ಇಂದು ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ (Puneeth Rajkumar) ಅವರ 4ನೇ ವರ್ಷದ ಪುಣ್ಯಸ್ಮರಣೆ. 4ನೇ ವರ್ಷದ ಪುಣ್ಯಸ್ಮರಣೆಗೆ ಇಡೀ ಅಪ್ಪು ಅಭಿಮಾನಿ ಬಳಗ ರಾಜ್ಯದ ಮೂಲೆ ಮೂಲೆಗಳಿಂದ ಬಂದಿದೆ. ದೊಡ್ಮನೆ ಕುಟುಂಬಸ್ಥರು ಆಗಮಿಸಿ ಪೂಜೆ ನೆರವೇರಿಸಿದ್ದಾರೆ. ಬಳಿಕ ಅಪ್ಪು ನೆನೆದು ಶಿವರಾಜ್ ಕುಮಾರ್ (Shivarjkumar) ಮಾತಾನಾಡಿದ್ದಾರೆ.
ಅಪ್ಪು 100% ತಂದೆಗೆ ತಕ್ಕ ಮಗ. ಅವನು ಇಲ್ಲ ಅಂತ ಅಂದುಕೊಂಡಿದ್ದರೆ ಕಷ್ಟ ಆಗುತ್ತದೆ. ಅವನ ನೆನಪಲ್ಲಿ ಬಾಳಬೇಕು. ನಮ್ಮಲ್ಲಿ ಅವನನ್ನು ತೋರಿಸಲು ಪ್ರಯತ್ನ ಪಡುತ್ತಿದ್ದೇವೆ. ಯಾವಾಗಲೂ ಅವನ ಮೇಲೆ ಪ್ರೀತಿ ಇರುತ್ತದೆ. ಎಲ್ಲರೂ ಅವನನ್ನ ಇಷ್ಟ ಪಡುತ್ತಾರೆ. ನಮಗೆಲ್ಲ ಅಪ್ಪಾಜಿ ಹಾಗೂ ಅಪ್ಪು ಬಗ್ಗೆ ಮಾತನಾಡದೇ ಇರುವ ದಿನವೇ ಇಲ್ಲ. ಅವನು ಎಲ್ಲೂ ಎಲ್ಲೂ ಹೋಗಿಲ್ಲ, ಇಲ್ಲೇ ಇದ್ದಾನೆ ಅಂತ ಅನ್ಕೊಂಡು ಮಾತಾಡ್ತೀನಿ ಎಂದು ನುಡಿದಿದ್ದಾರೆ ಶಿವಣ್ಣ. ಇದನ್ನೂ ಓದಿ: ಪುನೀತ್ ಪುಣ್ಯಸ್ಮರಣೆ – ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ ದೊಡ್ಮನೆ ಕುಟುಂಬ
ಯಾರಿಗೂ ಗೊತ್ತಾಗದ ಹಾಗೆ ಸಹಾಯ ಮಾಡಬೇಕು. ಇನ್ನು ಒಂದೇ ಸಿನಿಮಾದಲ್ಲಿ ಬ್ರದರ್ಸ್ ಆಗಿ ಸಿನಿಮಾ ಮಾಡುವ ಬಗ್ಗೆ ಆಸೆ ಇತ್ತು. ಆದರೆ ಅದಕ್ಕೆ ಸಮಯ ಕೂಡಿ ಬರಲಿಲ್ಲ ಎಂದರು.
AI ಮೂಲಕ ಶಿವಣ್ಣ ಅಪ್ಪು ಸಿನಿಮಾ ಮಾಡಬಹುದಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಶಿವರಾಜ್ ಕುಮಾರ್, ಎಐಯಿಂದ ಸಿನಿಮಾ ಮಾಡುವುದಾದರೆ ಅಚ್ಚುಕಟ್ಟಾಗಿ ಬರಬೇಕು. ಅದು ಆರ್ಟಿಫಿಷಿಯಲ್ ಅನ್ನಿಸಬಾರದು. ಹಾಗಿದ್ದಾಗ ಸಿನಿಮಾ ಮಾಡಬಹುದು ಎಂದು ಹೇಳಿದರು.
ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Puneeth Rajkumar) ಅವರ 4ನೇ ಪುಣ್ಯಸ್ಮರಣೆ ಹಿನ್ನೆಲೆ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಸೇರಿದಂತೆ ದೊಡ್ಮನೆ ಕುಟುಂಬದವರು ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.
ಕಂಠೀರವ ಸ್ಟುಡಿಯೋಕ್ಕೆ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್, ಶಿವರಾಜಕುಮಾರ್ ರಾಘಣ್ಣ ದಂಪತಿ, ಯುವ ರಾಜ್‌ಕುಮಾರ್, ವಿನಯ್ ರಾಜ್‌ಕುಮಾರ್ ಸೇರಿದಂತೆ ಕುಟುಂಬಸ್ಥರು ಆಗಮಿಸಿ, ಪೂಜೆಗೆ ಸಿದ್ಧತೆ ಮಾಡಿಕೊಂಡು ಬಳಿಕ ಅಪ್ಪುಗೆ ಇಷ್ಟವಾದ ತಿನಿಸುಗಳನ್ನಿಟ್ಟು ಪೂಜೆ ನೆರವೇರಿಸಿದ್ದಾರೆ. ಇದನ್ನೂ ಓದಿ: ನಗುಮೊಗದ ಅರಸ ಪುನೀತ್ ರಾಜ್‌ಕುಮಾರ್ ಅಗಲಿ ಇಂದಿಗೆ 4 ವರ್ಷ
ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ಆಗಮಿಸಿದ್ದು, ಅಪ್ಪು ಪುಣ್ಯಸ್ಮರಣೆಯಲ್ಲಿ ಭಾಗಿಯಾಗಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ಪೂಜೆ ವೇಳೆ ಅಭಿಮಾನಿಗಳು ಅಪ್ಪು ಅಪ್ಪು ಅಂತಾ ಜೈಕಾರ ಹಾಕುತ್ತಿದ್ದು, ಕೈಯಲ್ಲಿ ರೋಸ್ ಹಿಡಿದು ಆಗಮಿಸುತ್ತಿದ್ದಾರೆ. ಇನ್ನೂ ಯುವ ರಾಜ್‌ಕುಮಾರ್‌ನ್ನು ನೋಡಿ ಜೂ.ಪವರ್ ಸ್ಟಾರ್‌ಗೆ ಎಂದು ಜೈ ಎಂದು ಜೈಕಾರ ಹಾಕುತ್ತಿದ್ದಾರೆ. ಈ ವರ್ಷ ವಿಶೇಷ ಅಂದ್ರೆ ಅಪ್ಪು ಅವರ ಫ್ಯಾನ್ ಡಮ್ ಆ್ಯಪ್ ಲಾಂಚ್ ಆಗಿದೆ.
ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ಕುಟುಂಬಸ್ಥರು ಪಾರ್ವತಮ್ಮ ಹಾಗೂ ಡಾ. ರಾಜ್‌ಕುಮಾರ್ ಸಮಾಧಿಗೆ ಪೂಜೆ ಮಾಡಿದ್ದಾರೆ.
ಪುನೀತ್ ಸಮಾಧಿಗೆ ಬಿಳಿ ಗುಲಾಬಿ ಹೂವುಗಳಿಂದ ಅಲಂಕಾರ ಮಾಡಲಾಗಿದ್ದು, ಇಂದು ಇಡೀ ದಿನ ಕಂಠೀರವ ಸ್ಟುಡಿಯೋದಲ್ಲಿ ಅನ್ನಸಂತರ್ಪಣೆ ಹಾಗೂ ರಕ್ತದಾನ, ನೇತ್ರದಾನ ಶಿಬಿರವನ್ನು ಅಭಿಮಾನಿಗಳು ಅಯೋಜಿಸಿದ್ದಾರೆ. ಬೆಟ್ಟದ ಹೂವು ಅಪ್ಪು ಎಂದಿಗೂ ಬಾಡದ ಹೂವಾಗಿ ಅಭಿಮಾನಿಗಳ ಹೃದಯಮಂದಿರದಲ್ಲಿ ನೆಲೆಸಿದ್ದಾರೆ. ದೈಹಿಕವಾಗಿ ನಮ್ಮ ಜೊತೆಗೆ ಅಪ್ಪು ಇಲ್ಲದಿದ್ದರೂ, ತಾವು ಮಾಡಿದ ಸಮಾಜಮುಖಿ ಕಾರ್ಯಗಳು, ಸಿನಿಮಾಗಳ ಮೂಲಕ ನಮ್ಮೊಂದಿಗೆ ಅಜರಾಮರವಾಗಿ ಉಳಿದಿದ್ದಾರೆ. ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಎನ್ನುವುದನ್ನ ಮತ್ತೆ ಪ್ರೂವ್ ಮಾಡಿದ್ದಾರೆ ಫ್ಯಾನ್ಸ್. ಅವರ ಈ ಪುಣ್ಯಸ್ಮರಣೆಯ ದಿನವನ್ನ ಅವರ ಅಭಿಮಾನಿಗಳು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.ಇದನ್ನೂ ಓದಿ:ನಾಲ್ಕೇ ವಾರದಲ್ಲಿ ಒಟಿಟಿಯಲ್ಲಿ ಕಾಂತಾರ ರಿಲೀಸ್ ಯಾಕೆ? – ಒಪ್ಪಂದದ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಪ್ರತಿಕ್ರಿಯೆ
ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ 4ನೇ ಪುಣ್ಯಸ್ಮರಣೆ ಹಿನ್ನೆಲೆ ಕಂಠೀರವ ಸ್ಟುಡಿಯೋದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಪುನೀತ್ ಸಮಾಧಿಗೆ ಬಣ್ಣ ಬಣ್ಣದ ಗುಲಾಬಿ ಹೂವಿನ ಅಲಂಕಾರ ಮಾಡಲಾಗಿದೆ. ದೊಡ್ಮನೆ ಕುಟುಂಬ ಬೆಳಗ್ಗೆ 9:30ರ ಸುಮಾರಿಗೆ ಪುನೀತ್ ಸಮಾಧಿಗೆ ಪೂಜೆ ನೆರವೇರಿಸಲಿದ್ದು, ಇಷ್ಟದ ಖಾದ್ಯಗಳನ್ನಿಟ್ಟು ಪೂಜೆ ಮಾಡಲಿದ್ದಾರೆ.ಇದನ್ನೂ ಓದಿ:ಆಂಧ್ರ ಕರಾವಳಿಗೆ ಅಪ್ಪಳಿಸಿದ ಮೊಂಥಾ ಚಂಡಮಾರುತ
ಅಪ್ಪು ಅಭಿಮಾನಿಗಳು ಕಂಠೀರವ ಸ್ಟುಡಿಯೋ ಬಳಿ ಇಂದು ಇಡೀ ದಿನ ಅನ್ನಸಂತರ್ಪಣೆ ಜೊತೆಗೆ ನೇತ್ರದಾನ, ರಕ್ತದಾನ ಶಿಬಿರಗಳ ಆಯೋಜನೆ ಮಾಡಿಕೊಂಡಿದ್ದಾರೆ. ರಾಜ್ಯದ ಮೂಲೆ ಮೂಲಗಳಿಂದ ಅಭಿಮಾನಿಗಳು ಆಗಮಿಸಿ, ಅಪ್ಪುಗೆ ನಮನ ಸಲ್ಲಿಸಲಿದ್ದಾರೆ. ಅಲ್ಲದೇ, ರಾಜ್ಯಾದ್ಯಂತ ಅವರ ಅಭಿಮಾನಿಗಳು ತಾವಿರುವ ಸ್ಥಳದಿಂದಲೇ ಅಪ್ಪುಗೆ ನಮನ ಸಲ್ಲಿಸುತ್ತಿದ್ದಾರೆ.
ದಿ.ಪುನೀತ್ ರಾಜ್ಕುಮಾರ್ (Puneeth Rajkumar) ಅವರ ಕನಸುಗಳನ್ನು ಸಾಕಾರಗೊಳಿಸಲು ನೂತನ ಆ್ಯಪ್ `ಅಪ್ಪು ಫ್ಯಾನ್ ಡಮ್’ (Appu Fandom App) ಅನಾವರಣಗೊಂಡಿದೆ.
ಆ್ಯಪ್, ಎಐ ತಂತ್ರಜ್ಞಾನದ ಮೂಲಕ ಅಭಿಮಾನಿಗಳನ್ನು ತಲುಪುವ ಸದುದ್ದೇಶದೊಂದಿಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ (Ashwini Puneeth Rajkumar) ನೇತೃತ್ವದಲ್ಲಿ ಸಿದ್ಧವಾಗಿರುವ ಆ್ಯಪ್‌ನ್ನು ಶನಿವಾರ (ಅ.25) ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಲೋಕಾರ್ಪಣೆ ಮಾಡಿದರು.ಇದನ್ನೂ ಓದಿ: ಕಾಂತಾರ ಗೆದ್ದ ಖುಷಿಯಿಂದ ರಿಷಬ್ ಮನೆಯಲ್ಲಿ ಭರ್ಜರಿ ಹಬ್ಬ
ಆ್ಯಪ್ ಲೋಕಾರ್ಪಣೆ ವೇಳೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮಾತನಾಡಿ, ನಿಮಗೆ ಗೊತ್ತಿರುವಂತೆ ಅಪ್ಪು ಯಾವಾಗಲೂ ಹೊಸತನದ ಕಡೆಗೆ ಹುಡುಕಾಟ ನಡೆಸುತ್ತಿದ್ದರು. ಹೊಸತನದ ಹುಡುಕಾಟದಿಂದಲೇ ಹೊಸಬರಿಗೆ ಅವಕಾಶ ಕೊಡಲೆಂದೇ ಪಿಆರ್‌ಕೆ ಕೂಡ ಶುರುವಾಗಿದ್ದು, ಇಂಡಸ್ಟ್ರಿಗೆ ಏನಾದ್ರೂ ಕೊಡುಗೆ ಕೊಡ್ಬೇಕು ಎಂದು ಹೇಳುತ್ತಿದ್ದರು. ಸಮರ್ಥ್ ಅವರ ಟೀಂ ಒಂದು ಐಡಿಯಾ ತೆಗೆದುಕೊಂಡು ಬಂದಿದ್ದರು. ಅದನ್ನು ಸಾಕಷ್ಟು ಡೆವೆಲೆಪ್ ಮಾಡಿ, ಸಿನಿಮಾ, ಫಿಟ್ನೆಸ್, ಮಕ್ಕಳಿಗಾಗಿ ವಿಶೇಷ ಕಂಟೆಟ್‌ಗಳು ಬರಲಿವೆ. ಇದು ಕೇವಲ ನಮ್ಮ ಆ್ಯಪ್ ಅಲ್ಲ, ನಿಮ್ಮ ಆ್ಯಪ್ ಎಂದು ಹೇಳಿದರು.
ಶೀರ್ಷಿಕೆ ಹಾಗೂ ಟೀಸರ್ ಮೂಲಕ ಕುತೂಹಲ ಹೆಚ್ಚಿಸಿರುವ ಮಾರಿಗಲ್ಲು ವೆಬ್ ಸರಣಿಯ ಟ್ರೇಲರ್ ಬಿಡುಗಡೆಯಾಗಿದೆ. Zee5 ಮತ್ತು ‘ಪಿಆರ್‌ಕೆ ಪ್ರೊಡಕ್ಷನ್ಸ್’ ಜಂಟಿಯಾಗಿ ನಿರ್ಮಿಸಿರುವ ಈ ವೆಬ್ ಸೀರೀಸ್ ಇದೇ ತಿಂಗಳ 31ರಿಂದ ಪ್ರಸಾರ ಆಗಲಿದೆ. ಜೀ 5 ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ. ಮಾರಿಗಲ್ಲು 1990ರ ದಶಕದ ಕಥೆಯಾಗಿದೆ. ಅಲ್ಲದೇ ಕದಂಬರ ಕಾಲಘಟ್ಟದ ಹಿನ್ನೆಲೆನೂ ಇಲ್ಲಿದೆ. ಈ ಮೂಲಕ ನಮ್ಮ ಮಣ್ಣಿನ ಕಥೆಯನ್ನು ಜೀ 5 ಹಾಗೂ ಪಿ.ಆರ್.ಕೆ ಪ್ರೊಡಕ್ಷನ್ ಹೇಳೋದಿಕ್ಕೆ ಹೊರಟಿದೆ.
ಶಿರಸಿ ಬಳಿಯ ಮಾರಿಗಲ್ಲು ಎಂಬ ಕಾಲ್ಪನಿಕ ಹಳ್ಳಿಯೊಂದರಲ್ಲಿ ನಡೆದ ಕಥೆಯನ್ನು ಸರಣಿಯಲ್ಲಿ ಕಟ್ಟಿಕೊಡಲಾಗಿದೆ. ಕದಂಬರ ರಾಜಧಾನಿಯಾಗಿರುವ ಬನವಾಸಿಗೆ ತನ್ನದೇ ಆದ ಪರಂಪರೆ ಹಾಗೂ ಇತಿಹಾಸವಿದೆ. ಇದು ದೊಡ್ಡ ಮನೆತನ ಎಂದು ಹೆಸರು ಪಡೆದಿದೆ. ಕದಂಬರ ಕಾಲದ ನಿಧಿಯನ್ನು ಹುಡುಕಲು ಹೊರಟ ಶಿರಸಿ ಯುವಕರ ಕಹಾನಿಯನ್ನು ಇದರಲ್ಲಿ ತೋರಿಸಲಾಗಿದೆ. ನಂಬಿಕೆ, ಸ್ವಾರ್ಥ, ದುರಾಸೆ ಮುಂತಾದ ಭಾವನೆಗಳಿಗೆ ಒಳಗಾದ ಪಾತ್ರಗಳನ್ನು ಈ ಪಯಣದಲ್ಲಿ ಸೂಕ್ಷ್ಮವಾಗಿ ಹೇಳಾಗಿದೆ. ‘ಮಾರಿಗಲ್ಲು’ ಮೂಲಕ ರಂಗಾಯಣ ರಘು, ಗೋಪಾಲ್ ಕೃಷ್ಣ ದೇಶಪಾಂಡೆ ವೆಬ್ ಸೀರಿಸ್ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಪ್ರಪ್ರಥಮ ಬಾರಿಗೆ ಈ ಇಬ್ಬರು ವೆಬ್ ಸೇರೀಸ್ ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವುದು ಕುತೂಹಲ ಹೆಚ್ಚಿಸಿದೆ ಪ್ರವೀಣ್ ತೇಜ್ ಪಾತ್ರವರ್ಗದಲ್ಲಿದ್ದಾರೆ. ಇವರೊಂದಿಗೆ ಜೀ ಕನ್ನಡದ ಹಿಟ್ ರಿಯಾಲಿಟಿ ಶೋ ಡ್ರಾಮಾ ಜೂನಿಯರ್ಸ್ ಖ್ಯಾತಿಯ ಎಎಸ್ ಸೂರಜ್, ನಟ ಪ್ರಶಾಂತ್ ಸಿದ್ದಿ ಅಭಿನಯಿಸಿದ್ದಾರೆ. ಇವರಿಬ್ಬರು ಮೂಲತಃ ಶಿರಸಿಯವರಾಗಿದ್ದು, ಸಹಜವಾಗಿ ನಿರೀಕ್ಷೆ ಹೆಚ್ಚು ಮಾಡಿದೆ. ಟಿವಿ ಲೋಕದಲ್ಲಿ ಖ್ಯಾತಿ ಪಡೆದಿರುವ ನಿನಾದ್ ಹೃತ್ಸಾ ಮಾರಿಗಲ್ಲು ಭಾಗವಾಗಿದ್ದಾರೆ. ಸ್ಥಳೀಯ ರಂಗಭೂಮಿ ಕಲಾವಿದರು ವೆಬ್ ಸೀರೀಸ್ ನಲ್ಲಿ ನಟಿಸಿದ್ದಾರೆ. ಅನುಭವಿ ತಾರಾಬಳಗದ ಜೊತೆಗೆ ಹೊಸ ಪ್ರತಿಭೆಗಳಿಗೆ ವೆಬ್ ಸರಣಿಯಲ್ಲಿ ಅವಕಾಶ ನೀಡಲಾಗಿದೆ.
ಈ ವೆಬ್ ಸೀರಿಸ್ ಅನ್ನು ಪಿಆರ್‌ಕೆ ವತಿಯಿಂದ ಅಶ್ವಿನಿ ಪುನೀತ್ ರಾಜ್ಕುಮಾರ್ ನಿರ್ಮಾಣ ಮಾಡಿದ್ದು, ದೇವರಾಜ್ ಪೂಜಾರಿ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ನಿರ್ದೇಶಕ ದೇವರಾಜ್ ಪೂಜಾರಿ ಮಾತನಾಡಿ, “ಮಾರಿಗಲ್ಲು ಕರ್ನಾಟಕದ ಮಣ್ಣಿನಲ್ಲಿ ಆಳವಾಗಿ ಬೇರೂರಿರುವ ಕಥೆಯಾಗಿದೆ. ಇದು ನಂಬಿಕೆ, ದುರಾಸೆ ಮತ್ತು ಮಾನವ ಹಣೆಬರಹವನ್ನು ರೂಪಿಸುವ ಕಾಣದ ಶಕ್ತಿಗಳ ಬಗ್ಗೆ ಇದೆ. ಅಲ್ಲದೇ ಶಿರಸಿಯ ಸಾಂಸ್ಕೃತಿಕ ಆಚರಣೆ, ಬೇಡರ ವೇಷ ಹುಟ್ಟು, ಹಿನ್ನೆಲೆಯಲ್ಲಿ ಸಾಗುವ ಕಥೆಯಲ್ಲಿ ಸರಣಿಯಲ್ಲಿ ನಾಲ್ಕು ಜನ ಹುಡುಗರು ಸೊಗಸಾಗಿ ನಟಿಸಿದ್ದಾರೆ. ಕಾಡು, ಜಾನಪದ ಮತ್ತು ನಂಬಿಕೆ ಎಲ್ಲವೂ ಒಟ್ಟಿಗೆ ಜೀವಂತವಾಗಿರುವ ನೈಜ ಆದರೆ ಅತೀಂದ್ರಿಯತೆಯನ್ನು ಅನುಭವಿಸುವ ಕಥೆಯನ್ನು ರಚಿಸಲು ನಾನು ಬಯಸಿದ್ದೆ. ಪ್ರತಿಯೊಂದು ಫ್ರೇಮ್ ಭಕ್ತಿ ಮತ್ತು ಭಯದ ಭಾವನೆಯನ್ನು ಹೊಂದಿದೆ, ಮತ್ತು ನಮ್ಮ ಸಂಸ್ಕೃತಿಯನ್ನು ನಿಗೂಢತೆಯ ಮೂಲಕ ಆಚರಿಸುವ ಕಥೆಯಲ್ಲಿ ನಂಬಿಕೆ ಇಟ್ಟಿದ್ದಕ್ಕಾಗಿ ಪಿಆರ್‌ಕೆ ಪ್ರೊಡಕ್ಷನ್ಸ್ ಮತ್ತು ಜೀ5 ಗೆ ನಾನು ಕೃತಜ್ಞನಾಗಿದ್ದೇನೆ” ಎಂದು ಹೇಳಿದರು.
ಜೀ5 ಕನ್ನಡದ ವ್ಯವಹಾರ ಮುಖ್ಯಸ್ಥ ದೀಪಕ್ ಶ್ರೀರಾಮುಲು, “ಮಾರಿಗಲ್ಲು ನಮ್ಮ ಭರವಸೆಯ ‘ನಮ್ಮ ಭಾಷೆ, ನಮ್ಮ ಕಥೆಗಳು’ ಸಾರವನ್ನು ಸಂಪೂರ್ಣವಾಗಿ ಸೆರೆಹಿಡಿಯುತ್ತದೆ. ಇದು ಕರ್ನಾಟಕದ ಸ್ಥಳೀಯ ಕಥೆ ಹೇಳುವ ಸಂಪ್ರದಾಯ ದೈವಿಕ ಜಾನಪದ ಥ್ರಿಲ್ಲರ್ ಮತ್ತು ಹಾಸ್ಯದೊಂದಿಗೆ ಅಲೌಕಿಕ ಕುತೂಹಲವನ್ನು ಸಂಯೋಜಿಸುವ ಅಸಾಧಾರಣ ಕಥೆಯಾಗಿದೆ. ಇದು ಭಾಷೆಗಳು ಮತ್ತು ಪ್ರದೇಶಗಳಾದ್ಯಂತ ಪ್ರೇಕ್ಷಕರೊಂದಿಗೆ ಪ್ರತಿಧ್ವನಿಸುತ್ತದೆ ಎಂದು ನಮಗೆ ವಿಶ್ವಾಸವಿದೆ ” ಎಂದು ಅಭಿಪ್ರಾಯ ಹಂಚಿಕೊಂಡರು. ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ (Ashwini Puneeth Rajkumar) ಮಾತನಾಡಿ, “ಮಾರಿಗಲ್ಲು ನಮಗೆ ತುಂಬಾ ವಿಶೇಷವಾಗಿದೆ. ಏಕೆಂದರೆ ಇದು ಕರ್ನಾಟಕದಿಂದ ಬಲವಾದ, ಬೇರೂರಿರುವ ಕಥೆಗಳನ್ನು ದೊಡ್ಡ ಪ್ರೇಕ್ಷಕರಿಗೆ ಕೊಂಡೊಯ್ಯುವ ಪಿಆರ್ಕೆ ಪ್ರೊಡಕ್ಷನ್ನ (PRK Productions) ದೃಷ್ಟಿಕೋನವನ್ನು ಮುಂದಕ್ಕೆ ಕೊಂಡೊಯ್ಯುತ್ತದೆ. ಇದು ಸಂಸ್ಕೃತಿ, ನಂಬಿಕೆ ಮತ್ತು ಮಾನವ ಭಾವನೆಗಳನ್ನು ಸಾಂಪ್ರದಾಯಿಕ ಮತ್ತು ಸಮಕಾಲೀನ ರೀತಿಯಲ್ಲಿ ಬೆರೆಸುವ ಸರಣಿಯಾಗಿದೆ. ಈ ಯೋಜನೆಯಲ್ಲಿ ಜೀ 5ನೊಂದಿಗೆ ಕೆಲಸ ಮಾಡುವುದು ತೃಪ್ತಿಕರವಾಗಿದೆ, ಒಟ್ಟಾಗಿ ನಾವು ನಮ್ಮ ನೆಲದ ಹೃದಯ ಮತ್ತು ಚೈತನ್ಯವನ್ನು ಪ್ರತಿಬಿಂಬಿಸುವ ಕಥೆಯನ್ನು ಪ್ರಸ್ತುತಪಡಿಸುತ್ತಿದ್ದೇವೆ” ಎಂದರು.
ಮಾರಿಗಲ್ಲು ವೆಬ್ ಸರಣಿಗೆ (Maarigallu Web Series) ಎಸ್.ಕೆ. ರಾವ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಎಲ್.ವಿ. ಮುತ್ತು ಹಾಗೂ ಎಲ್.ವಿ. ಗಣೇಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ರವಿ ಹಿರೇಮಠ್ ಅವರು ಸೌಂಡ್ ಡಿಸೈನ್ ಜವಾಬ್ದಾರಿ ನಿಭಾಯಿಸಿದ್ದು, ಕಾಂತಾರ ಸಂಕಲನಕಾರ ಸುರೇಶ್ ಮಲ್ಲಯ್ಯ, ಆಶಿಕ್ ಕಲರಿಸ್ಟ್ ಹೊಣೆ ಹೊತ್ತುಕೊಂಡಿದ್ದಾರೆ.
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅಗಲಿಕೆಗೆ 4 ವರ್ಷ ತುಂಬುತ್ತಿದೆ. ಇದೇ ವೇಳೆ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದು ಸಿಕ್ಕಿದೆ. ಅಪ್ಪು ಅಭಿಮಾನಿಗಳಿಂದ ಅಭಿಮಾನಿಗಳಿಗಾಗಿ ಅಂತ ಅಪ್ಪು ಪತ್ನಿ ಅಶ್ವಿನಿ ಪುನೀತ್‌ರಾಜ್‌ಕುಮಾರ್ ಹೊಸ ಹೆಜ್ಜೆಯೊಂದನ್ನ ಇಟ್ಟಿದ್ದಾರೆ. ಅಪ್ಪು ಅಪ್ಲಿಕೇಷನ್ (Appu App) ಅನಾವರಣ ಮಾಡಲು ಸಜ್ಜಾಗಿದ್ದಾರೆ. ಅದಕ್ಕೂ ಮೊದಲು ಟ್ರೈಲರ್ ರಿಲೀಸ್ ಮಾಡಲಾಗಿದೆ.
ಪುನೀತ್ ರಾಜಕುಮಾರ್ ಅವರ ಪ್ರತಿಭೆ, ಸಮಾಜಸೇವೆ, ಮಾನವೀಯ ಮೌಲ್ಯಗಳು, ಅವರ ಜೀವನ, ಸಾಧನೆಯನ್ನು ಪ್ರತಿಯೊಬ್ಬರಿಗೂ ತಲುಪಿಸಲು ಹಾಗೂ ಸ್ಫೂರ್ತಿ ತುಂಬಲು ಪಿಆರ್‌ಕೆ ಹೆಸರಿನ ಅಪ್ಲಿಕೇಶನ್ ಅನ್ನು ನಿರ್ಮಿಸಲಾಗಿದ್ದು, ಅದನ್ನು ಅ.25 ರಂದು ಬಿಡುಗಡೆ ಮಾಡಲಾಗುತ್ತಿದೆ. ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಇನ್ನೂ ಕೆಲವು ಗಣ್ಯರು ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಲಿದ್ದಾರೆ. ಇದನ್ನೂ ಓದಿ: ಕಾಂತಾರ ಸೂಪರ್ ಸಕ್ಸಸ್ – ಕಾಶಿ ಯಾತ್ರೆ ಕೈಗೊಂಡ ಡಿವೈನ್‍ಸ್ಟಾರ್
ಅಂದಹಾಗೆ ಅಪ್ಲಿಕೇಶನ್‌ನ ಪ್ರೋಮೊ ಒಂದನ್ನು ಬಿಡುಗಡೆ ಮಾಡಲಾಗಿದ್ದು, ಪ್ರೋಮೊಗೆ ಅಪ್ಪು ಅವರ ಆಪ್ತ ಗೆಳೆಯರೂ ಆಗಿದ್ದ ಕಿಚ್ಚ ಸುದೀಪ್ (Sudeep) ಅವರು ಟ್ರೈಲರ್‌ಗೆ ಧ್ವನಿ ನೀಡಿದ್ದಾರೆ. ಪಿಆರ್‌ಕೆ ಅಪ್ಲಿಕೇಶನ್ ಕೇವಲ ಅಪ್ಪು ಅವರ ಚಿತ್ರ, ವಿಡಿಯೋಗಳನ್ನು ಹೊಂದಿರುವ ಆಪ್ ಅಲ್ಲ. ಇಲ್ಲಿ ಕಂಟೆಂಟ್ ಕ್ರಿಯೇಟರ್‌ಗಳು ಪರಸ್ಪರ ತಮ್ಮ ಕೆಲಸವನ್ನು ಪ್ರದರ್ಶನಕ್ಕೆ ಇಡುವ, ಒಬ್ಬರಿಂದ ಮತ್ತೊಬ್ಬರು ಕಲಿಯುವ ಅವಕಾಶವೂ ಇದೆಯಂತೆ.
ಸದ್ಯ ಟ್ರೈಲರ್ ಮೂಲಕ ಒಂದಷ್ಟು ವಿಷಯಗಳನ್ನ ತಲುಪಿಸಿದೆ ಪಿಆರ್‌ಕೆ. ಇನ್ನು ಅಪ್ಲಿಕೇಷನ್ ಬಿಡುಗಡೆಯಾದ್ಮೇಲೆ ಏನೆಲ್ಲ ಇರಲಿದೆ ಅನ್ನೋ ಸಂಪೂರ್ಣ ಮಾಹಿತಿ ದೊರೆಯಲಿದೆ. ಜಗತ್ತಿನ ಮೊಟ್ಟಮೊದಲ ಫ್ಯಾನ್‌ಡಮ್ ಆ್ಯಪ್ ಇದು ಎಂದು ಹೇಳೋಕೆ ಹೆಮ್ಮೆ ಎನ್ನಿಸುತ್ತೆ. ಇದನ್ನೂ ಓದಿ: ಬ್ರ್ಯಾಟ್ ಟ್ರೈಲರ್ ಲಾಂಚ್ ಮಾಡಿ ನಿರ್ದೇಶಕ ಪ್ರೇಮ್ ಕಾಲೆಳೆದ ಕಿಚ್ಚ ಸುದೀಪ್
ಭಾರತದ ಪ್ರಖ್ಯಾತ ಹಾಗೂ ಬೃಹತ್ ಓಟಿಟಿ ವೇದಿಕೆಯಾದ ಜೀ5, ಕನ್ನಡ ಚಿತ್ರರಂಗದ ಪ್ರಮುಖ ನಿರ್ಮಾಣ ಸಂಸ್ಥೆಗಳಲ್ಲೊಂದಾದ ಪುನೀತ್ ರಾಜ್ಕುಮಾರ್ ಅವರ ಪಿಆರ್‌ಕೆ ಪ್ರೊಡಕ್ಷನ್ಸ್‌ನ ಸಹಯೋಗದಲ್ಲಿ ಒಂದು ವೆಬ್ ಸರಣಿಯನ್ನು ಘೋಷಿಸಿದ್ದು, ಇದೀಗ ಅದರ ಶೀರ್ಷಿಕೆಯನ್ನು ಘೋಷಿಸಿ ಮತ್ತೊಮ್ಮೆ ಸುದ್ದಿಯಾಗಿದೆ. ಮಾರಿಗಲ್ಲು (Marigallu) ಎಂಬ ಶೀರ್ಷಿಕೆಯುಳ್ಳ ಈ ವೆಬ್‌ಸರಣಿ ಕರ್ನಾಟಕ ಜಾನಪದವನ್ನು ಹೇಳುವ ಒಂದು ದೈವಿಕ ಥ್ರಿಲ್ಲರ್ ಆಗಿದೆ. ಈ ಕಥೆಯು ಸದೃಢ ಸಾಂಸ್ಕೃತಿಕ ಮತ್ತು ಐತಿಹಾಸಿಕ ಆಧಾರಗಳನ್ನು ಹೊಂದಿರುತ್ತದೆ ಎಂಬುದು ಗಮನಾರ್ಹ ಸಂಗತಿ.
ನಾಲ್ಕನೇ ಶತಮಾನದ ಕದಂಬರ ಆಳ್ವಿಕೆಯನ್ನು ಹೊಂದಿರುವ ಈ ಕಥೆಯು, ಕದಂಬರ ಪ್ರಥಮ ರಾಜನಾದ ಮಯೂರ ಶರ್ಮನ ಪರಂಪರೆಯನ್ನು ಸಂಭ್ರಮಿಸುತ್ತಿದೆ. ಕದಂಬರ ಕಾಲದಿಂದಲೂ `ಮಾರಿ’ ಎಂಬ ದೇವತೆಯಿಂದ ಕಾಪಾಡಲ್ಪಟ್ಟಿರುವ ನಿಧಿಯ ಕುರಿತಾಗಿ ಕಥೆಯನ್ನು ಹೆಣೆದಿದ್ದು, ನಂಬಿಕೆ, ಸ್ವಾರ್ಥ, ದುರಾಸೆ ಮುಂತಾದ ಭಾವನೆಗಳಿಗೆ ಒಳಗಾಗಿ ಪಾತ್ರಗಳು ಯಾವ ರೀತಿ ವರ್ತಿಸುತ್ತಾರೆ, ನಿಧಿಯ ರಹಸ್ಯವನ್ನು ಹೇಗೆ ಭೇದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಅಷ್ಟೆ ಅಲ್ಲದೆ ಈ ಕಥೆಯು ಸಾಂಸ್ಕೃತಿಕ ಶ್ರೀಮಂತಿಕೆ, ದೈವ ಭಕ್ತಿ, ಜಾನಪದ ಮುಂತಾದ ವಿಷಯಗಳನ್ನೂ ಒಳಗೊಂಡಿರುತ್ತದೆ.ಇದನ್ನೂ ಓದಿ: ಕಾಂತಾರದಿಂದ ಗುಡ್ ನ್ಯೂಸ್ : ಟ್ರೇಲರ್ ರಿಲೀಸ್ ಡೇಟ್ ಫಿಕ್ಸ್
ವೆಬ್ ಸರಣಿ ಕುರಿತಾಗಿ ಮಾತನಾಡಿದ ನಿರ್ಮಾಪಕಿ ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್, “ನಮ್ಮ ನೆಲದ ಸಂಸ್ಕೃತಿಯನ್ನು ಬಿಂಬಿಸುವ ಕಥೆಗಳು ಹಾಗೂ ಜನರ ಜೀವನವನ್ನು ಪ್ರತಿಬಿಂಬಿಸುವ ಕಥೆಗಳನ್ನು ನಾವು ಹೆಚ್ಚು ನಂಬುತ್ತೇವೆ ಮತ್ತು ಅಂತಹ ಕಥೆಗಳಿಗೆ ಉತ್ತೇಜನ ನೀಡುತ್ತೇವೆ. “ಮಾರಿಗಲ್ಲು” ಅಂತಹ ಒಂದು ಕಥೆಯಾಗಿದೆ. ಈ ಕಥೆಯು ಕೇವಲ ರಹಸ್ಯ, ಥ್ರಿಲ್, ಆಕ್ಷನ್‌ಗಳನ್ನು ಒಳಗೊಳ್ಳದೆ, ಕರ್ನಾಟಕ ಜಾನಪದ ಸಂಸ್ಕೃತಿ, ದೈವ ಭಕ್ತಿ ಮುಂತಾದವುಗಳ್ಳನ್ನೂ ಒಳಗೊಂಡಿರುವ ವಿಭಿನ್ನ ಮಿಶ್ರಣವಾಗಿದೆ. ಇದು ಪ್ರತಿಯೊಬ್ಬರು ಕಣ್ಣರಳಿಸಿ ನೋಡುವಂಥಾ ಥ್ರಿಲ್ಲರ್ ಕಥೆಯಾಗಲಿದೆ” ಎಂದು ಹೇಳಿದರು.
ಕನ್ನಡ ಜೀ5 ಬಿಸಿನೆಸ್ ಮುಖ್ಯಸ್ಥ ಶ್ರೀ ದೀಪಕ್ ಶ್ರಿರಾಮುಲು ಮಾತನಾಡಿ, ” ‘ಮಾರಿಗಲ್ಲು’ ನಾವು ಹಿಂದೆಂದೂ ಮಾಡದ ಪ್ರಯೋಗವಾಗಿದೆ. ದುರಾಸೆ, ರಹಸ್ಯ, ಮೋಹ, ದೈವ ಭಕ್ತಿ ಮುಂತಾದ ಅನೇಕ ವಿಷಯಗಳ ವಿಭಿನ್ನ ಮಿಶ್ರಣವಾದ ಈ ಕಥೆ ಕನ್ನಡ ನಾಡಿನ ಜಾನಪದವನ್ನು ಕೂಡ ಎತ್ತಿ ಹಿಡಿಯಲಿದೆ. ಕದಂಬ ವಂಶಸ್ಥರ ಸಾಧನೆಗಳನ್ನು ಜೀವಂತವಾಗಿಸುವ ಪ್ರಯತ್ನವನ್ನು ಇದರಲ್ಲಿ ಕಾಣಬಹುದು. ‘ಮಾರಿ’ ದೇವತೆಯಿಂದ ಕಾಯಲ್ಪಟ್ಟಿದ ಕದಂಬರ ನಿಧಿಯ ಕಳವು ಮತ್ತು ಹುಡುಕಾಟದ ಸುತ್ತ ಇಡೀ ಕಥೆಯನ್ನು ಹೆಣೆಯಲಾಗಿದೆ. ಈ ಥ್ರಿಲ್ಲರ್ ವೆಬ್ ಸರಣಿಯನ್ನು ಪ್ರೇಕ್ಷಕರ ಮುಂದಿಡಲು ನಾವು ಉತ್ಸುಕರಾಗಿದ್ದೇವೆ” ಎಂದು ತಿಳಿಸಿದರು.
ಮತ್ತೊಂದು ವಿಶೇಷವೆಂದರೆ, ಇಂತಹ ಕುತೂಹಲಕಾರಿ ಕಥೆಗಳನ್ನು ಪ್ರೇಕ್ಷಕರಿಗೆ ಓಟಿಟಿ ವೇದಿಕೆಗಳ ಮೂಲಕ ಲಭ್ಯಗೊಳಿಸಬೇಕೆಂಬುದು ಪುನೀತ್ ರಾಜಕುಮಾರ್ ಅವರ ಕನಸಾಗಿತ್ತು. ಉತ್ತಮ ಗುಣಮಟ್ಟದ ಕಥೆಗಳನ್ನು ಜನರಿಗೆ ಓಟಿಟಿಯ ಮೂಲಕ ನೀಡಬೇಕೆಂಬ ಅವರ ಆ ಕನಸಿಗೆ “ಮಾರಿಗಲ್ಲು” ಮುನ್ನುಡಿಯಾಗಲಿದೆ.ಇದನ್ನೂ ಓದಿ: ಟಾಕ್ಸಿಕ್ ಫೈನಲ್ ಶೂಟಿಂಗ್ ಮುನ್ನ ಲಂಡನ್‌ಗೆ ಹಾರಿದ ಯಶ್!
ಅಭಿನಯ ಸರಸ್ವತಿ ಎಂದೇ ಖ್ಯಾತಿ ಪಡೆದಿದ್ದ ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ.ಸರೋಜಾ ದೇವಿ (B Saroja Devi) ಅವರಿಂದು ವಿಧಿವಶವಾಗಿದ್ದು, ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ʻಮನುಷ್ಯನ ಪಂಚೇಂದ್ರಿಯಗಳಲ್ಲಿ ಕಣ್ಣು ಪ್ರಮುಖವಾದದ್ದು. ಕಣ್ಣು ದಾನ ಮಾಡುವ ಮೂಲಕ ಬೇರೊಬ್ಬರಿಗೆ ದೃಷ್ಟಿ ನೀಡಿ ಬಾಳು ಬೆಳಗಬೇಕು’ ಎನ್ನುವಂತೆ ಸರೋಜಾ ದೇವಿ ಅವರು ನೇತ್ರದಾನ (Eye Donate) ಮಾಡಿದ್ದಾರೆ.
ಬೆಂಗಳೂರಿನ (Bengaluru) ನಾರಾಯಣ ನೇತ್ರಾಲಯಕ್ಕೆ ನೇತ್ರದಾನ ಮಾಡಿದ್ದರು. ಅದರಂತೆ ಇಂದು ಸರೋಜಾದೇವಿ ಅವರ ಕಣ್ಣುಗಳನ್ನು ಪಡೆಯಲಾಗುತ್ತಿದೆ. ವೈದ್ಯರ ತಂಡ ಮಲ್ಲೇಶ್ವರಂನಲ್ಲಿರುವ ಮೆನೆಗೆ ಆಗಮಿಸಿದ್ದು, ನೇತ್ರದಾನ ಪ್ರಕ್ರಿಯೆಯನ್ನ ಪೂರ್ಣಗೊಳಿಸಲಾಗುತ್ತಿದೆ. ನೇತ್ರದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಂತಿಮ ದರ್ಶನ ಮತ್ತೆ ನಡೆಯಲಿದೆ. ಇದನ್ನೂ ಓದಿ: ಕೋವಿಡ್ ವೇಳೆ 2 ಲಕ್ಷ ಕೊಟ್ಟು ಯಾರಿಗಾದ್ರೂ ಸಹಾಯ ಮಾಡು ಅಂತ ಹೇಳಿದ್ರು – ಸಾಧು ಕೋಕಿಲಾ
ಕನ್ನಡ ವರನಟ ಡಾ.ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ (Puneeth Rajkumar) ಕೂಡ ನೇತ್ರದಾನ ಮಾಡಿದ್ದರು. ಪುನೀತ್ ರಾಜ್ಕುಮಾರ್ ಅವರ ಅಕಾಲಿಕ ಮರಣದ ನಂತರ ಅವರ ಕಣ್ಣುಗಳನ್ನು ನಾರಾಯಣ ನೇತ್ರಾಲಯದಲ್ಲಿ ಇಬ್ಬರು ಅಂಧರಿಗೆ ಅಳವಡಿಸಲಾಗಿದೆ. ಆ ಮೂಲಕ ಇಬ್ಬರ ಬಾಳಿಗೆ ಪುನೀತ್ ರಾಜ್‌ಕುಮಾರ್ ಬೆಳಕಾಗಿದ್ದಾರೆ. ಇದೀಗ ರಾಜ್‌ಕುಮಾರ್, ಪುನೀತ್ ಅವರ ಹಾದಿಯಾಗಿ ಸರೋಜಾದೇವಿ ಅವರೂ ನೇತ್ರದಾನ ಮಾಡಿದ್ದು, ಬದುಕಿನ ಪಯಣ ಮುಗಿಸಿದ್ದಾರೆ. ಇದನ್ನೂ ಓದಿ: ಸಿನಿಮಾದ ಸುವರ್ಣ ಯುಗವೊಂದು ಅಂತ್ಯವಾಗಿದೆ – ಸರೋಜಾದೇವಿ ನಿಧನಕ್ಕೆ ಕಂಬನಿ ಮಿಡಿದ ರಜನಿಕಾಂತ್, ಖುಷ್ಬು
ಸರೋಜಾದೇವಿ ಎಂದಾಕ್ಷಣ ಕಿತ್ತೂರು ಚೆನ್ನಮ್ಮ, ಬಬ್ರುವಾಹನ, ಭಾಗ್ಯವಂತರು, ಅಣ್ಣತಂಗಿ ಮುಂತಾದ ಚಿತ್ರಗಳಲ್ಲಿನ ಅವರ ಮನೋಜ್ಞ ಅಭಿನಯ ಕಣ್ಣಮುಂದೆ ಬರುತ್ತದೆ. ಕನ್ನಡ ಚಿತ್ರರಂಗದ ಕಿತ್ತೂರು ರಾಣಿ ಚೆನ್ನಮ್ಮ ಅಂತಲೇ ಎಲ್ಲರ ಮನದಲ್ಲಿ ಮನೆ ಮಾಡಿದ್ದ ಸರೋಜಾದೇವಿ ಅವರು ತಮ್ಮ ನಿವಾಸದಲ್ಲಿ ಉಸಿರು ಚೆಲ್ಲಿದ್ದಾರೆ. ಹಿರಿಯ ನಟಿಯ ನಿಧನಕ್ಕೆ ಸಿನಿ ಗಣ್ಯರು, ರಾಜಕೀಯ ನಾಯಕರು ಕಂಬನಿ ಮಿಡಿದಿದ್ದಾರೆ. ಇದನ್ನೂ ಓದಿ: ಬಿ.ಸರೋಜಾದೇವಿಯವರ ಸಾವಿನಿಂದ ಕಲಾಜಗತ್ತು ಬಡವಾಗಿದೆ – ಸಿಎಂ ಸಂತಾಪ
ಕನ್ನಡ ಸೇರಿದಂತೆ 750ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಬಹುಭಾಷಾ ನಟ ಕೋಟ ಶ್ರೀನಿವಾಸ ರಾವ್ (83) (Kota Srinivas Rao) ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ನಟ ಕೋಟ ಶ್ರೀನಿವಾಸ ರಾವ್ ಹೈದರಾಬಾದ್‌ನಲ್ಲಿರುವ (Hyderabad) ತಮ್ಮ ಮನೆಯಲ್ಲಿ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಹಿರಿಯ ನಟನ ನಿಧನಕ್ಕೆ ಇಡೀ ಚಿತ್ರರಂಗವೇ ಸಂತಾಪ ಸೂಚಿಸಿದೆ.
ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕೋಟ ಶ್ರೀನಿವಾಸ ರಾವ್ ಮಗ ತೀರಿಕೊಂಡ ನಂತರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.
750ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ
ಖಳನಾಯಕ, ಪೋಷಕರ ಪಾತ್ರ ಹಾಗೂ ಹಾಸ್ಯನಟನಾಗಿ ತಮಿಳು, ತೆಲುಗು, ಕನ್ನಡ ಸಿನಿಮಾಗಳಲ್ಲಿ (Kannada Cinema) ಪ್ರೇಕ್ಷಕರ ಮನಗೆದ್ದಿದ್ದ ಶ್ರೀನಿವಾಸ ರಾವ್ 750ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ರಂಗಭೂಮಿಯಿಂದ ಬಂದ ನಟ ತಮ್ಮದೇ ಆದ ನಟನಾ ಶೈಲಿಯಿಂದ ಜನರ ಮನ ಗೆದ್ದಿದ್ರು. ವಿಶೇಷವಾಗಿ ನಟ ಮೋಹನ್ ಬಾಬು ಅವರೊಂದಿಗೇ ಅವರು ಸುಮಾರು 60 ಚಿತ್ರಗಳಲ್ಲಿ ನಟಿಸಿದ್ದಾರೆ.
1942ರ ಜುಲೈ 10 ರಂದು ಕೃಷ್ಣ ಜಿಲ್ಲೆಯ ಕಂಕಿಪಾಡುವಿನಲ್ಲಿ ಜನಿಸಿದ ಕೋಟ ಶ್ರೀನಿವಾಸ ರಾವ್, ಸಿನಿಮಾ ರಂಗ ಪ್ರವೇಶಿಸುವುದಕ್ಕೆ ಮುನ್ನ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇದರ ಜೊತೆ ಜೊತೆಗೆ 20 ವರ್ಷಗಳ ಕಾಲ ವೇದಿಕೆಯಲ್ಲಿ ನಟನೆಯಲ್ಲಿ ಅನುಭವ ಪಡೆದಿದ್ದರು. ಚಲನಚಿತ್ರಗಳಿಗೆ ಪದಾರ್ಪಣೆ ಮಾಡಿದ ಕೋಟ ಶ್ರೀನಿವಾಸ ರಾವ್, ತಮ್ಮ ವಿಶಿಷ್ಟ ಶೈಲಿಯ ಹಾಸ್ಯದ ಮೂಲಕ ಪ್ರೇಕ್ಷಕರನ್ನು ಮೆಚ್ಚಿಸಿದರು.
ಯಶ್ (Yash) ತಾಯಿ ಪುಷ್ಪ ಇದೀಗ ನಿರ್ಮಾಪಕಯಾಗಿರೋದು ಗೊತ್ತಿರೋ ವಿಚಾರ. ಅವರ ಚೊಚ್ಚಲ ನಿರ್ಮಾಣದ ಕೊತ್ತಲವಾಡಿ (Kothalavadi Movie) ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಪ್ರಚಾರ ಕಾರ್ಯ ಪ್ರಾರಂಭಿಸಿದ್ದಾರೆ.
ಪ್ರಚಾರದ ಆರಂಭಿಕ ಪ್ರಕ್ರಿಯೆಯಲ್ಲಿ ವಿಶೇಷತೆ ಮೆರೆದ ಸ್ಟಾರ್ ನಟನ ತಾಯಿ ಕರುನಾಡ ಆರಾಧ್ಯ ದೈವ, ಡಾ. ರಾಜ್‌ಕುಮಾರ್ (Rajkumar) ಸಮಾಧಿ ಹಾಗೂ ಕನ್ನಡಿಗರ ಕಣ್ಮಣಿ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸುವ ಮೂಲಕ ಪ್ರಚಾರಕ್ಕೆ ಸ್ವಯಂ ಚಾಲನೆ ನೀಡಿದ್ದಾರೆ. ಇದನ್ನೂ ಓದಿ: ಹುಟ್ಟು ಹಬ್ಬದ ದಿನ ಆಂಜನೇಯ ಅವತಾರವೆತ್ತ ಗಣೇಶ್
ಯಶ್ ತಾಯಿ ಪುಷ್ಪಮ್ಮ, ಡಾ.ರಾಜ್‌ಕುಮಾರ್ ಮೇಲಿನ ಅಭಿಮಾನವನ್ನ ಹೊರ ಹಾಕೋದ್ರಲ್ಲಿ ಯಾವತ್ತೂ ಹಿಂಜರಿದವರಲ್ಲ. ನೇರವಾಗಿ ಮಾತನಾಡುವ ಅವರು, ‘ಕನ್ನಡ ಚಿತ್ರರಂಗಕ್ಕೆ ಅಣ್ಣಾವ್ರು ದೇವರಿದ್ದಂತೆ. ಹೀಗಾಗಿ ಮೊದಲ ಚಿತ್ರದ ಪ್ರಚಾರ ಪ್ರಾರಂಭಿಸುವ ಮೊದಲು ದೇವರ ಪೂಜೆ ಮಾಡಿದ್ದೇನೆ’ ಎಂದು ಮಾಧ್ಯಮದ ಮುಂದೆ ಹೇಳಿದ್ದಾರೆ. ಜೊತೆಗೆ ಅಪ್ಪು (Puneeth Rajkumar) ನಮ್ಮನೆ ಮಗ ಇದ್ದಂತೆ, ದುರಾದೃಷ್ಟಕ್ಕೆ ಅವರು ಹೋಗ್ಬಿಟ್ರು.. ಅಪ್ಪುವನ್ನ ನೆನೆದು ಅಪ್ಪುಗೆ ಪೂಜೆ ಮಾಡಿಯೇ ಪ್ರಚಾರ ಕಾರ್ಯ ಶುರು ಮಾಡುತ್ತಿದ್ದೇವೆ. ಅಂಬರೀಶ್ ಸಮಾಧಿಗೂ ಪೂಜೆ ಮಾಡಿ ಬಂದಿದ್ದೇನೆ. ಅವರು ಯಶ್‌ರನ್ನ ತುಂಬಾ ಪ್ರೀತಿಸುತ್ತಿದ್ದವರು ಎಂದಿದ್ದಾರೆ ಯಶ್ ತಾಯಿ ಪುಷ್ಪ.
ಯಶ್ ತಾಯಿ ಕನ್ನಡ ಚಿತ್ರರಂಗಕ್ಕೆ ತಮ್ಮದೇ ಕೊಡುಗೆ ಕೊಡಬೇಕು ಎಂದು ಹೊಸಬರ ಜೊತೆ ಕೈಜೋಡಿಸಿ ಸಿನಿಮಾ ಅಭಿಮಾನ ಮೆರೆದಿದ್ದಾರೆ. ಹೊಸ ಉತ್ಸಾಹಿ ತಂಡಕ್ಕೆ ಚಿತ್ರ ಮಾಡೋದಾಗಿ ಹಿಂದೆಯೇ ಹೇಳಿಕೊಂಡಿದ್ರು. ಅದರಂತೆ ಕೊತ್ತಲವಾಡಿ ಚಿತ್ರ ಮಾಡಿದ್ದಾರೆ. ಮನೆಯಲ್ಲಿ ದೊಡ್ಡ ಸ್ಟಾರ್ ಇದ್ದರೂ ಯಾವುದೇ ಆತಂಕ ಮಾಡಿಕೊಳ್ಳದೆ ಸಾಮಾನ್ಯರಂತೆ ಡಾ.ರಾಜ್‌ಕುಮಾರ್ ಹಾಗೂ ಅಪ್ಪು ಸಮಾಧಿಗೆ ಪೂಜೆ ಮಾಡಿ ಪ್ರಚಾರ ಆರಂಭಿಸಿದ್ದಾರೆ. ಇದನ್ನೂ ಓದಿ: ಪತ್ನಿಯನ್ನು ಎತ್ತಿ ಮುದ್ದಾಡಿದ ಯಶ್