Tag: ಪುನೀತ್‌ ರಾಜ್‌ಕಯಮಾರ್‌

  • ಅಪ್ಪು ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಮನವಿ ಮಾಡಿದ ರಾಘಣ್ಣ

    ಅಪ್ಪು ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಮನವಿ ಮಾಡಿದ ರಾಘಣ್ಣ

    ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ 49ನೇ ವರ್ಷದ ಹುಟ್ಟುಹಬ್ಬವನ್ನು (Birthday)  ಅಭಿಮಾನಿಗಳು ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಅಭಿಮಾನಿಗಳ ಜೊತೆ ಅಪ್ಪು ಕುಟುಂಬ ಕೂಡ ಪುನೀತ್ ಸಮಾಧಿಯ ದರ್ಶನ ಪಡೆದಿದ್ದಾರೆ. ಈ ವೇಳೆ, ಪುನೀತ್ ಸ್ಥಾನವನ್ನು ಯಾರು ತುಂಬೋಕೆ ಆಗಲ್ಲ. ಆದರೆ ಯುವನನ್ನು ಬೆಳೆಸಿ, ಹರಸಿ ಎಂದು ರಾಘಣ್ಣ (Raghavendra Rajkumar) ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿದ್ದಾರೆ.

    ನಮ್ಮೆಲ್ಲರ ಪವರ್ ಅಪ್ಪು ಅನ್ನೋ ಮ್ಯಾರಥಾನ್. ಓಡೋದು ಅಂದರೆ ಪುನೀತ್‌ಗೆ ತುಂಬಾ ಇಷ್ಟ. ಉತ್ತಮ ಆರೋಗ್ಯಕ್ಕಾಗಿ ಓಡಬೇಕು ಎಂದು ರಾಘಣ್ಣ ಫ್ಯಾನ್ಸ್‌ಗೆ ಆರೋಗ್ಯದ ಬಗ್ಗೆ ಕಿವಿ ಮಾತು ಹೇಳಿದ್ದಾರೆ. ಇದನ್ನೂ ಓದಿ:ಸಹೋದರ ಅಪ್ಪುಗೆ ವಿಶೇಷವಾಗಿ ಶುಭಕೋರಿದ ಶಿವಣ್ಣ

    ಪುನೀತ್ ಬರ್ತ್‌ಡೇ ದಿನವನ್ನು ಅಪ್ಪು ಸ್ಫೂರ್ತಿ ದಿನವನ್ನಾಗಿ ಸರಿಯಾಗಿ ಆಚರಿಸಿ, ಇದು ಅಭಿಮಾನಿಗಳ ಹುಟ್ಟುಹಬ್ಬ ಎಂದು ರಾಘಣ್ಣ ಮಾತನಾಡಿದ್ದಾರೆ. ಇನ್ನೂ ಒಳ್ಳೆಯ ಕೆಲಸ ಮಾಡಲು ಅಪ್ಪುಗೆ ಆಯುಷ್ಯ ಸಾಲಲಿಲ್ಲ ಎಂದು ರಾಘಣ್ಣ ಭಾವುಕರಾಗಿದ್ದಾರೆ. ಪ್ರೀತಿಯಿಂದ ಜನರಿಗೆ ಏನು ಹಂಚ್ತಿರಾ ಹಂಚಿ. ಅಲ್ಲಿ ಅಪ್ಪು ಕಾಣ್ತಾರೆ ಎಂದು ರಾಘಣ್ಣ ಮಾತನಾಡಿದ್ದಾರೆ. ಸ್ಫೂರ್ತಿ ದಿನ ಬಂದರೆ ಮಕ್ಕಳು ಖುಷಿಯಾಗಬೇಕು. ಈ ದಿನವನ್ನ ಅಪ್ಪುಗಾಗಿ ಗಿಡ ನೆಡಿ, ಉಚಿತ ಶಿಕ್ಷಣ ನೀಡಿ ಸಮಾಜಮುಖಿ ಕೆಲಸ ಮಾಡಿ ಎಂದು ರಾಘಣ್ಣ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಪುನೀತ್ ಸ್ಥಾನವನ್ನು ಯಾರು ತುಂಬೋಕೆ ಆಗಲ್ಲ. ಆದರೆ ಅಪ್ಪುರಂತೆಯೇ ಮಗ ಯುವನನ್ನು ಬೆಳೆಯಿಸಿ ಹಾರೈಸಿ ಎಂದು ರಾಘಣ್ಣ ಮಾತನಾಡಿದ್ದಾರೆ.

    ಈ ವೇಳೆ, ಚಿಕ್ಕ ವಯಸ್ಸಿನಿಂದಲೇ ನನ್ನ ಚಿಕ್ಕಪ್ಪ ನನಗೆ ಸ್ಫೂರ್ತಿ ಎಂದು ಯುವ ಮಾತನಾಡಿದ್ದಾರೆ.
    ಚಿಕ್ಕಮ್ಮ ಅಶ್ವಿನಿ ಪುನೀತ್‌ರಾಜ್‌ಕುಮಾರ್ ಊರಲ್ಲಿ ಇಲ್ಲ ಎಂದು ಯುವ ಮಾತನಾಡಿದ್ದಾರೆ. 3 ದಿನದ ಹಿಂದೆ ಜಾಕಿ ಚಿತ್ರವನ್ನ ನೋಡ್ಕೊಂಡು ಬಂದೆ. ಬಹಳ ಖುಷಿಯಾಯ್ತು ಎಂದು ಯುವ ಮಾತನಾಡಿದ್ದಾರೆ.

  • ದೊಡ್ಮನೆ ಕುಡಿ ಯುವರಾಜ್‌ಕುಮಾರ್ ಲಾಂಚ್‌ಗೆ ಕೌಂಟ್‌ಡೌನ್: ಚಿತ್ರದ ಬಗ್ಗೆ ಇಲ್ಲಿದೆ ಮಾಹಿತಿ

    ದೊಡ್ಮನೆ ಕುಡಿ ಯುವರಾಜ್‌ಕುಮಾರ್ ಲಾಂಚ್‌ಗೆ ಕೌಂಟ್‌ಡೌನ್: ಚಿತ್ರದ ಬಗ್ಗೆ ಇಲ್ಲಿದೆ ಮಾಹಿತಿ

    ಣ್ಣಾವ್ರ ಕುಟುಂಬದ ಕುಡಿ ಯುವರಾಜ್‌ಕುಮಾರ್(Yuva Rajkumar) ಎಂಟ್ರಿಗೆ ಕೌಂಟ್‌ಡೌನ್ ಶುರುವಾಗಿದೆ. ಅದ್ಯಾವಾಗ ಜ್ಯೂ.ಪವರ್ ಸ್ಟಾರ್ ಎಂಟ್ರಿಯಾಗುತ್ತೋ ಅಂತಾ ಕಾತುರದಿಂದ ಫ್ಯಾನ್ಸ್ ಕಾಯ್ತಿದ್ದಾರೆ. ಇತ್ತೀಚೆಗಷ್ಟೇ ಯುವ ಚಿತ್ರದ ಬಗ್ಗೆ ನಿರ್ದೇಶಕ ಸಂತೋಷ್ ಆನಂದ್‌ರಾಮ್(Santhosh Anandram) ಅತೀ ಶೀಘ್ರದಲ್ಲಿ ಬರುವುದಾಗಿ ಅಪ್‌ಡೇಟ್ ನೀಡಿದ್ದರು. ಈ ಬೆನ್ನಲ್ಲೇ ಮತ್ತಷ್ಟು ಸಿನಿಮಾ ಬಗ್ಗೆ ಮಾಹಿತಿ ಸಿಕ್ಕಿದೆ.

    ಯುವರಾಜ್ ಅಪ್ಪುನಂತೆ ಪವರ್‌ಸ್ಟಾರ್‌ನಂತೆ ಮಿಂಚುತ್ತಾರೆ ಎಂಬ ಗಟ್ಟಿ ನಂಬಿಕೆಯಲ್ಲಿ ಅಪ್ಪು ಫ್ಯಾನ್ಸ್ ಇದ್ದಾರೆ. ಆ ನಂಬಿಕೆಗೆ ಎಲ್ಲೂ ಲೋಪವಾಗಬಾರದು ಎಂದು ಯುವರಾಜ್‌ಕುಮಾರ್ ಕೂಡ ತೆರೆಮರೆಯಲ್ಲಿ ಚಿತ್ರಕ್ಕಾಗಿ ಭರ್ಜರಿ ತಯಾರಿ ಮಾಡ್ತಿದ್ದಾರೆ.

    Yuvaraj Kumar

    ಯುವರಾಜ್‌ಕುಮಾರ್ ಅವರ ಚೊಚ್ಚಲ ಸಿನಿಮಾ ಸಂತೋಷ್ ಆನಂದ್‌ರಾಮ್ ಅವರ ಜೊತೆಯೇ ಬರಬೇಕು ಎಂಬುದು ಅಭಿಮಾನಿಗಳ ಆಸೆಯಾಗಿತ್ತು. ಅದರಂತೆ ಹೊಂಬಾಳೆ ಸಂಸ್ಥೆಯಡಿ ಯುವ ಮತ್ತು ಸಂತೋಷ್ ಕಾಂಬಿನೇಷನ್‌ನಲ್ಲಿ ಸಿನಿಮಾ ಮೂಡಿ ಬರಲಿದೆ. ಲೇಟ್ ಆದರೂ ಯುವ ಗ್ರ್ಯಾಂಡ್‌ ಎಂಟ್ರಿ ಕೊಡಲಿದ್ದಾರೆ.‌ ಇದನ್ನೂ ಓದಿ:ಪತಿ ರಘು ಮುಖರ್ಜಿ ಮಾತಿಗೆ ಕಣ್ಣೀರಿಟ್ಟ ಅನುಪ್ರಭಾಕರ್

    ಪುನೀತ್ ಅವರ ಭರವಸೆಯ ಪ್ರತಿರೂಪ ಯುವರಾಜ್‌, ಈಗ ಅವರ ಸಿನಿಮಾಗಾಗಿ ಕೌಂಟ್‌ಡೌನ್ ಶುರುವಾಗಿದೆ. ಯುವನ ಚಿತ್ರ ಅನೌನ್ಸ್ ಆಗಿ ತಡವಾಗುತ್ತಿರುವ ಕಾರಣ ಏನು ಎಂಬುದಕ್ಕೆ ಇದೀಗ ಉತ್ತರ ಸಿಕ್ಕಿದೆ. ಡಿಸೆಂಬರ್‌ನಲ್ಲಿ ಚಿತ್ರದ ಮುಹೂರ್ತ ಫಿಕ್ಸ್ ಆಗಿದೆ. ದೊಡ್ಮನೆಗೆ ಸರಿಹೊಂದುವ ಟೈಟಲ್ ಸಮೇತ ಚಿತ್ರದ ಬಗ್ಗೆ ಅನೌನ್ಸ್‌ ಮಾಡಲಿದ್ದಾರೆ. ಜನವರಿಯಲ್ಲೇ ಚಿತ್ರೀಕರಣ ಆರಂಭವಾಗುತ್ತದೆ. ಮುಂದಿನ ವರ್ಷ 2023ರಲ್ಲಿ ಯುವನ ಚೊಚ್ಚಲ ಸಿನಿಮಾ ತೆರೆಗೆ ಅಬ್ಬರಿಸಲಿದೆ. ಪವರ್‌ಫುಲ್ ಕಥೆ, ಖಡಕ್ ಟೈಟಲ್ ಜೊತೆ ಯುವ ಬರಲಿದ್ದಾರೆ. ಕೆಲವೇ ದಿನಗಳಲ್ಲಿ ರಾಜವಂಶದ ಕುಡಿ ಯುವ ಸಿನಿಮಾ ಸುದ್ದಿಯ ಕುರಿತು ಮಾಹಿತಿ ನೀಡಲಿದೆ. ಯುವನ ರಾಜ್ಯಭಾರಕ್ಕೆ ಕೌಂಟ್‌ಡೌನ್ ಶುರುವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಗಂಧದ ಗುಡಿಯಲ್ಲಿ ಚಂದದ ನೋಟ: ನೀವು ಇರಬೇಕಿತ್ತು ಎಂದು ಕಣ್ಣೀರಾಕಿದ ಫ್ಯಾನ್ಸ್

    ಗಂಧದ ಗುಡಿಯಲ್ಲಿ ಚಂದದ ನೋಟ: ನೀವು ಇರಬೇಕಿತ್ತು ಎಂದು ಕಣ್ಣೀರಾಕಿದ ಫ್ಯಾನ್ಸ್

    ಪುನೀತ್ ರಾಜ್‍ಕುಮಾರ್ (Puneeth Rajkumar) ಕನಸಿನ ಪ್ರಾಜೆಕ್ಟ್ ಗಂಧದ ಗುಡಿ(Gandagudi) ಟ್ರೇಲರ್ ಇಂದು ಬಿಡುಗಡೆ ಆಗಿದೆ. ಅಪ್ಪು ಈ ಡಾಕ್ಯುಮೆಂಟರಿ ಮಾದರಿಯ ಸಿನಿಮಾದ ಬಗ್ಗೆ ಅಷ್ಟೊಂದು ಕನಸು ಯಾಕೆ ಕಂಡಿದ್ದರು ಎನ್ನುವುದಕ್ಕೆ ಟ್ರೈಲರ್ ನಲ್ಲಿ ತೋರಿಸಿದ ಒಂದೊಂದು ಫ್ರೇಮೂ ಸಾಕ್ಷಿಯಾಗಿವೆ. ಟ್ರೈಲರ್ ನೋಡಿದ ತಕ್ಷಣ ಮೂಡುವ ಒಂದೇ ಭಾವ, ಪುನೀತ್ ರಾಜ್‍ಕುಮಾರ್ ನೀವು ಇರಬೇಕಿತ್ತು. ಈ ಗಂಧದ ಗುಡಿಯಲ್ಲಿ ಇನ್ನಷ್ಟು ಕಾಲ ಬಾಳಬೇಕಿತ್ತು.

    ಗಂಧದ ಗುಡಿಯಲ್ಲಿ ಏನಿಲ್ಲ, ಎಲ್ಲವೂ ಇದೆ. ಬೆಟ್ಟ, ಗುಡ್ಡ, ನದಿ, ಹಳ್ಳ, ಕೊಳ್ಳ, ಅರಣ್ಯ, ಕಾಡು ಪ್ರಾಣಿಗಳು, ಕಾಡಂಚಿನ ಜನರು, ದೇವರು, ದೈವ ಎಲ್ಲವನ್ನೂ ಒಂದೇ ಉಸಿರಿಗೆ ಹಿಡಿದಿಟ್ಟಿದ್ದಾರೆ ಪುನೀತ್ ರಾಜ್‍ಕುಮಾರ್. ರಾತ್ರಿ ಅವರು ಕಾಡಿನೊಳಗೆ ನುಗ್ಗಿದಾಗ ನಾವೇ ಭಯಪಡುವಷ್ಟು ಸುಂದರವಾಗಿ ಸೆರೆ ಹಿಡಿದಿದ್ದಾರೆ ಆ ರಾತ್ರಿಯನ್ನು. ಸಮುದ್ರದಾಳಕ್ಕೆ ಅಪ್ಪು ಜಿಗಿದಾಗ ಇಲ್ಲಿ ನಾವೇ ಒದ್ದೆಯಾಗುವಂತೆ ಸಿನಿಮಾಟೋಗ್ರಫಿ ಇದೆ. ಎಲ್ಲವೂ ಚಂದ, ಚಂದ. ಇದನ್ನೂ ಓದಿ:ಮಹಿಳಾ ಸ್ಪರ್ಧಿಗಳ ವಿಚಾರದಲ್ಲಿ ರಾಕೇಶ್ ಅಡಿಗಗೆ ಸೆಡ್ಡು ಹೊಡೆದ ರೂಪೇಶ್ ಶೆಟ್ಟಿ ಕಾಲೆಳೆದ ಸುದೀಪ್

    ʻಗಂಧದ ಗುಡಿʼ ಟ್ರೈಲರ್‌ನ(Gandagudi Trailer) ಮತ್ತೊಂದು ಸೊಗಸು ಅಂದರೆ, ಅಪ್ಪು ಹಾಗೂ ಅವರ ಅಪ್ಪಾಜಿ ಬಾಳಿ ಬದುಕಿದ ಮನೆಯನ್ನು ತೋರಿಸಿದ್ದಾರೆ. ಸ್ವತಃ ಆ ಮನೆಯ ಬಗ್ಗೆ ಪುನೀತ್ ರಾಜ್‍ಕುಮಾರ್ ಅವರೇ ವಿವರಿಸುತ್ತಾರೆ. ಮನೆಯನ್ನು ಕಣ್ತುಂಬಿಕೊಳ್ಳುವ ಹೊತ್ತಲ್ಲಿ ಡಾ.ರಾಜ್ ಕುಮಾರ್ ಪ್ರವೇಶ. ಥ್ರಿಲ್ ಅನಿಸುವಷ್ಟು ಮಜಾ ಕೊಡುತ್ತದೆ ಟ್ರೇಲರ್.

    ಇಂದು ಬೆಂಗಳೂರಿನ ನರ್ತಕಿ(Narthaki Theatre) ಚಿತ್ರಮಂದಿರದಲ್ಲಿ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳಿಗಾಗಿ ಟ್ರೇಲರ್ ಪ್ರದರ್ಶನ ಏರ್ಪಡಿಸಲಾಗಿತ್ತು. ʻಗಂಧದ ಗುಡಿʼಯ ಅಂದವನ್ನು ಕಣ್ತುಂಬಿಕೊಂಡ ಕಂಗಳಲ್ಲಿ ಅಪ್ಪು ಇಲ್ಲ ಅನ್ನುವ ಕಂಬನಿ ಸುರಿಯುತ್ತಿತ್ತು. ರಾಘವೇಂದ್ರ ರಾಜ್‍ಕುಮಾರ್ (Raghavendra Rajkumar) ಸೇರಿದಂತೆ ಅಲ್ಲಿದ್ದವರ ಅಷ್ಟೂ ಕಣ್ಣುಗಳು ಒದ್ದೆ ಆಗಿದ್ದವು. ಟ್ರೇಲರೇ ಇಷ್ಟೊಂದು ಭಾವುಕತೆ ಸೃಷ್ಟಿ ಮಾಡಿದೆ. ಇದೇ ತಿಂಗಳು ಕೊನೆಯಲ್ಲಿ ಪೂರ್ತಿ ಚಿತ್ರವೇ ಬಿಡುಗಡೆ ಆಗುತ್ತಿದೆ. ಹೃದಯ ಒಡೆಯುವ ಕಾಲವದು.

    Live Tv
    [brid partner=56869869 player=32851 video=960834 autoplay=true]