Tag: ಪುಣೆ

  • ಊರು ಸೇರಲು ಊಟವಿಲ್ಲದೇ 135 ಕಿ.ಮೀ ನಡೆದ ಕೂಲಿ ಕಾರ್ಮಿಕ

    ಊರು ಸೇರಲು ಊಟವಿಲ್ಲದೇ 135 ಕಿ.ಮೀ ನಡೆದ ಕೂಲಿ ಕಾರ್ಮಿಕ

    – ಕಾರ್ಮಿಕನಿಗಾಗಿ ಮನೆಯಿಂದ ಊಟ ತರಿಸಿಕೊಟ್ಟ ಪೊಲೀಸ್

    ಮುಂಬೈ: ಕೊರೊನಾ ವೈರಸ್ ದೇಶದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆ ಭಾರತ ಲಾಕ್‍ಡೌನ್ ಆಗಿದೆ. ಈ ಮಧ್ಯೆ ಕೂಲಿ ಕಾರ್ಮಿಕನೋರ್ವ ಊಟವಿಲ್ಲದೇ 135 ಕೀ.ಮೀ ನಡೆದು ತನ್ನ ಊರು ಸೇರಿದ್ದಾನೆ.

    ಕೊರೊನಾ ವೈರಸ್ ಭೀತಿಯಿಂದ ಊರು ಬಿಟ್ಟು ಬೇರೆ ಕಡೆ ಕೂಲಿ ಮಾಡುತ್ತಿದ್ದವರೆಲ್ಲ, ತಮ್ಮ ತಮ್ಮ ಊರುಗಳನ್ನು ಸೇರಿಕೊಳ್ಳುತ್ತಿದ್ದಾರೆ. ಪ್ರಧಾನಿ ಅವರ ಆದೇಶದ ಮೇರೆಗೆ ಪೂರ್ತಿ ಇಂಡಿಯಾ ಲಾಕ್‍ಡೌನ್ ಆಗಿದೆ. ಆದರೂ ಕೆಲವರು ನಡೆದುಕೊಂಡು ಸಿಕ್ಕ ಸಿಕ್ಕ ವಾಹನ ಏರಿ ತಮ್ಮ ಊರಿಗೆ ಬರುತ್ತಿದ್ದಾರೆ. ಹಾಗೇಯೆ 26 ವರ್ಷದ ದಿನಗೂಲಿ ಕೆಸಲಗಾರ ನರೇಂದ್ರ ಶೆಲ್ಕೆ ಮಹಾರಾಷ್ಟ್ರದ ನಾಗ್ಪುರದಿಂದ ಆಹಾರವಿಲ್ಲದೆ 135 ಕಿ.ಮೀ.ಗೆ ನಡೆದು ಚಂದ್ರಪುರದ ತನ್ನ ಮನೆ ಸೇರಿದ್ದಾನೆ.

    ಕೊರೊನಾ ವೈರಸ್ ನಿಂದ ಎಲ್ಲರೂ ಸಿಟಿ ಬಿಟ್ಟು ತಮ್ಮ ಹಳ್ಳಿ ಸೇರುತ್ತಿದ್ದಾರೆ. ಆದ್ದರಿಂದ ಪುಣೆಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ನರೇಂದ್ರ ಶೆಲ್ಕೆ ಕೂಡ ಚಂದ್ರಪುರ ಜಿಲ್ಲೆಯ ಸಾಲಿ ತಹಸಿಲ್‍ನಲ್ಲಿರುವ ತಮ್ಮ ಜಂಭ ಗ್ರಾಮಕ್ಕೆ ಹಿಂತಿರುಗಲು ನಿರ್ಧರಿಸಿದ್ದ. ಆದರೆ ಅಷ್ಟೊತ್ತಿಗೆ ದೇಶ ಲಾಕ್‍ಡೌನ್ ಆದ ಕಾರಣ ಅಲ್ಲೇ ಸಿಕ್ಕಿ ಹಾಕಿಕೊಂಡಿದ್ದಾನೆ.

    ಎಷ್ಟೇ ಕಾದರು ಊರಿಗೆ ಹೋಗಲು ಯಾವುದೇ ವಾಹನ ಸಿಗದ ಕಾರಣ ನಡೆದುಕೊಂಡು ಊರಿಗೆ ಹೋಗಲು ನಿರ್ಧರಮಾಡಿದ್ದಾನೆ. ಹಾಗಾಗಿ ಮಂಗಳವಾರ ನಾಗ್ಪುರ-ನಾಗ್‍ಬಿದ್ ರಸ್ತೆಯಲ್ಲಿ ನಡೆದುಕೊಂಡು ಬಂದಿದ್ದಾನೆ. ಲಾಕ್‍ಡೌನ್ ಆದ ಕಾರಣ ಮಧ್ಯದಲ್ಲಿ ಯಾವುದೇ ಹೋಟೆಲ್ ಅಥವಾ ಊಟ ಸಿಗದ ಕಾರಣ ಕೇವಲ ನೀರನ್ನು ಕುಡಿದುಕೊಂಡು ಎರಡು ದಿನಗಳ ಕಾಲ ನಡೆದುಕೊಂಡು ಬಂದಿದ್ದಾನೆ.

    ಈ ವೇಳೆ ಬುಧವಾರ ರಾತ್ರಿ ನಾಗ್ಪುರದಿಂದ 135 ಕಿ.ಮೀ ದೂರದಲ್ಲಿರುವ ಸಿಂಡೆವಾಹಿ ತಹಸಿಲ್ನ ಶಿವಾಜಿ ಚೌಕದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಕಫ್ರ್ಯೂ ವೇಳೆಯಲ್ಲಿ ಯಾಕೆ ಹೊರಗೆ ಬಂದೆ ಎಂದು ಪೊಲೀಸರು ಪ್ರಶ್ನೆ ಮಾಡಿದ್ದಾರೆ. ಆಗ ಶೆಲ್ಕೆ ನಡೆದ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾನೆ. ಊಟವಿಲ್ಲದೇ ಎರಡು ದಿನಗಳಿಂದ ಊರಿಗೆ ಹೋಗಲು ನಡೆದುಕೊಂಡು ಹೋಗುತ್ತಿದ್ದೇನೆ ಎಂದು ಹೇಳಿದ್ದಾನೆ.

    ಶೆಲ್ಕೆ ಕಥೆ ಕೇಳಿ ಮರುಗಿದ ಪೊಲೀಸರು, ಆತನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ, ಅಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಿದ್ದಾರೆ. ನಂತರ ಊಟವಿಲ್ಲದೇ ಬಳಲುತ್ತಿದ್ದ ಆತನಿಗೆ ಸಿಂಡೆವಾಹಿ ಪೊಲೀಸ್ ಠಾಣೆಯ ಸಬ್ ಇನ್‍ಸ್ಪೆಕ್ಟರ್ ತಮ್ಮ ಮನೆಯಿಂದ ಊಟ ತರಿಸಿ ತಿನ್ನಲು ನೀಡಿದ್ದಾರೆ. ಬಳಿಕ ಆತನ ಊರಿಗೆ ಹೋಗಲು ವಾಹನವನ್ನು ವ್ಯವಸ್ಥೆ ಮಾಡಿ 14 ದಿನ ಮನೆಯಲ್ಲೇ ಪ್ರತ್ಯೇಕವಾಗಿ ಇರಲು ತಿಳಿಸಿ ಕಳುಹಿಸಿಕೊಟ್ಟಿದ್ದಾರೆ.

  • ಫುಟ್‍ಪಾತ್ ಮೇಲೆ ಬರ್ತಿದ್ದ ಸವಾರರಿಗೆ ಮಹಿಳೆಯಿಂದ ಕ್ಲಾಸ್ – ವಿಡಿಯೋ

    ಫುಟ್‍ಪಾತ್ ಮೇಲೆ ಬರ್ತಿದ್ದ ಸವಾರರಿಗೆ ಮಹಿಳೆಯಿಂದ ಕ್ಲಾಸ್ – ವಿಡಿಯೋ

    – ‘ನನ್ನ ಮೇಲೆ ಬೈಕ್ ಹತ್ತಿಸಿ’
    – ಮಹಿಳೆಯ ಕಾರ್ಯಕ್ಕೆ ನೆಟ್ಟಿಗರು ಫಿದಾ
    – ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ತರಾಟೆ

    ಪುಣೆ: ಫುಟ್‍ಪಾತ್ ಮೇಲೆ ಬೈಕ್ ಓಡಿಸುತ್ತಿದ್ದ ಸವಾರರನ್ನು ಕೆಳಗಿಳಿಸಿ ಹಿರಿಯ ನಾಗರಿಕ ಮಹಿಳೆಯೊಬ್ಬರು ಸಂಚಾರಿ ನಿಯಮ ಪಾಲಿಸಿ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಮಹಿಳೆಯ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಟ್ರಾಫಿಕ್‍ನಿಂದ ತಪ್ಪಿಸಿಕೊಳ್ಳಲು ಅಥವಾ ವಾಹನ ಪಾಕಿಂಗ್ ಮಾಡಲು ಬಹುತೇಕ ವಾಹನ ಸವಾರರು ಫುಟ್‍ಪಾತ್‍ನನ್ನು ಬಳಸಿಕೊಳ್ಳುತ್ತಾರೆ. ಇದರಿಂದ ವಾಹನ ಸವಾರರಿಗೇನೋ ಲಾಭವಾಗುತ್ತೆ. ಆದ್ರೆ ತೊಂದರೆ ಆಗೋದು ಮಾತ್ರ ಪಾದಚಾರಿಗಳಿಗೆ. ಹೀಗೆ ಬೈಕ್ ಸವಾರರ ಉಪಟಳಕ್ಕೆ ಬೇಸತ್ತ ಹಿರಿಯ ನಾಗರಿಕ ಮಹಿಳೆಯೊಬ್ಬರು ಸವಾರರಿಗೆ ಸಂಚಾರಿ ನಿಯಮ ತಿಳಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.

    ಪುಣೆಯ ಎಸ್‍ಎನ್‍ದಿಟಿ ಕಾಲೇಜಿನ ಬಳಿ ಇರುವ ಕೆನಲ್ ರಸ್ತೆಯಲ್ಲಿ ಸಾಮಾನ್ಯವಾಗಿ ಟ್ರಾಫಿಕ್ ಜಾಮ್ ಆಗುತ್ತಿರುತ್ತೆ. ಆದರೆ ಇದರಿಂದ ತಪ್ಪಿಸಿಕೊಳ್ಳಲು ಬೈಕ್ ಸವಾರರು ಫುಟ್‍ಪಾತ್ ಮೇಲೆ ವಾಹನ ತಂದು ಸಾರ್ವಜನಿಕರಿಗೆ ತೊಂದರೆ ಕೊಡುತ್ತಾರೆ. ಇದನ್ನು ನೋಡಿ ನೋಡಿ ಬೇಸತ್ತ ನಿರ್ಮಲಾ ಗೋಖಲೆ ಎಂಬವರು ಫುಟ್‍ಪಾತ್ ಮಧ್ಯೆ ನಿಂತು ವಾಹನ ಸವಾರರಿಗೆ ಸಂಚಾರಿ ನಿಯಮವನ್ನು ತಿಳಿಸಿ ತರಾಟೆಗೆ ತಗೆದುಕೊಂಡಿದ್ದಾರೆ. ಇಲ್ಲಿ ಪಾದಚಾರಿಗಳು ಓಡಾಡುತ್ತಾರೆ ನಿಮ್ಮ ವಾಹನಕ್ಕೆ ಸಂಚಾರಕ್ಕೆ ರಸ್ತೆ ಇದೆ ತಾನೆ. ಅದನ್ನ ಬಿಟ್ಟು ಇಲ್ಲಿ ಯಾಕೆ ಬಂದು ತೊಂದರೆ ಕೊಡುತ್ತೀರಾ? ಸಂಚಾರಿ ನಿಯಮ ಪಾಲನೆ ಮಾಡಲು ಆಗಲ್ವಾ? ಬೈಕ್, ಸ್ಕೂಟಿಗಳನ್ನು ರಸ್ತೆ ಮೇಲೆ ಓಡಿಸಿ ಎಂದು ಖಡಕ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

    https://twitter.com/IAnticommunist/status/1230785136607866880

    ಅಲ್ಲದೇ ಅವರ ಮಾತು ಕೇಳದೆ ಮುನ್ನುಗ್ಗುತ್ತಿದ್ದವರನ್ನು ಅಡ್ಡಗಟ್ಟಿ ಸಂಚಾರಿ ನಿಯಮ ಪಾಲಿಸಿ, ಇಲ್ಲ ನನ್ನ ಮೇಲೆ ಬೈಕ್ ಹತ್ತಿಸಿಕೊಂಡಿ ಹೋಗಿ ಎಂದು ಮಾತಿನ ಚಾಟಿ ಬೀಸಿದ್ದಾರೆ. ಈ ಮೂಲಕ ನಿರ್ಮಲಾ ಅವರು ಓರ್ವ ಜವಾಬ್ದಾರಿ ಪ್ರಜೆಯ ಕರ್ತವ್ಯ ನಿರ್ವಹಿಸಿದ್ದಾರೆ. ಅಲ್ಲದೇ ನಿರ್ಮಲಾ ಅವರ ಕಾರ್ಯ ಮೆಚ್ಚಿದ ಇತರೆ ಪಾದಾಚಾರಿಗಳು ಕೂಡ ಅವರಿಗೆ ಸಾಥ್ ಕೊಟ್ಟು ಬೈಕ್ ಸವಾರರಿಗೆ ಬಿಸಿ ಮುಟ್ಟಿಸಿದ್ದಾರೆ.

    https://twitter.com/h_thake/status/1230884223613095936

    ಧರ್ಯವಾಗಿ ನಿಂತು ತಪ್ಪು ಮಾಡುತ್ತಿದ್ದ ವಾಹನ ಸವಾರರಿಗೆ ಬುದ್ಧಿ ಹೇಳಿ ತಿದ್ದಿದ ನಿರ್ಮಲಾ ಅವರ ಕಾರ್ಯ ಎಲ್ಲರ ಮನ ಗೆದ್ದಿದೆ. ಬೈಕ್ ಸವಾರರಿಗೆ ನಿರ್ಮಲಾ ಅವರು ತರಾಟೆಗೆ ತೆಗೆದುಕೊಂಡ ದೃಶ್ಯವನ್ನು ಸ್ಥಳೀಯರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ನಿರ್ಮಲಾ ಅವರ ಧೈರ್ಯಕ್ಕೆ, ಕಾರ್ಯಕ್ಕೆ ಭೇಷ್ ಎಂದು ಹೊಗಳಿದ್ದಾರೆ.

  • ಐಸಿಯುನಲ್ಲೇ ಪ್ರಿಯತಮೆಯನ್ನು ವರಿಸಿ ಎಸ್ಕೇಪ್ ಆದ

    ಐಸಿಯುನಲ್ಲೇ ಪ್ರಿಯತಮೆಯನ್ನು ವರಿಸಿ ಎಸ್ಕೇಪ್ ಆದ

    ಮುಂಬೈ: ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಯುವತಿಯನ್ನು ಆಕೆಯ ಪ್ರಿಯತಮ ಮದುವೆಯಾಗಿ ನಂತರ ಪರಾರಿಯಾದ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ನಡೆದಿದೆ.

    ಪ್ರಿಯತಮ ಯುವತಿಯನ್ನು ಮದುವೆಯಾಗಲು ನಿರಾಕರಿಸಿದ್ದರಿಂದ ಮನನೊಂದು ಆಕೆ ತನ್ನ ಜೀವನವನ್ನು ಕೊನೆಗೊಳಿಸಲು ನಿರ್ಧಾರ ಮಾಡಿದಳು. ಹಾಗೆಯೇ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಇಲ್ಲಿಗೆ ಯುವಕನನ್ನು ಕರೆತಂದು ಆಕೆಯ ಜೊತೆ ಒತ್ತಾಯಪೂರ್ವಕವಾಗಿ ಮದುವೆ ಮಾಡಿಕೊಡಲಾಯಿತು. ಆದರೆ ಮದುವೆಯಾದ ಕೂಡಲೇ ಆತ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ.

    ಇತ್ತ ಯುವತಿ, ಯುವಕನ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ್ದಾಳೆ. ಆರೋಪಿ ಸೂರಜ್ ನಲ್ವಾಡೆ ವಿರುದ್ಧ ಎಫ್‍ಐ ಆರ್ ದಾಖಲಿಸಿಕೊಳ್ಳಲಾಗಿದೆ. ತನಿಖೆ ಮುಂದುವರಿದಿದೆ ಎಂದು ತನಿಖಾಧಿಕಾರಿ ಪ್ರಕಾಶ್ ರಾಥೋರ್ ತಿಳಿಸಿದ್ದಾರೆ.

    ದೂರಿನಲ್ಲೇನಿದೆ?
    ಸೂರಜ್ ನನ್ನ ಮೇಲೆ ಒತ್ತಾಯಪೂರ್ವಕವಾಗಿ ದೈಹಿಕ ಸಂಬಂಧ ಬೆಳೆಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಅಲ್ಲದೆ ಆ ಬಳಿಕ ನಾನು ಕೆಳಜಾತಿಯವಳೆಂದು ಹೇಳಿ ಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದಾನೆ ಎಂದು ಯುವತಿ ತನ್ನ ದೂರಿನಲ್ಲಿ ತಿಳಿಸಿದ್ದಾಳೆ.

    ಯುವತಿ ನವೆಂಬರ್ 27ರಂದು ವಿಷ ಸೇವಿಸಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು.

  • ನಡುರಸ್ತೆಯಲ್ಲೇ ಕೈಕೊಟ್ಟ ಸ್ನೇಹಿತರು – ದುಷ್ಕರ್ಮಿಗಳಿಂದ ಯುವತಿಯನ್ನು ರಕ್ಷಿಸಿದ ರೈಲ್ವೆ ಪೊಲೀಸರು

    ನಡುರಸ್ತೆಯಲ್ಲೇ ಕೈಕೊಟ್ಟ ಸ್ನೇಹಿತರು – ದುಷ್ಕರ್ಮಿಗಳಿಂದ ಯುವತಿಯನ್ನು ರಕ್ಷಿಸಿದ ರೈಲ್ವೆ ಪೊಲೀಸರು

    ಪುಣೆ: ಲೈಂಗಿಕ ಕಿರುಕುಳ ನೀಡುತ್ತಿದ್ದ ದುಷ್ಕರ್ಮಿಗಳಿಂದ ಯುವತಿಯೋರ್ವಳನ್ನು ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ತಂಡ(ಆರ್‌ಪಿಎಫ್‌) ರಕ್ಷಿಸಿದ ಘಟನೆ ಪುಣೆಯಲ್ಲಿ ನಡೆದಿದೆ.

    ಪುಣೆಯಿಂದ 21 ಕಿ.ಮಿ ದೂರದಲ್ಲಿರುವ ಅಲಂದ್ ರೈಲ್ವೆ ನಿಲ್ದಾಣದ ಬಳಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶುಕ್ರವಾರ ರಾತ್ರಿ ಯುವತಿ ಕೆಲ ಸ್ನೇಹಿತರೊಂದಿಗೆ ಕಾರಿನಲ್ಲಿ ರೈಲ್ವೇ ನಿಲ್ದಾಣದ ಬಳಿ ಬಂದಿದ್ದಳು. ಈ ವೇಳೆ ಸ್ಥಳಕ್ಕೆ ಬಂದ ದುಷ್ಕರ್ಮಿಗಳು ಹಾಗೂ ಯುವತಿ ಸ್ನೇಹಿತರ ನಡುವೆ ಜಗಳ ನಡೆದಿದೆ. ಆಗ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹೆದರಿಸಿದಾಗ, ತಕ್ಷಣ ಯುವತಿಯನ್ನು ಅಲ್ಲಿಯೇ ಬಿಟ್ಟು ಸ್ನೇಹಿತರು ಓಡಿ ಹೋಗಿದ್ದಾರೆ.

    ಯುವತಿ ಮಾತ್ರ ದುಷ್ಕರ್ಮಿಗಳ ಕೈಗೆ ಸಿಕ್ಕಿಹಾಕಿಕೊಂಡಿದ್ದು, ಆಕೆಯನ್ನು ದುಷ್ಕರ್ಮಿಗಳು ರೈಲ್ವೆ ನಿಲ್ದಾಣದ ಬಳಿ ಪಾಳು ಬಿದ್ದ ಪ್ರದೇಶದಲ್ಲಿ ಕರೆದೊಯ್ದು ಆಕೆಗೆ ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದರು. ಈ ವೇಳೆ ಯುವತಿಯ ಕಿರುಚಾಟ ಕೇಳಿ ಆರ್‌ಪಿಎಫ್‌ ಪೊಲೀಸರು ಸ್ಥಳಕ್ಕೆ ಹೋಗಿದ್ದು, ಪೊಲೀಸರನ್ನು ಕಂಡು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಬಳಿಕ ಯುವತಿಯನ್ನು ಪೊಲೀಸರು ರಕ್ಷಿಸಿ ಸುರಕ್ಷಿತವಾಗಿ ಮನೆಗೆ ತಲುಪಿಸಿದ್ದಾರೆ.

  • ಬಸ್ ನಿಲ್ದಾಣದಲ್ಲಿ ಸಿಕ್ಕ 40 ಸಾವಿರದಲ್ಲಿ ಕೇವಲ 7 ರೂ. ತೆಗೆದುಕೊಂಡ!

    ಬಸ್ ನಿಲ್ದಾಣದಲ್ಲಿ ಸಿಕ್ಕ 40 ಸಾವಿರದಲ್ಲಿ ಕೇವಲ 7 ರೂ. ತೆಗೆದುಕೊಂಡ!

    ಪುಣೆ: ಪುಕ್ಕಟೆಯಾಗಿ ಹಣ ಸಿಕ್ಕರೆ ಯಾರಿಗೆ ತಾನೇ ಬೇಡ. ಬಸ್ಸಿನಲ್ಲಿ, ರಿಕ್ಷಾದಲ್ಲಿ ಸಿಕ್ಕಿದ ಹಣ, ಒಡವೆಗಳನ್ನು ವಾಪಸ್ ಮಾಲೀಕರಿಗೆ ನೀಡಿ ಪ್ರಾಮಾಣಿಕತೆ ಮೆರೆದಿರುವ ಅನೇಕ ಘಟನೆಗಳು ನಮ್ಮ ಕಣ್ಣ ಮುಂದಿವೆ. ಇದೀಗ ಈ ಘಟನೆಗಳಿಗೆ ಮಹಾರಾಷ್ಟ್ರದ ಸತಾರಾದ 54 ವರ್ಷದ ವ್ಯಕ್ತಿ ಕೂಡ ಸಾಕ್ಷಿಯಾಗಿದ್ದಾರೆ.

    ಹೌದು. ಧನಜಿ ಜಾಗ್ದಳೆ ಎಂಬವರಿಗೆ ಬಸ್ ನಿಲ್ದಾಣದಲ್ಲಿ ದೀಪಾವಳಿ ಹಬ್ಬದಂದು 40 ಸಾವಿರ ರೂ.ನ ಕಂತೆಯೇ ಸಿಕ್ಕಿತ್ತು. ಆದರೆ ಜಾಗ್ದಳೆ ಸಿಕ್ಕಿದ್ದೇ ಸೀರುಂಡೆ ಎನ್ನುವಂತೆ ಹಣವನ್ನು ಇಟ್ಟುಕೊಳ್ಳದೆ ಅದರ ಮಾಲೀಕರಿಗೆ ಒಪ್ಪಿಸುವ ಮೂಲಕ ಪ್ರಾಮಾಣಿಕತೆ ಮೆರೆದು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಹಣ ಸಿಕ್ಕ ಬಳಿಕ ಮಾಲೀಕ, ವ್ಯಕ್ತಿಯ ಪ್ರಾಮಾಣಿಕತೆಯನ್ನು ಮೆಚ್ಚಿ 1 ಸಾವಿರ ನೀಡಿದ್ದಾರೆ. ಆದರೆ ಈ ವೇಳೆ ಜಾಗ್ದಳೆ ಮಾತ್ರ ಅದರಲ್ಲಿ ಕೇವಲ 7 ರೂ.ಗಳನ್ನು ಪಡೆದಿದ್ದಾರೆ. ಯಾಕಂದ್ರೆ ಆ ಸಂದರ್ಭದಲ್ಲಿ ಜಾಗ್ದಳೆ ಪಾಕೆಟ್ ನಲ್ಲಿ ಇದ್ದಿದ್ದು ಕೇವಲ 3 ರೂ. ಮಾತ್ರ. ಹೀಗಾಗಿ ಅವರಿದ್ದ ಸ್ಥಳದಿಂದ ಸತಾರಾದ ಮಾನ್ ತಾಲೂಕಿನ ಪಿಂಗಾಲಿ ಗ್ರಾಮಕ್ಕೆ ತೆರಳಬೇಕಾದರೆ ಬಸ್ ಟಿಕೆಟ್ ದರ 10 ರೂ. ಆಗಿತ್ತು. ಈ ಹಿನ್ನೆಲೆಯಲ್ಲಿ ಜಾಗ್ದಾಳೆ ಕೇವಲ 7 ರೂ. ಪಡೆದುಕೊಂಡಿದ್ದಾರೆ.

    ‘ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಕೆಲಸದ ನಿಮಿತ್ತ ನಾನು ದಹಿವಾಡ್‌ಗೆ ತೆರಳಿ ವಾಪಸ್ ಬಸ್ ನಿಲ್ದಾಣಕ್ಕೆ ಬಂದೆ. ಈ ವೇಳೆ ನಿಲ್ದಾಣದ ಹತ್ತಿರ ಹಣದ ಕಂತೆ ಬಿದ್ದಿರುವುದು ನನ್ನ ಗಮನಕ್ಕೆ ಬಂತು. ಇದನ್ನು ನೋಡಿ ಸುತ್ತಮುತ್ತ ಇದ್ದವರೆಲ್ಲರಲ್ಲೂ ಹಣ ಯಾರದೆಂದು ಕೇಳಿದೆ. ಆಗ ಹಣ ಕಳೆದುಕೊಂಡು ಚಿಂತೆಯಲ್ಲಿದ್ದ ವ್ಯಕ್ತಿ ಸಿಕ್ಕಿದರು. ಕೂಡಲೇ ಅವರಿಗೆ ಹಣ ಕಂತೆಯನ್ನು ನೀಡಿದೆ’ ಎಂದು ಜಾಗ್ದಾಳೆ ತಿಳಿಸಿದರು.

    ಹಣ ಕಳೆದುಕೊಂಡ ವ್ಯಕ್ತಿಯು ಆತನ ಪತ್ನಿಯ ಸರ್ಜರಿಗೆಂದು 40 ಸಾವಿರ ಹಣ ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬಸ್ ನಿಲ್ದಾಣದ ಬಳಿ ಆತನ ಕೈಯಿಂದ ಹಣ ಜಾರಿ ಬಿದ್ದಿದೆ. ನಾನು ಹಣ ವಾಪಸ್ ನೀಡಿದಾಗ ವ್ಯಕ್ತಿ ನನಗೆ 1 ಸಾವಿರ ರೂ. ನೀಡಿದರು. ಆದರೆ ನನಗೆ ಅದರಲ್ಲಿ 7 ರೂ.ನ ಅವಶ್ಯಕತೆ ಇತ್ತು. ಹೀಗಾಗಿ ಅಷ್ಟನ್ನು ಮಾತ್ರ ತೆಗೆದುಕೊಂಡೆ ಎಂದು ಜಾಗ್ದಾಳೆ ವಿವರಿಸಿದರು.

    ಜಾಗ್ದಾಳೆಯ ಪ್ರಾಮಾಣಿಕತೆಯನ್ನು ಮೆಚ್ಚಿ ಸತಾರಾ ಬಿಜೆಪಿ ಶಾಸಕ ಶಿವೇಂದ್ರರಾಜೆ ಭೋಸಲೆ, ಮಾಜಿ ಸಂಸದ ದಯನ್ರಾಜೆ ಭೋಸಲೆ ಹಾಗೂ ಮತ್ತಿತರ ಗಣ್ಯರು ಶಹಬ್ಬಾಸ್ ಗಿರಿ ನೀಡಿದ್ದಾರೆ. ಅಲ್ಲದೆ ಗಣ್ಯರು ಹಣ ನೀಡಲು ಬಂದಾಗ ಅದನ್ನು ತೆಗೆದುಕೊಳ್ಳಲು ಜಾಗ್ದಾಳೆ ನಿರಾಕರಿಸಿದ್ದಾರೆ.

  • ಫಾಲೋಆನ್ ಎದುರಿಸಿದ ದಕ್ಷಿಣ ಆಫ್ರಿಕಾ – ಟೀಂ ಇಂಡಿಯಾ ಬಿಗಿ ಹಿಡಿತದಲ್ಲಿ ಪುಣೆ ಟೆಸ್ಟ್

    ಫಾಲೋಆನ್ ಎದುರಿಸಿದ ದಕ್ಷಿಣ ಆಫ್ರಿಕಾ – ಟೀಂ ಇಂಡಿಯಾ ಬಿಗಿ ಹಿಡಿತದಲ್ಲಿ ಪುಣೆ ಟೆಸ್ಟ್

    ಪುಣೆ: ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಎದುರಾಳಿ ತಂಡದ ಮೇಲೆ ಫಾಲೋಆನ್ ಹೇರಿದ್ದು, 2ನೇ ಇನ್ನಿಂಗ್ಸ್ ಆರಂಭಿಸಿದ ಹರಿಣಗಳ ಪಡೆಗೆ ಇಶಾಂತ್ ಶರ್ಮಾ, ಅಶ್ವಿನ್ ಅಘಾತ ನೀಡಿದ್ದಾರೆ.

    2ನೇ ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ಆರಂಭಿಕ ಆಟಗಾರ ಏಡನ್ ಮಾರ್ಕ್ರಮ್‌ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ವೇಗಿ ಇಶಾಂತ್ ಶರ್ಮಾರ ಎಸೆತವನ್ನು ಗ್ರಹಿಸಲು ವಿಫಲರಾದ ಮಾರ್ಕ್ರಮ್‌ ಎಲ್‍ಡಿಬ್ಲ್ಯು ಬಲೆಗೆ ಸಿಲುಕಿ ಔಟಾದರು. ಆ ಬಳಿಕ ಹರಿಣಗಳ ಪಡೆಗೆ ಮತ್ತೊಂದು ಅಘಾತ ನೀಡಿದ ಉಮೇಶ್ ಯಾದವ್ 8 ರನ್ ಗಳಿಸಿದ್ದ ಡಿಬ್ರಯನ್ ವಿಕೆಟ್ ಪಡೆದು ಇನ್ನಿಂಗ್ಸ್ ಆರಂಭದಲ್ಲೇ ತಂಡ ಮೈಲುಗೈ ಸಾಧಿಸಲು ಕಾರಣರಾದರು.

    ಅಶ್ವಿನ್ ಮಿಂಚು: ಟೀಂ ಇಂಡಿಯಾ ವೇಗಿಗಳ ಎದುರು 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಆಫ್ರಿಕಾಗೆ ಅಶ್ವಿನ್ ಡಬಲ್ ಆಘಾತ ನೀಡಿದರು. ಮೊದಲ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ಪಡೆದಿದ್ದ ಅಶ್ವಿನ್, 48 ರನ್ ಗಳಿಸಿ ಅರ್ಧ ಶತಕ ಸಮೀಪಿಸುತ್ತಿದ್ದ ಡೀನ್ ಎಲ್ಗರ್ ಹಾಗೂ ಎಚ್ಚರಿಕೆಯ ಆಟಕ್ಕೆ ಮುಂದಾಗಿದ್ದ ನಾಯಕ ಡುಪ್ಲೆಸಿಸ್ ವಿಕೆಟ್ ಪಡೆದರು. ಇದರೊಂದಿಗೆ 71 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡ ದಕ್ಷಿಣ ಆಫ್ರಿಕಾ ಸೋಲಿನ ಸುಳಿಯಲ್ಲಿ ಸಿಲುಕಿದ್ದರೆ ಟೀಂ ಇಂಡಿಯಾ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿದೆ.

    ದಕ್ಷಿಣ ಆಫ್ರಿಕಾ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 275 ರನ್ ಗಳಿಗೆ ಆಲೌಟಾದ ಪರಿಣಾಮ ಟೀಂ ಇಂಡಿಯಾಗೆ 326 ರನ್‍ಗಳ ಬೃಹತ್ ಮುನ್ನಡೆ ಲಭಿಸಿತ್ತು. ಪಂದ್ಯದ 4ನೇ ದಿನದ ಆರಂಭದಲ್ಲೇ ಫಾಲೋಆನ್ ಎದುರಿಸಿದ ದಕ್ಷಿಣ ಆಫ್ರಿಕಾ ತಂಡ 2ನೇ ಟೆಸ್ಟ್ ಸೋಲಿನ ಭೀತಿಯನ್ನು ಎದುರಿಸುತ್ತಿದೆ. ಇತ್ತ ಭಾರೀ ಮುನ್ನಡೆಯೊಂದಿಗೆ ಇನ್ನು 2 ದಿನಗಳ ಆಟ ಭಾಗಿ ಇರುವುದರಿಂದ ಟೀಂ ಇಂಡಿಯಾ ಆಟಗಾರರು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ ಮಯಾಂಕ್ ಶತಕ ಹಾಗೂ ನಾಯಕ ವಿರಾಟ್ ಕೊಹ್ಲಿರ ದ್ವಿಶತಕದ ಬಲದಿಂದ 5 ವಿಕೆಟ್ ನಷ್ಟಕ್ಕೆ 601 ರನ್ ಗಳಿಸಿ ಡಿಕ್ಲೇರ್ ನೀಡಿತ್ತು.

  • ಧೋನಿ, ಕೊಹ್ಲಿ ಆಯ್ತು, ಈಗ ರೋಹಿತ್ ಕಾಲಿಗೆ ಬಿದ್ದ ಅಭಿಮಾನಿ

    ಧೋನಿ, ಕೊಹ್ಲಿ ಆಯ್ತು, ಈಗ ರೋಹಿತ್ ಕಾಲಿಗೆ ಬಿದ್ದ ಅಭಿಮಾನಿ

    ಪುಣೆ: ತಮ್ಮ ನೆಚ್ಚಿನ ಕ್ರಿಕೆಟಿಗರನ ಮೇಲಿರುವ ಅಭಿಮಾನವನ್ನು ತೋರಿಸಲು ಕೆಲ ಅಭಿಮಾನಿಗಳು ಕ್ರಿಕೆಟ್ ಮೈದಾನಕ್ಕೆ ಪ್ರವೇಶ ಮಾಡಿರುವ ಹಲವು ಘಟನೆಗಳು ನಡೆದಿದೆ. ಇದಕ್ಕೆ ತಾಜಾ ಸೇರ್ಪಡೆಯಾಗಿ ಇಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದ ವೇಳೆ ಅಭಿಮಾನಿಯೊಬ್ಬ ಮೈದಾನ ಪ್ರವೇಶಿಸಿ ರೋಹಿತ್ ಶರ್ಮಾ ಕಾಲಿಗೆ ಬಿದ್ದಿದ್ದಾನೆ.

    ಈ ಹಿಂದೆ ಟೀಂ ಇಂಡಿಯಾ ಕ್ರಿಕೆಟ್ ಟೂರ್ನಿಗಳು ಹಾಗೂ ಐಪಿಎಲ್ ಪಂದ್ಯಗಳ ವೇಳೆ ಟೀಂ ಇಂಡಿಯಾ ಆಟಗಾರರಾದ ಧೋನಿ ಹಾಗೂ ನಾಯಕ ಕೊಹ್ಲಿ ಅವರ ಕಾಲಿಗೆ ಅಭಿಮಾನಿಗಳು ನಮಸ್ಕರಿಸಿದ್ದರು.

    ಇಂದು ದಕ್ಷಿಣ ಆಫ್ರಿಕಾದ ಮೊದಲ ಇನ್ನಿಗ್ಸ್ ವೇಳೆ ಘಟನೆ ನಡೆದಿದ್ದು, ರೋಹಿತ್ ಶರ್ಮಾ ಫೀಲ್ಡಿಂಗ್ ಮಾಡುತ್ತಿದ್ದ ಸ್ಥಳಕ್ಕೆ ಓಡಿ ಬಂದ ಅಭಿಮಾನಿ ರೋಹಿತ್ ಕಾಲಿಗೆ ಬಿದ್ದ. ಈ ನಡುವೆ ಅಭಿಮಾನಿಯ ವರ್ತನೆಯಿಂದ ರೋಹಿತ್ ಕೆಳಕ್ಕೆ ಬೀದ್ದ ಘಟನೆಯೂ ನಡೆಯಿತು. ಅಭಿಮಾನಿಯ ಹುಚ್ಚಾಟದಿಂದ ಎಚ್ಚೆತ್ತ ರಕ್ಷಣಾ ಸಿಬ್ಬಂದಿ ಆತನನ್ನು ಮೈದಾನದಿಂದ ಹೊರ ಕರೆದು ತಂದರು.

    ಇತ್ತ 2ನೇ ಟೆಸ್ಟ್ ಪಂದ್ಯದ ಮೇಲೆ ಹಿಡಿತ ಸಾಧಿಸುವ ಪ್ರಯತ್ನದಲ್ಲಿರುವ ಟೀಂ ಇಂಡಿಯಾಗೆ ದಕ್ಷಿಣ ಆಫ್ರಿಕಾ ತಂಡದ ಬ್ಯಾಟ್ಸ್ ಮನ್ ಗಳು ಫಾಲೋಆನ್ ಭೀತಿಗೊಳಗಾಗಿದ್ದಾರೆ. ಟೀಂ ಇಂಡಿಯಾ ಪರ ವೇಗಿಗಳಾದ ಉಮೇಶ್ ಯಾದವ್, ಮೊಹಮ್ಮದ್ ಶಮಿ, ಇನ್ನಿಂಗ್ಸ್ ನಲ್ಲಿ ಪಾರಮ್ಯ ಮೆರೆದಿದ್ದಾರೆ.

  • ದ್ವಿಶತಕ ಸಿಡಿಸಿ ಸೆಹ್ವಾಗ್, ಸಚಿನ್ ದಾಖಲೆ ಮುರಿದ ಕಿಂಗ್ ಕೊಹ್ಲಿ

    ದ್ವಿಶತಕ ಸಿಡಿಸಿ ಸೆಹ್ವಾಗ್, ಸಚಿನ್ ದಾಖಲೆ ಮುರಿದ ಕಿಂಗ್ ಕೊಹ್ಲಿ

    – ಕೊಹ್ಲಿ, ಜಡೇಜಾ 205 ರನ್‍ಗಳ ಜೊತೆಯಾಟ
    – 601 ರನ್ ಗಳಿಸಿದ್ದಾಗ ಡಿಕ್ಲೇರ್ ಘೋಷಿಸಿದ ಭಾರತ

    ಪುಣೆ: ಇಂದು ದಕ್ಷಿಣ ಅಫ್ರಿಕಾದ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸಿರುವ ಕೊಹ್ಲಿ ಮಾಜಿ ಆಟಗಾರರಾದ ವೀರೇಂದ್ರ ಸೆಹ್ವಾಗ್ ಮತ್ತು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ.

    ಇಂದು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ 295 ಎಸೆತಗಳಲ್ಲಿ 28 ಬೌಂಡರಿ ಸಿಡಿಸುವ ಮೂಲಕ 7ನೇ ದ್ವಿಶತಕ ಹೊಡೆದರು. 79 ಟೆಸ್ಟ್ ಪಂದ್ಯಗಳಲ್ಲಿ 7 ದ್ವಿಶತಕ ಸಿಡಿಸುವ ಮೂಲಕ ಈ ಹಿಂದೆ ಭಾರತದ ಪರ ತಲಾ ಆರು ದ್ವಿಶತಕ ಸಿಡಿಸಿದ್ದ ವೀರೇಂದ್ರ ಸೆಹ್ವಾಗ್ ಮತ್ತು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದರು.

    ಭಾರತ 156.3 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 601 ರನ್ ಗಳಿಸಿ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. 91 ರನ್ (104 ಎಸೆತ, 8 ಬೌಂಡರಿ, 2 ಸಿಕ್ಸರ್) ಗಳಿಸಿದ್ದಾಗ ಬಲವಾದ ಹೊಡೆತ ಹೊಡೆಯಲು ಜಡೇಜಾ ಹೋಗಿ ವಿಕೆಟ್ ಒಪ್ಪಿಸಿದರು. ಜಡೇಜಾ ಔಟಾಗುತ್ತಿದ್ದಂತೆ ಕೊಹ್ಲಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುವುದಾಗಿ ಘೋಷಿಸಿದರು.

    ಎರಡನೇ ಟೆಸ್ಟ್ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೊಹ್ಲಿ ತಾನು ಎದುರಿಸಿದ 91 ಎಸೆತದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದರು. ನಂತರ 173 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿದ ಕೊಹ್ಲಿ 295 ಎಸೆತಗಳಲ್ಲಿ 200 ರನ್‍ಗಳ ಗಡಿ ದಾಟಿದರು. ಈ ಮೂಲಕ ವಿಶ್ವದಲ್ಲೇ ಅತೀ ಹೆಚ್ಚು ಟೆಸ್ಟ್ ದ್ವಿಶತಕ ಸಿಡಿಸಿದವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕೇರಿದರು. ಅಂತಿಮವಾಗಿ ಕೊಹ್ಲಿ ಔಟಾಗದೇ 254 ರನ್(336 ಎಸೆತ, 33 ಬೌಂಡರಿ, 2 ಸಿಕ್ಸರ್) ಹೊಡೆದರು. ಕೊಹ್ಲಿ ಮತ್ತು ಜಡೇಜಾ 5ನೇ ವಿಕೆಟಿಗೆ 225 ರನ್ ಗಳ ಜೊತೆಯಾಟವಾಡಿದ್ದರಿಂದ ಭಾರತ 600 ರನ್ ಗಳ ಗಡಿಯನ್ನು ದಾಟಿತು.

    ಕೊಹ್ಲಿ ಅವರನ್ನು ಬಿಟ್ಟರೆ ಅತಿ ಹೆಚ್ಚು ಟೆಸ್ಟ್ ದ್ವಿಶತಕ ಸಿಡಿಸಿದವರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಲೆಜೆಂಡ್ ಆಟಗಾರ ಡಾನ್ ಬ್ರಾಡ್ಮನ್ ಅವರು 12 ದ್ವಿಶತಕ ಸಿಡಿಸಿ ಮೊದಲ ಸ್ಥಾನದಲ್ಲಿ ಇದ್ದಾರೆ. ನಂತರ ಎರಡನೇ ಸ್ಥಾನದಲ್ಲಿ 11 ದ್ವಿಶತಕ ಸಿಡಿಸಿರುವ ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕಾರ ಇದ್ದಾರೆ. 9 ದ್ವಿಶತಕ ಸಿಡಿಸಿರುವ ವೆಸ್ಟ್ ಇಂಡೀಸ್ ದೈತ್ಯ ಆಟಗಾರ ಬ್ರಿಯಾನ್ ಲಾರಾ ಮೂರನೇ ಸ್ಥಾನದಲ್ಲಿ ಇದ್ದಾರೆ.

    ಈ ಪಂದ್ಯದಲ್ಲಿ ಏಳನೇ ದ್ವಿಶತಕ ಸಿಡಿಸಿರುವ ಕೊಹ್ಲಿ ಭಾರತದ ಪರ ಟೆಸ್ಟ್ ಕ್ರಿಕೆಟ್‍ನಲ್ಲಿ 7 ಸಾವಿರ ರನ್ ಗಳಿಸಿದ ಭಾರತದ ಏಳನೇ ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದಾರೆ. ಇದರ ಜೊತೆಗೆ ಉಪನಾಯಕ ಅಜಿಂಕ್ಯ ರಹಾನೆ ಜೊತೆಗೆ 178 ರನ್‍ಗಳ ಜೊತೆಯಾಟವಾಡಿದ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಾಲ್ಕನೇ ವಿಕೆಟ್‍ಗೆ ಅತಿ ಹೆಚ್ಚು ರನ್ ಹೊಡೆದ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ತವರಿನಲ್ಲಿ ಸೌತ್ ಆಫ್ರಿಕಾ ತಂಡದ ವಿರುದ್ಧ ಟೆಸ್ಟ್ ಸರಣಿ ಆಡುತ್ತಿರುವ ಭಾರತ, ಮೊದಲ ಟೆಸ್ಟ್ ನಲ್ಲಿ ರೋಹಿತ್ ಶರ್ಮಾ ಅವರ ಭರ್ಜರಿ ಬ್ಯಾಟಿಂಗ್ ಮತ್ತು ಮೊಹಮ್ಮದ್ ಶಮಿ ಅವರ ಮಾರಕ ಬೌಲಿಂಗ್ ದಾಳಿಯಿಂದ 203 ರನ್‍ಗಳ ಅಂತರದಲ್ಲಿ ಗೆದ್ದು ಬೀಗಿತ್ತು. ಈಗ ಎರಡನೇ ಟೆಸ್ಟ್ ಆರಂಭವಾಗಿದ್ದು, ಮೊದಲು ಬ್ಯಾಟ್ ಮಾಡುತ್ತಿರುವ ಭಾರತ ಮಯಾಂಕ್ ಅಗರವಾಲ್ ಶತಕ ಮತ್ತು ಕೊಹ್ಲಿ ದ್ವಿಶತಕದಿಂದ ಪಂದ್ಯದ ಮೇಲೆ ಉತ್ತಮ ಹಿಡಿತ ಸಾಧಿಸಿದೆ.

  • ಬೆಂಗ್ಳೂರು ಟೆಕ್ಕಿಗೆ ಸುಲಿಗೆ- 18 ಕಿ.ಮೀ ರಿಕ್ಷಾ ಪ್ರಯಾಣಕ್ಕೆ 4,300 ರೂ.ಚಾರ್ಜ್

    ಬೆಂಗ್ಳೂರು ಟೆಕ್ಕಿಗೆ ಸುಲಿಗೆ- 18 ಕಿ.ಮೀ ರಿಕ್ಷಾ ಪ್ರಯಾಣಕ್ಕೆ 4,300 ರೂ.ಚಾರ್ಜ್

    ಮುಂಬೈ: ಆಟೋ ಚಾಲಕನೊಬ್ಬ ಕೇವಲ 18 ಕಿಲೋಮೀಟರ್ ಪ್ರಯಾಣಿಸಿದ್ದಕ್ಕೆ ಬೆಂಗಳೂರು ಮೂಲದ ಟೆಕ್ಕಿಗೆ 4,300 ರೂ. ಚಾರ್ಜ್ ಮಾಡಿರುವ ಘಟನೆ ಪುಣೆಯಲ್ಲಿ ನಡೆದಿದೆ.

    ಬೆಳಗ್ಗೆ 5 ರಿಂದ ಪ್ರಯಾಣ ಆರಂಭಿಸಿದ್ದು, ಪುಣೆಯ ಕತ್ರಜ್‍ನಿಂದ ಯೆರವಾಡಾಕ್ಕೆ ಟೆಕ್ಕಿಗೆ ಆಟೋ ಚಾಲಕ 4,300 ರೂ. ಚಾರ್ಜ್ ಮಾಡಿದ್ದಾನೆ.  ಅಲ್ಲದೆ, ಮೀಟರ್ ಪ್ರಕಾರ ಹಣ ಪಾವತಿಸವುದಾಗಿ ಎಂಜಿನಿಯರ್ ಹೇಳಿದ್ದಾರೆ.

    ಕೆಲಸಕ್ಕಾಗಿ ಟೆಕ್ಕಿ ಬೆಂಗಳೂರಿನಿಂದ ಪುಣೆಗೆ ಬಂದಿದ್ದರು. ಯೆರವಾಡಾ ಪೊಲೀಸ್ ಠಾಣೆ ಬಳಿ ಅವರಿಗೆ ಕಂಪನಿಯಿಂದ ವಸತಿ ಸೌಕರ್ಯವನ್ನು ಕಲ್ಪಿಸಲಾಗಿತ್ತು. ಹೀಗಾಗಿ ಯೆರವಾಡಾಕ್ಕೆ ಆಟೋ ಮಾಡಿಕೊಂಡು ಬಂದಿದ್ದರು.

    ಎಂಜಿನಿಯರ್ ಈ ಕುರಿತು ಪ್ರತಿಕ್ರಿಯೆ ನೀಡಿ, ಬುಧವಾರ ಬೆಳಗ್ಗೆ 5 ಗಂಟೆಗೆ ಕತ್ರಜ್-ದೇಹು ರಸ್ತೆಯ ಬೈಪಾಸ್ ಬಳಿ ಬಸ್ಸಿನಲ್ಲಿ ಇಳಿದೆ. ನಂತರ ಕ್ಯಾಬ್ ಬುಕ್ ಮಾಡಲು ಪ್ರಯತ್ನಿಸಿದೆ. ಆದರೆ ಯಾವುದೇ ವಾಹನಗಳು ಲಭ್ಯವಿರಲಿಲ್ಲ. ಅಷ್ಟರಲ್ಲಿ, ಆಟೋ ಸಮೀಪಿಸುತ್ತಿರುವುದನ್ನು ಗಮನಿಸಿದೆ. ಒಬ್ಬ ವ್ಯಕ್ತಿ ಆಟೋ ಓಡಿಸುತ್ತಿದ್ದನು. ಆದರೆ ಪ್ರಯಾಣಿಕರ ಸೀಟ್‍ನಲ್ಲಿ ಆಟೋ ಚಾಲಕ ಕುಡಿದು ಕುಳಿತಿದ್ದನು. ಕೇಳಿದ್ದಕ್ಕೆ ಪೊಲೀಸ್ ಠಾಣೆಯನ್ನು ತಪ್ಪಿಸಲು ನನ್ನ ಸ್ನೇಹಿತನಿಗೆ ಆಟೋ ಓಡಿಸಲು ಕೇಳಿಕೊಂಡೆ ಎಂದು ಹೇಳಿದ ಎಂದು ಎಂಜಿನಿಯರ್ ವಿವರಿಸಿದ್ದಾರೆ.

    ಪ್ರಯಾಣ ಪ್ರಾರಂಭಿಸುವುದಕ್ಕೂ ಮೊದಲು ಮೀಟರ್ ಜೀರೋದಲ್ಲಿತ್ತೇ ಎಂಬುದನ್ನು ನಾನು ನೋಡಿರಲಿಲ್ಲ. ಪ್ರಯಾಣ ಮುಗಿದ ನಂತರ ಒಟ್ಟು 4,300 ರೂ. ಚಾರ್ಜ್ ಆಗಿದೆ ಎಂದು ಚಾಲಕ ತಿಳಿಸಿದ. ಅಷ್ಟು ಏಕೆ ಎಂದು ಕೇಳಿದ್ದಕ್ಕೆ ನಗರ ಪ್ರವೇಶಿಸಲು 600 ರೂ. ಪಾವತಿಸಿದ್ದೇವೆ. ನಗರವನ್ನು ತೊರೆಯಲು 600 ರೂ. ಪಾವತಿಸಿದ್ದೇವೆ. ಉಳಿದ 3,100 ರೂ. ಕಿಲೋಮೀಟರ್ ಶುಲ್ಕವಾಗಿದೆ ಒಟ್ಟು 4,300 ರೂ. ಪಾವತಿಸಬೇಕು ಎಂದು ತಿಳಿಸಿದ. ಆದರೆ ಕತ್ರಜ್‍ನಿಂದ ಯೆರವಾಡಾಕ್ಕೆ ಕೇವಲ 18 ಕಿ.ಮೀ.ಮಾತ್ರ ದೂರವಿದೆ ಎಂದು ತಿಳಿಸಿದ್ದಾರೆ.

    ಅಪರಿಚಿತ ಊರು, ರಸ್ತೆಯಲ್ಲಿ ಜನ ಯಾರೂ ಇಲ್ಲದ್ದನ್ನು ಕಂಡು ಎಂಜಿನಿಯರ್ ಭಯಭೀತನಾಗಿ ಆಟೋ ಶುಲ್ಕ ಪಾವತಿಸಿದ್ದಾರೆ. ಅಲ್ಲದೆ ಕುಡಿದಿದ್ದರಿಂದ ಇಬ್ಬರನ್ನೂ ಕಂಡು ಹೆದರಿದ್ದಾರೆ. ನಂತರ ಪೊಲೀಸ್ ಠಾಣೆಗೆ ತೆರಳಿ ಆಟೋರಿಕ್ಷಾ ನಂಬರ್ ನೀಡಿ ಎಂಜಿನಿಯರ್ ದೂರು ನೀಡಿದ್ದಾರೆ.

    ಈ ಕುರಿತು ಯರವಾಡಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ದೂರನ್ನು ಸ್ವೀಕರಿಸಿದ್ದೇವೆ. ಸಂಬಂಧಪಟ್ಟ ಪೊಲೀಸ್ ಠಾಣೆಗೆ ಕಳುಹಿಸಿದ್ದೇವೆ. ಶಂಕಿತರನ್ನು ಹುಡುಕಿ ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.

  • ಗ್ರಾಮೀಣ ಮಕ್ಕಳ ಅಚ್ಚು ಮೆಚ್ಚಿನ ಎತ್ತಿನಬಂಡಿ ಗ್ರಂಥಾಲಯ

    ಗ್ರಾಮೀಣ ಮಕ್ಕಳ ಅಚ್ಚು ಮೆಚ್ಚಿನ ಎತ್ತಿನಬಂಡಿ ಗ್ರಂಥಾಲಯ

    ಪುಣೆ: ಮಹಾರಾಷ್ಟ್ರದ ಸೋಲಾಪುರದ ದರ್ಗನಹಳ್ಳಿ ಗ್ರಾಮದ ವಿಶೇಷ ಗ್ರಂಥಾಲಯ ಈಗ ಸಖತ್ ಸುದ್ದಿಯಲ್ಲಿದೆ. ಎತ್ತಿನಬಂಡಿಯಲ್ಲಿಯೇ ಪುಸ್ತಕಗಳನ್ನು ಇರಿಸಲಾಗಿದ್ದು, ಇದು ಹಳ್ಳಿ ಮಕ್ಕಳ ಅಚ್ಚುಮೆಚ್ಚಿನ ಎತ್ತಿನಬಂಡಿ ಗ್ರಂಥಾಲಯ ಎಂದೇ ಮೆಚ್ಚುಗೆ ಪಡೆದಿದೆ.

    ಸೋಲಾಪುರದ ದರ್ಗನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಪುಸ್ತಕ ಓದುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದಕ್ಕೆ ಕಾರಣ ಕಳೆದ 6 ತಿಂಗಳಿಂದ ಎತ್ತಿನಬಂಡಿ ಗ್ರಂಥಾಲಯವನ್ನು ಗ್ರಾಮಕ್ಕೆ ತರುತ್ತಿರುವ ಕಾಶಿನಾಥ್ ಕೋಲಿ ಅವರ ಶ್ರಮ. ಹೌದು. ಸೋಲಾಪುರದ ನಗರ ಗ್ರಂಥಾಲಯದಲ್ಲಿ ಆಫೀಸ್ ಹುಡುಗನಾಗಿ ಕೆಲಸ ಮಾಡುವ ಕಾಶಿನಾಥ್ ಕೋಲಿ ಅವರು ಈ ಅಪರೂಪದ ಎತ್ತಿನಬಂಡಿ ಗ್ರಂಥಾಲಯವನ್ನು ನಡೆಸುತ್ತಿದ್ದಾರೆ. ಈ ಗ್ರಂಥಾಲಯವನ್ನು ಕಾಶಿನಾಥ್ ಅವರು ವಿಶೇಷವಾಗಿ ಹಳ್ಳಿಯ ಮಕ್ಕಳಿಗಾಗಿಯೇ ಮಾಡಿದ್ದಾರೆ.

    ಕಳೆದ ಆರು ತಿಂಗಳಿನಿಂದ ಈ ಗ್ರಂಥಾಲಯ ಕಾರ್ಯನಿರ್ವಸುತ್ತಿದೆ. ಹೀಗಾಗಿ ಹಳ್ಳಿಯ ಮಕ್ಕಳು ಈಗ ಮನೆಯಲ್ಲಿಯೇ ಕುಳಿತು ಪುಸ್ತಕಗಳನ್ನು ಉಚಿತವಾಗಿ ಓದುತ್ತಿದ್ದಾರೆ. ಮಕ್ಕಳ ಅನುಕೂಲಕ್ಕಾಗಿ ಕಾಶಿನಾಥ್ ಅವರು ಸುಮಾರು ಒಂದೂವರೆ ಸಾವಿರ ಪುಸ್ತಕಗಳನ್ನು ತಮ್ಮ ಎತ್ತಿನಬಂಡಿ ಗ್ರಂಥಾಲಯದಲ್ಲಿ ಸಂಗ್ರಹಿಸಿಟ್ಟಿದ್ದಾರೆ.

    ತಮ್ಮ ರಜಾ ದಿನಗಳಲ್ಲಿ ಅವರು ಎತ್ತಿನಗಾಡಿಯಲ್ಲಿ ಪುಸ್ತಕಗಳನ್ನು ಹೊತ್ತು ದರ್ಗನಹಳ್ಳಿ ಗ್ರಾಮಕ್ಕೆ ಹೋಗುತ್ತಾರೆ. ಅವರ ಎತ್ತಿನ ಬಂಡಿಯಲ್ಲಿ ಚಲಿಸುತ್ತಿರುವ ಮೊಬೈಲ್ ಲೈಬ್ರರಿ ಈಗ ದರ್ಗನಹಳ್ಳಿ ಗ್ರಾಮದ ಗುರುತಾಗಿದೆ. ಮೊಬೈಲ್, ಟಿವಿಯಲ್ಲಿ ಮಕ್ಕಳು ಹೆಚ್ಚು ಗಮನ ಹರಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಅವರು ಪುಸ್ತಕಗಳನ್ನು ಓದುವ ಮಕ್ಕಳ ಆಸಕ್ತಿಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವುದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

    ಈ ಬಗ್ಗೆ ಮಾತನಾಡಿದ ಕಾಶಿನಾಥ್, ಮೊಬೈಲ್ ವ್ಯಾನ್ ಲೈಬ್ರರಿಯ ಬದಲು ನಾನು ಬುಲಕ್ ಕಾರ್ಟ್ ಲೈಬ್ರರಿಯನ್ನು ಆರಿಸಿದ್ದೇನೆ. ಗ್ರಾಮೀಣ ಪ್ರದೇಶವಾದ ಕಾರಣಕ್ಕೆ ಎತ್ತಿನಬಂಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಈ ಎತ್ತಿನಬಂಡಿ ಗ್ರಂಥಾಲಯದಿಂದ ಚಿಕ್ಕ ಮಕ್ಕಳಲ್ಲಿ ಓದುವ ಆಸಕ್ತಿ ಹೆಚ್ಚಾಗಿದೆ ಎಂದು ಖುಷಿಯನ್ನು ಹಂಚಿಕೊಂಡರು.