Tag: ಪುಣ್ಯ ಸ್ಮರಣೆ

  • ನಟ ವಿಷ್ಣುವರ್ಧನ್ ಪುಣ್ಯ ಸ್ಮರಣೆಗೆ ಸಿದ್ಧತೆ

    ನಟ ವಿಷ್ಣುವರ್ಧನ್ ಪುಣ್ಯ ಸ್ಮರಣೆಗೆ ಸಿದ್ಧತೆ

    ನ್ನಡದ ಹೆಸರಾಂತ ನಟ ವಿಷ್ಣುವರ್ಧನ್ (Vishnuvardhan) ಅವರ ಪುಣ್ಯ ಸ್ಮರಣೆ (Punya Smarane) ಕಾರ್ಯಕ್ರಮ ಮೈಸೂರು ಮತ್ತು ಬೆಂಗಳೂರಿನಲ್ಲಿ ನಡೆಯಲಿದೆ. ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣು ಸಮಾಧಿ ಬಳಿ ಅಭಿಮಾನಿಗಳು ಅನ್ನದಾನ, ರಕ್ತದಾನ ಶಿಬಿರವನ್ನು ಆಯೋಜಿಸುವ ಮೂಲಕ ವಿಷ್ಣುವನ್ನು ಸ್ಮರಿಸಲಿದ್ದಾರೆ.

    ಅಭಿಮಾನ ಸ್ಟುಡಿಯೋದ (Abhimana Studio) ಮಾಲೀಕರಿಗೆ ಮತ್ತು ವಿಷ್ಣು ಅಭಿಮಾನಿಗಳ ಮಧ್ಯ ವಿವಾದ ಭುಗಿಲೆದ್ದಿದೆ. ವಿಷ್ಣು ಸಮಾಧಿಯನ್ನು ತೆಗೆದು ಹಾಕುವ ಕೆಲಸಕ್ಕೆ ಬಾಲಣ್ಣ ಮಕ್ಕಳು ಮಾಡುತ್ತಿದ್ದಾರೆ ಎಂದು ವಿಷ್ಣು ಅಭಿಮಾನಿಗಳು ಆರೋಪ ಮಾಡಿದ್ದರು. ಹತ್ತು ಗುಂಟೆ ಜಮೀನು ಕೊಡುತ್ತಿಲ್ಲ ಎಂದು ಹೋರಾಟ ಮಾಡಿದ್ದರು. ಈ ಬಾರಿ ಇದಕ್ಕೆಲ್ಲ ತೆರೆ ಬೀಳಲಿದೆ ಎಂದೇ ಅಂದಾಜಿಸಲಾಗಿತ್ತು. ಇನ್ನೂ ಈ ಸಮಸ್ಯೆ ಬಗೆ ಹರಿದಂತೆ ಕಾಣುತ್ತಿಲ್ಲ.

     

    ಹಾಗಂತ ವಿಷ್ಣು ಸಮಾಧಿಯನ್ನು ಪೂಜೆ ಮಾಡಲು ನಾಳೆ ಬಾಲಣ್ಣನ ಮಕ್ಕಳು ಅವಕಾಶ ಕೊಡುವುದಿಲ್ಲವಾ? ಎನ್ನುವ ಪ್ರಶ್ನೆ ಉದ್ಭವಿಸಿದೆ. ಈ ಕುರಿತಂತೆ ಡಾ.ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರು ಫೇಸ್ ಬುಕ್ ಲೈವ್ ಗೆ ಬಂದು, ಎಂದಿನಂತೆ ಪೂಜೆ ಮಾಡಬಹುದು. ಸಾವಿರ ಸಾವಿರ ಸಂಖ್ಯೆಯಲ್ಲಿ ಅಭಿಮಾನಿಗಳು ಬನ್ನಿ ಎಂದು ಕರೆ ನೀಡಿದ್ದಾರೆ. ಬೆಳಗ್ಗೆಯಿಂದಲೇ ಪೂಜಾ ಕಾರ್ಯಗಳು ನಡೆಯಲಿವೆ ಎಂದು ಹೇಳಿದ್ದಾರೆ.

  • ಸುಶಾಂತ್ ಸಿಂಗ್ ಪುಣ್ಯ ಸ್ಮರಣೆ: ಸಹೋದರನ ನೆನೆದ ಶ್ವೇತಾ

    ಸುಶಾಂತ್ ಸಿಂಗ್ ಪುಣ್ಯ ಸ್ಮರಣೆ: ಸಹೋದರನ ನೆನೆದ ಶ್ವೇತಾ

    ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅಗಲಿ 2 ವರ್ಷಗಳಾಗಿವೆ. ಇದೀಗ ಸಹೋದರಿ ಶ್ವೇತಾ ಸುಶಾಂತ್ ಅವರನ್ನ ನೆನೆದು ಭಾವುಕರಾಗಿದ್ದಾರೆ. ಸುಶಾಂತ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ, ಶ್ವೇತಾ ಸಹೋದರ ಸುಶಾಂತ್‌ನನ್ನು ಸ್ಮರಿಸಿದ್ದಾರೆ. ಈ ಪೋಸ್ಟ್ ಸದ್ಯ ಸಖತ್ ವೈರಲ್ ಆಗುತ್ತಿದೆ.

    ಹಿಂದಿ ಚಿತ್ರರಂಗದ ಪ್ರತಿಭಾನ್ವಿತ ನಟ ಸುಶಾಂತ್ ಸಿಂಗ್ ಕಿರುತೆರೆಯಿಂದ ಹಿರಿತೆರೆಗೆ ಬಂದು ಸಾಕಷ್ಟು ಸಿನಿಮಾಗಳ ಮೂಲಕ ಮೋಡಿ ಮಾಡಿದ್ದರು. ಚಿತ್ರರಂಗದ ಹಿನ್ನಲೆ ಇಲ್ಲದೆ ಸ್ವಂತ ಪ್ರತಿಭೆಯ ಮೂಲಕ ನೆಲೆ ನಿಂತ ಮಹಾನ್ ಕಲಾವಿದ ಸುಶಾಂತ್, ಅಗಲಿ ಇದೀಗ ಎರಡು ವರ್ಷಗಳಾಗಿದೆ. ಕಳೆದ ಜೂನ್ 14, 2020ರಂದು ನಟ ಸುಶಾಂತ್ ನಿಧನರಾಗಿದ್ದರು. ಇನ್ನು ನಟನ ಪುಣ್ಯಸ್ಮರಣೆಯನ್ನು ಕಹಿ ನೆನಪಿನಿಂದಲೇ ಮಾಡುತ್ತಿದ್ದಾರೆ. ಇದೀಗ ಸಹೋದರಿ ಶ್ವೇತಾ ಸಿಂಗ್ ಸುಶಾಂತ್ ನೆನೆದು ಭಾವುಕರಾಗಿದ್ದಾರೆ.ಇದನ್ನೂ ಓದಿ:ರಾಜಮೌಳಿ ಮುಂದಿನ ಚಿತ್ರಕ್ಕೆ ಐಶ್ವರ್ಯ ರೈ ನಾಯಕಿ?

    ನೀವು ನಮ್ಮೆಲ್ಲರನ್ನ ಅಗಲಿ ಎರಡು ವರ್ಷಗಳಾಗಿದೆ. ಜೀವನದ ನಿಮ್ಮ ಮೌಲ್ಯಗಳಿಂದ ನೀವು ಅಮರರಾಗಿದ್ದೀರಿ. ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸುತ್ತಿದ್ದೀರಿ, ಎಲ್ಲರಿಗೂ ಒಳ್ಳೆಯದನ್ನೇ ಬಯಸಿದ್ದೀರಿ. ನಿಮ್ಮ ಬದುಕಿನ ಆದರ್ಶಗಳನ್ನು ನಾವು ಮುಂದುವರೆಸಿಕೊಂಡು ಹೋಗುತ್ತೇವೆ .ನಾವೆಲ್ಲರೂ ದೀಪವನ್ನು ಬೆಳಗಿಸೋಣ, ಇನ್ನೋಬ್ಬರ ಮುಖದಲ್ಲಿ ನಗುವನ್ನು ತರಲು ನಿಸ್ವಾರ್ಥ ಕೆಲಸವನ್ನು ಮಾಡೋಣ ಎಂದು ಶ್ವೇತಾ ಬರೆದುಕೊಂಡಿದ್ದಾರೆ. ಸುಶಾಂತ್ ಸಹೋದರಿಯ ಪೋಸ್ಟ್ ಸದ್ಯ ಸಖತ್ ವೈರಲ್ ಆಗುತ್ತಿದೆ.

  • ಹಿರಿಯ ನಟ ಕೆ.ಎಸ್ ಅಶ್ವಥ್ 10ನೇ ಪುಣ್ಯಸ್ಮರಣೆಯಲ್ಲಿ ಕಣ್ಣೀರಿಟ್ಟ ಶಿವಣ್ಣ

    ಹಿರಿಯ ನಟ ಕೆ.ಎಸ್ ಅಶ್ವಥ್ 10ನೇ ಪುಣ್ಯಸ್ಮರಣೆಯಲ್ಲಿ ಕಣ್ಣೀರಿಟ್ಟ ಶಿವಣ್ಣ

    ಬೆಂಗಳೂರು: ಹಿರಿಯ ನಟ ದಿವಂಗತ ಕೆ.ಎಸ್ ಅಶ್ವಥ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್ ಕಣ್ಣೀರು ಹಾಕಿದ್ದಾರೆ.

    ಚಾಮರಾಜಪೇಟೆಯ ಕಲಾವಿದರ ಸಂಘದ ವತಿಯಿಂದ 10ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹಿರಿಯ ನಟರಾದ ಶ್ರೀನಾಥ್, ಅಶೋಕ್ ಮತ್ತು ಶಿವರಾಜ್ ಕುಮಾರ್ ಭಾಗವಹಿಸಿದ್ರು. ಈ ವೇಳೆ ನಟ ಶಿವರಾಜ್ ಕುಮಾರ್ ಹಿರಿಯ ನಟ ದಿವಂಗತ ಕೆ.ಎಸ್ ಅಶ್ವಥ್ ಅವರ ನೆನೆದು ಭಾವುಕರಾಗಿ ಕಣ್ಣೀರು ಇಟ್ಟಿದ್ದಾರೆ.

    ವೇದಿಕೆ ಮೇಲೆ ಕೆ.ಎಸ್ ಅಶ್ವಥ್ ಮತ್ತು ಶಿವರಾಜ್ ಕುಮಾರ್ ನಟನೆಯ ಮೋಡದ ಮರೆಯಲ್ಲಿ ಕ್ಲಿಪಿಂಗ್ ಹಾಕಲಾಗಿತ್ತು. ಇಬ್ಬರು ನಟನೆಯ ದೃಶ್ಯ ಕಂಡು ಶಿವರಾಜ್ ಕುಮಾರ್ ಕಣ್ಣೀರು ಹಾಕಿದರು. ಮೋಡದ ಮರೆಯಲ್ಲಿ ಚಿತ್ರದಲ್ಲಿ ನನ್ನ ನಟನೆ ಬಗ್ಗೆ ಕೆ.ಎಸ್ ಅಶ್ವಥ್ ಅವರು ನನ್ನ ಹೊಗಳಿದ್ದರು. ಅದನ್ನ ನನ್ನ ತಂದೆ ತಾಯಿಗೆ ಹೇಳೋಣ ಅಂದರೆ ಇವತ್ತು ನನ್ನ ತಂದೆ ತಾಯಿನೂ ಬದುಕಿಲ್ಲ. ಮನಸ್ಸಿಗೆ ತುಂಬಾ ನೋವಾಗುತ್ತೆ ಎಂದು ಭಾವುಕರಾದರು.

    ನಮ್ಮ ಮನೆಗೆ ಅಶ್ವಥ್ ಸರ್ ಬರುತ್ತಿದ್ದರು ನಮ್ಮ ಜೊತೆ ಕ್ರಿಕೆಟ್ ಆಡುತ್ತಿದ್ದರು. ಅ ನೆನಪುಗಳನ್ನ ಮರೆಯೊದಕ್ಕೆ ಆಗಲ್ಲ. ಅವರ ನಟನೆ ನಮಗೆ ಸ್ಪೂರ್ತಿ ಎಂದು ಕಣ್ಣೀರು ಹಾಕಿ ಅವರು ಎಲ್ಲು ಹೋಗಿಲ್ಲ ನಮ್ಮಗಳ ಮಧ್ಯೆದಲ್ಲೆ ಇದ್ದಾರೆ ಎಂದು ತಿಳಿಸಿದರು.

  • ಇಂದು ಹುತಾತ್ಮ ಯೋಧ ಗುರು ತಿಥಿ ಕಾರ್ಯ – ಇಂದೇ ಪಾಕ್ ಉಗ್ರರು ಮಟಾಷ್

    ಇಂದು ಹುತಾತ್ಮ ಯೋಧ ಗುರು ತಿಥಿ ಕಾರ್ಯ – ಇಂದೇ ಪಾಕ್ ಉಗ್ರರು ಮಟಾಷ್

    ಮಂಡ್ಯ: ಇಂದು ಹುತಾತ್ಮ ಯೋಧ ಗುರು ಅವರ ಹನ್ನೊಂದನೆ ದಿನದ ತಿಥಿ ಕಾರ್ಯವಿದ್ದು, ಗುರು ಅಂತ್ಯಕ್ರಿಯೆ ನಡೆದ ಸ್ಥಳದಲ್ಲೇ ಕಾರ್ಯ ನಡೆಯುತ್ತಿದೆ.

    ಜಿಲ್ಲೆಯ ಮದ್ದೂರು ತಾಲೂಕಿನ ಗುಡಿಗೆರೆ ಗ್ರಾಮದ ಯೋಧ ಗುರು ಅವರ ತಿಥಿ ಕಾರ್ಯಕ್ಕೆ ಸಾವಿರಾರು ಜನರು ಆಗಮಿಸಿ ನಮನ ಸಲ್ಲಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗುರು ಅಂತ್ಯ ಸಂಸ್ಕಾರ ಮಾಡಿದ ಜಾಗದಲ್ಲಿ ಜೆಸಿಬಿ, ಬುಲ್ಡೋಜರ್‍ನಿಂದ ಜಾಗ ಸಮತಟ್ಟು ಮಾಡಿಸಿ ವ್ಯವಸ್ಥೆ ಮಾಡಲಾಗಿದೆ. ಗುರು ಅವರ ತಿಥಿ ಕಾರ್ಯದ ಸಂಪೂರ್ಣ ಜವಬ್ದಾರಿಯನ್ನು ಸಾರಿಗೆ ಸಚಿವ ಡಿಸಿ.ತಮ್ಮಣ್ಣ ಹೊತ್ತಿದ್ದಾರೆ.

    ಹುತಾತ್ಮ ಯೋಧ ಗುರು ಅವರ ಸಮಾಧಿ ಸ್ಥಳದಲ್ಲಿ ಶಾಮಿಯಾನ ಹಾಕಲಾಗಿದೆ. ಒಂದು ಬಾರಿಗೆ ಒಂದೂವರೆ ಸಾವಿರ ಜನ ಕುಳಿತು ಊಟ ಮಾಡಲು ವ್ಯವಸ್ಥೆ ಮಾಡಲಾಗಿದೆ. ಇನ್ನೂ ಹುತಾತ್ಮ ಗುರುವಿನ ಸಮಾಧಿ ಪಕ್ಕದಲ್ಲೆ ಪುಟ್ಟದಾದ ವೇದಿಕೆಯನ್ನು ನಿರ್ಮಿಸಲಾಗಿದೆ. ಈ ವೇದಿಕೆಯಲ್ಲಿ ಮಳವಳ್ಳಿ ಮಹಾದೇವ ಸ್ವಾಮಿ ಅವರ ತಂಡದಿಂದ ಭಜನೆಯನ್ನು ಮಾಡಲಾಗುತ್ತದೆ.

    ಹುತಾತ್ಮ ಗುರು ಅವರ ಸಮಾಧಿಯನ್ನ ಅಭಿಮಾನಿಗಳು ಹೂಗಳಿಂದ ಅಲಂಕಾರ ಮಾಡಿದ್ದು, ಸಮಾಧಿ ಸ್ಥಳದಲ್ಲಿ 4/4 ಅಡಿ ಅಳತೆಯ ಭಾವಚಿತ್ರ ಇಡಲೂ ವ್ಯವಸ್ಥೆ ಮಾಡಲಾಗಿದೆ. ಅನ್ನ ಸಾಂಬಾರ್, ಸಿಹಿ ಬೂಂದಿ, ಪಾಯಸ, ಮಸಾಲೆ ವಡೆ, ಜಾಂಗೀರು, ಅವರೇಕಾಳಿನ ಕೂಟು, ಮೊಸರು, ಹಪ್ಪಳ ಉಪ್ಪಿನ ಕಾಯಿ, ತಿಥಿ ಊಟಕ್ಕೆ ಅಡುಗೆ ತಯಾರಿ ಮಾಡಲಾಗಿದೆ.

    ತಿಥಿ ಕಾರ್ಯದ ಊಟದ ವ್ಯವಸ್ಥೆ ಸೇರಿದಂತೆ ಇನ್ನಿತರ ಕಾರ್ಯ ಸಂಪೂರ್ಣವಾಗಿ ಡಿ.ಸಿ.ತಮ್ಮಣ್ಣ ಅವರ ನೇತೃತ್ವದಲ್ಲಿ ನಡೆಯುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv