Tag: ಪುಣೆ

  • 8 ವರ್ಷ ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನದ ಯುವಕ ಅರೆಸ್ಟ್

    8 ವರ್ಷ ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನದ ಯುವಕ ಅರೆಸ್ಟ್

    ಮುಂಬೈ: 8 ವರ್ಷಗಳ ಕಾಲ ಭಾರತದಲ್ಲಿ (India) ಅಕ್ರಮವಾಗಿ ನೆಲೆಸಿದ್ದ 22 ವರ್ಷದ ಪಾಕಿಸ್ತಾನದ (Pakistan) ಯುವಕನನ್ನು (Man) ಪುಣೆ (Pune) ಪೊಲೀಸರು ಬಂಧಿಸಿದ್ದಾರೆ.

    ಯುವಕ ನಕಲಿ ದಾಖಲೆಗಳನ್ನು ಬಳಸಿಕೊಂಡು 8 ವರ್ಷಗಳ ಕಾಲ ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದಾನೆ ಎಂಬ ಆರೋಪದ ಮೇಲೆ ಆತನನ್ನು ಬಂಧಿಸಲಾಗಿದೆ. ಆತನನ್ನು ಭವಾನಿ ಪೇಠ್‌ನಲ್ಲಿ ನೆಲೆಸಿರುವ ಮಹಮ್ಮದ್ ಅಮನ್ ಅನ್ಸಾರಿ (22) ಎಂದು ಗುರುತಿಸಲಾಗಿದೆ. ಯುವಕ 2015 ರಿಂದ ಭಾರತದಲ್ಲಿ ನೆಲೆಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ವರದಿಗಳ ಪ್ರಕಾರ ಯುವಕ ಭಾರತ ಹಾಗೂ ಪಾಕಿಸ್ತಾನದ ದಂಪತಿಗೆ ಜನಿಸಿದ್ದಾನೆ. ಆತನ ತಾಯಿ ಭಾರತ ಮೂಲದವಳಾಗಿದ್ದು, ತಂದೆ ಪಾಕಿಸ್ತಾನದವರು. ದಂಪತಿ ಬೇರ್ಪಟ್ಟ ಬಳಿಕ ಮಹಿಳೆ ತನ್ನ ಮಗನನ್ನು ಭಾರತಕ್ಕೆ ಕರೆತಂದಿದ್ದು, 2015ರಿಂದ ತನ್ನ ತಾಯಿಯ ಕುಟುಂಬದೊಂದಿಗೆ ವಾಸವಿದ್ದಾಳೆ. ಆದರೆ ಯುವಕ ಭಾರತದಲ್ಲಿ ಅಕ್ರಮವಾಗಿ ನೆಲೆಸಲು ನಕಲಿ ದಾಖಲೆಗಳನ್ನು ಬಳಸಿದ್ದಾನೆ ಎಂದು ಆರೋಪಿಸಲಾಗಿದೆ.

    ಅನ್ಸಾರಿ ಹುಟ್ಟಿದ್ದು ಪಾಕಿಸ್ತಾನದಲ್ಲಿ. ಮದುವೆಯ ಬಳಿಕ ಮಹಿಳೆ ಪಾಕಿಸ್ತಾನಕ್ಕೆ ಹೋಗಿದ್ದಳು. ಆಕೆ ಅನ್ಸಾರಿ ಸೇರಿದಂತೆ ಮೂವರು ಮಕ್ಕಳಿಗೆ ತಾಯಿಯಾಗಿದ್ದಾಳೆ. ಬಳಿಕ ಆಕೆ ಪತಿಯಿಂದ ಬೇರ್ಪಟ್ಟು ಪುತ್ರ ಅಮನ್ ಅನ್ಸಾರಿಯೊಂದಿಗೆ ದುಬೈಗೆ ತೆರಳಿದ್ದಳು.

    2015 ರಲ್ಲಿ ಅನ್ಸಾರಿಯನ್ನು ಪುಣೆಗೆ ಕರೆತರಲಾಗಿದ್ದು, ಅಲ್ಲಿ ಆತ ತನ್ನ ಸಂಬಂಧಿಕರೊಂದಿಗೆ ವಾಸವಿದ್ದ. ಯುವಕ ಪುಣೆಯಲ್ಲಿ ಅಧ್ಯಯನ ಮುಗಿಸಿದ್ದು, ನಕಲಿ ಭಾರತೀಯ ದಾಖಲೆಗಳನ್ನು ಸಂಗ್ರಹಿಸಿ, ಅದನ್ನು ಬಳಸಿಕೊಂಡು ಭಾರತೀಯ ಪಾಸ್‌ಪೋರ್ಟ್ ಪಡೆಯುವಲ್ಲಿಯೂ ಯಶಸ್ವಿಯಾಗಿದ್ದಾನೆ. ಸದ್ಯ ಯುವಕ ಪುಣೆಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಮತ್ತೆ ಇಂಧನ ಬೆಲೆ ಏರಿಕೆ – 1 ಲೀಟರ್ ಪೆಟ್ರೋಲ್‌ಗೆ 272 ರೂ.

    ಪುಣೆ ನಗರ ಪೊಲೀಸರ ವಿದೇಶಿ ನೋಂದಣಿ ಕಚೇರಿ (FRO) ಪುಣೆಯಲ್ಲಿ ವಿದೇಶಿ ಪ್ರಜೆಗಳ ಅಕ್ರಮ ಚಟುವಟಿಕೆಗಳನ್ನು ಪರಿಶೀಲಿಸುತ್ತದೆ. ಮಾರ್ಚ್ 8 ರಂದು ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ಪಂಕಜ್ ಪವಾರ್ ಮತ್ತು ಇತರರನ್ನು ಒಳಗೊಂಡ ಎಫ್‌ಆರ್‌ಒ ತಂಡ ಆರೋಪಿ ಅನ್ಸಾರಿ ಪಾಕಿಸ್ತಾನಿ ಪ್ರಜೆಯಾಗಿದ್ದು 2015 ರಿಂದ ಭವಾನಿ ಪೇಠ್ ಪ್ರದೇಶದ ಚುಡಾಮನ್ ತಾಲಿಮ್ ಬಳಿ ಅಕ್ರಮವಾಗಿ ನೆಲೆಸಿದ್ದಾನೆ ಎಂಬುದನ್ನು ಪತ್ತೆಹಚ್ಚಿದೆ.

    ಅನ್ಸಾರಿ ಭಾರತದಲ್ಲಿ ಉಳಿದುಕೊಳ್ಳಲು ಯಾವುದೇ ಮಾನ್ಯ ದಾಖಲೆಗಳನ್ನು ಹೊಂದಿಲ್ಲ. ಅಲ್ಲದೆ ಆತ ನಕಲಿ ದಾಖಲೆಗಳನ್ನು ಸಲ್ಲಿಸಿ ಭಾರತೀಯ ಪಾಸ್‌ಪೋರ್ಟ್ ಪಡೆದು ಪುಣೆಯಿಂದ ದುಬೈಗೆ ವಿಮಾನದಲ್ಲಿ ಪ್ರಯಾಣಿಸಿದ್ದಾನೆ. ಆದ್ದರಿಂದ ಸಂಪೂರ್ಣ ವಿಚಾರಣೆ ನಡೆಸಿ, ಬಳಿಕ ಅನ್ಸಾರಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420 (ವಂಚನೆ), 468 (ನಕಲಿ), 471 ಮತ್ತು ವಿದೇಶಿಯರ ಕಾಯ್ದೆ 1946 ಮತ್ತು ಪಾಸ್‌ಪೋರ್ಟ್ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಮಂಗಳವಾರ ಆತನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕೊಲೆ ಆರೋಪಿಗಳ ಜಮೀನಿಗೆ ನುಗ್ಗಿದ ಬುಲ್ಡೋಜರ್ – ಬೆಳೆಗಳು ನೆಲಸಮ

  • 8 ವರ್ಷದ ಮಗ, ಪತ್ನಿಯನ್ನು ಹತ್ಯೆಗೈದು, ತಾನು ಆತ್ಮಹತ್ಯೆಗೆ ಶರಣಾದ ಟೆಕ್ಕಿ

    8 ವರ್ಷದ ಮಗ, ಪತ್ನಿಯನ್ನು ಹತ್ಯೆಗೈದು, ತಾನು ಆತ್ಮಹತ್ಯೆಗೆ ಶರಣಾದ ಟೆಕ್ಕಿ

    ಮುಂಬೈ: ಸಾಫ್ಟ್‌ವೇರ್ ಇಂಜಿನಿಯರ್ (Software Engineer) ವ್ಯಕ್ತಿಯೊಬ್ಬ ಪತ್ನಿ ಹಾಗೂ 8 ವರ್ಷದ ಮಗನನ್ನು ಹತ್ಯೆಗೈದು, ತಾನು ಆತ್ಮಹತ್ಯೆಗೆ ಶರಣಾದ ಘಟನೆ ಮಹಾರಾಷ್ಟ್ರದ ಪುಣೆಯ (Pune) ಔಂದ್ ಪ್ರದೇಶದಲ್ಲಿ ನಡೆದಿದೆ.

    ಮೃತರನ್ನು ಸಂದೀಪ್ತೋ ಗಂಗೂಲಿ (44), ಪ್ರಿಯಾಂಕಾ (40) ಹಾಗೂ ತನಿಷ್ಕಾ (8) ಎಂದು ಗುರುತಿಸಲಾಗಿದೆ. ಸಂದೀಪ್ತೋ ಹಾಗೂ ಪ್ರಿಯಾಂಕ್‍ನಿಗೆ ಎಷ್ಟೇ ಕರೆ ಮಾಡಿದರೂ ಸ್ವೀಕರಿಸಿದಿದ್ದನ್ನು ಗಮನಿಸಿದ ಬೆಂಗಳೂರಿನಲ್ಲಿ (Bengaluru) ವಾಸಿಸುತ್ತಿದ್ದ ಆತನ ಸಹೋದರ ಆತನ ಸ್ನೇಹಿತರಿಗೆ ತಿಳಿಸಿದ್ದಾನೆ. ಸ್ನೇಹಿತರು ಸಂದೀಪ್ತೋ ಮನೆಗೆ ಭೇಟಿ ನೀಡಿದ್ದಾಗ ಫ್ಲ್ಯಾಟ್‍ಗೆ ಬೀಗ ಹಾಕಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಸಂದೀಪ್ತೋ ಸಹೋದರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಸಂದೀಪ್ತೋ ಹಾಗೂ ಆತನ ಕುಟುಂಬಸ್ಥರು ನಾಪತ್ತೆ ಆಗಿದ್ದಾರೆ ಎಂದು ದೂರು ದಾಖಲಿಸಿದ್ದಾನೆ.

    ಪ್ರಕರಣ ದಾಖಲಿಸಿಕೊಂಡ ಪೊಲೀಸರು ದಂಪತಿಯ ಮೊಬೈಲ್ ಫೋನ್‍ಗಳನ್ನು ಟ್ರ್ಯಾಕ್ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಮೊಬೈಲ್ ಫ್ಲ್ಯಾಟ್‍ನಲ್ಲಿ ಇರುವುದು ಪತ್ತೆ ಆಗಿದೆ. ಈ ಹಿನ್ನೆಲೆಯಲ್ಲಿ ನಕಲಿ ಕೀ ಬಳಸಿ ಫ್ಲ್ಯಾಟ್‍ನೊಳಗೆ ಹೋಗಿದ್ದಾರೆ. ಈ ವೇಳೆ ಸುದೀಪ್ನೋ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪತ್ನಿ ಹಾಗೂ ಮಗುವಿನ ಮುಖಕ್ಕೆ ಪಾಲಿಥಿನ್‍ನನ್ನು ಸುತ್ತಿ ಹತ್ಯೆ ಮಾಡಿರುವುದು ಕಂಡುಬಂದಿದೆ. ಇದನ್ನೂ ಓದಿ: ಬೇಳೂರು ರಾಘವೇಂದ್ರ ಶೆಟ್ಟಿ ಮನೆ ಹರಾಜು – ಸೆಕ್ಯುರಿಟಿ ಗಾರ್ಡ್ ಕಣ್ತಪ್ಪಿಸಿ ಅಕ್ರಮ ಪ್ರವೇಶ

    ಇನ್ನೂ ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್‍ಗಳು ಪತ್ತೆಯಾಗಿಲ್ಲ. ಅಷ್ಟೇ ಅಲ್ಲದೇ ಸುದೀಪ್ತೋ ತನ್ನ ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಸಾಫ್ಟ್‌ವೇರ್ ಕಂಪನಿಯ ಉದ್ಯೋಗವನ್ನು ತೊರೆದಿದ್ದ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬೆತ್ತಲೆಯಾಗಿ ಓಡಾಡುತ್ತಿದ್ದ ವಿದೇಶಿ ಪ್ರಜೆ ಪೊಲೀಸರ ವಶಕ್ಕೆ

  • ಪುಣೆಯ ಗೂಗಲ್ ಕಚೇರಿಗೆ ಬಾಂಬ್ ಬೆದರಿಕೆ ಕರೆ

    ಪುಣೆಯ ಗೂಗಲ್ ಕಚೇರಿಗೆ ಬಾಂಬ್ ಬೆದರಿಕೆ ಕರೆ

    ಪುಣೆ: ಮುಂಡ್ವಾ ಪ್ರದೇಶದ ಬಹುಮಹಡಿ ವಾಣಿಜ್ಯ ಕಟ್ಟಡದ 11ನೇ ಮಹಡಿಯಲ್ಲಿರುವ ಗೂಗಲ್ ಕಚೇರಿಗೆ (Google Office) ಭಾನುವಾರ ತಡ ರಾತ್ರಿ ಬಾಂಬ್ ಬೆದರಿಕೆ ಕರೆ (Bomb Threat Call) ಬಂದಿದೆ. ಬಾಂಬ್ ಬೆದರಿಕೆ ಬಳಿಕ ಕಟ್ಟೆಚ್ಚರ ವಹಿಸಿ ಪರಿಶೀಲನೆ ನಡೆಸಿದ್ದು, ಸ್ಫೋಟಕ ಪತ್ತೆಯಾಗದ ಹಿನ್ನೆಲೆ ಇದೊಂದು ಹುಸಿ ಬಾಂಬ್ ಬೆದರಿಕೆ ಕರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದು ಬಾಂಬ್ ಬೆದರಿಕೆ ಕರೆ ಮಾಡಿದ್ದ ವ್ಯಕ್ತಿಯನ್ನು ಹೈದರಾಬಾದ್‌ನಲ್ಲಿ ಸೋಮವಾರ ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿದ್ದು ಮದ್ಯದ ಅಮಲಿನಲ್ಲಿ ಬೆದರಿಕೆ ಕರೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಪಾಕ್ ಬೌಲರ್‌ಗಳ ಬೆವರಿಳಿಸಿದ ಜೆಮಿಯಾಗೆ ಸ್ಫೂರ್ತಿಯಾಗಿದ್ದು ಕೊಹ್ಲಿ ಇನ್ನಿಂಗ್ಸ್ǃ

    ಭಾನುವಾರ ತಡರಾತ್ರಿ ಕರೆ ಬಂದ ಹಿನ್ನೆಲೆ ಗೂಗಲ್ ಸಂಸ್ಥೆಯಿಂದ ಪೊಲೀಸರಿಗೆ ದೂರು ನೀಡಲಾಗಿತ್ತು. ದೂರಿನ ಬೆನ್ನಲ್ಲೇ ಬಾಂಬ್ ನಿಷ್ಕ್ರಿಯ ದಳದೊಂದಿಗೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದರು. ಪರಿಶೀಲನೆವರೆಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿತ್ತು. ಇದನ್ನೂ ಓದಿ: ಕೆ-ಸೆಟ್ ಪರೀಕ್ಷೆಗಳನ್ನು ಕೆಇಎ ನಡೆಸಲಿದೆ: ಅಶ್ವಥ್ ನಾರಾಯಣ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹುಬ್ಬಳ್ಳಿಯಿಂದ ಪುಣೆಗೆ ನೇರ ವಿಮಾನ ಸೇವೆ ಆರಂಭ

    ಹುಬ್ಬಳ್ಳಿಯಿಂದ ಪುಣೆಗೆ ನೇರ ವಿಮಾನ ಸೇವೆ ಆರಂಭ

    ಹುಬ್ಬಳ್ಳಿ: ಪುಣೆಗೆ (Pune) ಶೀಘ್ರವಾಗಿ ಸಂಪರ್ಕಿಸುವ ನಿಟ್ಟಿನಲ್ಲಿ ಹುಬ್ಬಳ್ಳಿಯಿಂದ (Hubballi) ನೇರ ವಿಮಾನ ಸೇವೆ (Flight Service) ಆರಂಭವಾಗಿದೆ.

    ಪುಣೆಯಿಂದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಇಂಡಿಗೋ ವಿಮಾನಕ್ಕಿಂದು (IndiGo Flight) ಜಲಫಿರಂಗಿಯ ಮೂಲಕ ಸ್ವಾಗತ ನೀಡಲಾಯಿತು. ಇದನ್ನೂ ಓದಿ: ಟರ್ಕಿಗೆ 100 ಮಂದಿಯ NDRF ತಂಡವನ್ನು ಕಳುಹಿಸಲಿದೆ ಭಾರತ

    ಮೊದಲ ದಿನವೇ ವಿಮಾನದ ಎಲ್ಲಾ ಸಿಟ್ ಗಳು ಸಂಪೂರ್ಣ ಭರ್ತಿಯಾಗಿದ್ದು, ಈ ಸೇವೆಯು ಜನರಿಗೆ ಅನುಕೂಲಕರವಾಗಿದೆ ಎಂಬುದು ಖುಷಿಯ ಸಂಗತಿ. ಈ ಸೇವೆಯಿಂದ ಹುಬ್ಬಳ್ಳಿ, ಧಾರವಾಡ ಅವಳಿ ನಗರ ಸೇರಿದಂತೆ ಇಡೀ ಉತ್ತರ ಕರ್ನಾಟಕ ಭಾಗದ ಜನರಿಗೆ ವ್ಯಾಪಾರದ ದೃಷ್ಟಿಯಿಂದ ಸಾಕಷ್ಟು ಅನುಕೂಲವಾಗಲಿದೆ.

    ರಾಜ್ಯದ ಪ್ರಸ್ತಾವನೆಗೆ ಸ್ಪಂದಿಸಿ ವಿಮಾನಯಾನ ಸೇವೆ ಆರಂಭಿಸಿರುವ ಹಿನ್ನಲೆ ಪ್ರಧಾನಿ ನರೇಂದ್ರ ಮೋದಿ (Narendra Modi), ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಇಂಡಿಗೋ ಸಂಸ್ಥೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ: Child Marriage Crackdown: ಕಾನೂನಿಗೆ ಹೆದರಿ ಮದ್ವೆ ನಿಲ್ಲಿಸಿದ ಪೋಷಕರು, ಆತ್ಮಹತ್ಯೆ ಮಾಡಿಕೊಂಡ ಮಗಳು

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಾರ್ಯಕ್ರಮ ಉದ್ಘಾಟನೆ ವೇಳೆ ಸುಪ್ರಿಯಾ ಸುಳೆ ಸೀರೆಗೆ ಹೊತ್ತಿಕೊಂಡ ಬೆಂಕಿ

    ಕಾರ್ಯಕ್ರಮ ಉದ್ಘಾಟನೆ ವೇಳೆ ಸುಪ್ರಿಯಾ ಸುಳೆ ಸೀರೆಗೆ ಹೊತ್ತಿಕೊಂಡ ಬೆಂಕಿ

    ಮುಂಬೈ: ಕಾರ್ಯಕ್ರಮವೊಂದರ ಉದ್ಘಾಟನೆ (Program Inauguration)  ವೇಳೆ ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ (Supriya Sule) ಅವರ ಸೀರೆಗೆ ಬೆಂಕಿ (Fire) ಹೊತ್ತಿಕೊಂಡಿರುವ ಘಟನೆ ಪುಣೆಯ (Pune) ಹಿಂಜೆವಾಡಿಯಲ್ಲಿ ಭಾನುವಾರ ನಡೆದಿದೆ.

    ನಗರದಲ್ಲಿ ನಡೆದ ಕರಾಟೆ ಸ್ಪರ್ಧೆಯ ಉದ್ಘಾಟನೆ ವೇಳೆ ಬಾರಾಮತಿ ಸಂಸದೆಯ ಸೀರೆಗೆ (Saree) ಬೆಂಕಿ ಹೊತ್ತಿಕೊಂಡಿದೆ. ಅವರು ಕಾರ್ಯಕ್ರಮವನ್ನು ಉದ್ಘಾಟಿಸಲು ವೇದಿಕೆಯಲ್ಲಿ ಮೇಜಿನ ಮೇಲೆ ಇರಿಸಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಮುಂದಾಗಿದ್ದರು. ಸಂಸದೆ ಟೇಬಲ್ ಹತ್ತಿರ ಹೋಗುತ್ತಿದ್ದಂತೆ ಕೆಳಗಡೆ ಇರಿಸಲಾಗಿದ್ದ ದೀಪಕ್ಕೆ ತಾಗಿ ಸೀರೆಗೆ ಬೆಂಕಿ ತಗುಲಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಆಡಳಿತದಲ್ಲಿ ಭರವಸೆ ಉಚಿತ, ಸಾಲ ಖಚಿತ: ಸಚಿವ ಸುನಿಲ್ ಕುಮಾರ್ ವ್ಯಂಗ್ಯ

    ಸಂಸದೆ ತಕ್ಷಣವೇ ತಮ್ಮ ಕೈಗಳಿಂದ ಸೀರೆಗೆ ತಗುಲಿದ್ದ ಬೆಂಕಿಯನ್ನು ನಂದಿಸಿದ್ದಾರೆ. ಈ ಬಗ್ಗೆ ತಿಳಿಸಿದ ಸುಳೆ ಹಿಂಜೆವಾಡಿ ಪ್ರದೇಶದಲ್ಲಿ ಆಯೋಜಿಸಿದ್ದ ಕರಾಟೆ ಸ್ಪರ್ಧೆಯ ಉದ್ಘಾಟನೆ ವೇಳೆ ನನ್ನ ಸೀರೆಗೆ ಇದ್ದಕ್ಕಿದ್ದಂತೆ ಬೆಂಕಿ ಹತ್ತಿಕೊಂಡಿತ್ತು. ಆದರೆ ತಕ್ಷಣವೇ ಬೆಂಕಿಯನ್ನು ನಿಯಂತ್ರಿಸಲಾಯಿತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಆದಿವಾಸಿಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಕ್ಕೆ ಯತ್ನ – ಐವರು ಪೊಲೀಸ್ ವಶಕ್ಕೆ

    ಘಟನೆ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ. ನನ್ನ ಬೆಂಬಲಿಗರು, ನಾಗರಿಕರು, ಪಕ್ಷದ ಪದಾಧಿಕಾರಿಗಳು ಹಾಗೂ ಅಭಿಮಾನಿಗಳಿಗೆ ನಾನು ಸುರಕ್ಷಿತವಾಗಿದ್ದೇನೆ ಎಂದು ಹೇಳಲು ಬಯಸುತ್ತೇನೆ. ನನ್ನ ಬಗೆಗಿನ ಪ್ರೀತಿ ಹಾಗೂ ಕಾಳಜಿಗೆ ಎಲ್ಲರನ್ನೂ ಗೌರವಿಸುತ್ತೇನೆ ಎಂದು ಸುಪ್ರಿಯಾ ಸುಳೆ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 8 ಗಂಟೆ ವಿಳಂಬ, ಕೊನೆ ಕ್ಷಣದಲ್ಲಿ ವಿಮಾನ ರದ್ದು – ಮತ್ತೊಮ್ಮೆ ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾದ ಸ್ಪೈಸ್ ಜೆಟ್

    8 ಗಂಟೆ ವಿಳಂಬ, ಕೊನೆ ಕ್ಷಣದಲ್ಲಿ ವಿಮಾನ ರದ್ದು – ಮತ್ತೊಮ್ಮೆ ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾದ ಸ್ಪೈಸ್ ಜೆಟ್

    ನವದೆಹಲಿ: ಸದಾ ವಿವಾದಗಳಿಂದ ಸದ್ದು ಮಾಡುವ ಸ್ಪೈಸ್ ಜೆಟ್ (Spice Jet) ಏರ್‌ಲೈನ್ಸ್ ಈಗ ಮತ್ತೊಮ್ಮೆ ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾಗಿದೆ. ಪುಣೆಯಿಂದ (Pune) ಅಹಮದಾಬಾದ್ ತೆರಳಬೇಕಿದ್ದ ವಿಮಾನ ತಡವಾಗಿದ್ದು, ಎಂಟೂವರೆ ಗಂಟೆಗಳ ಕಾಲ ಕಾಯಿಸಿದ್ದಲ್ಲದೇ ಕಡೆ ಕ್ಷಣದಲ್ಲಿ ರದ್ದು ಮಾಡಿ ಹೊಸ ಟೀಕೆಗೆ ಕಾರಣವಾಗಿದೆ.

    ಬುಧವಾರ ರಾತ್ರಿ 8:30ಕ್ಕೆ ಪುಣೆಯಿಂದ ಅಹಮದಾಬಾದ್‌ಗೆ ತೆರಳಬೇಕಿದ್ದ ವಿಮಾನ ತಾಂತ್ರಿಕ ಕಾರಣಗಳಿಂದ (Technical Issues) ಎಂಟೂವರೆ ಗಂಟೆಗಳ ಕಾಲ ತಡ ಮಾಡಿತ್ತು. ಬಳಿಕ ಗುರುವಾರ ಮುಂಜಾನೆ 4:30ಕ್ಕೆ ಟೇಕ್ ಆಫ್ ಮಾಡಲಾಗಿತ್ತು. ಆದರೆ ದಟ್ಟವಾದ ಮಂಜಿನ ಕಾರಣ ಹೇಳಿ 10 ನಿಮಿಷಗಳಲ್ಲಿ ಮತ್ತೆ ಲ್ಯಾಂಡ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ʼಸರ್‌ʼ, ʼಮೇಡಂʼ ಅನ್ನುವಂತಿಲ್ಲ.. ʼಟೀಚರ್‌ʼ ಎನ್ನಬೇಕು – ಕೇರಳ ಮಕ್ಕಳ ಹಕ್ಕುಗಳ ಆಯೋಗ

    ಸ್ಪೈಸ್ ಜೆಟ್ ವರ್ತನೆಯಿಂದ ಪ್ರಯಾಣಿಕರು ಗರಂ ಆಗಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಪ್ರಯಾಣಿಕರೊಬ್ಬರು, ತಾಂತ್ರಿಕ ಕಾರಣದಿಂದ ವಿಮಾನ 4 ಗಂಟೆಗಳ ಕಾಲ ವಿಳಂಬವಾಗಿದೆ ಮತ್ತು 12:30ಕ್ಕೆ ಹೊರಡಲಿದೆ ಎಂದು ಏರ್‌ಲೈನ್ಸ್‌ನ ನೆಲದ ಸಿಬ್ಬಂದಿ ನಮಗೆ ತಿಳಿಸಿದ್ದರು. ಬಳಿಕ ವಿಮಾನ ಮಧ್ಯರಾತ್ರಿ 3.30ರ ಸುಮಾರಿಗೆ ಟೇಕ್‌ಆಫ್ ಆಗಲಿದೆ ಎಂದು ಹೇಳಿದರು. ಆದರೆ ಮುಂಜಾನೆ 4.30ರ ವೇಳೆಗೆ ಟೇಕ್ ಆಫ್ ಮಾಡಲಾಯಿತು ಎಂದು ಹೇಳಿದರು.

    ವಿಮಾನ ಹಾರಾಟ ಪ್ರಾರಂಭವಾದರೂ ಅದು ನಿಗದಿತ ಎತ್ತರಕ್ಕೆ ಹಾರಲಿಲ್ಲ. ವಿಮಾನದಲ್ಲಿ ದೊಡ್ಡ ಪ್ರಮಾಣದಲ್ಲಿ ಜರ್ಕ್ ಕಂಡು ಬಂತು. ಇದಾದ 7 ನಿಮಿಷಕ್ಕೆ ಪುಣೆಯಲ್ಲಿ ಮರಳಿ ಲ್ಯಾಂಡ್ ಮಾಡಲಾಯಿತು. ಬಳಿಕ ತಾಂತ್ರಿಕ ಸಮಸ್ಯೆ ಕಂಡು ಬಂದಿದೆ ಎಂದು ವಿಮಾನವನ್ನು ರದ್ದು ಮಾಡಲಾಯಿತು. ಟಿಕೆಟ್ ಹಣವನ್ನು ಮರಳಿಸುವ ಭರವಸೆ ನೀಡಿದ್ದಾರೆ ಎಂದು ಪ್ರಯಾಣಿಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ದೆಹಲಿ ಬಳಿಕ ಕರ್ನಾಟಕದಲ್ಲೂ ಆಪ್ `ಟಿಕೆಟ್ ಫಾರ್ ಸೇಲ್’ – ಸುಕೇಶ್ ಚಂದ್ರಶೇಖರ್ ಗಂಭೀರ ಆರೋಪ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನೆರೆ ರಾಜ್ಯ ಮಹಾರಾಷ್ಟ್ರದ ಪುಣೆ ವ್ಯಕ್ತಿಯಲ್ಲಿ ಝಿಕಾ ವೈರಸ್‌ ಸೋಂಕು ಪತ್ತೆ

    ನೆರೆ ರಾಜ್ಯ ಮಹಾರಾಷ್ಟ್ರದ ಪುಣೆ ವ್ಯಕ್ತಿಯಲ್ಲಿ ಝಿಕಾ ವೈರಸ್‌ ಸೋಂಕು ಪತ್ತೆ

    ಮುಂಬೈ: ಮಹಾರಾಷ್ಟ್ರದ (Maharashtra) ಪುಣೆ (Pune) ಜಿಲ್ಲೆಯ ಬವ್‌ಧಾನ್ ಪ್ರದೇಶದಲ್ಲಿ 67 ವರ್ಷದ ವ್ಯಕ್ತಿಯೊಬ್ಬರಿಗೆ ಝಿಕಾ ವೈರಸ್ (Zika Virus) ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

    ಸೋಂಕಿತ ವ್ಯಕ್ತಿ ನಾಸಿಕ್ ನಿವಾಸಿಯಾಗಿದ್ದು, ನವೆಂಬರ್ 6 ರಂದು ಪುಣೆಗೆ ಬಂದಿದ್ದರು. ರೋಗಿಯು ನವೆಂಬರ್ 16 ರಂದು ಜ್ವರ, ಕೆಮ್ಮು, ಕೀಲು ನೋವು ಮತ್ತು ಆಯಾಸದಿಂದ ಜಹಾಂಗೀರ್ ಆಸ್ಪತ್ರೆಗೆ ದಾಖಲಾಗಿದ್ದರು. ನವೆಂಬರ್ 18 ರಂದು ಖಾಸಗಿ ಪ್ರಯೋಗಾಲಯದಲ್ಲಿ ಅವರಿಗೆ ಝಿಕಾ ವೈರಸ್ ಇರುವುದು ಪತ್ತೆಯಾಗಿದೆ. ಇದನ್ನೂ ಓದಿ: ಗುಜರಾತ್ ವಿಧಾನಸಭೆ ಚುನಾವಣೆ – ಅಬ್ಬರದ ಪ್ರಚಾರಕ್ಕೆ ತೆರೆ

    ಈ ಹಿಂದೆ ಅಕ್ಟೋಬರ್ 22 ರಂದು ಅವರು ಸೂರತ್‌ಗೆ ಪ್ರಯಾಣ ಬೆಳೆಸಿದ್ದರು. ನವೆಂಬರ್ 30 ರಂದು, ಆತನಿಗೆ ಝಿಕಾ ವೈರಸ್‌ ತಗುಲಿರುವುದು ದೃಢಪಟ್ಟಿದೆ. ಸದ್ಯ ವ್ಯಕ್ತಿಯ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

    ಭವಿಷ್ಯದಲ್ಲಿ ಏಕಾಏಕಿ ಹರಡುವುದನ್ನು ತಗ್ಗಿಸಲು ಪುಣೆ ನಗರದಾದ್ಯಂತ ಝಿಕಾ ವೈರಸ್‌ನ ಕೀಟಶಾಸ್ತ್ರೀಯ ಸಮೀಕ್ಷೆಗೆ ಅಧಿಕಾರಿಗಳು ಆದೇಶಿಸಿದ್ದಾರೆ. ನಗರದಲ್ಲಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಝಿಕಾ ವೈರಸ್‌ ದೃಢಪಟ್ಟ ಮೂರನೇ ಪ್ರಕರಣ ಇದಾಗಿದೆ. ಇದಕ್ಕೂ ಮೊದಲು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಏಳು ವರ್ಷದ ಬಾಲಕಿಗೆ ಸೋಂಕು ತಗುಲಿತ್ತು. ಇದಕ್ಕೂ ಮೊದಲು, ಕಳೆದ ವರ್ಷ ಜುಲೈನಲ್ಲಿ ಪುಣೆಯಲ್ಲಿ ಮೊದಲ ರೋಗಿ ಪತ್ತೆಯಾಗಿದ್ದರು. ಇದನ್ನೂ ಓದಿ: TMC ನಾಯಕನ ಮನೆಯಲ್ಲಿ ಕಚ್ಚಾ ಬಾಂಬ್ ಸ್ಫೋಟ – ರಾಜಕೀಯ ಕೆಸರೆರಚಾಟಕ್ಕೆ ಗ್ರಾಸವಾದ ಘಟನೆ

    1947 ರಲ್ಲಿ ಉಗಾಂಡಾದ ಕೋತಿಯಲ್ಲಿ ಮೊದಲ ಬಾರಿಗೆ ಝಿಕಾ ವೈರಸ್ ಪತ್ತೆಯಾಯಿತು. 2007 ರಲ್ಲಿ ಮೈಕ್ರೋನೇಷಿಯಾದಲ್ಲೂ ಸೋಂಕು ದೃಢಪಟ್ಟಿತ್ತು. 2015 ರಲ್ಲಿ ಲ್ಯಾಟಿನ್ ಅಮೆರಿಕಾದಲ್ಲಿ ಸೋಂಕು ಪತ್ತೆಯಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಬಾಲಿವುಡ್ ನಟ ವಿಕ್ರಮ್ ಗೋಖಲೆ ನಿಧನ

    ಬಾಲಿವುಡ್ ನಟ ವಿಕ್ರಮ್ ಗೋಖಲೆ ನಿಧನ

    ರಡು ದಿನಗಳ ಹಿಂದೆಯಷ್ಟೇ ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್ ನ ಖ್ಯಾತ ಹಿರಿಯ ನಟ ವಿಕ್ರಮ್ ಗೋಖಲೆ ನಿಧನರಾಗಿದ್ದಾರೆ. ಕೆಲ ತಿಂಗಳಿಂದ  ಅವರು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ನಿನ್ನೆಯಷ್ಟೇ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಎಂದು ಹೇಳಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಬಾರದ ಲೋಕಕ್ಕೆ ಪಯಣಿಸಿದ್ದಾರೆ.

    ಹಿಂದಿ, ಮರಾಠಿ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ನಟ ವಿಕ್ರಮ್ ಗೋಖಲೆ (75 ವರ್ಷ) ಆರೋಗ್ಯ ಇತ್ತೀಚೆಗೆ ಏರುಪೇರಾಗಿದ್ದು, ತಕ್ಷಣ ಪೂಣೆಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ನಟ ಇದೀಗ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಹೇಳಲಾಗಿತ್ತು. ನಿನ್ನೆಯಷ್ಟೇ ಅವರು ಕಣ್ಣು ತೆರೆದು ಕುಟುಂಬದವರ ಬಳಿ ಮಾತನಾಡುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದರು.  ಆರೋಗ್ಯದಲ್ಲಿ ಚೇತರಿಕೆ ಕಂಡ ಕಾರಣದಿಂದ 48 ಗಂಟೆಗಳಲ್ಲಿ ವೆಂಟಿಲೇಟರ್‌ನಿಂದ ಹೊರತೆಗೆಯಲಾಗುವುದು ಎಂದು ವೈದ್ಯರು ತಿಳಿಸಿದ್ದರು. ಇನ್ನೇನು ಅವರು ಗುಣಮುಖರಾಗಲಿದ್ದಾರೆ ಎನ್ನುವ ಹೊತ್ತಿನಲ್ಲಿ ಅವರ ಸಾವು ಆಘಾತ ತರಿಸಿದೆ. ಇದನ್ನೂ ಓದಿ: ಮದುವೆ ಬಗ್ಗೆ ವೈಷ್ಣವಿ ತುಂಬಾ ಕನಸು ಕಂಡಿದ್ದಳು: ತಂದೆ ರವಿಕುಮಾರ್

    ಬಿಗ್ ಬಿ ಜೊತೆ ʻಅಗ್ನಿಪಥ್ʼ, ಸಲ್ಮಾನ್ ಖಾನ್ ಜೊತೆ ʻಹಮ್ ದಿಲ್ ದೇ ಚುಕೇ ಸನಮ್ʼ, ಶಿಲ್ಪಾ ಶೆಟ್ಟಿ ನಟನೆಯ `ನಿಕ್ಕಮ್ಮಾ’ ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ವಿಕ್ರಮ್ ಗೋಖಲೆ ನಟಿಸಿದ್ದಾರೆ. ಹಿರಿಯ ನಟನ ಅಗಲಿಕೆಗೆ ಬಾಲಿವುಡ್ ಸಿನಿಮಾ ರಂಗ ಕಂಬನಿ ಮಿಡಿದಿದೆ. ಅನೇಕರು ಸೋಷಿಯಲ್ ಮೀಡಿಯಾ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ – ಒಟ್ಟಿಗೆ 48 ವಾಹನಗಳು ಜಖಂ

    ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ – ಒಟ್ಟಿಗೆ 48 ವಾಹನಗಳು ಜಖಂ

    ಮುಂಬೈ: ಪುಣೆಯಲ್ಲಿರುವ ಬೆಂಗಳೂರು ಹೆದ್ದಾರಿಯ (Pune Bengaluru National Highway) ನವಲೆ ಸೇತುವೆಯಲ್ಲಿ (Fire Brigade) ಭೀಕರ ಅಪಘಾತ ಸಂಭವಿಸಿದ್ದು, ಒಟ್ಟಿಗೆ 48 ವಾಹನಗಳು ಜಖಂಗೊಂಡಿವೆ. ಟ್ಯಾಂಕರ್‌ವೊಂದರ ಬ್ರೇಕ್ ವೈಫಲ್ಯದಿಂದಾಗಿ ಕನಿಷ್ಠ 48 ವಾಹನಗಳು ಅಪಘಾತಕ್ಕೀಡಾಗಿವೆ.

    ರಾತ್ರಿ 8:30ರ ಸುಮಾರಿಗೆ ಘಟನೆ ನಡೆದಿದ್ದು, ಹಲವರು ಗಾಯಗೊಂಡಿರುವ ಶಂಕೆ ವ್ಯಕ್ಯವಾಗಿದೆ. ಸದ್ಯ ಪುಣೆ ಅಗ್ನಿಶಾಮಕ ದಳ ಮತ್ತು ಪುಣೆ ಮೆಟ್ರೋಪಾಲಿಟನ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ (PMRDA) ರಕ್ಷಣಾ ತಂಡಗಳು ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆ ನಡೆಸುತ್ತಿವೆ. ಸಾರ್ವಜನಿಕರ ಸುರಕ್ಷತೆಗಾಗಿ ಅಂಬುಲೆನ್ಸ್‌ಗಳ ವ್ಯವಸ್ಥೆಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕಾಡಾನೆ ದಾಳಿಗೆ ಮಹಿಳೆ ಬಲಿ – ಮೃತದೇಹ ನೋಡಲು ಬಂದ ಶಾಸಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ

    ಪಿಎಂಆರ್‌ಡಿಎ (PMRDA) ಅಗ್ನಿಶಾಮಕ ದಳದ ಅಧಿಕಾರಿ ಸುಜಿತ್ ಪಾಟೀಲ್ ಮಾತನಾಡಿ, ಪ್ರಾಥಮಿಕ ಮಾಹಿತಿಯ ಪ್ರಕಾರ ಟ್ಯಾಂಕರ್ ಬ್ರೇಕ್ ವೈಫಲ್ಯದ ನಂತರ ಕನಿಷ್ಠ 48 ವಾಹನಗಳು ಅಪಘಾತಕ್ಕೀಡಾಗಿವೆ. ಹಾನಿಗೊಳಗಾದ ವಾಹನಗಳಿಂದ ಗಾಯಗೊಂಡ ಕೆಲ ನಾಗರಿಕರನ್ನ ಹತ್ತಿರದ ಆಸ್ಪತ್ರೆಗಳಿಗೆ (Hospital) ಕರೆದೊಯ್ಯಲಾಗಿದೆ. ಸದ್ಯಕ್ಕೆ ಗಾಯಗೊಂಡವರ ಸಂಖ್ಯೆ ಮತ್ತು ಅವರ ಗಾಯಗಳ ಸ್ವರೂಪದ ನಮಗೆ ತಿಳಿದಿಲ್ಲ. ಅಗ್ನಿಶಾಮಕ ದಳದ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಉಗ್ರರ ಅಡಗುತಾಣವಾಗ್ತಿದ್ಯಾ ಮಂಗಳೂರು – ಕರಾವಳಿ ಜಿಲ್ಲೆಯಾದ್ಯಂತ ಹೈ ಅಲರ್ಟ್

    Live Tv
    [brid partner=56869869 player=32851 video=960834 autoplay=true]

  • 17ರ ಹುಡುಗಿ ಮೇಲೆ ತಂದೆ, ಚಿಕ್ಕಪ್ಪ, ಅಜ್ಜನಿಂದಲೇ ಅತ್ಯಾಚಾರ!

    ಮುಂಬೈ: 17 ವರ್ಷದ ಹುಡುಗಿ ಮೇಲೆ ಸ್ವಂತ ತಂದೆ, ಚಿಕ್ಕಪ್ಪ ಮತ್ತು ಅಜ್ಜನೇ ಹಲವಾರು ಬಾರಿ ಅತ್ಯಾಚಾರವೆಸಗಿರುವ ಘಟನೆ ಪುಣೆಯಲ್ಲಿ (Pune) ನಡೆದಿದೆ.

    ತಾನು ಪ್ರಸ್ತುತ ಓದುತ್ತಿರುವ ಪುಣೆಯ ಕಾಲೇಜಿನಲ್ಲಿ ಲೈಂಗಿಕ ಕಿರುಕುಳದ ಕುರಿತು ವಿಶಾಖಾ ಸಮಿತಿಯ ಸದಸ್ಯರ ಮುಂದೆ ಹುಡುಗಿ ಇತ್ತೀಚೆಗೆ ತನಗಾದ ಸಂಕಷ್ಟವನ್ನು ಹೇಳಿಕೊಂಡ ನಂತರ ಘಟನೆ ಬೆಳಕಿಗೆ ಬಂದಿದೆ. ಇದೀಗ ನಗರದಲ್ಲಿದ್ದ ಸಂತ್ರಸ್ತೆಯ ತಂದೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬುಧವಾರ ಪುಣೆ ಪೊಲೀಸರು ಈ ಘಟನೆ ಸಂಬಂಧ ಭಾರತೀಯ ದಂಡ ಸಂಹಿತೆಯ ಸಂಬಂಧಿತ ವಿಭಾಗಗಳು ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ ಕಾಯ್ದೆ) ಅಡಿಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನಿಂದ ಪ್ರಯಾಣಿಕನನ್ನು ಹೊರಗೆ ತಳ್ಳಿದ ಟಿಟಿಇ – ಕಾಲು ಕಳೆದುಕೊಂಡ ವ್ಯಕ್ತಿ ಸ್ಥಿತಿ ಗಂಭೀರ

    ಸಂತ್ರಸ್ತ್ರ ಹುಡುಗಿ, 2016 ಮತ್ತು 2018 ರ ನಡುವೆ ಉತ್ತರ ಪ್ರದೇಶದಲ್ಲಿ (Uttar Pradesh) ತನ್ನ ತವರು ಮನೆಯಲ್ಲಿದ್ದಾಗ, ತನ್ನ ಚಿಕ್ಕಪ್ಪನಿಂದ ಅನೇಕ ಬಾರಿ ಅತ್ಯಾಚಾರವೆಸಗಿದ್ದು, ಅಜ್ಜ ಕಿರುಕುಳ ನೀಡಿದ್ದಾನೆ ಎಂದು ದೂರಿನ ಮೂಲಕ ಆರೋಪಿಸಿದ್ದಾಳೆ. ಇದನ್ನೂ ಓದಿ: ಗುಂಡಿಗೆ ಬಿದ್ದು ಕೋಮಾಗೆ ಜಾರಿದ್ದ ಸಂದೀಪ್- ಪ್ರಜ್ಞಾವಸ್ಥೆಗೆ ಬಂದ ಸವಾರನಿಗೆ ಸಿಗ್ತಿಲ್ಲ ಆಸ್ಪತ್ರೆ ಬೆಡ್

    2018ರಲ್ಲಿ ಹುಡುಗಿ ಪುಣೆಗೆ ಬಂದ ನಂತರ, ತನ್ನ ತಂದೆಗೆ ಲೈಂಗಿಕ ದೌರ್ಜನ್ಯದ ಘಟನೆ ಕುರಿತಂತೆ ಚೀಟಿಯಲ್ಲಿ ಬರೆದು ತಿಳಿಸಿದಳು. ಆದರೆ, ಪೀಡಕರ ವಿರುದ್ಧ ವರ್ತಿಸುವ ಬದಲು, ಆಕೆಯ ತಾಯಿ ಮನೆಯಲ್ಲಿ ಇಲ್ಲದಿದ್ದಾಗ ತಂದೆ ಕೂಡ ಹಲವಾರು ಬಾರಿ ಮಗಳ ಮೇಲೆ ಅತ್ಯಾಚಾರವೆಸಗಿದ್ದಾನೆ. ಇದೀಗ ನಾವು ಬಾಲಕಿಯ ತಂದೆ, ಅಜ್ಜ ಮತ್ತು ಚಿಕ್ಕಪ್ಪನ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಮತ್ತು ಘಟನೆ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]