Tag: ಪುನೀತ್ ಕೆರೆಹಳ್ಳಿ

  • ರಾಜಸ್ಥಾನದಲ್ಲಿ ತಲೆ ಮರೆಸಿಕೊಂಡಿದ್ದ ಪುನೀತ್ ಕೆರೆಹಳ್ಳಿ ಸೇರಿ ಐವರ ಬಂಧನ

    ರಾಜಸ್ಥಾನದಲ್ಲಿ ತಲೆ ಮರೆಸಿಕೊಂಡಿದ್ದ ಪುನೀತ್ ಕೆರೆಹಳ್ಳಿ ಸೇರಿ ಐವರ ಬಂಧನ

    ರಾಮನಗರ: ಗೋ ಸಾಗಾಟದ ವೇಳೆ ವ್ಯಕ್ತಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿ ಪುನೀತ್ ಕೆರೆಹಳ್ಳಿ (Puneeth Kerehalli) ಸೇರಿ ಐವರನ್ನು ಸಾತನೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.

    ಮಾರ್ಚ್ 31 ರಂದು ಕನಕಪುರ (Kanakapura) ತಾಲೂಕಿನ ಸಾತನೂರು ಬಳಿ ಅಕ್ರಮ ಗೋ ಸಾಗಣಿಕೆ ನಡೆಯುತ್ತಿತ್ತು. ಈ ವೇಳೆ ಪುನೀತ್ ಕೆರೆಹಳ್ಳಿ ಸೇರಿದಂತೆ ಐವರು ಕ್ಯಾಂಟರ್ ತಡೆದು ಜಾನುವಾರು ರಕ್ಷಣೆ ಮಾಡಿದ್ದರು. ಈ ವೇಳೆ ಕ್ಯಾಂಟರ್‌ನಲ್ಲಿದ್ದ ವ್ಯಕ್ತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದರು. ಮೃತನನ್ನು ಮಂಡ್ಯ ಮೂಲದ ಇದ್ರಿಷ್ ಪಾಷಾ ಎಂದು ಗುರುತಿಸಲಾಗಿತ್ತು. ಈ ಸಂಬಂಧ ಸಾತನೂರು ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿತ್ತು.

    ಪುನೀತ್ ಕೆರೆಹಳ್ಳಿ ವಿರುದ್ಧ ಐಪಿಸಿ ಸೆಕ್ಷನ್ 341, 504, 506, 324, 302, 34 ರ ಅಡಿ ಕೇಸ್ ದಾಖಲಾಗಿತ್ತು. ಆದರೆ ಪುನೀತ್ ಕೆರೆಹಳ್ಳಿ ಹಾಗೂ ಆತನ ತಂಡ ಕಳೆದ ಐದು ದಿನದಿಂದ ತಲೆ ಮರೆಸಿಕೊಂಡಿದ್ದರು. ಆದರೆ ಪ್ರಕರಣದ ತನಿಖೆ ಆರಂಭಿಸಿದ್ದ ಸಾತನೂರು ಪೊಲೀಸರು ಪುನೀತ್ ಕೆರೆಹಳ್ಳಿ ಮತ್ತು ಆತನ ತಂಡವನ್ನು ರಾಜಸ್ಥಾನದಲ್ಲಿ (Rajastan) ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ಮುಸ್ಲಿಮರನ್ನ ಟಾರ್ಗೆಟ್‌ ಮಾಡಿ ಹಿಂಸಾಚಾರ – ಇಸ್ಲಾಮಿಕ್‌ ರಾಷ್ಟ್ರಗಳ ಆರೋಪಕ್ಕೆ ಭಾರತ ಕಿಡಿ

  • ಟಿಪ್ಪು ಫ್ಲೆಕ್ಸ್ ಹರಿದ ಪ್ರಕರಣ – ಪುನೀತ್ ಕೆರೆಹಳ್ಳಿ ಸೇರಿ ಮೂವರ ಬಂಧನ

    ಟಿಪ್ಪು ಫ್ಲೆಕ್ಸ್ ಹರಿದ ಪ್ರಕರಣ – ಪುನೀತ್ ಕೆರೆಹಳ್ಳಿ ಸೇರಿ ಮೂವರ ಬಂಧನ

    ಬೆಂಗಳೂರು: ಶಿವಮೊಗ್ಗದಲ್ಲಿ ಸಾವರ್ಕರ್ ಭಾವಚಿತ್ರ ಹಾಕಿದ್ದಕ್ಕೆ ಅವಮಾನಿಸಿದ್ದಾರೆಂದು ಹಡ್ಸನ್ ಸರ್ಕಲ್ ಮತ್ತು ಕೆಆರ್ ವೃತ್ತದಲ್ಲಿ ಕಾಂಗ್ರೆಸ್ ಫ್ಲೆಕ್ಸ್‌ನಲ್ಲಿದ್ದ ಟಿಪ್ಪು ಫೋಟೋ ಹರಿದು ವಿಕೃತಿ ಮೆರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುನೀತ್ ಕೆರೆಹಳ್ಳಿ ಅವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

    ಶಿವಮೊಗ್ಗದ ಮಾಲ್‍ನಲ್ಲಿ ಸಾವರ್ಕರ್ ಭಾವಚಿತ್ರ ವಿವಾದ ಮತ್ತೊಂದು ತಿರುವು ಪಡೆದುಕೊಂಡಿತ್ತು. ಸಾವರ್ಕರ್ ಭಾವಚಿತ್ರ ಹರಿದಿದ್ದಕ್ಕೆ ಪ್ರತಿಯಾಗಿ ಟಿಪ್ಪು ಭಾವಚಿತ್ರ ವಿರೂಪಗೊಳಿಸಲಾಗಿತ್ತು. ಬೆಂಗಳೂರಲ್ಲಿ ಕಾಂಗ್ರೆಸ್ ಸ್ವಾತಂತ್ರ್ಯ ನಡಿಗೆ ಬ್ಯಾನರ್‌ನಲ್ಲಿ ಹಾಕಲಾಗಿದ್ದ ಟಿಪ್ಪು ಫೋಟೋ ಹರಿದು ರಾಷ್ಟ್ರ ರಕ್ಷಣ ಪಡೆಯ ಕಾರ್ಯಕರ್ತರು ವಿಕೃತಿ ಮೆರೆದಿದ್ದರು. ಇದನ್ನೂ ಓದಿ: ಕಾಂಗ್ರೆಸ್ ಕಾಲ್ನಡಿಗೆಯ ಟಿಪ್ಪು ಫ್ಲೆಕ್ಸ್ ಧ್ವಂಸ- ಪುನೀತ್ ಕೆರೆಹಳ್ಳಿ, ಬೆಂಬಲಿಗರಿಂದ ಕೃತ್ಯ

    ಶನಿವಾರ ರಾತ್ರಿ 10:30ರ ಸುಮಾರಿಗೆ ಈ ಘಟನೆ ನಡೆದಿತ್ತು. ರಾಜಧಾನಿ ಬೆಂಗಳೂರಿನಾದ್ಯಂತ ಪ್ರಮುಖ ರಸ್ತೆಗಳಲ್ಲಿ ರಾಷ್ಟ್ರ ಧ್ವಜಗಳು, ಲೈಟಿಂಗ್ಸ್‌ಗಳು ರಾರಾಜಿಸುತ್ತಿದೆ. ಆಗಸ್ಟ್ 15 ರಂದು ಕೈ ಪಡೆ ಸ್ವಾತಂತ್ರ್ಯ ನಡಿಗೆ ಹಮ್ಮಿಕೊಂಡಿದ್ದು ಸ್ವಾತಂತ್ರ್ಯ ಹೋರಾಟಗಾರರು ಸೇರಿದಂತೆ ಕಾಂಗ್ರೆಸ್‍ನ ಪ್ರಮುಖ ನಾಯಕರ ಫೋಟೋ ಇರುವ ಫ್ಲೆಕ್ಸ್‌ಗಳನ್ನು ರಸ್ತೆಯುದ್ದಕ್ಕೂ ಹಾಕಿದ್ದಾರೆ. ಇದು ಪುನೀತ್ ಕೆರೆಹಳ್ಳಿ ಕಣ್ಣು ಕೆಂಪಾಗಿಸಿತ್ತು. ಸಾವರ್ಕರ್ ಭಾವಚಿತ್ರ ಹರಿದಿದ್ದಕ್ಕೆ ಪ್ರತಿಯಾಗಿ ಪುನೀತ್ ಕೆರೆಹಳ್ಳಿ ಮತ್ತು ತಂಡ ಟಿಪ್ಪು ಫೋಟೋ ಹರಿದ ವೀಡಿಯೋವೊಂದು ಹರಿದಾಡುತ್ತಿತ್ತು. ಹಾಗಾಗಿ ಬೆಂಗಳೂರು ಪೊಲೀಸರು ಮನೆಯಲ್ಲಿ ಪೂಜೆ ಮಾಡುತ್ತಿದ್ದ ವೇಳೆ ಪುನೀತ್ ಕೆರೆಹಳ್ಳಿ ಮತ್ತು ಆತನ ಸ್ನೇಹಿತರಾದ ಅನಂತ್‍ರಾವ್ ಹಾಗೂ ಕುಮಾರ್ ಅವರನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಸಾವರ್ಕರ್‌ನಂತೆ ಜೈಲಿನಿಂದ ಬಿಡುಗಡೆಗೊಳ್ಳಲು ಬ್ರಿಟಿಷರ ಕಾಲು ಹಿಡಿದು ಕ್ಷಮೆ ಕೋರಿದ ಹೇಡಿ ಅಲ್ಲ ನೆಹರೂ: ಸಿದ್ದರಾಮಯ್ಯ

    Live Tv
    [brid partner=56869869 player=32851 video=960834 autoplay=true]

  • ದೀಪಾವಳಿ, ಕ್ರಿಸ್ಮಸ್ ಆಚರಣೆ ಇಲ್ಲ – ವಿಧಾನಸೌಧದಲ್ಲಿ ಇಫ್ತಾರ್ ಕೂಟ ಯಾಕೆ?

    ದೀಪಾವಳಿ, ಕ್ರಿಸ್ಮಸ್ ಆಚರಣೆ ಇಲ್ಲ – ವಿಧಾನಸೌಧದಲ್ಲಿ ಇಫ್ತಾರ್ ಕೂಟ ಯಾಕೆ?

    ಬೆಂಗಳೂರು: ವಿಕಾಸಸೌಧ ಹಾಗೂ ವಿಧಾನಸೌಧದಲ್ಲಿ ಅನೇಕ ವರ್ಷಗಳಿಂದ ಇಫ್ತಾರ್ ಕೂಟವನ್ನು ಆಯೋಜನೆ ಮಾಡಿಕೊಂಡು ಬರಲಾಗುತ್ತದೆ. ಇದು ಭಾರತ ಸಂವಿಧಾನಕ್ಕೆ ವಿರೋಧ. ನಮ್ಮ ಭಾರತ ದೇಶದ ಸಂವಿಧಾನ ಧರ್ಮಾತೀತ. ಒಂದು ಧರ್ಮದವರನ್ನು ಕರೆದು ಅವರಿಗೆ ಊಟ ಹಾಕುವುದು ಎಷ್ಟು ಸರಿ ಎಂದು ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಪ್ರಶ್ನಿಸಿದ್ದಾರೆ.

    ಇದುವರೆಗೂ ಯಾರಾದರೂ ಒಬ್ಬ ಎಂಎಲ್‌ಎ ಒಬ್ಬ ದಲಿತನಿಗೆ ಊಟ ಹಾಕಿದ್ದೀರಾ? ಯಾರಾದರೂ ಕಾರ್ಮಿಕರನ್ನು ಕರೆದಿದ್ದೀರಾ? ರಾಜ್ಯದ ಜನರ ತೆರಿಗೆ ದುಡ್ಡನ್ನು ಇಫ್ತಿಯಾರ್ ಕೂಟದಲ್ಲಿ ಊಟಕ್ಕೆ ಹಾಕಿ ಹಾಳು ಮಾಡುವುದು ಎಷ್ಟು ಸರಿ ಎಂದು ಕೇಳಿದ್ದಾರೆ.

    ಈ ರೀತಿಯ ಕೂಟವನ್ನು ಇದನ್ನು ಸಂವಿಧಾನ ಒಪ್ಪುವುದಿಲ್ಲ. ಯಾವ ಆಧಾರದ ಮೇಲೆ ಇಫ್ತಿಯಾರ್ ಕೂಟ ನಡೆಸಿಕೊಂಡು ಬಂದಿದ್ದೀರಿ? ಕಳೆದ ವರ್ಷ ಕೂಟವನ್ನು ಮಾಡಿ ಅಲ್ಲಿ ಏನೆಲ್ಲಾ ಬಿದ್ದಿತ್ತು? ಯಾವೆಲ್ಲಾ ಬಾಟಲಿಗಳು ಬಿದ್ದಿದ್ದವು? ಕೊನೆಗೆ ಆ ಪ್ರಕರಣ ಯಾವ ರೀತಿ ಮುಚ್ಚಿ ಹಾಕಿದ್ದೀರಿ ಎಂಬುದು ನೆನಪಿದೆ ಎಂದರು. ಇದನ್ನೂ ಓದಿ: ನ್ಯೂಯಾರ್ಕ್ ರೈಲು ನಿಲ್ದಾಣದಲ್ಲಿ ಗುಂಡಿನ ದಾಳಿ – 13 ಮಂದಿಗೆ ಗಾಯ

    ಗೆದ್ದ ಮಾತ್ರಕ್ಕೆ ವಿಧಾನಸೌಧ ಹಾಗೂ ವಿಕಾಸಸೌಧ ನಿಮ್ಮದಲ್ಲ. ಅದು ಈ ರಾಜ್ಯದ ಪ್ರಜೆಗಳ ಹಕ್ಕು. ಈ ಸಲ ಅಲ್ಲಿ ಇಫ್ತಿಯಾರ್ ಕೂಟ ಮಾಡಬಾರದು. ನಿಮಗೆ ಮಾಡಲೇಬೇಕೆಂದರೆ ಯಾವುದಾದರೂ ಹೋಟೆಲ್‌ನಲ್ಲಿ ಮಾಡಿಕೊಳ್ಳಿ. ಇಫ್ತಿಯಾರ್ ಕೂಟ ಮಾಡುವುದಕ್ಕೆ ಅಲ್ಲಿ ವಿರೋಧವಿದೆ. ಯಾಕೆ ಏಕಾದಶಿ, ಶಿವರಾತ್ರಿ, ಸಂಕಷ್ಟಿ, ಯುಗಾದಿ, ವರ್ಷದ ತೊಡಕು, ಕ್ರಿಸ್‌ಮಸ್‌ಗಳಂದು ಕೂಟವನ್ನು ಮಾಡಲ್ಲ ಎಂದು ಪ್ರಶ್ನಿಸಿದರು.

    ಒಂದು ಧರ್ಮಕ್ಕೆ ಬೆಣ್ಣೆ, ಇನ್ನೊಂದು ಧರ್ಮಕ್ಕೆ ಸುಣ್ಣ ಹಚ್ಚುವ ಕೆಲಸ ಮಾಡಬೇಡಿ. ಇಫ್ತಿಯಾರ್ ಕೂಟವನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಇದು ಆರಂಭ ಎಂದುಕೊಳ್ಳಿ. ಇದು ತಮಾಷೆಯ ಹೇಳಿಕೆಯಲ್ಲ. ಈಗಾಗಲೇ ಅನುಮತಿ ತೆಗೆದುಕೊಂಡಿದ್ದೇವೆ. ಹೋರಾಟವನ್ನು ಉಗ್ರರೂಪದಲ್ಲಿ ಮಾಡುತ್ತೇವೆ. ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಹೋರಾಟವನ್ನು ಹಮ್ಮಿಕೊಳ್ಳತ್ತೇವೆ ಎಂದರು. ಇದನ್ನೂ ಓದಿ: ಬೇಲೂರು ದೇವಾಲಯದಲ್ಲಿ ಗಳಿಗೆ ತೇರಿನ ದಿನ ಕುರಾನ್ ಪಠಣೆ ನಡೆಯುತ್ತೆ

    ಹಿಂದೂ ಮಠ-ಮಾನ್ಯರಲ್ಲೂ ಪ್ರಶ್ನೆ ಕೇಳುತ್ತಿದ್ದೇವೆ. ಇಫ್ತಿಯಾರ್ ಕೂಟ ಮಾಡುವುದಾದರೆ ಅಲ್ಲಿಗೆ ಬರಬೇಕಾದ ಅವಶ್ಯಕತೆ ಇಲ್ಲ. ಹಿಂದೂಗಳು ಸಂಸ್ಕೃತಿಯ ರಕ್ಷಣೆಗಾಗಿ, ಧರ್ಮದ ಉಳಿವಿಗಾಗಿ ಮಠ ಮಾನ್ಯಗಳಿಗೆ ಬರುತ್ತೇವೆ. ಮುಸ್ಲಿಮರಿಗೆ ನಮ್ಮ ಧರ್ಮದ ಸಂಸ್ಕೃತಿ ಹೇಳಿಕೊಡಿ. 22ನೇ ತಾರೀಖಿಗೂ ಒಳಗಾಗಿ ಇಫ್ತಿಯಾರ್ ಕೂಟ ರದ್ದುಮಾಡಿದ್ದೇವೆ ಎಂದು ಆದೇಶ ಹೊರಡಿಸದೇ ಹೋದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.