Tag: ಪುಣೆ

  • ಧಗಧಗನೇ ಹೊತ್ತಿ ಉರಿದ 42 ಮಂದಿ ಪ್ರಯಾಣಿಕರಿದ್ದ ಬಸ್!

    ಧಗಧಗನೇ ಹೊತ್ತಿ ಉರಿದ 42 ಮಂದಿ ಪ್ರಯಾಣಿಕರಿದ್ದ ಬಸ್!

    ಮುಂಬೈ: ಪುಣೆ ನಗರದಲ್ಲಿ ಮಂಗಳವಾರ ರಾಜ್ಯ ಸಾರಿಗೆ ಬಸ್ (Bus) ಧಗಧಗನೇ ಹೊತ್ತಿ ಉರಿದಿದೆ.

    ಯರವಾಡ ಏರಿಯಾದ ಶಾಸ್ತ್ರಿ ಚೌಕ್‍ನಲ್ಲಿ ಬೆಳಗ್ಗೆ 11:30 ರ ಸುಮಾರಿಗೆ ಬೆಂಕಿ ಅವಘಡ ಸಂಭವಿಸಿದೆ. ಘಟನೆಯಿಂದ ಅದೃಷ್ಟವಶಾತ್ 42 ಪ್ರಯಾಣಿಕರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪಾದರಕ್ಷೆ ಕಾರ್ಖಾನೆಯಲ್ಲಿ ಅಗ್ನಿ ಅವಘಡ- ಇಬ್ಬರ ದುರ್ಮರಣ

    ಬಸ್ ಯಾವತ್ಮಲ್‍ ನಿಂದ ಪುಣೆ (Pune) ಕಡೆಗೆ ಸಂಚರಿಸುತ್ತಿತ್ತು. ಈ ವೇಳೆ ಬಸ್ಸಿನ ಇಂಜಿನ್ ಭಾಗದಲ್ಲಿ ಹೊಗೆ ಬರುವುದನ್ನು ಚಾಲಕ ಹಾಗೂ ನಿರ್ವಾಹಕರು ಗಮನಿಸಿದ್ದಾರೆ. ಕೂಡಲೇ ಅವರು ಪ್ರಯಾಣಿಕರಿಗೆ ತಿಳಿಸಿದ್ದಾರೆ. ತಕ್ಷಣವೇ ಅಷ್ಟೂ ಪ್ರಯಾಣಿಕರು ಬಸ್ಸಿನಿಂದ ಇಳಿದಿದ್ದಾರೆ. ಪ್ರಯಾಣಿಕರು ಇಳಿಯುತ್ತಿದ್ದಂತೆಯೇ ಬ್ ಸಂಪೂರ್ಣ ಬೆಂಕಿಗಾಹುತಿಯಾಗಿದೆ.

    ಇದೇ ವೇಳೆ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಅದೃಷ್ಟವಶಾತ್ ಯಾರೊಬ್ಬರು ಘಟನೆಯಲ್ಲಿ ಗಾಯಗೊಂಡಿಲ್ಲ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಾರಿನಿಂದ ಇಳಿದು ಟ್ರಾಫಿಕ್ ಕ್ಲಿಯರ್ ಮಾಡಿದ ಸುಪ್ರಿಯಾ ಸುಲೆ

    ಕಾರಿನಿಂದ ಇಳಿದು ಟ್ರಾಫಿಕ್ ಕ್ಲಿಯರ್ ಮಾಡಿದ ಸುಪ್ರಿಯಾ ಸುಲೆ

    ಮುಂಬೈ: ಪುಣೆಯ ಹಡಪ್ಸರ್‌ನಲ್ಲಿ ಟ್ರಾಫಿಕ್ ಜಾಮ್ ಮಧ್ಯೆ ಸಿಲುಕಿ ಹಾಕಿಕೊಂಡ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (Nationalist Congress Party) (ಎನ್‍ಸಿಪಿ) ನಾಯಕಿ ಮತ್ತು ಸಂಸದೆ ಸುಪ್ರಿಯಾ ಸುಲೆ (MP Supriya Sule) ಅವರು ತಮ್ಮ ಕಾರಿನಿಂದ ಇಳಿದು ಟ್ರಾಫಿಕ್ ಕ್ಲಿಯರ್ ಮಾಡಲು ಪ್ರಯತ್ನಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಈ ವೀಡಿಯೋವನ್ನು ಸಂಸದೆ ಸುಪ್ರಿಯಾ ಸುಲೆ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಹಡಪ್ಸರ್‌ನಿಂದ (Hadapsar) ಸಾಸ್ವಾದ್‍ವರೆಗಿನ (Saswad) ಪಾಲ್ಖಿ ಹೆದ್ದಾರಿ (Palkhi Highway) ಕಡೆಗೆ ಹೆಚ್ಚಿನ ಗಮನ ನೀಡಬೇಕು. ಇಲ್ಲಿ ರಸ್ತೆಯ ಸ್ಥಿತಿ ಎಷ್ಟು ಕೆಟ್ಟದಾಗಿದೆ ಎಂದರೆ ನಿರಂತರ ಟ್ರಾಫಿಕ್ ಜಾಮ್ ಇರುತ್ತದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವರಾದ ನಿತಿನ್ ಗಡ್ಕರಿ (Nitin Gadkari) , ಈ ಕಾರ್ಯವನ್ನು ಕೂಡಲೇ ಕೈಗೆತ್ತಿಕೊಳ್ಳಬೇಕು ಎಂದು ನಾನು ವಿನಂತಿಸುತ್ತೇನೆ. ದಯವಿಟ್ಟು ಈ ಬಗ್ಗೆ ಪಾಸಿಟಿವ್ ಆಗಿ ಯೋಚಿಸಿ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

    ಕಳೆದ ಒಂದು ವಾರದಲ್ಲಿ ಪುಣೆಯಲ್ಲಿ ಹೆಚ್ಚು ಮಳೆ ದಾಖಲಾಗಿದೆ. ಇದರಿಂದ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಿಸಿದೆ. ಇದನ್ನೂ ಓದಿ: ಕಾವೇರಿ ಕೊಳ್ಳದಲ್ಲಿ ಭರ್ಜರಿ ಮಳೆ – ತಮಿಳುನಾಡಿಗೆ ನಿಗದಿತ ಪ್ರಮಾಣಕ್ಕಿಂತ ನಾಲ್ಕೂವರೆ ಪಟ್ಟು ಅಧಿಕ ನೀರು ಬಿಡುಗಡೆ

    Live Tv
    [brid partner=56869869 player=32851 video=960834 autoplay=true]

  • ಟ್ರಾಫಿಕ್ ಕ್ಲಿಯರ್ ಮಾಡುತ್ತಿದ್ದ ಪೊಲೀಸ್‍ಗೆ ಬಿಯರ್ ಬಾಟಲ್‍ನಲ್ಲಿ ಹೊಡೆದ ಯುವಕ

    ಟ್ರಾಫಿಕ್ ಕ್ಲಿಯರ್ ಮಾಡುತ್ತಿದ್ದ ಪೊಲೀಸ್‍ಗೆ ಬಿಯರ್ ಬಾಟಲ್‍ನಲ್ಲಿ ಹೊಡೆದ ಯುವಕ

    ಪುಣೆ: ಟ್ರಾಫಿಕ್ (Traffic) ಕ್ಲಿಯರ್ ಮಾಡುತ್ತಿದ್ದ ಟ್ರಾಫಿಕ್ ಪೊಲೀಸ್ (Traffic Police) ಒಬ್ಬರಿಗೆ ಯುವಕನೋರ್ವ ಬಿಯರ್ ಬಾಟಲ್‍ನಲ್ಲಿ (Beer Bottle) ಹೊಡೆದು ಹಲ್ಲೆ ನಡೆಸಿರುವ ಘಟನೆ ಪಿಂಪ್ರಿ-ಚಿಂಚ್‍ವಾಡ್‍ನ ಕಾಲೆವಾಡಿ ಪ್ರದೇಶದಲ್ಲಿ ನಡೆದಿದೆ.

    ಟ್ರಾಫಿಕ್ ಪೊಲೀಸ್ ರಮೇಶ್ ಜಾಧವ್ (52) ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಟ್ರಾಫಿಕ್ ಕ್ಲಿಯರ್ ಆಗಿಲ್ಲ ಎಂದು ಸಿಟ್ಟಿಗೆದ್ದ ವೈಭವ್ ಗಾಯಕ್ವಾಡ್ (19) ಎಂಬಾತ ಬಿಯರ್ ಬಾಟಲ್‍ನಿಂದ ರಮೇಶ್ ಜಾಧವ್ ತಲೆಗೆ ಹಲ್ಲೆ ನಡೆಸಿದ್ದಾನೆ.

    ಪ್ರತ್ಯಕ್ಷದರ್ಶಿಗಳ ಪ್ರಕಾರ ಜಾಧವ್, ರಹತ್ನಿ ಚೌಕ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸ್ಥಳದಲ್ಲಿ ಹೆಚ್ಚಿನ ವಾಹನ ದಟ್ಟಣೆ ಇತ್ತು. ಇದನ್ನು ನಿಯಂತ್ರಿಸಲು ಜಾಧವ್ ಚಿಂಚ್‍ವಾಡ್‍ನಿಂದ ಬರುವ ವಾಹನಗಳಿಗೆ ತೆರಳಲು ಅವಕಾಶ ಮಾಡಿಕೊಟ್ಟು ತಪ್‍ಕೀರ್ ಚೌಕ್‍ನಿಂದ ಎಂಎಂ ಚೌಕ್‍ಗೆ ಬರುತ್ತಿದ್ದ ಸಂಚಾರವನ್ನು ನಿಲ್ಲಿಸಿದರು. ಈ ವೇಳೆ ಗಾಯಕ್ವಾಡ್ ಈ ಬಗ್ಗೆ ಪ್ರಶ್ನಿಸಿ ಬೈದಿದ್ದಾನೆ. ಬಳಿಕ ತನ್ನ ಬಳಿ ಇದ್ದ ಬಿಯರ್ ಬಾಟಲ್‍ನಿಂದ ಜಾಧವ್ ತಲೆಗೆ ಹೊಡೆದಿದ್ದಾನೆ.

    ಬಳಿಕ ರಕ್ತಸ್ರಾವದಿಂದ ಕೆಳಕ್ಕೆ ಬಿದ್ದ ಜಾಧವ್ ಬಳಿ ಯಾರು ಕೂಡ ಬರಬಾರದು ಎಂದು ಸ್ಥಳದಲ್ಲಿದ್ದವರಿಗೆ ಗಾಯಕ್ವಾಡ್ ಬೆದರಿಕೆ ಹಾಕಿದ್ದು ಕೊನೆಗೆ ಸ್ಥಳಕ್ಕೆ ಬಂದು ಪೊಲೀಸರು ಆತನನ್ನು ಬಂಧಿಸಿದ್ದಾರೆ. ಕೊಡಲೇ ಜಾಧವ್‍ರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪಿಎಫ್‌ಐ ಪ್ರತಿಭಟನೆ ವೇಳೆ ಪಾಕ್ ಪರ ಘೋಷಣೆ – ಪ್ರಕರಣ ದಾಖಲು

    ಪಿಎಫ್‌ಐ ಪ್ರತಿಭಟನೆ ವೇಳೆ ಪಾಕ್ ಪರ ಘೋಷಣೆ – ಪ್ರಕರಣ ದಾಖಲು

    ಮುಂಬೈ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ನಡೆಸಿರುವ ಪ್ರತಿಭಟನೆ (Protest) ವೇಳೆ ಕೆಲ ಪ್ರತಿಭಟನಾಕಾರರು ಪಾಕಿಸ್ತಾನ್ ಜಿಂದಾಬಾದ್ (Pakistan Zindabad) ಎಂದು ಘೋಷಣೆಗಳನ್ನು ಕೂಗಿರುವ ಘಟನೆ ಶುಕ್ರವಾರ ಪುಣೆಯಲ್ಲಿ (Pune) ನಡೆದಿದೆ. ಇದರ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿಯೂ ಕಾಣಿಸಿಕೊಂಡಿದ್ದು, ಈ ಹಿನ್ನೆಲೆ ಮಹಾರಾಷ್ಟ್ರದ (Maharashtra) ಕೆಲ ಬಿಜೆಪಿ (BJP) ನಾಯಕರು ಘೋಷಣೆ ಕೂಗಿದವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.

    ಪಿಎಫ್‌ಐ ಸಂಘಟನೆಯ ಮೇಲೆ ರಾಷ್ಟ್ರವ್ಯಾಪಿಯಾಗಿ ಎನ್‌ಐಎ (NIA) ಅಧಿಕಾರಿಗಳು ದಾಳಿ ನಡೆಸಿದ್ದು, ಇದನ್ನು ಖಂಡಿಸಿ ಪಿಎಫ್‌ಐ ಕಾರ್ಯಕರ್ತರು ಶುಕ್ರವಾರ ಪುಣೆ ನಗರದ ಜಿಲ್ಲಾಧಿಕಾರಿ ಕಚೇರಿಯ ಹೊರಗಡೆ ಪ್ರತಿಭಟನೆಯನ್ನು ಆಯೋಜಿಸಿದ್ದರು. ಪ್ರತಿಭಟನೆಯ ವೇಳೆ ಸುಮಾರು 40 ಜನರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪೊಲೀಸರು ಪ್ರತಿಭಟನಾಕಾರರನ್ನು ತಮ್ಮ ವಾಹನದಲ್ಲಿ ಕೂರಿಸುವಾಗ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆಯನ್ನು ಕೂಗಿದ್ದಾರೆ. ಇದನ್ನೂ ಓದಿ: ಇರಾನ್‌ನಲ್ಲಿ ಹಿಜಬ್ ಹೋರಾಟ – 60 ಮಹಿಳೆಯರು ಸೇರಿ 700ಕ್ಕೂ ಹೆಚ್ಚು ಮಂದಿ ಅರೆಸ್ಟ್

    ಪ್ರತಿಭಟನಾಕಾರರು ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗಿರುವ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ. ಕಾನೂನುಬಾಹಿರ ಪ್ರತಿಭಟನೆ ನಡೆಸಿರುವುದಕ್ಕಾಗಿ ಪಿಎಫ್‌ಐ ಸದಸ್ಯರ ವಿರುದ್ಧ ನಾವು ಈಗಾಗಲೇ ಪ್ರಕರಣ ದಾಖಲಿಸಿದ್ದೇವೆ. ಪಾಕಿಸ್ತಾನ ಪರ ಘೋಷಣೆ ಕೂಗಿರುವ ವಿಷಯವನ್ನು ನಾವು ಪರಿಶೀಲಿಸುತ್ತಿದ್ದೇವೆ ಎಂದು ಉಪ ಪೊಲೀಸ್ ಆಯುಕ್ತ ಸಾಗರ್ ಪಾಟೀಲ್ ಹೇಳಿದ್ದಾರೆ.

    ಅನುಮತಿಯಿಲ್ಲದೇ ಪ್ರತಿಭಟನೆ ನಡೆಸಿರುವುದಕ್ಕೆ 60 ಕ್ಕೂ ಹೆಚ್ಚು ಪ್ರತಿಭಟನಾಕಾರರ ವಿರುದ್ಧ ಬಂಡ್‌ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮಹಿಳೆಯರು ಸುರಕ್ಷಿತವಾಗಿದ್ದರೆ ಮಾತ್ರ ಭಾರತದ ಪ್ರಗತಿ ಸಾಧ್ಯ – ರಾಹುಲ್ ಗಾಂಧಿ

    Live Tv
    [brid partner=56869869 player=32851 video=960834 autoplay=true]

  • ನೀರು ಕೇಳಿ ಮನೆಗೆ ನುಗ್ಗಿ ಬಲವಂತವಾಗಿ ಚುಂಬಿಸಿದ – ಫುಡ್ ಡೆಲಿವರಿ ಏಜೆಂಟ್ ಅರೆಸ್ಟ್

    ನೀರು ಕೇಳಿ ಮನೆಗೆ ನುಗ್ಗಿ ಬಲವಂತವಾಗಿ ಚುಂಬಿಸಿದ – ಫುಡ್ ಡೆಲಿವರಿ ಏಜೆಂಟ್ ಅರೆಸ್ಟ್

    ಮುಂಬೈ: 19 ವರ್ಷದ ಯುವತಿಗೆ ಬಲವಂತವಾಗಿ ಚುಂಬಿಸಿದ 42 ವರ್ಷದ ಫುಡ್ ಡೆಲಿವರಿ ಏಜೆಂಟ್‍ನನ್ನು (Food Delivery Agent) ಪೊಲೀಸರು ಬಂಧಿಸಿದ್ದಾರೆ.

    ಸೆಪ್ಟೆಂಬರ್ 17 ರಂದು ಪುಣೆಯ ಯೆವಾಲೆವಾಡಿಯಲ್ಲಿ (Pune’s Yewalewadi) ಯುವತಿಯೊಬ್ಬಳೆ ಮನೆಯಲ್ಲಿದ್ದ ವೇಳೆ ಈ ಘಟನೆ ನಡೆದಿದೆ. ಇದೀಗ ಈ ಸಂಬಂಧ ಕೊಂಡ್ವಾ ಪೊಲೀಸ್ ಠಾಣೆಯಲ್ಲಿ (Kondhwa police station) ಯುವತಿ ಪ್ರಕರಣ ದಾಖಲಿಸಿದ್ದು, ಶನಿವಾರ ಫುಡ್ ಆರ್ಡರ್ (Food Order) ಮಾಡಿರುವುದಾಗಿ ಬಹಿರಂಗಪಡಿಸಿದ್ದಾಳೆ. ಇದನ್ನೂ ಓದಿ: ಹೊಟ್ಟೆಯಲ್ಲಿ 1 ಕೆ.ಜಿ ಚಿನ್ನ ಬಚ್ಚಿಟ್ಟುಕೊಂಡು ಸ್ಮಗ್ಲಿಂಗ್ ಮಾಡುತ್ತಿದ್ದ ವ್ಯಕ್ತಿಯ ಬಂಧನ

    ಫುಡ್ ಡೆಲಿವರಿ ಮಾಡಲೆಂದು ಮನೆಗೆ ಬಂದ ಡೆಲಿವರಿ ಏಜೆಂಟ್ ಒಂದು ಗ್ಲಾಸ್ ನೀರು ನೀಡುವಂತೆ ಕೇಳಿದ್ದಾನೆ. ನಂತರ ಆರೋಪಿ ಮನೆಗೆ ಬಂದಿದ್ದಾನೆ. ಬಳಿಕ ಯುವತಿಯೊಂದಿಗೆ ಸ್ನೇಹದಿಂದ ಮಾತನಾಡಲು ಆರಂಭಿಸಿ ಮನೆಯಲ್ಲಿರುವ ಕುಟುಂಬಸ್ಥರ ಬಗ್ಗೆ ವಿಚಾರಿಸಿದ್ದಾನೆ. ಇದನ್ನೂ ಓದಿ : ರಾಜ್ಯದಲ್ಲಿ ಯಾವುದೇ ಕಾರಣಕ್ಕೂ APMC ಕಾಯ್ದೆ ರದ್ದು ಮಾಡೋದಿಲ್ಲ- ಎಸ್.ಟಿ ಸೋಮಶೇಖರ್

    ಈ ವೇಳೆ ಯುವತಿ ತಾನು ತನ್ನ ರೂಮ್‍ಮೇಟ್‍ಗಳೊಂದಿಗೆ (Roommate) ವಾಸಿಸುತ್ತಿದ್ದೇನೆ ಆದರೆ ಅವರು ಪ್ರಸ್ತುತ ಮನೆಯಲ್ಲಿಲ್ಲ ಎಂದು ಹೇಳಿದಾಗ ಈ ಪರಿಸ್ಥಿತಿಯನ್ನೇ ಲಾಭವಾಗಿ ಮಾಡಿಕೊಂಡು ನೀರು ತರಲು ಯುವತಿಯನ್ನು ಕೇಳಿದ್ದಾನೆ. ಆಹ ಯುವತಿ ನೀರು ತರಲು ತಿರುಗುತ್ತಿದ್ದಂತೆಯೇ ಆರೋಪಿ ಆಕೆಯನ್ನು ಹಿಂದಿನಿಂದ ಹಿಡಿದುಕೊಂಡು ಕೆನ್ನೆಗೆ ಎರಡು ಬಾರಿ ಮುತ್ತಿಟ್ಟಿದ್ದಾನೆ. ನಂತರ ಮನೆಯಿಂದ ಹೊರಡುವ ಮುನ್ನ ಆರೋಪಿ, ನಾನು ನಿನ್ನ ಚಿಕ್ಕಪ್ಪನಿದ್ದಂತೆ ಎಂದು ಹೇಳಿ ಬೇಕಿದ್ದರೆ ತನ್ನನ್ನು ಸಂಪರ್ಕಿಸುವಂತೆ ಹೇಳಿದ್ದಾನೆ.

    ಆರಂಭದಲ್ಲಿ ಯುವತಿ ಆರೋಪಿ ವಿರುದ್ಧ ಯಾವುದೇ ದೂರು ದಾಖಲಿಸಿರಲಿಲ್ಲ. ಆದರೆ ಯಾವಾಗ ಆತ ಆಕೆಗೆ ವಾಟ್ಸಾಪ್‍ನಲ್ಲಿ ಮೆಸೇಜ್ ಮಾಡಲು ಆರಂಭಿಸಿದನೋ ಆಗ ಯುವತಿ ಕೊಂಡ್ವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಇದೀಗ ಯುವತಿ ನೀಡಿದ ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದ್ದು, ಪ್ರಕರಣ ಕುರಿತಂತೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಸರ್ದಾರ್ ಪಾಟೀಲ್ (Senior Police Inspector Sardar Patil ) ತಿಳಿಸಿದ್ದಾರೆ.

     

    Live Tv
    [brid partner=56869869 player=32851 video=960834 autoplay=true]

  • ಮಗಳ ಪ್ರಿಯಕರನ ಮುಖಕ್ಕೆ ಮೆಣಸಿನ ಪುಡಿ ಎರಚಿ ರಾಡ್‍ನಿಂದ ಹಲ್ಲೆ ನಡೆಸಿದ ಮಹಿಳೆ

    ಮಗಳ ಪ್ರಿಯಕರನ ಮುಖಕ್ಕೆ ಮೆಣಸಿನ ಪುಡಿ ಎರಚಿ ರಾಡ್‍ನಿಂದ ಹಲ್ಲೆ ನಡೆಸಿದ ಮಹಿಳೆ

    ಮುಂಬೈ: ಮಗಳನ್ನು(Daughter) ಪ್ರೀತಿಸುತ್ತಿದ್ದ ಪ್ರಿಯಕರನ (Lover) ಮುಖಕ್ಕೆ ಮೆಣಸಿನ ಪುಡಿ (Chilli Powder) ಎರಚಿ ರಾಡ್‍ನಿಂದ ಹಲ್ಲೆ ನಡೆಸಿದ ಆರೋಪದಡಿ ಮಹಿಳೆ ಮತ್ತು ಆಕೆಯ ಪುತ್ರನನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.

    ಸೆಪ್ಟೆಂಬರ್ 13 ರಂದು ಚಿಂಚ್‍ವಾಡ್ ಪ್ರದೇಶದ ಪಾಶ್ ಸೊಸೈಟಿ ಬಳಿ ಈ ಘಟನೆ ನಡೆದಿದೆ. ಹಲ್ಲೆಗೊಳಗಾದ ಯುವಕನನ್ನು ವಿಶಾಲ್ ಕಸ್ಬೆ(Vishal Kasbe) ಎಂದು ಗುರುತಿಸಲಾಗಿದ್ದು, ಕಳೆದ ಆರು ವರ್ಷಗಳಿಂದ ಯುವಕ ಹಾಗೂ ಮಹಿಳೆಯ ಪುತ್ರಿ ಪರಸ್ಪರ ಪ್ರೀತಿಸುತ್ತಿದ್ದರು. ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಯುವತಿಯನ್ನು ಭೇಟಿಯಾಗಲು ಯುವಕ ಬಂದಿದ್ದನು. ಆದರೆ ಆತ ತನ್ನ ಗೆಳತಿಯನ್ನು (Girlfriend) ಭೇಟಿಯಾಗುವ ಮುನ್ನವೇ ಆಕೆಯ ತಾಯಿ ಮತ್ತು ಇಬ್ಬರು ಅಪ್ರಾಪ್ತ ಸಹೋದರರು ಮನೆಯಿಂದ ಹೊರಬಂದು ಯುವಕನನ್ನು ವಿಚಾರಿಸಲು ಆರಂಭಿಸಿದ್ದಾರೆ. ಈ ವೇಳೆ ಮಾತು ಜಗಳಕ್ಕೆ ತಿರುಗಿದೆ.

    ನಂತರ ಯುವಕನ ಮುಖಕ್ಕೆ ಮಹಿಳೆ ಮೆಣಸಿನ ಪುಡಿ ಎರಚಿದ್ದಾಳೆ. ಇದರಿಂದ ಅಸಹಾಯಕನಾದ ಯುವಕನಿಗೆ ಮಹಿಳೆಯ ಪುತ್ರರು ರಾಡ್‍ನಿಂದ(Rod) ಹಲ್ಲೆ ನಡೆಸಿ ಅಮಾನುಷವಾಗಿ ಥಳಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ನಂತರ ಸ್ಥಳೀಯರು(Residents) ಯುವಕನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇದೀಗ ಪ್ರಿಯಕರ ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ(Treatment) ಪಡೆಯುತ್ತಿದ್ದಾನೆ ಮತ್ತು ಆತನ ತಲೆಗೆ ಹಲವಾರು ಗಾಯಗಳಾಗಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಭೀಕರ ರಸ್ತೆ ಅಪಘಾತ – ಡಿಕ್ಕಿ ಹೊಡೆದು, ಬೈಕ್ ಸವಾರನ ಎಳೆದೊಯ್ದ ಲಾರಿ

    ಸದ್ಯ ಗೆಳತಿಯ ತಾಯಿ ಹಾಗೂ ಆಕೆಯ ಇಬ್ಬರು ಪುತ್ರರನ್ನು ಪೊಲೀಸರು ಬಂಧಿಸಿದ್ದು, ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‍ಗಳ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಗೆ ದೇಣಿಗೆ ಬೆದರಿಕೆ ಪ್ರಕರಣ – ಮೂವರು ಕಾಂಗ್ರೆಸ್ ಕಾರ್ಯಕರ್ತರು ಅಮಾನತು

    Live Tv
    [brid partner=56869869 player=32851 video=960834 autoplay=true]

  • 2 ಫ್ಯಾಕ್ಟರಿಗಳ ಮೇಲೆ ದಾಳಿ – 2,000 ಕೆಜಿ ಕಲಬೆರಕೆ ಪನೀರ್ ವಶ

    2 ಫ್ಯಾಕ್ಟರಿಗಳ ಮೇಲೆ ದಾಳಿ – 2,000 ಕೆಜಿ ಕಲಬೆರಕೆ ಪನೀರ್ ವಶ

    ಮುಂಬೈ: ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ(FDA) ಅಧಿಕಾರಿಗಳು ಪುಣೆ(Pune) ನಗರದಲ್ಲಿ ಡೈರಿ ಉತ್ಪನ್ನಗಳ 2 ಕಾರ್ಖಾನೆಗಳ(Factory) ಮೇಲೆ ದಾಳಿ ನಡೆಸಿ 2,000 ಕೆಜಿ ಕಲಬೆರಕೆ ಪನೀರ್(Adulterated Paneer) ಮತ್ತು ಕೆನೆರಹಿತ ಹಾಲಿನ ಪುಡಿಯನ್ನು ವಶಪಡಿಸಿಕೊಂಡಿದ್ದಾರೆ.

    ಕೊಂಡ್ವಾ ಮತ್ತು ವಾನ್ವಾಡಿ ಪ್ರದೇಶದಲ್ಲಿರುವ ಕಾರ್ಖಾನೆಗಳಲ್ಲಿ ತೈಲ ಮತ್ತು ಹಾಲಿನ ಪುಡಿಯನ್ನು ಬಳಸಿ ಕಲಬೆರಕೆ ಪನೀರ್ ಅನ್ನು ತಯಾರಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ದಾಳಿ ನಡೆಸಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ರಾಣಿ ಎಲಿಜಬೆತ್ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ ದ್ರೌಪದಿ ಮುರ್ಮು

    ಇದು ಸೆಪ್ಟೆಂಬರ್ 5ರ ಬಳಿಕ ನಡೆಸಲಾದ 3ನೇ ದಾಳಿಯಾಗಿದೆ. ದಾಳಿಯಲ್ಲಿ ಕಲಬೆರಕೆ ಪನೀರ್ ಮತ್ತು ಇತರ ಡೈರಿ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಂದು ನಡೆಸಲಾಗಿರುವ ದಾಳಿಯಲ್ಲಿ 2 ಫ್ಯಾಕ್ಟರಿಗಳಿಂದ 2,000 ಕೆಜಿ ಕಲಬೆರೆಕೆ ಪನೀರ್ ವಶಪಡಿಸಿಕೊಳ್ಳಲಾಗಿದೆ. ಇದು ಸುಮಾರು 25 ಲಕ್ಷ ಮೌಲ್ಯದ್ದಾಗಿದೆ ಎಂದು ಎಫ್‌ಡಿಎ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಟೇಕ್ ಆಫ್ ಆಗುವ ಮೊದಲೇ ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಇಂಜಿನ್‍ನಲ್ಲಿ ಬೆಂಕಿ

    ಅವುಗಳ ಮಾದರಿಗಳನ್ನು ಪರೀಕ್ಷೆಗಾಗಿ ಎಫ್‌ಡಿಎ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮುಂದಿನ ಆದೇಶದವರೆಗೆ ವ್ಯಾಪಾರವನ್ನು ನಿಲ್ಲಿಸುವಂತೆ ನಾವು ಎರಡೂ ಡೈರಿಗಳಿಗೆ ನೋಟಿಸ್ ನೀಡಿದ್ದೇವೆ ಎಂದು ಅವರು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗಣಪತಿ ವಿಸರ್ಜನೆ ಬಳಿಕ 6 ಟ್ರಕ್ ತುಂಬುವಷ್ಟು ಚಪ್ಪಲಿಗಳನ್ನು ಸಂಗ್ರಹಿಸಿದ ಘನತ್ಯಾಜ್ಯ ಇಲಾಖೆ

    ಗಣಪತಿ ವಿಸರ್ಜನೆ ಬಳಿಕ 6 ಟ್ರಕ್ ತುಂಬುವಷ್ಟು ಚಪ್ಪಲಿಗಳನ್ನು ಸಂಗ್ರಹಿಸಿದ ಘನತ್ಯಾಜ್ಯ ಇಲಾಖೆ

    ಮುಂಬೈ: ಗಣಪತಿ ವಿಸರ್ಜನೆ ಬಳಿಕ ಪುಣೆಯ ಮುನ್ಸಿಪಲ್ ಕಾರ್ಪೊರೆಷನ್(ಪಿಎಂಸಿ) ಘನತ್ಯಾಜ ಇಲಾಖೆ(ಎಸ್‌ಡಬ್ಲ್ಯುಎಂ) ನಗರದಲ್ಲಿ ಸುಮಾರು 21 ಟನ್‌ಗಳಷ್ಟು ಕಸವನ್ನು ಸಂಗ್ರಹಿಸಿದೆ. ಇದರಲ್ಲಿ ಸುಮಾರು 6 ಮಿನಿ ಟ್ರಕ್‌ಗಳಲ್ಲಿ ತುಂಬಲಾಗುವಷ್ಟು ಚಪ್ಪಲಿಗಳೇ ದೊರೆತಿವೆ ಎಂದು ವರದಿಯಾಗಿದೆ.

    ಪುಣೆಯಲ್ಲಿ ನಡೆದ ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ 5 ಲಕ್ಷಕ್ಕೂ ಅಧಿಕ ಜನರು ಭಾಗವಹಿಸಿದ್ದರು. ಹಬ್ಬ ಕಳೆದ ಬಳಿಕ ಸುಮಾರು 1,037 ಪಿಎಂಸಿ ಸಿಬ್ಬಂದಿ ಬೀದಿಗಿಳಿದು ಕಸವನ್ನು ಸಂಗ್ರಹಿಸಿದ್ದಾರೆ. ಸ್ವಚ್ಛ ಸಂಸ್ಥೆ, ಜನವಾಣಿ ಸಂಸ್ಥೆ, ನಾನಾಸಾಹೇಬ್ ಧರ್ಮಾಧಿಕಾರಿ ಪ್ರತಿಷ್ಠಾನ, ರೋಟರಿ ಕ್ಲಬ್, ಮರಾಠವಾಡ ಕಾಲೇಜು ಹಾಗೂ ಇತರ ಸಂಸ್ಥೆಗಳ ಸುಮಾರು 650 ಸ್ವಯಂ ಸೇವಕರು ಈ ಸ್ವಚ್ಛ ನಗರ ಅಭಿಯಾನಕ್ಕೆ ಕೈ ಜೋಡಿಸಿದ್ದರು ಎಂದು ಎಸ್‌ಡಬ್ಲ್ಯುಎಂ ಉಪ ಆಯುಕ್ತ ಆಶಾ ರಾವತ್ ತಿಳಿಸಿದರು. ಇದನ್ನೂ ಓದಿ: ಕೊನೆಗೂ ತೇಜಸ್ವಿ ನಿವಾಸಕ್ಕೆ ತಲುಪಿತು ಕಾಂಗ್ರೆಸ್ ದೋಸೆ – ಡೆಲಿವರಿ ಬಾಯ್ ಪೊಲೀಸರ ವಶಕ್ಕೆ

    ಗಣಪತಿ ವಿಸರ್ಜನೆ ಮೆರವಣಿಗೆ ಲಕ್ಷ್ಮಿ ರಸ್ತೆ, ತಿಲಕ್ ರಸ್ತೆ, ಕುಮ್ಟೇಕರ್ ರಸ್ತೆ, ನಾರಾಯಣ ಪೇಠ ರಸ್ತೆ, ಬಾಜಿರಾವ್ ರಸ್ತೆ, ಶಿವಾಜಿ ರಸ್ತೆ, ಅಲ್ಕಾ ಚೌಕ್, ಖಂಡುಜಿ ಬಾಬಾ ಚೌಕ್, ಕರವೇ ರಸ್ತೆ, ಜಂಗ್ಲಿ ಮಹಾರಾಜ್ ರಸ್ತೆ, ಸೇನಾಪತಿ ಬಾಪಟ್ ರಸ್ತೆ, ಗಣೇಶಖಿಂಡ್ ರಸ್ತೆ, ಫರ್ಗುಸನ್ ಕಾಲೇಜು ರಸ್ತೆ, ಪ್ರಭಾತ್ ಮಾರ್ಗವಾಗಿ ಸಾಗಿದೆ ಎಂದು ವರದಿಗಳು ತಿಳಿಸಿವೆ.

    ಮೆರವಣಿಗೆ ಸಾಗಿದ ಪ್ರದೇಶದಲ್ಲಿ ಕಸ ಸಂಗ್ರಹಿಸಲು ಪಿಎಂಸಿ 9 ಕಾಂಪ್ಯಾಕ್ಟರ್‌ಗಳು, 13 ಸಣ್ಣ ವಾಹನಗಳು, 6 ಟೆಂಪೋಗಳು, 8 ಟಿಪ್ಪರ್‌ಗಳು ಮತ್ತು 8 ಇತರ ವಾಹನಗಳನ್ನು ಬಳಸಿದೆ ಎನ್ನಲಾಗಿದೆ. ಇದನ್ನೂ ಓದಿ: ಕುಂಬಳಕಾಯಿ 47,000 ರೂ.ಗೆ ಹರಾಜು

    Live Tv
    [brid partner=56869869 player=32851 video=960834 autoplay=true]

  • ಪಬ್ಲಿಕ್ ಪ್ಲೇಸ್‍ನಲ್ಲಿ ಸ್ನಾನ ಮಾಡುವಂತೆ ಪತ್ನಿಗೆ ಕಿರುಕುಳ – ಪತಿ ವಿರುದ್ಧ ಕೇಸ್

    ಪಬ್ಲಿಕ್ ಪ್ಲೇಸ್‍ನಲ್ಲಿ ಸ್ನಾನ ಮಾಡುವಂತೆ ಪತ್ನಿಗೆ ಕಿರುಕುಳ – ಪತಿ ವಿರುದ್ಧ ಕೇಸ್

    ಮುಂಬೈ: ಸಾರ್ವಜನಿಕವಾಗಿ ಸ್ನಾನ ಮಾಡುವಂತೆ ಪತ್ನಿಗೆ ಕಿರುಕುಳ ನೀಡಿದ್ದ ಪತಿ ವಿರುದ್ಧ ಪುಣೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

    ಪತ್ನಿ ಗರ್ಭಧರಿಸಬೇಕಾದರೆ ಸಾರ್ವಜನಿಕವಾಗಿ ಸ್ನಾನ ಮಾಡಬೇಕೆಂದು ಮಾಂತ್ರಿಕನೋರ್ವ ಸಲಹೆ ನೀಡಿದ್ದರಿಂದ ವ್ಯಕ್ತಿಯೊರ್ವ ತನ್ನ ಪತ್ನಿಗೆ ಸಾರ್ವಜನಿಕವಾಗಿ ಎಲ್ಲರ ಮುಂದೆ ಸ್ನಾನ ಮಾಡುವಂತೆ ಕಿರುಕುಳ ನೀಡಿದ ಹಿನ್ನೆಲೆ ಆತ ಮತ್ತು ಆತನ ಪೋಷಕರ ವಿರುದ್ಧ  ಪ್ರಕರಣ ದಾಖಲಾಗಿದೆ.

    ಮಾಂತ್ರಿಕ ನೀಡಿದ ಸಲಹೆಯ ಮೇರೆಗೆ ಮಹಿಳೆಯನ್ನು ರಾಯಗಡ ಜಿಲ್ಲೆಯ ಜಲಪಾತಕ್ಕೆ ಕರೆದೊಯ್ದು ವ್ಯಕ್ತಿ ಎಲ್ಲರ ಮುಂದೆ ಸ್ನಾನ ಮಾಡುವಂತೆ ಒತ್ತಾಯಿಸಿದ್ದಾನೆ. ಇದನ್ನೂ ಓದಿ: ಮಡಿಕೇರಿಯಲ್ಲಿ ನಡೆದ ಮೊಟ್ಟೆ ಎಸೆತ ಪ್ರಕರಣ ನನಗೆ ಗೊತ್ತಿಲ್ಲ: ಅಪ್ಪಚ್ಚು ರಂಜನ್

    ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 498 (ವಿವಾಹಿತ ಸ್ತ್ರೀಯನ್ನು ಆಪರಾಧಿಕ ಉದ್ದೇಶದಿಂದ ಪುಸಲಾಯಿಸುವುದು ಅಥವಾ ಕರೆದುಕೊಂಡುಹೋಗುವುದು) ಮತ್ತು ಮಾನವಬಲಿ, ಅಮಾನವೀಯ, ದುಷ್ಟ, ಅಘೋರಿ ಆಚರಣೆಗಳು ಸೇರಿದಂತೆ ಮಹಾರಾಷ್ಟ್ರದ 2013ರ ಬ್ಲ್ಯಾಕ್ ಮ್ಯಾಜಿಕ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಭಾರತಿ ವಿದ್ಯಾಪೀಠದ ಪೊಲೀಸರು ತಿಳಿಸಿದ್ದಾರೆ.

    ಈ ಸಂಬಂಧ ತನಿಖೆ ನಡೆಸುವ ವೇಳೆ ದಂಪತಿಗೆ ಮಕ್ಕಳಿರಲಿಲ್ಲ. ಹಾಗಾಗಿ ಮಾಂತ್ರಿಕನ ಸಲಹೆಯ ಮೇರೆಗೆ ಮಹಿಳೆಯನ್ನು ರಾಯಗಡ ಜಿಲ್ಲೆಯ ಜಲಪಾತಕ್ಕೆ ಕರೆದೊಯ್ದು ನಂತರ ಎಲ್ಲರ ಮುಂದೆ ಸ್ನಾನ ಮಾಡುವಂತೆ ಹಿಂಸೆ ನೀಡಿದ್ದಾನೆ ಎಂದು ತಿಳಿದುಬಂದಿದೆ.  ಇದನ್ನೂ ಓದಿ: ಕೊಡಗಿನಲ್ಲಿ ನಾಳೆಯಿಂದ ಶನಿವಾರದವರೆಗೆ ನಿಷೇಧಾಜ್ಞೆ- ಮದ್ಯ ಮಾರಾಟ ನಿಷೇಧ

    Live Tv
    [brid partner=56869869 player=32851 video=960834 autoplay=true]

  • ನೆರೆಮನೆ ಗಿಳಿಯ ಕಿರಿಕಿರಿ ತಾಳಲಾಗದೇ ಪೊಲೀಸರಿಗೆ ದೂರು ನೀಡಿದ ಅಜ್ಜ

    ನೆರೆಮನೆ ಗಿಳಿಯ ಕಿರಿಕಿರಿ ತಾಳಲಾಗದೇ ಪೊಲೀಸರಿಗೆ ದೂರು ನೀಡಿದ ಅಜ್ಜ

    ಮುಂಬೈ: ನೆರೆಮನೆಯ ಸಾಕು ಗಿಳಿ ನಿರಂತರವಾಗಿ ಕಿರುಚಾಡುತ್ತದೆ. ಇದರಿಂದ ನನಗೆ ಬಹಳ ಕಿರಿಕಿರಿಯಾಗುತ್ತಿದೆ. ದಯವಿಟ್ಟು ಈ ಸಮಸ್ಯೆಯನ್ನು ಬಗೆಹರಿಸಿ ಎಂದು ವೃದ್ಧರೊಬ್ಬರು ಪೊಲೀಸರ ಮೊರೆ ಹೋಗಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

    72 ವರ್ಷದ ವೃದ್ಧ ಸುರೇಶ್ ಶಿಂಧೆ, ತಮ್ಮ ನೆರೆಮನೆಯ ಅಕ್ಬರ್ ಅಮ್ಜದ್ ಖಾನ್ ಅವರು ಸಾಕಿರುವ ಗಿಳಿಯಿಂದ ತಮಗೆ ಬಹಳ ತೊಂದರೆಯಾಗುತ್ತಿದೆ. ಅದು ಯಾವಾಗಲೂ ಕಿರುಚಾಡುತ್ತಿರುತ್ತದೆ. ಹೀಗಾಗಿ ಅಮ್ಜದ್ ಖಾನ್ ವಿರುದ್ಧ ದೂರು ದಾಖಲಿಸುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ. ಇದನ್ನೂ ಓದಿ: 75ನೇ ಸ್ವಾತಂತ್ರ್ಯ ಸಂಭ್ರಮಕ್ಕೆ 75 ಮೀ. ತಿರಂಗಾದೊಂದಿಗೆ 75 ಕಿ.ಮೀ ರ‍್ಯಾಲಿ

    ಸುರೇಶ್ ಶಿಂಧೆ ಆಗಸ್ಟ್ 5 ರಂದು ದೂರು ನೀಡಿರುವುದಾಗಿ ಪೊಲೀಸರು ಭಾನುವಾರ ತಿಳಿಸಿದ್ದಾರೆ. ಅವರ ದೂರಿನ ಅನ್ವಯ ಗಿಳಿಯ ಮಾಲೀಕರ ವಿರುದ್ಧ ಶಾಂತಿ ಭಂಗ ಹಾಗೂ ಕ್ರಿಮಿನಲ್ ಬೆದರಿಕೆಗಳನ್ನು ಗುರುತಿಸಲಾದ ಅಪರಾಧಗಳ ಅಡಿ ದೂರನ್ನು ದಾಖಲಿಸಿಕೊಂಡಿದ್ದೇವೆ. ನಿಯಮಗಳ ಪ್ರಕಾರ ನಾವು ಮುಂದುವರಿಯುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 18ರ ಯುವತಿ ಆರ್ಯ ವಾಲ್ವೇಕರ್‌ಗೆ ಮಿಸ್ ಇಂಡಿಯಾ USA-2022 ಕಿರೀಟ; ಈಕೆ ಯಾರು ಗೊತ್ತಾ?

    Live Tv
    [brid partner=56869869 player=32851 video=960834 autoplay=true]