Tag: ಪುಣೆ

  • ಪ್ರಧಾನಿಗೆ ಲೋಕಮಾನ್ಯ ತಿಲಕ್‌ ರಾಷ್ಟ್ರೀಯ ಅವಾರ್ಡ್‌ – ಪ್ರಶಸ್ತಿ ಹಣವನ್ನು ನಮಾಮಿ ಗಂಗೆ ಯೋಜನೆಗೆ ನೀಡಿದ ಮೋದಿ

    ಪ್ರಧಾನಿಗೆ ಲೋಕಮಾನ್ಯ ತಿಲಕ್‌ ರಾಷ್ಟ್ರೀಯ ಅವಾರ್ಡ್‌ – ಪ್ರಶಸ್ತಿ ಹಣವನ್ನು ನಮಾಮಿ ಗಂಗೆ ಯೋಜನೆಗೆ ನೀಡಿದ ಮೋದಿ

    – ಎನ್‌ಸಿಪಿ ನಾಯಕ ಶರದ್‌ ಪವಾರ್‌ ಜೊತೆ ವೇದಿಕೆ ಹಂಚಿಕೊಂಡ ಪಿಎಂ

    ಮಹಾರಾಷ್ಟ್ರ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಮಂಗಳವಾರ ಲೋಕಮಾನ್ಯ ತಿಲಕ್‌ ರಾಷ್ಟ್ರೀಯ ಪ್ರಶಸ್ತಿ (Lokmanya Tilak National Award) ಪ್ರದಾನ ಮಾಡಲಾಯಿತು. ಪ್ರಶಸ್ತಿ ಮೊತ್ತದ 1 ಲಕ್ಷ ರೂ.ಗಳನ್ನು ನಮಾಮಿ ಗಂಗೆ ಯೋಜನೆಗೆ (Namami Gange Project) ನೀಡುವುದಾಗಿ ಮೋದಿ ಘೋಷಿಸಿದ್ದಾರೆ.

    ಪುಣೆಯಲ್ಲಿ (Pune) ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು. ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ತಿಲಕ್ ಅವರ ಹೆಸರಿನ ಪ್ರಶಸ್ತಿಯನ್ನು ಸ್ವೀಕರಿಸಿರುವುದು ನನಗೆ ಗೌರವ ತಂದಿದೆ. ಪ್ರಶಸ್ತಿಯ ಹಣವನ್ನು ನಮಾಮಿ ಗಂಗೆ ಯೋಜನೆಗೆ ನೀಡಲು ನಿರ್ಣಯಿಸಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹರಿಯಾಣದಲ್ಲಿ ನಿಲ್ಲದ ಕೋಮು ಘರ್ಷಣೆ – ನಾಲ್ವರು ಸಾವು; 30 ಕ್ಕೂ ಹೆಚ್ಚು ಮಂದಿಗೆ ಗಾಯ

    ಪ್ರಶಸ್ತಿ ಸ್ವೀಕರಿಸಿದ ಬಳಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಈ ಪ್ರಶಸ್ತಿ ನೀಡಿದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳು. ಈ ದಿನ ನನಗೆ ಬಹಳ ಮುಖ್ಯವಾದ ಹಾಗೂ ನೆನಪಿನಲ್ಲಿರುವ ದಿನ. ಸ್ವಾತಂತ್ರ್ಯ ಹೋರಾಟದಲ್ಲಿ ತಿಲಕ್‌ರ ಪಾತ್ರವನ್ನು ಪದಗಳಲ್ಲಿ ಅಥವಾ ಕೆಲವು ಘಟನೆಗಳ ಮೂಲಕ ಹೇಳಲು ಸಾಧ್ಯವಿಲ್ಲ. ಈ ಪ್ರಶಸ್ತಿಯನ್ನ ದೇಶದ 140 ಕೋಟಿ ಜನರಿಗೆ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.

    ಪಿಎಂ ಮೋದಿ ಅವರ ಸನ್ಮಾನ ಸಮಾರಂಭದಲ್ಲಿ ಎನ್‌ಸಿಪಿ ನಾಯಕ ಶರದ್ ಪವಾರ್ ಹಾಜರಿದ್ದರು. ತನ್ನ ಚಿಕ್ಕಪ್ಪನ ವಿರುದ್ಧವೇ ಬಂಡಾಯವೆದ್ದ ಮತ್ತು ರಾಜ್ಯದಲ್ಲಿ ಎನ್‌ಡಿಎ ಸರ್ಕಾರಕ್ಕೆ ಸೇರಲು ಎನ್‌ಸಿಪಿ ಹಲವು ಶಾಸಕರೊಂದಿಗೆ ವಿಭಜನೆಯಾಗಿದ್ದ ಅಜಿತ್‌ ಪವಾರ್‌ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇದನ್ನೂ ಓದಿ: ಸಿಧು ಮೂಸೆವಾಲಾ ಹತ್ಯೆ ಕೇಸ್ – ಅಜರ್‌ಬೈಜಾನ್‌ನಿಂದ ಆರೋಪಿ ಸಚಿನ್ ಬಿಷ್ಣೋಯ್ ಭಾರತಕ್ಕೆ ಹಸ್ತಾಂತರ

    ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಬಣವು ರಾಜ್ಯದಲ್ಲಿ ಬಿಜೆಪಿ-ಶಿವಸೇನೆ ಸಮ್ಮಿಶ್ರ ಸರ್ಕಾರವನ್ನು ಸೇರುವುದರೊಂದಿಗೆ ಪವಾರ್ ಅವರ ಪಕ್ಷವು ಇತ್ತೀಚೆಗೆ ವಿಭಜನೆಯಾಗಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಾಲ ವಾಪಸ್ ಕೊಟ್ಟಿಲ್ಲ ಅಂತ ಪತಿಯೆದುರೇ ಮಹಿಳೆಯ ಅತ್ಯಾಚಾರ

    ಸಾಲ ವಾಪಸ್ ಕೊಟ್ಟಿಲ್ಲ ಅಂತ ಪತಿಯೆದುರೇ ಮಹಿಳೆಯ ಅತ್ಯಾಚಾರ

    ಮುಂಬೈ: ಸಾಲ (Loan) ತೆಗೆದುಕೊಂಡು ಅದನ್ನು ಮರುಪಾವತಿ ಮಾಡಲು ಸಾಧ್ಯವಾಗದೇ ಹೋಗಿದ್ದಕ್ಕೆ ಪತಿಯೆದುರೇ ಮಹಿಳೆಯ ಮೇಲೆ ಅತ್ಯಾಚಾರ (Rape) ಎಸಗಿರುವ ಘಟನೆ ಮಹಾರಾಷ್ಟ್ರದ (Maharashtra) ಪುಣೆಯಲ್ಲಿ (Pune) ನಡೆದಿರುವುದಾಗಿ ಪೊಲೀಸರು ಗುರುವಾರ ತಿಳಿಸಿದ್ದಾರೆ.

    ಘಟನೆ ಈ ವರ್ಷ ಫೆಬ್ರವರಿಯಲ್ಲಿ ನಡೆದಿದೆ. ಆದರೆ ಈಗ ಬೆಳಕಿಗೆ ಬಂದಿದೆ. ಅತ್ಯಾಚಾರ ಆರೋಪಿಯನ್ನು ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ. ಪೊಲೀಸರ ಪ್ರಕಾರ ವ್ಯಕ್ತಿಯೊಬ್ಬ 40,000 ರೂ. ಸಾಲ ಪಡೆದಿದ್ದು, ಅದನ್ನು ಮರುಪಾವತಿ ಮಾಡಲು ಸಾಧ್ಯವಾಗದೇ ಹೋಗಿದ್ದಕ್ಕೆ ಸಾಲ ನೀಡಿದಾತ ಆತನ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

    ಆರೋಪಿ ಮಹಿಳೆಯ ಪತಿಗೆ ಚಾಕು ತೋರಿಸಿ, ಬೆದರಿಸಿ ನಂತರ ಆತನ ಸಮ್ಮುಖದಲ್ಲೇ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆರೋಪಿ ಕೃತ್ಯದ ವೀಡಿಯೋವನ್ನು ತನ್ನ ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ಮಂಡ್ಯದ ವಿಸಿ ನಾಲೆಗೆ ಕಾರು ಪಲ್ಟಿ – ಚಾಲಕ ನಾಪತ್ತೆ

    ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದೀಗ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ವಿದ್ಯುತ್ ಅವಘಡ – ಕೊಟ್ಟಿಗೆಯಲ್ಲಿದ್ದ 7 ಹಸುಗಳು ಸಜೀವ ದಹನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಖ್ಯಾತ ನಟ ರವೀಂದ್ರ ಮಹಾಜನಿ ಮೃತದೇಹ

    ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಖ್ಯಾತ ನಟ ರವೀಂದ್ರ ಮಹಾಜನಿ ಮೃತದೇಹ

    ರಾಠಿ (Marathi) ಚಿತ್ರ ರಂಗದ ಹೆಸರಾಂತ ನಟ ರವೀಂದ್ರ ಮಹಾಜನಿ (Ravindra Mahajani)  ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ಫ್ಲ್ಯಾಟ್ ನಲ್ಲಿ ಮೃತದೇಹ ಪತ್ತೆಯಾಗಿದ್ದು, ಕೆಲ ದಿನಗಳ ಹಿಂದೆಯೇ ಅವರು ಆತ್ಮಹತ್ಯೆ (suicide) ಮಾಡಿಕೊಂಡಿದ್ದಾರೆ ಎಂದು ಗೊತ್ತಾಗಿದೆ. ಪುಣೆಯ (Pune) ತಾಳೇಗಾಂವ್ ದಭಾಡೆ ಸಮೀಪದ ಅಂಬಿ ಗ್ರಾಮದಲ್ಲಿ ರವೀಂದ್ರ ವಾಸವಾಗಿದ್ದರು. ಅವರು ವಾಸುತ್ತಿದ್ದ ಮನೆಯಿಂದ ದುರ್ವಾಸನೆ ಬಂದ ಹಿನ್ನೆಲೆಯಲ್ಲಿ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.

    ಪೊಲೀಸರು ಸ್ಥಳಕ್ಕೆ ಆಗಮಿಸಿ ಫ್ಲ್ಯಾಟ್ ಬಾಗಿಲು ತೆರೆದಾಗ ರವೀಂದ್ರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೂರ್ನಾಲ್ಕು ದಿನಗಳ ಹಿಂದೆಯೇ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ನಂತರ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಶುಕ್ರವಾರ ಸಂಜೆಯಿಂದಲೇ ಅವರ ಫ್ಲ್ಯಾಟ್ ನಿಂದ ವಾಸನೆ ಬರುತ್ತಿತ್ತು ಎಂದು ನಿವಾಸಿಗಳು ಮಾಹಿತಿ ನೀಡಿದ್ದಾರೆ.

    70-80ರ ದಶಕದಲ್ಲಿ ಪ್ರಮುಖ ನಟರಾಗಿ ರವೀಂದ್ರ ಗುರುತಿಸಿಕೊಂಡಿದ್ದರು. ಹಲವಾರು ಹಿಟ್ ಚಿತ್ರಗಳನ್ನೂ ಅವರು ನೀಡಿದ್ದಾರೆ. ಮರಾಠಿ, ಗುಜರಾತಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ರವೀಂದ್ರ ನಟಿಸಿದ್ದಾರೆ. ಮರಾಠಿ ಚಿತ್ರರಂಗವಂತೂ ಅವರನ್ನು ವಿನೋದ್ ಖನ್ನಾ ಎಂದೇ ಅಭಿಮಾನದಿಂದ ಕರೆಯುತ್ತಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Maharashtra Bus Accident – ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ

    Maharashtra Bus Accident – ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ

    ಮುಂಬೈ: ಮಹಾರಾಷ್ಟ್ರದ ಬುಲ್ದಾನಾದ ಬಳಿ ಬಸ್ ದುರಂತ (Bus Accident in Maharastra) ಪ್ರಕರಣ ಬೆಚ್ಚಿಬೀಳಿಸಿದೆ. ಇದೀಗ ದುರಂತದಲ್ಲಿ ಸಾವಿಗೀಡಾದವರಿಗೆ ರಾಜ್ಯ ಸರ್ಕಾರ ಪರಿಹಾರ ಘೋಷಣೆ ಮಾಡಿದೆ.

    ಸಾವಿಗೀಡಾದವರ ಪ್ರತಿ ಕುಟುಂಬಕ್ಕೆ 5 ಲಕ್ಷ ಪರಿಹಾರವನ್ನು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ (Eknath Shindhe) ಘೋಷಣೆ ಮಾಡಿದ್ದಾರೆ. ಜೊತೆಗೆ ಗಾಯಗೊಂಡವರ ಚಿಕಿತ್ಸೆಯನ್ನು ಸರ್ಕಾರವೇ ಭರಿಸಲಿದೆ. ಇಲ್ಲಿಯವರೆಗೆ ಮೂರು ಮಕ್ಕಳು ಸೇರಿ ಒಟ್ಟು 26 ಜನ ಸಾವಿಗೀಡಾಗಿದ್ದಾರೆ. ಬಸ್‍ನಲ್ಲಿ ಒಟ್ಟು 33 ಜನ ಪ್ರಯಾಣಿಸುತ್ತಿದ್ದರು ಎಂದು ಪೊಲೀಸರಿಂದ ಮಾಹಿತಿ ನೀಡಿದ್ದಾರೆ.

    ದುರಂತಕ್ಕೆ ಪ್ರಧಾನಿ ಮೋದಿಯೂ (Narendra Modi) ಸಂತಾಪ ವ್ಯಕ್ತಪಡಿಸಿದ್ದು, ಮೃತರ ಸಂಬಂಧಿಕರಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಗಾಯಗೊಂಡವರಿಗೆ ತಲಾ 50,000 ರೂ. ಆರ್ಥಿಕ ನೆರವು ಘೋಷಣೆ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಕೂಡ ಘಟನೆಗೆ ಸಂತಾಪ ಸೂಚಿಸಿದ್ದಾರೆ. ದೇವರು ಮೃತರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ. ಇದನ್ನೂ ಓದಿ: ಅನ್ಯ ಜಾತಿ ಹುಡ್ಗನನ್ನ ಪ್ರೀತಿಸಿ ಮದ್ವೆಯಾಗಿದ್ದಕ್ಕೆ ಬದುಕಿದ್ದಾಗಲೇ ಮಗಳ ಅಂತ್ಯಸಂಸ್ಕಾರ ಮಾಡಿದ ತಂದೆ

    ನಡೆದಿದ್ದೇನು..?: ಸಮೃದ್ಧಿ-ಮಹಾಮಾರ್ಗ್ ಎಕ್ಸ್ ಪ್ರೆಸ್ ವೇಯಲ್ಲಿ ಬೆಳಗ್ಗಿನ ಜಾವ 2 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಬುಲ್ಧಾನಾ ಬಳಿ ಟೈರ್ ಬ್ಲಾಸ್ಟ್ ಆಗಿ ನಿಯಂತ್ರಣ ತಪ್ಪಿದ ಬಸ್ ಡಿವೈಡರ್ ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿತು. ಅವಘಡದಲ್ಲಿ 26 ಮಂದಿ ಪ್ರಯಾಣಿಕರು ಸಜೀವ ದಹನವಾಗಿದ್ದಾರೆ. ಈ ಅವಘಢದಲ್ಲಿ ಬಸ್ ಚಾಲಕ ಸೇರಿದಂತೆ 8 ಮಂದಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಹಾರಾಷ್ಟ್ರದಲ್ಲಿ ಭೀಕರ ಬಸ್‌ ದುರಂತ – 25 ಮಂದಿ ಸಜೀವ ದಹನ

    ಮಹಾರಾಷ್ಟ್ರದಲ್ಲಿ ಭೀಕರ ಬಸ್‌ ದುರಂತ – 25 ಮಂದಿ ಸಜೀವ ದಹನ

    ಮುಂಬೈ: ಬಸ್‌ನಲ್ಲಿ ಬೆಂಕಿ ಹೊತ್ತಿಕೊಂಡು ಮೂರು ಮಕ್ಕಳು ಸೇರಿದಂತೆ 25 ಜನರು ಸಾವನ್ನಪ್ಪಿರುವ ದಾರುಣ ಘಟನೆ ಮಹಾರಾಷ್ಟ್ರದ (Maharashtra) ಎಕ್ಸ್‌ಪ್ರೆಸ್‌ವೇಯಲ್ಲಿ ನಡೆದಿದೆ. ಅವಘಡದಲ್ಲಿ ಎಂಟು ಜನರು ಗಾಯಗೊಂಡಿದ್ದಾರೆ.

    ಪುಣೆಗೆ ತೆರಳುತ್ತಿದ್ದ ಬಸ್‌ನಲ್ಲಿ ಸುಮಾರು 33 ಮಂದಿ ಇದ್ದರು. ಸಮೃದ್ಧಿ-ಮಹಾಮಾರ್ಗ್ ಎಕ್ಸ್‌ಪ್ರೆಸ್‌ವೇಯಲ್ಲಿ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮಣಿಪುರ ಸಿಎಂ ಬಿರೇನ್ ಸಿಂಗ್ ರಾಜೀನಾಮೆ ಪತ್ರವನ್ನು ಹರಿದು ಹಾಕಿದ ಮಹಿಳೆ

    ಬುಲ್ಧಾನಾ ಬಳಿ ಟೈರ್ ಬ್ಲಾಸ್ಟ್‌ ಆಗಿ ನಿಯಂತ್ರಣ ತಪ್ಪಿದ ಬಸ್ ಡಿವೈಡರ್‌ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿತು. ಅವಘಡದಲ್ಲಿ 25 ಜನರು ಸುಟ್ಟು ಕರಕಲಾಗಿದ್ದು, ಬಸ್ ಚಾಲಕ ಸೇರಿದಂತೆ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಬುಲ್ಧಾನದ ಪೊಲೀಸ್ ವರಿಷ್ಠಾಧಿಕಾರಿ ಸುನೀಲ್ ಕಡಸನೆ ಮಾಹಿತಿ ನೀಡಿದ್ದಾರೆ.

    ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಶವಗಳ ಗುರುತು ಪತ್ತೆ ಮಾಡಿ, ಅವರ ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲು ಕ್ರಮವಹಿಸಲಾಗುವುದು ಎಂದು ಎಸ್‌ಪಿ ಹೇಳಿದ್ದಾರೆ. ಇದನ್ನೂ ಓದಿ: 3 ವಲಯ, 3 ಪ್ರತ್ಯೇಕ ಸಭೆ – ಲೋಕಸಭಾ ಚುನಾವಣೆಗೆ ತಯಾರಾದ ಬಿಜೆಪಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟ್ರಕ್‍ಗೆ ಬಸ್ ಡಿಕ್ಕಿ – ಏಳು ಸಾವು, 13 ಮಂದಿಗೆ ಗಾಯ

    ಟ್ರಕ್‍ಗೆ ಬಸ್ ಡಿಕ್ಕಿ – ಏಳು ಸಾವು, 13 ಮಂದಿಗೆ ಗಾಯ

    ಮುಂಬೈ: ಟ್ರಕ್‍ಗೆ ಬಸ್ ಡಿಕ್ಕಿ ಹೊಡೆದ  (BUS Accident) ಪರಿಣಾಮ ಸ್ಥಳದಲ್ಲೇ ಏಳು ಜನರು ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ (Maharashtra) ಬುಲ್ಧಾನಾ ಜಿಲ್ಲೆಯ ನಾಗ್ಪುರ-ಪುಣೆ ಹೆದ್ದಾರಿಯಲ್ಲಿ (Nagpur-Pune Highway) ಮಂಗಳವಾರ ನಡೆದಿದೆ.

    ಘಟನೆಯಲ್ಲಿ 13 ಮಂದಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡು ವಾಹನಗಳು ಮಿತಿ ಮೀರಿದ ವೇಗದಲ್ಲಿ ಚಲಿಸುತ್ತಿದ್ದ ಕಾರಣ ಈ ಅಪಘಾತ ಸಂಭವಿಸಿದೆ. ಅತಿ ವೇಗದ ಪರಿಣಾಮ ಎರಡು ವಾಹನಗಳೂ ಸಂಪೂರ್ಣ ಜಖಂಗೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ಹಿಂದೂ ಸಂಘಟನೆಗಳಿಂದ ‘ದಿ ಕೇರಳ ಸ್ಟೋರಿ’ ಪ್ರದರ್ಶನ: ಖಡಕ್ ಸೂಚನೆ ಕೊಟ್ಟ ಎಡಿಜಿಪಿ

    ಅಪಘಾತ ನಡೆದ ತಕ್ಷಣ ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡು ಹಲವರನ್ನು ಹೊರತೆಗೆದಿದ್ದಾರೆ. ನಂತರ ಅವರನ್ನು ಆಸ್ಪತ್ರೆಗಳಿಗೆ ಸಾಗಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರೀ ಸಂಖ್ಯೆಯಲ್ಲಿ ಮರಗಳು ಉರುಳಿ ಬಿದ್ದಿದ್ದಕ್ಕೆ ಕಾರಣ ಸಿಕ್ತು

  • ಹೋಟೆಲ್ ನಲ್ಲಿ ವೇಶ್ಯಾವಾಟಿಕೆ : ಖ್ಯಾತನಟಿ ಜೊತೆ ಮಾಡೆಲ್ ಬಂಧನ

    ಹೋಟೆಲ್ ನಲ್ಲಿ ವೇಶ್ಯಾವಾಟಿಕೆ : ಖ್ಯಾತನಟಿ ಜೊತೆ ಮಾಡೆಲ್ ಬಂಧನ

    ಮೊನ್ನೆಯಷ್ಟೇ ಮುಂಬೈನಲ್ಲಿ ಹಿಂದಿ ಕಿರುತೆರೆ ನಟಿಯನ್ನು (Actress)  ವೇಶ್ಯಾವಾಟಿಕೆಯ (Prostitute) ಅಪರಾಧದ ಅಡಿ ಬಂಧಿಸಿ ಜೈಲಿಗೆ ಕಳುಹಿಸಿದ್ದರು ಪೊಲೀಸ್ ಅಧಿಕಾರಿಗಳು. ಆ ಘಟನೆ ಮಾಸುವ ಮುನ್ನವೇ ಇಂಥದ್ದೇ ಮತ್ತೊಂದು ಪ್ರಕರಣ ಬಯಲಿಗೆ ಬಂದಿದ್ದು, ಫೈವ್ ಸ್ಟಾರ್ ಹೋಟೆಲ್ ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಖ್ಯಾತ ನಟಿ ಹಾಗೂ ಮಡೆಲ್ (Model) ಒಬ್ಬರನ್ನು ಬಂಧಿಸಲಾಗಿದೆ.

    ಅಕ್ರಮ ಚಟುವಟಿಕೆಯ ಖಚಿತ ಮಾಹಿತಿ ಮೇರೆಗೆ ಪುಣೆಯ (Pune) ವಾಕಡ್ ಏರಿಯಾದ ಫೈವ್ ಸ್ಟಾರ್ ಹೋಟೆಲ್ ಮೇಲೆ ದಾಳಿ ನಡೆಸಿದ ಪೊಲೀಸರು ಖ್ಯಾತ ಭೋಜ್ ಪುರಿ (Bhoj Puri) ನಟಿ ಮತ್ತು ಓರ್ವ ಮಾಡೆಲ್ ಹಾಗೂ ಏಜೆಂಟ್ ನನ್ನು ಬಂಧಿಸಿದ್ದಾರೆ. ಶುಕ್ರವಾರ ಸಂಜೆ ನಟಿಯ ಬಂಧನವಾಗಿದ್ದು, ಪಿಂಪ್ರಿ ಚಿಂಚವಾಡ್ ಕ್ರೈಂ ಬ್ರ್ಯಾಂಚ್ ತಂಡ ಈ ಕಾರ್ಯಚರಣೆ ನೆಡೆಸಿದೆ. ಇದನ್ನೂ ಓದಿ:ಮಗಳ ಭವಿಷ್ಯಕ್ಕಾಗಿ ದೇಶ ಬಿಡಲು ಸಿದ್ಧ ಎಂದ ಪ್ರಿಯಾಂಕಾ ಚೋಪ್ರಾ

    ಗ್ರಾಹಕರಿಂದ ಈ ನಟಿ ಒಂದು ರಾತ್ರಿಗೆ 25 ಸಾವಿರ ಹಾಗೂ ಮಧ್ಯಾಹ್ನದವರೆಗೆ 15 ಸಾವಿರ ರೂಪಾಯಿ ಪಡೆಯುತ್ತಿದ್ದರು ಎಂದು ಹೇಳಲಾಗುತ್ತಿದೆ. ಅಮಾಯಕ ಮಹಿಳೆಯರಿಗೆ ಆಮಿಷ ಒಡ್ಡಿ ಈ ಕೃತ್ಯಕ್ಕೆ ಬಳಸಿಕೊಳ್ಳುತ್ತಿದ್ದರು ಎನ್ನುವ ಮಾಹಿತಿಯೂ ಲಭ್ಯವಾಗಿದೆ. ಹೋಟೆಲ್ ಮೇಲೆ ದಾಳಿ ನಡೆದಾಗಿ ಖ್ಯಾತ ನಟಿ ಹಾಗೂ ಇಬ್ಬರು ದಂಧೆಯಲ್ಲಿ ತೊಡಗಿದ್ದವರು ಕಂಡು ಬಂದಿದ್ದಾರೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

  • ಕುದಿಯುವ ನೀರಿನಲ್ಲಿ ಮುಳುಗಿಸಿ ಮಗು ಕೊಂದ ಪಾಪಿ

    ಮುಂಬೈ: ಒಂದೂವರೆ ವರ್ಷದ ಅಂಬೆಗಾಲಿಡುವ ಮಗುವನ್ನು ಕುದಿಯುವ ನೀರಿದ್ದ ಬಕೆಟ್‌ನಲ್ಲಿ ಮುಳುಗಿಸಿ ಕೊಂದ ಆರೋಪಿಯನ್ನು ಪುಣೆ (Pune) ಪೊಲೀಸರು ಸೋಮವಾರ ಬಂಧಿಸಿದ್ದಾರೆ.

    ಆರೋಪಿಯನ್ನು ವಿಕ್ರಮ್ ಕೋಲೇಕಾರ್ ಎಂದು ಗುರುತಿಸಲಾಗಿದೆ. ಈತ ಮಗುವಿನ ತಾಯಿಯೊಂದಿಗೆ ಅನೈತಿಕ ಸಂಬಂಧ (Illegal Relation) ಹೊಂದಿದ್ದ ಎನ್ನಲಾಗಿದೆ. ಕಿರಣ ಎಂಬಾಕೆ ಮೃತ ಮಗುವಿನ ತಾಯಿ. ವಿಕ್ರಮ್, ಕಿರಣಳನ್ನು ಮದುವೆಯಾಗಲು ಬಯಸಿದ್ದ. ಆದರೆ ಆಕೆ ಅವನ ಪ್ರಸ್ತಾಪವನ್ನು ತಿರಸ್ಕರಿಸಿದ್ದಳು. ತನ್ನನ್ನು ನಿರಾಕರಿಸಿದ ಕೋಪಕ್ಕೆ ಆಕೆಯ ಮಗುವನ್ನು ಕೊಂದಿದ್ದಾನೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಕುಡಿದ ಅಮಲಿನಲ್ಲಿ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ – American Airlines ನಲ್ಲಿ ಮತ್ತೊಂದು ಕೇಸ್‌

    ಮಹಾರಾಷ್ಟ್ರದ (Maharashtra) ಪಿಂಪ್ರಿ ಚಿಂಚ್‌ವಾಡ್‌ನಲ್ಲಿ (Pimpri-Chinchwad) ಈ ಘಟನೆ ನಡೆದಿದ್ದು, ಏಪ್ರಿಲ್ 6ರಂದು ವಿಕ್ರಮ್ ಒಂದೂವರೆ ವರ್ಷದ ಮಗುವನ್ನು ಕುದಿಯುತ್ತಿದ್ದ ನೀರಿನಲ್ಲಿ ಮುಳುಗಿಸಿ ಕೊಂದಿದ್ದಾನೆ. ಈ ದುಷ್ಕೃತ್ಯವನ್ನು ಮಹಿಳೆಯೊಬ್ಬರು ನೋಡಿದ್ದರಾದರೂ ಭಯಗೊಂಡ ಕಾರಣ ಈ ವಿಷಯವನ್ನು ಯಾರಿಗೂ ಹೇಳಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ವೈಭವ್ ಶಿಂಗಾರೆ ತಿಳಿಸಿದ್ದಾರೆ. ಇದನ್ನೂ ಓದಿ: ಪೊಲೀಸರ ಮೇಲೆ ಹಲ್ಲೆ – ಆಂಧ್ರ ಸಿಎಂ ಸಹೋದರಿ ವೈಎಸ್ ಶರ್ಮಿಳಾ ಖಾಕಿ ವಶಕ್ಕೆ

    ಇವರಿಬ್ಬರ ಪ್ರೇಮದಾಟಕ್ಕೆ ಏನೂ ಅರಿಯದ ಮುದ್ದು ಕಂದಮ್ಮ ಬಲಿಯಾಗಿದೆ ಎಂದು ಸ್ಥಳೀಯರು ವಿಷಾದ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಸಂಸದ, WFI ಅಧ್ಯಕ್ಷನ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ – ಪ್ರತಿಭಟನೆಗೆ ರಾಜಕೀಯ ಪಕ್ಷಗಳನ್ನು ಕರೆದ ಕುಸ್ತಿಪಟುಗಳು

  • ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಬಸ್‌ಗೆ ಟ್ರಕ್ ಡಿಕ್ಕಿ; ನಾಲ್ವರು ಸಾವು, 22 ಜನರಿಗೆ ಗಾಯ

    ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಬಸ್‌ಗೆ ಟ್ರಕ್ ಡಿಕ್ಕಿ; ನಾಲ್ವರು ಸಾವು, 22 ಜನರಿಗೆ ಗಾಯ

    ಮುಂಬೈ: ಟ್ರಕ್ (Truck) ಹಾಗೂ ಖಾಸಗಿ ಬಸ್ (Bus) ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ (Accident) ನಾಲ್ವರು ಸಾವನ್ನಪ್ಪಿದ್ದು, 22 ಜನರು ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ (Maharashtra) ಪುಣೆಯಲ್ಲಿ ನಡೆದಿದೆ.

    ಅಂಬೇಗಾಂವ್ ಪ್ರದೇಶದ ನರ್ಹೆ ಗ್ರಾಮದಲ್ಲಿ ಪುಣೆ-ಬೆಂಗಳೂರು ಹೆದ್ದಾರಿಯ (Pune-Bengaluru National Highway) ಸ್ವಾಮಿ ನಾರಾಯಣ ದೇವಸ್ಥಾನದ ಪಕ್ಕದಲ್ಲಿರುವ ನವಲೆ ಸೇತುವೆ ಬಳಿ ಈ ಅಪಘಾತ ಸಂಭವಿಸಿದೆ.

    ವರದಿಗಳ ಪ್ರಕಾರ ಸಕ್ಕರೆ ಚೀಲಗಳನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ವಾಹನಗಳು ಪಲ್ಟಿಯಾಗಿದ್ದು, ನಜ್ಜುಗುಜ್ಜಾಗಿವೆ. ತಕ್ಷಣವೇ ಅಗ್ನಿಶಾಮಕ ದಳ ಘಟನಾ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದೆ. ಪಿಎಂಆರ್‌ಡಿಎಯಿಂದ ಒಂದು ರಕ್ಷಣಾ ವ್ಯಾನ್ ಸೇರಿದಂತೆ ಒಟ್ಟು 7 ಅಗ್ನಿಶಾಮಕ ವಾಹನಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಇದನ್ನೂ ಓದಿ: 2 ಲಾರಿಗಳ ಮುಖಾಮುಖಿ ಡಿಕ್ಕಿ – ಓರ್ವ ಸಾವು, ಮೂವರಿಗೆ ಗಂಭೀರ ಗಾಯ

    ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ರವಾನಿಸಿ ಸೂಕ್ತ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಅಪಘಾತಕ್ಕೆ ಕಾರಣವೇನು ಎಂಬುದನ್ನು ತಿಳಿಯಲು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮತ್ತೆ 3 ದಿನಗಳ ಕಾಲ ಮಳೆ

  • ಭಾರತೀಯ ಸ್ಟಾರ್‌ ಕ್ರಿಕೆಟಿಗನ ತಂದೆ ನಾಪತ್ತೆ – ಪುಣೆ ಪೊಲೀಸರಿಂದ ಶೋಧ

    ಭಾರತೀಯ ಸ್ಟಾರ್‌ ಕ್ರಿಕೆಟಿಗನ ತಂದೆ ನಾಪತ್ತೆ – ಪುಣೆ ಪೊಲೀಸರಿಂದ ಶೋಧ

    ಮುಂಬೈ: ಭಾರತೀಯ ಕ್ರಿಕೆಟಿಗ (Indian Cricketer) ಕೇದಾರ್‌ ಜಾಧವ್‌ (Kedar Jadhav) ಅವರ ತಂದೆ ನಾಪತ್ತೆಯಾಗಿದ್ದಾರೆ ಎಂದು ಜಾಧವ್‌ ಸೋಮವಾರ ಪುಣೆಯ (Pune) ಅಲಂಕಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 75 ವರ್ಷದ ಮಹದೇವ್ ಸೋಪಾನ್ ಜಾಧವ್‌ಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

    ಮೂಲಗಳ ಪ್ರಕಾರ, ಕೇದಾರ್ ಜಾಧವ್‌ ಮತ್ತು ಮಹದೇವ್ ಜಾಧವ್ ಪುಣೆ ನಗರದ ಕೊತ್ರುಡ್ ಪ್ರದೇಶದ ನಿವಾಸಿಗಳು. ಮಹದೇವ್‌ ಸೋಮವಾರ ಮನೆಯವರಿಗೆ ತಿಳಿಸದೇ ಹೊರಗಡೆ ಹೋಗಿದ್ದಾರೆ. ಬಹಳ ಹೊತ್ತಾದರೂ ಮನೆಗೆ ಹಿಂದಿರುಗಿಲ್ಲ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಸಂಜೆವರೆಗೂ ಹುಡುಕಾಡಿದರೂ ಸಿಗದಿದ್ದಾಗ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ರೋಚಕ ಫೈನಲ್‌ – ಮುಂಬೈ ಇಂಡಿಯನ್ಸ್‌ ಚೊಚ್ಚಲ WPL ಚಾಂಪಿಯನ್‌

    ನಾಪತ್ತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶೋಧ ಆರಂಭಿಸಿದ್ದು, ಇತರ ಪೊಲೀಸ್‌ ಠಾಣೆಗೂ ಜಾಧವ್‌ ಅವರ ತಂದೆ ಫೋಟೋವನ್ನು ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: WPLನಲ್ಲಿ ನೋಬಾಲ್‌ ವಿವಾದ – ಚಾಂಪಿಯನ್‌ ಪಟ್ಟ ಕೈತಪ್ಪಿಸಿದ ಆ ಒಂದು ಔಟ್‌