ ರೈ ಸಹ ಅಪ್ಪು ಹೆಸರಲ್ಲಿ ಸೇವಾ ಕಾರ್ಯ ಮಾಡುತ್ತಿದ್ದು, ಅಪ್ಪು ಎಕ್ಸ್‌ಪ್ರೆಸ್ (Appu Express) ಹೆಸರಿನ ಅಂಬುಲೆನ್ಸ್ (Ambulence) ವಾಹನಗಳನ್ನು ಉಚಿತವಾಗಿ ಆಸ್ಪತ್ರೆಗಳಿಗೆ ನೀಡುತ್ತಿದ್ದಾರೆ. ಈ ಕಾರ್ಯಕ್ಕೆ ಅವರು ಕಾಲಿವುಡ್ ನಟ ಸೂರ್ಯ ಮತ್ತು ಮೆಗಾಸ್ಟಾರ್ ಚಿರಂಜೀವಿ ಅವರ ಸಹಾಯ ಪಡೆದಿದ್ದರು. ಈ ಹಿಂದೆ `ಪುನೀತ ಪರ್ವ’ ಕಾರ್ಯಕ್ರಮದಲ್ಲಿ ಪ್ರಕಾಶ್ ರಾಜ್ (Prakashraj) ಅವರ ಕಾರ್ಯದಲ್ಲಿ ಯಶ್ (Yash)ಕೈ ಜೋಡಿಸುವುದಾಗಿ ಹೇಳಿದ್ದರು. ನಮ್ಮ ರಾಜ್ಯದ ಪ್ರತಿ ಜಿಲ್ಲೆಗೂ ಒಂದೊಂದು ಅಂಬುಲೆನ್ಸ್ ತಲುಪಿಸೋಣ ಎಂದಿದ್ದರು. ಇದೀಗ ಕೊಟ್ಟ ಮಾತ್ನ ಈಡೇರಿಸಿದ್ದಾರೆ.

    ಇದೀಗ 5 ಜಿಲ್ಲೆಗಳಿಗೆ ಅಪ್ಪು ಅಂಬುಲೆನ್ಸ್ ಅನ್ನು ಪ್ರಕಾಶ್ ರೈ ಅವರು ಉಚಿತವಾಗಿ ನೀಡಿದ್ದಾರೆ. ಈ ಬಗ್ಗೆ ವಿಡಿಯೋವನ್ನು ಸಹ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸಹಾಯ ಮಾಡಿದ ನಟ ಯಶ್, ಸೂರ್ಯ (Suriya) ಹಾಗೂ ಮೆಗಾಸ್ಟಾರ್ ಚಿರಂಜೀವಿ ಅವರುಗಳಿಗೆ ಧನ್ಯವಾದವನ್ನು ಅರ್ಪಿಸಿದ್ದಾರೆ. ವಿಡಿಯೋದಲ್ಲಿ ಮಾತನಾಡಿರುವ ಪ್ರಕಾಶ್ ರಾಜ್ ಅಪ್ಪು ನಮ್ಮೆಲ್ಲರೊಟ್ಟಿಗೆ ಶಾಶ್ವತವಾಗಿ ಉಳಿಯಬೇಕೆಂದರೆ ಅವರು ಮಾಡುತ್ತಿದ್ದ ಸಮಾಜ ಸೇವೆಯನ್ನು ನಾವು ಮುಂದುವರೆಸಬೇಕಾಗಿದೆ. ಹಾಗಾಗಿ ನಾನು ನನ್ನ `ಪ್ರಕಾಶ್ ರಾಜ್’ ಫೌಂಡೇಶನ್ ಮೂಲಕ ಅಪ್ಪು ಎಕ್ಸ್‌ಪ್ರೆಸ್ ಕನಸು ಕಂಡೆ. ಪ್ರತಿಜಿಲ್ಲೆಗೂ ಅಪ್ಪು ಎಕ್ಸ್‌ಪ್ರೆಸ್ ಅಂಬುಲೆನ್ಸ್ ಸೇವೆ ನೀಡುವ ಕಾರ್ಯವನ್ನು ನಾವು ಮೈಸೂರಿನಿಂದ ಆರಂಭಿಸಿದೆವು. ಇದೀಗ ಅದರ ಎರಡನೇ ಹಂತವಾಗಿ ಬೀದರ್, ಕಲಬುರ್ಗಿ, ಕೊಳ್ಳೆಗಾಲ, ಕೊಪ್ಪಳ, ಉಡುಪಿಗಳಿಗೆ ಆಂಬುಲೆನ್ಸ್ ವಿತರಿಸುತ್ತಿದ್ದೇವೆ ಎಂದಿದ್ದಾರೆ.

    ಆದರೆ ಈ ಬಾರಿ ನನ್ನ ಜೊತೆ ನಮ್ಮೊಂದಿಗೆ ಚಿರಂಜೀವಿ, ನಟ ಸೂರ್ಯ, ನಟ ಯಶ್ ಹಾಗೂ ಕೆವಿಎನ್ ನಿರ್ಮಾಣ ಸಂಸ್ಥೆಯ ನಿರ್ಮಾಪಕರಾದ ವೆಂಕಟ್ ಅವರುಗಳು ಇದ್ದಾರೆ. ಯಶ್ ಹೇಳಿದ ಮಾತು ನನಗೆ ಬಹಳ ಇಷ್ಟವಾಯಿತು. ಸರ್, ಇದು ನಿಮ್ಮೊಬ್ಬರ ಕನಸಲ್ಲ, ನಮ್ಮೆಲ್ಲರ ಕನಸು ಎಂದಿದ್ದರು. ಅವರ ಉದಾರತೆಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.

    ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ, ಪ್ರತಿ ಜಿಲ್ಲೆಗೂ ಅಂಬುಲೆನ್ಸ್ ತಲುಪಿಸುತ್ತೇವೆ ಎಂದು ಯಶ್ ಹೇಳಿದ್ದ ವಿಡಿಯೋ ಹಂಚಿಕೊಂಡು ಆಂಬುಲೆನ್ಸ್ ಬಂತಾ ಎಂದು ಕೆಲವರು ಕಾಲೆಳೆದಿದ್ದರು. ಇದೀಗ ಕೊಟ್ಟ ಮಾತಿನಂತೆ ನಟರು ನಡೆದುಕೊಂಡಿದ್ದಾರೆ.