Tag: ಪುತ್ತಿಗೆ ಶ್ರೀ

  • `ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೂ ಪಹಲ್ಗಾಮ್ ಘಟನೆಗೂ ವ್ಯತ್ಯಾಸವಿಲ್ಲ: ಪೇಜಾವರ ಶ್ರೀ

    `ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೂ ಪಹಲ್ಗಾಮ್ ಘಟನೆಗೂ ವ್ಯತ್ಯಾಸವಿಲ್ಲ: ಪೇಜಾವರ ಶ್ರೀ

    – ಇದು ಭಯೋತ್ಪಾದನೆ ಅಲ್ಲ, ಜಾಗತಿಕ ಷಡ್ಯಂತ್ರ; ಉಡುಪಿ ಪುತ್ತಿಗೆ ಶ್ರೀ

    ಉಡುಪಿ: ಪಹಲ್ಗಾಮ್ (Pahalgam) ದುರ್ಘಟನೆಯಿಂದ ಬಹಳ ಆಘಾತವಾಗಿದೆ. `ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೂ ಈ ಘಟನೆಗೂ ವ್ಯತ್ಯಾಸವಿಲ್ಲ ಎಂದು ಉಡುಪಿ (Udupi) ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (Pejawara Shree) ಹೇಳಿದ್ದಾರೆ.

    ಪಹಲ್ಗಾಮ್‌ನಲ್ಲಿ ಹಿಂದೂಗಳ ಮೇಲೆ ಉಗ್ರರು ದಾಳಿ ನಡೆಸಿದ ವಿಚಾರವಾಗಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆ ಕಡೆ ಪಶ್ಚಿಮ ಬಂಗಾಳ, ಈ ಕಡೆ ಕಾಶ್ಮೀರದಲ್ಲಿ (Kashmir) ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ದಿ ಕಾಶ್ಮೀರ್ ಫೈಲ್ಸ್ ಚಿತ್ರಕ್ಕೆ ವ್ಯತಿರಿಕ್ತ ಇಲ್ಲದೇ ಈ ಘಟನೆ ನಡೆದಿದೆ. ಈ ಘಟನೆ ಬಹಳ ಆಘಾತಕಾರಿ, ಸರ್ಕಾರ ಇದಕ್ಕೆ ಬಲವಾದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: Pahalgam Terror Attack | ಭಾರತ ಶೀಘ್ರದಲ್ಲೇ ಪ್ರತೀಕಾರ ತೀರಿಸಿಕೊಳ್ಳಲಿದೆ – ಉಗ್ರರಿಗೆ ರಾಜನಾಥ್‌ ಸಿಂಗ್‌ ಎಚ್ಚರಿಕೆ

    ಇಂತಹ ಘಟನೆ ದೇಶದಲ್ಲೆಲ್ಲೂ ಮರುಕಳಿಸಬಾರದು. ದೇಶದೊಳಗೆ ಸೂಕ್ತ ಭದ್ರತೆ ಕೈಗೊಳ್ಳುವಂತೆ ಕೇಂದ್ರ ಸರ್ಕಾರವನ್ನು ಮನವಿ ಮಾಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ವಿಶೇಷ ವಿಮಾನ – ಪ್ರಹ್ಲಾದ್ ಜೋಶಿ

    ಜಾಗತಿಕ ಷಡ್ಯಂತ್ರ: ಪುತ್ತಿಗೆ ಶ್ರೀ
    ಕಾಶ್ಮೀರದಲ್ಲಿ ಹಿಂದೂಗಳ ಮೇಲಿನ ದಾಳಿಯಿಂದ ವ್ಯಾಕುಲರಾಗಿದ್ದೇವೆ. ಇದು ಭಯೋತ್ಪಾದನೆ ಅಲ್ಲ ಜಾಗತಿಕ ಷಡ್ಯಂತ್ರ ಎಂದು ಉಡುಪಿ ಪರ್ಯಾಯ ಪುತ್ತಿಗೆ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ (Puttige Shree) ಕಳವಳ ವ್ಯಕ್ತಪಡಿಸಿದರು. ಇದನ್ನೂ ಓದಿ: ಇಂದು ಮನೆಗೆ ಮರಳಬೇಕಿದ್ದ ಉದ್ಯಮಿ ಉಗ್ರರ ಗುಂಡಿಗೆ ಬಲಿ – ಇಡೀ ಗ್ರಾಮದಲ್ಲಿ ಮಡುಗಟ್ಟಿದ ಮೌನ

    ಹಿಂದೂಗಳ ಮೇಲೆ ಉಗ್ರರ ಆಕ್ರಮಣ ಆತಂಕಕಾರಿ. ಸನಾತನ ಧರ್ಮದ ಅಸ್ತಿತ್ವ ಭಾರತದಲ್ಲಿ ನಾಶವಾಗುವ ಆತಂಕ ಶುರುವಾಗಿದೆ. ಈ ಘಟನೆಯನ್ನು ಖಂಡಿಸುತ್ತೇವೆ ಸರ್ಕಾರ ಎಚ್ಚೆತ್ತು ಶಾಶ್ವತ ಪರಿಹಾರ ಮಾಡಬೇಕು. ಕೇರಳ, ಪಶ್ಚಿಮ ಬಂಗಾಳ ಕಾಶ್ಮೀರದ ಘಟನೆಯಲ್ಲಿ ಮಾಸ್ಟರ್ ಪ್ಲಾನ್ ವರ್ಕ್ ಮಾಡುತ್ತಿದೆ ದೇಶದಲ್ಲಿ ಕಾಣದ ಕೈಗಳು ಸಕ್ರಿಯವಾಗಿ ಕೆಲಸ ಮಾಡುತ್ತಿವೆ ಎಂದರು. ಇದನ್ನೂ ಓದಿ: ಅಸ್ಸಾಂ ಪ್ರೊಫೆಸರ್ ದೇಬಶೀಶ್ ಭಟ್ಟಾಚಾರ್ಯ ಜೀವ ಉಳಿಸಿದ ಕಲಿಮಾ

    ಹಿಂದುಗಳನ್ನು ನಾಶ ಮಾಡುವ ಹುನ್ನಾರ
    ಸರ್ಕಾರ ವಿಮರ್ಶೆ ಮಾಡಿ ದುಷ್ಕೃತ್ಯಗಳ ಮೂಲಬೇರು ಕಿತ್ತೆಸೆಯಬೇಕು. ಉಗ್ರವಾದಿ ಸಮಸ್ಯೆಯನ್ನು ಪೂರ್ಣ ನಿರ್ಮೂಲನೆ ಮಾಡಲು ಒತ್ತಾಯಿಸುತ್ತೇನೆ. ಉಗ್ರರು, ನಿರಪರಾಧಿಗಳನ್ನು ಸಾರ್ವಜನಿಕರನ್ನು ಕೊಲ್ಲುತ್ತಾರೆ ಎಂಬ ಭಾವನೆ ಇತ್ತು. ಹಿಂದೂಗಳನ್ನು ನಾಶ ಮಾಡುವುದೇ ಇವರ ಹೊನ್ನಾರ ಎಂಬುದು ಸ್ಪಷ್ಟವಾಗಿದೆ. ಕೇಂದ್ರ ಸರ್ಕಾರ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದು ಹೇಳಿದರು.

  • ‘ಇಸ್ಲಾಂ ಭಯೋತ್ಪಾದನೆ ಧರ್ಮವಲ್ಲ’ ಪುಸ್ತಕ ಬಿಡುಗಡೆ ಮಾಡಿದ ಪುತ್ತಿಗೆ ಶ್ರೀ ಫೋಟೋ ವೈರಲ್ – ಹಿಂದೂ ಸಂಘಟನೆ ಕಿಡಿ

    ‘ಇಸ್ಲಾಂ ಭಯೋತ್ಪಾದನೆ ಧರ್ಮವಲ್ಲ’ ಪುಸ್ತಕ ಬಿಡುಗಡೆ ಮಾಡಿದ ಪುತ್ತಿಗೆ ಶ್ರೀ ಫೋಟೋ ವೈರಲ್ – ಹಿಂದೂ ಸಂಘಟನೆ ಕಿಡಿ

    ಉಡುಪಿ: ಪುತ್ತಿಗೆ ಶ್ರೀಗಳು (Puttige Shree) ಇಸ್ಲಾಂ ಭಯೋತ್ಪಾದನೆ ಧರ್ಮವಲ್ಲ ಎಂಬ ಪುಸ್ತಕವನ್ನು ರಿಲೀಸ್ (Book Release) ಮಾಡಿದ್ರು. ಇದಕ್ಕೆ ಸಂಬಂಧಿಸಿದ ಫೋಟೋ (Photo), ವೀಡಿಯೋಗಳನ್ನು ಕೆಲ ಕಿಡಿಗೇಡಿಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಇದು ಈಗಿನದ್ದೇನೋ ಎಂಬಂತೆ ಹಿಂದೂ ಸಂಘಟನೆಗಳು ಪುತ್ತಿಗೆ ಶ್ರೀಗಳ ವಿರುದ್ಧ ಸಿಡಿದಿವೆ.

    ಕೂಡಲೇ ಪುತ್ತಿಗೆ ಶ್ರೀಗಳು ಕ್ಷಮೆ ಕೇಳಬೇಕು ಇಲ್ಲ ಅಂದ್ರೆ ನಿಮ್ಮ ಮಠ ಉಳಿಯಲ್ಲ ಎಂದು ಪ್ರಮೋದ್ ಮುತಾಲಿಕ್ (Pramod Muthalik) ಎಚ್ಚರಿಕೆ ನೀಡಿದ್ದಾರೆ. ಈ ಬೆನ್ನಲ್ಲೇ ಶ್ರೀಮಠ ಸ್ಪಷ್ಟನೆ ನೀಡಿದ್ದು, ಸಮಾಜದಲ್ಲಿ ಒಡಕುಂಟು ಮಾಡಲು ಕೆಲವರು ಹತ್ತು ವರ್ಷಗಳ ಹಿಂದಿನ ಕಾರ್ಯಕ್ರಮದ ಬಗ್ಗೆ ವೈರಲ್ ಮಾಡ್ತಿದ್ದಾರೆ. ಸನಾತನ ಧರ್ಮದ ಮೊದಲ ಆದ್ಯತೆ ಕೂಡ ಶಾಂತಿ ಸೌಹಾರ್ದತೆ. ಶ್ರೀಗಳ ವಿಶ್ವತೋಮುಖ ವ್ಯಕ್ತಿತ್ವ ಅರಿಯದೆ ಕೆಲ ವಿಕೃತ ಮನಸ್ಸಿನವರು ಹೀಗೆ ಮಾಡ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ಇದನ್ನೂ ಓದಿ: ಕಾರ್ಕಳದಿಂದ ಮುತಾಲಿಕ್ ಸ್ಪರ್ಧೆ – ಬಿಜೆಪಿಯಿಂದ ಅಭ್ಯರ್ಥಿ ಹಾಕಬೇಡಿ: ಶ್ರೀರಾಮಸೇನೆ ಒತ್ತಾಯ

    ಪೂಜ್ಯರೇ ಯಾವ ಪುಸ್ತಕವನ್ನು ನೀವು ಬಿಡುಗಡೆ ಮಾಡಿದ್ದೀರಿ? ನಾನು ಹೇಳುತ್ತೇನೆ ನೀವು ಕ್ಷಮೆ ಕೇಳಬೇಕು. ಇಲ್ಲಾಂದ್ರೆ ನಾಳೆ ನಿಮ್ಮ ಮಠ ಕೂಡ ಉಳಿಯಲ್ಲ ಅನ್ನೋದನ್ನು ನಾನು ನೆನಪಿಸುತ್ತೇನೆ. ಹಿಂದೂ ಧರ್ಮದ ಪ್ರತಿಪಾದಕರಾದ ನೀವು ಇಸ್ಲಾಂ ಭಯೋತ್ಪಾದಕ ಧರ್ಮ ಅಲ್ಲ ಎನ್ನುವಂತ ಪುಸ್ತಕವನ್ನು ಬಿಡುಗಡೆ ಮಾಡುವಂತಹ ಅಗತ್ಯತೆ ಏನಿತ್ತು? ಮಸೀದಿಯನ್ನು ಉದ್ಘಾಟಿಸುವಂತದ್ದು ಇಂತಹ ಪ್ರವೃತ್ತಿಯಿಂದಲೇ ಇಸ್ಲಾಂ ಬೆಳೆಯುತ್ತಿದೆ. ಹಿಂದೂ ಧರ್ಮ ನಾಶವಾಗುತ್ತಿದೆ. ಇದು ನಿಮ್ಮ ಗಮನಕ್ಕೂ ಕೂಡ ಬಂದಿದೆ ಎಂದು ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸಿಡಿಗಳು ಇದ್ರೆ ಕೋವಿಡ್, ಅತಿವೃಷ್ಟಿ ಬರಲ್ಲ ದರಿದ್ರ ಬರುತ್ತದೆ: ಸಿ.ಎಂ ಇಬ್ರಾಹಿಂ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಂಧಿಯಾಗಿದ್ದ ರಾಮ-ಲಕ್ಷ್ಮಣರನ್ನು ಬಿಡುಗಡೆಗೊಳಿಸಿದ ನೆನಪು ಬಿಚ್ಚಿಟ್ಟ ಉಡುಪಿಯ ಪುತ್ತಿಗೆ ಶ್ರೀ

    ಬಂಧಿಯಾಗಿದ್ದ ರಾಮ-ಲಕ್ಷ್ಮಣರನ್ನು ಬಿಡುಗಡೆಗೊಳಿಸಿದ ನೆನಪು ಬಿಚ್ಚಿಟ್ಟ ಉಡುಪಿಯ ಪುತ್ತಿಗೆ ಶ್ರೀ

    ಉಡುಪಿ: ರಾಮಮಂದಿರ ಶಿಲಾನ್ಯಾಸ ಸಂದರ್ಭ ತಮ್ಮ ಮಂದಿರ ಹೋರಾಟದ ನೆನಪುಗಳನ್ನು ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಬಿಚ್ಚಿಟ್ಟಿದ್ದಾರೆ.

    ಅನೇಕ ದಶಕಗಳಿಂದ ನಾವೆಲ್ಲರೂ ಒಂದುಗೂಡಿ ಭಾವನಾತ್ಮಕವಾಗಿ ಯಾವ ಹೋರಾಟವನ್ನು ಮಾಡಿದ್ದೇವೊ ಅದೀಗ ಕೈಗೂಡಿದೆ. ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣವಾಗುತ್ತಿದೆ. ದಶಕಗಳಿಂದ ರಾಮ ಮಂದಿರದ ಚಳುವಳಿಯಲ್ಲಿ ನಾವು ಸಕ್ರಿಯವಾಗಿ ಭಾಗವಹಿಸಿದ್ದೆವು.

    ರಾಮಲಲ್ಲಾನ ವಿಗ್ರಹ ಬೀಗಮುದ್ರೆಯೊಂದಿಗೆ ಬಂಧಿಯಾಗಿತ್ತು. ಆ ಬೀಗಮುದ್ರೆ ಒಡೆಯುವ ವೇಳೆ ನಾನೂ ಪೇಜಾವರ ಶ್ರೀವಿಶ್ವೇಶತೀರ್ಥರ ಜೊತೆ ಹಾಜರಿದ್ದೆ. ಕಲ್ಲಿನಿಂದ ಬೀಗ ಒಡೆಯಲು ಜಜ್ಜುವಾಗ ತಪ್ಪಿ ಹೋಗುತ್ತಿತ್ತು. ಕೊನೆಗೆ ನಾನು ಕೈಯಲ್ಲಿ ಬೀಗ ಹಿಡಿದೆ. ಯಾರೋ ಭಕ್ತರು ಒಡೆದರು, ರಾಮ ದೇವರು ಬಂಧಮುಕ್ತರಾದರು. ಇದನ್ನು ಕಣ್ತುಂಬಿಕೊಂಡ ಕ್ಷಣ ಈಗಲೂ ಹಚ್ಚ ಹಸುರಾಗಿದೆ. ಆಗ ಮೊಳಗಿದ ರಾಮ ಘೋಷ ಮತ್ತೆಂದೂ ಕೇಳಿಲ್ಲ ಎಂದರು.

    ಅಯೋಧ್ಯೆಯಲ್ಲಿ ಮುಂದೆ ರಾಮನ ವಿಗ್ರಹ ಪ್ರತಿಷ್ಠಾಪನೆಯ ವೇಳೆಯಲ್ಲೂ ಪೇಜಾವರ ಶ್ರೀಗಳೊಂದಿಗೆ ಇದ್ದೆ. ಅನೇಕ ದಶಕಗಳಿಂದ ಭಾವನಾತ್ಮಕ ಹೋರಾಟ ಈಗ ಫಲಿಸುತ್ತಿದೆ. ಭವ್ಯವಾದ ರಾಮಮಂದಿರ ನಿರ್ಮಾಣವಾಗುತ್ತಿದೆ. ಪುತ್ತಿಗೆ ಮಠದಲ್ಲೂ ರಾಷ್ಟ್ರೀಯ ವಿಚಾರ ಸಂಕೀರಣ, ರಾಮಮಂದಿರ ಕುರಿತಾದ ಅನೇಕ ಸಭೆಗಳು ನಡೆದಿತ್ತು. ರಾಮಮಂದಿರ ನಿರ್ಮಾಣ ಅನೇಕ ಕಾಲದ ಆಕಾಂಕ್ಷೆ, ಸಂಕಲ್ಪ ಈಡೇರುತ್ತಿರುವುದು ಸಂತಸವಾಗುತ್ತಿದೆ. ಇಂತಹ ಸಂದರ್ಭದಲ್ಲಿ ನಾವು ಭಗವಂತನಿಗೆ ಕೃತಜ್ಞತೆಯನ್ನು ಸಲ್ಲಿಸಬೇಕು. ಭೂಮಿ ಪೂಜೆ ನಡೆಯುವಾಗ ರಾಮ ದೇವರ ವಿಶೇಷ ಅರ್ಚನೆ ಮಾಡುತ್ತೇವೆ. ಲಕ್ಷ ತುಳಸಿ ಅರ್ಚಿಸುವ ಮೂಲಕ ರಾಮನ ಪೂಜೆ ನಡೆಸ್ತೇವೆ ಎಂದು ಮಾಹಿತಿ ನೀಡಿದರು.

    ಅಳಿಲು ಕೂಡ ರಾಮಸೇತು ನಿರ್ಮಾಣದಲ್ಲಿ ಸೇವೆ ಸಲ್ಲಿಸಿದ್ದಂತೆ, ರಾಮ ಮಂದಿರ ನಿರ್ಮಾಣದಲ್ಲಿ ಪ್ರತಿಯೊಬ್ಬರು ಕೂಡ ತಮ್ಮ ಸೇವೆಯನ್ನು ಅರ್ಪಿಸಬೇಕು. ರಾಮಮಂದಿರ ಭಕ್ತರ ಭಕ್ತಿಯ ಪ್ರತೀಕವಾಗಿ ವಿರಾಜಮಾನವಾಗಲಿ ಎಂದು ಶ್ರೀ ಸುಗುಣೇಂದ್ರ ತೀರ್ಥರು ಹೇಳಿದರು.

  • ಆಸ್ಪತ್ರೆಯಲ್ಲಿ ಕೊರೊನಾ ಮಣಿಸಿ ಮಠ ಸೇರಿದ ಪುತ್ತಿಗೆ ಸ್ವಾಮೀಜಿ

    ಆಸ್ಪತ್ರೆಯಲ್ಲಿ ಕೊರೊನಾ ಮಣಿಸಿ ಮಠ ಸೇರಿದ ಪುತ್ತಿಗೆ ಸ್ವಾಮೀಜಿ

    ಉಡುಪಿ: ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಸ್ವಾಮೀಜಿ ಮಹಾಮಾರಿ ಕೊರೊನಾವನ್ನು ಮಣಿಸಿದ್ದಾರೆ. ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ 12 ದಿನಗಳ ಕಾಲ ಕೋವಿಡ್ 19 ಚಿಕಿತ್ಸೆ ಪಡೆದು ಇಂದು ಡಿಸ್ಚಾರ್ಜ್ ಆಗಿದ್ದಾರೆ.

    ಕೆಎಂಸಿಯಿಂದ ಡಿಸ್ಚಾರ್ಜ್ ಆಗಿ ನೇರವಾಗಿ ಮೂಲ ಮಠಕ್ಕೆ ತೆರಳಿರುವ ಪುತ್ತಿಗೆ ಸ್ವಾಮೀಜಿಗಳ ಆರೋಗ್ಯ ಸ್ಥಿರವಾಗಿದೆ ಎಂದು ಮಠದ ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿದೆ. ಮುಂದಿನ ಹದಿನಾಲ್ಕು ದಿನಗಳ ಕಾಲ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರಿಗೆ ವಿಶ್ರಾಂತಿಯ ಅಗತ್ಯತೆ ಇದೆ. ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರ ಆರೋಗ್ಯ ವಿಚಾರಿಸಲು ಭಕ್ತರು ಮಠಕ್ಕೆ ಬರುವುದು ಬೇಡ ಎಂದು ಮಠ ಹೇಳಿದೆ.

    ಮನೆಯಲ್ಲೇ ಇದ್ದು ದೇವರಲ್ಲಿ ಪ್ರಾರ್ಥಿಸಿ ಎಂದು ಮಠ ವಿನಂತಿಸಿದೆ. ಆಸ್ಪತ್ರೆಯಲ್ಲಿ ಇದ್ದ ಸಂದರ್ಭದಲ್ಲಿ ಯೋಗಕ್ಷೇಮ ವಿಚಾರಿಸಿದ ಹಾಗೂ ಶ್ರೀಗಳ ಶೀಘ್ರ ಆರೋಗ್ಯ ಚೇತರಿಕೆಗೆ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದ ಎಂದು ಪುತ್ತಿಗೆ ಮಠ ಹೇಳಿದೆ. ಸದ್ಯ ಸುಗುಣೇಂದ್ರ ತೀರ್ಥರು ಏಕಾಂತದಲ್ಲಿದ್ದು, ವಿಶ್ರಾಂತಿ ಮಾಡುತ್ತಿದ್ದಾರೆ. ಪ್ರತಿ ದಿನದ ಪೂಜೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಸ್ವಾಮೀಜಿ ಆಪ್ತರು ಹೇಳಿದ್ದಾರೆ.

  • ಕೆಎಂಸಿಯಲ್ಲಿ ಕೊರೊನಾ ಚಿಕಿತ್ಸೆ ನಡುವೆ ಪುತ್ತಿಗೆ ಶ್ರೀಗಳಿಂದ ಪ್ರತಿದಿನ ಪೂಜೆ

    ಕೆಎಂಸಿಯಲ್ಲಿ ಕೊರೊನಾ ಚಿಕಿತ್ಸೆ ನಡುವೆ ಪುತ್ತಿಗೆ ಶ್ರೀಗಳಿಂದ ಪ್ರತಿದಿನ ಪೂಜೆ

    ಉಡುಪಿ: ಪುತ್ತಿಗೆ ಸ್ವಾಮೀಜಿಗೆ ಕೊರೊನಾ ಸೋಂಕು ಹರಡಿದ್ದು, ಮಣಿಪಾಲ ಕೆಎಂಸಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ಸ್ವಾಮೀಜಿ ವಿಶ್ರಾಂತಿಯ ಜೊತೆಗೆ ನಿರಂತರ ಪೂಜೆ ಪುನಸ್ಕಾರದಲ್ಲಿ ತೊಡಗಿದ್ದಾರೆ.

    ಅನುಷ್ಠಾನಗಳನ್ನು ಮಾಡುತ್ತಿದ್ದಾರೆ. ಆaಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೂ ನಿತ್ಯ ಜಪ ಅನುಷ್ಠಾನಗಳಲ್ಲಿ ಪುತ್ತಿಗೆ ಶ್ರೀಗಳು ತೊಡಗಿಸಿಕೊಂಡಿರುವುದು ಗಮನಸೆಳೆದಿದೆ. ಉಡುಪಿ ಮಾತ್ರವಲ್ಲ ಅಮೆರಿಕ ಸೇರಿದಂತೆ ಹಲವಾರು ದೇಶಗಳಲ್ಲಿ ತಮ್ಮ ಶಾಖಾಮಠಗಳನ್ನು ಹೊಂದಿರುವ ಸ್ವಾಮೀಜಿ ಈ ಬಾರಿ ಉಡುಪಿಯಲ್ಲೇ ಚಾತುರ್ಮಾಸ್ಯ ವೃತ ಕೈಗೊಂಡಿದ್ದರು.

    ಚಾತುರ್ಮಾಸ್ಯಕ್ಕೆ ಸಂಕಲ್ಪ ಮಾಡಿದ್ದ ಸಮಯದಲ್ಲಿ ಜ್ವರ ಮತ್ತು ಶೀತದ ಲಕ್ಷಣಗಳು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಪರೀಕ್ಷೆಗೆ ಒಳಗಾಗಿದ್ದು, ಪಾಸಿಟಿವ್ ಬಂದಿತ್ತು. ಬಳಿಕ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಚಿಕಿತ್ಸೆಯ ವೇಳೆ ಸ್ವಾಮೀಜಿ ಪೂಜೆ ಜಪ ಅನುಷ್ಠಾನಗಳಲ್ಲಿ ತೊಡಗಿರುವ ಫೋಟೋ ಭಕ್ತರಿಗೆ ಕೊಂಚ ನೆಮ್ಮದಿ ನೀಡಿದೆ. ಪಿಪಿಇ ಕಿಟ್ ಧರಿಸಿಕೊಂಡೇ ಶ್ರೀಗಳ ಶಿಷ್ಯವೃಂದ ಸ್ವಾಮೀಜಿಯ ಪೂಜೆಗೆ ಸಹಕರಿಸುತ್ತಿದ್ದಾರೆ. ಆರೈಕೆ ಮಾಡುವ ಸಂದರ್ಭ ಕೂಡ ಕಿಟ್ ತೊಟ್ಟಿರುವುದು ಫೋಟೋದಲ್ಲಿ ಕಾಣಿಸುತ್ತಿದೆ.

    ಶ್ರೀಗಳ ಆರೋಗ್ಯ ಚೆನ್ನಾಗಿದೆ. ಒಂದು ವಾರಗಳ ಕಾಲ ಅವರು ಆಸ್ಪತ್ರೆಯಲ್ಲಿ ಇರಬೇಕಾಗಬಹುದು. ರೋಗ ಲಕ್ಷಣ ವಾಸಿಯಾಗುತ್ತಿದೆ. ಭಕ್ತರು ಆತಂಕಪಡುವ ಅಗತ್ಯ ಇಲ್ಲ ಎಂದು ಕೆಎಂಸಿ ವೈದ್ಯರು ಹೇಳಿದ್ದಾರೆ. ಚಿಕಿತ್ಸೆ ನಡುವೆ ಅವರಷ್ಟಕ್ಕೆ ಪೂಜೆ ಪುನಸ್ಕಾರದಲ್ಲಿ ತೊಡಗಿಸಿಕೊಳ್ಳುತ್ತಾರೆ. ರೋಗದ ಬಗ್ಗೆಯೇ ಚಿಂತಿಸದೆ ಮಾನಸಿಕವಾಗಿ ನೆಮ್ಮದಿಯಿಂದ ಇರುವುದು ಕೂಡ ಅತೀ ಮುಖ್ಯ ಎಂದು ಚಿಕಿತ್ಸೆ ನೀಡುವ ವೈದ್ಯರು ಹೇಳಿದ್ದಾರೆ.

  • ಉಡುಪಿ ಪುತ್ತಿಗೆ ಶ್ರೀಗಳಿಗೆ ಕೊರೊನಾ- ಮಣಿಪಾಲ ಕೆಎಂಸಿಯಲ್ಲಿ ಚಿಕಿತ್ಸೆ

    ಉಡುಪಿ ಪುತ್ತಿಗೆ ಶ್ರೀಗಳಿಗೆ ಕೊರೊನಾ- ಮಣಿಪಾಲ ಕೆಎಂಸಿಯಲ್ಲಿ ಚಿಕಿತ್ಸೆ

    ಉಡುಪಿ: ಅಷ್ಟಮಠಗಳಲ್ಲಿ ಒಂದಾಗಿರುವ ಪುತ್ತಿಗೆ ಮಠಾಧೀಶರಿಗೆ ಕೊರೊನಾ ಪಾಸಿಟಿವ್ ಆವರಿಸಿದೆ. ಉಡುಪಿಯ ಪುತ್ತಿಗೆ ಮಠದಲ್ಲಿದ್ದ ಸುಗುಣೇಂದ್ರ ತೀರ್ಥ ಶ್ರೀಪಾದರಿಗೆ ಕೊರೊನಾದ ಲಕ್ಷಣ ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರು ಮಣಿಪಾಲ ಕೆಎಂಸಿಗೆ ಭೇಟಿ ಕೊಟ್ಟಿದ್ದರು.

    ಈ ಸಂದರ್ಭ ಕೋವಿಡ್ 19 ಟೆಸ್ಟಿಂಗ್ ವೇಳೆ ಪಾಸಿಟಿವ್ ಇರುವುದು ಬೆಳಕಿಗೆ ಬಂದಿದೆ. ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ಸುಗುಣೇಂದ್ರ ತೀರ್ಥ ಶ್ರೀಪಾದರನ್ನು ದಾಖಲಿಸಿಕೊಳ್ಳಲಾಗಿದೆ. ಅಲ್ಲೇ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪುತ್ತಿಗೆ ಮಠದ ಆಪ್ತರು ಮಾಹಿತಿ ಕೊಟ್ಟಿದ್ದಾರೆ. ಸದ್ಯ ಸುಗುಣೇಂದ್ರತೀರ್ಥ ಶ್ರೀಪಾದರಿಗೆ ರೋಗದ ಯಾವುದೇ ಲಕ್ಷಣಗಳು ಇಲ್ಲ ಸ್ವಾಮೀಜಿ ಸಂಪೂರ್ಣ ಆರೋಗ್ಯವಾಗಿದ್ದಾರೆ.

    ಸರ್ಕಾರದ ನಿಯಮದ ಪ್ರಕಾರ ಆಸ್ಪತ್ರೆಯಲ್ಲಿ ಉಳಿದುಕೊಳ್ಳಬೇಕಾಗುತ್ತದೆ ಎಂದರು. ಉಡುಪಿ ಮೂಲ ಮಠದಲ್ಲಿದ್ದ ಸುಗುಣೇಂದ್ರ ತೀರ್ಥ ಶ್ರೀಪಾದರು ಚಾತುರ್ಮಾಸ್ಯ ವ್ರತಾಚರಣೆಗೆ ಸಿದ್ಧತೆಗಳನ್ನು ನಡೆಸಿದ್ದರು. ಮಠದಲ್ಲಿ ನಡೆಯುವ ದೈನಂದಿನ ಓಡಾಟ, ಧಾರ್ಮಿಕ ಚಟುವಟಿಕೆ, ಪೂಜೆ ಪುನಸ್ಕಾರದ ಸಂದರ್ಭ ಶ್ರೀಗಳಿಗೆ ಕೊರೊನಾ ಆವರಿಸಿರಬಹುದು ಎನ್ನಲಾಗಿದೆ.

    ಸ್ವಾಮೀಜಿಯ ಜೊತೆಗಿದ್ದವರನ್ನು, ಆಪ್ತರನ್ನು ಕ್ವಾರಂಟೈನ್ ಮಾಡಲು ಉಡುಪಿ ಜಿಲ್ಲಾ ವೈದ್ಯಾಧಿಕಾರಿಗಳು ಸೂಚನೆ ನೀಡಿದ್ದಾರೆ.