Tag: ಪುನೀತ್‌ ಪ್ರತಿಮೆ

  • ಹೊಸಪೇಟೆಯಲ್ಲಿ 7.4 ಅಡಿ ಎತ್ತರದ ಪುನೀತ್ ಪ್ರತಿಮೆ ಅನಾವರಣ

    ಹೊಸಪೇಟೆಯಲ್ಲಿ 7.4 ಅಡಿ ಎತ್ತರದ ಪುನೀತ್ ಪ್ರತಿಮೆ ಅನಾವರಣ

    ವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿ ಕೆಲವು ತಿಂಗಳು ಕಳೆದರು. ಅವರ ಕಲಾಸೇವೆಯ ಮೂಲಕ ಅಭಿಮಾನಿಗಳ ಮನದಲ್ಲಿ ಗಟ್ಟಿ ನೆಲೆ ಕಂಡಿದ್ದಾರೆ. ಇಂದಿಗೂ ಒಂದಲ್ಲಾ ಒಂದು ರೀತಿಯಲ್ಲಿ ಪುನೀತ್ ಆರಾಧನೆ ಮಾಡುತ್ತಲೇ ಇರುತ್ತಾರೆ. ಈಗ ವಿಜಯನಗರದ ಹೊಸಪೇಟೆಯಲ್ಲಿ ಪುನೀತ್ ರಾಜ್‌ಕುಮಾರ್ ಅವರ ಪ್ರತಿಮೆ ಅನಾವರಣವಾಗಿದೆ.

    ವಿಜಯನಗರದ ಹೊಸಪೇಟೆಯಲ್ಲಿ ಅಪ್ಪು ಪುತ್ಥಳಿ ಅನಾವರಣಕ್ಕೆ ವೇದಿಕೆ ಸಜ್ಜಾಗಿತ್ತು. ಸಮಾರಂಭದಲ್ಲಿ ರಾಘವೇಂದ್ರ ರಾಜ್‌ಕುಮಾರ್ ಕುಟುಂಬದ ಜತೆ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಮತ್ತು ಅಜಯ್ ರಾವ್ ಸಾಥ್ ನೀಡಿದ್ದಾರೆ. ಇದನ್ನೂ ಓದಿ:ಮೇಘಾ ಶೆಟ್ಟಿ-ಕವೀಶ್ ಶೆಟ್ಟಿ ನಟನೆಯ ಪ್ಯಾನ್ ಇಂಡಿಯಾ ಚಿತ್ರಕ್ಕೆ ರಿಷಬ್ ಶೆಟ್ಟಿ ಸಾಥ್

    ಹೊಸಪೇಟೆಯ ಬಗ್ಗೆ ವಿಶೇಷ ಪ್ರೀತಿ ಅಪಾರ ಅಭಿಮಾನಿ ಬಳಗ ಹೊಂದಿರುವ ಪುನೀತ ರಾಜಕುಮಾರ್ ಕಂಚಿನ ಪ್ರತಿಮೆ ಸ್ಥಾಪಿಸಿರುವುದು ವಿಶೇಷ. ಹೊಸಪೇಟೆಯ ಪುನೀತ ರಾಜಕುಮಾರ್ ಸರ್ಕಲ್‌ನಲ್ಲಿ ರಾಘವೇಂದ್ರ ರಾಜಕುಮಾರ್ ಅವರ ಸಮ್ಮುಖದಲ್ಲಿ 7.4 ಅಡಿ ಎತ್ತರದ ಕಂಚಿನ ಪುತ್ಥಳಿ ಅನಾವರಣವಾಯ್ತು. ಈ ವೇಳೆ ಅಪ್ಪು ಪ್ರತಿಮೆ ನೋಡಿ ರಾಘವೆಂದ್ರ ರಾಜ್‌ಕುಮಾರ್ ಕುಟುಂಬಸ್ಥರು ಮತ್ತು ಅಭಿಮಾನಿಗಳು ಭಾವುಕರಾದರು. ಅಪ್ಪು ಪ್ರತಿಮೆ ಅನಾವರಣಕ್ಕೆ ಸಾವಿರಾರು ಜನರು ಸಾಕ್ಷಿಯಾಗಿದ್ದಾರೆ.