Tag: ಪುಣೆ

  • ಬೈಕ್‌ನಲ್ಲಿ ಬಂದು ಪುಣೆ ಮಾಜಿ ಕಾರ್ಪೋರೇಟರ್ ಕೊಂದ್ರು – 10 ಆರೋಪಿಗಳ ಮೇಲೆ ಎಫ್‌ಐಆರ್

    ಬೈಕ್‌ನಲ್ಲಿ ಬಂದು ಪುಣೆ ಮಾಜಿ ಕಾರ್ಪೋರೇಟರ್ ಕೊಂದ್ರು – 10 ಆರೋಪಿಗಳ ಮೇಲೆ ಎಫ್‌ಐಆರ್

    ಪುಣೆ: ಬೈಕ್‌ನಲ್ಲಿ ಬಂದು ಪುಣೆ (Pune) ಮಾಜಿ ಕಾರ್ಪೋರೇಟರ್ ವನರಾಜ್ ಹತ್ಯೆ ಗೈದ ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಸೋಮವಾರ ನಡೆದಿದೆ.

    ಭಾನುವಾರ ತಡರಾತ್ರಿ ಸುಮಾರು 9:30ರ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ದುಷ್ಕರ್ಮಿಗಳ ತಂಡ ಅಂದೇಕರ್ ಮೇಲೆ ದಾಳಿ ಮಾಡಿದ್ದಾರೆ. ಹರಿತವಾದ ಆಯುಧಗಳಿಂದ ಅಂದೇಕರ್ ಕುತ್ತಿಗೆ ಹಾಗೂ ತಲೆಗೆ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ದರ್ಶನ್‌ ಗ್ಯಾಂಗ್‌ನ ಮತ್ತಿಬ್ಬರು ಆರೋಪಿಗಳ ಜಾಮೀನು ಅರ್ಜಿ ವಜಾ

    ತೀರ್ವವಾದ ದಾಳಿಯಿಂದ ಅಂದೇಕರ್ ಮೃತಪಟ್ಟಿರು ಸಾಧ್ಯತೆಗಳು ಇವೆ. ಮೃತರ ಅಂಗಿಯಲ್ಲಿ ಖಾಲಿ ಕಾರ್ಟ್ರಿಡ್ಜ್ ಕಂಡುಬಂದಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಪ್ರವೀಣ್ ಪಾಟೀಲ್ ಹೇಳಿದ್ದಾರೆ. ಇದನ್ನೂ ಓದಿ: ಸೆಪ್ಟೆಂಬರ್ 22ಕ್ಕೆ ಪಿಎಸ್‌ಐ ಪರೀಕ್ಷೆ – 66,000 ಮಂದಿ ಅರ್ಜಿ ಸಲ್ಲಿಕೆ

    ದಾಳಿಯ ಹಿಂದೆ ಅಂದೇಕರ್ ಸಂಬಂಧಿಕರ ಪಾತ್ರವಿದೆ ಎಂದು ಶಂಕಿಸಿ ಕುಟುಂಬಸ್ಥರು ಎಫ್‌ಐಆರ್ (FIR) ದಾಖಲಿಸಿದ್ದಾರೆ. ಅಂದೇಕರ್ ದೇಹದಲ್ಲಿ 5 ಬಾರಿ ಗುಂಡು ಹಾರಿಸಿರುವ ಗುರುತು ಹಾಗೂ ಚೂಪಾದ ಶಸ್ತ್ರಗಳಿಂದ ಚುಚ್ಚಿರುವ ಗಾಯಗಳ ಗುರುತುಗಳಿವೆ ಎಂದು ಶವ ಪರೀಕ್ಷೆಯ ವೇಳೆ ತಿಳಿದು ಬಂದಿದೆ ಎಂದು ಹೇಳಿದರು.

    ಪ್ರಕರಣ ಸಂಬಂಧ 10 ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: Kolkata Horror | ಟ್ರೈನಿ ವೈದ್ಯೆ ʻಹತ್ಯಾʼಚಾರ ನಡೆದಿದ್ದ ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್‌ ಘೋಷ್‌ ಅರೆಸ್ಟ್‌

  • ಮಹಾರಾಷ್ಟ್ರದಲ್ಲಿ ಭಾರೀ ಮಳೆಗೆ ಪ್ರವಾಹ ಪರಿಸ್ಥಿತಿ; ಪುಣೆಯಲ್ಲಿ 6 ಮಂದಿ ಬಲಿ

    ಮಹಾರಾಷ್ಟ್ರದಲ್ಲಿ ಭಾರೀ ಮಳೆಗೆ ಪ್ರವಾಹ ಪರಿಸ್ಥಿತಿ; ಪುಣೆಯಲ್ಲಿ 6 ಮಂದಿ ಬಲಿ

    ಮುಂಬೈ: ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮುಂಬೈ, ಪುಣೆ ಸೇರಿದಂತೆ ನಗರದ ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಮಹಾಮಳೆಗೆ ಪುಣೆಯಲ್ಲಿ 6 ಮಂದಿ ಬಲಿಯಾಗಿದ್ದಾರೆ.

    ವಿದ್ಯುತ್‌ ಅವಘಡದಿಂದ ಮೂವರು, ಥಾಣೆಯ ಬಾರ್ವಿ ಅಣೆಕಟ್ಟೆಗೆ ಬಿದ್ದು ಇಬ್ಬರು ಮುಳುಗಿ ಸಾವಿಗೀಡಾಗಿದ್ದಾರೆ. ಭಾರೀ ಮಳೆಯಿಂದಾಗಿ ಮುಂಬೈ ಮತ್ತು ಪಾಲ್ಘರ್‌ಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.

    ಮುಂಬೈನ ಸಾಂತಾಕ್ರೂಜ್‌ನಲ್ಲಿರುವ ವೀಕ್ಷಣಾಲಯವು ಈ ತಿಂಗಳಿನಲ್ಲಿ ಇದುವರೆಗೆ 1,500 ಮಿಮೀ ಮಳೆಯನ್ನು ದಾಖಲಿಸಿದೆ. ನಗರದ ಇತಿಹಾಸದಲ್ಲೇ 2ನೇ ಬಾರಿಗೆ ಅತಿ ಹೆಚ್ಚು ಮಳೆಯಾದಂತಾಗಿದೆ. ಕಳೆದ ಜುಲೈನಲ್ಲಿ ನಗರದಲ್ಲಿ 1,771 ಮಿಮೀ ನಷ್ಟು ಮಳೆಯಾಗಿತ್ತು.

    ಕುಂಡಲಿಕಾ ಮತ್ತು ಅಂಬಾ ಸೇರಿದಂತೆ ರಾಜ್ಯದ ನಾಲ್ಕು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ನದಿ ತೀರದಲ್ಲಿ ವಾಸವಾಗಿರುವ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಕೂಡಲೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.

    ನಗರದ ಹಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಈ ಸಂಬಂಧ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋಗಳು ಮತ್ತು ಫೋಟೋಗಳು ಹರಿದಾಡುತ್ತಿವೆ. ಜುಹು ಕಡಲತೀರದ ಉದ್ದಕ್ಕೂ ಅಲೆಗಳ ಅಬ್ಬರ ಜೋರಾಗಿದೆ. ಕರಾವಳಿಯಿಂದ ದೂರವಿರಲು ಜನರಿಗೆ ಎಚ್ಚರಿಸಲಾಗಿದೆ.

  • ಪೋರ್ಷೆ ಕಾರು ಅಪಘಾತ- ಅಪ್ರಾಪ್ತನ ತಂದೆ, ಅಜ್ಜನಿಗೆ ಜಾಮೀನು ಮಂಜೂರು

    ಪೋರ್ಷೆ ಕಾರು ಅಪಘಾತ- ಅಪ್ರಾಪ್ತನ ತಂದೆ, ಅಜ್ಜನಿಗೆ ಜಾಮೀನು ಮಂಜೂರು

    ಪುಣೆ: ಕಿಡ್ನ್ಯಾಪ್ ಮತ್ತು ಕುಟುಂಬದ ಚಾಲಕನನ್ನು ಅಕ್ರಮವಾಗಿ ಬಂಧಿಸಿದ ಪ್ರಕರಣದಲ್ಲಿ ಪುಣೆ ಪೋರ್ಷೆ ಕಾರು ಅಪಘಾತದ ಆರೋಪಿ ಅಪ್ರಾಪ್ತನ ತಂದೆ ಮತ್ತು ಅಜ್ಜನಿಗೆ ಮಂಗಳವಾರ ಪುಣೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

    ಜಾಮೀನು ಆದೇಶವನ್ನು ಕೋರ್ಟ್ ನೀಡಿದ ನಂತರ ಬಾಲಾಪರಾಧಿಯ ಅಜ್ಜ ಎಸ್‍ಕೆ ಅಗರ್ವಾಲ್ ಬಿಡುಗಡೆಯಾಗಲಿದ್ದಾರೆ. ಆದಾಗ್ಯೂ ಬ್ಲಡ್ ಎಕ್ಸ್ ಚೇಂಜ್ ಪ್ರಕರಣದಲ್ಲಿ ಪೊಲೀಸರು ತಮ್ಮ ದಾಖಲೆಗಳನ್ನು ಸಲ್ಲಿಸಬೇಕಾಗಿರುವುದರಿಂದ ಅಪ್ರಾಪ್ತ ಆರೋಪಿಯ ತಂದೆ ವಿಶಾಲ್ ಅಗರ್ವಾಲ್ ನ್ಯಾಯಾಂಗ ಬಂಧನದಲ್ಲಿ ಇರಲಿದ್ದಾರೆ.

    ಮೇ 19 ರ ಮಧ್ಯರಾತ್ರಿ ಅಪಘಾತದ ನಂತರ ಸುರೇಂದ್ರ ಕುಮಾರ್ ಅಗರ್ವಾಲ್, ಚಾಲಕನನ್ನು ಅಪಹರಿಸಿ ತನ್ನ ಬಂಗಲೆಗೆ ಕರೆದೊಯ್ದಿದ್ದಾನೆ. ಬಳಿಕ ಆ ದಿನ ರಾತ್ರಿ ಚಾಲಕ ಕಲ್ಯಾಣಿನಗರದಲ್ಲಿರುವ ಅಗರ್ವಾಲ್ ಮನೆಯಲ್ಲಿ ತಂಗಿದ್ದನು. ಆತನ ಹೆಂಡತಿ ಮತ್ತು ಮಕ್ಕಳನ್ನು ಸಹ ಇಲ್ಲಿಗೆ ಕರೆತರಲಾಗಿದೆ ಎಂದು ಪುಣೆ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಇದನ್ನೂ ಓದಿ: ಹತ್ರಾಸ್‌ ದುರಂತ- ಮೃತರ ಕುಟುಂಬಕ್ಕೆ ತಲಾ 2 ಲಕ್ಷ, ಗಾಯಾಳುಗಳಿಗೆ ತಲಾ 50 ಸಾವಿರ ನೆರವು

    ಈ ನಿಟ್ಟಿನಲ್ಲಿ ಕ್ರೈಂ ಬ್ರ್ಯಾಂಚ್ ಪೊಲೀಸರು ಅಗರ್ವಾಲ್ ಅವರ ಬಂಗಲೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಅಲ್ಲದೇ ಶೋಧ ಕಾರ್ಯಾಚರಣೆಯನ್ನೂ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ವಕೀಲ ಪ್ರಶಾಂತ್ ಪಾಟೀಲ್, ಚಾಲಕ ಸ್ವಯಂ ಪ್ರೇರಿತವಾಗಿ ಬಂಗಲೆಗೆ ಬಂದಿದ್ದಾನೆ. ಘಟನಾ ಸ್ಥಳದಲ್ಲಿದ್ದ ಜನಸಮೂಹ ಕಂಡು ಭಯದಿಂದ ಆ ರಾತ್ರಿ ಅಗರ್ವಾಲ್ ಅವರ ಬಂಗಲೆಯಲ್ಲಿ ಚಾಲಕ ತನ್ನ ಕುಟುಂಬದೊಂದಿಗೆ ಉಳಿದುಕೊಂಡಿದ್ದಾನೆ ಎಂದು ಕೋರ್ಟ್‍ಗೆ ಪಾಟೀಲ್ ತಿಳಿಸಿದರು.

    ಅಪಹರಣ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾದ ನಂತರ ಸುರೇಂದ್ರ ಕುಮಾರ್ ಅಗರ್ವಾಲ್‍ಗೆ ಜಾಮೀನು ನೀಡಲಾಯಿತು. ಈ ನಡುವೆ ವಿಶಾಲ್ ಅಗರ್ವಾಲ್ ಅವರು ಈ ಪ್ರಕರಣದಲ್ಲಿ ಜಾಮೀನು ಪಡೆದಿದ್ದಾರೆ. ಆದರೆ ಅವರ ಕಸ್ಟಡಿಯು ಮುಂದುವರಿಯುತ್ತದೆ. ಹಿಂದಿನ ಪ್ರಕರಣದಲ್ಲಿ ಜಾಮೀನು ಪಡೆದಿದ್ದರೂ, ವಿಶಾಲ್ ಅಗರ್ವಾಲ್ ಇತರ ಮೂರು ಪ್ರಕರಣಗಳಿಂದಾಗಿ ಯರವಾಡ ಕೇಂದ್ರ ಕಾರಾಗೃಹದಲ್ಲಿಯೇ ಇದ್ದರು.

    ಒಂದು ಪ್ರಕರಣವು ಕುಟುಂಬದ ಚಾಲಕನ ಅಪಹರಣ ಮತ್ತು ಅಕ್ರಮ ಬಂಧನವನ್ನು ಒಳಗೊಂಡಿತ್ತು. ಅಗರ್ವಾಲ್ ಕಾರನ್ನು ಚಾಲನೆ ಮಾಡುವ ಜವಾಬ್ದಾರಿಯನ್ನು ತೆಗೆದುಕೊಳ್ಳುವಂತೆ ಒತ್ತಡ ಹೇರಿದ್ದಾರೆ ಎಂದು ಆರೋಪಿಸಲಾಗಿದೆ. ಮತ್ತೊಂದು ಪ್ರಕರಣವು ಸಂಭಾವ್ಯ ಸಾಕ್ಷ್ಯವನ್ನು ತಿದ್ದಿರುವುದಕ್ಕೆ ಸಂಬಂಧಿಸಿದೆ. ಆಲ್ಕೋಹಾಲ್ ಸೇವನೆಯ ಕುರಿತು ಪತ್ತೆಹಚ್ಚುವುದನ್ನು ತಪ್ಪಿಸಲು ಅಪ್ರಾಪ್ತನ ರಕ್ತದ ಮಾದರಿಯನ್ನು ಬದಲಾಯಿಸಲಾಗಿದೆ. ಆರೋಪಿಯ ರಕ್ತದ ಮಾದರಿ ಬದಲಿಸಿ ಆತನ ತಾಯಿಯ ರಕ್ತದ ಮಾದರಿಯನ್ನು ಇರಿಸಲಾಗಿತ್ತು ಎಂಬ ಆರೋಪವಿದೆ.

  • ಕಾರು ಡಿಕ್ಕಿ ಹೊಡೆದು ಬೈಕ್‌ ಸವಾರ ಸಾವು – ಪುಣೆ ಶಾಸಕನ ಸೋದರಳಿಯ ಅರೆಸ್ಟ್‌

    ಕಾರು ಡಿಕ್ಕಿ ಹೊಡೆದು ಬೈಕ್‌ ಸವಾರ ಸಾವು – ಪುಣೆ ಶಾಸಕನ ಸೋದರಳಿಯ ಅರೆಸ್ಟ್‌

    ಮುಂಬೈ: ಪುಣೆ-ನಾಸಿಕ್ (Pune) ರಾಷ್ಟ್ರೀಯ ಹೆದ್ದಾರಿಯಲ್ಲಿ ಮಹಾರಾಷ್ಟ್ರ (Maharashtra) ಶಾಸಕರೊಬ್ಬರ ಸೋದರಳಿಯನ ಕಾರು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ 19 ವರ್ಷದ ಯುವಕ ಸಾವನ್ನಪ್ಪಿದ್ದಾನೆ.

    ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮಯೂರ್ ಮೋಹಿತೆಯನ್ನು ಬಂಧಿಸಿದ್ದಾರೆ. ಮಯೂರ್‌ ಮೋಹಿತೆ, ಪುಣೆ ಜಿಲ್ಲೆಯ ಖೇಡ್ ಅಲಂದಿ ವಿಧಾನಸಭಾ ಕ್ಷೇತ್ರದ ಶಾಸಕ ದಿಲೀಪ್ ಮೋಹಿತೆ ಪಾಟೀಲ್ ಅವರ ಸೋದರಳಿಯ. ದಿಲೀಪ್ ಮೋಹಿತೆ ಪಾಟೀಲ್ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಜಿತ್ ಪವಾರ್ ಬಣಕ್ಕೆ ಸೇರಿದವರಾಗಿದ್ದಾರೆ. ಇದನ್ನೂ ಓದಿ: ಮಹಿಳಾ ಸಹೋದ್ಯೋಗಿಯೊಂದಿಗೆ ಸರಸ – ಹೋಟೆಲ್‌ನಲ್ಲಿ ಸಿಕ್ಕಿಬಿದ್ದ DSPಗೆ ಕಾನ್‌ಸ್ಟೆಬಲ್ ಆಗಿ ಹಿಂಬಡ್ತಿ!

    ಅಪಘಾತದಲ್ಲಿ ಮೃತಪಟ್ಟವರು ಓಂ ಭಲೇರಾವ್ ಎಂದು ಗುರುತಿಸಲಾಗಿದೆ. ಮಯೂರ್ ಮೋಹಿತೆ ಚಲಾಯಿಸುತ್ತಿದ್ದ ಟೊಯೊಟಾ ಫಾರ್ಚುನರ್ ಎಸ್‌ಯುವಿ ರಾಂಗ್ ಸೈಡ್‌ನಿಂದ ಬರುತ್ತಿತ್ತು. ನಂತರ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ನನ್ನ ಸೋದರಳಿಯ ಸ್ಥಳದಿಂದ ಓಡಿಹೋಗಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಅವರು ನಶೆಯಲ್ಲಿಲ್ಲ ಎಂದು ಶಾಸಕ ದಿಲೀಪ್‌ ಮೋಹಿತೆ ಪಾಟೀಲ್‌ ಹೇಳಿದ್ದಾರೆ. ಇದನ್ನೂ ಓದಿ: ನೀಟ್‌, ನೆಟ್‌ ಪರೀಕ್ಷೆಯಲ್ಲಿ ಅಕ್ರಮ – ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಮುಖ್ಯಸ್ಥ ವಜಾ

    ಪುಣೆಯಲ್ಲಿ ರ‍್ಯಾಶ್‌ ಡ್ರೈವಿಂಗ್‌ನಿಂದ ಸಂಭವಿಸಿದ ಮತ್ತೊಂದು ಅಪಘಾತ ಇದಾಗಿದ್ದು, ದೇಶದ ಗಮನ ಸೆಳೆದಿದೆ. ಕಳೆದ ತಿಂಗಳು, ಪ್ರಮುಖ ಉದ್ಯಮಿಯ 17 ವರ್ಷದ ಮಗ ಚಾಲನೆ ಮಾಡುತ್ತಿದ್ದ ಪೋರ್ಶೆ ಕಾರು, ಬೈಕ್‌ಗೆ ಡಿಕ್ಕಿ ಹೊಡೆದು 24 ವರ್ಷದ ಇಬ್ಬರು ಸಾಫ್ಟ್‌ವೇರ್ ಇಂಜಿನಿಯರ್‌ಗಳು ಸಾವನ್ನಪ್ಪಿದ್ದರು.

    ಕುಡಿದು ವಾಹನ ಚಲಾಯಿಸುತ್ತಿದ್ದ ಹದಿಹರೆಯದ ಆರೋಪಿ, ಅಪಘಾತವಾದ 15 ಗಂಟೆಗಳ ಒಳಗೆ ಜಾಮೀನಿನ ಮೇಲೆ ಹೊರಬಂದಿದ್ದ. ಇದು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಯಿತು. ಪರಿಣಾಮವಾಗಿ ಬಾಲ ನ್ಯಾಯ ಮಂಡಳಿಯು ತನ್ನ ಆದೇಶವನ್ನು ಹಿಂಪಡೆಯಿತು.

  • ಪೋರ್ಶೆ ಕಾರು ಅಪಘಾತ ಕೇಸ್ – ಆರೋಪಿ ಅಪ್ರಾಪ್ತನ ತಾಯಿ ಬಂಧನ

    ಪೋರ್ಶೆ ಕಾರು ಅಪಘಾತ ಕೇಸ್ – ಆರೋಪಿ ಅಪ್ರಾಪ್ತನ ತಾಯಿ ಬಂಧನ

    ಮುಂಬೈ: ಪೋರ್ಶೆ ಕಾರು ಡಿಕ್ಕಿ (Porsche Crash Case) ಹೊಡೆದು ಇಬ್ಬರು ಟೆಕ್ಕಿಗಳು ಮೃತಪಟ್ಟ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಕಾರು ಚಲಾಯಿಸಿದ್ದ ಆರೋಪಿ ಅಪ್ರಾಪ್ತನ ತಾಯಿಯನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.

    ಅಪಘಾತ ಸಂಭವಿಸಿದಾಗ ತನ್ನ ಮಗ ಕುಡಿದಿರಲಿಲ್ಲ ಎಂದು ಸಾಬೀತುಪಡಿಸಲು ತಾಯಿ ತನ್ನ ರಕ್ತದ ಮಾದರಿಯನ್ನು ಬದಲಾಯಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪೋರ್ಶೆ ಕಾರು ಅಪಘಾತ ಕೇಸ್‌; ಅಪ್ರಾಪ್ತನ ರಕ್ತದ ಮಾದರಿ ವರದಿ ಬದಲಾಯಿಸಲು ವೈದ್ಯರಿಗೆ 3 ಲಕ್ಷ ಲಂಚ

    ಅಪ್ರಾಪ್ತನ ರಕ್ತದ ಮಾದರಿ ಬದಲಿಗೆ ಆತನ ತಾಯಿಯ ರಕ್ತದ ಮಾದರಿಯನ್ನು ಪರೀಕ್ಷೆ ವೇಳೆ ಬದಲಾಯಿಸಲಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಹೇಳಿದ್ದಾರೆ.

    ಮೇ 19 ರಂದು ಪುಣೆಯ ಕಲ್ಯಾಣಿ ನಗರದಲ್ಲಿ ಅಪ್ರಾಪ್ತ ಪಾನಮತ್ತರಾಗಿ ಪೋರ್ಶೆ ಕಾರು ಚಲಾಯಿಸಿದ ಕಾರಣ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿ ಇಬ್ಬರು ಟೆಕ್ಕಿಗಳು ಸಾವನ್ನಪ್ಪಿದ್ದರು. ಅಪ್ರಾಪ್ತನ ಕುಟುಂಬದ ಚಾಲಕನನ್ನು ಅಪಹರಿಸಿ ತಾನೇ ತಪ್ಪು ಒಪ್ಪಿಕೊಳ್ಳುವಂತೆ ಆಮಿಷ ಒಡ್ಡಲಾಗಿತ್ತು. ಈ ಆರೋಪದಲ್ಲಿ ಈಗಾಗಲೇ ಬಾಲಕನ ತಂದೆ ಮತ್ತು ತಾತನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಪೋರ್ಶೆ ಕಾರು ಅಪಘಾತ ಪ್ರಕರಣ- ಇಬ್ಬರು ವೈದ್ಯರ ಬಂಧನ

    ಅಪರಾಧವನ್ನು ಮುಚ್ಚಿಡಲು ಪ್ರಭಾವಿ ಕುಟುಂಬ ನಡೆಸಿದ ಪ್ರಯತ್ನಗಳು ತನಿಖೆಯಿಂದ ತಿಳಿದುಬಂದಿದೆ. ಸರ್ಕಾರಿ ಸ್ವಾಮ್ಯದ ಸಸೂನ್ ಆಸ್ಪತ್ರೆಯಲ್ಲಿ ಅಪ್ರಾಪ್ತನ ವೈದ್ಯಕೀಯ ಪರೀಕ್ಷೆಯಲ್ಲೂ ಅಕ್ರಮಗಳು ನಡೆದಿವೆ.

  • ಪೋರ್ಶೆ ಕಾರು ಅಪಘಾತ ಕೇಸ್‌; ಅಪ್ರಾಪ್ತನ ರಕ್ತದ ಮಾದರಿ ವರದಿ ಬದಲಾಯಿಸಲು ವೈದ್ಯರಿಗೆ 3 ಲಕ್ಷ ಲಂಚ

    ಪೋರ್ಶೆ ಕಾರು ಅಪಘಾತ ಕೇಸ್‌; ಅಪ್ರಾಪ್ತನ ರಕ್ತದ ಮಾದರಿ ವರದಿ ಬದಲಾಯಿಸಲು ವೈದ್ಯರಿಗೆ 3 ಲಕ್ಷ ಲಂಚ

    ಮುಂಬೈ: ಪುಣೆಯಲ್ಲಿ (Pune) ಅಪ್ರಾಪ್ತ ಚಲಾಯಿಸುತ್ತಿದ್ದ ಪೋರ್ಶೆ ಕಾರು ಡಿಕ್ಕಿ ಹೊಡೆದು ಇಬ್ಬರು ಟೆಕ್ಕಿಗಳು ಸಾವನ್ನಪ್ಪಿದ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್‌ ಸಿಕ್ಕಿದೆ. ಕಾರು ಅಪಘಾತ ಮಾಡಿದ ಅಪ್ರಾಪ್ತನ ರಕ್ತದ ಮಾದರಿ ವರದಿ ಬದಲಾಯಿಸಲು ಆತನ ಕುಟುಂಬಸ್ಥರು 3 ಲಕ್ಷ ರೂ. ಲಂಚ ಕೊಟ್ಟಿದ್ದ ಪ್ರಕರಣ ಬೆಳಕಿಗೆ ಬಂದಿದೆ.

    ಪುಣೆ ಪೋರ್ಶೆ (Porsche Car) ಅಪಘಾತ ಪ್ರಕರಣದಲ್ಲಿ 17 ವಯಸ್ಸಿನ ಆರೋಪಿಯ ರಕ್ತ ಪರೀಕ್ಷೆಯ ವರದಿಯನ್ನು ದುರ್ಬಳಕೆ ಮಾಡಿಕೊಂಡ ಆರೋಪದಲ್ಲಿ ಇಬ್ಬರು ವೈದ್ಯರೊಂದಿಗೆ ನಿನ್ನ ಪ್ಯೂನ್‌ ಬಂದಿತನಾಗಿದ್ದ. ಈತ ವೈದ್ಯರಿಗೆ 3 ಲಕ್ಷ ರೂ. ಲಂಚ ನೀಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪೋರ್ಶೆ ಕಾರು ಅಪಘಾತ ಪ್ರಕರಣ- ಇಬ್ಬರು ವೈದ್ಯರ ಬಂಧನ

    ಅತುಲ್ ಘಟಕಾಂಬಳೆ ಎಂಬ ಪ್ಯೂನ್ ಮಧ್ಯವರ್ತಿಯಾಗಿ, ಅಪ್ರಾಪ್ತನ ಕುಟುಂಬದಿಂದ ಇಬ್ಬರು ವೈದ್ಯರಿಗೆ 3 ಲಕ್ಷ ರೂ. ಲಂಚವನ್ನು ಸಂಗ್ರಹಿಸಿದ್ದ. ಸಸೂನ್ ಆಸ್ಪತ್ರೆಯ ಡಾ. ಅಜಯ್ ತವಾಡೆ ಮತ್ತು ಡಾ. ಹರಿ ಹಾರ್ನರ್ ಅವರನ್ನು ಪುಣೆ ಕ್ರೈಂ ಬ್ರಾಂಚ್ ನಿನ್ನೆ ಬಂಧಿಸಿದೆ.

    ತನಿಖೆಯಿಂದ ಡಾ. ತವಡೆ ಮತ್ತು ಹದಿಹರೆಯದ ಆರೋಪಿಯ ತಂದೆ ಅಪಘಾತದ ದಿನ ಫೋನ್‌ನಲ್ಲಿ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ. ಬಾಲಾಪರಾಧಿಯ ತಂದೆ ವೈದ್ಯರಿಗೆ ಕರೆ ಮಾಡಿ ರಕ್ತದ ಮಾದರಿ ವರದಿಗಳನ್ನು ಬದಲಿಸಲು ಆಮಿಷ ಒಡ್ಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪೋರ್ಶೆ ಕಾರು ಅಪಘಾತ ಪ್ರಕರಣ- ಆರೋಪಿ ಅಪ್ರಾಪ್ತನ ಅಜ್ಜ ಅರೆಸ್ಟ್‌

    ಆಸ್ಪತ್ರೆಯಲ್ಲಿ ಸಂಗ್ರಹಿಸಿ ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿರುವ ಮಾದರಿಗಳು ಬಾಲಾಪರಾಧಿಗಳದ್ದಲ್ಲ ಎಂದು ಪುಣೆ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಹೇಳಿದ್ದರು. ಮೇ 19 ರಂದು ಬೆಳಗ್ಗೆ 11 ಗಂಟೆಯ ಸುಮಾರಿಗೆ, ಸ್ಯಾಸೂನ್ ಆಸ್ಪತ್ರೆಯಲ್ಲಿ ತೆಗೆದ ಅಪ್ರಾಪ್ತನ ರಕ್ತದ ಮಾದರಿಯನ್ನು ಡಸ್ಟ್‌ಬಿನ್‌ಗೆ ಎಸೆಯಲಾಯಿತು. ಇನ್ನೊಬ್ಬ ವ್ಯಕ್ತಿಯ ರಕ್ತದ ಮಾದರಿಯನ್ನು ತೆಗೆದುಕೊಂಡು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.

    ಅಪ್ರಾಪ್ತರ ರಕ್ತದ ಮಾದರಿಗಳನ್ನು ಬದಲಾಯಿಸಲಾಗಿದ್ದು, ಭಾನುವಾರ ಬಂದ ವರದಿಯಲ್ಲಿ ಮದ್ಯದ ಯಾವುದೇ ಕುರುಹು ಕಂಡುಬಂದಿಲ್ಲ. ಆದರೆ ಆ ರಾತ್ರಿ ಆತ ಭೇಟಿ ನೀಡಿದ ಬಾರ್ ಒಂದರ ಸಿಸಿಟಿವಿ ದೃಶ್ಯಾವಳಿಯಲ್ಲಿ ಆತ ಸ್ನೇಹಿತರೊಂದಿಗೆ ಮದ್ಯಪಾನ ಮಾಡುತ್ತಿರುವುದು ಕಂಡುಬಂದಿದೆ.

  • ಪೋರ್ಶೆ ಕಾರು ಅಪಘಾತ ಪ್ರಕರಣ- ಇಬ್ಬರು ವೈದ್ಯರ ಬಂಧನ

    ಪೋರ್ಶೆ ಕಾರು ಅಪಘಾತ ಪ್ರಕರಣ- ಇಬ್ಬರು ವೈದ್ಯರ ಬಂಧನ

    ಪುಣೆ: ಪೋರ್ಶೆ ಕಾರು (Porsche Car Aciident) ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಇಬ್ಬರು ವೈದ್ಯರನ್ನು ಪುಣೆ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ.

    ಸಾಸೂನ್ ಆಸ್ಪತ್ರೆಯ ಡಾ. ಶ್ರೀಹರಿ ಹಾರ್ಲರ್ ಮತ್ತು ಡಾ. ಅಜಯ್ ತಾವ್ರೆ ಬಂಧಿತರು. ಡಾ. ಅಜಯ್ ತಾವ್ರೆ, ಸಸೂನ್ ಆಸ್ಪತ್ರೆಯಲ್ಲಿ ಫೋರೆನ್ಸಿಕ್ ಮೆಡಿಸಿನ್ ಮತ್ತು ಟಾಕ್ಸಿಕಾಲಜಿ ಮುಖ್ಯಸ್ಥನಾದರೆ, ಡಾ. ಶ್ರೀಹರಿ ಹರ್ಲೋಲ್ ಅವರು ತುರ್ತು ವಿಭಾಗದಲ್ಲಿ ಮುಖ್ಯ ವೈದ್ಯಕೀಯ ಅಧಿಕಾರಿ.

    ಪುಣೆಯ ಸಸೂನ್ ಆಸ್ಪತ್ರೆಯ ವೈದ್ಯರು ಅಪ್ರಾಪ್ತರ ರಕ್ತದ ಮಾದರಿ ವರದಿ ತಿರುಚಿರುವ ಆರೋಪ ಕೇಳಿ ಬಂದಿತ್ತು. ಅಪಘಾತಕ್ಕೆ ಕಾರಣನಾದ ಅಪ್ರಾಪ್ತನನ್ನು ವೈದ್ಯಕೀಯ ಪರೀಕ್ಷೆಗಾಗಿ ಪುಣೆಯ ಸಸೂನ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವೇಳೆ ಆತನ ಕುಟುಂಬಸ್ಥರು ವೈದ್ಯರಿಗೆ ಹಣದ ಆಮಿಷವೊಡ್ಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಇಬ್ಬರ ಸುದೀರ್ಘ ವಿಚಾರಣೆಯ ನಂತರ ಬಂಧಿಸಲಾಯಿತು ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

    ಮೇ 19 ರಂದು ಮುಂಜಾನೆ 3:30 ರ ಸುಮಾರಿಗೆ ಕುಡಿದ ಅಮಲಿನಲ್ಲಿ ಅಪ್ರಾಪ್ತ ಆರೋಪಿಯು ತನ್ನ ಐಷಾರಾಮಿ ಪೋರ್ಶೆ ಕಾರಿನಿಂದ ಇಬ್ಬರ ಹತ್ಯೆಗೆ ಕಾರಣವಾದನು. ಆರಂಭದಲ್ಲಿ ಆರೋಪಿ ಮದ್ಯ ಸೇವಿಸಿಲ್ಲ ಎಂದು ತಿಳಿದು ಬಂದಿದ್ದು, ಸಿಸಿಟಿವಿ ದೃಶ್ಯಾವಳಿಯಲ್ಲಿ ಆತ ತನ್ನ ಸ್ನೇಹಿತರೊಂದಿಗೆ ಬಾರ್‌ನಲ್ಲಿ ಮದ್ಯ ಸೇವಿಸುತ್ತಿರುವುದು ಕಂಡುಬಂದಿದೆ. ಇದನ್ನೂ ಓದಿ: ಪೋರ್ಶೆ ಕಾರು ಅಪಘಾತ ಪ್ರಕರಣ- ಆರೋಪಿ ಅಪ್ರಾಪ್ತನ ಅಜ್ಜ ಅರೆಸ್ಟ್‌

    ಈ ಪ್ರಕರಣದಲ್ಲಿ ಆರೋಪಿಯ ಅಜ್ಜ ಮತ್ತು ತಂದೆ ಮತ್ತು ಇಬ್ಬರು ವೈದ್ಯರು ಸೇರಿದಂತೆ ಒಟ್ಟು 9 ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ. ಇವರಲ್ಲಿ ಪಬ್ ಮಾಲೀಕರು, ಇಬ್ಬರು ವ್ಯವಸ್ಥಾಪಕರು ಮತ್ತು ಇಬ್ಬರು ಸಿಬ್ಬಂದಿ ಸೇರಿದ್ದಾರೆ. ಅವರನ್ನು ಕೋಜಿ ರೆಸ್ಟೋರೆಂಟ್‌ನ ಮಾಲೀಕ ಪ್ರಹ್ಲಾದ್, ಅವರ ಮ್ಯಾನೇಜರ್ ಸಚಿನ್ ಕಾಟ್ಕರ್, ಬ್ಲಾಕ್ ಕ್ಲಬ್ ಹೋಟೆಲ್ ಮ್ಯಾನೇಜರ್ ಸಂದೀಪ್ ಸಾಂಗ್ಲೆ ಮತ್ತು ಅವರ ಸಿಬ್ಬಂದಿ ಜಯೇಶ್ ಬೋಂಕರ್ ಮತ್ತು ನಿತೇಶ್ ಶೇವಾನಿ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಅಪ್ರಾಪ್ತ ಆರೋಪಿಗಳಿಗೆ ಮದ್ಯ ಬಡಿಸಿದ ಆರೋಪ ಹೊತ್ತಿದ್ದಾರೆ.

  • ಪೋರ್ಶೆ ಕಾರು ಅಪಘಾತ ಪ್ರಕರಣ- ಆರೋಪಿ ಅಪ್ರಾಪ್ತನ ಅಜ್ಜ ಅರೆಸ್ಟ್‌

    ಪೋರ್ಶೆ ಕಾರು ಅಪಘಾತ ಪ್ರಕರಣ- ಆರೋಪಿ ಅಪ್ರಾಪ್ತನ ಅಜ್ಜ ಅರೆಸ್ಟ್‌

    ಪುಣೆ: ಪೋರ್ಶೆ ಕಾರು ಅಪಘಾತ (Pune Porsche crash) ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿ ಅಪ್ರಾಪ್ತನ ಅಜ್ಜನನ್ನು ಪುಣೆ ಪೊಲೀಸರು (Pune Police) ಇಂದು ಬಂಧಿಸಿದ್ದಾರೆ.

    ಸುರೇಂದ್ರ ಅಗರ್ವಾಲ್ ಬಂಧಿತ ಅಜ್ಜ. ಕಾರು ಅಪಘಾತ ಸಂದರ್ಭದಲ್ಲಿ ತಾನೇ ಪೋರ್ಶೆಯನ್ನು ಚಲಾಯಿಸಿದ್ದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಬೇಕು ಎಂದು ಚಾಲಕನಿಗೆ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಸುರೇಂದ್ರರನ್ನು ಬಂಧನ ಮಾಡಲಾಗಿದೆ.

    ಪುಣೆ ಕ್ರೈಂ ಬ್ರಾಂಚ್ ದಾಖಲಿಸಿದ ಹೊಸ ಪ್ರಕರಣದಲ್ಲಿ ಸುರೇಂದ್ರ ಅಗರ್ವಾಲ್ ಅವರನ್ನು ಅವರ ನಿವಾಸದಿಂದ ಮುಂಜಾನೆ 3 ಗಂಟೆಗೆ ಬಂಧಿಸಲಾಯಿತು. ಈ ಮೂಲಕ ಪುಣೆ ಪೋರ್ಶೆ ಅಪಘಾತ ಪ್ರಕರಣದಲ್ಲಿ ಇದು ಮೂರನೇ ಎಫ್‌ಐಆರ್ ಆಗಿದೆ.

    ಇದಕ್ಕೂ ಮೊದಲು ಸುರೇಂದ್ರ ಅಗರ್ವಾಲ್ ಅವರ ಮಗ ಮತ್ತು ಮೊಮ್ಮಗನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮತ್ತು ಅಪಘಾತದ ದಿನದಂದು ನಡೆಸಿದ ಸಂಭಾಷಣೆಯನ್ನು ಬಯಲಿಗೆಳೆಯಲು ಪ್ರಶ್ನಿಸಿದ್ದರು. ಅಗರ್ವಾಲ್ ಮಾಲೀಕರಾಗಿದ್ದ ರಿಯಾಲ್ಟಿ ಸಂಸ್ಥೆಯ ಹೆಸರಿನಲ್ಲಿ ಪೋರ್ಶೆ ನೋಂದಣಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇನ್ನು ಗ್ಯಾಂಗ್‌ಸ್ಟರ್ ಛೋಟಾ ರಾಜನ್‌ಗೆ ಹಣ ಪಾವತಿಸಿದ ಆರೋಪದ ಮೇಲೆ ಶೂಟೌಟ್ ಪ್ರಕರಣದಲ್ಲಿ ಸುರೇಂದ್ರ ಅಗರ್ವಾಲ್ ವಿಚಾರಣೆ ಎದುರಿಸುತ್ತಿದ್ದಾರೆ ಎಂದು ಸಿಬಿಐ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪೋರ್ಶೆ ಕಾರು ಅಪಘಾತ- ಇಬ್ಬರು ಪೊಲೀಸ್‌ ಅಧಿಕಾರಿಗಳ ಅಮಾನತು

    ಏನಿದು ಪ್ರಕರಣ: ಮೇ 19 ರಂದು ಪುಣೆಯಲ್ಲಿ 17 ವರ್ಷದ ಅಪ್ರಾಪ್ತ ಚಾಲನೆ ಮಾಡುತ್ತಿದ್ದ ಪೋರ್ಷೆ ಕಾರು ಬೈಕ್‍ಗೆ ಡಿಕ್ಕಿಯಾಗಿ ಮಧ್ಯಪ್ರದೇಶ ಮೂಲದ ವರ್ಷದ ಐಟಿ ವೃತ್ತಿಪರರಾದ ಅನೀಶ್ ಅವಧಿಯಾ (24) ಮತ್ತು ಅಶ್ವಿನಿ ಕೋಷ್ಟಾ ಅವರು ಸಾವನ್ನಪ್ಪಿದ್ದರು. ಬಳಿಕ ಪೊಲೀಸರು ಅಪ್ರಾಪ್ತನ ಬಳಿ ಪ್ರಬಂಧ ಬರೆಯುವಂತೆ ಸೂಚಿಸಿ ಜಾಮೀನು ನೀಡಿ ಬಿಡುಗಡೆ ಮಾಡಿದ್ದರು. ಪೋಲೀಸರ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತವಾದ ಬಳಿಕ ಪೊಲೀಸರು ಅಪ್ರಾಪ್ತ ಆರೋಪಿಯನ್ನು ಬಂಧಿಸಿದ್ದರು.

    ಸದ್ಯ ಪುಣೆ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ಅವರು, ಬಾಲಾಪರಾಧಿಯನ್ನು ವಯಸ್ಕನಂತೆ ವಿಚಾರಣೆಗೆ ಒಳಪಡಿಸಲು ಮತ್ತು ರಿಮಾಂಡ್ ಹೋಮ್ಗೆ ಕಳುಹಿಸಲು ಬಾಲನ್ಯಾಯ ಮಂಡಳಿಯ ಮುಂದೆ ಪರಿಶೀಲನಾ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ಹೇಳಿದರು.

  • ಮದುವೆ ಪಲ್ಲಕ್ಕಿಯಲ್ಲಿ ಹೋಗಬೇಕಿದ್ದವಳು ಶವದ ಪೆಟ್ಟಿಗೆಯಲ್ಲಿ ಹೋದಳು: ಅಪಘಾತಕ್ಕೆ ಬಲಿಯಾದ ಯುವತಿ ತಾಯಿ ಕಣ್ಣೀರು

    ಮದುವೆ ಪಲ್ಲಕ್ಕಿಯಲ್ಲಿ ಹೋಗಬೇಕಿದ್ದವಳು ಶವದ ಪೆಟ್ಟಿಗೆಯಲ್ಲಿ ಹೋದಳು: ಅಪಘಾತಕ್ಕೆ ಬಲಿಯಾದ ಯುವತಿ ತಾಯಿ ಕಣ್ಣೀರು

    ಮುಂಬೈ: ಪುಣೆಯಲ್ಲಿ ಪೋರ್ಶೆ ಕಾರು ಡಿಕ್ಕಿ (Pune Porsche Crash) ಹೊಡೆದು ಮೃತಪಟ್ಟ ಮಗಳನ್ನು ನೆನೆದು ತಾಯಿ ಕಣ್ಣೀರಿಟ್ಟಿದ್ದಾರೆ. ಅವಳನ್ನು ವರನ ಮನೆಗೆ ಡೋಲಿಯಲ್ಲಿ (ಪಲ್ಲಕ್ಕಿ) ಕರೆದೊಯ್ಯಬೇಕಿತ್ತು. ಆದರೆ ಶವಪೆಟ್ಟಿಗೆಯಲ್ಲಿ ಹೆಣ ಸಾಗಿಸುವಂತಾಯಿತು ಎಂದು ನೊಂದು ನುಡಿದಿದ್ದಾರೆ.

    ಅನೀಶ್ ಅವಧಿಯಾ ಮತ್ತು ಅಶ್ವಿನಿ ಕೋಸ್ತಾ (Ashwini Kostha) ಇಬ್ಬರೂ 24 ವಯಸ್ಸಿನ ಇಂಜಿನಿಯರ್‌ಗಳು. ಅಪಘಾತದ ದಿನ ರಾತ್ರಿ ಇಬ್ಬರೂ ಸ್ನೇಹಿತರನ್ನು ಭೇಟಿಯಾಗಿ ಹಿಂದಿರುಗುತ್ತಿದ್ದರು. ಈ ವೇಳೆ, ಕುಡಿದ ಅಮಲಿನಲ್ಲಿದ್ದ ಅಪ್ರಾಪ್ತ ತನ್ನ ಐಷಾರಾಮಿ ಪೋರ್ಶೆ ಕಾರಿನಲ್ಲಿ ವೇಗವಾಗಿ ಬಂದು ಬೈಕ್‌ಗೆ ಡಿಕ್ಕಿ ಹೊಡೆದ. ಡಿಕ್ಕಿ ರಭಸಕ್ಕೆ ಬೈಕ್‌ನ ಹಿಂಬದಿ ಕುಳಿತಿದ್ದ ಅಶ್ವಿನಿ 20 ಅಡಿ ಎತ್ತರಕ್ಕೆ ಹಾರಿ ನೆಲಕ್ಕೆ ಅಪ್ಪಳಿಸಿ ಬಿದ್ದಳು. ಬೈಕ್‌ ಓಡಿಸುತ್ತಿದ್ದ ಅನೀಶ್‌ ಹಾರಿ ಅಲ್ಲೇ ನಿಂತಿದ್ದ ಕಾರಿನ ಮೇಲೆ ಬಿದ್ದ. ಇಬ್ಬರೂ ಸ್ಥಳದಲ್ಲೇ ಕೊನೆಯುಸಿರೆಳೆದರು ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ. ಇದನ್ನೂ ಓದಿ: ಪುಣೆ ಪೋರ್ಶೆ ಕಾರು ಅಪಘಾತಕ್ಕೆ ಟೆಕ್ಕಿಗಳು ಬಲಿ ಪ್ರಕರಣ – ಅಪ್ರಾಪ್ತನ ಜಾಮೀನು ರದ್ದು

    ಜಬಲ್‌ಪುರದ ನಿವಾಸದಲ್ಲಿರುವ ಅಶ್ವಿನಿ ತಾಯಿ, ಮಗಳ ಸಾವಿನ ಶಾಕ್‌ನಿಂದ ಇನ್ನೂ ಹೊರಬಂದಿಲ್ಲ. ‘ನನ್ನ ಮಗಳನ್ನು ವರನ ಮನೆಗೆ ಡೋಲಿಯಲ್ಲಿ (ಪಲ್ಲಕ್ಕಿ) ಕರೆದೊಯ್ಯಬೇಕಿತ್ತು. ಆದರೆ ಶವಪೆಟ್ಟಿಗೆಯಲ್ಲಿ ಹೆಣ ಸಾಗಿಸುವಂತಾಗಿದೆ’ ಎಂದು ಕಣ್ಣೀರು ಹಾಕಿದ್ದಾರೆ.

    ನನ್ನ ಮಗಳು ಅಶ್ವಿನಿಗೆ ನ್ಯಾಯ ಸಿಗಬೇಕು. ಅಪ್ರಾಪ್ತ ಬಾಲಕ ಮತ್ತು ಅವನ ಹೆತ್ತವರಿಗೆ ಕಠಿಣ ಶಿಕ್ಷೆಯಾಗಬೇಕು. ಅವರು ಅವನನ್ನು ಸರಿಯಾಗಿ ಬೆಳೆಸಲಿಲ್ಲ. ಅವರು ಅವನಿಗೆ ಕಾರನ್ನು ನೀಡಬಾರದಿತ್ತು ಎಂದು ಅಶ್ವನಿ ತಾಯಿ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಪೋರ್ಶೆ ಕಾರಿಗೆ ಟೆಕ್ಕಿಗಳು ಬಲಿ ಪ್ರಕರಣ – ಅಪ್ರಾಪ್ತನ ತಂದೆಗೆ 2 ದಿನ ಪೊಲೀಸ್ ಕಸ್ಟಡಿ

    ಪೋರ್ಶೆ ಕಾರನ್ನು ಗಂಟೆಗೆ 200 ಕಿ.ಮೀ ವೇಗದಲ್ಲಿ ಚಲಾಯಿಸಿರುವ ಅಪ್ರಾಪ್ತ ಹೆಚ್ಚು ಕುಡಿದಿದ್ದ ಎಂದು ಪೊಲೀಸರು ಹೇಳಿದ್ದಾರೆ. ಬಾಲಾಪರಾಧ ನ್ಯಾಯ ಮಂಡಳಿ ಮೊದಲು ಆರೋಪಿ ಅಪ್ರಾಪ್ತನಿಗೆ ಜಾಮೀನು ನೀಡಿತ್ತು. ಈಗ ಜಾಮೀನು ರದ್ದುಗೊಳಿಸಿದೆ.

    ಆದೇಶ ಕುರಿತು ಅಸಮಾಧಾನ ಹೊರಹಾಕಿರುವ ಅಶ್ವಿನಿ ತಾಯಿ, ಇದು ತಮಾಷೆಯೇ? ಆತ ಯಾವ ಪ್ರಬಂಧವನ್ನು ಬರೆಯುತ್ತಾರೆ? ಅವರು ಜೋಕ್‌ ಮಾಡುತ್ತಿದ್ದಾರೆಯೇ? ನನ್ನ ಮಗಳು ಅತ್ಯಂತ ಪ್ರತಿಭಾವಂತ ಹುಡುಗಿ. ಬದುಕಿನಲ್ಲಿ ತುಂಬಾ ಕನಸುಗಳನ್ನು ಕಟ್ಟಿಕೊಂಡಿದ್ದಳು ಎಂದು ಮಗಳನ್ನು ನೆನೆದು ಭಾವುಕರಾದರು. ಇದನ್ನೂ ಓದಿ: ರಾಗಾ ಒಬ್ಬ ಮಹಾನ್‌ ವ್ಯಕ್ತಿ, ಗಾಂಧೀಜಿ ಕನಸು ನನಸು ಮಾಡ್ತಿದ್ದಾರೆ: ಆಚಾರ್ಯ ಪ್ರಮೋದ್ ಕೃಷ್ಣಂ ಕಿಡಿ

    ಪುತ್ರ ಅನೀಶ್‌ ಅವಧಿಯಾ ತಾಯಿ ಪ್ರತಿಕ್ರಿಯಿಸಿ, ಅವನು ನನ್ನ ಮಗನನ್ನು ಕೊಂದ. ಈಗ ನಾನು ನನ್ನ ಮಗನನ್ನು ನೋಡಲು ಸಾಧ್ಯವಿಲ್ಲ. ಇದು ಆ ಹುಡುಗನ ತಪ್ಪು. ನೀವು ಅದನ್ನು ಕೊಲೆ ಎಂದು ಪರಿಗಣಿಸಬೇಕು. ಇಷ್ಟು ದೊಡ್ಡ ತಪ್ಪು ಮಾಡದೇ ಇದ್ದಿದ್ದರೆ ಯಾರೂ ಸಾಯುತ್ತಿರಲಿಲ್ಲ. ಅವರ ಕುಟುಂಬದವರು ಗಮನ ಹರಿಸಿದ್ದರೆ ಇಂದು ನನ್ನ ಮಗ ಬದುಕಿರುತ್ತಿದ್ದ ಎಂದು ನೊಂದು ನುಡಿದಿದ್ದಾರೆ.

  • ಪುಣೆ ಪೋರ್ಶೆ ಕಾರು ಅಪಘಾತಕ್ಕೆ ಟೆಕ್ಕಿಗಳು ಬಲಿ ಪ್ರಕರಣ – ಅಪ್ರಾಪ್ತನ ಜಾಮೀನು ರದ್ದು

    ಪುಣೆ ಪೋರ್ಶೆ ಕಾರು ಅಪಘಾತಕ್ಕೆ ಟೆಕ್ಕಿಗಳು ಬಲಿ ಪ್ರಕರಣ – ಅಪ್ರಾಪ್ತನ ಜಾಮೀನು ರದ್ದು

    ಮುಂಬೈ: ಪುಣೆಯಲ್ಲಿ (Pune Porsche Accident) ಕಾರು ಡಿಕ್ಕಿ ಹೊಡೆದು ಇಬ್ಬರು ಟೆಕ್ಕಿಗಳ ಸಾವು ಪ್ರಕರಣದಲ್ಲಿ ಅಪ್ರಾಪ್ತನ ಜಾಮೀನನ್ನು ಬಾಲನ್ಯಾಯ ಮಂಡಳಿ ರದ್ದುಗೊಳಿಸಿದೆ.

    ಟೆಕ್ಕಿಗಳ ಸಾವಿಗೆ ಕಾರಣನಾದ ಬಾಲಕನಿಗೆ ಜಾಮೀನು ನೀಡಲಾಗಿತ್ತು. ಅಲ್ಲದೇ ರಸ್ತೆ ಅಪಘಾತದ ಬಗ್ಗೆ ಪ್ರಬಂಧವನ್ನು ಬರೆಯುವಂತೆ ಹೇಳಿತ್ತು. ಇದಕ್ಕೆ ರಾಷ್ಟ್ರವ್ಯಾಪಿ ಆಕ್ರೋಶ ವ್ಯಕ್ತವಾಗಿತ್ತು. ಅದಾದ ಮೂರು ದಿನದಲ್ಲಿ ಮಂಡಳಿ ಜಾಮೀನು ರದ್ದುಗೊಳಿಸಿದೆ. ಇದನ್ನೂ ಓದಿ: ಪೋರ್ಶೆ ಕಾರಿಗೆ ಟೆಕ್ಕಿಗಳು ಬಲಿ ಪ್ರಕರಣ – ಅಪ್ರಾಪ್ತನ ತಂದೆಗೆ 2 ದಿನ ಪೊಲೀಸ್ ಕಸ್ಟಡಿ

    ಮಂಡಳಿಯು ಬಾಲಾಪರಾಧಿಯನ್ನು ಜೂನ್ 5 ರವರೆಗೆ ರಿಮ್ಯಾಂಡ್ ಹೋಮ್‌ಗೆ ಕಳುಹಿಸಿದೆ. ಆದರೆ, ಆತನನ್ನು ವಯಸ್ಕನಾಗಿ ವಿಚಾರಣೆಗೆ ಒಳಪಡಿಸಬೇಕೆ ಎಂಬ ಬಗ್ಗೆ ಅದು ನಿರ್ಧಾರವನ್ನು ನೀಡಲಿಲ್ಲ.

    ಭಾನುವಾರ ಮುಂಜಾನೆ ಅಪಘಾತದ ನಂತರ, ಪುಣೆಯ ಪ್ರಮುಖ ಬಿಲ್ಡರ್‌ನ ಅಪ್ರಾಪ್ತ ಪುತ್ರನಿಗೆ 15 ಗಂಟೆಗಳ ಒಳಗೆ ಜಾಮೀನು ನೀಡಲಾಗಿತ್ತು. ವೈಯಕ್ತಿಕ ಬಾಂಡ್, ಶ್ಯೂರಿಟಿ ನೀಡುವುದು ಸೇರಿದಂತೆ ರಸ್ತೆ ಸುರಕ್ಷತೆಯ ಕುರಿತು 300 ಪದಗಳ ಪ್ರಬಂಧ ಬರೆಯುವಂತೆ ಹೇಳಲಾಗಿತ್ತು. ಇದನ್ನೂ ಓದಿ: ಪುತ್ರನಿಗೆ 2.5 ಕೋಟಿ ಮೌಲ್ಯದ ಕಾರು ಗಿಫ್ಟ್‌; 1,758 ರೂ. ಕೊಟ್ಟು ನೋಂದಣಿಯನ್ನೇ ಮಾಡಿಸಿಲ್ಲ ಪುಣೆಯ ಬಿಲ್ಡರ್‌