Tag: ಪುಣ್ಯತಿಥಿ

  • ಗಾಂಧೀಜಿಗೆ ಒಬ್ಬ ಹಿಂದುತ್ವವಾದಿ ಗುಂಡು ಹಾರಿಸಿ ಕೊಂದ: ರಾಹುಲ್‌ ಗಾಂಧಿ

    ಗಾಂಧೀಜಿಗೆ ಒಬ್ಬ ಹಿಂದುತ್ವವಾದಿ ಗುಂಡು ಹಾರಿಸಿ ಕೊಂದ: ರಾಹುಲ್‌ ಗಾಂಧಿ

    ನವದೆಹಲಿ: ಮಹಾತ್ಮ ಗಾಂಧೀಜಿ ಅವರ ಪುಣ್ಯತಿಥಿಯಂದು ಎಲ್ಲೆಡೆ ಅವರನ್ನು ಸ್ಮರಿಸಲಾಗುತ್ತಿದೆ. ಗಾಂಧೀಜಿಯನ್ನು ಸ್ಮರಿಸಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಒಬ್ಬ ಹಿಂದುತ್ವವಾದಿ ಗಾಂಧೀಜಿಗೆ ಗುಂಡು ಹಾರಿಸಿದ ಎಂದು ಹೇಳಿದ್ದಾರೆ.

    ಒಬ್ಬ ಹಿಂದುತ್ವವಾದಿ ಗಾಂಧೀಜಿಗೆ ಗುಂಡು ಹಾರಿಸಿದ. ಗಾಂಧೀಜಿ ಇನ್ನಿಲ್ಲ ಎಂದು ಹಿಂದುತ್ವವಾದಿಗಳೆಲ್ಲ ಭಾವಿಸಿದ್ದಾರೆ. ಎಲ್ಲಿ ಸತ್ಯವಿದೆಯೋ ಅಲ್ಲಿ ಬಾಪು ಇನ್ನೂ ಜೀವಂತ ಎಂದು ಸ್ಮರಿಸಿ ಹಿಂದಿಯಲ್ಲಿ ಟ್ವೀಟ್‌ ಮಾಡಿ ರಾಹುಲ್‌ ಗಾಂಧಿ ಸ್ಮರಿಸಿದ್ದಾರೆ. ಇದನ್ನೂ ಓದಿ: ಗಾಂಧಿ ಕೊಂದ ಶಕ್ತಿಗಳೇ ಇಂದು ಧರ್ಮದ ಹೆಸರಲ್ಲಿ ಹತ್ಯೆ ಮಾಡುತ್ತಿದೆ: ಪಿಣರಾಯಿ ವಿಜಯನ್

    ನಾನು ಹತಾಶೆಗೊಂಡಾಗ, ಇತಿಹಾಸದುದ್ದಕ್ಕೂ ಸತ್ಯ ಮತ್ತು ಪ್ರೀತಿಯ ಮಾರ್ಗ ಯಾವಾಗಲೂ ಗೆದ್ದಿದೆ ಎಂದು ನೆನಪಿಸಿಕೊಳ್ಳುತ್ತೇನೆ. ನಿರಂಕುಶಾಧಿಕಾರಿಗಳು ಮತ್ತು ಕೊಲೆಗಾರರೂ ಇಲ್ಲಿದ್ದಾರೆ. ಕೆಲ ಕಾಲವಷ್ಟೇ ಅವರು ಅಜೇಯರಾಗಿ ಕಾಣಬಹುದು. ಆದರೆ ಕೊನೆಯಲ್ಲಿ ಅವರಿಗೆ ಬೀಳಲೇಬೇಕು. ಇದನ್ನು ಯೋಚಿಸಿ ಎಂದು ಟ್ವೀಟ್‌ ಮಾಡಿದ್ದಾರೆ.

    ಜ.30ರಂದು ಮಹಾತ್ಮ ಗಾಂಧೀಜಿಯವರ ಪುಣ್ಯತಿಥಿ. ಇಂದು ಬೆಳಿಗ್ಗೆ ಗಾಂಧೀಜಿಯವರ ಸಮಾಧಿ ಸ್ಥಳಕ್ಕೆ ತೆರಳಿ ರಾಹುಲ್‌ ಗಾಂಧಿ ನಮನ ಸಲ್ಲಿಸಿದ್ದಾರೆ. ಇದನ್ನೂ ಓದಿ: ಬಾಪು ಆದರ್ಶಗಳನ್ನು ಮತ್ತಷ್ಟು ಜನಪ್ರಿಯಗೊಳಿಸುತ್ತೇವೆ: ಮೋದಿ

  • ರಾಜರತ್ನ ಅಪ್ಪು ಅಗಲಿ 12ನೇ ದಿನ – ಅರಮನೆ ಮೈದಾನದಲ್ಲಿ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ

    ರಾಜರತ್ನ ಅಪ್ಪು ಅಗಲಿ 12ನೇ ದಿನ – ಅರಮನೆ ಮೈದಾನದಲ್ಲಿ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ

    – ಬೆಳಗ್ಗೆ 11.30ಕ್ಕೆ ಊಟದ ವ್ಯವಸ್ಥೆ..!

    ಬೆಂಗಳೂರು: ರಾಜರತ್ನ ಪುನೀತ್ ರಾಜ್ ಕುಮಾರ್ ಅವರು ಅಗಲಿ ಇಂದಿಗೆ 12ನೇ ದಿನ. ನಿನ್ನೆ ಕುಟುಂಬಸ್ಥರಿಂದ 11ನೇ ದಿನದ ಕಾರ್ಯ ನಡೆದಿತ್ತು. ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಪ್ಪು ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ನಡೆಯಲಿದೆ.

    ಇಂದು ಬೆಳಗ್ಗೆ ಬೆಳಗ್ಗೆ 11.30ಕ್ಕೆ ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 10 ಗಂಟೆ ಒಳಗೆ ಊಟ ರೆಡಿ ಇರಿಸುವಂತೆ ಸೂಚನೆ ನೀಡಲಾಗಿದೆ. ಹೀಗಾಗಿ ಸುಮಾರು 25-30 ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.

    ಅಪ್ಪು ಅಭಿಮಾನಿಗಳಿಗೆ ವೆಜ್-ನಾನ್‍ವೆಜ್ ವ್ಯವಸ್ಥೆ ಕೂಡ ಇದ್ದು, ಸುಮಾರು 5 ಸಾವಿರ ಜನರಿಗೆ ವೆಜ್, ಉಳಿದವರಿಗೆ ನಾನ್‍ವೆಜ್ ರೆಡಿ ಮಾಡಲಾಗಿದೆ. ಮುಂಜಾನೆ 4 ಗಂಟೆಗೆ ಚಿಕ್ಕಮಗಳೂರಿನಿಂದ ಬಂದ 2 ಟನ್ ಚಿಕನ್ ಬಂದಿದೆ. ಒಂದೂವರೆ ಸಾವಿರ ಜನರಿಂದ ಊಟಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. 700 ಬಾಣಸಿಗರು, ಸಹಾಯದವರು, ಕ್ಲೀನಿಂಗ್ ಕೆಲಸದವರು ಸೇರಿ 1,500 ಮಂದಿ ಸಿದ್ಧತೆ ನಡೆಸುತ್ತಿದ್ದಾರೆ. ಗ್ಯಾಸ್, ಸೌಧೆ ಬಳಿ ರಾತ್ರಿಯೆಲ್ಲಾ ಸಿದ್ಧತೆಯಲ್ಲಿ ತಲ್ಲೀಣರಾಗಿದ್ದಾರೆ.

    2 ವಿಭಾಗಗಳಲ್ಲಿ ಊಟದ ವ್ಯವಸ್ಥೆ:
    ಅಪ್ಪು ಅಭಿಮಾನಿಗಳಿಗೆ 2 ವಿಭಾಗಗಳಲ್ಲಿ ಊಟ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ. 20 ಸಾವಿರ ನಾನ್ ವೆಜ್, 5 ಸಾವಿರ ಜನಕ್ಕೆ ವೆಜ್ ಊಟ ಇದೆ. ಬೆಳಗ್ಗೆ 11.30ರ ನಂತರ ಅನ್ನ ಸಂತರ್ಪಣೆ ಪ್ರಾರಂಭವಾಗಲಿದೆ.

    ಅನ್ನ ಸಂತರ್ಪಣೆಯಲ್ಲಿ ಏನೆಲ್ಲಾ ಇರಲಿದೆ?
    ವೆಜ್ ಮೆನು
    * ಮಸಾಲ ವಡೆ
    * ಘೀ ರೈಸ್-ಕುರ್ಮಾ
    * ಆಲೂ ಕಬಾಬ್
    * ಅಕ್ಕಿ ಪಾಯಸ
    * ಅನ್ನ- ತರಕಾರಿ ಸಾಂಬಾರ್
    * ರಸಂ
    * ಮಜ್ಜಿಗೆ

    ನಾನ್ ವೆಜ್ ಮೆನು
    * ಘೀ ರೈಸ್
    * ಚಿಕನ್ ಚಾಪ್ಸ್/ ಚಿಕನ್ ಸಾರ್
    * ಕಬಾಬ್
    * ಅನ್ನ-ಸಾಂಬಾರ್
    * ರಸಂ

    ಪೊಲೀಸ್ ಕಟ್ಟೆಚ್ಚರ:
    ಅನ್ನ ಸಂತರ್ಪಣೆ ವೇಳೆ ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಲಾಗುತ್ತಿದೆ. ಎಲ್ಲೂ ಅಹಿತಕರ ಘಟನೆ ಆಗದಂತೆ ಬಿಗಿ ಭದ್ರತೆ ಕೈಗೊಳ್ಳಲಾಗುತ್ತಿದೆ. ಪ್ಯಾಲೆಸ್ ಗ್ರೌಂಡ್ ಸುತ್ತ ಓರ್ವ ಡಿಸಿಪಿ, 3 ಎಸಿಪಿ, 32 ಇನ್ಸ್ ಪೆಕ್ಟರ್, 70 ಸಬ್ ಇನ್ಸ್‍ಪೆಕ್ಟರ್ ಸೇರಿ ಒಟ್ಟು 1 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗುತ್ತಿದೆ.

  • ಸೋಮವಾರದ ಪುಣ್ಯತಿಥಿಗೆ ಕುಟುಂಬಸ್ಥರ ಸಿದ್ಧತೆ – ನುಡಿ ನಮನಕ್ಕೆ ಗಣ್ಯರಿಗೆ ಆಹ್ವಾನ

    ಸೋಮವಾರದ ಪುಣ್ಯತಿಥಿಗೆ ಕುಟುಂಬಸ್ಥರ ಸಿದ್ಧತೆ – ನುಡಿ ನಮನಕ್ಕೆ ಗಣ್ಯರಿಗೆ ಆಹ್ವಾನ

    – ಪದ್ಮಶ್ರೀ ಪ್ರಶಸ್ತಿಗೆ ಸರ್ಕಾರ ಶಿಫಾರಸು ಸಾಧ್ಯತೆ

    ಬೆಂಗಳೂರು: ನವೆಂಬರ್ 14ರಂದು ಫಿಲಂ ಚೇಂಬರ್ ಅರಮನೆ ಆವರಣದಲ್ಲಿ ಆಯೋಜಿಸಿರುವ ಅಪ್ಪು ನುಡಿನಮನ ಕಾರ್ಯಕ್ರಮಕ್ಕೆ ರಾಜಕೀಯ ನಾಯಕರು, ದಕ್ಷಿಣ ಭಾರತದ ನಟರಿಗೆ ಆಹ್ವಾನ ನೀಡಲಾಗಿದೆ. ಸೋಮವಾರ 11ನೇ ದಿನದ ಪುಣ್ಯಾರಾಧನೆಗೆ ಈಗಿನಿಂದಲೇ ಸಿದ್ಧತೆ ನಡೆದಿದೆ.

    ಸುಮಾರು 2 ಸಾವಿರ ಮಂದಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಸಂಚಾರದಲ್ಲಿ ಅಡಚಣೆ ಉಂಟಾಗದ ರೀತಿಯಲ್ಲಿ ಸಂಚಾರಿ ಪೊಲೀಸರು ಅಗತ್ಯ ಸಿದ್ಧತೆ ಮಾಡಿಕೊಳ್ತಿದ್ದಾರೆ. ನಾಳೆ ಸಂಜೆ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ಪುನೀತ್ ಸ್ಮರಣಾರ್ಥ, ಪುಷ್ಪಾಂಜಲಿ, ದೀಪಾಂಜಲಿ, ಗೀತಾಂಜಲಿ ಮತ್ತು ಭಾಷ್ಪಾಂಜಲಿ ಕಾರ್ಯಕ್ರಮವನ್ನು ಚಿತ್ರಪ್ರದರ್ಶಕರ ಸಂಘ ಹಮ್ಮಿಕೊಂಡಿದೆ. ಇದನ್ನೂ ಓದಿ: ‘ಅಪ್ಪು ಜೊತೆ ರಾಜ್ ಸಮಾಧಿ ನೋಡಲು ಬರ್ತಿದ್ದ ನಾವು ಈಗ ಅವರದ್ದೇ ಸಮಾಧಿ ನೋಡೋಕೆ ಬರುವಂಗಾಯ್ತು’

    ಈ ಮಧ್ಯೆ ಕಂಠೀರವ ಸ್ಟುಡಿಯೋದಲ್ಲಿ ಅಭಿಮಾನಿಗಳ ಸಾಲು ಕರಗುತ್ತಿಲ್ಲ. ಸಾವಿರಾರು ಮಂದಿ ಅಪ್ಪು ಸಮಾಧಿಗೆ ನಮಿಸಿ ಕಣ್ಣೀರು ಹಾಕ್ತಿದ್ದಾರೆ. 5 ದಿನಗಳಲ್ಲಿ ಅಂದಾಜು 2 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಪುನೀತ್ ಸಮಾಧಿ ದರ್ಶನ ಮಾಡಿದ್ದಾರೆ. ಅಪ್ಪು ಸಮಾಧಿ ಎದುರು ಮದುವೆಗೆ ಅವಕಾಶ ನೀಡಿ ಬಳ್ಳಾರಿಯ ಜೋಡಿಯೊಂದು ಪೊಲೀಸರಿಗೆ ಮನವಿ ಮಾಡಿದೆ. ಆದರೆ ಪೋಷಕರ ಜೊತೆ ಮಾತನಾಡಿ ತೀರ್ಮಾನ ಕೈಗೊಳ್ಳೋದಾಗಿ ರಾಘಣ್ಣ ತಿಳಿಸಿದ್ದಾರೆ.  ಇದನ್ನೂ ಓದಿ: ಅಪ್ಪು ಸಣ್ಣ ವಯಸ್ಸಿನಲ್ಲಿ ನಮ್ಮನ್ನು ಬಿಟ್ಟು ಹೋದ್ರು: ಜಯಪ್ರದಾ

    ಅಪ್ಪು ಸಮಾಧಿಗೆ ಪುನೀತ್ ಅವರ ದೊಡ್ಡಕ್ಕ ಲಕ್ಷ್ಮೀದೇವಿ ಪೂಜೆ ಸಲ್ಲಿಸಿದರು. ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್, ನಟ ಟೆನಿಸ್ ಕೃಷ್ಣ, ತಬಲಾ ನಾಣಿ, ನೃತ್ಯ ಸಂಯೋಜಕ ಇಮ್ರಾನ್ ಸರ್ದಾರಿಯಾ ಭೇಟಿ ನೀಡಿದ್ರು. ಅತ್ತ, ನಟ ಪುನೀತ್ ನಿವಾಸಕ್ಕೆ ಹಿರಿಯ ನಟಿ ಜಯಪ್ರದಾ, ನಟಿ ಪ್ರಿಯಾಮಣಿ, ರಾಗಿಣಿ, ಸಂಸದ ಉಮೇಶ್ ಜಾಧವ್ ಸೇರಿ ಹಲವರು ಭೇಟಿ ನೀಡಿ, ಪುನೀತ್ ಪತ್ನಿ ಮಕ್ಕಳಿಗೆ ಸಾಂತ್ವನ ಹೇಳಿದ್ರು. ಇತ್ತ ಪುನೀತ್‍ಗೆ ಪದ್ಮಶ್ರೀ ಪ್ರಶಸ್ತಿ ನೀಡೋ ಬಗ್ಗೆ ಒತ್ತಡ ಜೋರಾಗಿದೆ. ನವೆಂಬರ್ 16ರ ನಂತರ ಸರ್ಕಾರ ಒಂದು ಸ್ಪಷ್ಟ ನಿರ್ಧಾರ ಕೈಗೊಳ್ಳೋ ಸಾಧ್ಯತೆಗಳಿವೆ.

  • ಅಪ್ಪಾಜಿ ಬೈಯೋದನ್ನ ಯಾವತ್ತೂ ಮಿಸ್ ಮಾಡ್ಕೊತ್ತೀನಿ: ದಾಸ

    ಅಪ್ಪಾಜಿ ಬೈಯೋದನ್ನ ಯಾವತ್ತೂ ಮಿಸ್ ಮಾಡ್ಕೊತ್ತೀನಿ: ದಾಸ

    – ಸಮಾಧಿ ದೇವಸ್ಥಾನವಿದ್ದಂತೆ

    ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಅವರು ಬೈಯೋದನ್ನು ಯಾವತ್ತೂ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.

    2ನೃ ವರ್ಷದ ಪುಣ್ಯತಿಥಿಯ ಪ್ರಯುಕ್ತ ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪ್ಪಾಜಿ 24 ಗಂಟೆಯೂ ನಮ್ಮ ಜೊತೆಗೇ ಇರುತ್ತಾರೆ. ಈ ಕಡೆ ಬಂದ್ರೆ ಸಮಾಧಿ ಬಳಿ ಬಂದೇ ಬರುತ್ತೇನೆ. ಇದು ನಮಗೆ ದೇವಸ್ಥಾನ ಇದ್ದಂತೆ ಎಂದರು.

    ಮಂಡ್ಯದಲ್ಲಿ ಅಂಬರೀಶ್ ಗುಡಿ ಕಟ್ಟುವ ಬಗ್ಗೆ ಪ್ರತಿಕ್ರಿಯಿಸಿ, ಅವರ ಹೆಸರಲ್ಲಿ ಗುಡಿ ಕಟ್ಟೋದರಲ್ಲಿ ತಪ್ಪಿಲ್ಲ. ನಾನು ಅವರನ್ನು ದೇವರಂತೆ ಪೂಜಿಸುತ್ತೇನೆ ಎಂದು ತಿಳಿಸಿದರು.  ಇದನ್ನೂ ಓದಿ: ಕನ್ನಡಿಗರ ಮನಸ್ಸಲ್ಲಿ ಅಪ್ಪಾಜಿ ಸದಾ ಜೀವಂತವಾಗಿರ್ತಾರೆ: ದರ್ಶನ್

    ಅವರು ನನ್ನ ಬೈಯುತ್ತಿರುವ ನೆನಪು ತುಂಬಾ ಕಾಡುತ್ತಿದೆ. ಆಗಾಗ ಬೈತಾ ಇದ್ರು. ಈವಾಗ ಅದು ಇಲ್ಲ ಅನ್ನೋ ಬೇಜಾರಿದೆ. ಇಂದು ಆ ವಾಯ್ಸ್ ನಮ್ಮ ಜೊತೆ ಇಲ್ಲ, ಬರ್ರೋ ಇಲ್ಲಿ ಅಂತ ಹೇಳೋ ವಾಯ್ಸ್ ಇಲ್ಲ. ಹೀಗಾಗಿ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.

    ಒಟ್ಟಿನಲ್ಲಿ ನಾನು ಇಲ್ಲಿ ಬಂದಾಗ ಕಹಿ ಘಟನೆಗಳನ್ನು ನೆನಪು ಮಾಡಿಕೊಳ್ಳಲು ಹೋಗಲ್ಲ. ದೇವಸ್ಥಾನಕ್ಕೆ ಬಂದು, ದೇವರಿಗೆ ಕೈ ಮುಗಿದು ಹೋಗುತ್ತೇನೆ ಎಂದರು. ಇದನ್ನೂ ಓದಿ: ಅಂಬರೀಶ್ ಮಗನಾಗಿ ಹುಟ್ಟಿದ್ದು ನನ್ನ ಪುಣ್ಯ: ಅಭಿಷೇಕ್

    ಇದಕ್ಕೂ ಮುನ್ನ ಟ್ವೀಟ್ ಮಾಡಿದ್ದ ದರ್ಶನ್, ನನ್ನ ಪ್ರೀತಿಯ ಅಂಬಿ ಅಪ್ಪಾಜಿ ಇಂದಿಗೆ ದೈಹಿಕವಾಗಿ ಅಗಲಿ 2 ಸಂವತ್ಸರಗಳು ಕಳೆದಿವೆ. ಆದರೆ ನಮ್ಮೆಲ್ಲರ ಮನಗಳಲ್ಲಿ ಸದಾ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಅವರ ನೇರನುಡಿಯ ವ್ಯಕ್ತಿತ್ವ, ಮಾಡಿರುವ ಸಹೃದಯಿ ಕಾರ್ಯಗಳು ಸದಾ ಕನ್ನಡಿಗರ ಮನಸ್ಸಲ್ಲಿ ಜೀವಂತವಾಗಿರುತ್ತವೆ ಎಂದು ಬರೆದುಕೊಳ್ಳುವ ಮೂಲಕ ಅಂಬಿ ನೆನಪು ಮಾಡಿಕೊಂಡಿದ್ದರು.

  • ಅಂಬರೀಶ್ ಮಗನಾಗಿ ಹುಟ್ಟಿದ್ದು ನನ್ನ ಪುಣ್ಯ: ಅಭಿಷೇಕ್

    ಅಂಬರೀಶ್ ಮಗನಾಗಿ ಹುಟ್ಟಿದ್ದು ನನ್ನ ಪುಣ್ಯ: ಅಭಿಷೇಕ್

    – ಅಭಿಮಾನಿಗಳ ಬಗ್ಗೆ ಮಾತಾಡಲು ನಂಗೆ ಅಧಿಕಾರವಿಲ್ಲ

    ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ವಿಧಿವಶರಾಗಿ ಇಂದಿಗೆ 2 ವರ್ಷವೇ ಕಳೆದು ಹೋಗಿದೆ. ಇಂದು ಅಂಬಿ ಪುಣ್ಯತಿಥಿಯಾಗಿದ್ದು, ಪತ್ನಿ ಸುಮಲತಾ, ಪುತ್ರ ಅಭಿಷೇಕ್, ದರ್ಶನ್ ಹಾಗೂ ಇತರ ಗಣ್ಯರು ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದರು.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಭಿಷೇಕ್, ಅರ್ಜುನ್ ಸರ್ಜಾ ಅವರು ಮನೆಗೆ ಬಂದಿದ್ದ ಸಮಯದಲ್ಲಿ ಸುಮಾರು 4 ಗಂಟೆಗಳ ಕಾಲ ಅಪ್ಪನ ಬಗ್ಗೆ ಚರ್ಚೆ ಮಾಡಿದ್ವಿ. ನಿನ್ನೆ ಕೂಡ ನಾನು ಹಾಗೂ ದರ್ಶನ್ ಅಣ್ಣ ಇಬ್ಬರೇ ಮನೆಯಲ್ಲಿ ಕುಳಿತುಕೊಂಡು ಹಳೆಯ ನೆನಪುಗಳನ್ನು ಹಂಚಿಕೊಳ್ತಿದ್ವಿ. ಹೀಗೆ ಅಪ್ಪ ತುಂಬಾ ನೆನಪಾಗ್ತಾರೆ ಎಂದರು.

    ಅಪ್ಪ ನನಗೆ ಪ್ರತಿದಿನ ನೆನಪಾಗ್ತಾರೆ. ಅದರಲ್ಲೂ ಪುಣ್ಯತಿಥಿ ಹತ್ತಿರ ಆಗ್ತಿದ್ದಂತೆ ಅವರ ಬಗ್ಗೆಯೇ ಚರ್ಚೆ ಶುರುವಾಗುತ್ತೆ. ಇಂದು ಅವರ ಹೆಸರಲ್ಲಿ ಒಳ್ಳೊಳ್ಳೆಯ ಕಾರ್ಯಗಳು ನಡೆಯುತ್ತವೆ. ಅದರಲ್ಲಿ ನಾವು ಸುಖ- ಸಂತೋಷವನ್ನು ಹುಡುಕಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಕನ್ನಡಿಗರ ಮನಸ್ಸಲ್ಲಿ ಅಪ್ಪಾಜಿ ಸದಾ ಜೀವಂತವಾಗಿರ್ತಾರೆ: ದರ್ಶನ್

    ಅಪ್ಪನ ಸಾಧನೆಗಳ ಬಗ್ಗೆ ಮಾತನಾಡಲು ನಾನು ತುಂಬಾ ಚಿಕ್ಕವನು. ಅವರು ಮತ್ತು ಅವರ ಅಭಿಮಾನಿಗಳ ಬಗ್ಗೆ ಮಾತನಾಡಲು ನನಗೆ ಅಧಿಕಾರ ಇಲ್ಲ. ಅವರ ಮಧ್ಯದಲ್ಲಿ ಸಂಬಂಧ ಅಷ್ಟೊಂದು ಗಟ್ಟಿಯಾಗಿತ್ತು. ಇಂದಿಗೂ ಅದೇ ರೀತಿ ಇದೆ. ನಮಗೂ ಇಂದು ನಮಗೂ ಅಷ್ಟೇ ಪ್ರೀತಿ ತೋರಿಸುತ್ತಿದೆ. ಅವರ ಮಗನಾಗಿ ಹುಟ್ಟಲು ನಾನು ಪುಣ್ಯ ಮಾಡಿದ್ದೀನಿ ಎಂದು ಹೇಳಿದರು.

    ಕಿಡ್ನಿ ಹಾಗೂ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅಂಬರೀಶ್ ಅವರು 2018ರ ನವೆಂಬರ್ 24ರಂದು ರಾತ್ರಿ ನಿಧನರಾಗಿದ್ದರು. ಅಂದೇ ಮಂಡ್ಯದಲ್ಲಿ ಬಸ್ ದುರಂತ ನಡೆದಿದ್ದು, ಘಟನೆ ನೋಡಿ ಸುಸ್ತಾಗಿದ್ದ ಅಂಬರೀಶ್ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಹೆಚ್ಚಿನ ಚಿಕಿತ್ಸೆಗೆಂದು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂಬರೀಶ್ ನಿಧನಕ್ಕೆ ರಾಜಕೀಯ, ಚಿತ್ರರಂಗ ಸೇರಿದಂತೆ ದೇಶಾದ್ಯಂತ ಕಂಬನಿ ಮಿಡಿದಿತ್ತು.

  • ಕನ್ನಡಿಗರ ಮನಸ್ಸಲ್ಲಿ ಅಪ್ಪಾಜಿ ಸದಾ ಜೀವಂತವಾಗಿರ್ತಾರೆ: ದರ್ಶನ್

    ಕನ್ನಡಿಗರ ಮನಸ್ಸಲ್ಲಿ ಅಪ್ಪಾಜಿ ಸದಾ ಜೀವಂತವಾಗಿರ್ತಾರೆ: ದರ್ಶನ್

    ಬೆಂಗಳೂರು: ಸ್ಯಾಂಡಲ್‍ವುಡ್ ರೆಬೆಲ್ ಸ್ಟಾರ್ ಅಂಬರೀಶ್ ಅವರು ನಿಧನರಾಗಿ ಇಂದಿಗೆ ಎರಡು ವರ್ಷಗಳೇ ಕಳೆಯಿತು. ಈ ಹಿನ್ನೆಲೆಯಲ್ಲಿ ಅಂಬಿ ಅವರನ್ನು ಅಪ್ಪಾಜಿ ಅಂತಲೇ ಕರೆಯುತ್ತಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ವೀಟ್ ಮಾಡಿದ್ದಾರೆ.

    ಅಪ್ಪಾಜಿ ಅವರು ಕನ್ನಡಿಗರ ಮನಸ್ಸಿನಲ್ಲಿ ಸದಾ ಜೀವಂತವಾಗಿರುತ್ತಾರೆ ಎಂದು ಹೇಳುವ ಮೂಲಕ ಎರಡನೇ ವರ್ಷದ ಪುಣ್ಯತಿಥಿಯಂದು ಅಂಬಿಯನ್ನು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: ಮಂಡ್ಯ ಜನ ಅಂಬರೀಶ್‍ನನ್ನು ದೇವರಂತೆ ಪೂಜಿಸ್ತಾ ಇದ್ರು: ಸುಮಲತಾ

    ಟ್ವೀಟ್‍ನಲ್ಲೇನಿದೆ..?
    ನನ್ನ ಪ್ರೀತಿಯ ಅಂಬಿ ಅಪ್ಪಾಜಿ ಇಂದಿಗೆ ದೈಹಿಕವಾಗಿ ಅಗಲಿ 2 ಸಂವತ್ಸರಗಳು ಕಳೆದಿವೆ. ಆದರೆ ನಮ್ಮೆಲ್ಲರ ಮನಗಳಲ್ಲಿ ಸದಾ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಅವರ ನೇರನುಡಿಯ ವ್ಯಕ್ತಿತ್ವ, ಮಾಡಿರುವ ಸಹೃದಯಿ ಕಾರ್ಯಗಳು ಸದಾ ಕನ್ನಡಿಗರ ಮನಸ್ಸಲ್ಲಿ ಜೀವಂತವಾಗಿರುತ್ತವೆ ಎಂದು ಬರೆದುಕೊಂಡಿದ್ದಾರೆ.

    ಕಿಡ್ನಿ ಹಾಗೂ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅಂಬರೀಶ್ ಅವರು 2018ರ ನವೆಂಬರ್ 24ರಂದು ರಾತ್ರಿ ನಿಧನರಾಗಿದ್ದರು. ಅಂದೇ ಮಂಡ್ಯದಲ್ಲಿ ಬಸ್ ದುರಂತ ನಡೆದಿದ್ದು, ಘಟನೆ ನೋಡಿ ಸುಸ್ತಾಗಿದ್ದ ಅಂಬರೀಶ್ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಹೆಚ್ಚಿನ ಚಿಕಿತ್ಸೆಗೆಂದು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಅಂಬರೀಶ್ ನಿಧನಕ್ಕೆ ರಾಜಕೀಯ, ಚಿತ್ರರಂಗ ಸೇರಿದಂತೆ ದೇಶಾದ್ಯಂತ ಕಂಬನಿ ಮಿಡಿದಿತ್ತು. ಇಂದು ಅವರ ಎರಡನೇ ವರ್ಷದ ಪುಣ್ಯತಿಥಿಯ ಪ್ರಯುಕ್ತ ಅಂಬಿ ಪತ್ನಿ ಸುಮಲತಾ, ಪುತ್ರ ಅಭಿಷೇಕ್ ಹಾಗೂ ಇತರ ಗಣ್ಯರು ಅವರ ಸಮಾಧಿPಗೆ ತೆರಳಿ ಪೂಜೆ ಸಲ್ಲಿಸಿದರು. ಇದೇ ವೇಳೆ ನಟ ದರ್ಶನ್ ಕೂಡ ತೆರಳಿ ಸಮಾಧಿಗೆ ಪೂಜೆ ಮಾಡಿದರು.

  • ಮಂಡ್ಯ ಜನ ಅಂಬರೀಶ್‍ನನ್ನು ದೇವರಂತೆ ಪೂಜಿಸ್ತಾ ಇದ್ರು: ಸುಮಲತಾ

    ಮಂಡ್ಯ ಜನ ಅಂಬರೀಶ್‍ನನ್ನು ದೇವರಂತೆ ಪೂಜಿಸ್ತಾ ಇದ್ರು: ಸುಮಲತಾ

    – ಅಂಬಿ ಬಾಂಧವ್ಯದ ಬಗ್ಗೆ ಗೋಪಾಲಯ್ಯ ಮಾತು
    – ಸ್ಮಾರಕಕ್ಕೆ ಬಂದ ನಟ ದರ್ಶನ್

    ಬೆಂಗಳೂರು: ಮಂಡ್ಯದ ಜನ ಅಂಬರೀಶ್ ಅವರನ್ನು ವಿಶೇಷವಾಗಿ ದೇವರಂತೆ ಪೂಜಿಸುತ್ತಿದ್ದರು. ಪ್ರೀತಿ ಒಂದೇ ಅವರು ಸಂಪಾದಿಸಿರೋ ಆಸ್ತಿ. ಜನರ ಅವರನ್ನ ಹೃದಯಲ್ಲಿ ಇಟ್ಟುಕೊಂಡು ಪೂಜಿಸ್ತಾ ಇದ್ದಾರೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.

    ಇಂದು ಅಂಬಿ ಎರಡನೇ ವರ್ಷದ ಪುಣ್ಯತಿಥಿಯ ಪ್ರಯುಕ್ತ ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬರೀಶ್ ಅವರು ಎಲ್ಲರನ್ನೂ ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತಿದ್ದರು. ಎಲ್ಲರ ಪ್ರೀತಿ ಗಳಿಸಿ ಆ ಪ್ರೀತಿಯನ್ನ ಶಾಶ್ವತವಾಗಿ ಉಳಿಸಿಕೊಂಡಿದ್ದಾರೆ. ಇದಕ್ಕಿಂತ ಹೆಮ್ಮೆ ಯಾವುದೂ ಇಲ್ಲ ಎಂದರು.

    ಮಂಡ್ಯದಲ್ಲಿ ನಿಜಕ್ಕೂ ಅಂಬಿ ಗುಡಿ ಕಟ್ಟಿರೋದು ಅದ್ಭುತ. ಆ ಊರಿನವರು ನನ್ನಿಂದ ಯಾವುದೇ ಸಹಾಯ ತಗೊಂಡಿಲ್ಲ. ನನಗೆ ಇದು ಸರ್ಪ್ರೈಸ್, ಜೊತೆಗೆ ಅಂಬಿ ಪ್ರೀತಿಗೆ ಕಂಚಿನ ಪುತ್ಥಳಿ ಸಂಕೇತ. ಅವರು ಬದುಕಿದ್ದಾಗ ಪ್ರತಿದಿನ ಜನರ ಮಧ್ಯೆ ಇರುತ್ತಿದ್ದರು ಎಂದು ತಿಳಿಸಿದರು.

    ವಿಶೇಷವಾಗಿ ಮಂಡ್ಯ ಜನ ಅವರನ್ನ ದೇವರಂತೆ ಪೂಜಿಸ್ತಾ ಇದ್ದರು. ಪ್ರೀತಿ ಒಂದೇ ಅವರು ಸಂಪಾದಿಸಿರುವ ಆಸ್ತಿ. ಜನರ ಅವರನ್ನ ಹೃದಯಲ್ಲಿ ಇಟ್ಕೊಂಡು ಪೂಜಿಸ್ತಾ ಇದ್ದಾರೆ. ಅಂಬರೀಶ್ ಅವರಿಗೆ ಮನಸ್ಸಿನಲ್ಲೇ ಗುಡಿ ಕಟ್ಕೊಂಡಿದ್ದಾರೆ. ಸ್ಮಾರಕಕ್ಕೆ ಈಗಷ್ಟೇ ಟ್ರಸ್ಟ್ ರಿಜಿಸ್ಟಾರ್ ಆಗಿದೆ. ಇನ್ನಷ್ಟು ಮಿಟೀಂಗ್ ಮಾಡಿ ಯಾವ ರೀತಿ ಡಿಸೈನ್ ಮಾಡ್ಬೇಕು ಅನ್ನೋದನ್ನ ಚರ್ಚೆ ಮಾಡ್ತೀವಿ ಎಂದು ಹೇಳಿದರು.

    ಇದೇ ವೇಳೆ ಸಚಿವ ಗೋಪಾಲಯ್ಯ ಮಾತನಾಡಿ, ಅಂಬರೀಶ್ ಬದುಕಿದ್ದಾಗ ಎಲ್ಲರಿಗೂ ಪ್ರೀತಿ-ಪಾತ್ರರಾಗಿದ್ದರು. ಎಲ್ಲರಿಗೂ ಸಹಾಯ ಮಾಡಿದ್ದ ಮೇರುನಟ, ನನ್ನ ಅವರ ನಡುವೆ ಬಾಂಧವ್ಯ ಚೆನ್ನಾಗಿತ್ತು. ಅಂಬಿ ಸಚಿವರಾಗಿದ್ದಾಗ ನಮ್ಮ ಕ್ಷೇತ್ರಕ್ಕೆ ಮಾಡಿರೋ ಸಹಾಯ ಮರೆಯುವಂತಿಲ್ಲ. ಸ್ಮಾರಕ ಕಟ್ಟೋ ಬಗ್ಗೆ ಮುಖ್ಯಮಂತ್ರಿ ಜೊತೆ ಮೀಟಿಂಗ್ ಆಗಿದೆ ಎಂದು ತಿಳಿಸಿದರು. ನಟ ದರ್ಶನ್ ಕೂಡ ಅಂಬಿ ಸ್ಮಾರಕಕ್ಕೆ ಆಗಮಿಸಿದ್ದಾರೆ.

  • ನಿಮ್ಮ ಮಗನಾಗಿರುವುದಕ್ಕೆ ನನಗೆ ಹೆಮ್ಮೆ ಇದೆ: ತಂದೆಯ ಪುಣ್ಯತಿಥಿಗೆ ರಾಹುಲ್ ನಮನ

    ನಿಮ್ಮ ಮಗನಾಗಿರುವುದಕ್ಕೆ ನನಗೆ ಹೆಮ್ಮೆ ಇದೆ: ತಂದೆಯ ಪುಣ್ಯತಿಥಿಗೆ ರಾಹುಲ್ ನಮನ

    ನವದೆಹಲಿ: ನಿಮ್ಮ ಮಗನಾಗಿರುವುದಕ್ಕೆ ನನಗೆ ಹೆಮ್ಮೆ ಇದೆ ಎಂದು ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಅಪ್ಪ ರಾಜೀವ್ ಗಾಂಧಿಯವರ ಪುಣ್ಯತಿಥಿಗೆ ನಮನ ಸಲ್ಲಿಸಿದ್ದಾರೆ.

    ಇಂದು ಭಾರತದ 6ನೇ ಪ್ರಧಾನ ಮಂತ್ರಿಯಾಗಿ ಸೇವೆಸಲ್ಲಿಸಿದ್ದ ರಾಜೀವ್ ಗಾಂಧಿಯವರ 29ನೇ ಪುಣ್ಯತಿಥಿ, ಈ ಸಮಯದಲ್ಲಿ ಅಪ್ಪನನ್ನು ನೆನಪಿಸಿಕೊಂಡು ಟ್ವೀಟ್ ಮಾಡಿರುವ ರಾಹುಲ್, ನಿಜವಾದ ದೇಶಭಕ್ತ, ಉದಾರವಾದಿ ಮತ್ತು ಲೋಕೋಪಕಾರಿ ತಂದೆಯ ಮಗನಾಗಿರುವುದಕ್ಕೆ ನನಗೆ ಹೆಮ್ಮೆ ಇದೆ ಎಂದಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ನಿಜವಾದ ದೇಶಭಕ್ತ, ಉದಾರವಾದಿ ಮತ್ತು ಲೋಕೋಪಕಾರಿ ತಂದೆಯ ಮಗನಾಗಿರುವುದಕ್ಕೆ ನನಗೆ ಹೆಮ್ಮೆ ಇದೆ. ಪ್ರಧಾನ ಮಂತ್ರಿಯಾಗಿ ರಾಜೀವ್ ಜಿ ದೇಶವನ್ನು ಪ್ರಗತಿಯ ಹಾದಿಯಲ್ಲಿ ಸಾಗಿಸಿದ್ದಾರೆ. ದೇಶವನ್ನು ಮುಂದೆ ತೆಗದುಕೊಂಡು ಹೋಗುವ ದೃಷ್ಟಿಯಿಂದ ಮತ್ತು ರಾಷ್ಟ್ರವನ್ನು ಸಬಲೀಕರಣಗೊಳಿಸಲು ಅವರು ಅನೇಕ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಇಂದು ಅವರ ಪುಣ್ಯ ತಿಥಿಯಂದು ನಾನು ಅವರಿಗೆ ಪ್ರೀತಿಯಿಂದ ಮತ್ತು ಕೃತಜ್ಞತೆಯಿಂದ ವಂದಿಸುತ್ತೇನೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಈ ವಿಚಾರವಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದು, ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿ ಅವರ, ಪುಣ್ಯತಿಥಿಯಂದು ನಾನು ಅವರಿಗೆ ಗೌರವ ಸಲ್ಲಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು, ದೇಶಕ್ಕಾಗಿ ಪ್ರಾಣಬಿಟ್ಟ ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿಯವರಿಗೆ ತುಂಬು ಹೃದಯದ ನಮನ ಎಂದು ಬರೆದುಕೊಂಡಿದ್ದಾರೆ.

    ಚುನಾವಣಾ ಪ್ರಚಾರಕ್ಕಾಗಿ ತಮಿಳುನಾಡಿನ ಶ್ರೀಪೆರಂಬುದೂರ್ ಗೆ ಬಂದಿದ್ದ ರಾಜೀವ್ ಗಾಂಧಿಯವರನ್ನು 1991 ಮೇ 21ರಂದು ಹತ್ಯೆ ಮಾಡಲಾಗಿತ್ತು. ಭಾಷಣ ಮಾಡಲು ಸ್ಟೇಜ್ ಕಡೆ ಹೋಗುತ್ತಿದ್ದಾಗ ರಾಹುಲ್ ಗಾಂಧಿ ಬಳಿ ಬಂದ ಮಹಿಳಾ ಸೂಸೈಡ್ ಬಾಂಬರ್ ತೆನ್ಮೋಜಿ ರಾಜರತ್ಮಂ ಆರ್.ಡಿ.ಎಕ್ಸ್ ಬಾಂಬ್ ಬ್ಲಾಸ್ಟ್ ಮಾಡಿ ರಾಜೀವ್ ಗಾಂಧಿಯವರನ್ನು ಹತ್ಯೆ ಮಾಡಿದ್ದಳು. ಈ ವೇಳೆ ರಾಜೀವ್ ಗಾಂಧಿ ಜೊತೆ ಇನ್ನೂ 14 ಮಂದಿ ಸಾವನ್ನಪ್ಪಿದ್ದರು.

  • 1ನೇ ವರ್ಷದ ಪುಣ್ಯತಿಥಿ- ಅಜಾತಶತ್ರುವನ್ನು ಸ್ಮರಿಸಿದ ಮೋದಿ, ಅಮಿತ್ ಶಾ

    1ನೇ ವರ್ಷದ ಪುಣ್ಯತಿಥಿ- ಅಜಾತಶತ್ರುವನ್ನು ಸ್ಮರಿಸಿದ ಮೋದಿ, ಅಮಿತ್ ಶಾ

    ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ನಿಧನರಾಗಿ ಇಂದಿಗೆ ಒಂದು ವರ್ಷವಾಗಿದೆ. ಈ ವೇಳೆ ಮರೆಯಲಾಗದ ಅಜಾತಶತ್ರುವನ್ನು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸ್ಮರಿಸಿದ್ದಾರೆ.

    ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ವಾಯಪೇಯಿ ಅವರು ಆಗಸ್ಟ್ 16 2018ರಂದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದರು. ಬಿಜೆಪಿ ಹಿರಿಯ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ನಿಧನರಾಗಿ ಇಂದಿಗೆ ಒಂದು ವರ್ಷವಾದ ಹಿನ್ನೆಲೆಯಲ್ಲಿ ಇಂದು ಅವರ ಪುಣ್ಯತಿಥಿ ಆಚರಣೆ ಮಾಡಲಾಗುತ್ತಿದೆ.

    ಈ ಪುಣ್ಯತಿಥಿಗೆ ವಾಜಪೇಯಿ ಅವರ ಸ್ಮಾರಕ ‘ಸದೈವ್ ಅಟಲ್’ಗೆ ಪ್ರಧಾನಿ ಮೋದಿ, ಅಮಿತ್ ಶಾ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಕೇಂದ್ರ ಸಚಿವರೆಲ್ಲರು ಭೇಟಿ ನೀಡಿ ಮಾಜಿ ಪ್ರಧಾನಿ ವಾಜಪೇಯಿ ಅವರಿಗೆ ಗೌರವ ಸಲ್ಲಿಸಿದ್ದಾರೆ.

    ಮಧ್ಯಪ್ರದೇಶದ ಗ್ವಾಲಿಯರ್ ಸಮೀಪದ ಶಿಂದೆ ಕಿ ಚವ್ವಾಣಿ ಹಳ್ಳಿಯಲ್ಲಿ ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ ಕೃಷ್ಣ ಬಿಹಾರಿ ಮತ್ತು ಕೃಷ್ಣಾ ದೇವಿ ದಂಪತಿಗೆ 1924ರ ಡಿಸೆಂಬರ್ 25ರಂದು ವಾಜಪೇಯಿ ಜನಿಸಿದ್ದರು. ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷಾ ಪ್ರೌಢಿಮೆ ಬೆಳೆಸಿದ್ದ ವಾಜಪೇಯಿ ಕಾನ್ಪುರದ ಲಕ್ಷ್ಮೀಬಾಯಿ ಕಾಲೇಜಿನಿಂದ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.

    1942 `ಭಾರತ ಬಿಟ್ಟು ತೊಲಗಿ ಚಳುವಳಿ’ಯಲ್ಲಿ ರಾಜಕಾರಣಕ್ಕೆ ಪ್ರವೇಶಿಸಿದ್ದ ವಾಜಪೇಯಿ ಅವರು 1991, 1996, 1998, 1999 ಹಾಗೂ 2004ರಲ್ಲಿ ಲಕ್ನೋ ಲೋಕಸಭಾ ಕ್ಷೇತ್ರದಿಂದ ಸತತವಾಗಿ 5 ಬಾರಿ ಆಯ್ಕೆ ಆಗಿದ್ದರು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದ ಮೊದಲ ವಿದೇಶಾಂಗ ವ್ಯವಹಾರಗಳ ಸಚಿವ ಎನ್ನುವ ಹೆಗ್ಗಳಿಕೆಗೂ ಕೂಡ ವಾಜಪೇಯಿ ಪಾತ್ರರಾಗಿದ್ದರು.

    ಅಟಲ್ ಬಿಹಾರಿ ವಾಜಪೇಯಿ ಅವರು ಭಾರತೀಯ ರಾಜಕಾರಣಿ ಮತ್ತು ಕವಿಯಾಗಿದ್ದರು. ಅವರು ಮೂರು ಬಾರಿ ಭಾರತದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ಮೊದಲು 1996 ರಲ್ಲಿ 13 ದಿನಗಳ ಅವಧಿಗೆ. ನಂತರ 1998 ರಿಂದ 1999 ರವರೆಗೆ 13 ತಿಂಗಳ ಅವಧಿಗೆ ಮತ್ತು ಅಂತಿಮವಾಗಿ 1999 ರಿಂದ 2004 ರವರೆಗೆ ಪೂರ್ಣಾವಧಿಯಲ್ಲಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ.

  • ಅಂಬಿ ಪುಣ್ಯತಿಥಿಗೆ ಸುಮಲತಾರಿಂದ ಜಯದ ಉಡುಗೊರೆ

    ಅಂಬಿ ಪುಣ್ಯತಿಥಿಗೆ ಸುಮಲತಾರಿಂದ ಜಯದ ಉಡುಗೊರೆ

    ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರು ಭರ್ಜರಿ ಗೆಲುವನ್ನು ಸಾಧಿಸಿದ್ದಾರೆ. ಮಂಡ್ಯದಲ್ಲಿ ಜಯಭೇರಿ ಹಿನ್ನೆಲೆ ಅಂಬರೀಶ್ ಸಮಾಧಿಗೆ ನಮನ ಸಲ್ಲಿಸಲಿದ್ದಾರೆ.

    ಅಂಬರೀಶ್ ಅವರು ನಮ್ಮನ್ನ ಅಗಲಿ ಇಂದಿಗೆ 6 ತಿಂಗಳುಗಳೇ ಕಳೆದಿದೆ. ಈ ಹಿನ್ನೆಲೆಯಲ್ಲಿ 6 ನೇ ತಿಂಗಳ ಪುಣ್ಯ ತಿಥಿ ಕೂಡ ಆಚರಣೆ ಮಾಡಲಿದ್ದಾರೆ. ಇಂದು ಬೆಳ್ಳಗ್ಗೆ 10 ಗಂಟೆ ಸುಮಾರಿಗೆ ಕಂಠೀರವ ಸ್ಟುಡಿಯೋದಲ್ಲಿ ಇರುವ ಅಂಬರೀಶ್ ಸಮಾಧಿಗೆ ಸುಮಲತಾ ಮತ್ತು ಅಭಿಷೇಕ್ ಭೇಟಿ ನೀಡಲಿದ್ದಾರೆ.

    ಇಂದು ನಡೆಯುವ ಪೂಜೆಗೆ ಮಧ್ಯರಾತ್ರಿಯಿಂದಲೇ ಪೂರ್ವ ಸಿದ್ಧತೆ ನಡೆಯುತ್ತಿದ್ದು, ಅಂಬರೀಶ್ ಸಮಾಧಿಗೆ ಪುಪ್ಪಲಂಕಾರವನ್ನು ಮಾಡುತ್ತಿದ್ದರು. ಮಂಡ್ಯದ ಗೆಲುವಿನ ಸಂಭ್ರಮ ಮತ್ತು ಅಂಬಿಯ 6ನೇ ತಿಂಗಳಿನ ಪುಣ್ಯ ತಿಥಿ ಒಟ್ಟೊಟ್ಟಾಗಿ ಬಂದಿದ್ದು ಸಮಾಧಿಗೆ ಭೇಟಿ ನೀಡಿ ಪೂಜೆಯನ್ನು ನೇರವೆರಿಸಲಿದ್ದಾರೆ. ಪೂಜೆ ಕಾರ್ಯಕ್ರಮದಲ್ಲಿ ದರ್ಶನ್ ಮತ್ತು ಯಶ್ ಭಾಗಿಯಾಗುವ ಸಾಧ್ಯತೆಗಳಿವೆ.

    ಕಿಡ್ನಿ ಹಾಗೂ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅಂಬರೀಶ್ ಅವರು 2018ರ ನವೆಂಬರ್ 24ರಂದು ರಾತ್ರಿ ನಿಧನರಾಗಿದ್ದರು. ಅಂದೇ ಮಂಡ್ಯದ ಕನಗನಮರಡಿಯಲ್ಲಿ ಬಸ್ ದುರಂತ ನಡೆದಿದ್ದು, ಘಟನೆ ನೋಡಿ ಬೇಸರಗೊಂಡಿದ್ದ ಅಂಬರೀಶ್ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಹೆಚ್ಚಿನ ಚಿಕಿತ್ಸೆಗೆಂದು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

    ಚುನಾವಣೆಯಲ್ಲಿ ಜಯ:
    ಹೈವೋಲ್ಟೇಜ್ ಕ್ಷೇತ್ರವಾಗಿದ್ದ ಮಂಡ್ಯದಲ್ಲಿ ನಡೆದ ಸ್ವಾಭಿಮಾನಿ ವರ್ಸಸ್ ಸರ್ಕಾರದ ನಡುವಿನ ಸಮರದಲ್ಲಿ ಸುಮಲತಾ ಅವರು ಭರ್ಜರಿ ಗೆಲುವು ಪಡೆದಿದ್ದಾರೆ. ಚುನಾವಣೆಯಲ್ಲಿ ನಿಖಿಲ್ ಅವರಿಗೆ 5,71,777 ಮತ ಲಭಿಸಿದ್ದರೆ, ಸುಮಲತಾ ಅವರಿಗೆ 6,98,213 ಮತ ಲಭಿಸಿದೆ. ಆ ಮೂಲಕ ಸುಮಲತಾ ಅವರು ಬರೋಬ್ಬರಿ 1,26,436 ಮತಗಳ ಅಂತರದಿಂದ ಗೆಲುವು ಪಡೆದಿದ್ದಾರೆ.