Tag: ಪುಣೆ

  • ರಾತ್ರಿಯೆಲ್ಲಾ ಯುವಕರಿಬ್ಬರ ಸೆಕ್ಸ್, ಮತ್ತೆ ಬೆಳಗ್ಗೆ ಬಾ.. ಅಂದಿದ್ದಕ್ಕೆ ಚಾಕುವಿನಿಂದ ಇರಿದೇ ಬಿಟ್ಟ

    ರಾತ್ರಿಯೆಲ್ಲಾ ಯುವಕರಿಬ್ಬರ ಸೆಕ್ಸ್, ಮತ್ತೆ ಬೆಳಗ್ಗೆ ಬಾ.. ಅಂದಿದ್ದಕ್ಕೆ ಚಾಕುವಿನಿಂದ ಇರಿದೇ ಬಿಟ್ಟ

    ಪುಣೆ: 23 ವರ್ಷದ ಪುರುಷ ಸಲಿಂಗಕಾಮಿ ಸೆಕ್ಸ್ ಗೆ ಒತ್ತಾಯಿಸಿದಕ್ಕೆ ತನ್ನ ಪಾಟ್ನರ್ ಗೆ ಚಾಕುವಿಂದ ಇರಿದಿರುವ ಘಟನೆ ಪುಣೆಯಲ್ಲಿ ನಡೆದಿದೆ.

    ಈ ಘಟನೆ ಹಲ್ಲೆಗೊಳಗಾದವನ ಮನೆಯಲ್ಲಿ ಬುಧವಾರ ಬೆಳಗ್ಗೆ ನಡೆದಿದ್ದು, ಸದ್ಯಕ್ಕೆ ಆರೋಪಿ ಸಲಿಂಗ ಕಾಮಿಯನ್ನು ಬಂಧಿಸಲಾಗಿದೆ. ಈಗಾಗಲೇ ಬಂಧಿಸಿರುವ ಆರೋಪಿಯ ವಿರುದ್ಧ ಐಪಿಸಿಯ ಸೆಕ್ಷನ್ 307 (ಕೊಲೆಯ ಯತ್ನ)ರ ಅಡಿಯಲ್ಲಿ ದೂರು ದಾಖಲಿಸಲಾಗಿದೆ ಎಂದು ಪುಣೆ ಸಿಟಿ ಪೊಲೀಸರು ಹೇಳಿದ್ದಾರೆ.

    ಇಬ್ಬರು ಪುರುಷರು ಕಳೆದ ಎರಡು ವರ್ಷಗಳಿಂದ ಸಂಬಂಧ ಹೊಂದಿದ್ದರು. ಮಂಗಳವಾರ ರಾತ್ರಿ ಆರೋಪಿ ತನ್ನ ಪಾಟ್ನರ್ ಮನೆಗೆ ಬಂದು ಇಬ್ಬರು ಲೈಂಗಿಕ ಸಂಬಂಧವನ್ನು ಹೊಂದಿದ್ದರು. ದೂರುದಾರ ಬುಧವಾರ ಬೆಳಗ್ಗೆ ಮತ್ತೆ ಸೆಕ್ಸ್ ಮಾಡುವಂತೆ ಕೇಳಿದ್ದಾನೆ. ಆಗ ಆರೋಪಿ ಇದಕ್ಕೆ ನಿರಾಕರಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಜಗಳ ಆರಂಭವಾಗಿದೆ. ಆಗ ಜಗಳ ವಿಕೋಪಕ್ಕೆ ತಿರುಗಿ ಆರೋಪಿ ಕೋಪಗೊಂಡು ಅರಿತವಾದ ಆಯುಧದಿಂದ ತನ್ನ ಪಾಟ್ನರ್ ಗೆ ಚುಚ್ಚಿದ್ದಾನೆ ಎಂದು ಖಡಾಕ್ ಪೊಲೀಸ್ ಠಾಣೆಯ ಪೊಲೀಸರು ತಿಳಿಸಿದ್ದಾರೆ.

    ಸದ್ಯಕ್ಕೆ ಹಲ್ಲೆಗೊಳಗಾದವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಇತ್ತ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆದರೆ ಪೊಲೀಸರು ಇಬ್ಬರು ಪುರುಷರ ಹೆಸರುಗಳನ್ನು ಬಹಿರಂಗಪಡಿಸಲಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಕಾಮುಕರ ಪೈಶಾಚಿಕ ಕೃತ್ಯಕ್ಕೆ ಓರ್ವ ಬಾಲಕಿ ಬಲಿ

    ಕಾಮುಕರ ಪೈಶಾಚಿಕ ಕೃತ್ಯಕ್ಕೆ ಓರ್ವ ಬಾಲಕಿ ಬಲಿ

    ಪುಣೆ: ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಕಾಮುಕರಿಬ್ಬರು ಅತ್ಯಾಚಾರ ಎಸಗಿದ್ದರಿಂದ ಓರ್ವ ಬಾಲಕಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಹಿಂಜ್ವಾಡಿಯಲ್ಲಿ ನಡೆದಿದೆ.

    ಇಬ್ಬರು ಬಾಲಕಿಯರು 12 ವರ್ಷದವರಾಗಿದ್ದು, ಭಾನುವಾರ ಮಧ್ಯಾಹ್ನ ಇಬ್ಬರೂ ಮನೆಯಿಂದ ಸ್ವಲ್ಪ ದೂರದಲ್ಲಿದ್ದ ದೇಗುಲದ ಬಳಿ ಆಟವಾಡಲು ತೆರಳಿದ್ದರು. ಈ ವೇಳೆ ಅದೇ ಪ್ರದೇಶದಲ್ಲಿ ವಾಸಿಸುತ್ತಿದ್ದ ಇಬ್ಬರು ಕಾಮುಕರು ಬಂದು ಬಾಲಕಿಯರಿಗೆ ಚಾಕ್ಲೇಟ್ ಕೊಡಿಸುವುದಾಗಿ ಆಸೆ ತೋರಿಸಿ ಕರೆದುಕೊಂಡು ಹೋಗಿದ್ದಾರೆ. ಬಳಿಕ ಬಾಲಕಿಯರನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕಾಮುಕರು ಅತ್ಯಾಚಾರ ಎಸಗಿದ್ದಾರೆ ಎಂದು ಹಿಂಜ್ವಾಡಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಅತ್ಯಾಚಾರ ಎಸಗಿದ ಬಳಿಕ ಇಬ್ಬರು ಬಾಲಕಿಯರಿಗೆ ಯಾರಿಗೂ ಈ ಬಗ್ಗೆ ಹೇಳಬಾರದು ಎಂದು ಬೆದರಿಕೆ ಒಡ್ಡಿದ್ದಾರೆ. ಅದರಂತೆಯೇ ಬಾಲಕಿಯರು ಈ ಬಗ್ಗೆ ಮನೆಯಲ್ಲಿ ಹೇಳಲಿಲ್ಲ. ಆದರೆ ಅತ್ಯಾಚಾರಕ್ಕೊಳಗಾದ ಇಬ್ಬರು ಬಾಲಕಿಯರಲ್ಲಿ ಓರ್ವ ಬಾಲಕಿ ತೀವ್ರ ನೋವು ಹಾಗೂ ನಿಶಕ್ತಿಯಿಂದ ಬಳಲುತ್ತಿದ್ದು, ಕೂಡಲೇ ಪೋಷಕರು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

    ಆಸ್ಪತ್ರೆಯಲ್ಲಿ ವೈದ್ಯರಿಗೆ ಬಾಲಕಿ ಅಘಾತಕ್ಕೊಳಗಾಗಿರುವುದು ತಿಳಿದು ಬಂದಿದೆ. ನಂತರ ಅವರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಆದರೆ ಬಾಲಕಿ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಈ ವೇಳೆ ಕುಟುಂಬಸ್ಥರು ತಮ್ಮ ಮಗಳೊಂದಿಗೆ ನೆರೆ ಮನೆಯ ಬಾಲಕಿ ಕೂಡ ಹೋಗಿದ್ದಳು ಎಂದು ಹೇಳಿದ್ದಾರೆ. ಪೊಲೀಸರು ಆ ಬಾಲಕಿಯನ್ನು ವಿಚಾರಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.

    ಸಂತ್ರಸ್ತೆಯ ಆರೋಗ್ಯ ಸ್ಥಿತಿ ಗಂಭೀರವಾದ ಬಳಿಕ ಆಕೆಯನ್ನು ಪುಣೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಬಾಲಕಿ ಕೋಮ ಸ್ಥಿತಿಗೆ ತಲುಪಿದ್ದಳು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಮೃತ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪೊಲೀಸರು ಬಾಲಕಿಯ ಹೇಳಿಕೆಯ ಮೇರೆಗೆ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇಬ್ಬರ ಪೈಕಿ ಓಬ್ಬ ಅಪ್ರಾಪ್ತನಾಗಿದ್ದು, ಮತ್ತೊಬ್ಬನನ್ನು ಗಣೇಶ್ ನಿಕಾಮ್ (22) ಎಂದು ಗುರುತಿಸಲಾಗಿದೆ.

    ಸದ್ಯಕ್ಕೆ ವೈದ್ಯಕೀಯ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ. ಈಗಾಗಲೇ ನಾವು ಆರೋಪಿ ಗಣೇಶ್ ನಿಕಮ್ ನನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು. ಮತ್ತೊಬ್ಬ ಆರೋಪಿ ಅಪ್ರಾಪ್ತನಾಗಿರುವ ಕಾರಣ ಆತನನ್ನು ರಿಮ್ಯಾಂಡ್ ಹೋಮ್ ಗೆ ಕಳುಹಿಸಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರ), 363 (ಅಪಹರಣ) ಮತ್ತು ಪೋಕ್ಸೋ ಕಾಯ್ದೆಯಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾರ್ಡ್ ಹಾಕಿದ್ರೆ ಎಟಿಎಂನಲ್ಲಿ ಬರುತ್ತೆ ಮೋದಕ- ವಿಡಿಯೋ ನೋಡಿ!

    ಕಾರ್ಡ್ ಹಾಕಿದ್ರೆ ಎಟಿಎಂನಲ್ಲಿ ಬರುತ್ತೆ ಮೋದಕ- ವಿಡಿಯೋ ನೋಡಿ!

    ಮುಂಬೈ: ಎಟಿಎಂನಿಂದ ಹಣ ಬರುವುದು ಗೊತ್ತೆ ಇದೆ. ಆದರೆ ಮಹಾರಾಷ್ಟ್ರದ ಒಂದು ಕಡೆ ಕಾರ್ಡ್ ಹಾಕಿದರೆ ಮೋದಕ ಬರುತ್ತದೆ.

    ಹೌದು, ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಪುಣೆಯ ಸಹಕಾರ ನಗರದಲ್ಲಿ ಎಟಿಎಂ (ಎನಿ ಟೈಮ್ ಮೋದಕ) ಯತ್ರವನ್ನು ಸಿದ್ಧ ಪಡಿಸಲಾಗಿದೆ. ಎಟಿಎಂನಿಂದ ಮೋದಕ ಹೊರ ಬರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆ ಗಿಟ್ಟಿಸಿಕೊಂಡಿದೆ.

    ಸಹಕಾರ ನಗರದ ನಿವಾಸಿ ಸಂಜೀವ್ ಕುಲಕರ್ಣಿ ಎಂಬವರು ಈ ಎಟಿಎಂ ಯಂತ್ರವನ್ನು ಅಭಿವೃದ್ಧಿಪಡಿಸಿ, ಅದರೊಳಗೆ ಗಣೇಶನನ್ನು ಪ್ರತಿಷ್ಠಾಪಿಸಿದ್ದಾರೆ. ಭಕ್ತರು ಗಣೇಶನ ಆಶೀರ್ವಾದ ಪಡೆದು, ಬಳಿಕ ವಿಶೇಷ ಕಾರ್ಡ್ ಹಾಕಿದರೆ ಮೋದಕ ಬರುವಂತೆ ತಂತ್ರಜ್ಞಾನವನ್ನು ಅಳವಡಿಸಿದ್ದಾರೆ. ಕಾರ್ಡ್ ಹಾಕಿದ ಬಳಿಕ ಪುಟ್ಟ ಡಬ್ಬಿ ಹೊರ ಬರುತ್ತದೆ. ಅದರೊಳಗೆ ಮೋದಕವಿದ್ದು, ಮುಚ್ಚಳದ ಮೇಲೆ ಓಂ ಎಂದು ಬರೆಯಲಾಗಿರುತ್ತದೆ.

    ಸಾಮಾನ್ಯ ಎಟಿಎಂ ನಂತೆಯೇ ಅದನ್ನು ಸಿದ್ಧಪಡಿಸಲಾಗಿದ್ದು, ಬಟನ್‍ಗಳ ಮೇಲೆ ಸಂಖ್ಯೆ ಹಾಗೂ ಸೂಚನೆ ಬದಲಾಗಿ, ಕ್ಷಮೆ, ಭಕ್ತಿ, ಪ್ರೀತಿ, ಶಾಂತಿ, ಜ್ಞಾನ ಮತ್ತು ದಾನ ಎಂದು ಬರೆಯಲಾಗಿದೆ.

    ತಂತ್ರಜ್ಞಾನ ಮತ್ತು ಸಂಸ್ಕೃತಿಯನ್ನು ಒಟ್ಟಿಗೆ ಕೂಡಿಸಿಕೊಂಡು ಮುಂದುವರಿಯುವ ಸಂಕೇತವಾಗಿ ಈ ಎಟಿಎಂ ಸಿದ್ಧಪಡಿಸಲಾಗಿದೆ. ಇದಕ್ಕಾಗಿಯೇ ತಯಾರಿಸಿದ ವಿಶೇಷ ಕಾರ್ಡ್ ತೋರಿಸಿದರೆ ಪ್ರಸಾದದ ರೂಪದಲ್ಲಿ ಮೋದಕ ಪಡೆಯಬಹುದು ಎಂದು ಯಂತ್ರವನ್ನು ಅಭಿವೃದ್ಧಿ ಪಡಿಸಿದ ಸಂಜೀವ್ ಕುಲಕರ್ಣಿ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಪ್ರೇಯಸಿಗಾಗಿ 300 Sorry ಬ್ಯಾನರ್ ಗಳನ್ನು ರಸ್ತೆ ತುಂಬೆಲ್ಲಾ ಹಾಕ್ದ!

    ಪ್ರೇಯಸಿಗಾಗಿ 300 Sorry ಬ್ಯಾನರ್ ಗಳನ್ನು ರಸ್ತೆ ತುಂಬೆಲ್ಲಾ ಹಾಕ್ದ!

    ಪುಣೆ: ಪ್ರೇಯಸಿ ಮುನಿಸಿಕೊಂಡರೆ ಪ್ರಿಯತಮ ಏನೇನೋ ಉಪಾಯ ಮಾಡಿ ಆಕೆಯನ್ನು ಒಲಿಸಿಕೊಳ್ಳುತ್ತಾನೆ. ಆದರೆ ಇಲ್ಲೊಬ್ಬ ಪ್ರೇಮಿ ಮುನಿಸಿಕೊಂಡಿದ್ದ ಪ್ರೇಯಸಿಯನ್ನು ಒಲಿಸಿಕೊಳ್ಳಲು ಬರೋಬ್ಬರಿ 300 ಸಾರಿ ಬ್ಯಾನರ್ ಗಳನ್ನು ರಸ್ತೆಯಲ್ಲಿ ಹಾಕಿದ್ದಾನೆ.

    ನಿಲೇಶ್ ಖೇಡೇಕರ್ ರಸ್ತೆಯಲ್ಲಿ ಬ್ಯಾನರ್ ಹಾಕಿದ ಪ್ರೇಮಿ. ನಿಲೇಶ್ ಓರ್ವ ಉದ್ಯಮಿ ಆಗಿದ್ದು, ಮಹಾರಾಷ್ಟ್ರದ ಪಿಂಪ್ರಿ ಚಿಂಚ್ವಾಡ್ ನಲ್ಲಿ ಪ್ರದೇಶದಲ್ಲಿ ಮುನಿಸಿಕೊಂಡಿದ್ದ ಪ್ರೇಯಸಿಯನ್ನು ಒಲಿಸಿಕೊಳ್ಳಲು ಸಾರಿ ಬ್ಯಾನರ್ ಹಾಕುವುದರ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ.

    ಶುಕ್ರವಾರ ಪಿಂಪ್ರಿ ಚಿಂಚ್ವಾಡ್ ಜನರು ಎಂದಿನಂತೆ ಎದ್ದು ತಮ್ಮ ಕೆಲಸ ಕಾರ್ಯಗಳಿಗೆ ಹೋಗುತ್ತಿದ್ದರು. ಆಗ ರಸ್ತೆಯಲ್ಲಿ ಬಿತ್ತಿ ಪತ್ರ ಹಾಗೂ ಬ್ಯಾನರ್ ಕಣ್ಣಿಗೆ ಬಿದ್ದಿವೆ. ಬ್ಯಾನರ್ ಮೇಲೆ ಐ ಯಮ್ ಸಾರಿ (ನನ್ನನು ಕ್ಷಮಿಸು) ಎಂದು ಬರೆದಿದೆ. ಜೊತೆಗೆ ಅದರ ಪಕ್ಕ ಕೆಂಪು ಬಣ್ಣದ ಹೃದಯವನ್ನು ಸಹ ಬಿಡಿಸಲಾಗಿದೆ.

    ಈ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಅನುಮತಿ ಪಡೆಯದೇ ಬ್ಯಾನರ್ ಹಾಕಿದ್ದಕ್ಕೆ ಉದ್ಯಮಿ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ನಿಲೇಶ್ ಪರಾರಿಯಾಗಿದ್ದು, ಬ್ಯಾನರ್ ಹಾಕಲು ಸಹಾಯ ಮಾಡಿದ್ದ ಗೆಳೆಯ ವಿಲಾಸ್ ಸಿಂಧೆ ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ನಿಲೇಸ್ ಮತ್ತು ಆತನ ಪ್ರೇಮಿ ಮಧ್ಯ ಯಾವುದೋ ವಿಚಾರಕ್ಕೆ ಜಗಳವಾಗಿತ್ತು. ಪ್ರೇಯಸಿಯನ್ನ ಒಲಿಸಿಕೊಳ್ಳಲು ಖೇಡಕರ್ ಬ್ಯಾರನ್ ಉಪಾಯವನ್ನು ಮಾಡಿ, ಗೆಳೆತಿ ಸಂಚರಿಸುವ ಮಾರ್ಗದ ಬದಿಯಲ್ಲಿ ಬ್ಯಾನರ್ ಹಾಕುವ ಮೂಲಕ ಕ್ಷಮೆ ಕೇಳಿದ್ದಾರೆ. ಬ್ಯಾನರ್ ಗಳಿಗಾಗಿ ನಿಲೇಶ್ 72 ಸಾವಿರ ರೂಪಾಯಿ ಖರ್ಚು ಮಾಡಿದ್ದು, ಪ್ರತಿ ಬ್ಯಾನರ್ ನಲ್ಲಿ `I Am Sorry ‘ಎಂದು ಬರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಕುರಿತು ನಿಲೇಶ್ ಖೇಡೇಕರ್ ವಿರುದ್ಧ ಅಕ್ರಮ ಹೋರ್ಡಿಂಗ್ ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ಆರೋಪದ ಮೇಲೆ ದೂರು ದಾಖಲಿಸಿದ್ದು, ಈ ಬಗ್ಗೆ ನಗರಾಡಳಿಕ್ಕೆ ಪೊಲೀಸರು ಮಾಹಿತಿ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾಸ್ಮೋಸ್ ಬ್ಯಾಂಕಿನಿಂದ 94 ಕೋಟಿ ರೂ. ಎಗರಿಸಿದ ಹ್ಯಾಕರ್ಸ್!

    ಕಾಸ್ಮೋಸ್ ಬ್ಯಾಂಕಿನಿಂದ 94 ಕೋಟಿ ರೂ. ಎಗರಿಸಿದ ಹ್ಯಾಕರ್ಸ್!

    ಮುಂಬೈ: ಮಹಾರಾಷ್ಟ್ರ ರಾಜ್ಯದ ಪುಣೆಯಲ್ಲಿರುವ ಕಾಸ್ಮೋಸ್ ಸಹಕಾರಿ ಬ್ಯಾಂಕಿನ ಎಟಿಎಂ ಸ್ವಿಚ್ ಸರ್ವರ್ ಹ್ಯಾಕ್ ಮಾಡುವ ಮೂಲಕ 94 ಕೋಟಿ ರೂ. ಹಣವನ್ನು ಎಗರಿಸಲಾಗಿದೆ.

    ದೇಶದ ಹೊರಗಡೆ ಒಟ್ಟು 12 ಸಾವಿರ ಬಾರಿ ವಹಿವಾಟು ಮಾಡುವ ಮೂಲಕ ಒಟ್ಟು 78 ಕೋಟಿ ರೂ. ಪಡೆದಿದ್ದು, ಭಾರತದಲ್ಲಿ 2,800 ಬಾರಿ ವಹಿವಾಟಿನಿಂದ 80 ಲಕ್ಷ ರೂ. ಹಣವನ್ನು ಕದ್ದಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಸ್ಟ್ ಸಿಕ್ಕಿದ್ದು, ಒಂದು ವಹಿವಾಟಿನಲ್ಲಿ 12 ಕೋಟಿ ರೂ.ವನ್ನು ಹಾಂಕಾಂಗ್‍ನಲ್ಲಿರುವ ಹಾನ್ಸೆಂಗ್ ಬ್ಯಾಂಕಿಗೆ ವರ್ಗಾವಣೆ ಮಾಡಲಾಗಿದೆ. ಫಲಾನುಭವಿ ಖಾತೆಯು ಎಎಲ್‍ಎಂ ಕಂಪೆನಿ ಎಂದು ಪತ್ತೆಯಾಗಿದೆ. ಒಟ್ಟು ಮೂರು ಹಂತದಲ್ಲಿ ಹ್ಯಾಕರ್ಸ್ ಹಣ ಪಡೆದುಕೊಂಡಿದ್ದು, 94 ಕೋಟಿ ರೂ. ದೋಚಿದ್ದಾರೆ.

    ಕೆನಡಾದಿಂದ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದ್ದು, ಈ ಸಂಬಂಧ ಆರ್‌ಬಿಐ ಮತ್ತು ಆದಾಯ ತೆರಿಗೆ ಅಧಿಕಾರಿಗಳ ತಂಡ ತನಿಖೆ ಆರಂಭಿಸಿದೆ ಎಂದು ಕಾಸ್ಮೋಸ್ ಬ್ಯಾಂಕ್ ಅಧ್ಯಕ್ಷ ಮಿಲಿಂದ್ ಕಾಳೆ ಹೇಳಿದ್ದಾರೆ.

    ಇತ್ತ ಪ್ರಕರಣದ ಕುರಿತು ಪುಣೆಯ ಸೈಬರ್ ಕ್ರೈಂ ಸೆಲ್‍ನಲ್ಲಿ ದೂರು ದಾಖಲಾಗಿದೆ. ಮಾಲ್ವೇರ್ ಕಳುಹಿಸಿ ಸರ್ವರ್ ಹ್ಯಾಕ್ ಮಾಡಿ ದಾಳಿ ಮಾಡಲಾಗಿದೆ ಎಂದು ಪುಣೆಯ ಸೈಬರ್ ಕ್ರೈಂ ಸೆಲ್ ಕೇಂದ್ರ ಕಚೇರಿ ಡಿಸಿಪಿ ಜ್ಯೋತಿ ಪ್ರಿಯಾ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ನಿಷೇಧವಾಗಿದ್ದರೂ ಬರೋಬ್ಬರಿ 500, 1 ಸಾವಿರ ಮುಖಬೆಲೆಯ 3 ಕೋಟಿ ರೂ. ಪತ್ತೆ!

    ನಿಷೇಧವಾಗಿದ್ದರೂ ಬರೋಬ್ಬರಿ 500, 1 ಸಾವಿರ ಮುಖಬೆಲೆಯ 3 ಕೋಟಿ ರೂ. ಪತ್ತೆ!

    ಪುಣೆ: ನೋಟು ನಿಷೇಧವಾಗಿ ಸುಮಾರು ಒಂದೂವರೆ ವರ್ಷವಾದ್ರೂ 500 ಮತ್ತು 1,000 ರೂ. ಮುಖಬೆಲೆಯ ಬರೋಬ್ಬರಿ 3 ಕೋಟಿ ರೂ.ವನ್ನು ಶುಕ್ರವಾರ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

    ಖಾದಕ್ ಪೊಲೀಸರು ಈ ಕಾರ್ಯಚರಣೆ ನಡೆಸಿದ್ದು, ಶುಕ್ರವಾರ ರಾತ್ರಿ ಕಾಂಗ್ರೆಸ್ ಶಾಸಕ ಸೇರಿದಂತೆ ಐದು ಜನರನ್ನು ಬಂಧಿಸಿದ್ದಾರೆ. ಶಾಸಕ ಗಜೇಂದ್ರ ಅಹ್ಹಂಗ್, ಸಂಗನ್ಮರ್ ಮುನಿಸಿಪಲ್ ಕೌನ್ಸಿಲ್ ನ ಕಾರ್ಪೊರೇಟರ್ ಎಂದು ತಿಳಿದುಬಂದಿದೆ. ಇತರರನ್ನು ವಿಜಯ್ ಶಿಂಧೆ (38), ಆದಿತ್ಯ ಘಾನ್ (25) ಮತ್ತು ನವನಾಥ್ ಭಂಡಾಗೆಲ್ (28) ಇವರು ಮೂಲತಃ ಪುಣೆಯವರಾಗಿದ್ದು, ಮತ್ತೊಬ್ಬ ಸತಾರಾ ಜಿಲ್ಲೆಯ ಸುರಾಜ್ ಜಗ್ತಾಪ್ (40) ಎಂದು ಗುರುತಿಸಲಾಗಿದೆ.

    ಈ ಐದು ಬಂಧಿತ ಆರೋಪಿಗಳು ಶುಕ್ರವಾರ ರಾತ್ರಿ ರವಿವರ್ ಪೆಥ್ ಪ್ರದೇಶದಲ್ಲಿ ಹಳೆಯ ನೋಟುಗಳನ್ನು ವಿನಿಮಯ ಮಾಡಲು ಯತ್ನಿಸುತ್ತಿದ್ದರು. ಈ ಬಗ್ಗೆ ನಿಖರ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಕೇವಲ 48 ಸಾವಿರ ರೂ.ವನ್ನು ಮಾತ್ರ ಹಳೆಯ ನೋಟಿನಿಂದ ನವೀಕರಣ ಮಾಡಲಾಗಿತ್ತು. ಇನ್ನುಳಿದ 2.99 ಕೋಟಿ ರೂ.ಗಳು ಹಳೆಯ 500 ಮತ್ತು 1,000 ರೂ. ನೋಟುಗಳಿದ್ದವು. ಸದ್ಯಕ್ಕೆ ಈ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ತಿಳಿದಿದ್ದು, ಅವರು ಸ್ಥಳಕ್ಕೆ ಬಂದು ಹಣವನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಶಪಡಿಸಿಕೊಂಡಿರುವ ಹಣವು ಯಾರದು ಎಂದು ತಿಳಿದುಕೊಳ್ಳಲು ತನಿಖೆಯನ್ನು ಮುಂದುವರೆಸಿದ್ದೇವೆ.

  • ಪೋಷಕರ ಪಕ್ಕ ಮಲಗಿದ್ದ 1ವರ್ಷದ ಬಾಲಕಿಯನ್ನು ರೇಪ್ ಮಾಡಿ ತಲೆಯನ್ನೇ ಜಜ್ಜಿದ!

    ಪೋಷಕರ ಪಕ್ಕ ಮಲಗಿದ್ದ 1ವರ್ಷದ ಬಾಲಕಿಯನ್ನು ರೇಪ್ ಮಾಡಿ ತಲೆಯನ್ನೇ ಜಜ್ಜಿದ!

    ಪುಣೆ: ಒಂದು ವರ್ಷದ ಮಗು ತನ್ನ ಪೋಷಕರ ಪಕ್ಕ ಮಲಗಿದ್ದ ಸಂದರ್ಭದಲ್ಲಿ ಅಲ್ಲಿಂದ ಅಪಹರಿಸಿ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಅಮಾನವೀಯ ಘಟನೆ ಪುಣೆಯ ಲೋನಿ ಕಲ್ಬೋರ್ ಪ್ರದೇಶದಲ್ಲಿ ನಡೆದಿದೆ.

    ಆರೋಪಿ ಗುರುವಾರ ಲೋನಿ ಕಲ್ಬೋರ್ ನಲ್ಲಿ ಪೋಷಕರ ಪಕ್ಕ ನಿದ್ದೆ ಮಾಡುತ್ತಿದ್ದ ಮಗುವನ್ನು ಎತ್ತಿಕೊಂಡು ಹೋಗಿರುವ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿತ್ತು. ಆ ಮೂಲಕ 22 ವರ್ಷದ ಮಲ್ಹಾರಿ ಬಾನ್ಸೋಡ್ ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಂತ್ರಸ್ತ ಮಗುವಿನ ಕುಟುಂಬದವರು ಮೂಲತಃ ತಮಿಳುನಾಡಿನವರಾಗಿದ್ದು, ಪುಣೆಯಲ್ಲಿ ಕಾರ್ಮಿಕರ ಕೆಲಸ ಮಾಡುತ್ತಿದ್ದರು. ಮಗು ನಾಪತ್ತೆಯಾದ ಬಗ್ಗೆ ಪೋಷಕರು ಗಮನಿಸಿ ಹುಡುಕಾಟ ಶುರು ಮಾಡಿದ್ದಾರೆ. ಎಷ್ಟು ಹುಡುಕಿದರೂ ಮಗು ಪತ್ತೆಯಾಗಲಿಲ್ಲ. ಹೀಗಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಬಳಿಕ ನಾವು ಹುಡುಕಾಟವನ್ನು ಆರಂಭಿಸಿದೆವು ಎಂದು ಲೋನಿ ಕಲ್ಬೋರ್ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಶುಕ್ರವಾರ ನಿರ್ಜನ ಪ್ರದೇಶದಲ್ಲಿ ಮಗುವಿನ ದೇಹ ಪತ್ತೆಯಾಗಿದೆ. ನಂತರ ವೈದ್ಯಕೀಯ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಲಾಗಿದ್ದು, ಸಂತ್ರಸ್ತ ಮಗುವಿನ ಮೇಲೆ ಲೈಂಗಿಕವಾಗಿ ದೌರ್ಜನ್ಯ ಎಸಗಿ ನಂತರ ಮಗುವಿನ ತಲೆಯನ್ನು ನೆಲಕ್ಕೆ ಹೊಡೆದು ಕೊಲೆ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಈ ಬಗ್ಗೆ ಪೊಲೀಸರು ತನಿಖೆಯನ್ನು ಮುಂದುವರೆಸಿ ಆ ಪ್ರದೇಶದ ಸಿಸಿಟಿವಿಯನ್ನು ಪರಿಶೀಲನೆ ಮಾಡಿದಾಗ ಆರೋಪಿ ಕೃತ್ಯ ಬೆಳಕಿಗೆ ಬಂದಿದೆ. ಹೀಗಾಗಿ ಆರೋಪಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ನಂತರ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತ ತಾನೇ ಅತ್ಯಾಚಾರ ಮಾಡಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯಕ್ಕೆ ಆರೋಪಿ ಮಲ್ಹಾರಿ ಬನ್ಸೋಡ್ ವಿರುದ್ಧ ಐಪಿಸಿ ಸೆಕ್ಷನ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

  • ಫೀಸ್ ಕಟ್ಟದ್ದಕ್ಕೆ 150 ವಿದ್ಯಾರ್ಥಿಗಳಿಗೆ ಟಿಸಿಕೊಟ್ಟು ಮನೆಗೆ ಕಳುಸಿದ್ರು!

    ಫೀಸ್ ಕಟ್ಟದ್ದಕ್ಕೆ 150 ವಿದ್ಯಾರ್ಥಿಗಳಿಗೆ ಟಿಸಿಕೊಟ್ಟು ಮನೆಗೆ ಕಳುಸಿದ್ರು!

    ಮುಂಬೈ: ಶಾಲೆಯ ಶುಲ್ಕ (ಫೀಸ್) ಪಾವತಿಸದ 150 ವಿದ್ಯಾರ್ಥಿಗಳಿಗೆ ವರ್ಗಾವಣೆ ಪ್ರಮಾಣಪತ್ರ (ಟಿಸಿ) ಕೊಟ್ಟು ಮನೆಗೆ ಕಳುಹಿಸಿದ ಅಮಾನವೀಯ ಘಟನೆಯು ಮಹಾರಾಷ್ಟ್ರದ ಪುಣೆಯ ಸಮೀಪದ ಹಿಂಗ್ಲೆಯ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ.

    ಝೀಲ್ ಶಿಕ್ಷಣ ಸಂಸ್ಥೆಯ ದ್ಯಾನಗಂಗಾ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಸಂಸ್ಥೆಯು ಹೆಚ್ಚು ಶುಲ್ಕವನ್ನು ನಮ್ಮಿಂದ ಪಡೆಯುತ್ತಿದೆ ಎಂದು ವಿದ್ಯಾರ್ಥಿಗಳ ಪೋಷಕರು ಆರೋಪಿಸಿದ್ದಾರೆ.

    ನಾವು ಈಗಾಗಲೇ 30 ಸಾವಿರ ರೂ. ಶುಲ್ಕ ಹಾಗೂ 10 ಸಾವಿರ ರೂ. ಠೇವಣಿ ನೀಡಿದ್ದೇವೆ. ಠೇವಣಿ ಹಣದಲ್ಲಿಯೇ ಶುಲ್ಕ ಹೊಂದಾಣಿಕೆ ಮಾಡಿಕೊಳ್ಳುವಂತೆ ಶಾಲೆಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಅವರು ಇದನ್ನು ಒಪ್ಪಲಿಲ್ಲ ಎಂದು ಪೋಷಕರು ದೂರಿದ್ದಾರೆ.

    ಕೋರ್ಟ್ ಮೆಟ್ಟಿಲೇರಿದ್ದ ಈ ಪ್ರಕರರಣದಲ್ಲಿ ಬಾಂಬೆ ಹೈಕೋರ್ಟ್ ಶಾಲೆಯ ಪರ ತೀರ್ಪು ನೀಡಿದ್ದು, ಶುಲ್ಕ ಪಾವತಿಸದ ಮಕ್ಕಳ ದಾಖಲೆಯನ್ನು ರದ್ದು ಪಡಿಸಿ ವರ್ಗಾವಣೆ ಪತ್ರ ನೀಡಬಹುದು ಆದೇಶಿಸಿತ್ತು.

    2016-17ರಲ್ಲಿ ವಿದ್ಯಾರ್ಥಿಗಳ ಪೋಷಕರು 30 ಸಾವಿರ ಶುಲ್ಕ ಪಾವತಿ ಮಾಡಿದ್ದರು. ಆದರೆ 2017-18ರ ಸಾಲಿನಲ್ಲಿ ಅಷ್ಟೇ ಮೊತ್ತದ ಶುಲ್ಕ ಪಾವತಿಸಲು ಹಿಂದೇಟು ಹಾಕುತ್ತಿದ್ದಾರೆ. ಹೈಕೋರ್ಟ್ ಶುಲ್ಕ ಪಾವತಿಸಲು ಆದೇಶ ನೀಡಿತ್ತು. ಅಲ್ಲದೇ ಶಿಕ್ಷಣ ಸಂಸ್ಥೆ ಶುಲ್ಕ ಪಾವತಿಗೆ ಏಳು ದಿನ ಅವಕಾಶ ನೀಡಿದ್ದರೂ ಪೋಷಕರು ಒಪ್ಪಲಿಲ್ಲ. ಹೀಗಾಗಿ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳಿಗೆ ವರ್ಗಾವಣೆ ಪತ್ರ ನೀಡಿದೆ ಎಂದು ಸಂಸ್ಥೆಯ ಪರ ವಕೀಲ ವಿಕ್ರಂ ದೇಶಮುಖ್ ಹೇಳಿದ್ದಾರೆ.

  • ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪ್ರಚಾರ- ಕೊಹ್ಲಿ ನೋಡಲು ಮುಗಿಬಿದ್ದ ಜನ!

    ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪ್ರಚಾರ- ಕೊಹ್ಲಿ ನೋಡಲು ಮುಗಿಬಿದ್ದ ಜನ!

    ಪುಣೆ: ಚುನಾವಣೆಗಳಲ್ಲಿ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಸ್ಟಾರ್ ಪ್ರಚಾರಕರನ್ನು ಕರೆ ತರುವುದು ಸಾಮಾನ್ಯ. ಆದ್ರೆ ಪುಣೆಯ ಪಂಚಾಯತ್ ಚುನಾವಣೆಯ ಅಭ್ಯರ್ಥಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನೇ ತನ್ನ ಪ್ರಚಾರಕ್ಕೆ ಕರೆ ತರುವುದಾಗಿ ಹೇಳಿ ಜ್ಯೂನಿಯರ್ ಕೊಹ್ಲಿಯನ್ನು ಕರೆತಂದು ಸುದ್ದಿಯಾಗಿದ್ದಾರೆ.

    ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಸ್ಥಳೀಯ ಸಂಸ್ಥೆಯ ಚುನಾಣೆಯಲ್ಲಿ ಪುಣೆಯ ರಾಮಲಿಂಗ ಗ್ರಾಮ ಪಂಚಾಯತ್ ಗೆ ಸ್ಪರ್ಧೆ ನಡೆಸುತ್ತಿರುವ ಶಿರೂರ್ ನ ವಿಠ್ಠಲ್ ಗಣಪತ್ ಕೊಹ್ಲಿ ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ ಎಂದು ಹೇಳಿ ಜಾಹೀರಾತು ನೀಡಿದ್ದರು. ಅಷ್ಟೇ ಅಲ್ಲದೇ ಅಲ್ಲದೇ ಮೇ 25 ರಂದು ನಡೆಯುವ ಪ್ರಚಾರ ಸಭೆಗೆ ಕೊಹ್ಲಿ ಅವರನ್ನೇ ಕರೆತರುವುದಾಗಿ ತಮ್ಮ ವ್ಯಾಪ್ತಿಯ ಜನರಿಗೆ ಮಾಹಿತಿ ನೀಡಿದ್ದರು.

    ಅಭ್ಯರ್ಥಿಯ ಮಾತಿನಂತೆ ತಮ್ಮ ನೆಚ್ಚಿನ ಕ್ರಿಕೆಟಿಗನನ್ನು ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಆದರೆ ವಿಠ್ಠಲ್ ಗಣಪತಿ ಕೊಹ್ಲಿಯಂತೆ ವೇಷಧರಿಸಿದ್ದ ಜೂನಿಯರ್ ನಟನನ್ನು ಕರೆತಂದು ಪ್ರಚಾರ ನಡೆಸಿದ್ದಾರೆ.

    ಸದ್ಯ ಚುನಾವಣಾ ಪ್ರಚಾರಕ್ಕಾಗಿ ಅಭ್ಯರ್ಥಿ ನಡೆಸಿರುವ ಪ್ರಯತ್ನವನ್ನು ಅಲೆಕ್ಸಿಸ್ ರೂನೇ ಎಂಬವರು ಫೋಟೋ ಸಮೇತ ಟ್ವೀಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವಿವರಿಸಿದ್ದಾರೆ. ಸದ್ಯ ಪ್ರಚಾರದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮತದಾರರನ್ನು ಸೆಳೆಯಲು ಅಭ್ಯರ್ಥಿ ಕೈಗೊಂಡ ಕ್ರಮದ ಬಗ್ಗೆ ಹಲವರು ತಮ್ಮ ಪ್ರತಿಕ್ರಿಯೆ ನೀಡಿ ಮರುಟ್ವೀಟ್ ಮಾಡಿದ್ದಾರೆ.

    https://twitter.com/iGeekyChic/status/1000263016829652992?

  • ಒಂದೇ ಬಾರಿಗೆ ನಾನು ಎಲ್ಲ ಬೈಕ್ ರೈಡ್ ಮಾಡಲಾರೆ: ಭಜ್ಜಿ ಕುರಿತ ಪ್ರಶ್ನೆಗೆ ಧೋನಿ ಉತ್ತರ

    ಒಂದೇ ಬಾರಿಗೆ ನಾನು ಎಲ್ಲ ಬೈಕ್ ರೈಡ್ ಮಾಡಲಾರೆ: ಭಜ್ಜಿ ಕುರಿತ ಪ್ರಶ್ನೆಗೆ ಧೋನಿ ಉತ್ತರ

    ಪುಣೆ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಪತ್ರಿಕಾಗೋಷ್ಠಿಯಲ್ಲಿ ಸಿಎಸ್‍ಕೆ ಬೌಲರ್ ಹರ್ಭಜನ್ ಸಿಂಗ್ ಕುರಿತು ಪ್ರಶ್ನೆಗೆ ಉತ್ತರಿಸಿ ತನ್ನ ಬಳಿ ಇರುವ ಎಲ್ಲಾ ಬೈಕ್‍ಗಳನ್ನು ಒಮ್ಮೆಲೆ ರೈಡ್ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

    ಅಂದಹಾಗೆ ಐಪಿಎಲ್ ಫೈನಲ್ ಪಂದ್ಯದ ಕುರಿತ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಧೋನಿ ಅವರಿಗೆ ಪತ್ರಕರ್ತರು ಹರ್ಭಜನ್ ಸಿಂಗ್ ಅವರಿಗೆ ಟೂರ್ನಿಯಲ್ಲಿ ಹೆಚ್ಚಿನ ಓವರ್ ಬೌಲ್ ಮಾಡಲು ನೀಡದಿರುವ ಕುರಿತು ಪ್ರಶ್ನಿಸಿದ್ದರು. ಈ ವೇಳೆ ಧೋನಿ ಕಾರು ಬೈಕ್ ಗಳ ಉದಾಹಣೆಯೊಂದಿಗೆ ಹೇಳಿಕೆ ನೀಡಿ ಎಲ್ಲರನ್ನು ನಗೆಗಾಡಲಲ್ಲಿ ತೇಲುವಂತೆ ಮಾಡಿದ್ದಾರೆ.

    ನನ್ನ ಮನೆಯಲ್ಲಿ ಹಲವು ಬೈಕ್ ಹಾಗೂ ಕಾರುಗಳಿದೆ. ಆದರೆ ಒಂದೇ ಸಮಯದಲ್ಲಿ ಅವುಗಳೆಲ್ಲವನ್ನು ಚಲಾಯಿಸಲು ಸಾಧ್ಯವಿಲ್ಲ. ತಂಡದಲ್ಲಿ 6 ರಿಂದ 7 ಬೌಲರ್ ಗಳು ಇರುವ ವೇಳೆ ಪಂದ್ಯದ ಪರಿಸ್ಥಿತಿಗಳು, ಎದುರಾಳಿ ಬ್ಯಾಟ್ಸ್ ಮನ್ ಯಾರು ಎಂಬ ಎಲ್ಲ ಅಂಶಗಳನ್ನು ಗಮನಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಉತ್ತರಿಸಿದರು.

    ಈ ಹಿಂದಿನ ಟೂರ್ನಿಗಳಲ್ಲಿ ತಂಡದಲ್ಲಿ ನೇಗಿ ಮತ್ತು ಜಡೇಜಾ ಅವರಿಗೂ ಭಿನ್ನ ಸಂದರ್ಭಗಳಲ್ಲಿ ಬೌಲ್ ಮಾಡಲು ಅವಕಾಶ ನೀಡಿದ್ದೇನೆ. ಪಂದ್ಯದ ಪರಿಸ್ಥಿತಿ ಹಾಗೂ ಎದುರಾಳಿ ಆಟಗಾರರ ಸಾಮರ್ಥ್ಯವನ್ನು ಗಮನಿಸಿ ಬೌಲಿಂಗ್ ನಿರ್ಧರಿಸುತ್ತೇನೆ. ಈ ಹಿಂದಿನ ಪಂದ್ಯದಲ್ಲಿ ಹರ್ಭಜನ್ ಸಿಂಗ್ ಬೌಲಿಂಗ್ ಅಗತ್ಯವಾಗಿದ್ದರಿಂದ ಅವಕಾಶ ನೀಡಿದ್ದೆ. ಆದರೆ ಕ್ರಿಕೆಟ್ ನ ಎಲ್ಲಾ ಮಾದರಿಯ ಪಂದ್ಯಗಳನ್ನು ಗಮನಿಸಿದರೆ ಹರ್ಭಜನ್ ಹೆಚ್ಚಿನ ಅನುಭವ ಪಡೆದ ಆಟಗಾರರಾಗಿದ್ದಾರೆ ಎಂದು ವಿವರಿಸಿದರು.

    ಈ ಬಾರಿ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಸ್ಪೀನ್ ಬೌಲರ್ ಎನಿಸಿಕೊಂಡಿದ್ದ ಹರ್ಭಜನ್ 13 ಪಂದ್ಯಗಳಲ್ಲಿ ಆಡಿದ್ದು, 8.48 ರ ಸರಾಸರಿಯಲ್ಲಿ 7 ವಿಕೆಟ್ ಪಡೆದಿದ್ದಾರೆ.