Tag: ಪುತ್ರಿ

  • ಆಮಂತ್ರಣದ ಜೊತೆಗೆ ದೀಪ, ಡ್ರೈ ಫ್ರೂಟ್ಸ್ ನೀಡಿ ಮಗಳ ಮದ್ವೆಗೆ ಜಮೀರ್ ಆಹ್ವಾನ

    ಆಮಂತ್ರಣದ ಜೊತೆಗೆ ದೀಪ, ಡ್ರೈ ಫ್ರೂಟ್ಸ್ ನೀಡಿ ಮಗಳ ಮದ್ವೆಗೆ ಜಮೀರ್ ಆಹ್ವಾನ

    ಬೆಂಗಳೂರು: ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಪುತ್ರಿಯ ಮದುವೆ ಶೀಘ್ರವೇ ನಡೆಯಲಿದೆ.

    ಹೌದು. ಜನವರಿ 21ರಂದು ಸಿಲಿಕಾನ್ ಸಿಟಿಯಲ್ಲಿರುವ ಪ್ಯಾಲೆಸ್ ನಲ್ಲಿ ಶಾಸಕರ ಪುತ್ರಿ ವಿವಾಹ ಸಮಾರಂಭ ನಡೆಯಲಿದೆ. ಶುಭ ಕಾರ್ಯದ ಹಿನ್ನೆಲೆಯಲ್ಲಿ ಶಾಸಕರು, ರಾಜಕೀಯ ನಾಯಕರಿಗೆ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನ ನೀಡಿದ್ದಾರೆ.

    ವಿಶೇಷ ಅಂದರೆ ಶಾಸಕರು ಆಮಂತ್ರಣ ಪತ್ರಿಕೆಯ ಜೊತೆಗೆ ದೀಪ ಹಾಗೂ ಡ್ರೈ ಫ್ರೂಟ್ಸ್ ಇರುವ ಗಿಫ್ಟ್ ನೀಡಿದ್ದಾರೆ. ಈ ಮೂಲಕ ಪುತ್ರಿಯ ಮದುವೆ ಸಮಾರಂಭವನ್ನು ಜಮೀರ್ ಅದ್ಧೂರಿಯಾಗಿ ನೆರವೇರಿಸಲಿದ್ದಾರೆ.

  • ರಮೇಶ್ ಅರವಿಂದ್ ಪುತ್ರಿ ವಿವಾಹ ನಿಶ್ಚಯ- ಹುಡುಗ ಯಾರು ಗೊತ್ತಾ?

    ರಮೇಶ್ ಅರವಿಂದ್ ಪುತ್ರಿ ವಿವಾಹ ನಿಶ್ಚಯ- ಹುಡುಗ ಯಾರು ಗೊತ್ತಾ?

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ರಮೇಶ್ ಅರವಿಂದ್ ಹಾಗೂ ಅರ್ಚನಾ ದಂಪತಿ ಪುತ್ರಿ ನಿಹಾರಿಕಾ ವಿವಾಹ ನಿಶ್ಚಯವಾಗಿದ್ದು, ಡಿಸೆಂಬರ್ 28ರಂದು ವಿವಾಹ ನಡೆಯಲಿದೆ.

    ಮಗಳ ಮದುವೆ ತಯಾರಿಯಲ್ಲಿ ರಮೇಶ್ ಸಖತ್ ಬ್ಯುಸಿಯಾಗಿದ್ದು, ನಿಹಾರಿಕಾ ಅವರು ಅಕ್ಷಯ್ ಅವರನ್ನು ಕೈ ಹಿಡಿಯುತ್ತಿದ್ದಾರೆ. ಅಕ್ಷಯ್ ಸಿನಿಮಾ ಕ್ಷೇತ್ರದವರಲ್ಲ ಬದಲಿಗೆ ನಿಹಾರಿಕಾ ಅವರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಎರಡೂ ಕುಟುಂಬದವರು ನಿಶ್ಚಯಿಸಿ ವಿವಾಹ ಮಾಡುತ್ತಿದ್ದಾರೆ.

    ಕೊರೊನಾ ಹಿನ್ನೆಲೆ ಗ್ರ್ಯಾಂಡ್ ಆಗಿ ವಿವಾಹ ಮಾಡುತ್ತಿಲ್ಲ. ಹೆಚ್ಚು ಜನರು ಸೇರುವ ಕಾರಣ ಕೊರೊನಾ ಮುನ್ನಚ್ಚರಿಕೆ ಪಾಲಿಸುವುದು ಕಷ್ಟ. ಹೀಗಾಗಿ ಕುಟುಂಬಸ್ಥರು ಹಾಗೂ ಆಪ್ತರು ಮಾತ್ರ ಭಾಗವಹಿಸುತ್ತಿದ್ದಾರೆ ಎನ್ನಲಾಗಿದೆ. ಯಾರಿಗೆಲ್ಲ ಆಹ್ವಾನಿಸಲಾಗುತ್ತಿದೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

    ಅಲ್ಲದೆ 2021ರ ಜನವರಿ ಎರಡನೇ ವಾರದಲ್ಲಿ ಆರತಕ್ಷತೆ ನಡೆಯಲಿದೆ. ಅಂದು ಚಿತ್ರರಂಗ ಸೇರಿದಂತೆ ಎಲ್ಲ ಕ್ಷೇತ್ರಗಳ ಗಣ್ಯರಿಗೆ ಆಹ್ವಾನ ನೀಡಲಾಗುತ್ತಿದೆ. ನಾನು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಾಗಿನಿಂದ ಚಿತ್ರರಂಗದವರು, ಕರ್ನಾಟಕದ ಜನತೆ ಹಾಗೂ ಮಾಧ್ಯಮದವರು ನೀಡಿರುವ ಪ್ರೋತ್ಸಾಹ ಅಪಾರ. ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ನವ ದಂಪತಿ ಮೇಲೆ ಇರಲಿ ಎಂದು ರಮೇಶ್ ಅರವಿಂದ್ ವಿನಂತಿಸಿದ್ದಾರೆ.

  • ಕೊರೊನಾ ಗೆದ್ದ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ

    ಕೊರೊನಾ ಗೆದ್ದ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ

    – ಎಲ್ಲರಿಗೂ ಆರೋಗ್ಯ ಕಾಪಾಡಿಕೊಳ್ಳುವಂತೆ ಮನವಿ

    ಬೆಂಗಳೂರು: ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರ ಪುತ್ರಿ ನಟಿ ಐಶ್ವರ್ಯ ಅರ್ಜುನ್ ಅವರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.

    ಕಳೆದ ವಾರ ನಟಿ ಐಶ್ವರ್ಯ ಅರ್ಜುನ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಸ್ವತಃ ಈ ಬಗ್ಗೆ ತಾವೇ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದ ಐಶ್ವರ್ಯ, ಮದ್ರಾಸ್‍ನಲ್ಲಿರುವ ತಮ್ಮ ಮನೆಯಲ್ಲೇ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಈಗ ಅವರು ಕೊರೊನಾದಿಂದ ಗುಣಮುಖವಾಗಿದ್ದಾರೆ.

    ಇತ್ತೀಚೆಗೆ ನಟ ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾ ಅವರಿಗೂ ಕೊರೊನಾ ಸೋಂಕು ತಗುಲಿತ್ತು. ಈ ಬಳಿಕ ಚಿಕಿತ್ಸೆ ಪಡೆದುಕೊಂಡ ದಂಪತಿಗಳಿಬ್ಬರು ಗುಣಮುಖರಾಗಿದ್ದರು. ಈಗ ಕೊರೊನಾದಿಂದ ನಟಿ ಐಶ್ವರ್ಯ ಅರ್ಜುನ್ ಕೂಡ ಗುಣಮುಖರಾಗಿದ್ದು, ಕೊರೊನಾದಿಂದ ನಾನು ಸೇಫಾಗಿದ್ದು, ತನ್ನ ಆರೋಗ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಎಂದು ಹೇಳಿದ್ದಾರೆ. ಜೊತೆಗೆ ಪ್ರತಿಯೊಬ್ಬರು ಆರೋಗ್ಯ ಕಾಪಾಡಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.

    ಈ ಹಿಂದೆ ತಮಗೆ ಕೊರೊನಾ ಬಂದಿರುವ ವಿಚಾರವಾಗಿ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿದ್ದ ಐಶ್ವರ್ಯ, ನಾನು ಇತ್ತೀಚೆಗೆ ಕೊರೊನಾ ಪರೀಕ್ಷೆಗೆ ಒಳಗಾಗಿದ್ದೆ. ವರದಿಯಲ್ಲಿ ನನಗೆ ಕೊರೊನಾ ಪಾಸಿಟಿವ್ ಬಂದಿದೆ. ನಾನು ಈಗ ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದೇನೆ. ಅಲ್ಲದೇ ವೈದ್ಯರ ಸಲಹೆ ಮೇರೆಗೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಹೇಳಿದ್ದರು.

  • ಡಿಕೆಶಿ ಮನೆಯಲ್ಲಿ ಮದುವೆ ಸಂಭ್ರಮ – ಮನೆಗೆ ಎಸ್‍ಎಂಕೆ ಕುಟುಂಬ ಆಗಮನ

    ಡಿಕೆಶಿ ಮನೆಯಲ್ಲಿ ಮದುವೆ ಸಂಭ್ರಮ – ಮನೆಗೆ ಎಸ್‍ಎಂಕೆ ಕುಟುಂಬ ಆಗಮನ

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪುತ್ರಿ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರ ಮೊಮ್ಮಗನ ಮದುವೆ ಮಾತುಕತೆ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಎಸ್‍.ಎಂ.ಕೆ ಕುಟುಂಬ ಆಗಮಿಸಿದೆ.

    ಮೂರು ದಿನಗಳ ಹಿಂದೆಯಷ್ಟೇ ಎಸ್‍ಎಂಕೆ ನಿವಾಸಕ್ಕೆ ಡಿಕೆಶಿ ಕುಟುಂಬ ಹೋಗಿದ್ದರು. ಇದೀಗ ಸಿದ್ಧಾರ್ಥ ಪುತ್ರ ಅಮರ್ಥ್ಯ ಸುಬ್ರಮಣ್ಯ, ಎಸ್‍.ಎಂ. ಕೃಷ್ಣ ದಂಪತಿ ಸೇರಿದಂತೆ ಕುಟುಂಬ ವರ್ಗ ಡಿ.ಕೆ.ಶಿವಕುಮಾರ್ ಮನೆಗೆ ಭೇಟಿ ಕೊಟ್ಟಿದ್ದಾರೆ. ಹೀಗಾಗಿ ಎಸ್‍.ಎಂ.ಕೆ ಕುಟುಂಬವನ್ನ ಡಿ.ಕೆ.ಶಿವಕುಮಾರ್ ಬರಮಾಡಿಕೊಂಡಿದ್ದಾರೆ.

    ಡಿಕೆಶಿ ಪುತ್ರಿ ಐಶ್ವರ್ಯ ಹಾಗೂ ಉದ್ಯಮಿ ಸಿದ್ದಾರ್ಥ್ ಪುತ್ರ ಅಮರ್ಥ್ಯ ಸುಬ್ರಮಣ್ಯ ವಿವಾಹ ಸಂಬಂಧ ಎರಡು ಕುಟುಂಬಗಳು ಮಾತುಕತೆ ನಡೆಸಿವೆ. ಎರಡು ಕುಟುಂಬಗಳ ಮಾತುಕತೆಯ ಎಕ್ಸ್ ಕ್ಲೂಸಿವ್ ಫೋಟೋಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದೇ ತಿಂಗಳ 12 ರಂದು ಡಿ.ಕೆ.ಶಿವಕುಮಾರ್ ಕುಟುಂಬದವರು ಸದಾಶಿವನಗರದ ಎಸ್.ಎಂ.ಕೃಷ್ಣ ನಿವಾಸಕ್ಕೆ ತೆರಳಿ ಮದುವೆ ಮಾತುಕತೆ ನಡೆಸಿದ್ದರು.

    ಬಹುತೇಕ ಮಾತುಕತೆ ಮುಗಿದಿದ್ದು, ಆಷಾಢ ಕಳೆದ ನಂತರ ಆಗಸ್ಟ್ ತಿಂಗಳಲ್ಲಿ ನಿಶ್ಚಿತಾರ್ಥ ನಡೆಸುವ ಸಂಬಂಧ ಮಾತುಕತೆ ನಡೆದಿದೆ. ಆಗಸ್ಟ್ ತಿಂಗಳಿನಲ್ಲಿ ಒಳ್ಳೆಯ ದಿನ ನೋಡಿ ನಿಶ್ಚಿತಾರ್ಥದ ದಿನಾಂಕ ನಿಗದಿ ಆಗಲಿದೆ. ಬಹುತೇಕ ಡಿಸೆಂಬರ್ ನಲ್ಲಿ ಮದುವೆ ದಿನಾಂಕ ನಿಗದಿಯಾಗುವ ಸಾಧ್ಯತೆ ಇದೆ.

    ಈ ಮಾತುಕತೆಯಲ್ಲಿ ಡಿ.ಕೆ.ಶಿವಕುಮಾರ್ ಕುಟುಂಬದ ಜೊತೆಗೆ, ಸಂಸದ ಡಿ.ಕೆ.ಸುರೇಶ್, ಶಾಸಕ ರಂಗನಾಥ್ ಕುಟುಂಬ ಸಹ ಎಸ್.ಎಂ.ಕೃಷ್ಣ ನಿವಾಸಕ್ಕೆ ತೆರಳಿದ್ದರು.  ಒಂದು ಗಂಟೆಯ ಕಾಲ ಮಾತುಕತೆ ನಡೆದಿದ್ದು, ತಾಂಬೂಲ ಬದಲಿಸಿಕೊಳ್ಳಲಾಗಿದೆ.

  • ಬಿಜೆಪಿ ಮಹಿಳಾ ಉಪಾಧ್ಯಕ್ಷೆ ರಾಣಿ ಸಂಯುಕ್ತ ಸಿಂಗ್ ಪುತ್ರಿಯ ಅದ್ಧೂರಿ ಮದ್ವೆಗೆ ಸಜ್ಜು

    ಬಿಜೆಪಿ ಮಹಿಳಾ ಉಪಾಧ್ಯಕ್ಷೆ ರಾಣಿ ಸಂಯುಕ್ತ ಸಿಂಗ್ ಪುತ್ರಿಯ ಅದ್ಧೂರಿ ಮದ್ವೆಗೆ ಸಜ್ಜು

    – ಮೇ 24 ರಂದು ಹೊಸಪೇಟೆಯಲ್ಲಿ ಸಮಾರಂಭ
    – ನಿಬಂಧನೆಗಳಿದ್ರೂ ಭರ್ಜರಿ ಸಿದ್ಧತೆ

    ಬಳ್ಳಾರಿ: ದೇಶಕ್ಕೊಂದು ನ್ಯಾಯ ಇವರಿಗೊಂದು ನ್ಯಾಯ? ಸಾಮಾನ್ಯ ಜನರು ಮದುವೆ ಮಾಡಿದ್ರೆ ದಾಳಿ, ಇವರು ಮದುವೆ ಮಾಡಿದ್ರೆ ನಡೆಯುತ್ತಾ ಅನ್ನುವ ಅನುಮಾನ ಸಾಮಾನ್ಯ ಜನರಲ್ಲಿ ಮೂಡುತ್ತಿದೆ. ಅದಕ್ಕೆ ಕಾರಣ ಬಳ್ಳಾರಿ ಜಿಲ್ಲೆಯ ಗಣಿ ನಾಡು ಹೊಸಪೇಟೆಯಲ್ಲಿ ಅದ್ಧೂರಿ ಮದುವೆ ಒಂದು ನಡೆಸಲು ಸಿದ್ಧತೆ ಭರದಿಂದ ಸಾಗಿದೆ.

    ಇದೇ ತಿಂಗಳ 24 ರಂದು ರಾಜ್ಯ ಬಿಜೆಪಿ ಮಹಿಳಾ ಉಪಾಧ್ಯಕ್ಷೆ ರಾಣಿ ಸಂಯುಕ್ತ ಸಿಂಗ್ ಅವರ ಏಕೈಕ ಪುತ್ರಿ ವೈಜಯಂತಿ ರೆಡ್ಡಿ ಹಾಗೂ ಮಾಜಿ ಶಾಸಕ ಬಳ್ಳಾರಿ ಸೂರ್ಯನಾರಾಯಣ ರೆಡ್ಡಿ ಅವರ ಪುತ್ರ ಭರತ್ ರೆಡ್ಡಿ ಅವರ ಅದ್ಧೂರಿ ಮದುವೆ ನಡೆಸಲು ಸಿದ್ಧತೆಗಳು ಭರದಿಂದ ಸಾಗಿದೆ. ಹಂಪಿ ಉತ್ಸವವನ್ನು ಮೀರಿಸುವಂತೆ ಕಿಲೋಮೀಟರ್ ಗಟ್ಟಲೆ ಲೈಟಿಂಗ್ ಮಾಡಿಸಿ ಅದ್ಧೂರಿ ಮದುವೆ ಮಾಡುತ್ತಿದ್ದಾರೆ.

    ಕೇಂದ್ರ ಸರ್ಕಾರ ಹೊರಡಿಸಿರುವ ನಿಯಮದ ಪ್ರಕಾರ ಕೇವಲ 50 ಜನರು ಮಾತ್ರ ಸಮಾರಂಭದಲ್ಲಿ ಭಾಗಿ ಆಗಬೇಕು. ಮದುವೆಗೆ ಬಂದ ಜನರ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ಅಲ್ಲದೇ 60 ವರ್ಷ ಮೇಲ್ಪಟ್ಟ ಹಾಗೂ 10 ವರ್ಷದ ಕೆಳಗಿನ ವಯೋಮಿತಿ ಜನರು ಮದುವೆಗೆ ಬರುವುದಕ್ಕೆ ನಿರ್ಬಂಧ ಹಾಕಲಾಗಿದೆ. ಆದರೆ ಇಷ್ಟೊಂದು ಅದ್ಧೂರಿಯಾಗಿ ಮಾಡುವ ಈ ಮದುವೆಯಲ್ಲಿ ಕೇಂದ್ರ ಸರ್ಕಾರ ಹಾಕಿದ 17 ನಿಯಮಗಳ ಪಾಲನೆ ಆಗಲಿದೆಯಾ ಎನ್ನುವುದು ದೊಡ್ಡ ಪ್ರಶ್ನೆ ಕಾಡುತ್ತಿದೆ.

    ಜಿಲ್ಲಾಡಳಿತ ಈಗಾಗಲೇ ಕೇಂದ್ರ ಸರ್ಕಾರ ಹಾಕಲಾದ ನಿಯಮಗಳ ಪ್ರಕಾರ ಮದುವೆ ಅನುಮತಿ ನೀಡಿದೆ. ಈಗಾಗಲೇ ಕೇಂದ್ರ ಸರ್ಕಾರ ಮೇ 31ರವರೆಗೆ ಮುಂದುವರಿಸಿದೆ. ಹೀಗಾಗಿ ಈ ಮದುವೆ ಕೇಂದ್ರ ಸರ್ಕಾರದ ನಿಯಮದಂತೆ ನಡೆಯುತ್ತಾ ಅನ್ನೋ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ.

  • ದೀಪ ಬೆಳಗಿಸಿ ಆದ್ರೆ ಮನೆಯ ಲಕ್ಷ್ಮಣ ರೇಖೆ ದಾಟಬೇಡಿ – ನಮೋ ಕರೆಗೆ ಶಾಸಕರ ಪುತ್ರಿ ಮನವಿ

    ದೀಪ ಬೆಳಗಿಸಿ ಆದ್ರೆ ಮನೆಯ ಲಕ್ಷ್ಮಣ ರೇಖೆ ದಾಟಬೇಡಿ – ನಮೋ ಕರೆಗೆ ಶಾಸಕರ ಪುತ್ರಿ ಮನವಿ

    ಕಲಬುರಗಿ: ಕೊರೊನಾ ಸೋಂಕು ವಿರುದ್ಧ ಹೋರಾಟಕ್ಕೆ ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದು, ಇಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ದೀಪ ಬೆಳಗಿಸಿ ಭಾರತ ದೇಶ ಕೊರೊನಾ ವಿರುದ್ಧ ಹೋರಾಡಲು ಒಗಟ್ಟಿನ ಮಂತ್ರ ಜಪಿಸಲು ಕೈಜೋಡಿಸಿ ಎಂದು ಕರೆ ನೀಡಿದ್ದಾರೆ. ಇದಕ್ಕೆ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ಅವರ ಪುತ್ರಿ ಅವಣಿ ಸಹ ಬೆಂಬಲ ವ್ಯಕ್ತಪಡಿಸಿ ಮನವಿಯೊಂದನ್ನು ಮಾಡಿಕೊಂಡಿದ್ದಾಳೆ.

    ಮನೆಯಲ್ಲಿಯೇ ಕುಳಿತು ಎಲ್ಲರು ದೀಪ ಬೆಳಗಿಸಿ, ಒಗಟ್ಟಿನ ಬಲವಿದೆ ಎಂಬುದು ತೋರಿಸಿ. ಆದರೆ ಯಾವುದೇ ಕಾರಣಕ್ಕೂ ನಿಮ್ಮ ಮನೆಯ ಲಕ್ಷ್ಮಣ ರೇಖೆ ದಾಟಿ ದೀಪ ಬೆಳಗಿಸಲು ಹೋಗಬೇಡಿ. ಪ್ರಧಾನಿ ಮೋದಿ ಅವರ ಕರೆಗೆ ನಾನು ಕೈಜೊಡಿಸುತ್ತೇನೆ. ನೀವು ನಮ್ಮೊಡನೆ ಸಾಥ್ ನೀಡಿ ಎಂದು ಅವಣಿ ವಿಡಿಯೋ ಮೂಲಕ ಸಂದೇಶ ನೀಡಿದ್ದಾಳೆ. ಶಾಸಕರ ಪುತ್ರಿಯ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಬಾಲಕಿ ಮನವಿಗೆ ಹಲವು ನೆಟ್ಟಿಗರು ಪತ್ರಿಯಿಸಿದ್ದಾರೆ.

    ಕೊರೊನಾ ಲಾಕ್‍ಡೌನ್ ಪರಿಣಾಮ ನಿರ್ಗತಿಕ ಮತ್ತು ಪಾಲಿಕೆ ಪೌರ ಕಾರ್ಮಿಕರಿರು ಊಟ ಸಿಗದೇ ಪರದಾಡುತ್ತಿದ್ದಾಗ ದತ್ತಾತ್ರೇಯ ಪಾಟೀಲ್ ಅವರು ಸಹಾಯ ಹಸ್ತ ಚಾಚಿದ್ದರು. ಪಾಲಿಕೆ ಅಧಿಕಾರಿಗಳ ಮುಖಾಂತರ ಎಲ್ಲಾ ನಿರ್ಗತಿಕ ಹಾಗೂ ಪೌರ ಕಾರ್ಮಿಕರಿಗೆ ಊಟದ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಅಷ್ಟೇ ಅಲ್ಲದೆ ಖುದ್ದು ಶಾಸಕರೇ ಪೌರ ಕಾರ್ಮಿಕರಿಗೆ ಊಟ ಬಡಿಸಿ ಯೋಜನೆಗೆ ಚಾಲನೆ ನೀಡಿದ್ದರು.

    ಅದಲ್ಲದೇ ಪಾಲಿಕೆಯ ಎಲ್ಲಾ 55 ವಾರ್ಡ್‍ಗಳಲ್ಲಿ ಸಹ ತರಕಾರಿಯನ್ನು ಮನೆ ಮನೆಗೆ ಕಳುಹಿಸುವ ಯೋಜನೆಗೂ ಸಹ ಚಾಲನೆ ನೀಡಿದ್ದರು. ಹೀಗಾಗಿ ಸಾರ್ವಜನಿಕರು ಯಾರು ಸಹ ಮನೆಯಿಂದ ಹೊರಬರದೇ ಮನೆಯಲ್ಲಿಯೇ ಕುಳಿತುಕೊಳ್ಳಬೇಕು. ಈ ಮೂಲಕ ಕೊರೊನಾ ಸೋಂಕು ತಡೆಯಲು ಎಲ್ಲರು ಸಹ ಕೈ ಜೋಡಿಸಬೇಕು ಎಂದು ದತ್ತಾತ್ರೇಯ ಪಾಟೀಲ್ ಮನವಿ ಮಾಡಿಕೊಂಡಿದ್ದರು.

  • ಮಧ್ಯಪ್ರದೇಶ ಕಾಂಗ್ರೆಸ್ ಬಂಡಾಯ ಶಾಸಕನ ಪುತ್ರಿ ಆತ್ಮಹತ್ಯೆಗೆ ಶರಣು

    ಮಧ್ಯಪ್ರದೇಶ ಕಾಂಗ್ರೆಸ್ ಬಂಡಾಯ ಶಾಸಕನ ಪುತ್ರಿ ಆತ್ಮಹತ್ಯೆಗೆ ಶರಣು

    ಜೈಪುರ: ಮಧ್ಯಪ್ರದೇಶ ಕಾಂಗ್ರೆಸ್‍ನ ಬಂಡಾಯ ಶಾಸಕ ಸುರೇಶ್ ಧಾಕಾಡ್ ಅವರ ಪುತ್ರಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.

    ರಾಜಸ್ಥಾನದ ಬರಾನ್ ಜಿಲ್ಲೆಯ ಗಂಡನ ಮನೆಯಲ್ಲಿ ಜ್ಯೋತಿ(24) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಸ್ಖೆದಾ ಗ್ರಾಮದ ಪತಿಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕುತ್ತಿಗೆಯ ಬಳಿ ಗಾಯದ ಗುರುತುಗಳಿವೆ.

    ಗುರುವಾರ ಹಾಗೂ ಶುಕ್ರವಾರದ ಮಧ್ಯರಾತ್ರಿ ಘಟನೆ ನಡೆದಿದೆ ಎಂದು ಕೇಲ್ವಾಡಾ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ನಂದ್ ಸಿಂಗ್ ಮಾಹಿತಿ ನೀಡಿದ್ದಾರೆ.

    ಇದು ಆತ್ಮಹತ್ಯೆ ಪ್ರಕರಣವಾಗಿದ್ದು, ಈ ಕುರಿತು ತನಿಖೆ ಪ್ರಾರಂಭಿಸಲಾಗುತ್ತಿದೆ. ಮಹಿಳೆಯ ಅಳಿಯಂದಿರ ಪೈಕಿ ಯಾರೂ ಪೊಲೀಸರೊಂದಿಗೆ ಮಾತನಾಡುತ್ತಿಲ್ಲ. ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದ್ದು, ವರದಿಗಾಗಿ ಕಾಯುತ್ತಿದ್ದೇವೆ ಎಂದು ನಂದ್ ಸಿಂಗ್ ಮಾಹಿತಿ ನೀಡಿದ್ದಾರೆ.

    ಯುವತಿಯ ತಂದೆ ಸುರೇಶ್ ಧಾಕಡ್ ಅವರು ಮಧ್ಯಪ್ರದೇಶದ ಪೊಹ್ಹರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಅಲ್ಲದೆ ಇತ್ತೀಚೆಗೆ ಮಧ್ಯಪ್ರದೇಶದ ಕಾಂಗ್ರೆಸ್‍ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರಿದ್ದ 22 ಜನ ರೆಬೆಲ್ ಕಾಂಗ್ರೆಸ್ ಶಾಸಕರ ಪೈಕಿ ಇವರೂ ಒಬ್ಬರಾಗಿದ್ದಾರೆ.

    ಜ್ಯೋತಿ ಅವರು ಡಾ.ಜೈ ಸಿಂಗ್ ಮೆಹ್ತಾ ಅವರನ್ನು ವಿವಾಹವಾಗಿದ್ದರು. ಡಾ.ಜೈ ಸಿಂಗ್ ಶಹಾಬಾದ್‍ನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಕುಟುಂಬ ಬರಾನ್ ಜಿಲ್ಲೆಯ ಬಸ್ಖೇದಾ ಗ್ರಾಮದಲ್ಲಿ ವಾಸವಾಗಿತ್ತು. ದಂಪತಿಗೆ ಎರಡು ವರ್ಷದ ಒಂದು ಮಗುವಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

  • ಹಾರ್ಸ್ ರೈಡರ್ ಜೊತೆ ಪುತ್ರಿ ಎಂಗೇಜ್- ಬಿಲ್ ಗೇಟ್ಸ್ ಅಚ್ಚರಿಯ ಪ್ರತಿಕ್ರಿಯೆ

    ಹಾರ್ಸ್ ರೈಡರ್ ಜೊತೆ ಪುತ್ರಿ ಎಂಗೇಜ್- ಬಿಲ್ ಗೇಟ್ಸ್ ಅಚ್ಚರಿಯ ಪ್ರತಿಕ್ರಿಯೆ

    ವಾಷಿಂಗ್ಟನ್: ವಿಶ್ವದ ಆಗರ್ಭ ಶ್ರೀಮಂತ, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರ ಪುತ್ರಿ ಜೆನ್ನಿಫರ್ ಗೇಟ್ಸ್ ತನ್ನ ಗೆಳೆಯ, ಕುದುರೆ ಸವಾರ ಜೊತೆ ಎಂಗೇಜ್ ಆಗಿದ್ದಾರೆ.

    ಜೆನ್ನಿಫರ್ ಗೇಟ್ಸ್ ಗುರುವಾರ ತಮ್ಮ ಇನ್‍ಸ್ಟಾದಲ್ಲಿ ತನ್ನ ಗೆಳೆಯ, ಹಾರ್ಸ್ ರೈಡಿಂಗ್ ಕ್ರೀಡಾಪಟು ನಯೆಲ್ ನಾಸರ್ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದರು. ಈ ಫೋಟೋ ನೋಡಿ ಸ್ವತಃ ಬಿಲ್ ಗೇಟ್ಸ್ ಪ್ರತಿಕ್ರಿಯೆ ನೀಡಿದ್ದಾರೆ.

    ಪೋಸ್ಟ್ ನಲ್ಲಿ ಜೆನ್ನಿಫರ್, “ನಯೆಲ್ ನಾಸರ್, ನಿಮ್ಮಂತವರು ಈ ಪ್ರಪಂಚದಲ್ಲಿ ನೀವು ಒಬ್ಬರೇ ಎಂದು ಅನಿಸುತ್ತೆ. ನೀವು ನನಗೆ ಇಂತಹ ಜಾಗದಲ್ಲಿ ಪ್ರಪೋಸ್ ಮಾಡಿದ್ದು, ನನಗೆ ತುಂಬಾ ಖುಷಿಯಾಯಿತು. ನಾನು ನನ್ನ ಪೂರ್ತಿ ಜೀವನವನ್ನು ಕಲಿಯುತ್ತಾ, ನಗುತ್ತಾ, ಪರಸ್ಪರ ಪ್ರೀತಿಸುತ್ತಾ ಕಳೆಯಲು ಬಯಸುತ್ತೇನೆ. ನಾನು ಕೋಟಿ ಬಾರಿ ನಿಮ್ಮನ್ನು ಪ್ರೀತಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.

    ನಯೆಲ್ ಕೂಡ ಜೆನ್ನಿಫರ್ ಜೊತೆಗಿರುವ ಫೋಟೋ ಹಾಕಿ ಅದಕ್ಕೆ, “ಆಕೆ ನನ್ನ ಪ್ರೀತಿಯನ್ನು ಒಪ್ಪಿಕೊಂಡಳು. ಈ ಕ್ಷಣ ನಾನು ಪ್ರಪಂಚದ ಅತ್ಯಂತ ಅದೃಷ್ಟಶಾಲಿ ವ್ಯಕ್ತಿ ಎಂದು ಅನಿಸುತ್ತಿದೆ. ನನ್ನ ಜೀವನದ ಈ ಸುಂದರವಾದ ಪ್ರಯಾಣವನ್ನು ಶುರು ಮಾಡಲು ಕಾಯಲು ಆಗುತ್ತಿಲ್ಲ. ನನ್ನ ಕಲ್ಪನೆಯಲ್ಲೂ ನಿನ್ನ ಬಿಟ್ಟು ಇರಲು ನನಗೆ ಸಾಧ್ಯವಿಲ್ಲ. ನನ್ನ ಈ ಜೀವನ ಯಾವಗಲೂ ನಿನ್ನದೆ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಜೆನ್ನಿಫರ್ ಅವರ ಈ ಪೋಸ್ಟ್ ಗೆ ನಾನು ಸಂಪೂರ್ಣವಾಗಿ ರೋಮಾಂಚನಗೊಂಡಿದ್ದೇನೆ. ನಿಮ್ಮಬ್ಬರಿಗೂ ಶುಭಾಶಯಗಳು ಎಂದು ಕಮೆಂಟ್ ಮಾಡುವ ಮೂಲಕ ಬಿಲ್ ಗೇಟ್ಸ್ ಪ್ರತಿಕ್ರಿಯಿಸಿದ್ದಾರೆ. ಇನ್ನು ಬಿಲ್ ಗೇಟ್ಸ್ ಅವರ ಪತ್ನಿ ಮೆಲಿಂದಾ ಗೇಟ್ಸ್ ಅವರು ಕೂಡ ಕಮೆಂಟ್ ಮಾಡುವ ಮೂಲಕ ಜೋಡಿಗೆ ಶುಭ ಕೋರಿದ್ದಾರೆ. ಸ್ಟ್ಯಾನ್‍ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಓದುವಾಗ ಜೆನ್ನಿಫರ್ ಹಾಗೂ ನಾಸರ್ ಪರಸ್ಪರ ಪ್ರೀತಿಸಲು ಶುರು ಮಾಡಿದ್ದರು. ಇವರ ಪ್ರೀತಿ ನಾಲ್ಕು ವರ್ಷ ಮುಂದುವರಿದಿದೆ.

    ಸ್ಟ್ಯಾನ್‍ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಜೆನ್ನಿಫರ್ ಬಯೋಲಜಿಯಲ್ಲಿ ಪದವಿ ಪಡೆದಿದ್ದಾರೆ. ಇನ್ನು ನಯೆಲ್ ವಜ್ರದ ಉಂಗುರ ನೀಡಿ ಪ್ರಪೋಸ್ ಮಾಡಿದ್ದು, ತಕ್ಷಣ ಜೆನ್ನಿಫರ್ ಅವರ ಪ್ರೀತಿಯನ್ನು ಒಪ್ಪಿಕೊಂಡಿದ್ದಾರೆ. ನಯೆಲ್ ಈಜಿಪ್ಟ್‍ನಲ್ಲಿ ಹುಟ್ಟಿ ಕುವೈಟ್‍ನಲ್ಲಿ ಬೆಳೆದಿದ್ದಾರೆ. ಸ್ಟ್ಯಾನ್‍ಫೋರ್ಡ್ ವಿಶ್ವವಿದ್ಯಾಲಯದಲ್ಲಿ ನಯೆಲ್ ಎಕನಾಮಿಕ್ಸ್‍ನಲ್ಲಿ ಮ್ಯಾನೇಜ್‍ಮೆಂಟ್ ಪದವಿ ಪಡೆದಿದ್ದಾರೆ. ನಯೆಲ್ 2020ರ ಜಪಾನ್ ನ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಈಜಿಪ್ಟ್ ದೇಶದ ಪರವಾಗಿ ಹಾರ್ಸ್ ರೈಡಿಂಗ್ ಕ್ರೀಡೆಯಲ್ಲಿ ಭಾಗವಹಿಸಲಿದ್ದಾರೆ.

  • ಲಂಡನ್‍ನಲ್ಲಿ ಪ್ರೀತಿ – ಹೈದರಾಬಾದ್ ಗೆಳೆಯನ ಜೊತೆ ರಾಮುಲು ಪುತ್ರಿಯ ನಿಶ್ಚಿತಾರ್ಥ

    ಲಂಡನ್‍ನಲ್ಲಿ ಪ್ರೀತಿ – ಹೈದರಾಬಾದ್ ಗೆಳೆಯನ ಜೊತೆ ರಾಮುಲು ಪುತ್ರಿಯ ನಿಶ್ಚಿತಾರ್ಥ

    ಬೆಂಗಳೂರು: ಆರೋಗ್ಯ ಸಚಿವ ಶ್ರೀರಾಮುಲು ಪುತ್ರಿಯ ಅದ್ಧೂರಿ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮ ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ನಡೆಯುತ್ತಿದೆ. ಶ್ರೀರಾಮುಲು ಪುತ್ರಿ ಕುಮಾರಿ ರಕ್ಷಿತಾ ವಿವಾಹ ನಿಶ್ಚಿತಾರ್ಥ ಹೈದರಾಬಾದ್ ಉದ್ಯಮಿ ರವಿಕುಮಾರ್ ಪುತ್ರ ಲಲಿತ್ ಕುಮಾರ್ ಅವರ ಜೊತೆ ನೆರವೇರಿದೆ.

    ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಅದ್ದೂರಿ ವಿವಾಹ ನಿಶ್ಚಿತಾರ್ಥ ನಡೆಯುತ್ತಿದೆ. ಶ್ರೀರಾಮುಲು ಕುಟುಂಬಸ್ಥರು ಮತ್ತು ಸಂಬಂಧಿಕರಲ್ಲಿ ಸಂಭ್ರಮ ಮನೆ ಮಾಡಿದ್ದು ಸಂಪ್ರದಾಯ ಬದ್ಧವಾಗಿ ನಿಶ್ಚಿತಾರ್ಥ ನಡೆಯುತ್ತಿದೆ.

    ರಕ್ಷಿತಾ ಹಾಗೂ ಲಲಿತ್ ಲಂಡನ್‍ನಲ್ಲಿ ಎಂಬಿಎ ಓದಿದ್ದಾರೆ. ಅಲ್ಲಿ ಓದುತ್ತಿದ್ದ ವೇಳೆ ಇಬ್ಬರಿಗೂ ಪರಿಚಯವಾಗಿ ಸ್ನೇಹ ಬೆಳೆದಿತ್ತು, ಸಮಯ ಕಳೆದಂತೆ ಈ ಸ್ನೇಹ ಪ್ರೀತಿಗೆ ತಿರುಗಿತ್ತು. ತಮ್ಮ ಪ್ರೀತಿಯ ಬಗ್ಗೆ ರಕ್ಷಿತಾ ಹಾಗೂ ಲಲಿತ್ ಮನೆಯವರ ಬಳಿ ಹೇಳಿದಾಗ ಪೋಷಕರು ಅವರಿಬ್ಬರ ಪ್ರೀತಿಯನ್ನು ಒಪ್ಪಿಕೊಂಡರು. ಹೀಗಾಗಿ ರಕ್ಷಿತಾ, ಲಲಿತ್ ಮದುವೆಯನ್ನು ಕುಟುಂಬಸ್ಥರು ನಿಶ್ಚಯಿಸಿದರು.

    ಶ್ರೀರಾಮುಲು ದಂಪತಿಗೆ ಒಟ್ಟು ನಾಲ್ವರು ಮಕ್ಕಳು. ರಕ್ಷಿತಾ, ದೀಕ್ಷಿತಾ, ಅಂಕಿತಾ ಹಾಗೂ ಧನುಷ್ ಅವರ ಮಕ್ಕಳ ಹೆಸರು. ರಕ್ಷಿತಾ ಪ್ರಥಮ ಪುತ್ರಿಯಾಗಿದ್ದು, ಮಗಳ ನಿಶ್ಚಿತಾರ್ಥವನ್ನು ಆಕೆ ಇಷ್ಟಪಟ್ಟ ಹುಡುಗನ ಜೊತೆಗೆ ಶ್ರೀರಾಮುಲು ಅವರು ಅದ್ಧೂರಿಯಾಗಿ ಮಾಡುತ್ತಿದ್ದಾರೆ. ಲಂಡನ್‍ನಲ್ಲಿ ಪ್ರೀತಿಯಲ್ಲಿ ಬಿದ್ದ ಜೋಡಿ ಇಂದು ಬೆಂಗಳೂರಿನಲ್ಲಿ ಅದ್ಧೂರಿ ನಿಶ್ಚಿತಾರ್ಥ ಮಾಡಿಕೊಂಡಿದೆ.

    ಅದ್ದೂರಿ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ, ಸಚಿವರು, ಬಿಜೆಪಿ ಶಾಸಕರು ಹಾಗೂ ಹಲವು ಗಣ್ಯರು ಭಾಗಿಯಾಗಲಿದ್ದಾರೆ. ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಆಗಮಿಸಿ ಗಣ್ಯರು ಜೋಡಿಗೆ ಆರ್ಶಿವಾದ ಮಾಡಿ ಶುಭ ಕೋರಿದ್ದಾರೆ.

  • ತಾಯಿಯನ್ನು ಟ್ರೋಲ್ ಮಾಡಿದವರ ವಿರುದ್ಧ ರೊಚ್ಚಿಗೆದ್ದ ರಾನು ಪುತ್ರಿ

    ತಾಯಿಯನ್ನು ಟ್ರೋಲ್ ಮಾಡಿದವರ ವಿರುದ್ಧ ರೊಚ್ಚಿಗೆದ್ದ ರಾನು ಪುತ್ರಿ

    ಮುಂಬೈ: ಇಂಟೆರ್‌ನೆಟ್ ಸ್ಟಾರ್ ರಾನು ಮೊಂಡಲ್ ತಮ್ಮ ಫೇಕ್ ಫೋಟೋದಲ್ಲಿನ ಮೇಕಪ್‍ನಿಂದಾಗಿ ಸಾಕಷ್ಟು ಟ್ರೋಲ್ ಆಗಿದ್ದು, ಅವರ ಮೇಲೆ ಹಲವು ಮಿಮ್ಸ್‌ಗಳನ್ನು ಮಾಡಲಾಗಿತ್ತು. ಈಗ ತಾಯಿಯನ್ನು ಟ್ರೋಲ್ ಮಾಡಿದವರ ವಿರುದ್ಧ ರಾನು ಪುತ್ರಿ ರೊಚ್ಚಿಗೆದ್ದಿದ್ದಾರೆ.

    ಕೆಲವು ದಿನಗಳ ಹಿಂದೆ ರಾನು ಅವರ ಫೋಟೋವನ್ನು ಎಡಿಟ್ ಮಾಡಿ ಸಾಕಷ್ಟು ಟ್ರೋಲ್ ಮಾಡಲಾಗಿತ್ತು. ಆದರೆ ಟ್ರೋಲ್‍ಗಳ ಬಗ್ಗೆ ರಾನು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಈಗ ಅವರ ಮಗಳು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಟ್ರೋಲ್ ಹಾಗೂ ಮಿಮ್ಸ್ ಮಾಡಿದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ರಾನು ಮೊಂಡಲ್ ಮೇಕಪ್ ಫೋಟೋ ವೈರಲ್ – ನೆಟ್ಟಿಗರಿಂದ ಸಿಕ್ಕಾಪಟ್ಟೆ ಟ್ರೋಲ್

    ರಾನು ಅವರ ಮಗಳು ಎಲಿಜಬೆಥ್, “ನನ್ನ ತಾಯಿಯನ್ನು ಈ ರೀತಿ ಟ್ರೋಲ್ ಮಾಡಿರುವುದು ನೋಡಿ ನನಗೆ ತುಂಬಾ ದುಃಖವಾಗಿದೆ. ನನ್ನ ತಾಯಿಗೆ ಮೊದಲಿನಿಂದಲೂ ಆ್ಯಟಿಟ್ಯೂಡ್ ಸಮಸ್ಯೆ ಇದೆ. ಮೊದಲಿನಿಂದಲೂ ಅವರು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಜೀವನದಲ್ಲಿ ತುಂಬಾ ಕಷ್ಟಪಟ್ಟ ವ್ಯಕ್ತಿ ಯಶಸ್ಸು ಪಡೆದಾಗ ಜನರು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ ಎಂಬುದು ತುಂಬಾ ದುಃಖದ ಸಂಗತಿ” ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ರಾನು ಮೇಕಪ್ ಫೋಟೋ ವೈರಲ್- ಮೇಕಪ್ ಆರ್ಟಿಸ್ಟ್‌ನಿಂದ ನಿಜವಾದ ಫೋಟೋ ಶೇರ್

    ಉತ್ತರ ಪ್ರದೇಶದ ಕಾನ್ಪುರದ ಬ್ಯೂಟಿ ಪಾರ್ಲರ್ ಕಾರ್ಯಕ್ರಮಕ್ಕೆ ರಾನು ಆಗಮಿಸಿದ್ದರು. ಈ ವೇಳೆ ಸ್ವತಃ ಮೇಕಪ್ ಆರ್ಟಿಸ್ಟ್ ಅವರಿಗೆ ಮೇಕಪ್ ಮಾಡಿದ್ದರು. ಆದರೆ ರಾನು ಅವರ ಈ ಫೋಟೋವನ್ನು ಕಿಡಿಗೇಡಿಗಳು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದನ್ನು ನೋಡಿದ ನೆಟ್ಟಿಗರು ರಾನು ಅವರನ್ನು ಟ್ರೋಲ್ ಮಾಡಲು ಶುರು ಮಾಡಿದ್ದರು. ಅಲ್ಲದೆ ಅವರ ಮೇಲೆ ಮಿಮ್ಸ್‍ಗಳನ್ನು ಮಾಡಿದ್ದರು. ಇದನ್ನೂ ಓದಿ: ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಅಭಿಮಾನಿಗೆ ‘ಡೋಂಟ್ ಟಚ್ ಮಿ’ ಎಂದ ರಾನು: ವಿಡಿಯೋ

    ರಾನು ಅವರ ಫೇಕ್ ಮೇಕಪ್ ಫೋಟೋ ವೈರಲ್ ಆಗಿ ಸಾಕಷ್ಟು ಟ್ರೋಲ್ ಆಗುತ್ತಿತ್ತು. ಇದನ್ನು ನೋಡಿದ ಮೇಕಪ್ ಆರ್ಟಿಸ್ಟ್ ಸಂಧ್ಯಾ ಈ ಬಗ್ಗೆ ಪ್ರತಿಕ್ರಿಯಿಸಿದ್ದರು. ಅಲ್ಲದೆ ತಮ್ಮ ಇನ್‍ಸ್ಟಾದಲ್ಲಿ ತಾವು ಮಾಡಿದ ಮೇಕಪ್ ಫೋಟೋ ಹಾಗೂ ನಕಲಿ ಫೋಟೋವನ್ನು ಹಂಚಿಕೊಂಡಿದ್ದರು.