Tag: ಪುಣೆ

  • ‘ಆಪರೇಷನ್‌ ಸಿಂಧೂರ’; ಕೋಮು ಗುರಿಯಾಗಿಸಿ ಆಕ್ಷೇಪಾರ್ಹ ಪೋಸ್ಟ್‌ – ಪುಣೆ ಕಾನೂನು ವಿದ್ಯಾರ್ಥಿನಿ ಬಂಧನ

    ‘ಆಪರೇಷನ್‌ ಸಿಂಧೂರ’; ಕೋಮು ಗುರಿಯಾಗಿಸಿ ಆಕ್ಷೇಪಾರ್ಹ ಪೋಸ್ಟ್‌ – ಪುಣೆ ಕಾನೂನು ವಿದ್ಯಾರ್ಥಿನಿ ಬಂಧನ

    ಪುಣೆ: ‘ಆಪರೇಷನ್‌ ಸಿಂಧೂರ’ (Operation Sindoor) ಕಾರ್ಯಾಚರಣೆ ವಿಚಾರವಾಗಿ ಪ್ರತಿಕ್ರಿಯಿಸುವಾಗ ಒಂದು ಕೋಮು ಗುರಿಯಾಗಿಸಿ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಪುಣೆ ಕಾನೂನು ವಿದ್ಯಾರ್ಥಿನಿಯನ್ನು (Pune Law Student) ಪೊಲೀಸರು ಬಂಧಿಸಿದ್ದಾರೆ.

    ಶರ್ಮಿಷ್ಠ ಪನೋಲಿ ಎಂಬಾಕೆಯನ್ನು ಶುಕ್ರವಾರ ರಾತ್ರಿ ಗುರುಗ್ರಾಮ್‌ನಿಂದ ಕೋಲ್ಕತ್ತಾ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಇಸ್ಲಾಂ ಧರ್ಮವನ್ನು ಗುರಿಯಾಗಿಸಿ ಅವಹೇಳನಕಾರಿ ಹೇಳಿಕೆಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಲಾಗಿತ್ತು. ಇದನ್ನೂ ಓದಿ: ರಾಹುಲ್‌ ಗಾಂಧಿ ಪ್ರಧಾನಿಯಾದ ದಿನ ಪಿಒಕೆ ಭಾರತದ ಭಾಗವಾಗಲಿದೆ: ʻಕೈʼ ಸಂಸದ ಪ್ರಮೋದ್ ತಿವಾರಿ

    ಈ ವಿಡಿಯೋ ವೈರಲ್ ಆಗಿದ್ದು, ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ಕೋಲ್ಕತ್ತಾದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಆಕೆಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಆಕೆಯ ಬಂಧನದ ನಂತರ, ಪನೋಲಿಯನ್ನು ಶನಿವಾರ ಕೋಲ್ಕತ್ತಾದ ಅಲಿಪೋರ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

    ಈ ಪ್ರಕರಣವು ಶರ್ಮಿಷ್ಠ ಪನೋಲಿ ಎಂಬಾಕೆಯ ಇನ್‌ಸ್ಟಾಗ್ರಾಮ್ ವೀಡಿಯೊಗೆ ಸಂಬಂಧಿಸಿದೆ. ಅದು ನಿರ್ದಿಷ್ಟ ಸಮುದಾಯದ ಜನರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಉಗ್ರರು ಮತ್ತೆ ಹೆಡೆ ಬಿಚ್ಚಿದರೆ, ಹುತ್ತದಿಂದ ಎಳೆದು ತುಳಿಯುತ್ತೇವೆ: ಮೋದಿ ಖಡಕ್‌ ಸಂದೇಶ

    ಬಂಧನ ಭೀತಿಯಿಂದ ಪನೋಲಿ ಮತ್ತು ಆಕೆಯ ಕುಟುಂಬಸ್ಥರು ಪರಾರಿಯಾಗಿದ್ದರು. ಹಲವು ಬಾರಿ ನೋಟಿಸ್‌ ಜಾರಿ ಮಾಡಿದರೂ ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ. ಕೊನೆಗೆ ನ್ಯಾಯಾಲಯ ಬಂಧನ ವಾರೆಂಟ್‌ ಹೊರಡಿಸಿತು. ಅದರ ಆಧಾರದ ಮೇಲೆ ಗುರುಗ್ರಾಮ್‌ನಲ್ಲಿ ಆಕೆಯನ್ನು ಬಂಧಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ವಿವಾದದಿಂದಾಗಿ ಪನೋಲಿ ಸಾಮಾಜಿಕ ಮಾಧ್ಯಮದಲ್ಲಿ ಬೇಷರತ್ತಾಗಿ ಕ್ಷಮೆಯಾಚಿಸಿದ್ದಾಳೆ. ವೀಡಿಯೊಗಳು ಮತ್ತು ಪೋಸ್ಟ್‌ಗಳನ್ನು ಅಳಿಸಿಹಾಕಿದ್ದಾಳೆ.

  • ಮಳೆಯಿಂದ ಅಡ್ಡಿ – ಒಂದೇ ವೇದಿಕೆಯಲ್ಲಿ ನೆರವೇರಿತು ಹಿಂದೂ-ಮುಸ್ಲಿಂ ಜೋಡಿಯ ವಿವಾಹ

    ಮಳೆಯಿಂದ ಅಡ್ಡಿ – ಒಂದೇ ವೇದಿಕೆಯಲ್ಲಿ ನೆರವೇರಿತು ಹಿಂದೂ-ಮುಸ್ಲಿಂ ಜೋಡಿಯ ವಿವಾಹ

    ಮದುವೆ ಅಂದ್ರೆ ಕೇವಲ ಎರಡು ಜೀವಗಳು ಒಂದಾಗುವುದಲ್ಲ, ಎರಡು ಕುಟುಂಬ, ಎರಡು ಹೃದಯಗಳು, ಎರಡು ಭಿನ್ನ ಪರಂಪರೆಗಳು ಒಂದಾಗುವ ಕ್ಷಣ. ಇಂತಹ ವಿವಾಹ ಇದೀಗ ಹಿಂದೂ-ಮುಸ್ಲಿಮರ (Hindu Muslims) ಸಾಮರಸ್ಯ ಬೆಸೆಯುವ ವೇದಿಕೆಯಾಗಿ ಗುರುತಿಸಿಕೊಂಡ ಅಪರೂಪದ ಘಟನೆ ಪುಣೆಯಲ್ಲಿ ನಡೆದಿದೆ.

    ಹೌದು. ಭಾರಿ ಮಳೆ ಹಿನ್ನೆಲೆಯಲ್ಲಿ ಮುಸ್ಲಿಂ ಆರತಕ್ಷತೆ ಸಮಾರಂಭದ ವೇದಿಕೆಯಲ್ಲೇ ಹಿಂದೂ (Hindu) ದಂಪತಿಯೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಘಟನೆ ನಡೆದಿದ್ದು, ಮಾನವೀಯತೆಗೆ ಸಾಕ್ಷಿಯಾಗಿದೆ. ಇದನ್ನೂ ಓದಿ: ಬ್ರಿಜೇಶ್ ಚೌಟ ಸೇರಿ ಭಾರತ ಸಂಸದರ ನಿಯೋಗ ಆಗಮಿಸುವ ಹೊತ್ತಲ್ಲೇ ಮಾಸ್ಕೋ ಏರ್‌ಪೋರ್ಟ್‌ನಲ್ಲಿ ಡ್ರೋನ್‌ ದಾಳಿ!

    ಪುಣೆಯ ಅಲಂಕಾರನ್ ಲಾನ್ಸ್ ಎಂಬ ಬಯಲು ಮೈದಾನದಲ್ಲಿ ಮಂಗಳವಾರ ಸಂಜೆ 6.56ಕ್ಕೆ ನಡೆಯಬೇಕಿದ್ದ ಹಿಂದೂ ಕುಟುಂಬದ ಸಂಕ್ರತಿ ಕವಡೆ ಮತ್ತು ನರೇಂದ್ರ ಗಲಾಂಡೆ ಅವರ ವಿವಾಹ (Hindu Weddin) ಸಂಭ್ರಮಕ್ಕೆ ಎಲ್ಲ ಸಿದ್ಧತೆಗಳು ನಡೆದಿತ್ತು. ಹಿಂದೂ ಸಂಪ್ರದಾಯದಂತೆ ಮದುವೆ ನಡೆಯಲು ವೇದಿಕೆ ಸಜ್ಜಾಗಿತ್ತು, ಮಂತ್ರಗಳು ಘೋಷಗಳಷ್ಟೆ ಬಾಕಿ ಇತ್ತು. ಮದುವೆಗೆ ಬಂದ ಅತಿಥಿಗಳು ಕೂಡ ಮದುವೆ ಮನೆಯಲ್ಲಿ ಸಂತಸದಿಂದ ಇದ್ದರು.

    ಅಷ್ಟರಲ್ಲಿ ಸಂಭವಿಸಿದ ಭಾರೀ ಮಳೆಯಿಂದ ಬಂಧುಗಳಲ್ಲಿ ಗೊಂದಲ ಸೃಷ್ಟಿಯಾಯಿತು. ಅಲ್ಲದೇ ಮದುವೆ ಸಂಪ್ರದಾಯಗಳಿಗೂ ಮಳೆ ಅಡ್ಡಿಯಾಯ್ತು. ಇದರಿಂದ ಮದುವೆ ನಿಂತೇ ಹೋಯ್ತು ಅನ್ನೋ ಆತಂಕ ಶುರುವಾಗಿತ್ತು. ಆದ್ರೆ ಮುಸ್ಲಿಂ ಕುಟುಂಬವೊಂದರ ನೆರವಿನಿಂದ ಹಿಂದೂ ವಧು-ವರ ದಾಂಪತ್ಯ ಜೀವನಕ್ಕೆ ಕಾಲಿಡುವಂತಾಯಿತು. ಇದನ್ನೂ ಓದಿ: ಸಂತ್ರಸ್ತೆ ಜೊತೆ ವಿವಾಹ; ಪೋಕ್ಸೊ ಕೇಸ್‌ ಅಪರಾಧಿಯನ್ನು ಜೈಲು ಶಿಕ್ಷೆಯಿಂದ ಪಾರು ಮಾಡಿದ ಸುಪ್ರೀಂ

    ಮಳೆ ಶುರುವಾದ ತಕ್ಷಣ ಅಲಂಕಾರನ್ ಲಾನ್ಸ್ ಎಂಬ ಬಯಲು ಮೈದಾನದ ಸಮೀಪದಲ್ಲಿದ್ದ ಸಭಾಂಗಣವೊಂದರಲ್ಲಿ ಮುಸ್ಲಿಂ ಕುಟುಂಬದ ಮಾಹೀನ್ ಮತ್ತು ಮೊಹ್ಸಿನ್ ಕಾಜಿ ಅವರ ವಿವಾಹ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಗಲಾಂಡೆ ಪಾಟೀಲ್ ಕುಟುಂಬದ ಸದಸ್ಯರೊಬ್ಬರು ಸಪ್ತಪದಿ ಆಚರಣೆ ಪೂರ್ಣಗೊಳಿಸಲು ಸ್ವಲ್ಪ ಸಮಯದವರೆಗೆ ಸಭಾಂಗಣ ಬಳಸಲು ಅವಕಾಶ ಕೊಡುವಂತೆ ಕೇಳಿಕೊಂಡರು. ಇದಕ್ಕೆ ಮುಸ್ಲಿಂ ಕುಟುಂಬಸ್ಥರೂ ಒಪ್ಪಿ ಮದುವೆ ಆಚರಣೆಗೆ ಅವಕಾಶ ಮಾಡಿಕೊಟ್ಟರು.

    ಬಳಿಕ ಪರಸ್ಪರ ಸಂಪ್ರದಾಯ ಮತ್ತು ಪೂರ್ಣ ಗೌರವದ ಆಚರಣೆಗಳೊಂದಿಗೆ ಹಿಂದೂ – ಮುಸ್ಲಿಂ ಜೋಡಿಯ ವಿವಾಹ ನೆರವೇರಿತು. ಬಳಿಕ ಎರಡೂ ಸಮುದಾಯದ ಜನರು ಜಂಟಿಯಾಗಿ ಔತಣ ಕೂಟ ನಡೆಸಿದರು. ಇದನ್ನೂ ಓದಿ: Delhi Election| ಆಪ್‌ಗಿಂತ ಮೂರು ಪಟ್ಟು ಹೆಚ್ಚು ಖರ್ಚು ಮಾಡಿತ್ತು ಕಾಂಗ್ರೆಸ್‌ – 68 ಮಂದಿಗೆ ಬಿಜೆಪಿಯಿಂದ ತಲಾ 25 ಲಕ್ಷ

  • ಖ್ಯಾತ ಖಗೋಳ ತಜ್ಞ, ಪದ್ಮವಿಭೂಷಣ ಪುರಸ್ಕೃತ ಜಯಂತ್ ನಾರ್ಲಿಕರ್ ನಿಧನ

    ಖ್ಯಾತ ಖಗೋಳ ತಜ್ಞ, ಪದ್ಮವಿಭೂಷಣ ಪುರಸ್ಕೃತ ಜಯಂತ್ ನಾರ್ಲಿಕರ್ ನಿಧನ

    ಮುಂಬೈ: ಖ್ಯಾತ ಖಗೋಳ ತಜ್ಞ(Astronomer), ವಿಜ್ಞಾನ ಸಂವಹನಕಾರ ಮತ್ತು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಡಾ. ಜಯಂತ್ ನಾರ್ಲಿಕರ್ ಮಂಗಳವಾರ ಪುಣೆಯಲ್ಲಿ ನಿಧನರಾಗಿದ್ದಾರೆ. ಜಯಂತ್ ನಾರ್ಲಿಕರ್(Jayant Narlikar) ಅವರಿಗೆ 87 ವರ್ಷ ವಯಸಾಗಿತ್ತು. ಅವರು ಇತ್ತೀಚೆಗೆ ಶಸ್ತ್ರಚಿಕಿತ್ಸೆಯೊಂದಕ್ಕೆ ಒಳಗಾಗಿದ್ದರು.

    `ಬಿಗ್ ಬ್ಯಾಂಗ್’ ಸಿದ್ಧಾಂತಕ್ಕೆ ಪರ್ಯಾಯಗಳನ್ನು ಪ್ರಸ್ತಾಪಿಸಿದ್ದಕ್ಕಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ಭಾರತದಲ್ಲಿ ಖಗೋಳಶಾಸ್ತ್ರ ಮತ್ತು ಖಗೋಳ ಭೌತಶಾಸ್ತ್ರದ ಸಂಶೋಧನೆಯ ವಿಶ್ವ ದರ್ಜೆಯ ಸಂಸ್ಥೆಗಳನ್ನು ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಾರತೀಯ ವಿಜ್ಞಾನ ಕ್ಷೇತ್ರಕ್ಕೆ ನಾರ್ಲಿಕರ್ ಅವರು ಆಗಾಧ ಕೊಡುಗೆಯನ್ನು ನೀಡಿದ್ದಾರೆ. ಇದನ್ನೂ ಓದಿ: ಸಿವಿಲ್ ನ್ಯಾಯಾಧೀಶ ಸ್ಥಾನಕ್ಕೆ ನೇಮಕಾತಿಯಾಗಲು ಕನಿಷ್ಠ ಮೂರು ವರ್ಷಗಳ ವಕೀಲಿಕಿ ಅನುಭವ ಕಡ್ಡಾಯ: ಸುಪ್ರೀಂ

    ನಾರ್ಲಿಕರ್ ಅವರು ಜುಲೈ 19, 1938ರಂದು ಮಹಾರಾಷ್ಟ್ರದ(Maharashtra) ಕೊಲ್ಲಾಪುರದಲ್ಲಿ ಜನಿಸಿದ್ದರು. ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಆರಂಭಿಕ ಶಿಕ್ಷಣವನ್ನು ಪೂರ್ಣಗೊಳಿಸಿದ್ದರು. ನಾರ್ಲಿಕರ್ ಅವರ ತಂದೆ ವಿಷ್ಣು ವಾಸುದೇವ ನಾರ್ಲಿಕರ್(Vishnu Vasudeva Narlikar) ಅದೇ ವಿಶ್ವವಿದ್ಯಾಲಯದಲ್ಲಿ ಗಣಿತ ಪ್ರಾಧ್ಯಾಪಕರಾಗಿದ್ದರು. ಬಳಿಕ ನಾರ್ಲಿಕರ್ ಅವರು ಉನ್ನತ ವಿದ್ಯಾಭ್ಯಾಸಕ್ಕಾಗಿ ಕೇಂಬ್ರಿಡ್ಜ್‌ಗೆ ತೆರಳಿದ್ದರು. ಇದನ್ನೂ ಓದಿ: ಹಕ್ಕು ಪತ್ರ ನೀಡುವ ಮೂಲಕ ಆರನೇ ಗ್ಯಾರಂಟಿ ಜಾರಿ: ರಾಹುಲ್‌ ಗಾಂಧಿ

    ನಾರ್ಲಿಕರ್ ಅವರು ಟಾಟಾ ಇನ್ಸಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‌ಗೆ ಸೇರುವ ಉದ್ದೇಶದಿಂದ ಭಾರತಕ್ಕೆ ಮರಳಿದ್ದರು. 1988ರಿಂದ 2003ರವರೆಗೆ ವಿಶ್ವವಿದ್ಯಾಲಯ ಧನಸಹಾಯ ಆಯೋಗವು ಪ್ರಸ್ತಾವಿತ ಅಂತರ ವಿಶ್ವವಿದ್ಯಾಲಯ ಖಗೋಳವಿಜ್ಞಾನ ಮತ್ತು ಆಸ್ಟೋಫಿಸಿಕ್ಸ್ ಕೇಂದ್ರದಲ್ಲಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. ಇದನ್ನೂ ಓದಿ: ಅಮೃತಸರದ ಸ್ವರ್ಣ ಮಂದಿರದ ಆವರಣದೊಳಗೆ ವಾಯು ರಕ್ಷಣಾ ವ್ಯವಸ್ಥೆ ನಿಯೋಜನೆ

    ನಾರ್ಲಿಕರ್ ಅವರಿಗೆ 26 ವರ್ಷ ವಯಸ್ಸಿನಲ್ಲೇ ಪದ್ಮಭೂಷಣ, 2004ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಲಭಿಸಿತ್ತು. 2011ರಲ್ಲಿ, ಮಹಾರಾಷ್ಟ್ರ ಸರ್ಕಾರವು ನಾರ್ಲಿಕರ್ ಅವರಿಗೆ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಯಾದ ಮಹಾರಾಷ್ಟ್ರ ಭೂಷಣ ನೀಡಿ ಗೌರವಿಸಿತ್ತು.

  • 4 ದಿನದ ಮೊದಲೇ ಪಹಲ್ಗಾಮ್‌ನಿಂದ 7 ಕಿ.ಮೀ ದೂರದ ಜಾಗಕ್ಕೆ ಬಂದಿದ್ದ ಉಗ್ರರು

    4 ದಿನದ ಮೊದಲೇ ಪಹಲ್ಗಾಮ್‌ನಿಂದ 7 ಕಿ.ಮೀ ದೂರದ ಜಾಗಕ್ಕೆ ಬಂದಿದ್ದ ಉಗ್ರರು

    ನವದೆಹಲಿ: ಪಹಲ್ಗಾಮ್‌ನಲ್ಲಿ ದಾಳಿ (Pahalgam Terror Attack) ನಡೆಸಿದ ಉಗ್ರರು ಹಿಂದೆಯೇ ಬಂದು ನೆಲೆಸಿದ್ದರು ಎನ್ನುವುದಕ್ಕೆ ಪುಣೆ ಕುಟುಂಬವೊಂದರ (Pune Family) ರೀಲ್ಸ್‌ನಲ್ಲಿ ಸಾಕ್ಷಿ ಸಿಕ್ಕಿದೆ.

    ಪಹಲ್ಗಾಮ್‌ನಿಂದ ಏಳೂವರೆ ಕಿ.ಮೀ. ದೂರದ ಬೇತಾಬ್ ವ್ಯಾಲಿಯಲ್ಲಿ ಮಧ್ಯಾಹ್ನ 2:30ಕ್ಕೆ ಇಬ್ಬರು ಉಗ್ರರು ನಡೆದಾಡಿಕೊಂಡು ಹೋಗುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಪುಣೆ ವ್ಯಕ್ತಿ ಸಲ್ಲಿಸಿರುವ ವಿಡಿಯೋವನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಈಗ ಪರಿಶೀಲಿಸುತ್ತಿದ್ದಾರೆ.  ಇದನ್ನೂ ಓದಿ: ಉಗ್ರರ ದಾಳಿ ಹಿಂದೆ ಪಾಕ್, ಐಎಸ್‌ಐ ನಂಟು – ಪಾಕ್ ಪ್ಯಾರಾ ಕಮಾಂಡೋ ಆಗಿದ್ದ ಹಾಶೀಮ್ ಮೂಸಾ!

     

    ಪುಣೆಯ ಸಾಮಾಜಿಕ ಕಾರ್ಯಕರ್ತ ಶ್ರೀಜಿತ್ ರಮೇಶನ್ ಅವರು ಮಾತನಾಡಿ, ಏಪ್ರಿಲ್ 18ರಂದು ನಾವು ಪಹಲ್ಗಾಮ್‌ಗೆ ತೆರಳಿದ್ದೆವು. `ಮಿನಿ ಸ್ವಿಟ್ಜರ್‌ಲ್ಯಾಂಡ್’ ಬೈಸರನ್ ಬಳಿಕ ಪಹಲ್ಗಾಮ್‌ನಿಂದ ಏಳೂವರೆ ಕಿ.ಮೀ. ದೂರದ ಬೇತಾಬ್ ವ್ಯಾಲಿಗೆ ಹೋಗಿದ್ದೆವು. ಅಲ್ಲಿ ನನ್ನ 6 ವರ್ಷದ ಮಗಳು ರೀಲ್ಸ್ ಮಾಡುತ್ತಿದ್ದನ್ನು ನಾನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದೆ. ಪ್ರವಾಸ ಮುಗಿಸಿ ವಾಪಸ್ ಮನೆಗೆ ಬಂದಾ ಪಹಲ್ಗಾಮ್ ಉಗ್ರರ ದಾಳಿ ಬಗ್ಗೆ ತಿಳಿಯಿತು. ನಾಲ್ವರು ಉಗ್ರರ ಫೋಟೋ ಬಿಡುಗಡೆ ಮಾಡಿದ್ದನ್ನು ನೋಡಿದೆವು. ಆ ಫೋಟೋದಲ್ಲಿದ್ದ ಇಬ್ಬರ ಮುಖವನ್ನು ನೋಡಿದಂತೆ ಇದೆ. ನಮ್ಮ ರೀಲ್ಸ್‌ನಲ್ಲಿ ಹಿಂದುಗಡೆ ನಡೆದುಕೊಂಡು ಹೋಗುತ್ತಿದ್ದ ವಿಡಿಯೋಗೆ ಹೋಲಿಕೆ ಮಾಡಿದಾಗ ಸಾಮ್ಯತೆ ಕಂಡು ಬಂತು. ಹಾಗಾಗಿ ದೆಹಲಿ ಎನ್‌ಐಎಗೆ ವಿಡಿಯೋ ಕಳುಹಿಸಿಕೊಟ್ಟಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಉಗ್ರರು ಗುಂಡು ಹಾರಿಸುವ ಹೊತ್ತಲ್ಲಿ 3 ಬಾರಿ ‘ಅಲ್ಲಾಹು ಅಕ್ಬರ್‌’ ಅಂತ ಕೂಗಿದ ಜಿಪ್‌ಲೈನ್‌ ಆಪರೇಟರ್‌

  • ಪುಣೆ ಅತ್ಯಾಚಾರ ಕೇಸ್‌ – 75 ಗಂಟೆಗಳ ಬಳಿಕ ಕಾಮುಕ ಅರೆಸ್ಟ್‌

    ಪುಣೆ ಅತ್ಯಾಚಾರ ಕೇಸ್‌ – 75 ಗಂಟೆಗಳ ಬಳಿಕ ಕಾಮುಕ ಅರೆಸ್ಟ್‌

    ಮುಂಬೈ: ಮಹಾರಾಷ್ಟ್ರ ರಾಜ್ಯ ಸಾರಿಗೆ ಬಸ್ಸಿನಲ್ಲಿ 26 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ (Pune Rape Case) ಎಸಗಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಪುಣೆಯ ಗುನಾತ್ ಗ್ರಾಮದ ದತ್ತಾತ್ರಯ ರಾಮದಾಸ್ ಗಡೆ (37) ಎಂದು ಗುರುತಿಸಲಾಗಿದೆ. ಸುಮಾರು 75 ಗಂಟೆಗಳ ಕಾಲ ಆತನ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿ, ಶ್ರೀರೂರ್ ತಹಸಿಲ್‌ನಿಂದ ಆರೋಪಿಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಪುಣೆ ರೇಪ್‌ ಕೇಸ್‌ – ಬೇರೆ ಪ್ರಕರಣದಲ್ಲಿ ಜಾಮೀನಿನಲ್ಲಿದ್ದ ಕಾಮುಕ

    ಬಂಧಿತ ಆರೋಪಿ ಮಂಗಳವಾರ ಬೆಳಿಗ್ಗೆ ಪೊಲೀಸ್ ಠಾಣೆಯಿಂದ 100 ಮೀಟರ್ ದೂರದಲ್ಲಿದ್ದ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (MSRTC) ಸ್ವರ್ಗೇಟ್ ಬಸ್ ನಿಲ್ದಾಣದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ. ಆತ ಆರಂಭದಲ್ಲಿ ಮಹಳೆಯನ್ನು ಅಕ್ಕ ಎಂದು ಕರೆದು ಮಾತಾಡಿಸಿದ್ದ. ಬಳಿಕ ಸತಾರಾಕ್ಕೆ ಹೋಗುವ ಬಸ್ ಮತ್ತೊಂದು ಪ್ಲಾಟ್‌ಫಾರ್ಮ್‌ಗೆ ಬಂದಿದೆ ಎಂದು ಹೇಳಿ, ನಿಲ್ಲಿಸಿದ್ದ ಖಾಲಿ ಬಸ್‌ ಬಳಿ ಕರೆದೊಯ್ದಿದ್ದ. ಮಹಿಳೆ ಬಸ್ಸಿನೊಳಗೆ ಲೈಟ್‌ ಆನ್‌ ಇರದ ಕಾರಣ ಬಸ್‌ ಹತ್ತಲು ಹಿಂಜರಿದಿದ್ದಳು. ಈ ವೇಳೆ, ಇದೇ ಸರಿಯಾದ ಬಸ್‌ ಎಂದು ಹೇಳಿ ಒಳಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ.

    ಆರೋಪಿಯು ಹಲವಾರು ತಿಂಗಳುಗಳಿಂದ ಪೊಲೀಸರ ಸೋಗಿನಲ್ಲಿ ಓಡಾಡಿಕೊಂಡಿದ್ದ ಎಂದು ಹೇಳಲಾಗಿದೆ. ಆತನ ವಿರುದ್ಧ ಪುಣೆ ಮತ್ತು ಅಹಲ್ಯಾನಗರ ಜಿಲ್ಲೆಗಳಲ್ಲಿ ಕಳ್ಳತನ, ದರೋಡೆ ಮತ್ತು ಸರಗಳ್ಳತನದ ಪ್ರಕರಣಗಳಿವೆ. ಪ್ರಕರಣ ಒಂದರಲ್ಲಿ ಆತ 2019ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.

    ಆರೋಪಿಗಳನ್ನು ಬಂಧಿಸಲು ಮಹಾರಾಷ್ಟ್ರದಾದ್ಯಂತ ಒಟ್ಟು 13 ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿತ್ತು. ಶೋಧ ಕಾರ್ಯಾಚರಣೆಯ ಭಾಗವಾಗಿ ಸ್ನಿಫರ್ ಡಾಗ್ಸ್ ಮತ್ತು ಡ್ರೋನ್‌ಗಳನ್ನು ಸಹ ನಿಯೋಜಿಸಲಾಗಿತ್ತು. ಆರೋಪಿ ಇರುವಿಕೆಯ ಬಗ್ಗೆ ಮಾಹಿತಿ ನೀಡಿದವರಿಗೆ ಪುಣೆ ಪೊಲೀಸರು ಈ ಹಿಂದೆ 1 ಲಕ್ಷ ರೂ. ನಗದು ಬಹುಮಾನವನ್ನು ಸಹ ಘೋಷಿಸಲಾಗಿತ್ತು. ಇದನ್ನೂ ಓದಿ: Pune Bus Rape Case | ಅಕ್ಕ ಅಕ್ಕ ಅಂತ ಕರೆದವನೇ ಅತ್ಯಾಚಾರ ಮಾಡಿಬಿಟ್ಟ

  • ಪೊಲೀಸ್‌ ಠಾಣೆಗೆ 100 ಮೀಟರ್‌ ದೂರದಲ್ಲಿದ್ದ ಬಸ್‌ ನಿಲ್ದಾಣದಲ್ಲಿ ಮಹಿಳೆ ಮೇಲೆ ಅತ್ಯಾಚಾರ

    ಪೊಲೀಸ್‌ ಠಾಣೆಗೆ 100 ಮೀಟರ್‌ ದೂರದಲ್ಲಿದ್ದ ಬಸ್‌ ನಿಲ್ದಾಣದಲ್ಲಿ ಮಹಿಳೆ ಮೇಲೆ ಅತ್ಯಾಚಾರ

    ಪುಣೆ: ಪೊಲೀಸ್‌ ಠಾಣೆಗೆ ಕೇವಲ 100 ದೂರದಲ್ಲಿದ್ದ ಬಸ್‌ ನಿಲ್ದಾಣದಲ್ಲಿ ಬಸ್‌ನೊಳಗೆ ಯುವತಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ.

    ಬೆಳಗಿನ ಜಾವ ಪುಣೆಯ ಜನನಿಬಿಡ ಸ್ವರ್ಗೇಟ್‌ ಬಸ್‌ ನಿಲ್ದಾಣದಲ್ಲಿ 26 ವರ್ಷದ ಯುವತಿ ಮೇಲೆ ಅತ್ಯಾಚಾರ ನಡೆದಿದೆ. ಆರೋಪಿಯನ್ನು ದತ್ತಾತ್ರೇಯ ರಾಮದಾಸ್ ಎಂದು ಗುರುತಿಸಲಾಗಿದ್ದು, ಇನ್ನೂ ಬಂಧನ ಆಗಿಲ್ಲ. ಸಿಸಿಟಿವಿ ಫುಟೇಜ್‌ ಮೂಲಕ ಆತನನ್ನು ಗುರುತಿಸಲಾಗಿದೆ.

    ಆರೋಪಿ ಪತ್ತೆಹಚ್ಚಲು ಪೊಲೀಸರು ಎಂಟು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಶ್ವಾನ ಸ್ನಿಫರ್ ಘಟಕವನ್ನು ನಿಯೋಜಿಸಿದ್ದಾರೆ. 36 ವರ್ಷದ ರಾಮದಾಸ್ ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಆರೋಪಿ.

    ಸತಾರಾ ಜಿಲ್ಲೆಯ ಫಾಲ್ಟನ್ ಗ್ರಾಮಕ್ಕೆ ಪ್ರಯಾಣಿಸುತ್ತಿದ್ದ ಮನೆಕೆಲಸದ ಯುವತಿಯ ಮೇಲೆ ಅತ್ಯಾಚಾರ ನಡೆಸಿ ಬಳಿ ಬಸ್ ಅನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪೈಥಾನ್‌ಗೆ ತೆರಳು ಮುಂಜಾನೆ ಪ್ಲಾಟ್‌ಫಾರ್ಮ್‌ನಲ್ಲಿ ಕಾಯುತ್ತಿದ್ದೆ. ಆರೋಪಿಯು ನನ್ನ ಹತ್ತಿರ ಬಂದು ‘ಪೈಥಾನ್‌ಗೆ ಹೋಗುವ ಬಸ್‌ ಬಂದಿದೆ’ ಅಂತ ಹೇಳಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದ. ಆಗ ಇನ್ನೂ ಬೆಳಕಾಗಿರಲಿಲ್ಲ. ಅಲ್ಲಿ ನಿಂತಿದ್ದ ಬಸ್‌ಗೆ ನನ್ನನ್ನು ಹತ್ತಿಸಿ ಅವನೂ ಹತ್ತಿದ. ನಂತರ ನನ್ನ ಮೇಲೆ ಅತ್ಯಾಚಾರ ಎಸಗಿ ಪರಾರಿಯಾದ ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

  • ಟೆಂಪೊ, ಮಿನಿವ್ಯಾನ್, ಬಸ್ ನಡುವೆ ಭೀಕರ ಅಪಘಾತ – 9 ಮಂದಿ ಕಾರ್ಮಿಕರು ಸಾವು

    ಟೆಂಪೊ, ಮಿನಿವ್ಯಾನ್, ಬಸ್ ನಡುವೆ ಭೀಕರ ಅಪಘಾತ – 9 ಮಂದಿ ಕಾರ್ಮಿಕರು ಸಾವು

    – ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ದೇವೇಂದ್ರ ಫಡ್ನವಿಸ್

    ಮುಂಬೈ: ಟೆಂಪೊವೊಂದು (Tempo) ಮಿನಿವ್ಯಾನ್‌ಗೆ (Minivan) ಡಿಕ್ಕಿ ಹೊಡೆದ ಪರಿಣಾಮ ಮಿನಿವ್ಯಾನ್ ರಸ್ತೆಬದಿ ನಿಲ್ಲಿಸಿದ್ದ ಬಸ್‌ಗೆ ಡಿಕ್ಕಿ ಹೊಡೆದು 9 ಮಂದಿ ಕಾರ್ಮಿಕರು ಮೃತಪಟ್ಟ ಘಟನೆ ಪುಣೆ-ನಾಸಿಕ್ ಹೆದ್ದಾರಿಯಲ್ಲಿ ಶುಕ್ರವಾರ ನಡೆದಿದೆ.

    ಬೆಳಗ್ಗೆ 10 ಗಂಟೆಯ ಸುಮಾರಿಗೆ ಅಪಘಾತ ಸಂಭವಿಸಿದೆ.ಮಿನಿವ್ಯಾನ್ ನಾರಾಯಣಗಾಂವ್ (Narayangaon)  ಕಡೆಗೆ ತೆರಳುತ್ತಿದ್ದ ವೇಳೆ ಹಿಂದಿನಿಂದ ಟೆಂಪೊ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಮಿನಿವ್ಯಾನ್ ರಸ್ತೆ ಬದಿಯಲ್ಲಿದ್ದ ಖಾಲಿ ಬಸ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಮಿನಿವ್ಯಾನ್‌ನಲ್ಲಿದ್ದ 9 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಪುಣೆ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಪಂಕಜ್ ದೇಶಮುಖ್ ತಿಳಿಸಿದ್ದಾರೆ. ಇದನ್ನೂ ಓದಿ: 189 ಕ್ಷೇತ್ರಗಳ ಶಾಸಕರಿಗೆ ತಲಾ 10 ಕೋಟಿ ಅನುದಾನ ಬಿಡುಗಡೆ ಮಾಡಿದ ಸಿಎಂ

    ಇನ್ನು ಘಟನೆಯ ಬಗ್ಗೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಎಕ್ಸ್‌ನಲ್ಲಿ ಸಂತಾಪ ಸೂಚಿಸಿದ್ದಾರೆ. ಪುಣೆ-ನಾಸಿಕ್ ಹೆದ್ದಾರಿಯ ನಾರಾಯಣಗಾಂವ್ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ 9 ಕಾರ್ಮಿಕರು ಸಾವನ್ನಪ್ಪಿದ್ದು ದುರಾದೃಷ್ಟಕರ. ಅವರಿಗೆ ನನ್ನ ಸಂತಾಪ ಸಲ್ಲಿಸುತ್ತೇನೆ. ಅವರ ಕುಟುಂಬಗಳ ದುಃಖದಲ್ಲಿ ನಾವು ಭಾಗಿಯಾಗುತ್ತೇವೆ. ಅಲ್ಲದೇ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮೃತರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂ. ಆರ್ಥಿಕ ಸಹಾಯ ನೀಡಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ: Chhattisgarh| ನಕ್ಸಲರು ಅಡಗಿಸಿಟ್ಟಿದ್ದ ಐಇಡಿ ಸ್ಫೋಟ – ಇಬ್ಬರು ಭದ್ರತಾ ಸಿಬ್ಬಂದಿಗೆ ಗಾಯ

  • Pune | ಫುಟ್‌ಪಾತ್‌ನಲ್ಲಿ ಮಲಗಿದ್ದವರ ಮೇಲೆ ಹರಿದ ಟ್ರಕ್ – ಇಬ್ಬರು ಮಕ್ಕಳು ಸೇರಿ ಮೂವರ ದುರ್ಮರಣ

    Pune | ಫುಟ್‌ಪಾತ್‌ನಲ್ಲಿ ಮಲಗಿದ್ದವರ ಮೇಲೆ ಹರಿದ ಟ್ರಕ್ – ಇಬ್ಬರು ಮಕ್ಕಳು ಸೇರಿ ಮೂವರ ದುರ್ಮರಣ

    – 6 ಮಂದಿಗೆ ಗಾಯ, ಟ್ರಕ್ ಚಾಲಕ ಅರೆಸ್ಟ್

    ಪುಣೆ: ಕುಡಿದ ಮತ್ತಿನಲ್ಲಿ ಚಾಲಕ ಫುಟ್‌ಪಾತ್‌ನಲ್ಲಿ (Footpath) ಮಲಗಿದ್ದವರ ಮೇಲೆ ಟ್ರಕ್ (Truck) ಹರಿಸಿದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಪುಣೆಯಲ್ಲಿ (Pune) ಭಾನುವಾರ ತಡರಾತ್ರಿ ನಡೆದಿದೆ.

    ವಾಘೋಲಿಯಲ್ಲಿ ತಡರಾತ್ರಿ 12:30ರ ಸುಮಾರಿಗೆ ಟ್ರಕ್ ಚಾಲಕ ಫುಟ್‌ಪಾತ್‌ನಲ್ಲಿ ಮಲಗಿದ್ದ 9 ಕಾರ್ಮಿಕರ ಮೇಲೆ ಟ್ರಕ್ ಹರಿಸಿದ್ದಾನೆ. ಘಟನೆಯ ಪರಿಣಾಮ ಮೂವರು ಮೃತಪಟ್ಟಿದ್ದು, 6 ಮಂದಿ ಗಂಭಿರ ಗಾಯಗೊಂಡಿದ್ದಾರೆ. ಮೃತರನ್ನು ವೈಭವಿ ಪವಾರ್ (1), ವೈಭವ್ ಪವಾರ್ (2) ಮತ್ತು ವಿಶಾಲ್ ಪವಾರ್ (22) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಸಾಸೂನ್ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಸಾವನ್ನಪ್ಪಿದವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಾಸೂನ್ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: Uttar Pradesh | ಖಾಲಿಸ್ತಾನ್‌ ಕಮಾಂಡೋ ಫೋರ್ಸ್‌ನ ಮೂವರು ಭಯೋತ್ಪಾದಕರು ಎನ್‌ಕೌಂಟರ್‌

    ಮೃತರು ಹಾಗೂ ಗಾಯಾಳುಗಳೆಲ್ಲರೂ ಅಮರಾವತಿ ನಿವಾಸಿಗಳಾಗಿದ್ದು, ಕಟ್ಟಡ ನಿರ್ಮಾಣ ಕೆಲಸಕ್ಕಾಗಿ ಪುಣೆಗೆ ಬಂದಿದ್ದರು. ಘಟನಾ ಸ್ಥಳಕ್ಕೆ ಎಸಿಪಿ ಖಾಡೆ, ಎಸಿಪಿ ಸೋನವಾನೆ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಇನ್ನು ಪಾನಮತ್ತನಾಗಿ ಟ್ರಕ್ ಚಲಾಯಿಸಿದ ಚಾಲಕನನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ನಿರ್ದಾಕ್ಷಿಣ್ಯ ನರಹತ್ಯೆ ಪ್ರಕರಣ ದಾಖಲಿಸಲಾಗಿದೆ. ಪಿಐ ವಾಪೋನಿ ಪಂಡಿತ್ ರೆಜಿತ್ವಾಡ್ ನೇತೃತ್ವದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಹೊರರಾಜ್ಯದ ಯುವತಿಯರನ್ನ ಕರೆಸಿ ಬೆಂಗ್ಳೂರಲ್ಲಿ ಹೈಟೆಕ್ ವೇಶ್ಯವಾಟಿಕೆ ದಂಧೆ – ಆರೋಪಿ ಅಂದರ್‌

  • ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ವಲಸೆ ಹೆಚ್ಚಲಿದೆ – ನಾರಾಯಣಮೂರ್ತಿ ಆತಂಕ

    ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ವಲಸೆ ಹೆಚ್ಚಲಿದೆ – ನಾರಾಯಣಮೂರ್ತಿ ಆತಂಕ

    – ವಲಸೆ ತಡೆಗೆ ಕ್ರಮ ಕೈಗೊಳ್ಳಿ; ಸರ್ಕಾರಕ್ಕೆ ಸಲಹೆ

    ಪುಣೆ: ಹವಾಮಾನ ಬದಲಾವಣೆ (Climate Change) ಕಾರಣ ಮುಂಬರುವ ದಿನಗಳಲ್ಲಿ ಬೆಂಗಳೂರಿಗೆ (Bengaluru) ದೊಡ್ಡ ಪ್ರಮಾಣದ ವಲಸೆ ಇರಲಿದೆ ಎಂದು ಇನ್ಫೋಸಿಸ್‌ (Infosys) ಸಂಸ್ಥಾಪಕ ನಾರಾಯಣಮೂರ್ತಿ (Narayana Murthy) ಆತಂಕವನ್ನು ಹೊರಹಾಕಿದ್ದಾರೆ.

    ಪುಣೆಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಈ ವಲಸೆಗಳನ್ನು ತಪ್ಪಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

    ಭಾರತ ಸೇರಿ ಹಲವು ದೇಶಗಳಲ್ಲಿ ಇತ್ತೀಚಿಗೆ ದೊಡ್ಡ ಪ್ರಮಾಣದಲ್ಲಿ ಹವಾಮಾನ (Weather) ಬದಲಾಗುತ್ತಿದ್ದು ಉಷ್ಣಾಂಶದಲ್ಲಿ ಸಾಕಷ್ಟು ಏರಿಳಿತ ನೋಡುತ್ತಿದ್ದೇವೆ. ಮುಂದಿನ 2 ದಶಕಗಳಲ್ಲಿ ಕೆಲ ದೇಶಗಳು ಭಾರತದ ಕಡೆ ನೋಡುವ ಸಂಭವ ಇದೆ. ಬೆಂಗಳೂರು, ಹೈದರಾಬಾದ್, ಪುಣೆಗೆ ವಲಸೆ ಹೆಚ್ಚಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

     

    ಟ್ರಾಫಿಕ್ ಸಮಸ್ಯೆ, ಮಾಲಿನ್ಯದ ಕಾರಣ ಈ ನಗರಗಳ ಸ್ಥಿತಿ ಹದಗೆಡಬಹುದು. ಹೀಗಾಗಿ ವಲಸೆ ತಡೆಗೆ ಸರ್ಕಾರಗಳು ಅಗತ್ಯ ಕ್ರಮ ತೆಗದುಕೊಳ್ಳಬೇಕು ಎಂದು ಸಲಹೆ ನೀಡಿದರು.

    ನಾವು ಭಾರತದಲ್ಲಿ, ವಿಶೇಷವಾಗಿ ಕಾರ್ಪೊರೇಟ್ ಕಾರ್ಪೊರೇಟ್ ಜಗತ್ತು, ರಾಜಕಾರಣಿಗಳು ಮತ್ತು ಅಧಿಕಾರಿಗಳು ತಂಡದ ರೀತಿ ಒಟ್ಟಾಗಿ ಕೆಲಸ ಮಾಡಿದ್ದಲ್ಲಿ ಈ ಹವಾಮಾನ ಬದಲಾವಣೆಯ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

     

  • ಬೆಂಗಳೂರು – ಪುಣೆ ದಶಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅತಿ ಶೀಘ್ರ: ಟಿ.ಬಿ ಜಯಚಂದ್ರ

    ಬೆಂಗಳೂರು – ಪುಣೆ ದಶಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅತಿ ಶೀಘ್ರ: ಟಿ.ಬಿ ಜಯಚಂದ್ರ

    ತುಮಕೂರು: ಬೆಂಗಳೂರು- ಪುಣೆ ದಶಪಥ ರಾಷ್ಟ್ರೀಯ ಹೆದ್ದಾರಿ (Bengaluru-Pune Expressway) (ವಿಷನ್-47) ಕಾಮಗಾರಿ ಅತಿ ಶೀಘ್ರ ಪ್ರಾರಂಭವಾಗಲಿದ್ದು, ಇದರಿಂದಾಗಿ ಶಿರಾ ತಾಲೂಕಿನ ಚಿತ್ರಣವೇ ಬದಲಾಗುವುದು ಎಂದು ಶಾಸಕ ಟಿ.ಬಿ.ಜಯಚಂದ್ರ (TB Jayachandra) ಹೇಳಿದರು.

    ಶಿರಾ (Sira) ತಾಲೂಕಿನ ತೊಗರಗುಂಟೆ ಬಳಿ 25 ಕೋಟಿ ರೂ. ವೆಚ್ಚದಲ್ಲಿ ಶಿರಾ-ಅಮರಾಪುರ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ತಾಲೂಕಿನಲ್ಲಿ ಈಗಾಗಲೇ ಮೂರು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುತ್ತಿದ್ದು, ಶೀಘ್ರದಲ್ಲಿ ಬೆಂಗಳೂರು- ಪುಣೆ ಹೆದ್ದಾರಿ ಕಾಮಗಾರಿ ಪ್ರಾರಂಭವಾಗುವುದರಿಂದ ಒಟ್ಟು ನಾಲ್ಕು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುವುದರಿಂದ ಮುಂದಿನ ದಿನಗಳಲ್ಲಿ ತಾಲೂಕು ಅಭಿವೃದ್ಧಿಯತ್ತ ಸಾಗುವುದು ಎಂದರು. ಇದನ್ನೂ ಓದಿ: ತ್ರಾಸಿ ಬೀಚ್‌ನಲ್ಲಿ ಟೂರಿಸ್ಟ್ ಬೋಟ್ ಪಲ್ಟಿ – ರೈಡರ್ ಕಣ್ಮರೆ

    ಶಿರಾ- ಅಮರಾಪುರ ರಸ್ತೆ ಕಾಮಗಾರಿ ಸುಮಾರು 35 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿದೆ. ರಸ್ತೆ ಗುಣಮಟ್ಟಕ್ಕೆ ಆದ್ಯತೆ ನೀಡಿ ಹಣದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಹೆಚ್ಚು ಹಣ ಬೇಕಾದರೆ ನನಗೆ ಹೇಳಿ ಕೊಡಿಸಲಾಗುವುದು. ತಾಲೂಕಿನಲ್ಲಿ ನಾಲ್ಕು ಹೆದ್ದಾರಿಗಳು ಹಾದು ಹೋಗುತ್ತಿದ್ದು, ಇದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಇದನ್ನೂ ಓದಿ: Maharashtra | ನೂತನ ಸಚಿವರಿಗೆ ಖಾತೆ ಹಂಚಿಕೆ, ಗೃಹಖಾತೆ ತನ್ನಲ್ಲೇ ಉಳಿಸಿಕೊಂಡ ಬಿಜೆಪಿ – ಇಲ್ಲಿದೆ ಕಂಪ್ಲೀಟ್‌ ಲಿಸ್ಟ್‌!