Tag: ಪುನೀತ್ ರಾಜ್‍ಕುಮಾರ್

  • ಅಪ್ಪು ನೆನಪಿನಲ್ಲಿ ಅಶ್ವಿನಿ- ಎಂದೆಂದಿಗೂ ನಮ್ಮ ಹೃದಯದಲ್ಲಿ ಶಾಶ್ವತ ಎಂದ ಪತ್ನಿ

    ಅಪ್ಪು ನೆನಪಿನಲ್ಲಿ ಅಶ್ವಿನಿ- ಎಂದೆಂದಿಗೂ ನಮ್ಮ ಹೃದಯದಲ್ಲಿ ಶಾಶ್ವತ ಎಂದ ಪತ್ನಿ

    ವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ ಸ್ಮರಿಸುತ್ತಲೇ ಪತ್ನಿ ಅಶ್ವಿನಿ ಜೀವಿಸುತ್ತಿದ್ದಾರೆ. ಹೀಗಿರುವಾಗ ಪತಿ ಅಪ್ಪು (Appu) ಹುಟ್ಟುಹಬ್ಬಕ್ಕೆ (Birthday) ಎಂದೆಂದಿಗೂ ನಮ್ಮ ಹೃದಯದಲ್ಲಿ ಶಾಶ್ವತ ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಶುಭಹಾರೈಸಿದ್ದಾರೆ. ಇದನ್ನೂ ಓದಿ:‘ಜಾಕಿ’ ಚಿತ್ರದ ಹಾಡಿಗೆ ಸ್ಟೈಲೀಶ್ ಆಗಿ ಹೆಜ್ಜೆ ಹಾಕಿದ ಕಾರ್ತಿಕ್ ಮಹೇಶ್‌, ಕಿಶನ್

    ಅಪ್ಪು ಅವರು ತಮ್ಮ ಅಪ್ರತಿಮ ಪ್ರತಿಭೆ, ಕರುಣೆ ಮತ್ತು ಮಾನವೀಯತೆಯಿಂದ ನಮ್ಮ ಹೃದಯಾಂತರಾಳವನ್ನು ಬೆಳಗಿಸುತ್ತಲೇ ಇದ್ದಾರೆ. ಅಪ್ಪು ಅವರು ಮಾನವೀಯತೆಯಲ್ಲಿ ಇರಿಸಿದ್ದ ಅಚಲ ಬದ್ಧತೆ ಅವರ ಹಾದಿಯಲ್ಲಿ ನಡೆಯಲು ನಮಗೆ ಸದಾ ಸ್ಫೂರ್ತಿದಾಯಕವಾಗಿರುತ್ತದೆ ಎಂದು ಅಪ್ಪು ಕುರಿತು ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಪೋಸ್ಟ್ ಮಾಡಿದ್ದಾರೆ.

    ಪುನೀತ್ ನಂತರ ಪತ್ನಿ ಅಶ್ವಿನಿ, ಕುಟುಂಬದ ಹೊಣೆ ಮತ್ತು ಬ್ಯುಸಿನೆಸ್ ಎರಡನ್ನು ನಿಭಾಯಿಸುತ್ತಿದ್ದಾರೆ. ಪಿಆರ್‌ಕೆ ಸಂಸ್ಥೆ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದಾರೆ. ಈ ಮೂಲಕ ಅಶ್ವಿನಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.

  • ‘ಜಾಕಿ’ ಚಿತ್ರದ ಹಾಡಿಗೆ ಸ್ಟೈಲೀಶ್ ಆಗಿ ಹೆಜ್ಜೆ ಹಾಕಿದ ಕಾರ್ತಿಕ್ ಮಹೇಶ್‌, ಕಿಶನ್

    ‘ಜಾಕಿ’ ಚಿತ್ರದ ಹಾಡಿಗೆ ಸ್ಟೈಲೀಶ್ ಆಗಿ ಹೆಜ್ಜೆ ಹಾಕಿದ ಕಾರ್ತಿಕ್ ಮಹೇಶ್‌, ಕಿಶನ್

    ರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ ಹುಟ್ಟುಹಬ್ಬಕ್ಕೆ ಇದೀಗ ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ (Karthik Mahesh), ಕಿಶನ್ (Kishen Bilagali) ವಿಶೇಷವಾಗಿ ಶುಭಕೋರಿದ್ದಾರೆ. ‘ಜಾಕಿ’ ಸಿನಿಮಾದ ಹಾಡಿಗೆ ಸ್ಟೈಲೀಶ್ ಆಗಿ ಹೆಜ್ಜೆ ಹಾಕಿ ಪ್ರೀತಿಯ ಅಪ್ಪುಗೆ ಶುಭಹಾರೈಸಿದ್ದಾರೆ.

    ದೊಡ್ಮನೆ ಆಟ ಗೆದ್ದ ಮೇಲೆ ಕಾರ್ತಿಕ್ ಮಹೇಶ್ ಅವರು ಮತ್ತಷ್ಟು ಆ್ಯಕ್ಟೀವ್ ಆಗಿದ್ದಾರೆ. ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿ ಕಿಶನ್ ಬಿಳಗಲಿ ಜೊತೆ ಸೇರಿ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಮೊದಲೇ ಇಬ್ಬರು ಸೂಪರ್ ಡ್ಯಾನ್ಸರ್ಸ್‌, ಅಪ್ಪು ಸಾಂಗ್ ಹಾಕಿದ ಮೇಲೆ ಕೇಳಬೇಕೆ. ಮಸ್ತ್ ಆಗಿ ಡ್ಯಾನ್ಸ್ ಮಾಡುವ ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದಾರೆ.

     

    View this post on Instagram

     

    A post shared by Karthik Mahesh (@karthi_mahesh)

    ಕಾರ್ತಿಕ್ ಮಹೇಶ್- ಕಿಶನ್ ಇಬ್ಬರೂ ಸೂಟು ಬೂಟು ಧರಿಸಿ, ಜಾಕಿ ಹಾಡಿಗೆ ಸಖತ್ ಸ್ಟೈಲೀಶ್ ಆಗಿ ಹೆಜ್ಜೆ ಹಾಕುವ ಮೂಲಕ ಅಪ್ಪುಗೆ ಅರ್ಪಣೆ ಮಾಡಿದ್ದಾರೆ. ಇದನ್ನೂ ಓದಿ:ಅಪ್ಪು ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಮನವಿ ಮಾಡಿದ ರಾಘಣ್ಣ

    ಸರಳತೆಯ ಸಾಮ್ರಾಟ, ನಗುವಿನ ಒಡೆಯ, ಪ್ರೀತಿಗೆ ಪರಮಾತ್ಮ, ಬದುಕಿಗೆ ಸ್ಪೂರ್ತಿ ನಮ್ಮ ಪವರ್ ಸ್ಟಾರ್. ಹುಟ್ಟುಹಬ್ಬದ ಶುಭಾಶಯಗಳು ಎಂದು ವಿಡಿಯೋ ಶೇರ್ ಮಾಡುವಾಗ ಕಾರ್ತಿಕ್ ಅಡಿಬರಹ ನೀಡಿದ್ದಾರೆ.

    ಇನ್ನೂ ಬಿಗ್ ಬಾಸ್ (Bigg Boss Kannada 10) ನಮ್ರತಾ ಗೌಡ (Namratha Gowda) ಅವರು ಅಭಿಮಾನಿಗಳಿಗೆ ಅನ್ನಸಂತರ್ಪಣೆ ಮಾಡುವ ಮೂಲಕ ಇನ್ಮುಂದೆ ಪ್ರತಿ ವರ್ಷ ಈ ಕಾರ್ಯ ಮಾಡುವುದಾಗಿ ನಟಿ ತಿಳಿಸಿದ್ದಾರೆ.

  • ಸಹೋದರ ಅಪ್ಪುಗೆ ವಿಶೇಷವಾಗಿ ಶುಭಕೋರಿದ ಶಿವಣ್ಣ

    ಸಹೋದರ ಅಪ್ಪುಗೆ ವಿಶೇಷವಾಗಿ ಶುಭಕೋರಿದ ಶಿವಣ್ಣ

    ಸ್ಯಾಂಡಲ್‌ವುಡ್ ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್ (Puneeth Rajkumar) ಅವರ 49ನೇ ವರ್ಷದ ಹುಟ್ಟುಹಬ್ಬವನ್ನು ಸ್ಮರಣೀಯವಾಗಿ ಅಭಿಮಾನಿಗಳು ಆಚರಿಸುತ್ತಿದ್ದಾರೆ. ಇದರ ನಡುವೆ ಪ್ರೀತಿಯ ತಮ್ಮ ಅಪ್ಪುಗೆ ವಿಶೇಷವಾಗಿ ಶಿವರಾಜ್‌ಕುಮಾರ್ (Shivarajkumar) ಶುಭಹಾರೈಸಿದ್ದಾರೆ. ನನ್ನ ಮನಸಲ್ಲೇ ಸದಾ ರಾಜನಂತೆ ಬಾಳುವ ತಮ್ಮ ಎಂದು ಶಿವಣ್ಣ ಸ್ಮರಿಸಿದ್ದಾರೆ. ಇದನ್ನೂ ಓದಿ:ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿದ ಧ್ರುವ ಸರ್ಜಾ

    ಅಪ್ಪು ಆಗಿ ಬಂದು ನೀನು ಪುನೀತ್‌ನಾಗಿ ಎಲ್ಲರ ಮನಸ್ಸಲ್ಲೂ ಭದ್ರವಾಗಿ ಇದ್ದು ಬಿಟ್ಟೆ. ಜನ ನಿನ್ನಲ್ಲಿ ದೇವರನ್ನು ಕಾಣುತ್ತಾರೆ. ಎಷ್ಟೋ ಜನಕ್ಕೆ ನೀನು ಮಾರ್ಗದರ್ಶಿ, ಅವರ ಆರಾಧ್ಯ ದೈವ, ಕೋಟಿ ಕೋಟಿ ಅಭಿಮಾನಿಗಳಿಗೆ ನೀನು ಪವರ್ ಸ್ಟಾರ್ ಎಂದು ಶಿವಣ್ಣ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

     

    View this post on Instagram

     

    A post shared by DrShivaRajkumar (@nimmashivarajkumar)

    ಆದರೆ ನನಗೆ ಎಂದೆಂದಿಗೂ ನನ್ನ ಪುಟ್ಟ ತಮ್ಮ. ನನ್ನ ಕೈ ಹಿಡಿದು ನಡೆದ ತಮ್ಮ, ನಿನ್ನ ನಗುವಲ್ಲಿ ನನಗೆ ಸಂತೋಷ ಹುಡುಕಿ ಕೊಟ್ಟ ತಮ್ಮ, ನನ್ನ ಎದೆಯ ಮೇಲೆ ಮಲಗಿದ ತಮ್ಮ, ನನ್ನ ಮನಸಲ್ಲೇ ಸದಾ ರಾಜನಂತೆ ಬಾಳುವ ತಮ್ಮ. ಹುಟ್ಟುಹಬ್ಬದ ಶುಭಾಶಯಗಳು ಅಪ್ಪು ಎಂದು ಶಿವಣ್ಣ ಪ್ರೀತಿಯಿಂದ ವಿಶ್ ಮಾಡಿದ್ದಾರೆ. ಪುನೀತ್‌ರನ್ನು ನಟ ಸ್ಮರಿಸಿದ್ದಾರೆ.

    ಪುನೀತ್ ರಾಜ್‌ಕುಮಾರ್ ಇಲ್ಲದೇ 3ನೇ ವರ್ಷದ ಹುಟ್ಟುಹಬ್ಬ ಇದಾಗಿದೆ. ಅಪ್ಪು ಸ್ಮಾರಕದ ಬಳಿ ಜನಸಾಗರನೇ ಹರಿದು ಬರುತ್ತಿದೆ.

  • ಮಾರ್ಚ್ 17ರಂದು ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬದ ಆಚರಣೆ ಹೇಗಿರಲಿದೆ?

    ಮಾರ್ಚ್ 17ರಂದು ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬದ ಆಚರಣೆ ಹೇಗಿರಲಿದೆ?

    ವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಹುಟ್ಟುಹಬ್ಬಕ್ಕೆ (ಮಾ.17) ಕೌಂಟ್‌ಡೌನ್ ಶುರುವಾಗಿದೆ. ಅಪ್ಪು ನೆನಪಿಗಾಗಿ ಅಭಿಮಾನಿಗಳು ಅವರ ಹುಟ್ಟುಹಬ್ಬದಂದು ಅನ್ನಸಂತರ್ಪಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಇದನ್ನೂ ಓದಿ:ದುಬಾರಿ ನೆಕ್ಲೇಸ್ ಧರಿಸಿ ಮಿಂಚಿದ ಪ್ರಿಯಾಂಕಾ ಚೋಪ್ರಾ

    ನಾಳೆ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ. ಹೀಗಾಗಿ ಅಭಿಮಾನಿಗಳು ರಾತ್ರಿಯಿಂದಲೇ ಅಪ್ಪು ಹುಟ್ಟುಹಬ್ಬದ ಆಚರಣೆಯಲ್ಲಿ ತೊಡಗಿದ್ದಾರೆ. ಅಪ್ಪು ಇಲ್ಲದೇ 3ನೇ ವರ್ಷದ ಹುಟ್ಟುಹಬ್ಬ (Birthday) ಇದಾಗಿದೆ. ಅಗಲಿದ ಅರಸನಿಗೆ ಅಭಿಮಾನಿಗಳು ನಿತ್ಯವೂ ಕಣ್ಣೀರಾಭಿಷೇಕ ಮಾಡುತ್ತಿದ್ದಾರೆ. ಅಪ್ಪು ಪುಣ್ಯಭೂಮಿಯಲ್ಲಿ ಅಭಿಮಾನಿಗಳು ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸುತ್ತಾರೆ. ಇದನ್ನೂ ಓದಿ:ಪೊಲೀಸ್ ಅವತಾರದಲ್ಲಿ ತನಿಷಾ ಕುಪ್ಪಂಡ

    ಇಡೀ ದಿನ ಅನ್ನಸಂತರ್ಪಣೆ-ರಕ್ತದಾನ ಶಿಬಿರ-ಆರೋಗ್ಯ ತಪಾಸಣೆಯಂಥಹ ಅನೇಕ ಕಾರ್ಯಗಳು ನಡೆಯುತ್ತೆ. ಅಪ್ಪು ಕುಟುಂಬಸ್ಥರು ಬೆಳಗ್ಗೆ 9 ಗಂಟೆಗೆ ಸಮಾಧಿಗೆ ಆಗಮಿಸಿ ಎಡೆಇಟ್ಟು ಪೂಜೆ ಮಾಡಲಿದ್ದಾರೆ.

    ಇನ್ನೂ ಪುನೀತ್ ರಾಜ್‌ಕುಮಾರ್, ಭಾವನಾ ಮೆನನ್ (Bhavana Menon) ನಟನೆಯ `ಜಾಕಿ’ ಸಿನಿಮಾ ರಿಲೀಸ್ ಆಗಿ 100 ಶೋ ಹೌಸ್‌ಫುಲ್ ಆಗಿದೆ. 1 ಕೋಟಿ ರೂ. ಗಳಿಕೆ ಮಾಡಿದೆ. ಈ ಸಿನಿಮಾ ಮೂಲಕ ಮತ್ತೆ ಅಪ್ಪುರನ್ನು ಅಭಿಮಾನಿಗಳು ಸ್ಮರಿಸುತ್ತಿದ್ದಾರೆ.

  • ಅಪ್ಪು ಸಮಾಧಿಗೆ ಪೂಜೆ ಮಾಡಿ ಇಲ್ಲಿಂದ ದೂರ ಕಳಿಸೋಕೆ ನೋವಾಗುತ್ತೆ- ಶಿವಣ್ಣ ಭಾವುಕ

    ಅಪ್ಪು ಸಮಾಧಿಗೆ ಪೂಜೆ ಮಾಡಿ ಇಲ್ಲಿಂದ ದೂರ ಕಳಿಸೋಕೆ ನೋವಾಗುತ್ತೆ- ಶಿವಣ್ಣ ಭಾವುಕ

    ಪುನೀತ್ ರಾಜ್‌ಕುಮಾರ್ (Puneeth Rajkumar) ಅವರು ಅಗಲಿ ಇಂದಿಗೆ (ಅ.29) 2 ವರ್ಷಗಳು ಉರುಳಿವೆ. ಅಪ್ಪು ಸಮಾಧಿಗೆ ಕುಟುಂಬಸ್ಥರಿಂದ ಪೂಜೆ ನೆರವೇರಿತ್ತು. ಇದೀಗ ಅಪ್ಪು ಸ್ಮಾರಕಕ್ಕೆ ಶಿವಣ್ಣ (Shiva Rajkumar)  ದಂಪತಿ ಭೇಟಿ ನೀಡಿದ್ದಾರೆ. ಈ ವೇಳೆ ಪುನೀತ್ ಬಗ್ಗೆ ಶಿವಣ್ಣ ಭಾವುಕರಾಗಿದ್ದಾರೆ.

    ಅಪ್ಪು (Appu) ಎಲ್ಲೂ ಹೋಗಿಲ್ಲ, ನಮ್ಮ ಜೊತೆನೇ ಇದ್ದಾರೆ. ಇಲ್ಲಿ ಯಾಕೆ ನಾನು ಜಾಸ್ತಿ ಬರಲ್ಲ ಅಂದರೆ, ಅಪ್ಪು ಸಮಾಧಿಗೆ ಬಂದು ಪೂಜೆ ಮಾಡಿ ಅವರನ್ನು ಇಲ್ಲಿಂದ ದೂರ ಕಳಿಸೋಕೆ ಮನಸ್ಸಿಗೆ ತುಂಬಾ ನೋವಾಗುತ್ತದೆ. ಅಪ್ಪು ಯಾವಾಗಲೂ ನಮ್ಮ ಮನಸ್ಸಿನಲ್ಲಿ, ಯೋಚನೆಯಲ್ಲಿರುತ್ತಾರೆ. ಅವರ ಬಗ್ಗೆ ಏನಾದರೂ ಮಾತು ಬಂದೇ ಬರುತ್ತೆ ಮನೆಯಲ್ಲಿ ಆಗ ತುಂಬಾ ಹರ್ಟ್ ಆಗುತ್ತದೆ. ಅಪ್ಪು ಕಣ್ಣು ನಮ್ಮನ್ನ ನೋಡ್ತಿದೆ. ಅದೇ ಸಮಾಧಾನ ಅಷ್ಟೇ ಎಂದು ಶಿವಣ್ಣ ಮಾತನಾಡಿದ್ದಾರೆ.

    ನಮ್ಮ ಅಪ್ಪನಿಗಿಂತ ಡಬಲ್ ಹೆಸರು ಪುನೀತ್ ಸಂಪಾದಿಸಿದ್ದಾರೆ. ಅಭಿಮಾನಿಗಳಿಗೆ ಅಪ್ಪು ಮೇಲಿರೋ ಪ್ರೀತಿ, ವಿಶ್ವಾಸ ನೋಡಿದ್ರೆ ತುಂಬಾ ಹೆಮ್ಮೆ ಅನಿಸುತ್ತದೆ. ಅದನ್ನ ನಾವು ಉಳಿಸಿಕೊಂಡು ಹೋಗುತ್ತೇವೆ ಎಂದು ಶಿವರಾಜ್‌ಕುಮಾರ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದರು. ಇದನ್ನೂ ಓದಿ:ಖ್ಯಾತ ಕಬ್ಬಡಿ ಆಟಗಾರ ‘ಅರ್ಜುನ್ ಚಕ್ರವರ್ತಿ’ ಬಯೋಪಿಕ್‌ ಸಿನಿಮಾದ ಫಸ್ಟ್ ಲುಕ್ ಔಟ್

    ಕಂಠೀರವ ಸ್ಟುಡಿಯೋಗೆ ಆಗಮಿಸಿದ ಶಿವಣ್ಣ ದಂಪತಿ, ಮೊದಲು ತಂದೆ-ತಾಯಿ ಸಮಾಧಿಗೆ ನಮಸ್ಕರಿಸಿ ಬಳಿಕ ಅಪ್ಪು ಸಮಾಧಿಗೆ ನಮಿಸಿದರು. ಈ ವೇಳೆ, ಶಿವಣ್ಣ ನೋಡಲು ಅಭಿಮಾನಿಗಳ ದಂಡೇ ಭಾಗಿಯಾಗಿತ್ತು. ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಲಾಠಿ ಪ್ರಹಾರ ಮಾಡಬೇಕಾಯಿತು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪುನೀತ್‌ರನ್ನು ಎಂದೂ ಭೇಟಿಯಾಗಿಲ್ಲ, ಆ ನೋವಿದೆ- ಸಪ್ತಮಿ ಗೌಡ

    ಪುನೀತ್‌ರನ್ನು ಎಂದೂ ಭೇಟಿಯಾಗಿಲ್ಲ, ಆ ನೋವಿದೆ- ಸಪ್ತಮಿ ಗೌಡ

    ಪುನೀತ್ ಪುಣ್ಯ ಸ್ಮರಣೆಯಂದು (ಅ.29) ಅಪ್ಪು(Appu) ಸಮಾಧಿಗೆ ‘ಕಾಂತಾರ’ (Kantara) ನಟಿ ಸಪ್ತಮಿ ಗೌಡ ಭೇಟಿ ನೀಡಿದ್ದಾರೆ. ಚಿತ್ರರಂಗಕ್ಕೆ ಬಂದ ಮೇಲೆ ಪುನೀತ್ (Puneeth Rajkumar) ಅವರನ್ನ ಎಂದೂ ನಾನು ಭೇಟಿಯಾಗಿಲ್ಲ ಎಂಬ ಈ ಬಗ್ಗೆ ಕೊರಗಿದೆ. ಆದರೆ ನನ್ನ ಮೊದಲ ಚಿತ್ರಕ್ಕೆ ಅವರೇ ಮೊದಲು ವಿಶ್ ಬೈಟ್ ನೀಡಿದ್ರು ಎಂದು ಪುನೀತ್ ಅವರನ್ನ ನಟಿ ಸ್ಮರಿಸಿದ್ದಾರೆ.

    ಅಪ್ಪು ಸರ್ ಅವರು ತೀರಿಕೊಂಡು 2 ವರ್ಷವಾಗಿದ್ರೂ ಪ್ರತಿ ದಿನ ಅವರನ್ನು ಸ್ಮರಿಸುತ್ತೇವೆ. ಪ್ರತಿ ಸಿನಿಮಾವನ್ನು ಪುನೀತ್ ಅವರಿಗೆ ಅರ್ಪಣೆ ಮಾಡುತ್ತೇವೆ. ಯುವ ಸಿನಿಮಾ ಶುರುವಾಗಿದೆ ಸಂತೋಷ್ ಆನಂದ್ ರಾಮ್ ಅವರ ಜೊತೆ. ನಮ್ಮ ಇಡೀ ತಂಡ ಇಂದು ಇಲ್ಲಿಗೆ ಬಂದಿದ್ದೇವೆ. ಯುವರಾಜ್ ಕುಮಾರ್ ಅವರ ಚಿಕ್ಕಪ್ಪ ಅವರಿಗೆ ಎಷ್ಟು ಸ್ಪೆಷಲ್. ಹಾಗೆಯೇ ನಮ್ಮ ಇಡೀ ತಂಡಕ್ಕೆ ಪುನೀತ್ ಅವರು ತುಂಬಾ ಸ್ಪೆಷಲ್ ಎಂದು ಸಪ್ತಮಿ (Saptami Gowda) ಅವರು ಪ್ರತಿಕ್ರಿಯೆ ನೀಡಿದ್ದಾರೆ.

    ಅಪ್ಪು ಸರ್ ಅವರ ಹಾರೈಕೆ ನಮ್ಮ ಸಿನಿಮಾ ಮತ್ತು ಇಡೀ ಚಿತ್ರರಂಗದ ಮೇಲಿದೆ. ಅವರು ಇವತ್ತು ನಮ್ಮ ಜೊತೆ ಇಲ್ಲದೇ ಇರೋದು ನಮಗೆ ದೊಡ್ಡ ಲಾಸ್ ಎಂದಿದ್ದಾರೆ. ಅವರ ಮೇಲಿನ ಅಭಿಮಾನಿಗಳ ಪ್ರೀತಿ ನೋಡಿದ್ರೆ ಖುಷಿಯಾಗುತ್ತದೆ. ಈ ದಿನ ನೇತ್ರದಾನ, ರಕ್ತದಾನ ಅವರ ಮೇಲಿನ ಪ್ರೀತಿಗಾಗಿ ಅಭಿಮಾನಿಗಳು ಮಾಡುತ್ತಾರೆ. ಆ ವ್ಯಕ್ತಿ ಹೋಗಿದ್ರೂ, ಅವರ ಒಳ್ಳೆತನ ಇನ್ನೂ ನಡೀತಾ ಬಂದಿದೆ ಎಂದಿದ್ದಾರೆ.

    ನಾನು ಅವರನ್ನ ಚಿಕ್ಕ ವಯಸ್ಸಿನಲ್ಲಿ ಭೇಟಿಯಾಗಿದ್ದೆ. ಆದರೆ ಚಿತ್ರರಂಗಕ್ಕೆ ಬಂದ ಮೇಲೆ ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಆ ಬಗ್ಗೆ ಬೇಜಾರಿದೆ. ನನ್ನ ಮೊದಲ ಚಿತ್ರ ‘ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರಕ್ಕೆ ಅವರೇ ಮೊದಲು ಸೆಲೆಬ್ರಿಟಿ ಬೈಟ್ ನೀಡಿದ್ದು ಅಪ್ಪು ಸರ್. ಯುವ ಅವರಲ್ಲಿ ಅಪ್ಪು ಇದ್ದೇ ಇದ್ದಾರೆ. 100% ಇದ್ದಾರೆ. ಯುವ (Yuva Rajkumar) ಅವರ ನಡೆ, ನುಡಿಯಲ್ಲಿ ಅಪ್ಪು ಸರ್ ಇದ್ದಾರೆ ಎಂದು ಸಪ್ತಮಿ ಸಹನಟ ಯುವ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ:ನಮ್ಮ ನೋವಿಗಿಂತ ಅಭಿಮಾನಿಗಳ ದುಃಖ ಜಾಸ್ತಿ- ಲಕ್ಷ್ಮಿ ಗೋವಿಂದರಾಜು ಭಾವುಕ

    ಇಡೀ ಕುಟುಂಬ ಮತ್ತು ಎಲ್ಲಾ ವರ್ಗದ ಜನ ಕುಳಿತು ನೋಡುವಂತಹ ಸಿನಿಮಾ ಯುವ. ನಿಜವಾಗಲೂ ಈ ಚಿತ್ರ ಆದ್ಮೇಲೆ ಎಲ್ಲರಿಗೂ ಇಷ್ಟ ಆಗುತ್ತೆ. ಮಾರ್ಚ್ 28ಕ್ಕೆ ‘ಯುವ’ (Yuva) ಸಿನಿಮಾ ತೆರೆ ಕಾಣಲಿದೆ ಎಂದು ಚಿತ್ರದ ಬಗ್ಗೆ ಸಪ್ತಮಿ ಮಾತನಾಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಮ್ಮ ನೋವಿಗಿಂತ ಅಭಿಮಾನಿಗಳ ದುಃಖ ಜಾಸ್ತಿ- ಲಕ್ಷ್ಮಿ ಗೋವಿಂದರಾಜು ಭಾವುಕ

    ನಮ್ಮ ನೋವಿಗಿಂತ ಅಭಿಮಾನಿಗಳ ದುಃಖ ಜಾಸ್ತಿ- ಲಕ್ಷ್ಮಿ ಗೋವಿಂದರಾಜು ಭಾವುಕ

    ಪುನೀತ್ ರಾಜ್‌ಕುಮಾರ್ (Puneeth Rajkumar) ಅವರು ಅಗಲಿ ಇಂದಿಗೆ (ಅ.29) 2 ವರ್ಷಗಳು ಕಳೆದಿದೆ. ಅಪ್ಪು ಪುಣ್ಯ ಸ್ಮರಣೆಯಂದು ಹಿರಿಯ ಸಹೋದರಿ ಲಕ್ಷ್ಮಿ (Lakshmi Govindaraju) ಅವರು ಪುನೀತ್ ಬಗ್ಗೆ ಮಾತನಾಡಿದ್ದಾರೆ. ಸಹೋದರನ ಮೇಲಿನ ಅಭಿಮಾನಿಗಳ(Fans) ಪ್ರೀತಿ ಕಂಡು ಲಕ್ಷ್ಮಿ ಅವರು ಭಾವುಕರಾಗಿದ್ದಾರೆ.

    ನಮ್ಮ ನೋವಿಗಿಂತ ಅಭಿಮಾನಿಗಳ ದುಃಖ ಜಾಸ್ತಿ ಅನಿಸುತ್ತಿದೆ. ಪುನೀತ್ ಅಗಲಿದ ದಿನ ಅವರ ಮುಖ ನೋಡಿ ಅಳೋದೇ ಆಗಿ ಹೋಯ್ತು. ನಮಗೆ ಆದರೆ ರಕ್ತ ಸಂಬಂಧ ಇತ್ತು. ಆದರೆ ಬೇರೇ ಅವರು ಏನು ಸಂಬಂಧವಿಲ್ಲದಿದ್ರೂ ಪುನೀತ್‌ನ ತುಂಬಾ ಪ್ರೀತಿ ಮಾಡ್ತಿದ್ದರು. ನಮ್ಮ ಮನೆಯಲ್ಲಿನ ವ್ಯಕ್ತಿನೇ ತೀರಿ ಹೋದರು ಅನ್ನುವ ಹಾಗೇ ಫ್ಯಾನ್ಸ್ ದುಃಖ ಪಡ್ತಿದ್ದಾರೆ ಎಂದು ಮಾತನಾಡಿದ್ದಾರೆ.

    ಅಪ್ಪು ನೆನಪು ಬಂದಾಗ ಅವರ ಹೆಂಡ್ತಿ ಮತ್ತು ಮಕ್ಕಳನ್ನ ನೋಡಿದ್ರೆ ತುಂಬಾ ದುಃಖ ಆಗುತ್ತೆ. ನಮ್ಮ ಧೃತಿ ಸೇಮ್ ಅಪ್ಪು ಹಾಗೆಯೇ. ಅವಳ ನಡೆ, ನುಡಿ ಎಲ್ಲವೂ ಅಪ್ಪು ತರನೇ ಇದೆ. ಧೃತಿ ನೋಡಿಯೇ ಅಪ್ಪು ಇದ್ದಾರೆ ಅಂತ ಭಾವಿಸುತ್ತಿದ್ದೇವೆ ಎಂದು ಅಪ್ಪು ಪುತ್ರಿಯ ಬಗ್ಗೆ ಲಕ್ಷ್ಮಿ ಅವರು ಹೇಳಿದ್ದಾರೆ. ಇದನ್ನೂ ಓದಿ:ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ ಕುಟುಂಬಸ್ಥರು

    ಅಪ್ಪುಗೆ ಇಷ್ಟ ಅಂತ ನಾನು ಇವತ್ತು ಮಸಲಾ ಚಿತ್ರಾನ್ನ ಮಾಡಿಕೊಂಡು ಬಂದಿದ್ದೇನೆ ಎಂದು ಲಾಕ್‌ಡೌನ್ ಸಮಯದಲ್ಲಿ ಅಪ್ಪು ಕರೆ ಮಾಡಿ ರೆಸಿಫಿ ಕೇಳಿ ಅಡುಗೆ ಮಾಡಿರೋದನ್ನ ಪುನೀತ್ ಸಹೋದರಿ ಸ್ಮರಿಸಿದ್ದಾರೆ.

    ಇಂದು (ಅ.29) ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಸ್ಮಾರಕಕ್ಕೆ ಪುನೀತ್‌ ಕುಟುಂಬಸ್ಥರು ಪೂಜೆ ಸಲ್ಲಿಸಿದ್ದಾರೆ. ಈ ವೇಳೆ, ಇಡೀ ಪುನೀತ್‌ ಕುಟುಂಬ ಮತ್ತು ಅಭಿಮಾನಿಗಳು ಭಾಗಿಯಾಗಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ ಕುಟುಂಬಸ್ಥರು

    ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ ಕುಟುಂಬಸ್ಥರು

    ಕ್ಟೋಬರ್ 29 ಕನ್ನಡಿಗರಿಗೆ ಕರಾಳ ದಿನ. ಅಪ್ಪು ಅಗಲಿದ ದಿನವಾಗಿದ್ದು, ಇದೀಗ ಅವರ ಸಮಾಧಿಗೆ ಕುಟುಂಬಸ್ಥರಿಂದ ಪೂಜೆ ಸಲ್ಲಿಸಿದ್ದಾರೆ. ತಿಥಿ ಕಾರ್ಯಕ್ಕೆ ಎಡೆ ಇಟ್ಟು ಪೂಜೆ ಸಲ್ಲಿಸಿದ್ದಾರೆ. ಅಪ್ಪು(Appu) ಸ್ಮಾರಕಕ್ಕೆ ಅಭಿಮಾನಿಗಳು ಕೂಡ ಭೇಟಿ ನೀಡಿದ್ದಾರೆ. ಇದನ್ನೂ ಓದಿ:ಅಪ್ಪು ಅಗಲಿ ಇಂದಿಗೆ 2 ವರ್ಷ- ಪುನೀತ್ ಸಮಾಧಿಗೆ ದೊಡ್ಮನೆ ಕುಟುಂಬಸ್ಥರಿಂದ ಪೂಜೆ

    ಪುನೀತ್ ರಾಜ್‌ಕುಮಾರ್ (Puneeth Rajkumar) ಅವರು ಅಗಲಿ ಇಂದಿಗೆ 2 ವರ್ಷಗಳು ಕಳೆದಿದೆ. ಆದರೆ ಅವರ ಸಾವಿನ ನೋವಿನ ಭಾರ ಇಂದಿಗೂ ಕಮ್ಮಿಯಾಗಿಲ್ಲ. ಹೀಗಿರುವಾಗ ಅಪ್ಪು ಪುಣ್ಯ ಸ್ಮರಣೆಗೆ ಅವರ ಅವರ ಇಷ್ಟದ ಖಾದ್ಯಗಳನ್ನ ಇಟ್ಟು ರಾಘಣ್ಣ, ಯುವರಾಜ್ ಕುಮಾರ್ ಮತ್ತು ಅಶ್ವಿನಿ ಪುನೀತ್ ಮತ್ತು ಮಕ್ಕಳಿಂದ ಪೂಜೆ ಸಲ್ಲಿಸಿದ್ದಾರೆ.

    ಅಪ್ಪು ಸ್ಮಾರಕಕ್ಕೆ ಬಂದ ಅಭಿಮಾನಿಗಳಿ ಅಶ್ವಿನಿ ಪುನೀತ್ ಮತ್ತು ಯುವರಾಜ್ ಕುಮಾರ್ ಅವರು ಅನ್ನಸಂತರ್ಪಣೆ ಮಾಡುತ್ತಿದ್ದಾರೆ. ಈ ವೇಳೆ, ಧನ್ಯಾ, ಪೂರ್ಣಿಮ, ಅಪ್ಪು ಪುತ್ರಿ, ರಾಘಣ್ಣ ದಂಪತಿ ಸೇರಿದಂತೆ ಇಡೀ ಕುಟುಂಬ ಸಾಥ್ ನೀಡಿದೆ.

    ಪವರ್ ಸ್ಟಾರ್ ಪುಣ್ಯ ಸ್ಮರಣೆಗೆ ಅಭಿಮಾನಿ ಬಳಗ ದೊಡ್ಡದಾಗಿ ಪ್ಲ್ಯಾನ್ ಮಾಡಿದ್ದಾರೆ. ನಮ್ಮ ಪವರ್ ಸ್ಟಾರ್ ನಮ್ಮ ಜೊತೆಯಲ್ಲಿದ್ದಾರೆ ಅಂತ ಅವರು ಇಷ್ಟಪಡುತ್ತಿದ್ದ ಕೆಲಸಗಳನ್ನ ಮಾಡುತ್ತಿದ್ದಾರೆ. ಎರಡನೇ ವರ್ಷದ ಪುಣ್ಯಸ್ಮರಣೆಗೆ ಅನ್ನದಾನ, ರಕ್ತದಾನ, ನೇತ್ರದಾನದ ಕ್ಯಾಂಪ್ ಮಾಡಲಿದ್ದಾರೆ ಅಭಿಮಾನಿಗಳು.

    ಕುಟುಂಬದವರ ಪೂಜೆ ಬಳಿಕ ಅಭಿಮಾನಿ ದೇವರುಗಳು ಅಪ್ಪುಗೆ ನಮಿಸಲಿದ್ದಾರೆ. ಕೈ ಮುಗಿದು ಸ್ಮರಿಸಿದ್ದಾರೆ. ಹಬ್ಬದಂತೆ ಜನ ಆ ಜಾಗದಲ್ಲಿ ಸೇರಿದ್ದಾರೆ. ಹೂವು ಹಾಕಿ ಅಲಂಕಾರ ಮಾಡಿ ಕಣ್ಣುತುಂಬಿಕೊಂಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಪ್ಪು ಅಗಲಿ ಇಂದಿಗೆ 2 ವರ್ಷ- ಪುನೀತ್ ಸಮಾಧಿಗೆ ದೊಡ್ಮನೆ ಕುಟುಂಬಸ್ಥರಿಂದ ಪೂಜೆ

    ಅಪ್ಪು ಅಗಲಿ ಇಂದಿಗೆ 2 ವರ್ಷ- ಪುನೀತ್ ಸಮಾಧಿಗೆ ದೊಡ್ಮನೆ ಕುಟುಂಬಸ್ಥರಿಂದ ಪೂಜೆ

    – ಕಂಠೀರವ ಸ್ಟುಡಿಯೋಗೆ ಅಭಿಮಾನಿಗಳ ದಂಡು

    ಬೆಂಗಳೂರು: ಅಕ್ಟೋಬರ್ 29 ಕನ್ನಡಿಗರಿಗೆ ಭರಿಸಲಾಗದ ನೋವು ಕೊಟ್ಟ ದಿನ. ಚಿತ್ರರಂಗಕ್ಕೆ ತುಂಬಲಾರದ ನಷ್ಟವಾದ ದಿನ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Powerstar PunnethRajKumar) ದೈಹಿಕವಾಗಿ ದೂರವಾಗಿ ಎರಡು ವರ್ಷ ಆಗ್ತಿದೆ. ಕಂಠೀರವ ಸ್ಟೂಡಿಯೋದಲ್ಲಿ ಏನೇನು ನಡೆಯಲಿದೆ.

    ಪವರ್ ಸ್ಟಾರ್ ಪುಣ್ಯ ಸ್ಮರಣೆಗೆ ಅಭಿಮಾನಿ ಬಳಗ ಸಜ್ಜಾಗಿದೆ. ನಮ್ಮ ಪವರ್ ಸ್ಟಾರ್ ನಮ್ಮ ಜೊತೆಯಲ್ಲಿದ್ದಾರೆ ಅಂತ ಅವರು ಇಷ್ಟಪಡುತ್ತಿದ್ದ ಕೆಲಸಗಳನ್ನ ಮಾಡುತ್ತಿದ್ದಾರೆ. ಎರಡನೇ ವರ್ಷದ ಪುಣ್ಯಸ್ಮರಣೆಗೆ ಅಪ್ಪು ಸ್ಮಾರಕ ರೆಡಿಯಾಗಿದೆ. ಅನ್ನದಾನ, ರಕ್ತದಾನ, ನೇತ್ರದಾನದ ಕ್ಯಾಂಪ್ ಮಾಡುತ್ತಿದ್ದಾರೆ ಅಭಿಮಾನಿಗಳು. ದೂರದ ಊರುಗಳಿಂದ ಅಭಿಮಾನಿ ದೇವರುಗಳು ಅಪ್ಪುನ ನೋಡಲು ಈಗಾಗ್ಲೇ ಹೊರಟಿದ್ದಾರೆ. ಅಪ್ಪು ನಮನ ಮತ್ತು ಪ್ರೀತಿಯ ಧ್ಯಾನ ಮಾಡಲು ಮಧ್ಯರಾತ್ರಿಯಿಂದ ಶುರುವಾಗಿದೆ. ಇದನ್ನೂ ಓದಿ: ನವೆಂಬರ್ 1ಕ್ಕೆ ಗುಡ್ ನ್ಯೂಸ್ ಕೊಡ್ತಾರಾ ಯಶ್?: ಟೈಟಲ್-ಟೀಸರ್ ರಿಲೀಸ್

    ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ದೊಡ್ಮನೆ ಸದಸ್ಯರು ಅಪ್ಪು ಸ್ಮಾರಕಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಲಿದ್ದಾರೆ. ಕುಟುಂಬದವರ ಪೂಜೆ ಬಳಿಕ ಅಭಿಮಾನಿ ದೇವರುಗಳು ಅಪ್ಪುಗೆ ನಮಿಸಲಿದ್ದಾರೆ. ಕೈ ಮುಗಿದು ಸ್ಮರಿಸಲಿದ್ದಾರೆ. ಹಬ್ಬದಂತೆ ಜನ ಆ ಜಾಗದಲ್ಲಿ ಸೇರುತ್ತಾರೆ. ಹೂವು ಹಾಕಿ ಅಲಂಕಾರ ಮಾಡಿ ಕಣ್ಣುತುಂಬಿಕೊಳ್ತಾರೆ. ಅಪ್ಪು ನೀನು ನಮ್ಮನ್ನ ಬಿಟ್ಟು ಹೋಗಿದ್ದು ಮೋಸ ಮೋಸ ಮೋಸ ಅಂತ ಜನ ಇಂದಿಗೂ ಕೊರಗ್ತಾರೆ. ಅಪ್ಪು ಅಮರ ಅವರ ನೆನಪು ಅಜರಾಮರ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪುನೀತ್‌ ಕಲಾಕೃತಿ ಅನಾವರಣ ಮಾಡಿದ ಸಿಎಂ ಸಿದ್ದರಾಮಯ್ಯ

    ಪುನೀತ್‌ ಕಲಾಕೃತಿ ಅನಾವರಣ ಮಾಡಿದ ಸಿಎಂ ಸಿದ್ದರಾಮಯ್ಯ

    ಲೆ ಮತ್ತು ತಂತ್ರಜ್ಞಾನದ ಮೂಲಕ ವಿದೇಶಿ ಕಲಾವಿದರಿಂದ ತಯಾರಾದ ಪಿಆರ್‌ಕೆ ಕಲಾಕೃತಿ ಇಂದು (ಅ.16) ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಅನಾವರಣ ಆಗಿದೆ. ಪುನೀತ್ ಹುಟ್ಟು ಹಾಕಿರೋ ಪಿಆರ್‌ಕೆ  ಸ್ಟುಡಿಯೋಸ್ ಸಹಯೋಗದಲ್ಲಿ ಅಪ್ಪು ಕಲಾಕೃತಿ ಬಿಡುಗಡೆ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್‌ ಕುಟುಂಬದ ಜೊತೆ ಸಿಎಂ ಸಿದ್ದರಾಮಯ್ಯ (Siddaramaiah) ಕೂಡ ಸಾಥ್‌ ನೀಡಿದರು. ಇದನ್ನೂ ಓದಿ:ನನ್ನ ಲೈಫ್‌ನಲ್ಲಿ ಮಾಡಿದ ಕೆಲಸಕ್ಕೆ ಗೌರವ ಸಿಕ್ಕಿಲ್ಲ- ‘ಚಾರ್ಲಿ’ ನಟಿ ಕಣ್ಣೀರು

    ಅಪ್ಪು ಪ್ರತಿಮೆಗೆ ಮುತ್ತು ನೀಡಿ ಮಾತು ಶುರು ಮಾಡಿದ ರಾಘಣ್ಣ, ಈ ತಿಂಗಳ 29ಕ್ಕೆ ಅಪ್ಪು ಅಗಲಿ ಎರಡು ವರ್ಷ ಆಗಲಿದೆ. ಇಂದು ಈ ಪ್ರತಿಮೆ ಪ್ರೀತಿಯಿಂದ ತಯಾರಾಗಿದೆ. ಈ ಪ್ರತಿಮೆಯನ್ನು ಕಷ್ಟ ಪಟ್ಟು ಮಾಡಿಲ್ಲ, ಇಷ್ಟ ಪಟ್ಟು ಮಾಡಿದ್ದಾರೆ. ಅಪ್ಪು ಕೈಯಲ್ಲಿ ಯಾವಾಗಲೂ ಗನ್ ಅಥವಾ ಕ್ಯಾಮೆರಾ ಇರುತ್ತಿತ್ತು. ಅಪ್ಪ ಅವನಿಗಾಗಿ ಫಾರಿನ್‌ನಿಂದ ಕ್ಯಾಮೆರಾ ತರಿಸಿಕೊಟ್ಟಿದ್ದರು ಎಂದು ಹಿಂದಿನ ದಿನಗಳನ್ನ ಮೆಲುಕು ಹಾಕಿದರು. ಅಪ್ಪು ಅಣ್ಣನಾಗಿ ಹುಟ್ಟಿದ್ದು ನನ್ನ ಪುಣ್ಯ ಎಂದಿದ್ದಾರೆ. ಈ ವೇಳೆ, ಪುನೀತ್‌ ಹುಟ್ಟಿದ ಮಾರ್ಚ್ 17 ದಿನಾಂಕ ಸ್ಫೂರ್ತಿ ದಿನ ಅಂತ ಅನೌನ್ಸ್ ಮಾಡಿ ಮುನ್ನೆಲೆಗೆ ತನ್ನಿ ಎಂದು ಸಿಎಂಗೆ ರಾಘಣ್ಣ (Raghavendra Rajkumar) ಮನವಿ ಮಾಡಿದ್ದರು.

    ಪುನೀತ್ ಕಲಾಕೃತಿಯನ್ನ ಆಂತ್ರಾಪೋಸ್ಟಾ ತಂತ್ರಜ್ಞಾನ ಬಳಸಿ ಮಾಡಲಾಗಿದ್ದು, ಇದಕ್ಕಾಗಿ ಸಾಕಷ್ಟು ಸಂಶೋಧನೆ ಮಾಡಿದ್ದೇನೆ ಎಂದು ಕಲಾವಿದ ವಿಚಾರ್ ಮಾತನಾಡಿದ್ದಾರೆ. ಆಸ್ಕರ್ ವಿನ್ನಿಂಗ್ ಅವತಾರ್ ಮೂವಿಗೆ ಬಳಸಿರೋ Z ಬ್ರಷ್ ಸಾಫ್ಟ್‌ವೇರ್ ಬಳಸಿ ಮಾಡಲಾಗಿದೆ. ಬೇರೆ ಬೇರೆ ರೀತಿಯ ಲೈಟಿಂಗ್ ಬಳಸಿ ಮಾಡಲಾಗಿದೆ. ಡಿಜಿಟಲ್‌ನಲ್ಲಿ ಮಾಡಿ, ತ್ರೀಡಿಯಲ್ಲಿ ಮಾಡಿದ್ದೇನೆ. ಇದು ನನ್ನ ಬಹಳ ದಿನದ ಕನಸು ಕನಸಾಗಿತ್ತು. ಈಗ ನನಸಾಗಿದೆ ಎಂದು ಕಲಾವಿದ ವಿಚಾರ್ ಹೇಳಿದ್ದಾರೆ.

    ಬಳಿಕ ಸಿಎಂ ಸಿದ್ದರಾಮಯ್ಯ ಮಾತನಾಡಿ, ಇಂದು ಕರ್ನಾಟಕ ರತ್ನ ಡಾ.ಪುನೀತ್ ರಾಜ್‌ಕುಮಾರ್ ಅವರ ಪ್ರತಿಮೆ ಅನಾವರಣ ಮಾಡಿದ್ದೇವೆ. ಈ ಪ್ರತಿಮೆಯನ್ನ N3K ಸ್ಟುಡಿಯೋಸ್- ಪಿಆರ್‌ಕೆ ಸ್ಟುಡಿಯೋಸ್ ಸಹಯೋಗದಲ್ಲಿ ಮಾಡಿದ್ದಾರೆ. ಕರ್ನಾಟಕ ಕಂಡಂತಹ ಸರಳ, ಸೌಜನ್ಯ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ ಪುನೀತ್ ಅವರಾಗಿದ್ದರು. ಇಡೀ ಕರ್ನಾಟಕದಲ್ಲಿ ಬಹುಶಃ ಇವರಷ್ಟು ಅಭಿಮಾನಿಗಳನ್ನ ಯಾರೂ ಪಡೆದುಕೊಂಡಿರಲಿಲ್ಲ ಎಂದು ಸಿಎಂ ಮಾತನಾಡಿದ್ದಾರೆ.

    ಬಳಿಕ ಮತ್ತೆ ಮಾತು ಮುಂದುವರಿಸಿ, ಪುನೀತ್ ಅಕಾಲಿಕ ಮರಣಕ್ಕೆ ತುತ್ತಾದಾಗ ಪ್ರತಿಯೊಂದು ಕುಟುಂಬ ತಮ್ಮ ಮನೆಯಲ್ಲೇ ಸಾವಾಗಿದೆ ಅನ್ನೋ ತರಹ ನೋವು ಅನುಭವಿಸಿದರು. ಇಂದು ಪ್ರತೀ ಮನೆಯಲ್ಲಿ ಪುನೀತ್ ಅವರ ಭಾವಚಿತ್ರಗಳಿವೆ. ಬಹುಶಃ ನಾವು ಮತ್ತೊಬ್ಬ ಪುನೀತ್ ಅಂತಹ ವ್ಯಕ್ತಿಯನ್ನ ನೋಡೋದು ಕಷ್ಟ ಎಂದಿದ್ದಾರೆ. ನನಗೆ ಡಾ.ರಾಜ್‌ಕುಮಾರ್ ಅವರ ಜೊತೆ ಉತ್ತಮ ಒಡನಾಟವಿದೆ. ಪುನೀತ್ ಅವರ ಜನಪ್ರಿಯತೆ ರಾಜ್‌ಕುಮಾರ್ ಅವರನ್ನ ಮೀರಿಸಿದೆ ಎಂದು ಸಿಎಂ ಹಾಡಿಹೊಗಳಿದ್ದಾರೆ.

    ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಿಎಂ ಸಿದ್ದರಾಮಯ್ಯ, ಅಶ್ವಿನಿ ಪುನೀತ್, ರಾಘವೇಂದ್ರ ರಾಜ್‌ಕುಮಾರ್, ಯುವ, ಧನ್ಯಾ ರಾಮ್‌ಕುಮಾರ್, ಭೈರತಿ ಸುರೇಶ್‌ ಕೂಡ ಭಾಗಿಯಾಗಿದ್ದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]