Tag: ಪುಣೆ

  • ಬಿರು ಬೇಸಿಗೆಯಲ್ಲೂ ಕರೆಂಟ್ ಇಲ್ಲದೆ ಮ್ಯಾನೇಜ್ ಮಾಡ್ತೀನಿ- ಮಹಿಳಾ ಪ್ರೊಫೆಸರ್

    ಬಿರು ಬೇಸಿಗೆಯಲ್ಲೂ ಕರೆಂಟ್ ಇಲ್ಲದೆ ಮ್ಯಾನೇಜ್ ಮಾಡ್ತೀನಿ- ಮಹಿಳಾ ಪ್ರೊಫೆಸರ್

    – ನೈಸರ್ಗಿಕ ಪರಿಸರವೇ ನನ್ನ ಆಸ್ತಿ

    ಪುಣೆ: ಈ ಬಾರಿ ಬಿಸಿಲು ಸುಡುತ್ತಿದ್ದು, ವಿದ್ಯುತ್ ಇಲ್ಲದೇ ಇದ್ದರೆ ಹೇಗಪ್ಪ ನಗರದಲ್ಲಿ ಬದುಕುವುದು ಎಂದು ಕೆಲ ವ್ಯಕ್ತಿಗಳು ಹೇಳಿರುವುದನ್ನು ನೀವು ಕೇಳಿರಬಹುದು. ಆದರೆ ಮಹಾರಾಷ್ಟ್ರದ ಪುಣೆಯಲ್ಲಿ 79 ವರ್ಷದ ಮಹಿಳಾ ಪ್ರೊಫೆಸರ್ ಒಬ್ಬರು ವಿದ್ಯುತ್ ಇಲ್ಲದೆ ಜೀವನ ನಡೆಸುತ್ತೇನೆ ಎಂದು ಹೇಳುತ್ತಿದ್ದಾರೆ.

    ಹೌದು ಡಾ. ಹೇಮಾ ಅವರು ಪುಣೆಯ ಬುಧ್ವಾರ್ ಪೆತ್ ಎಂಬಲ್ಲಿ ಸಣ್ಣ ಗುಡಿಸಲಿನಲ್ಲಿ ವಾಸವಾಗಿದ್ದು, ಹುಟ್ಟಿದಾಗಿನಿಂದಲೂ ವಿದ್ಯುತ್ ಉಪಯೋಗಿಸಿಲ್ಲ. ಇವರು ಪುಣೆಯ ಸಾವಿತ್ರಿಭಾಯ್ ಪುಲೆ ವಿಶ್ವವಿದ್ಯಾಲಯದಲ್ಲಿ ಪಿಎಚ್‍ಡಿ ಪದವಿ ಪಡೆದಿದ್ದು ಆ ಬಳಿಕ ಹಲವಾರು ವರ್ಷ ಪುಣೆಯ ಗರ್ವಾರೆ ಕಾಲೇಜಿನಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿದ್ದರು.

    ಆಹಾರ, ಆಶ್ರಯ ಹಾಗೂ ಬಟ್ಟೆ ಮನುಷ್ಯನಿಗೆ ಬೇಕಾದ ಮೂಲಭೂತ ಅಗತ್ಯತೆಗಳು. ಒಂದು ಕಾಲದಲ್ಲಿ ವಿದ್ಯುತ್ ಇರಲೇ ಇಲ್ಲ. ನಾನು ಹುಟ್ಟಿ ಹಲವು ವರ್ಷಗಳ ಬಳಿಕ ವಿದ್ಯುತ್ ಬಂದಿದ್ದು, ಹೀಗಾಗಿ ಇದೀಗ ವಿದ್ಯುತ್ ಇಲ್ಲದೇ ಜೀವನ ನಡೆಸಬಲ್ಲೆನು ಎಂದು ಧೈರ್ಯವಾಗಿ ಹೇಳುತ್ತಿದ್ದಾರೆ.

    ವಿದ್ಯುತ್ ಬೇಡ ಯಾಕೆ?
    ಪರಿಸರದ ಮೇಲಿನ ಪ್ರೀತಿಯಿಂದ ನಾನು ವಿದ್ಯುತ್ ಬಳಕೆ ಮಾಡಲ್ಲ. ನಾಯಿ, 2 ಬೆಕ್ಕು ಹಾಗೂ ಪಕ್ಷಿಗಳೇ ನನ್ನ ಆಸ್ತಿ. ಇವುಗಳನ್ನು ನೋಡಿಕೊಳ್ಳುವುದಕ್ಕಾಗಿಯೇ ನಾನಿಲ್ಲಿದ್ದೇನೆ. ಜನ ನನ್ನ ಮೂರ್ಖಳು ಎಂದು ಕರೆಯಬಹುದು. ಅಥವಾ ಹುಚ್ಚಿ ಅಂದರೂ ನನಗೆ ಬೇಜಾರಿಲ್ಲ. ಇದು ನನ್ನ ಜೀವನವಾಗಿದೆ. ನಾನು ಇಷ್ಟಪಟ್ಟಂತೆ ಇಲ್ಲಿ ಬದುಕುತ್ತಿದ್ದೇನೆ ಎಂದು ಪ್ರೊಫೆಸರ್ ಹೇಳಿದ್ದಾರೆ.

    ಇವರ ಮನೆಯ ಸುತ್ತಲೂ ವಿವಿಧ ರೀತಿಯ ಮರಗಳಿದ್ದು, ಹಲವು ಬಗೆಯ ಪಕ್ಷಿಗಳು ಹಾರಾಡುತ್ತಿವೆ. ಹಕ್ಕಿಗಳ ಬೆಳಗ್ಗಿನ ಕಲರವದಿಂದಲೇ ಇವರ ಜೀವನ ಆರಂಭವಾಗುತ್ತಿದ್ದು, ಆಕಾಶದಲ್ಲಿ ನಕ್ಷತ್ರಗಳನ್ನು ನೋಡುವ ಮೂಲಕ ದಿನ ಕೊನೆಯಾಗುತ್ತದೆ. ಇವರು ಪರಿಸರಕ್ಕೆ ಸಂಬಂಧಿಸಿದಂತೆ ಹಲವು ಪುಸ್ತಕಗಳನ್ನು ಬರೆದಿದ್ದು, ಎಲ್ಲವೂ ಮಾರುಕಟ್ಟೆಯಲ್ಲಿ ಸಿಗುತ್ತಿವೆ. ಇವತ್ತಿಗೂ ಅವರು ಪುಸ್ತಕಗಳನ್ನು ಬರೆಯುತ್ತಿದ್ದಾರೆ.

    ನನಗೆ ನನ್ನ ಜೀವನದಲ್ಲಿ ಒಮ್ಮೆಯೂ ವಿದ್ಯುತ್ ಬೇಕು ಅನ್ನಿಸಿಲ್ಲ. ಎಲೆಕ್ಟ್ರಿಸಿಟಿ ಇಲ್ಲದೇ ಹೇಗೆ ಜೀವನ ಮಾಡ್ತೀಯಾ ಎಂದು ಹಲವು ಮಂದಿ ನನ್ನನ್ನು ಪ್ರಶ್ನಿಸಿದ್ದಾರೆ. ಆಗ ನಾನು ಜೀವನ ಮಾಡಲು ಕರೆಂಟ್ ಯಾಕೆ ಬೇಕು ಎಂದು ಮರುಪ್ರಶ್ನೆ ಹಾಕುತ್ತಿದ್ದೆ. ಪಕ್ಷಿಗಳೇ ನನ್ನ ಗೆಳೆಯರು. ನಾನು ಮನೆ ಕೆಲಸ ಮಾಡುವಾಗ ಅವುಗಳು ಕೂಡ ಬರುತ್ತವೆ. ನೀವು ಯಾಕೆ ಈ ಮನೆ ಮಾರುತ್ತಿಲ್ಲ. ಮಾರಿದ್ರೆ ನಿಮ್ಮ ತುಂಬಾ ಹಣ ಬರಬಹುದು ಅಲ್ಲವೇ ಎಂದು ಹಲವು ಮಂದಿ ನನ್ನ ಕೇಳಿದ್ದರು. ನಾನು ಮನೆ ಮಾರಿದ್ರೆ ಮರ ಹಾಗೂ ನನ್ನ ಮರ ಹಾಗೂ ಪಕ್ಷಿಗಳನ್ನು ಯಾರು ನೋಡಿಕೊಳ್ಳುತ್ತಾರೆ. ಹೀಗಾಗಿ ನಾನು ಎಲ್ಲಗೂ ಹೋಗುವುದಿಲ್ಲ. ಇವುಗಳ ಜೊತೆಯೇ ವಾಸ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.

     

  • ಅಂತರ್ಜಾತಿ ವಿವಾಹವಾಗಿದ್ದಕ್ಕೆ ಗರ್ಭಿಣಿ ಮಗಳನ್ನೇ ಕೊಂದ್ರು!

    ಅಂತರ್ಜಾತಿ ವಿವಾಹವಾಗಿದ್ದಕ್ಕೆ ಗರ್ಭಿಣಿ ಮಗಳನ್ನೇ ಕೊಂದ್ರು!

    – ಸಾವು-ಬದುಕಿನಲ್ಲಿ ಪತಿ ಹೋರಾಟ!

    ಪುಣೆ: ಅಂತರ್ಜಾತಿ ವಿವಾಹವಾದರೆಂದು 2 ತಿಂಗಳ ಗರ್ಭಿಣಿ ಮಗಳು ಹಾಗೂ ಆಕೆಯ ಪತಿಗೆ ಅಪ್ಪ ಸೇರಿ ಕುಟುಂಬಸ್ಥರೇ ಬೆಂಕಿ ಹಚ್ಚಿದ ಆಘಾತಕಾರಿ ಘಟನೆಯೊಂದು ಪುಣೆಯ ಅಹಮ್ಮದ್ ನಗರ ಜಿಲ್ಲೆಯಲ್ಲಿ ಮೇ 1ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

    ಮೃತ ದುರ್ದೈವಿಯನ್ನು 19 ವರ್ಷದ ರುಕ್ಮಿಣಿ ಎಂದು ಗುರುತಿಸಲಾಗಿದ್ದು, ಬೆಂಕಿಯಿಟ್ಟ ಪರಿಣಾಮ ಈಕೆಯ ದೇಹ ಶೇ.70ರಷ್ಟು ಸುಟ್ಟು ಹೋಗಿತ್ತು. ಕೂಡಲೇ ಆಕೆಯನ್ನು ಜನರಲ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಕಳೆದ ಶನಿವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಈಕೆಯ ಪತಿ ಮಂಗೇಶ್ ರಣ್‍ಸಿಂಗ್ ದೇಹಕ್ಕೆ ಶೇ.50ರಷ್ಟು ಹಾನಿಯಾಗಿದ್ದು, ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಅಹಮ್ಮದ್ ನಗರ ಪಟ್ಟಣದಿಂದ 55 ಕಿ.ಮೀ ದೂರದ ಪರ್ನಾರ್ ತಾಲೂಕಿನ ನಿಘೋಜಿ ಎಂಬ ಗ್ರಾಮದಲ್ಲಿ ಮೇ 1ರಂದು ಮಧ್ಯಾಹ್ನ ಬಳಿಕ ಈ ಘಟನೆ ನಡೆದಿದೆ. ಸದ್ಯ ದಂಪತಿ ಚಿಕಿತ್ಸೆ ಪಡೆಯುತ್ತಿರುವ ಸಂದರ್ಭದಲ್ಲಿ ನೀಡಿದ ಹೇಳಿಕೆ ಮೇರೆಗೆ ಪೊಲೀಸರು ತನಿಖೆ ಆರಂಭಿಸಿರುವುದಾಗಿ ಅಹಮ್ಮದ್ ನಗರ ಪೊಲೀಸರು ಹೇಳಿದ್ದಾರೆ.

    ಘಟನೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ರುಕ್ಮಿಣಿ ಚಿಕ್ಕಪ್ಪನನ್ನು ಬಂಧಿಸಿದ್ದಾರೆ. ಮಗಳು ತೀರಿಕೊಂಡ ಸುದ್ದಿ ತಿಳಿಯುತ್ತಿದ್ದಂತೆಯೇ ತಂದೆ ರಾಮಭಾರ್ತಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಹೀಗಾಗಿ ಆತನ ಪತ್ತೆಗೆ ಸುರೇಂದ್ರ ಹಾಗೂ ಘನಶ್ಯಾಮ್ ಪೊಲೀಸ್ ತಂಡ ಬಲೆ ಬೀಸಿದೆ.

    ಘಟನೆ ವಿವರ:
    ರುಕ್ಮಿಣಿ ಮೂಲತಃ ಉತ್ತರಪ್ರದೇಶದವಾಗಿದ್ದು, ನಿಘೋಜಿಯಲ್ಲಿ ವಾಸವಾಗಿದ್ದರು. ಮಂಗೇಶ್ ಲಾಹೋರ್ ಸಮುದಾಯಕ್ಕೆ ಸೇರಿದರೆ, ರುಕ್ಮಿಣಿ ಪಾಸಿ ಸಮುದಾಯದವಳಾಗಿದ್ದಾರೆ. ಕಳೆದ ವರ್ಷದ ದೀಪಾವಳಿ ಸಮಯದಲ್ಲಿ ಇವರಿಬ್ಬರ ಮಧ್ಯೆ ಪ್ರೇಮಾಂಕುರವಾಗಿದೆ. ಈ ವಿಚಾರ ಇಬ್ಬರ ಕುಟುಂಬದವರಿಗೆ ತಿಳಿದು ಪ್ರೀತಿಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಮಧ್ಯೆಯೇ ಇಬ್ಬರು ಪುಣೆಯ ಅಲಂದಿಯಲ್ಲಿ ಮದುವೆಯಾದರು. ಈ ಕಾರ್ಯಕ್ರಮಕ್ಕೆ ಮಂಗೇಶ್ ಕುಟುಂಬಸ್ಥರೆಲ್ಲರೂ ಭಾಗವಹಿಸಿದ್ದರೆ, ರುಕ್ಮಿಣಿ ತಾಯಿ ಮಾತ್ರ ಬಂದಿದ್ದರು. ಇವರಿಬ್ಬರು ಮದುವೆಯಾದ ಬಳಿಕ ರುಕ್ಮಿಣಿ ಕುಟುಂಬದವರು ಜೀವ ಬೆದರಿಕೆ ಹಾಕಲು ಆರಂಭಿಸಿದ್ದಾರೆ ಎಂದು ಸಬ್ ಇನ್ಸ್ ಪೆಕ್ಟರ್ ವಿಜಯ್ ಕುಮಾರ್ ಬೋತ್ರೆ ವಿವರಿಸಿದರು.

    ಮದುವೆಯ ಬಳಿಕ ಚೆನ್ನಾಗಿಯೇ ಇದ್ದ ದಂಪತಿ ಏಪ್ರಿಲ್ 30ರಂದು ಇಬ್ಬರ ಮಧ್ಯೆ ಕ್ಲುಲ್ಲಕ ವಿಚಾರವೊಂದಕ್ಕೆ ಜಗಳವಾಗಿದೆ. ಇದರಿಂದ ನೊಂದ ರುಕ್ಮಿಣಿ ಪತಿಯನ್ನು ಬಿಟ್ಟು ತಂದೆ ಮನೆಗೆ ಬಂದಿದ್ದರು. ಬಂದ ಮರುದಿನ ಅಂದರೆ ಮೇ 1 ರಂದು ರುಕ್ಮಿಣಿಗೆ ಕರೆ ಮಾಡಿದ ಮಂಗೇಶ್, ಮನೆಗೆ ಬರುವಂತೆ ಹೇಳಿದ್ದಾರೆ. ಅಲ್ಲದೆ ಪತ್ನಿಯನ್ನು ಕರೆದೊಯ್ಯಲು ಮಾವನ ಮನೆಗೆ ಬಂದಿದ್ದಾರೆ. ಈ ವೇಳೆ ರುಕ್ಮಿಣಿ ಕುಟುಂಬದವರು ಆಕೆಯನ್ನು ಕಳುಹಿಸಿಕೊಡಲು ಒಪ್ಪಲಿಲ್ಲ. ಇದರಿಂದ ಅಲ್ಲಿ ಮಂಗೇಶ್ ಹಾಗೂ ರುಕ್ಮಿಣಿ ಕುಟುಂಬಸ್ಥರ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಪರಿಣಾಮ ಮಧ್ಯಾಹ್ನ ಬಳಿಕ ಮಾತಿನ ಚಕಮಕಿ ತಾರಕಕ್ಕೇರಿ, ರುಕ್ಮಿಣಿಯ ಇಬ್ಬರು ಚಿಕ್ಕಪ್ಪಂದಿರು ಬಂದು ಇಬ್ಬರನ್ನೂ ರೂಮಿನಲ್ಲಿ ಕೂಡಿ ಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಈ ವೇಳೆ ರುಕ್ಮಿಣಿ ತಂದೆ ಹೊರಗಡೆಯಿಂದ ಬಾಗಿಲು ಲಾಕ್ ಮಾಡಿದ್ದಾರೆ ಎಂದು ಪಿಎಸ್‍ಐ ಘಟನೆ ಬಗ್ಗೆ ವಿವರಣೆ ನೀಡಿದ್ದಾರೆ.

    ಘಟನೆಯಿಂದ ನೋವು ತಾಳಲಾರದೇ ದಂಪತಿ ಕಿರುಚಿಕೊಳ್ಳುತ್ತಿರುವುದು ನೆರೆಮನೆಯವರ ಕಿವಿಗೆ ಬಿದ್ದಿದೆ. ಕೂಡಲೇ ಅವರು ಘಟನಾ ಸ್ಥಳಕ್ಕೆ ತೆರಳಿ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ರುಕ್ಮಿಣಿ ಸಾವನ್ನಪ್ಪಿದ್ದು, ಮಂಗೇಶ್ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ ಎಂಬುದಾಗಿ ಅವರು ಮಾಹಿತಿ ನೀಡಿದ್ದಾರೆ.

  • 13 ಸಾವಿರ ಅಡಿ ಎತ್ತರದಿಂದ ಜಿಗಿದು ಅವಳಿ ಮಕ್ಕಳಿಂದ ಹುಟ್ಟುಹಬ್ಬ ಆಚರಣೆ

    13 ಸಾವಿರ ಅಡಿ ಎತ್ತರದಿಂದ ಜಿಗಿದು ಅವಳಿ ಮಕ್ಕಳಿಂದ ಹುಟ್ಟುಹಬ್ಬ ಆಚರಣೆ

    ಪುಣೆ: 10 ವರ್ಷದ ಅವಳಿ ಸಹೋದರರು ತಮ್ಮ ತಂದೆ – ತಾಯಿ ಜೊತೆ ಸೇರಿ 13 ಸಾವಿರ ಅಡಿ ಎತ್ತರದಿಂದ ಜಿಗಿದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

    ಅವಳಿ ಮಕ್ಕಳಾದ ವೈಷ್ಣವ್ ಹಾಗೂ ವೃಷಭ್ ತನ್ನ ತಂದೆ ವೈಭವ್ ರಾಣೆ ಮತ್ತು ಶೀತಲ್ ಮಹಾಜನ್ ಅವರ ಜೊತೆ ಆಂಸ್ಟಡ್ರ್ಯಾಮ್‍ನಲ್ಲಿ 13,000 ಅಡಿ ಎತ್ತರದಿಂದ ಜಿಗಿದು ವಿಭಿನ್ನವಾಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

    ವೈಶ್ಣವ್ ಹಾಗೂ ವೈಶಭ್‍ಗೆ ತಮ್ಮ 10ನೇ ವರ್ಷದ ಹುಟ್ಟುಹಬ್ಬ ತನ್ನ ಪೋಷಕರ ಜೊತೆ ಸ್ಕೈಡೈವಿಂಗ್ ಮಾಡುವ ಮೂಲಕ ವಿಶೇಷವಾಗಿ ಆಚರಿಸಬೇಕು ಎಂದು ಕನಸು ಕಂಡಿದ್ದರು. ಹಾಗೆಯೇ ಈ ಕುಟುಂಬ ಏಪ್ರಿಲ್ 26ರಂದು ಆಂಸ್ಟಡ್ರ್ಯಾಮ್‍ಗೆ ಹೋಗಿ ಸೂಪರ್ ಕಾರವನ್ 206 ವಿಮಾನದಿಂದ ಸ್ಕೈಡೈವಿಂಗ್ ಮಾಡಿದೆ.

    ಶೀತಲ್ ಹಾಗೂ ವೈಭವ್ ವೃತ್ತಿಪರ ಸ್ಕೈಡೈವರ್ ಗಳಾಗಿದ್ದು, ಶೀತಲ್ ಒಟ್ಟು 740 ಸ್ಕೈಡೈವಿಂಗ್ ಮಾಡಿದರೆ, ವೈಭವ್ 58 ಸ್ಕೈಡೈವಿಂಗ್ ಮಾಡಿದ್ದಾರೆ. ಅತಿ ಚಿಕ್ಕವಯಸ್ಸಿನಲ್ಲಿ ಅವಳಿ ಮಕ್ಕಳು ಸ್ಕೈಡೈವಿಂಗ್ ಮಾಡಿರುವುದು ರಾಷ್ಟ್ರೀಯ ಮಟ್ಟದಲ್ಲಿ ದಾಖಲೆ ಆಗಬೇಕು ಎಂದು ಶೀತಲ್ ಅವರ ಕುಟುಂಬ ಅಭಿಪ್ರಾಯ ವ್ಯಕ್ತಪಡಿಸಿದೆ.

    ಏಪ್ರಿಲ್ 26ರಂದು ನಮ್ಮ ಮಕ್ಕಳು ತಮ್ಮ 10ನೇ ವರ್ಷದ ಹುಟ್ಟುಹಬ್ಬವನ್ನು ಸ್ಕೈಡೈವಿಂಗ್ ಮಾಡುವ ಮೂಲಕ ಆಚರಿಸಿಕೊಳ್ಳಬೇಕು ಎಂದು ಇಚ್ಛಿಸಿದ್ದರು. ಅವರ ಆಸೆಯನ್ನು ಪೂರೈಸಲು ನಾವು ಕಳೆದ ವಾರ ಜೊತೆ ಆಂಸ್ಟಡ್ರ್ಯಾಮ್‍ಗೆ ಬಂದು ಸ್ಕೈಡೈವಿಂಗ್ ಮಾಡಿದ್ದೇವೆ ಎಂದು ತಂದೆ ವೈಭವ್ ತಿಳಿಸಿದ್ದಾರೆ.

    ಏಪ್ರಿಲ್ 18, 2004ರಂದು ಶೀತಲ್ ಯಾವುದೇ ತರಬೇತಿ ಪಡೆಯದೇ ಮೈನಸ್ 37 ಡಿಗ್ರಿ ಸೆಲ್ಸಿಯಸ್‍ನಲ್ಲಿ 2,700 ಅಡಿ ಎತ್ತರದಿಂದ ಜಿಗಿದು ಮೊದಲ ಸ್ಕೈಡೈವಿಂಗ್ ಮಾಡಿದ್ದರು. ಸದ್ಯ ಶೀತಲ್ 17 ರಾಷ್ಟ್ರೀಯ ದಾಖಲೆ ಹಾಗೂ 6 ವಿಶ್ವ ದಾಖಲೆಯನ್ನು ಮಾಡಿದ್ದಾರೆ.

  • ಬೆಂಕಿಗೆ 5 ಚಿರತೆ ಮರಿಗಳು ಸಜೀವ ದಹನ!

    ಬೆಂಕಿಗೆ 5 ಚಿರತೆ ಮರಿಗಳು ಸಜೀವ ದಹನ!

    ಪುಣೆ: ಮಹಾರಾಷ್ಟ್ರದ ಗಾಮವೊಂದರ ಕಬ್ಬಿನ ಗದ್ದೆಯಲ್ಲಿ ಹಾವನ್ನು ಸಾಯಿಸಲು ಹಚ್ಚಿದ್ದ ಬೆಂಕಿಯಲ್ಲಿ 5 ಚಿರತೆ ಮರಿಗಳು ಸುಟ್ಟು ಸಜೀವ ದಹನವಾಗಿದೆ. ಪುಣೆಯ ಅಂಬೆಗಾಂವ್ ತಾಲೂಕಿನ ಗವಡೆವಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

    ಬುಧವಾರ ಕಬ್ಬು ಕಟಾವು ಕಾರ್ಯ ನಡೆಸುತ್ತಿದ್ದ ವೇಳೆ ಗದ್ದೆಯಲ್ಲಿ ಒಟ್ಟು ಮಾಡಿಟ್ಟಿದ್ದ ಕಸದ ರಾಶಿ ಬಳಿ ವಿಷಕಾರಿ ಹಾವು ಕಂಡುಬಂದಿದ್ದು, ಭಯಗೊಂಡ ರೈತರು ಕಸಕ್ಕೆ ಬೆಂಕಿ ಹಚ್ಚಿದ್ದಾರೆ.

    ಕಸಕ್ಕೆ ಹಚ್ಚಿದ್ದ ಬೆಂಕಿ ಪಕ್ಕದಲ್ಲೇ ಇದ್ದ ಪೊದೆಗೂ ತಗುಲಿದೆ. ಪರಿಣಾಮ ಅದರಲ್ಲಿ ಮಲಗಿದ್ದ ಮೂರು ಹೆಣ್ಣು ಮತ್ತು ಎರಡು ಗಂಡು ಚಿರತೆ ಮರಿಗಳು ಬೆಂಕಿಗೆ ಸುಟ್ಟು ಸಾವನ್ನಪ್ಪಿವೆ.

    ಕಾಡಿನ ಸಮೀಪದಲ್ಲಿ ಈ ಕಬ್ಬಿನ ಗದ್ದೆ ಇರುವ ಕಾರಣಕ್ಕೆ ಕಳೆದ ಮೂರು ವಾರಗಳ ಹಿಂದೆ ಚಿರತೆ ಮರಿಗಳು ಜನಿಸಿರಬಹುದು. ಚಿರತೆ ಮರಿಗಳು ಪೊದೆಯಲ್ಲಿದ್ದ ವಿಚಾರ ಗ್ರಾಮಸ್ಥರಿಗೆ ತಿಳಿದಿರಲಿಲ್ಲ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

    ಈ ಮರಿಗಳಿಗಾಗಿ ತಾಯಿ ಚಿರತೆ ಹುಡುಕಿ ಬರುವ ಸಾಧ್ಯತೆ ಇದ್ದು, ಸುತ್ತಮುತ್ತಲಿನ ಜನರಿಗೆ ಜಾಗ್ರತೆಯಿಂದ ಇರುವಂತೆ ಅರಣ್ಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

  • ಬೆಂಗ್ಳೂರು-ಪುಣೆ ನಡುವೆ ಅನುಮಾನಾಸ್ಪದ ಕಾರು ಓಡಾಟ.!

    ಬೆಂಗ್ಳೂರು-ಪುಣೆ ನಡುವೆ ಅನುಮಾನಾಸ್ಪದ ಕಾರು ಓಡಾಟ.!

    ನವದೆಹಲಿ: ಬೆಂಗಳೂರು ಹಾಗೂ ಪುಣೆ ನಡುವೆ ಅನುಮಾನಾಸ್ಪದವಾಗಿ ಕಾರೊಂದು ಓಡಾಡುತ್ತಿರುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ರವಾನಿಸಿದ್ದು, ನಗರದಲ್ಲಿ ಕಟ್ಟೆಚ್ಚರ ವಹಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ.

    ಈ ಕಾರು ಮಾಚ್ 1 ರಂದು ಪುಣೆ ಸುತ್ತಮುತ್ತ ಅನುಮಾನಾಸ್ಪದವಾಗಿ ಓಡಾಟ ಮಾಡಿದ್ದು, ಇದೀಗ ಬೆಂಗಳೂರಿನತ್ತ ತೆರಳಿದೆ ಅನ್ನೋ ಮಾಹಿತಿ ಲಭಿಸಿದೆ. ಹೀಗಾಗಿ ಇಲ್ಲಿನ ಪೊಲೀಸರಿಗೆ ಕಟ್ಟೆಚ್ಚರ ವಹಿಸುವಂತೆ ಸೂಚನೆಯನ್ನು ಗುಪ್ತಚರ ಇಲಾಖೆ ನೀಡಿದೆ.

    ಟೊಯೋಟಾ ಇನ್ನೋವಾ ಕಾರಿನಲ್ಲಿ 6 ಮಂದಿ ಇದ್ದಾರೆ. ಈ ಕಾರಿಗೆ ಪೊಲೀಸ್ ಲಾಂಛನ ಇರುವ ಬಗ್ಗೆಯೂ ಮಾಹಿತಿ ಇದೆ. ಮುಂಬೈ ಪೊಲೀಸರಿಗೂ ಅನುಮಾನಾಸ್ಪದ ವಾಹನ ಹಾಗೂ ವ್ಯಕ್ತಿಗಳ ಬಗ್ಗೆ ಮಾಹಿತಿ ರವಾನಿಸಲಾಗಿದ್ದು, ಅಲ್ಲಿಯೂ ಕೂಡ ಬಿಗಿ ಭದ್ರತೆ ಕೈಗೊಳ್ಳುವಂತೆ ಸೂಚಿಸಲಾಗಿದೆ.

    ಮಹಾರಾಷ್ಟ್ರ ನೋಂದಣಿ ಇರುವ ಈ ಕಾರು ಪುಣೆಯ ಡಿಆರ್ ಡಿಒ ಕಾಂಪ್ಲೆಕ್ಸ್ ನಲ್ಲಿ ಕಾಣಿಸಿಕೊಂಡಿತ್ತು. ಬಳಿಕ ಅಲ್ಲಿಂದ ಬೆಂಗಳೂರಿಗೆ ಹೊರಟಿರುವ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಮುಂಬೈ- ಪುಣೆ ಹಾಗೂ ಬೆಂಗಳೂರು ಈ ಮೂರು ನಗರಗಳಲ್ಲಿ ಏನಾದ್ರೂ ಅನಾಹುತ ಸಂಭವಿಸುವ ಮೊದಲೇ ಬಿಗಿ ಭದ್ರತೆ ಕೈಗೊಳ್ಳಿ ಎಂದು ಗುಪ್ತಚರ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದ ಅಮೇರಿಕ ಡಿಜೆ ಮಾರ್ಷ್ ಮೆಲ್ಲೋ

    ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದ ಅಮೇರಿಕ ಡಿಜೆ ಮಾರ್ಷ್ ಮೆಲ್ಲೋ

    ಪುಣೆ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಅಮೇರಿಕದ ಸಂಗೀತ ನಿರ್ಮಾಪಕ ಹಾಗೂ ಖ್ಯಾತ ಡಿಜೆ ಮಾರ್ಷ್ ಮೆಲ್ಲೋ ಅವರು ತಮ್ಮ ಸಂಗೀತ ಕಾರ್ಯಕ್ರಮದಲ್ಲಿ ಮೌನಾಚರಣೆ ಮಾಡುವ ಮೂಲಕ ನಮನವನ್ನು ಸಲ್ಲಿಸಿದ್ದಾರೆ.

    ಭಾನುವಾರದಂದು ಪುಣೆಯಲ್ಲಿ ನಡೆದ ವಿಎಚ್1 ಸೂಪರ್‍ಸೋನಿಕ್ 2019ರ ಸಂಗೀತ ಕಾರ್ಯಕ್ರಮಕ್ಕೆ ಮಾರ್ಷ್ ಮೆಲ್ಲೋ ಆಗಮಿಸಿದ್ದರು. ಈ ವೇಳೆ ತಮ್ಮ ಡಿಜೆ ಕಾರ್ಯಕ್ರಮವನ್ನು ಆರಂಭಿಸುವ ಮುನ್ನ ಪುಲ್ವಾಮ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಆತ್ಮಕ್ಕೆ ಶಾಂತಿ ಸಿಗಲೆಂದು 2 ನಿಮಿಷ ಮೌನಾಚರಣೆ ಮಾಡಿ ವೀರರಿಗೆ ನಮನ ಸಲ್ಲಿಸಿದ್ದಾರೆ.

    ಅಷ್ಟೇ ಅಲ್ಲದೇ ಪುಲ್ವಾಮ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ನನ್ನ ನಮನ ಎಂದು ಬರೆದು ಮಾರ್ಷ್ ಮೆಲ್ಲೋ ಅವರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

    ಈ ಸಂಗೀತ ಕಾರ್ಯಕ್ರಮದಲ್ಲಿ ಸಾಕಷ್ಟು ಸ್ವದೇಶಿ ಕಲಾವಿದರು ತಮ್ಮ ಸಂಗೀತ ಕಾರ್ಯಕ್ರಮ ನೀಡಿದರು. ಆದರೇ ಯಾರು ಕೂಡ ಪುಲ್ವಾಮ ದಾಳಿಯನ್ನು ನೆನೆಪಿಸಿಕೊಳ್ಳಲಿಲ್ಲ. ವಿದೇಶಿ ಕಲಾವಿದರಾದರೂ ಮಾರ್ಷ್ ಮೆಲ್ಲೋ ಅವರು ಭಾರತದ ವೀರ ಯೋಧರಿಗೆ ನಮನ ಸಲ್ಲಿಸಿ ಅಭಿಮಾನಿಗಳ ಮನ ಗೆದ್ದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 2 ವರ್ಷದ ಮಗನ ಕೊಂದು ಪೇದೆ ಪತ್ನಿ ಆತ್ಮಹತ್ಯೆಗೆ ಶರಣು!

    2 ವರ್ಷದ ಮಗನ ಕೊಂದು ಪೇದೆ ಪತ್ನಿ ಆತ್ಮಹತ್ಯೆಗೆ ಶರಣು!

    ಪುಣೆ: ಪೊಲೀಸ್ ಪೇದೆಯೊಬ್ಬರ ಪತ್ನಿ ತನ್ನ 2 ವರ್ಷದ ಪುಟ್ಟ ಕಂದಮ್ಮನನ್ನು ಕೊಲೆಗೈದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಹದಪ್ಸರ್‍ನಲ್ಲಿ ನಡೆದಿದೆ.

    ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು 22 ವರ್ಷದ ಪೂನಂ ಅಲಿಯಾಸ್ ಜಾನಕಿ ಎಂದು ಗುರುತಿಸಲಾಗಿದೆ. ಈಕೆ ತನ್ನ ಮಗ ಶಿವಾನ್ಶ್‍ನನ್ನು ಕೊಲೆಗೈದು ಬಳಿಕ ತಾನೂ ಸಾವಿಗೆ ಶರಣಾಗಿದ್ದಾಳೆ. ಇವರು ಪುಣೆಯ ಹದಾಪ್ಸರ್‍ನ ತಿಲೆಕರ್ ವಸ್ಟಿ ನಿವಾಸಿಗಳಾಗಿದ್ದಾರೆ.

    ಶನಿವಾರ ಬೆಳಗ್ಗೆ 5 ಗಂಟೆ ಸುಮಾರಿಗೆ 27 ವರ್ಷದ ಅಮಿತ್ ದತ್ತಾತ್ರೆಯ್ ಕಂಬ್ಲೆ ಕೆಲಸ ಮುಗಿಸಿ ಮನೆಗೆ ವಾಪಸ್ಸಾಗಿದ್ದ ಸಂದರ್ಭದಲ್ಲಿ ಪತ್ನಿ ಫ್ಯಾನ್ ಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.

    ಅಮಿತ್ ಮನೆಗೆ ತೆರಳಿ ಡೋರ್ ಬೆಲ್ ಮಾಡಿದ್ದಾರೆ. ಆದ್ರೆ ಮನೆಯೊಳಗಿಂದ ಪತ್ನಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಹೀಗಾಗಿ ಅವರು ಕಿಟಕಿಯ ಮೂಲಕ ಮನೆಯೊಳಗೆ ಇಣುಕಿ ನೋಡಿದ್ದು, ಪತ್ನಿ ಫ್ಯಾನ್ ಗೆ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಅಲ್ಲದೇ ಮತ್ತೆ ಇಣುಕಿದಾಗ ಪುಟ್ಟ ಮಗನೂ ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದಿರುವುದು ಕಂಡಿದೆ. ಪತ್ನಿ ಹಾಗೂ ಮಗನ ಸ್ಥಿತಿಯನ್ನು ಕಣ್ಣಾರೆ ಕಂಡ ಅಮಿತ್ ಸ್ಥಳದಲ್ಲೇ ಕುಸಿದುಬಿದ್ದಿದ್ದಾರೆ ಎಂದು ಹದಪ್ಸರ್ ಠಾಣೆಯ ಪೊಲೀಸ್ ಅಧಿಕಾರಿ ಸುನೀಲ್ ತಂಬೆ ತಿಳಿಸಿದ್ದಾರೆ.

    ತಾಯಿ-ಮಗ ಇಬ್ಬರೂ ಮೃತಪಟ್ಟಿದ್ದಾರೆ. ಮೇಲ್ನೋಟಕ್ಕೆ ಪೂನಂ ಮೊದಲು ಮಗನನ್ನು ಹಿಡಿದು ಆತನ ಮುಖಕ್ಕೆ ದಿಂಬಿನಿಂದ ಅದುಮಿ ಕೊಲೆ ಮಾಡಿದ್ದಾರೆ ಅಂತ ಪೊಲೀಸ್ ಅಧಿಕಾರಿ ಪ್ರಸಾದ್ ಲೋನಾರೆ ಹೇಳಿದ್ದಾರೆ.

    ಕಳೆದ 4 ವರ್ಷಗಳಿಂದ ನನ್ನ ಮಗಳು ಮಾನಸಿಕವಾಗಿ ನೊಂದಿದ್ದಳು. ಆಕೆಗೆ ನಾವು ಕೌನ್ಸಿಲಿಂಗ್ ಕೊಡಿಸಿ ಗಂಡನ ಮನೆಗೆ ಕಳುಹಿಸಿದ್ದೆವು. ಆದ್ರೆ ಇದೀಗ ಅವರು ನನ್ನ ಮಗಳ ಜೀವನವನ್ನೇ ನಾಶ ಮಾಡಿದ್ರು ಅಂತ ಪೂನಂ ತಂದೆ ಸುರೇಶ್ ಕಣ್ಣೀರು ಹಾಕಿದ್ದಾರೆ.

    ಆತ್ಮಹತ್ಯೆಗೂ ಮುನ್ನ ಪೂನಂ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ “ಮನೆಯಲ್ಲಿ ಪತಿ ಇಲ್ಲದಿರುವುದಾಗಿ ಆತನ ತಾಯಿ ಸುಜಾತ ತನಗೆ ಕಿರುಕುಳ ನೀಡುತ್ತಿದ್ದರು” ಅಂತ ಬರೆದುಕೊಂಡಿದ್ದಾರೆ.

    ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪದ ಮೇಲೆ ಅತ್ತೆಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎಲ್ಲೆಂದರಲ್ಲಿ ತುಪುಕ್ ಅನ್ನೋರಿಗೆ ಪಾಠ- ರಸ್ತೆಯಲ್ಲಿ ಉಗುಳಿದವನಿಂದ್ಲೇ ಕ್ಲೀನ್ ಮಾಡಿಸಿದ್ರು..!

    ಎಲ್ಲೆಂದರಲ್ಲಿ ತುಪುಕ್ ಅನ್ನೋರಿಗೆ ಪಾಠ- ರಸ್ತೆಯಲ್ಲಿ ಉಗುಳಿದವನಿಂದ್ಲೇ ಕ್ಲೀನ್ ಮಾಡಿಸಿದ್ರು..!

    ಪುಣೆ: ನಗರವನ್ನು ಶುಚಿತ್ವವಾಗಿಟ್ಟುಕೊಳ್ಳುವ ಹಿನ್ನೆಲೆಯಲ್ಲಿ ಇದೀಗ ಪುಣೆ ನಗರ ಸಭೆ ಶಿಕ್ಷೆ ನೀಡಲು ಮುಂದಾಗಿದೆ. ಈ ಶಿಕ್ಷೆಯಿಂದ ವ್ಯಕ್ತಿ ಮತ್ತೆ ಅಂತಹ ತಪ್ಪು ಮಾಡಲಾರ. ಯಾಕಂದ್ರೆ ಆ ಶಿಕ್ಷೆ ಅಷ್ಟೊಂದು ಅಸಹ್ಯವಾಗಿದೆ.

    ಏನ್ ಶಿಕ್ಷೆ..?:
    ಪುಣೆ ನಗರವನ್ನು ಸ್ವಚ್ಚವಾಗಿಡುವ ನಿಟ್ಟಿನಲ್ಲಿ ನಾಗರಿಕ ಸಂಸ್ಥೆ ಈ ಕ್ರಮ ಕೈಗೊಂಡಿದೆ. ಮನುಷ್ಯ ಎಲ್ಲೆಂದರಲ್ಲಿ ಉಗುಳುತ್ತಾನೆ. ಇದಕ್ಕೆ ಕ್ರಮ ಕೈಗೊಳ್ಳಬೇಕೆಂದು ಉಪಾಯ ಹೂಡಿದ ಸಂಸ್ಥೆ, ಉಗಿದವನಿಂದಲೇ ಅದನ್ನು ಕ್ಲೀನ್ ಮಾಡಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ಆತನಿಗೆ 150 ರೂ ದಂಡ ಕಟ್ಟುವಂತೆ ಹೇಳುತ್ತಾರೆ.

    ಈ ಶಿಕ್ಷೆಯನ್ನು ಕಳೆದ ವಾರದಿಂದ ಆರಂಭ ಮಾಡಲಾಗಿದೆ. ಸದ್ಯ 5 ವಾರ್ಡ್ ಗಳಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಆರಂಭಿಸಿದ 8 ದಿನದಲ್ಲಿ ನಗರಸಭೆಯವರು ರಸ್ತೆಯಲ್ಲಿ ಉಗುಳುತಿದ್ದ ಸುಮಾರು 156 ಮಂದಿಯನ್ನು ಹಿಡಿದಿದ್ದು, ಅವರಿಂದಲೇ ಉಗುಳಿದ ಜಾಗವನ್ನು ಕ್ಲೀನ್ ಮಾಡಿಸಿದ್ದಾರೆ. ಅಲ್ಲದೇ ಪ್ರತಿಯೊಬ್ಬರಿಂದಲೂ 150 ರೂ. ದಂಡ ವಸೂಲಿ ಮಾಡಿದ್ದಾರೆ ಅಂತ ಪುಣೆ ನಗರಸಭೆಯ ದಯಾನೇಶ್ವರ್ ಮೊಲಾಕ್ ತಿಳಿಸಿದ್ದಾರೆ.

    ಶಿಕ್ಷೆಯ ಉದ್ದೇಶವೇನು..?
    ಜನರಲ್ಲಿ ಕ್ಲೀನ್ ಬಗ್ಗೆ ಜಾಗೃತಿ ಮೂಡಿಸುವುದೇ ಈ ಶಿಕ್ಷೆಯ ಪ್ರಮುಖ ಉದ್ದೇಶವಾಗಿದೆ. ಯಾಕಂದ್ರೆ ಹೆಚ್ಚಿನವರು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಎಲ್ಲೆಂದರಲ್ಲಿ ಉಗುಳುತ್ತಾರೆ. ಹೀಗಾಗಿ ಇದನ್ನು ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ. ತಮ್ಮ ಉಗುಳನ್ನು ತಾವೇ ಶುಚಿಗೊಳಿಸಲು ಅಸಹ್ಯಪಡುತ್ತಾರೆ. ಇದರಿಂದ ಪಾಠ ಕಲಿಯುತ್ತಾರೆ. ಅಲ್ಲದೇ ಮತ್ತೊಮ್ಮೆ ಉಗುಳುವ ಮುನ್ನ 2 ಬಾರಿ ಯೋಚನೆ ಮಾಡುತ್ತಾರೆ ಅಂತ ಅವರು ತಿಳಿಸಿದ್ದಾರೆ.

    2018ರ ಸ್ವಚ್ಛ ಗ್ರಾಮದಲ್ಲಿ ಪುಣೆಗೆ 10 ನೇ ಸ್ಥಾನದಲ್ಲಿದೆ. ಮಧ್ಯಪ್ರದೇಶದ ಇಂದೋರ್ ನಗರ ಮೊದಲ ಸ್ಥಾನದಲ್ಲಿದೆ. ಹೀಗಾಗಿ ಪುಣೆ ಸ್ವಚ್ಛ ನಗರ ಮಾಡುವಲ್ಲಿ ಮೊಲಾಕ್ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಬೂಮ್ರಾ, ಭುವನೇಶ್ವರ್ ಕಮ್ ಬ್ಯಾಕ್ ನಮ್ಮಿಂದಲೇ!

    ಬೂಮ್ರಾ, ಭುವನೇಶ್ವರ್ ಕಮ್ ಬ್ಯಾಕ್ ನಮ್ಮಿಂದಲೇ!

    ಪುಣೆ: ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಮೂರು ಪಂದ್ಯಗಳಿಗೆ ಟೀಂ ಇಂಡಿಯಾ ತನ್ನ ಪ್ರಮುಖ ಬೌಲರ್ ಗಳನ್ನು ವಾಪಸ್ ಕರೆಸಿದ್ದು ನಮ್ಮ ತಂಡದ ಸಾಧನೆ ಎಂದು ವಿಂಡೀಸ್ ತಂಡದ ಕೋಚ್ ಸ್ಟುವರ್ಟ್ ಲಾ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದಾರೆ.

    ಕಳೆದ ಎರಡೂ ಪಂದ್ಯಗಳಲ್ಲಿ ವಿಂಡೀಸ್ ತಂಡ 300 ರನ್ ಗಳ ಗಡಿ ದಾಟಿತ್ತು. ಇದರಿಂದಾಗಿಯೇ ಟೀಂ ಇಂಡಿಯಾ ಬೌಲರ್ ಗಳನ್ನು ವಾಪಸ್ ಕರೆಸಿಕೊಂಡಿದೆ ಎಂದು ಹೇಳಿದ್ದಾರೆ. ವಿಂಡೀಸ್ ವಿರುದ್ಧದ ಮೂರು ಪಂದ್ಯಗಳಿಗೆ ಟೀಂ ಇಂಡಿಯಾ ಜಸ್ಪ್ರೀತ್ ಬೂಮ್ರಾ ಹಾಗೂ ಭುವನೇಶ್ವರ್ ಕುಮಾರ್ ಅವರನ್ನು ವಾಪಸ್ ಕರೆಸಿಕೊಂಡಿತ್ತು. ಈ ಇಬ್ಬರು ಬೌಲರ್ ಗಳು ತಂಡಕ್ಕೆ ವಾಪಸ್ ಆಗುತ್ತಾರೆ ಎಂಬ ವಿಚಾರ ಮೊದಲೇ ಇದ್ದರೂ ಇದಕ್ಕೆ ನಾವೇ ಕಾರಣ ಎಂದು ಲಾ ಅಂದುಕೊಂಡಿದ್ದಾರೆ.

    ಕಳೆದ ಪಂದ್ಯಗಳಿಂದಾಗಿ ಟೀಂ ಇಂಡಿಯಾ ತಮ್ಮನ್ನು ತಾವೇ ಪ್ರಶ್ನೆ ಕೇಳಿಕೊಳ್ಳುವಂತೆ ಮಾಡಿದ್ದು ನಮ್ಮ ತಂಡದ ಹೆಗ್ಗಳಿಕೆ ಎಂದೂ ಅವರು ಇದೇ ವೇಳೆ ಹೇಳಿದರು.

    ಇದೇ ವೇಳೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನು ಬೇಗ ಔಟ್ ಮಾಡಲು ನಮ್ಮ ಬಳಿ ಕೆಲ ಪ್ಲಾನ್ ಗಳಿವೆ. ಕಳೆದ ಪಂದ್ಯದಲ್ಲೂ ಕೊಹ್ಲಿ 40 ರನ್ ಗಳಿಸಿದ್ದ ವೇಳೆ ಔಟ್ ಮಾಡುವ ಅವಕಾಶ ನೀಡಿದ್ದರು. ಆದರೆ ಕೊಹ್ಲಿ ಒಬ್ಬ ಅತ್ಯುತ್ತಮ ಆಟಗಾರ. ಕೊಹ್ಲಿ ತಂಡದ ಇನ್ನಿಂಗ್ಸ್ ಕಟ್ಟುವ ಶೈಲಿ ನನಗೆ ಅಚ್ಚುಮೆಚ್ಚು ಎಂದು ತಿಳಿಸಿದ ಅವರು, ವಿಂಡೀಸ್ ಆಟಗಾರ ಹೆಟ್ಮೆಯರ್ ಪ್ರದರ್ಶನಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೇಶದಲ್ಲೇ ಫಸ್ಟ್, ಗರ್ಭಕೋಶ ಕಸಿಯಿಂದ ಮಗು ಜನನ

    ದೇಶದಲ್ಲೇ ಫಸ್ಟ್, ಗರ್ಭಕೋಶ ಕಸಿಯಿಂದ ಮಗು ಜನನ

    – ಮಗಳಿಗೆ ಗರ್ಭಕೋಶ ದಾನ ನೀಡಿದ ತಾಯಿ

    ಮುಂಬೈ: ದೇಶದಲ್ಲಿ ಮೊದಲ ಬಾರಿಗೆ ಗರ್ಭಕೋಶ ಕಸಿ ವಿಧಾನದ ಮೂಲಕ ಹೆಣ್ಣು ಮಗು ಜನನವಾಗಿದೆ. ಮಹಾರಾಷ್ಟ್ರದ ಪುಣೆ ನಗರದ ಆಸ್ಪತ್ರೆಯಲ್ಲಿ ಗರ್ಭಕೋಶ ಕಸಿ ವಿಧಾನದ ಮೂಲಕ ತಾಯಿ ಹಣ್ಣು ಮಗವನ್ನು ಹೆತ್ತಿದ್ದಾರೆ.

    ಪುಣೆಯ ಗ್ಯಾಲಕ್ಸಿ ಕೇರ್ ಆಸ್ಪತ್ರೆಯಲ್ಲಿ 28 ವರ್ಷದ ಮೀನಾಕ್ಷಿ ವಾಲನ್ ಗುರುವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಗುಜರಾತ್ ರಾಜ್ಯದ ವಡೋದರ ನಗರದ ಮೀನಾಕ್ಷಿ ಅವರು 2017ರಿಂದಲೂ ಪುಣೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೀನಾಕ್ಷಿ ಅವರಿಗೆ ಪದೇ ಪದೇ ಗರ್ಭಪಾತ ಆಗುತ್ತಿದ್ದ ಕಾರಣ ಮೇ 2017ರಲ್ಲಿಯೇ ಅವರ ತಾಯಿಯೇ ತಮ್ಮ ಗರ್ಭಕೋಶವನ್ನು ಮಗಳಿಗೆ ದಾನ ಮಾಡಿದ್ದರು.

    ಗರ್ಭಕೋಶ ಕಸಿಯ ಬಳಿಕ ಮೀನಾಕ್ಷಿ ಅವರಿಗೆ ಐವಿಎಫ್ (in-vitro fertilisation) ವಿಧಾನದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಸದ್ಯ ತಾಯಿ ಮತ್ತು ಮಗುವನ್ನು ತೀವ್ರ ನಿಘಾ ಘಟಕದಲ್ಲಿರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಗರ್ಭಕೋಶದ ಕಸಿ ಮೂಲಕ ಹುಟ್ಟಿದ ಭಾರತದ ಮೊದಲು ಮಗು ಮಾತ್ರವಲ್ಲದೇ, ಏಷ್ಯಾ ಪೆಸಿಫಿಕ್ ವಲಯದ ವ್ಯಾಪ್ತಿಯ ಮೊದಲ ಮಗು ಎನ್ನುವ ಹೆಗಳ್ಳಿಕೆಗೆ ಪಾತ್ರವಾಗಿದೆ.

    ವಿಶ್ವದಲ್ಲಿ ಈವರೆಗೆ ಸ್ವೀಡನ್ ನಲ್ಲಿ 9, ಅಮೆರಿಕದಲ್ಲಿ 2 ಮಕ್ಕಳು ಜನಿಸಿವೆ. 12ನೇ ಮಗು ಭಾರತದ ನಮ್ಮ ಆಸ್ಪತ್ರೆಯಲ್ಲಿ ಜನಿಸಿದೆ ಅಂತಾ ಡಾ.ವರ್ಟಿ ಸಂತೋಷ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv