Tag: ಪುನೀತ್

  • ಹೊಸ ಹುಲಿ ಬರ್ತಿದೆ: ಯುವರಾಜ್ ಕುಮಾರ್ ಬೆನ್ನಿಗೆ ನಿಂತ ಶ್ರೀಮುರಳಿ

    ಹೊಸ ಹುಲಿ ಬರ್ತಿದೆ: ಯುವರಾಜ್ ಕುಮಾರ್ ಬೆನ್ನಿಗೆ ನಿಂತ ಶ್ರೀಮುರಳಿ

    ಶ್ರೀಮುರಳಿ (Srimuruli) ಗುಡುಗಿದ್ದಾರೆ. ಇಷ್ಟು ದಿನ ಸುಮ್ನನಿದ್ದ ಹುಲಿ ಏಕಾಎಕಿ ಗರ್ಜಿಸಿದೆ. `ದೊಡ್ಮನೆ ಯುಗ ಮುಗಿಯಿತು ಅನ್ನಬೇಡಿ. ಈಗ ಹೊಸ ಹುಲಿ ಬರುತ್ತಿದೆ. ಹುಷಾರಾಗಿರಿ…’ ಹೀಗಂತ ಧಗಧಗಿಸಿದ್ದಾರೆ ಶ್ರೀಮುರಳಿ. ಅದಕ್ಕೆ ಕಾರಣ ಏನು? ಯಾರನ್ನು ಉದ್ದೇಶಿಸಿ ಈ ಮಾತನ್ನು ಹೇಳಿದರು? ದೊಡ್ಮನೆ ಯುವ ನೆನಪಾಗಿದ್ದೇಕೆ? ಇನ್ನು ಮುಂದೆ ಯರ‍್ಯಾರಿಗೆ ಕಾದಿದೆ ಮಾರಿ ಹಬ್ಬ? ಅದರ ಇಂಚಿಂಚು ಮಾಹಿತಿ ನಿಮ್ಮ ಮುಂದೆ.

    Yuvaraj Kumar

    ದೊಡ್ಡಮನೆ… ಹೆಡ್ಡಾಫೀಸು… ಅಣ್ಣಾವ್ರ ಮನೆ… ಸದಾಶಿವನಗರದ ಬಂಗಲೆ… ವಾಟ್ ಎ ವರ್ಡ್ಸ್? ಸದಾಶಿವನಗರ ಅಂದರೆ ಸಾಕು ಕರುನಾಡಿನ ಯಾವುದೇ ಮೂಲೆಯಲ್ಲಿ ನಿಂತ ವ್ಯಕ್ತಿಯೂ ಹೇಳುತ್ತಿದ್ದ ಒಂದೇ ಒಂದು ಸಾಲು ಏನು ಗೊತ್ತೆ? `ಓಹ್…ಅಣ್ಣಾವ್ರು ಇರುತ್ತಾರಲ್ಲ ಆ ಏರಿಯಾನಾ?’ ಅದು ನೋಡಿ ರಾಜ್‌ಕುಮಾರ್‌ಗಿದ್ದ ತಾಕತ್ತು. ಅದು ನೋಡಿ ಅಣ್ಣಾವ್ರ ಹೆಸರಿಗಿದ್ದ ದೌಲತ್ತು. ಅದೊಂದೇ ಸಾಕು ರಾಜ್ಕುಮಾರ್ ಆಗಲೂ ಈಗಲೂ ಆಳಿ, ಬೆಳಗಿಮೆರೆಯುತ್ತಿರುವುದು. ಶಿವಣ್ಣ ಬಂದರು. ಜಾಗವನ್ನು ಭರ್ತಿ ಮಾಡಿಕೊಂಡರು. ಅಪ್ಪು ಬಂದ ಮೇಲಂತೂ ಅಣ್ಣಾವ್ರನ್ನೇ ನಾವು ನೋಡುತ್ತಿದ್ದೇವೆ ಎಂದು ಬಿಟ್ಟಿತು ಕರುನಾಡು. ಅಲ್ಲಿಗೆ ನಯಾ ರಾಜಕುಮಾರನ ಕಣ್ಣಲ್ಲಿ ಅಣ್ಣಾವ್ರ ನೆರಳು ದೀಪ ಹಚ್ಚಿತು.

    ಅಪ್ಪು (Puneeth) ನೋಡನೋಡುತ್ತಲೇ ಪುನೀತ್ ರಾಜ್‌ಕುಮಾರ್, ಅಣ್ಣಾವ್ರ ಜಾಗವನ್ನು ತುಂಬಲು ಸಜ್ಜಾದರು. ಸೇಮ್ ಟು ಸೇಮ್ ಅಣ್ಣಾವ್ರ ರೀತಿ ವಿಭಿನ್ನ ಪಾತ್ರಗಳನ್ನು ಮಾಡಿದರು. ಮಾಸ್, ಕ್ಲಾಸ್, ಫ್ಯಾಮಿಲಿ ಮ್ಯಾನ್, ಆಕ್ಷನ್ ಹೀರೋ, ಲವ್ವರ್ ಬಾಯ್…ಎಲ್ಲವೂ ಅಪ್ಪು ಸಿನಿಮಾಗಳಲ್ಲಿ ಹೊಳೆದವು. ಕರುನಾಡು ಆ ದೀಪ ಆರದಂತೆ ನೋಡಿಕೊಳ್ಳಲು ನಿರ್ಧರಿಸಿತು. ಒಂದೊಂದೇ ಸಿನಿಮಾಕ್ಕೆ ಜೀವ ತುಂಬುತ್ತಾ ತುಂಬುತ್ತಾ ಅಪ್ಪು ಕಡೇ ದಿನಗಳಲ್ಲಿ ಮೆರವಣಿಗೆ ಹೊರಟರು. ಅದೇ ರಾಜಕುಮಾರ ಸಿನಿಮಾ. ಅಕ್ಷರಶಃ ಆ ಚಿತ್ರದಲ್ಲಿ ಅಪ್ಪು ಥೇಟ್ ಅಣ್ಣಾವ್ರನ್ನೇ ಮೈ ಮೇಲೆ ಆವಾಹಿಸಿಕೊಂಡಿದ್ದರು. ನಯಾ ರಾಜಕುಮಾರ ಸಿಂಹಾಸನದಲ್ಲಿ ವಿರಾಜಮಾನರಾದರು.

    ಇಲ್ಲ ದೇವರು ಅದ್ಯಾಕೊ ಕ್ರೂರಿಯಾಗಿಬಿಟ್ಟ. ಕೆಲವೇ ಕೆಲವು ನಿಮಿಷಗಳಲ್ಲಿ ಅಪ್ಪು ಈ ಲೋಕಕ್ಕೆ ವಿದಾಯ ಹೇಳಬೇಕಾಯಿತು. ಅದು ನಂಬುವ ಮಾತಾ? ಅದು ಅರಗಿಸಿಕೊಳ್ಳುವ ವಿಷಯವಾ? ಎದೆ ಎದೆ ಬಡಿದುಕೊಂಡಿತು ಕರುನಾಡು. ವಾರಗಟ್ಟಲೆ ಒಲೆ ಊರಿಯಲಿಲ್ಲ. ನಿದ್ದೆ ಹತ್ತಲಿಲ್ಲ.  ಜೀವ ಕಳೆದುಕೊಂಡವರು ಎಷ್ಟೋ ಮಂದಿ ಸಾಕು ಈ ಜನ್ಮ ಎಂದಿದ್ದು ಸುಳ್ಳಲ್ಲ. ಅದು ಅಪ್ಪು ನೀಡಿದ ಮರ್ಮಾಘಾತ. ಅಲ್ಲಿಂದ ಕೆಲವು ಕಿಡಿಗೇಡಿಗಳು ಬೊಗಳಲು ಆರಂಭಿಸಿದವು. `ಅಣ್ಣಾವ್ರ ಸಾಮ್ರಾಜ್ಯ ಅಷ್ಟೇ…ಇನ್ನು…ಮುಗೀತು ಬಿಡಿ…’ ಎಲುಬಿಲ್ಲದ ನಾಲಿಗೆ ಅಲ್ಲಾಡಿದವು. ಅದಕ್ಕೆ ಉತ್ತರ ಎನ್ನುವಂತೆ ಶ್ರೀಮುರಳಿ ಗುಡುಗಿದ್ದಾರೆ. `ಯುವ  (Yuvaraj Kumar) ಹುಲಿ ಬರ್ತಿದೆ, ನೋಡ್ತಾ ಇರಿ…’

    ಶ್ರೀಮುರುಳಿ ಹೇಳಿದ್ದು ಇಷ್ಟೇ. ಆದರೆ ಅದರಲ್ಲಿ ಅದೆಷ್ಟೋ ವರ್ಷಗಳ ಕಿಚ್ಚು ಕೆರಳಿತ್ತು. ಮನಸೊಳಗೆ ಹುದುಗಿಸಿಟ್ಟಿದ್ದ ನೋವು, ಅಸಮಾಧಾನ, ಸಂಕಟ ಎಲ್ಲವನ್ನೂ ಅದೊಂದು ಮಾತಿನಲ್ಲಿ ಹೇಳಿ ನಿರಮ್ಮಳವಾದರು ಶ್ರೀಮುರುಳಿ. ಅಪ್ಪು ಹೋದ ಮೇಲೆ ಹಿಂದಿಂದೆ ಕುಹಕ ಮಾಡಿದವರು ಅದ್ಯಾವುದೋ ಶಾಪ ಎಂದು ಹೀಗಳೆದವರು. ಅಪ್ಪು ಹೋದ ಮೇಲೆ ನಮ್ಮದೇ ಸಾಮ್ರಾಜ್ಯ ಎಂದು ವಿಕೃತಿ ತೋರಿಸಿದವರಿಗೆ ಮುರುಳಿ ಮರಳಿ ಮರಳಿ ಹೊರಳಿ ಏಳದಂತೆ ಉತ್ತರ ನೀಡಿದ್ದಾರೆ. ಪರಿಣಾಮ ಕಣ್ಣ ಮುಂದಿದೆ. ಯುವರಾಜ್‌ಕುಮಾರ್ ಯುವನಾಗಿ ಅಬ್ಬರಿಸಲು ಸಜ್ಜಾಗಿದ್ದಾರೆ. ಯಾರ‍್ಯಾರು ನಶೆ ಏರಿಸಿಕೊಂಡು ಬೊಗಳಿದ್ದರೊ ಅವರಿಗೆಲ್ಲ ಸೆಡ್ಡು ಹೊಡೆಯಲು ಸಿದ್ಧರಾಗಿದ್ದಾರೆ.

     

    ಇದು ನೋಡಿ ಶ್ರೀಮುರುಳಿ ಮಾತಿನ ಮರ್ಮ. ಬಣ್ಣದ ಲೋಕ ಅಂದರೆ ಅಸೂಯೆ, ಕೋಪ, ಅಸಹನೆ ಇದ್ದದ್ದೇ. ಆದರೆ ಅದ್ಯಾವಾಗ ದ್ವೇಷಕ್ಕೆ ತಿರುಗುತ್ತದೋ ಆಗಿನಿಂದಲೇ ಆರಂಭ ರಕ್ತಪಾತದ ಸಂಚು, ಸ್ಕೆಚ್ಚು. ಅಂಥ ದೇಹಗಳಿಗೆ ನೀರಿಳಿಸಲು ಯುವ ಮೈ ಕೊಡವಿ ಎದ್ದು ನಿಂತಿದ್ದಾರೆ. ಅಪ್ಪು ಬಿಟ್ಟು ಹೋದ ಸಿಂಹಾಸನ ಖಾಲಿಯಾಗಿದೆ. ಅದರ ಮೇಲೆ ನೀವೇ ಕೂಡಬೇಕು ಎನ್ನುತ್ತಿದ್ದಾರೆ ಜನ. ಬರೀ ಅಪ್ಪು ರಾಜ್ ಭಕ್ತಗಣ ಮಾತ್ರ ಅಲ್ಲ. ಸಕಲ ಅಸಲಿ ಕನ್ನಡಿಗರು ಇದನ್ನೆ ಜಪ ಮಾಡುತ್ತಿದ್ದಾರೆ. ಆ ಯುದ್ಧ ಆರಂಭವಾಗಲಿದೆ. ಇನ್ನೇನಿದ್ದರೂ ದೊಡ್ಮನೆ ಮೆರವಣಿಗೆಯಷ್ಟೇ ಬಾಕಿ.

  • ಅಂದು ಅಪ್ಪು, ಇಂದು ಶಿವಣ್ಣ ಜೊತೆ ಡಾನ್ಸ್: ಖುಷಿ ಹಂಚಿಕೊಂಡ ಪ್ರಭುದೇವ

    ಅಂದು ಅಪ್ಪು, ಇಂದು ಶಿವಣ್ಣ ಜೊತೆ ಡಾನ್ಸ್: ಖುಷಿ ಹಂಚಿಕೊಂಡ ಪ್ರಭುದೇವ

    ಖ್ಯಾತ ನಟ, ನಿರ್ದೇಶಕ, ಡಾನ್ಸರ್ ಪ್ರಭುದೇವ (Prabhudeva) ಇದೇ ಮೊದಲ ಬಾರಿಗೆ ಶಿವರಾಜ್ ಕುಮಾರ್ (Shivaraj Kumar) ಜೊತೆ ತೆರೆಹಂಚಿಕೊಂಡಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಕರಟಕ ದಮನಕ ಸಿನಿಮಾದಲ್ಲಿ ಅವರು ಶಿವಣ್ಣ ಜೊತೆ ನಟಿಸಿದ್ದಾರೆ. ಈ ಕುರಿತಂತೆ ಅವರು ಮಾತನಾಡಿದ್ದಾರೆ. ಅಂದು ಅಪ್ಪು (Puneeth) ಜೊತೆ ಡಾನ್ಸ್ ಮಾಡಿದ್ದೆ. ಇಂದು ಶಿವಣ್ಣ ಜೊತೆ ಡಾನ್ಸ್ ಮಾಡಿದ್ದು ಖುಷಿ ತಂದಿದೆ ಎಂದಿದ್ದಾರೆ. ಶಿವಣ್ಣ ಎನರ್ಜಿಗೆ ಫಿದಾ ಆಗಿದ್ದಾರೆ.

    ಈಗಾಗಲೇ ಚಿತ್ರತಂಡ ಪ್ರಚಾರವನ್ನು ಆರಂಭಿಸಿದ್ದು ಕರಟಕ ದಮನಕ (Karataka Damanaka) ಸಿನಿಮಾ ಶಿವರಾತ್ರಿ ದಿನದಂದು ರಿಲೀಸ್ (Release)ಆಗಲಿದೆ. ಮಾರ್ಚ್ 8 ರಂದು ತಮ್ಮ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಶಿವರಾತ್ರಿಗೆ ಶಿವಣ್ಣನ ಚಿತ್ರದ ಅಬ್ಬರ ಕೇಳಿ ಬರಲಿದೆ.

    ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ತಯಾರಾಗಿರುವ, ಯೋಗರಾಜ್ ಭಟ್ (Yogaraj Bhat) ನಿರ್ದೇಶನದ ಈ ಸಿನಿಮಾಗೆ ವಿಚಿತ್ರವಾಗಿರುವಂಥ ಶೀರ್ಷಿಕೆ ಇಡಲಾಗಿದೆ. ಈವರೆಗೂ ಟೈಟಲ್ ವಿಷಯದಲ್ಲಿ ಉಪೇಂದ್ರ ಮಾತ್ರ ತಲೆಕೆಡಿಸುತ್ತಿದ್ದರು. ಇದೀಗ ಆ ಸಾಲಿಗೆ ಯೋಗರಾಜ್ ಭಟ್ಟರು ಕೂಡ ಸೇರ್ಪಡೆಗೊಂಡಿದ್ದಾರೆ. ಟೈಟಲ್ ನೋಡಿದವರು, ಏನ್ ಗುರು ಇದರ ಅರ್ಥ ಎಂದು ಕೇಳುವಂತಾಗಿದೆ.

     

    ಟೈಟಲ್ ಇಟ್ಟಾಗಿನಿಂದ ಈವರೆಗೂ ‘ಕರಟಕ ದಮನಕ’ ಎಂದರೇನು ಎನ್ನುವ ಕುರಿತು ಯೋಗರಾಜ್ ಭಟ್ ಎಲ್ಲಿಯೂ ಬಾಯಿ ಬಿಟ್ಟಿರಲಿಲ್ಲ. ಈ ಕುರಿತು ಅವರು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದರು. ಜೊತೆಗೆ ಚಿತ್ರದ ಫಸ್ಟ್ ಲುಕ್ ಕೂಡ ರಿಲೀಸ್ ಮಾಡಿದ್ದರು. ‘ಒಂದಾನೊಂದು ಕಾಲದಲ್ಲಿ ಎರಡು ಕುತಂತ್ರಿ ನರಿಗಳಿದ್ದವು. ಒಂದರ ಹೆಸರು ಕರಟಕ ಇನ್ನೊಂದರ ಹೆಸರು ದಮನಕ. ಈ ಎರಡೂ ನರಿಗಳು ಕಾಡು ಮತ್ತು ನಾಡಿನ ತಲೆ ಕೆಡಿಸಿ ಇತಿಹಾಸವಾದವು. ಈ ಕುತಂತ್ರಿ ನರಿಗಳು ಇಂದು ಇಲ್ಲಿ ಮಾನವ ರೂಪ ತಾಳಿವೆ. ಎಚ್ಚರಿಕೆ’ ಎಂದು ಪೋಸ್ಟ್ ಮಾಡಿದ್ದರು.

  • ನಂದಿನಿ ಜಾಹೀರಾತಿಗೆ ಯಾವುದೇ ಸಂಭಾವನೆ ಪಡೆಯಲ್ಲ: ನಟ ಶಿವರಾಜ್ ಕುಮಾರ್

    ನಂದಿನಿ ಜಾಹೀರಾತಿಗೆ ಯಾವುದೇ ಸಂಭಾವನೆ ಪಡೆಯಲ್ಲ: ನಟ ಶಿವರಾಜ್ ಕುಮಾರ್

    ರೈತರ ಜೀವನಾಡಿ ಆಗಿರುವ ಕೆ.ಎಮ್.ಎಫ್ ನಂದಿನಿ ಉತ್ಪನ್ನಗಳಿಗೆ (Nandini Product) ನೂತನ ರಾಯಭಾರಿಯಾಗಿ ನಟ ಶಿವರಾಜ್ ಕುಮಾರ್ (Shivaraj Kumar) ಆಯ್ಕೆಯಾಗಿದ್ದಾರೆ. ಈ ಕುರಿತು ಮಾತನಾಡಿದ ಶಿವರಾಜ್ ಕುಮಾರ್, ‘ನಂದಿನಿ ಜಾಹೀರಾತಿಗಾಗಿ ನಾನು ಯಾವುದೇ ಸಂಭಾವನೆ ಪಡೆಯುವುದಿಲ್ಲ. ಇದು ನಮ್ಮ ಕರ್ತವ್ಯ. ದೊಡ್ಡ ತ್ಯಾಗ ಏನಲ್ಲ’ ಎಂದಿದ್ದಾರೆ.

    ಮಾಧ್ಯಮಗಳಿಗೆ ಮೊದಲ ಪ್ರತಿಕ್ರಿಯೆ ನೀಡಿರುವ ಶಿವರಾಜ್ ಕುಮಾರ್, ‘ಸರ್ಕಾರಕ್ಕೆ ಧನ್ಯವಾದಗಳನ್ನು ಹೇಳಬೇಕು. ಖುಷಿಯಾಗುತ್ತೆ. ಸರ್ಕಾರ ನಮ್ಮ‌ಕುಟುಂಬಕ್ಕೆ ಗೌರವ ನೀಡಿ ನೀಡಿದ್ದಕ್ಕೆ. ಇದು ರೈತರಿಗೆ ಸಂಬಂಧಿಸಿದ ವಿಚಾರ. ನಂದಿನಿ ಎಂಬ ಭರವಸೆಗೆ ಭಾರತಾದ್ಯಂತ ಬೇಡಿಕೆಯಿದೆ. ಈ ಬೇಡಿಕೆಗೆ ಜೆನ್ಯೂನ್ ಆಗಿ ನಮ್ಮ ಸಹಕಾರ ಇರುತ್ತೆ. ಬರೀ ಬಂದು ಫೋಟೋ ಕೊಡೋದು ಚಿತ್ರಿಕರಣ ಮಾಡೋದಲ್ಲ. ಸಮಯ ಇದ್ದಾಗ ಪ್ರಚಾರವೂ ಮಾಡುವೆ.’ ಎಂದಿದ್ದಾರೆ.

    ಅಲ್ಲದೇ,  ನಂದಿನಿ ಉತ್ಪನ್ನವನ್ನೇ ನಮ್ಮ ಮನೆಯಲ್ಲಿ ಬಳಕೆ ಮಾಡ್ತೇವೆ. ನಮ್ಮ ಮನೆಯ ಹತ್ತಿರದಲ್ಲೇ ನಂದಿನಿ ಪಾರ್ಲರ್ ಇದೆ. KMF ಹಾಲಿನ ಪ್ರಚಾರಕ್ಕೆ ಆ್ಯಡ್ ಶೂಟಿಂಗ್ ಸದ್ಯ ಪ್ಲ್ಯಾನ್ ನಡೆಯುತ್ತಿದೆ ಎಂದು ಶಿವರಾಜ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ:ರಿಸೆಪ್ಷನ್ ಸಂಭ್ರಮದಲ್ಲಿ ‘ಕಾಮಿಡಿ ಕಿಲಾಡಿಗಳು’ ಸಂಜು ಬಸಯ್ಯ- ಪಲ್ಲವಿ ಜೋಡಿ

    ಕೆಎಂಎಫ್ ಗೂ ಡಾ.ರಾಜ್ ಕುಟುಂಬಕ್ಕೂ ಹತ್ತಿರದ ನಂಟಿದೆ. 1996ರಲ್ಲಿ ಡಾ.ರಾಜ್ ಕುಮಾರ್ ಅವರು ನಂದಿನಿ ಉತ್ಪನ್ನಗಳಿಗೆ ರಾಯಭಾರಿಯಾಗಿ (Ambassador) ಒಪ್ಪಿಕೊಂಡರು. ಉಚಿತವಾಗಿಯೇ ಅದನ್ನು ಮಾಡಿಕೊಂಡು ಬಂದರು. ಡಾ.ರಾಜ್ ಕುಮಾರ್ (Raj Kumar) ಕಾಣಿಸಿಕೊಂಡ ಏಕೈಕ ಜಾಹೀರಾತು ಅದಾಗಿತ್ತು. ಡಾ.ರಾಜ್ ಕುಮಾರ್ ಮರಣಾನಂತರ ಆ ಜವಾಬ್ದಾರಿಯನ್ನು ಪುನೀತ್ ರಾಜ್ ಕುಮಾರ್ (Puneeth) ಮುಂದುವರೆಸಿಕೊಂಡು ಹೋಗುತ್ತಿದ್ದರು.

     

    ಪುನೀತ್ ನಿಧನಾನಂತರ ಮತ್ತೆ ಡಾ.ರಾಜ್ ಕುಟುಂಬಕ್ಕೆ ಆ ಸೇವೆ ಹುಡುಕಿಕೊಂಡು ಹೋಗಿದೆ. ಶಿವರಾಜ್ ಕುಮಾರ್ ಕೂಡ ನಂದಿನಿ ಉತ್ಪನ್ನಗಳ ರಾಯಭಾರಿಯಾಗಿ ತಂದೆ ಮತ್ತು ಸಹೋದರನ ಕೆಲಸವನ್ನು ಮುಂದುರೆಸಿಕೊಂಡು ಹೋಗಲಿದ್ದಾರೆ. 1996ರಿಂದ ಡಾ.ರಾಜ್ ಕುಮಾರ್ ರಾಯಭಾರಿಯಾಗಿದ್ದರೆ, 2009ರಲ್ಲಿ ಪುನೀತ್ ನೇಮಕವಾಗಿದ್ದರು. 2023ರಿಂದ ಆ ಜವಾಬ್ದಾರಿಯನ್ನು ಶಿವಣ್ಣ ವಹಿಸಿಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಂದಿನಿ ಉತ್ಪನ್ನಗಳಿಗೆ ಶಿವಣ್ಣ ರಾಯಭಾರಿ: ತಂದೆ-ತಮ್ಮನ ಹಾದಿಯಲ್ಲಿ ಸೆಂಚುರಿಸ್ಟಾರ್

    ನಂದಿನಿ ಉತ್ಪನ್ನಗಳಿಗೆ ಶಿವಣ್ಣ ರಾಯಭಾರಿ: ತಂದೆ-ತಮ್ಮನ ಹಾದಿಯಲ್ಲಿ ಸೆಂಚುರಿಸ್ಟಾರ್

    ರ್ನಾಟಕದ ಹೆಮ್ಮೆಯ ಪ್ರತೀಕ ನಂದಿನಿ ಹಾಲು ಉತ್ಪನ್ನಗಳಿಗೆ (Nandini Product) ರಾಯಭಾರಿಯಾಗಿ ಸ್ಯಾಂಡಲ್ ವುಡ್ ನ ಹೆಸರಾಂತ ನಟ ಶಿವರಾಜ್ ಕುಮಾರ್ ಆಯ್ಕೆಯಾಗಿದ್ದಾರೆ. ಇಂದು ಶಿವರಾಜ್ ಕುಮಾರ್ ಜೊತೆ ಕೆಎಂಎಫ್ ಅಧಿಕಾರಿಗಳು ಮಾತುಕತೆ ನಡೆಸಿ, ಶಿವರಾಜ್ ಕುಮಾರ್ (Shivaraj Kumar) ಅವರನ್ನು ಒಪ್ಪಿಸಿದ್ದಾರೆ. ಈ ಸಂದರ್ಭದಲ್ಲಿ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸೇರಿದಂತೆ ಹಲವರು ಹಾಜರಿದ್ದರು.


    ಕೆಎಂಎಫ್ (KMF) ಗೂ ಡಾ.ರಾಜ್ ಕುಟುಂಬಕ್ಕೂ ಹತ್ತಿರದ ನಂಟಿದೆ. 1996ರಲ್ಲಿ ಡಾ.ರಾಜ್ ಕುಮಾರ್ ಅವರು ನಂದಿನಿ ಉತ್ಪನ್ನಗಳಿಗೆ ರಾಯಭಾರಿಯಾಗಿ (Ambassador) ಒಪ್ಪಿಕೊಂಡರು. ಉಚಿತವಾಗಿಯೇ ಅದನ್ನು ಮಾಡಿಕೊಂಡು ಬಂದರು. ಡಾ.ರಾಜ್ ಕುಮಾರ್ ಕಾಣಿಸಿಕೊಂಡ ಏಕೈಕ ಜಾಹೀರಾತು ಅದಾಗಿತ್ತು. ಡಾ.ರಾಜ್ ಕುಮಾರ್ ಮರಣಾನಂತರ ಆ ಜವಾಬ್ದಾರಿಯನ್ನು ಪುನೀತ್ ರಾಜ್ ಕುಮಾರ್ (Puneeth) ಮುಂದುವರೆಸಿಕೊಂಡು ಹೋಗುತ್ತಿದ್ದರು.


    ಪುನೀತ್ ನಿಧನಾನಂತರ ಮತ್ತೆ ಡಾ.ರಾಜ್ (Raj Kumar) ಕುಟುಂಬಕ್ಕೆ ಆ ಸೇವೆ ಹುಡುಕಿಕೊಂಡು ಹೋಗಿದೆ. ಶಿವರಾಜ್ ಕುಮಾರ್ ಕೂಡ ನಂದಿನಿ ಉತ್ಪನ್ನಗಳ ರಾಯಭಾರಿಯಾಗಿ ತಂದೆ ಮತ್ತು ಸಹೋದರನ ಕೆಲಸವನ್ನು ಮುಂದುರೆಸಿಕೊಂಡು ಹೋಗಲಿದ್ದಾರೆ. 1996ರಿಂದ ಡಾ.ರಾಜ್ ಕುಮಾರ್ ರಾಯಭಾರಿಯಾಗಿದ್ದರೆ, 2009ರಲ್ಲಿ ಪುನೀತ್ ನೇಮಕವಾಗಿದ್ದರು. 2023ರಿಂದ ಆ ಜವಾಬ್ದಾರಿಯನ್ನು ಶಿವಣ್ಣ ವಹಿಸಿಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾನು ರಾಜಕಾರಣಕ್ಕೆ ಹೋಗಲಾರೆ : ನಟ ಶಿವರಾಜ್ ಕುಮಾರ್

    ನಾನು ರಾಜಕಾರಣಕ್ಕೆ ಹೋಗಲಾರೆ : ನಟ ಶಿವರಾಜ್ ಕುಮಾರ್

    ತ್ನಿ ಗೀತಾ ಜೊತೆ ಚುನಾವಣಾ (Election) ಪ್ರಚಾರದಲ್ಲಿ ತೊಡಗಿರುವ ನಟ ಶಿವರಾಜ್ ಕುಮಾರ್ (Shivaraj Kumar), ಯಾವುದೇ ಕಾರಣಕ್ಕೂ ಸಕ್ರೀಯ ರಾಜಕಾರಣಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದಾರೆ. ಪತ್ನಿ ಗೀತಾ ಅವರದ್ದು ರಾಜಕಾರಣಿ ಕುಟುಂಬ. ಹಾಗಾಗಿ ಅವರೊಂದಿಗೆ ಪ್ರಚಾರದಲ್ಲಿ ಪಾಲ್ಗೊಂಡಿರುವೆ. ಆಪ್ತರಿಗಾಗಿ ಪ್ರಚಾರ ಮಾಡುವೆ. ಅದರ ಹೊರತಾಗಿ ಅಧಿಕೃತವಾಗಿ ಯಾವುದೇ ಪಕ್ಷವನ್ನು ಸೇರಲಾರೆ ಮತ್ತು ಚುನಾವಣೆಗೂ ನಿಲ್ಲಲಾರೆ ಎಂದಿದ್ದಾರೆ ಶಿವರಾಜ್ ಕುಮಾರ್.

    ಡಾ.ರಾಜ್ ಕುಟುಂಬಕ್ಕೂ ರಾಜಕಾರಣಿಗಳಿಗೂ ನಂಟಿದ್ದರೂ ನೇರವಾಗಿ ಯಾವತ್ತೂ ಅವರು ರಾಜಕಾರಣಿಗಳೊಂದಿಗೆ ಮತ್ತು ಪಕ್ಷದೊಂದಿಗೆ  ಗುರುತಿಸಿಕೊಂಡವರಲ್ಲ. ಸ್ವತಃ ರಾಜ್ ಕುಮಾರ್ ಅವರಿಗೆ ಚುನಾವಣೆಗೆ ನಿಲ್ಲುವಂತೆ ಒತ್ತಡವಿದ್ದರೂ, ಅವರು ಒಪ್ಪಿಕೊಳ್ಳಲಿಲ್ಲ. ಯಾವುದೇ ಪಕ್ಷದ (Party) ಪರವಾಗಿಯೂ ಪ್ರಚಾರ ಮಾಡಿದವರಲ್ಲ. ಅದೇ ಮಾರ್ಗದಲ್ಲೇ ರಾಘವೇಂದ್ರ ರಾಜ್ ಕುಮಾರ್ (Raghavendra Rajkumar) ಮತ್ತು ಪುನೀತ್ (Puneeth) ರಾಜ್ ಕುಮಾರ್ ನಡೆದುಕೊಂಡು ಬಂದವರು. ಆದರೆ, ಗೀತಾ ಅವರನ್ನು ಮದುವೆಯಾದ ನಂತರ ಶಿವಣ್ಣ ಚುನಾವಣೆ ಪ್ರಚಾರಕ್ಕೆ ಇಳಿದಿದ್ದಾರೆ.

    ದೊಡ್ಮನೆ ಸೊಸೆಯಾಗಿ ಬಂಗಾರಪ್ಪನವರ ಪುತ್ರಿ ಗೀತಾ (Geeta) ಬಂದ ನಂತರ, ಸಹೋದರನ ಪರವಾಗಿ ಅವರು ಪ್ರಚಾರಕ್ಕೆ ಹೋದರು. ಸ್ವತಃ ಗೀತಾ ಅವರೇ ಚುನಾವಣೆಗೂ ನಿಂತರು. ಹೀಗಾಗಿ ಅನಿವಾರ್ಯ ಕಾರಣದಿಂದಾಗಿ ಶಿವರಾಜ್ ಕುಮಾರ್ ‍ಪ್ರಚಾರದಲ್ಲಿ ತೊಡಗಲೇಬೇಕಾಯಿತು. ಆದರೆ, ಡಾ.ರಾಜ್ ಕುಟುಂಬ ಮಾತ್ರ ಚುನಾವಣೆಯ ಉಸಾಬರಿಗೆ ಹೋಗಲಿಲ್ಲ. ಸ್ವತಃ ಗೀತಾ ಅವರೇ ಚುನಾವಣೆಗೆ ಸ್ಪರ್ಧಿಸಿದಾಗ ಪುನೀತ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಕೂಡ ಪ್ರಚಾರ ಮಾಡಲಿಲ್ಲ. ಇದನ್ನೂ ಓದಿ:ಹೊಸ ಹೇರ್‌ ಸ್ಟೈಲ್‌ ಮಾಡಿಸಿಕೊಂಡ ನಟಿ ಮೇಘನಾ ರಾಜ್

    ಮೊನ್ನೆಯಷ್ಟೇ ರಾಘವೇಂದ್ರ ರಾಜ್ ಕುಮಾರ್ ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿ, ‘ಶಿವರಾಜ್ ಕುಮಾರ್ ನನ್ನ ಅಣ್ಣ, ಗೀತಾ ನನ್ನ ಅತ್ತಿಗೆ. ಉಳಿದಂತೆ ನನಗೇನೂ ಗೊತ್ತಿಲ್ಲ’ ಎಂದು ಹೇಳುವ ಮೂಲಕ ರಾಜಕಾರಣದಿಂದ ದೂರ ಇದ್ದೇವೆ ಎಂದು ಸ್ಪಷ್ಟ ಸಂದೇಶ ರವಾನಿಸಿದ್ದರು. ಹಾಗಾಗಿ ಶಿವರಾಜ್ ಕುಮಾರ್ ಕೂಡ ಸಕ್ರೀಯ ರಾಜಕಾರಣದಲ್ಲಿ ಇರಲಾರೆ ಎನ್ನುವ ಸಂದೇಶ ನೀಡಿದ್ದಾರೆ.

  • ಇಂದು ಡಾ.ರಾಜ್ ಕುಮಾರ್ ಪುಣ್ಯತಿಥಿ : ಸ್ಮಾರಕಕ್ಕೆ ಹರಿದು ಬಂತು ಜನಸಾಗರ

    ಇಂದು ಡಾ.ರಾಜ್ ಕುಮಾರ್ ಪುಣ್ಯತಿಥಿ : ಸ್ಮಾರಕಕ್ಕೆ ಹರಿದು ಬಂತು ಜನಸಾಗರ

    ಇಂದು ವರನಟ ಡಾ.ರಾಜ್ ಕುಮಾರ್ (Rajkumar) ಅವರ 17ನೇ ಪುಣ್ಯತಿಥಿ. ಬೆಂಗಳೂರಿನ ಕಂಠೀರವ ಸ್ಟುಡಿಯೋ  ಬಳಿಯ ಸಮಾಧಿಗೆ ಡಾ.ರಾಜ್ ಕುಟುಂಬ ಆಗಮಿಸಿ ಪೂಜೆ ಸಲ್ಲಿಸಿತು. ರಾಘವೇಂದ್ರ ರಾಜ್ ಕುಮಾರ್, ಯುವರಾಜ್ ಕುಮಾರ್, ಶಿವರಾಜ್ ಕುಮಾರ್, ಅಶ್ವಿನಿ ಪುನೀತ್ ರಾಜ್ ಕುಮಾರ್ ಸೇರಿದಂತೆ ಡಾ.ರಾಜ್ ಕುಟುಂಬ ಅನೇಕ ಸದಸ್ಯರು ಸ್ಮಾರಕಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು.

    ರಾಜ್ ಕುಮಾರ್ ಅವರ ಪುಣ್ಯತಿಥಿಗಾಗಿ ಪುನೀತ್ ರಾಜ್ ಕುಮಾರ್ (Puneeth) ಮತ್ತು ಪಾರ್ವತಮ್ಮ ರಾಜ್ ಕುಮಾರ್ (Parvathamma Rajkumar) ಸಮಾಧಿಗೂ ಹೂಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. ಸ್ಮಾರಕದ ಮುಂದೆ ಅಭಿಮಾನಿಗಳು ರಕ್ತದಾನ, ಅನ್ನದಾನ ಶಿಬಿರಗಳನ್ನು ಆಯೋಜನೆ ಮಾಡಿದ್ದರು. ತಮ್ಮ ನೆಚ್ಚಿನ ನಟನಿಗೆ ಈ ಮೂಲಕ ನಮನ ಸಲ್ಲಿಸಿದರು. ಇದನ್ನೂ ಓದಿ: ಮದುವೆ ಆಗುವ ಬಗ್ಗೆ ಸೀಕ್ರೆಟ್‌ ಬಿಚ್ಚಿಟ್ಟ ಶರ್ಮಿಳಾ ಮಾಂಡ್ರೆ

    ರಾಜ್ಯದ ಮೂಲೆ ಮೂಲೆಗಳಿಂದ ಬಂದಿದ್ದ ಅಭಿಮಾನಿಗಳು ಡಾ.ರಾಜ್ ಕುಮರ್ ಅವರ ಸಮಾಧಿಗೆ ಪೂಜೆ ಸಲ್ಲಿಸಿ, ಭಾವುಕರಾದರು. ಪಕ್ಕದಲ್ಲಿಯೇ ಇರುವ ಪುನೀತ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಸಮಾಧಿಗೂ ಪೂಜೆ ಸಲ್ಲಿಸಿದರು. ಸಾವಿರಾರು ಅಭಿಮಾನಿಗಳು ಬೆಳಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಂತು ಸ್ಮಾರಕದ ದರ್ಶನ ಪಡೆದರು.

  • ಅಪ್ಪು ಅಭಿಮಾನಿಗಳಿಂದ ‘13’ ಟೀಸರ್ ರಿಲೀಸ್: ರಾಘವೇಂದ್ರ ರಾಜಕುಮಾರ್ ಮೆಚ್ಚುಗೆ

    ಅಪ್ಪು ಅಭಿಮಾನಿಗಳಿಂದ ‘13’ ಟೀಸರ್ ರಿಲೀಸ್: ರಾಘವೇಂದ್ರ ರಾಜಕುಮಾರ್ ಮೆಚ್ಚುಗೆ

    ಕೆ.ನರೇಂದ್ರಬಾಬು ಅವರ ನಿರ್ದೇಶನದ ’13’ ಚಿತ್ರದ ಟೀಸರ್ ರಾಜ್ಯದ 32 ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಯಿತು. ಅಲ್ಲದೆ ದುಬೈ, ಸಿಂಗಪೂರ್ ಸೇರಿದಂತೆ ಅನೇಕ ದೇಶಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಿದೆ. ನಿನ್ನೆ ನಡೆದ ಸಮಾರಂಭದಲ್ಲಿ ವಿಶೇಷವಾಗಿ ಎಲ್ಲಾ ಜಿಲ್ಲೆಗಳಿಂದ ಆಗಮಿಸಿದ್ದ ಅಪ್ಪು ಅಭಿಮಾನಿಗಳೇ ಸೇರಿ 13 ಚಿತ್ರದ ಟೀಸರ್ ರಿಲೀಸ್ ಮಾಡಿದರು.   ರಾಘವೇಂದ್ರ ರಾಜ್‌ಕುಮಾರ್‌ (Raghavendra Rajkumar), ಶ್ರುತಿ (Shruti), ಪ್ರಮೋದ್ ಶೆಟ್ಟಿ (Pramod Shetty) ಪ್ರಮುಖ  ಪಾತ್ರಗಳಲ್ಲಿ ಅಭಿನಯಿಸಿರುವ  ‘13’  ಚಿತ್ರವನ್ನು ಯುವಿ ಪ್ರೊಡಕ್ಷನ್ ಅಡಿಯಲ್ಲಿ ಕೆ. ಸಂಪತ್‌ ಕುಮಾರ್‌, ಹೆಚ್.ಎಸ್. ಮಂಜುನಾಥ್‌, ಮಂಜುನಾಥಗೌಡ ಹಾಗೂ ಸಿ.ಕೇಶವಮೂರ್ತಿ ಸೇರಿ ನಿರ್ಮಿಸುತ್ತಿದ್ದಾರೆ.  ರಾಘವೇಂದ್ರ ರಾಜ್‌ಕುಮಾರ್‌ ನಿವೃತ್ತ ಸೈನಿಕ ಹಾಗೂ ಗುಜರಿ ಅಂಗಡಿ ಮಾಲೀಕ ಮೋಹನ್ ಕುಮಾರ್ ಪಾತ್ರದಲ್ಲಿ ಮತ್ತು  ಟೀ ಅಂಗಡಿ ನಡೆಸುವ ಸಾಯಿರಾಬಾನು  ಎಂಬ ಮುಸ್ಲಿಂ  ಮಹಿಳೆಯ ಪಾತ್ರದಲ್ಲಿ ಶ್ರುತಿ ಅವರು ನಟಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಭಾಗದಲ್ಲಿ ನಡದೆ ಒಂದು ನೈಜ ಘಟನೆಯನ್ನು ಸ್ಫೂರ್ತಿಯಾಗಿಟ್ಟುಕೊಂಡು ನಿರ್ದೇಶಕರು ಈ ಚಿತ್ರಕಥೆಯನ್ನು ಹೆಣೆದಿದ್ದಾರೆ.

    ವೇದಿಕೆಯಲ್ಲಿ ನಿರ್ದೇಶಕ ನರೇಂದ್ರಬಾಬು ಮಾತನಾಡುತ್ತ ’13’ ಟೈಟಲ್ ಇಟ್ಟುಕೊಂಡು ಸಿನಿಮಾ ಮಾಡುವಾಗ ತುಂಬಾ ಕಹಿಘಟನೆಗಳು ನಡೆದಿವೆ. ಆದರೂ ಎಲ್ಲವನ್ನೂ ಮರೆತು ಯಶಸ್ಸು ಕಂಡಿದ್ದೇವೆ. ನನ್ನ ಒಂಭತ್ತನೆಯ ಚಿತ್ರದಲ್ಲಿ ರಾಘಣ್ಣ ಅಭಿನಯಿಸಿರುವ  ಖುಷಿಯಿದೆ.  ಇದೇ ಖುಷಿಯಲ್ಲಿ  13 ಚಿತ್ರದ ಹಬ್ಬವನ್ನು 6 ದಿನಗಳ ಕಾಲ ಆಚರಿಸುತ್ತಿದ್ದೇವೆ. ಮೂರು ಹಿಂದುಳಿದ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ರಿನೋವೇಶನ್ ಮಾಡಿಸುತ್ತಿದ್ದೇವೆ. ಹಾವೇರಿ ಜಿಲ್ಲೆಯ ಶಾಲೆಯೊಂದರಿಂದ ಈ ಕೆಲಸ ಪ್ರಾರಂಭವಾಗಲಿದೆ. ಬಡ ಮಕ್ಕಳಿಗೆ ಬ್ಯಾಗ್, ಪುಸ್ತಕಗಳನ್ನು ವಿತರಿಸುತ್ತಿದ್ದೇವೆ. ಈ ಕೆಲಸಕ್ಕೆ ನಮ್ಮಜೊತೆ ಸಮಾಜಸೇವಕ ಅನಿಲ್ ಕುಮಾರ್ ಅವರು  ಕೈಜೋಡಿಸಿದ್ದಾರೆ. ಈ ಎಲ್ಲ ಕಾರ್ಯಕ್ರಮಗಳ ರೂವಾರಿ ರಾಘಣ್ಣ ಎಂದು ಹೇಳಿದರು. ಇದನ್ನೂ ಓದಿ: ಪವನ್ ಕಲ್ಯಾಣ್ ಚಿತ್ರದಲ್ಲಿ ಸೊಂಟ ಬಳುಕಿಸಲು ಸಜ್ಜಾದ ನಟಿ ಶ್ರೀಲೀಲಾ

    ನಂತರ ‍ನಟ ರಾಘಣ್ಣ ಮಾತನಾಡುತ್ತ ನಾನು ಕೂಡ ಅಪ್ಪುಥರ ಬದುಕಬೇಕೆಂಬ ಸಂಕಲ್ಪ ಮಾಡಿಕೊಂಡಿದ್ದೇನೆ. ಎರಡು ಧರ್ಮಗಳ ಆತ್ಮ ಸೇರಿದರೆ ಅವರು ಹೇಗೆ ಬೆರೆತುಕೊಂಡು ಬರ್ತಾರೆ ಅನ್ನೋದನ್ನ ಚಿತ್ರದಲ್ಲಿ ತೋರಿಸಿದ್ದಾರೆ. ನಾನು ಮಾತಾಡ್ತಾ ಮಾತಾಡ್ತಾ ಅಲ್ಲಾ ಅಂದರೆ ಅವರು ರಾಮಾ ಅಂತಿದ್ದರು. ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಸಿನಿಮಾ ಜೊತೆ ಸಮಾಜ ಸೇವೆಯನ್ನೂ ಇವರು  ಮಾಡಿಕೊಂಡು ಬರುತ್ತಿದ್ದಾರೆ. ಈಗ ಹಳ್ಳಿಯ ಬಡ ಮಕ್ಕಳಿಗೆ ಬ್ಯಾಗ್ ಕ್ಯಾರಿಯರ್ ಕೊಟ್ಟು ಬರುತ್ತಿದ್ದೇವೆ. ಅಪ್ಪು ಹೆಸರಲ್ಲಿ  ಇದನ್ನು ನಾನೂ ಮುಂದುವರೆಸುತ್ತೇನೆ ಎಂದು ಹೇಳಿದರು. ಅಂತರ್ಜಾತೀಯ ಪ್ರೇಮ ಕಥೆ  ಇದಾಗಿದ್ದು, ಗಂಡ- ಹೆಂಡತಿ ಅಂದರೆ ಹೀಗಿರಬೇಕು ಎನ್ನುವಂತಿದ್ದ ದಂಪತಿಗಳಿಬ್ಬರೂ ತಮ್ಮದಲ್ಲದ ತಪ್ಪಿಗೆ ಇಡೀ ಜೀವನ ಯಾವರೀತಿ ಕಷ್ಟಪಡುತ್ತಾರೆ ಎಂಬುದನ್ನು ಹೇಳುವ,  ಮನುಷ್ಯ ಸಂಬಂಧಗಳನ್ನು ಬೆಸೆಯುವ ಕಥೆ ಇದರಲ್ಲಿದೆ.

    ನಿರ್ಮಾಪಕ ಕೆ. ಸಂಪತ್‍ಕುಮಾರ್ ಮಾತನಾಡಿ ನಿರ್ದೇಶಕರ ಮೇಲೆ ನಂಬಿಕೆಯಿದೆ. ಅವರ ಜೊತೆ ಇದು ಎರಡನೇ ಸಿನಿಮಾ.  ಡೇ ಒನ್ ನಿಂದಲೂ ಈ ಸಿನಿಮಾ ಗೆದ್ದೇ ಗೆಲ್ಲುತ್ತೆ ಎಂಬ ನಂಬಿಕೆಯಿದೆ. ಗೋವಿಂದ ಗೋಪಾಲ, ಸಾಫ್ಟ್‌ವೇರ್ ಗಂಡ ಸೇರಿ ನನ್ನ ನಿರ್ಮಾಣದ 5ನೇ ಚಿತ್ರವಿದು. ಅಮೃತವಾಹಿನಿ ನಂತರ ಬಾಬು ಜೊತೆ ಎರಡನೇ ಚಿತ್ರ. ಮುಂದಿನ ದಿನಗಳಲ್ಲಿ ‌ಪ್ರೊಮೋಷನ್ ಪ್ಲಾನ್ ಮಾಡಿಕೊಂಡಿದ್ದೇವೆ  ಎಂದು ಹೇಳಿಕೊಂಡರು. ಇನ್ನು ಇವರ ಜತೆ ಕೈಜೋಡಿಸಿರುವ ಮಂಜುನಾಥ್‍ಗೌಡ, ಕೇಶವಮೂರ್ತಿ ಹಾಗೂ ಮಂಜುನಾಥ್ ಚಿತ್ರದ ಕುರಿತಂತೆ ಮಾತನಾಡಿದರು.  ಪ್ರಮೋದ್ ಶೆಟ್ಟಿ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸಿದ್ದಾರೆ. ಮಂಜುನಾಥ್‌ ನಾಯ್ಡು ಅವರ ಛಾಯಾಗ್ರಹಣ ಹಾಗೂ ಸೋಹನ್‌ ಬಾಬು ಅವರ  ಸಂಗೀತ ಈ ಚಿತ್ರಕ್ಕಿದೆ.

  • Exclusive Photo Album- ಮೋದಿ ಔತಣಕೂಟ : ಎಕ್ಸ್ ಕ್ಲೂಸಿವ್ ಫೋಟೋ ಆಲ್ಬಂ

    Exclusive Photo Album- ಮೋದಿ ಔತಣಕೂಟ : ಎಕ್ಸ್ ಕ್ಲೂಸಿವ್ ಫೋಟೋ ಆಲ್ಬಂ

    ನಿನ್ನೆ ನಡೆದ ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ಔತಣಕೂಟದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದು ಸ್ಯಾಂಡಲ್ ವುಡ್ ಸಿಲೆಬ್ರಿಟಿಗಳು. ರಾತ್ರಿ 8.20 ರಿಂದ ರಾಜಭವನದಲ್ಲಿ ನಡೆದ ಔತಣಕೂಟದಲ್ಲಿ ಯಾರೆಲ್ಲ ಭಾಗಿ ಆಗಲಿದ್ದಾರೆ ಎನ್ನುವುದು ಸಂಜೆವರೆಗೂ ಸ್ವತಃ ರಾಜ್ಯ ಸರಕಾರಕ್ಕೂ ಮಾಹಿತಿ ಇರಲಿಲ್ಲ. ಆ ಮಟ್ಟದಲ್ಲಿ ಗೌಪ್ಯತೆಯನ್ನು ಕಾಪಾಡಿಕೊಳ್ಳಲಾಗಿತ್ತು. ಸಂಜೆ 8.30ರ ನಂತರ ನಡೆದ ಔತಣಕೂಟದಲ್ಲಿ ನಟ ಯಶ್, ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ, ನಿರ್ಮಾಪಕರಾದ ವಿಜಯ್ ಕಿರಗಂದೂರು ಮತ್ತು ಅಶ್ವಿನಿ ಪುನೀತ್ ರಾಜ್ ಕುಮಾರ್, ಹಾಗೂ   ಶ್ರದ್ಧಾ ಜೈನ್ ಅವರು ಭಾಗಿಯಾಗಿದ್ದರು.

    ನಿನ್ನೆ ನಡೆದ ಔತಣಕೂಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡ ಚಿತ್ರೋದ್ಯಮದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಉತ್ತರ ಭಾರತದ ಚಿತ್ರಗಳಿಗಿಂತ ಹೆಚ್ಚು ಖ್ಯಾತಿ ಗಳಿಸುತ್ತಿರುವುದಕ್ಕೆ ಪ್ರಧಾನಿ ಮೆಚ್ಚುಗೆಯನ್ನೂ ಈ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:`ಕಾಂತಾರ’ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾವಾಗಿ ಗೆಲ್ಲಲು ಅಸಲಿ ಕಾರಣ ಬಿಚ್ಚಿಟ್ಟ ರಿಷಬ್ ಶೆಟ್ಟಿ

    ನಾಡಿನ ಸಾಂಸ್ಕೃತಿಕ ಪರಂಪರೆಗೆ ಕನ್ನಡ ಚಿತ್ರೋದ್ಯಮವು ಒತ್ತು ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಹಾಡಿಹೊಗಳಿದ್ದಾರೆ. ದೇಶ-ವಿದೇಶಗಳಿಗೆ ನಮ್ಮ ಪರಂಪರೆಯನ್ನು ಕನ್ನಡ ಚಿತ್ರರಂಗದ ಮೂಲಕ ಪರಿಚಯಿಸುತ್ತಿರುವುದಕ್ಕೆ ಅಭಿನಂದನೆ ವ್ಯಕ್ತ ಪಡಿಸಿದ್ದಾರೆ. ಕನ್ನಡ ಚಿತ್ರೋದ್ಯಮದ ಯಾವುದೇ ಸಮಸ್ಯೆಗಳಿದ್ದರೂ ಗಮನಕ್ಕೆ ತನ್ನಿ ಎಂದು ಹೇಳಿದ್ದಾರೆ.

    ಕನ್ನಡ ಸಿನಿಮಾ ರಂಗದ ಹೆಸರಾಂತ ನಟ ಪುನೀತ್ ರಾಜ್ ಕುಮಾರ್ ಅವರ ಜನಪ್ರಿಯತೆಯನ್ನು ಪ್ರಧಾನಿ ಮೋದಿ ಇದೇ ಸಂದರ್ಭದಲ್ಲಿ ಸ್ಮರಿಸಿದ್ದಾರೆ. ಅಶ್ವಿನಿ ಕುಮಾರ್ ಜೊತೆ ಕೆಲ ಸಮಯ ಮಾತನಾಡಿದ ಪ್ರಧಾನಿ, ಪುನೀತ್ ಅವರು ಈ ನಾಡಿಗೆ ನೀಡಿದ ಕೊಡುಗೆಯನ್ನು ಕೊಂಡಾಡಿದ್ದಾರೆ. ಪುನೀತ್ ಅವರ ಸೇವೆಯನ್ನು ಈ ದೇಶ ಯಾವತ್ತೂ ಮರೆಯುವುದಿಲ್ಲ ಎಂದು ಸ್ಮರಿಸಿದ್ದಾರೆ.

     

    ಕನ್ನಡ ಸಿನಿಮಾಗಳ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿರುವ ನಟ ಯಶ್ ಮತ್ತು ರಿಷಬ್ ಶೆಟ್ಟಿ ಜೊತೆಯೂ ಪ್ರಧಾನಿ ಮೋದಿ ವೈಯಕ್ತಿಕವಾಗಿ ಭೇಟಿ ಮಾಡಿದ್ದಾರೆ. ಇಬ್ಬರ ಕಲಾಪ್ರೌಢಿಮೆಯನ್ನು ಮೆಚ್ಚಿ ಮಾತನಾಡಿದ್ದಾರೆ.

    ಇನ್ನಷ್ಟು ಕೀರ್ತಿಗಳಿಸುವಂತೆ ಇಬ್ಬರಿಗೂ ಬೆನ್ನು ತಟ್ಟಿ ಶುಭ ಹಾರಿಸಿದ್ದಾರೆ. ಜೊತೆಗೆ ಹೊಂಬಾಳೆ ಫಿಲ್ಮ್ಸ್ ಬಗ್ಗೆಯೂ ಮೆಚ್ಚಿಕೊಂಡ ಮೋದಿ, ಯುವ ನಿರ್ಮಾಪಕ ವಿಜಯ್ ಕಿರಗಂದೂರು ಬೆನ್ನು ತಟ್ಟಿದ್ದಾರೆ. ಮಾಜಿ ರೆಡಿಯೋ ಜಾಕಿ ಶ್ರದ್ಧಾ ಜೈನ್ ಕೂಡ ಈ ಸಂದರ್ಭದಲ್ಲಿ ಹಾಜರಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • Exclusive details- ಮೋದಿ ಔತಣಕೂಟ : ಸಿನಿಮಾ ರಂಗದಿಂದ ಯಾರೆಲ್ಲ ಭಾಗಿ, ಆದ ಮಾತುಕತೆ ಏನು?

    Exclusive details- ಮೋದಿ ಔತಣಕೂಟ : ಸಿನಿಮಾ ರಂಗದಿಂದ ಯಾರೆಲ್ಲ ಭಾಗಿ, ಆದ ಮಾತುಕತೆ ಏನು?

    ನಿನ್ನೆ ನಡೆದ ಪ್ರಧಾನಿ ನರೇಂದ್ರ ಮೋದಿ (Narendra Modi) ಜೊತೆಗಿನ ಔತಣಕೂಟದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದು ಸ್ಯಾಂಡಲ್ ವುಡ್ ಸಿಲೆಬ್ರಿಟಿಗಳು. ರಾತ್ರಿ 8.20 ರಿಂದ ರಾಜಭವನದಲ್ಲಿ ನಡೆದ ಔತಣಕೂಟದಲ್ಲಿ ಯಾರೆಲ್ಲ ಭಾಗಿ ಆಗಲಿದ್ದಾರೆ ಎನ್ನುವುದು ಸಂಜೆವರೆಗೂ ಸ್ವತಃ ರಾಜ್ಯ ಸರಕಾರಕ್ಕೂ ಮಾಹಿತಿ ಇರಲಿಲ್ಲ. ಆ ಮಟ್ಟದಲ್ಲಿ ಗೌಪ್ಯತೆಯನ್ನು ಕಾಪಾಡಿಕೊಳ್ಳಲಾಗಿತ್ತು. ಸಂಜೆ 8.30ರ ನಂತರ ನಡೆದ ಔತಣಕೂಟದಲ್ಲಿ ನಟ ಯಶ್ (Yash), ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ (Rishabh Shetty), ನಿರ್ಮಾಪಕರಾದ ವಿಜಯ್ ಕಿರಗಂದೂರು (Vijay Kirgandur) ಮತ್ತು ಅಶ್ವಿನಿ ಪುನೀತ್ ರಾಜ್ ಕುಮಾರ್ (Puneeth rajkumar, ಹಾಗೂ   ಶ್ರದ್ಧಾ ಜೈನ್ ಅವರು ಭಾಗಿಯಾಗಿದ್ದರು.

     

    ಕನ್ನಡ ಚಿತ್ರೋದ್ಯಮದ ಬಗ್ಗೆ ಮೋದಿ ಪ್ರಂಶಸೆ 

    ನಿನ್ನೆ ನಡೆದ ಔತಣಕೂಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡ ಚಿತ್ರೋದ್ಯಮದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಉತ್ತರ ಭಾರತದ ಚಿತ್ರಗಳಿಗಿಂತ ಹೆಚ್ಚು ಖ್ಯಾತಿ ಗಳಿಸುತ್ತಿರುವುದಕ್ಕೆ ಪ್ರಧಾನಿ ಮೆಚ್ಚುಗೆಯನ್ನೂ ಈ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾರೆ. ನಾಡಿನ ಸಾಂಸ್ಕೃತಿಕ ಪರಂಪರೆಗೆ ಕನ್ನಡ ಚಿತ್ರೋದ್ಯಮವು ಒತ್ತು ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಹಾಡಿಹೊಗಳಿದ್ದಾರೆ. ದೇಶ-ವಿದೇಶಗಳಿಗೆ ನಮ್ಮ ಪರಂಪರೆಯನ್ನು ಕನ್ನಡ ಚಿತ್ರರಂಗದ ಮೂಲಕ ಪರಿಚಯಿಸುತ್ತಿರುವುದಕ್ಕೆ ಅಭಿನಂದನೆ ವ್ಯಕ್ತ ಪಡಿಸಿದ್ದಾರೆ. ಕನ್ನಡ ಚಿತ್ರೋದ್ಯಮದ ಯಾವುದೇ ಸಮಸ್ಯೆಗಳಿದ್ದರೂ ಗಮನಕ್ಕೆ ತನ್ನಿ ಎಂದು ಹೇಳಿದ್ದಾರೆ.

    ಪುನೀತ್ ಸ್ಮರಿಸಿದ ಪ್ರಧಾನಿ 

    ಕನ್ನಡ ಸಿನಿಮಾ ರಂಗದ ಹೆಸರಾಂತ ನಟ ಪುನೀತ್ ರಾಜ್ ಕುಮಾರ್ ಅವರ ಜನಪ್ರಿಯತೆಯನ್ನು ಪ್ರಧಾನಿ ಮೋದಿ ಇದೇ ಸಂದರ್ಭದಲ್ಲಿ ಸ್ಮರಿಸಿದ್ದಾರೆ. ಅಶ್ವಿನಿ ಕುಮಾರ್ ಜೊತೆ ಕೆಲ ಸಮಯ ಮಾತನಾಡಿದ ಪ್ರಧಾನಿ, ಪುನೀತ್ ಅವರು ಈ ನಾಡಿಗೆ ನೀಡಿದ ಕೊಡುಗೆಯನ್ನು ಕೊಂಡಾಡಿದ್ದಾರೆ. ಪುನೀತ್ ಅವರ ಸೇವೆಯನ್ನು ಈ ದೇಶ ಯಾವತ್ತೂ ಮರೆಯುವುದಿಲ್ಲ ಎಂದು ಸ್ಮರಿಸಿದ್ದಾರೆ.

    ಯಶ್ ಮತ್ತು ರಿಷಬ್ ಗೆ ಶಹಬ್ಬಾಶ್ ಎಂದ ಮೋದಿ 

    ಕನ್ನಡ ಸಿನಿಮಾಗಳ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿರುವ ನಟ ಯಶ್ ಮತ್ತು ರಿಷಬ್ ಶೆಟ್ಟಿ ಜೊತೆಯೂ ಪ್ರಧಾನಿ ಮೋದಿ ವೈಯಕ್ತಿಕವಾಗಿ ಭೇಟಿ ಮಾಡಿದ್ದಾರೆ. ಇಬ್ಬರ ಕಲಾಪ್ರೌಢಿಮೆಯನ್ನು ಮೆಚ್ಚಿ ಮಾತನಾಡಿದ್ದಾರೆ. ಇನ್ನಷ್ಟು ಕೀರ್ತಿಗಳಿಸುವಂತೆ ಇಬ್ಬರಿಗೂ ಬೆನ್ನು ತಟ್ಟಿ ಶುಭ ಹಾರಿಸಿದ್ದಾರೆ. ಜೊತೆಗೆ ಹೊಂಬಾಳೆ ಫಿಲ್ಮ್ಸ್ ಬಗ್ಗೆಯೂ ಮೆಚ್ಚಿಕೊಂಡ ಮೋದಿ, ಯುವ ನಿರ್ಮಾಪಕ ವಿಜಯ್ ಕಿರಗಂದೂರು ಬೆನ್ನು ತಟ್ಟಿದ್ದಾರೆ. ಮಾಜಿ ರೆಡಿಯೋ ಜಾಕಿ ಶ್ರದ್ಧಾ ಜೈನ್ ಕೂಡ ಈ ಸಂದರ್ಭದಲ್ಲಿ ಹಾಜರಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪುನೀತ್ ರಾಜ್‌ಕುಮಾರ್ ರಸ್ತೆ ಉದ್ಘಾಟನೆ

    ಪುನೀತ್ ರಾಜ್‌ಕುಮಾರ್ ರಸ್ತೆ ಉದ್ಘಾಟನೆ

    ಪುನೀತ್ ರಾಜ್‌ಕುಮಾರ್ ಅವರ ಹೆಸರನ್ನು ಅಮರವಾಗಿಸುವ ಕೆಲಸ ಅನೇಕ ಕಡೆಗಳಲ್ಲಿ ಕಾರ್ಯರೂಪಕ್ಕೆ ಬಂದಿದೆ. ಬೆಂಗಳೂರಿನಲ್ಲಿ ಮೈಸೂರು ರಸ್ತೆಯಿಂದ ಬನ್ನೇರುಘಟ್ಟದವೆಗಿನ 12 ಕಿಲೋ ಮೀಟರ್ ರಸ್ತೆಗೆ ಪುನೀತ್ ಹೆಸರನ್ನು ಇಡಲಾಗಿದೆ. ಪುನೀತ್‌ ರಾಜ್‌ಕುಮಾರ್‌ ರಸ್ತೆಯನ್ನ ಸಿಎಂ ಬೊಮ್ಮಾಯಿ ಅವರು ಉದ್ಘಾಟನೆ ಮಾಡಿದ್ದಾರೆ.

    ಅಭಿಮಾನಿಗಳ ಆಸೆಯಂತೆ ನಾಯಂಡಳ್ಳಿ ಜಂಕ್ಷನ್‌ನಿಂದ ಬನ್ನೇರುಘಟ್ಟವರೆಗಿನ ರಸ್ತೆಗೆ ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಹೆಸರನ್ನ (ಫೆ.7)ರಂದು ನಾಮಕರಣ ಮಾಡಲಾಯಿತು. ಈ ವೇಳೆ 1800 ಮಕ್ಕಳ ವಿದ್ಯಾಭ್ಯಾಸದ ಜವಬ್ದಾರಿಯನ್ನ ಸಿಎಂ ಬೊಮ್ಮಾಯಿ ಅವರು ವಹಿಸಿಕೊಳ್ಳೋದಾಗಿ ತಿಳಿಸಿದ್ದಾರೆ.

    ಪ್ರತಿಯೊಬ್ಬ ಮನುಷ್ಯನಿಗೂ ಹುಟ್ಡು ಸಾವು ಎರಡು ಬರುತ್ತೆ ಬದುಕಿದ್ದಾಗ ಹೇಗಿರುತ್ತಾರೆ ಅನ್ನೋದು ಇಂಪಾರ್ಟೆಂಟ್ ಅಪ್ಪಾಜಿ ಅವ್ರು ಅಭಿಮಾನಿಗಳನ್ನ ಗಳಿಸಿದರು. ಅಪ್ಪು ಅಭಿಮಾನಿಗಳನ್ನ ಗಳಿಸುತ್ತಿದ್ದಾರೆ. ಅಪ್ಪು ಯಾಕೆ ಬಂದಿದ್ದ ಅಂದರೆ ಏನೋ ಹೇಳಬೇಕು ಅಂತ ಬಂದಿದ್ದ. ಇನ್ನ ಜವಾಬ್ದಾರಿ ನಮಗೆ ಬಿಟ್ಟು ಹೋಗಿದ್ದಾನೆ. ನಾನು ನನ್ನ ಸಿನಿಮಾ ನೋಡಿ ನನ್ನ ಮಗನ್ನ ಬೆಳಸಿ ಅಂತ ಹೇಳೋದಿಲ್ಲ. ಅಪ್ಪು ಪವರ್ ಇಲ್ಲೇ ಬಿಟ್ಟು ಸ್ಟಾರ್ ಆಗಿ ಮೇಲೆ ಹೋಗಿದ್ದಾನೆ. ನನ್ನ ಜೀವನದಲ್ಲಿ ಅಪ್ಪು ಆಗಿ ಇನ್ನೋಬ್ಬರಿಗೋಸ್ಕರ ಬದುಕಬೇಕು. ನಾವು ಅಪ್ಪು ಆಗೋಣ, ಎರಡು ದಿನ ಆದ್ರೂ ಅಪ್ಪು ಆಗಿ ಬದುಕೋಣ. ಅ.29ರಂದು  ಅಪ್ಪು ಸತ್ತಿದ್ದ ದಿನ ಅಲ್ಲ, ಅವನು ಹುಟ್ಟಿದ್ದ ದಿನ ಅವತ್ತು ಒಂದು ಶಕ್ತಿ ಹುಟ್ಟಿದ ದಿನ ಎಂದು ಅಪ್ಪು ಬಗ್ಗೆ ಈ ವೇಳೆ ರಾಘವೇಂದ್ರ ರಾಜ್‌ಕುಮಾರ್ ಅವರು ಮಾತನಾಡಿದ್ದಾರೆ.

    ಪದ್ಮನಾಭನಗರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಅವರ ಜೊತೆ ಅಶ್ವಿನಿ ಪುನೀತ್, ಅಭಿಷೇಕ್ ಅಂಬರೀಶ್, ದೊಡ್ಡ ರಂಗೇಗೌಡ, ರಾಕ್‌ಲೈನ್ ವೆಂಕಟೇಶ್, ಆರ್,ಅಶೋಕ್, ತೇಜಸ್ವಿ ಸೂರ್ಯ ಸೇರಿದಂತೆ ಹಲವರು ಸಾಕ್ಷಿಯಾದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k