Tag: ಪುಣೆ

  • ಸೋದರಮಾವನ ಜೊತೆ ಸೇರಿ ಪತಿಯನ್ನೇ ಕೊಂದಳು!

    ಸೋದರಮಾವನ ಜೊತೆ ಸೇರಿ ಪತಿಯನ್ನೇ ಕೊಂದಳು!

    ಮುಂಬೈ: ಪತಿಯ ಕುಡಿತದಿಂದ ಬೇಸತ್ತು ಪತ್ನಿ ಸೋದರಮಾವನ ಸಹಾಯದಿಂದ ಕೊಲೆ ಮಾಡಿದ ಘಟನೆಯೊಂದು ಪುಣೆಯಲ್ಲಿ ಬೆಳಕಿಗೆ ಬಂದಿದೆ.

    ಮೃತ ವ್ಯಕ್ತಿಯನ್ನು ಕಪ್ತಾನ್‍ಸಿಂಗ್ ನಾಯಕ್(37) ಎಂದು ಗುರುತಿಸಲಾಗಿದೆ. ಅಂಜಲಿ ಚವ್ಹಾಣ್ ನಾಯಕ್(32) ಮತ್ತು ಸೋದರಮಾವ ಗಜೇಂದ್ರ ಚಿತ್ತಾರಸಿಂಗ್ ನಾಯಕ್(36) ಸೇರಿ ಕಪ್ತಾನ್‍ಸಿಂಗ್ ನಾಯಕ್‍ನನ್ನು ಕೊಂದಿದ್ದಾರೆ. ಪ್ರಸ್ತುತ ಘಟನೆ ಬೆಳಕಿಗೆ ಬಂದಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಎಂದಿಗೂ ಮನೆಗೆ ಬಾರದ ಮಾಲಕಿಗಾಗಿ ಕಾಯುತ್ತಿರುವ ನಾಯಿ – ವೀಡಿಯೋ ವೈರಲ್!

    POLICE JEEP

    ಕಾರಣವೇನು?
    ಕಪ್ತಾನ್‍ಸಿಂಗ್ ಮತ್ತು ಅವರ ಪತ್ನಿ ಅಂಜಲಿ ಚವ್ಹಾಣ್-ನಾಯಕ್ ಮುಂಡ್ವಾದ ಕೇಶವನಗರ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಮೃತ ವ್ಯಕ್ತಿ ದೆಹಲಿ ಮೂಲದವರಾಗಿದ್ದು, ಪುಣೆಯಲ್ಲಿ ವಾಸವಾಗಿದ್ದರು. ಕಪ್ತಾನ್‍ಸಿಂಗ್ ದಿನಗೂಲಿ ಕೆಲಸ ಮಾಡುತ್ತಿದ್ದು, ಕುಡಿತದ ಚಟ ಇತ್ತು.

    ಅಲ್ಲದೆ ಕುಡಿದು ಬಂದು ದಿನನಿತ್ಯ ಅಂಜಲಿ ಮೇಲೆ ಹಲ್ಲೆ ಮಾಡುತ್ತಿದ್ದ. ಇದರಿಂದ ಬೇಸತ್ತ ಅಂಜಲಿ ಭಾನುವಾರ ಮಧ್ಯಾಹ್ನ, ತನ್ನ ಸಹೋದರಿಯ ಪತಿಯಿಂದ ಸಹಾಯ ಕೇಳಿದ್ದಾಳೆ. ಈ ಸಂಬಂಧ ಇಬ್ಬರು ಸೇರಿ ತಮ್ಮ ಮನೆಯಲ್ಲೇ ಕಪ್ತಾನ್ ಸಿಂಗ್‍ನನ್ನು ಹೊಡೆದು ಕೊಂದಿದ್ದಾರೆ. ಇದನ್ನೂ ಓದಿ: ಪಿಂಚಣಿ ಪಡೆಯಲು ಚಿಕ್ಕಪ್ಪನ ಶವವನ್ನ ಪೋಸ್ಟ್ ಆಫೀಸ್‍ಗೇ ತಂದ!

    ಮುಂಡ್ವಾ ಪೊಲೀಸ್ ಠಾಣೆಯ ಪೊಲೀಸರಿಗೆ ಈ ಮಾಹಿತಿ ತಿಳಿದ ತಕ್ಷಣ ಇಬ್ಬರನ್ನು ಬಂಧಿಸಿದ್ದಾರೆ. ಪ್ರಸ್ತುತ ಇವರಿಬ್ಬರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302(ಕೊಲೆ) ಮತ್ತು 34 ಅಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.

  • ವಿಧವೆ ಮೇಲೆ ಅತ್ಯಾಚಾರ – ಐವರ ಬಂಧನ

    ವಿಧವೆ ಮೇಲೆ ಅತ್ಯಾಚಾರ – ಐವರ ಬಂಧನ

    ಪುಣೆ: ವಿಧವೆ ಮೇಲೆ ಅತ್ಯಾಚಾರ ಮಾಡಿದ್ದ ಎಂಟು ಮಂದಿ ಆರೋಪಿಗಳ ಪೈಕಿ 5 ಮಂದಿಯನ್ನು ಬಂಧನ ಮಾಡಲಾಗಿದೆ ಪೊಲೀಸರು ತಿಳಿಸಿದ್ದಾರೆ.

    ಶಿರೂರಿನಲ್ಲಿ ವಿಧವೆಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆ ಗ್ರಾಮಾಂತರ ಪೊಲೀಸರು ಐವರನ್ನು ಬಂಧಿಸಿದ್ದು, ಮೂರು ಮಂದಿ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

    ಬಂಧಿತರು ಮೌಲಿ ಪವಾರ್, ಕಾಲು ವಾಲುಂಜ್, ವಿಠ್ಠಲ್ ಕಾಳೆ, ರಜಾಕ್ ಪಠಾಣ್, ಪಪ್ಪು ಗಾಯಕ್ವಾಡ್, ಆಕಾಶ್ ಗಾಯಕ್ವಾಡ್, ನವನಾಥ್ ವಾಲುಂಜ್ ಮತ್ತು ಸಂದೀಪ್ ವಾಲುಂಜ್ ಎಂದು ಗುರುತಿಸಲಾಗಿದೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323, 376 (2), 376 (ಡಿ) ಮತ್ತು 506ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    ಇನ್ಸ್‌ಪೆಕ್ಟರ್ ಸುರೇಶಕುಮಾರ್ ರಾವುತ್, ಸಂತ್ರಸ್ತೆ ವಿಧವೆಯಾಗಿದ್ದಾಳೆ. ಅವಳ ಪರಿಸ್ಥಿತಿಯ ದುರುಪಯೋಗಪಡಿಸಿಕೊಂಡು ಕೆಲವರು ಮೇ 2021ರಲ್ಲಿ ಆಕೆಯ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ. ಸಂತ್ರಸ್ತೆ ದೂರು ನೀಡಲು ಬಯಸಿದ್ದರು. ಆದರೆ ಆಕೆಗೆ ಈ ಕುರಿತಾಗಿ ಸರಿಯಾದ ತಿಳಿವಳಿಕೆ ಇರಲಿಲ್ಲ. ಯಾರ ಸಹಾಯವೂ ಇಲ್ಲದ ಕಾರಣ ಆಕೆ ಯಾವುದೇ ದೂರು ನೀಡಲು ಮುಂದೆ ಬಂದಿರಲಿಲ್ಲ. ಆರೋಪಿಗಳು ಮಹಿಳೆಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಬಲವಂತವಾಗಿ ದೈಹಿಕ ಸಂಪರ್ಕ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗೋವಾ ಚುನಾವಣೆ- ಜಗದೀಶ್ ಶೆಟ್ಟರ್ ಪ್ರಚಾರ, ಮತಯಾಚನೆ

    RAPE

    ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎನ್ನುವ ಮಾಹಿತಿ ನಮಗೆ ಸಿಕ್ಕಿತು. ಸಂತ್ರಸ್ತೆಯನ್ನು ಭೇಟಿ ಮಾಡಲು ನಿರ್ಭಯಾ ಘಟಕದ ತಂಡವನ್ನು ಕಳುಹಿಸಿ ತನಿಖೆ ಮಾಡಿದ್ದೇವೆ. ಇದುವರೆಗೆ ಐದು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ನ್ಯಾಯಾಧೀಶರು ಅವರನ್ನು ಏಳು ದಿನಗಳ ಕಾಲ ಪೊಲೀಸ್‍ಗೆ ವಹಿಸಿದ್ದಾರೆ. ಇನ್ನೂ ಮೂವರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದೇವೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಇನ್ಸ್‌ಪೆಕ್ಟರ್ ಮಾಹಿತಿ ನೀಡಿದ್ದಾರೆ.

  • ಕೆಟ್ಟದಾಗಿ ಮುಟ್ಟಿದ್ದಕ್ಕಾಗಿ ಛೀಮಾರಿ ಹಾಕಿದ ಮಹಿಳೆಯನ್ನೇ ಕೊಲ್ಲಲು ಮುಂದಾದ ವ್ಯಕ್ತಿ ಅರೆಸ್ಟ್

    ಕೆಟ್ಟದಾಗಿ ಮುಟ್ಟಿದ್ದಕ್ಕಾಗಿ ಛೀಮಾರಿ ಹಾಕಿದ ಮಹಿಳೆಯನ್ನೇ ಕೊಲ್ಲಲು ಮುಂದಾದ ವ್ಯಕ್ತಿ ಅರೆಸ್ಟ್

    ಪುಣೆ: ಮಹಿಳೆಯನ್ನು ಒಬ್ಬ ಪುರುಷ ಕೆಟ್ಟದಾಗಿ ಮುಟ್ಟಿದ್ದು, ಅದಕ್ಕೆ ಆಕೆ ಛೀಮಾರಿ ಹಾಕಿದ್ದಾಳೆ. ಪರಿಣಾಮ ಆಕೆಯನ್ನು ಈತ ಕೊಲ್ಲಲು ಪ್ರಯತ್ನಿಸಿರುವ ಘಟನೆ ಪುಣೆಯಲ್ಲಿ ನಡೆದಿದೆ.

    ಪುಣೆಯ ಗುರುವಾರ್ ಪೇಠ್ ಪ್ರದೇಶದ 38 ವರ್ಷದ ವ್ಯಕ್ತಿಯೊಬ್ಬ 35 ವರ್ಷದ ಮಹಿಳೆಯನ್ನು ಅನುಚಿತ ರೀತಿಯಲ್ಲಿ ಮುಟ್ಟಿದ್ದಾನೆ. ಇದನ್ನು ಖಂಡಿಸಿ ಮಹಿಳೆ ಆತನನ್ನು ಬೈದಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಆತ ಘಟನೆ ನಡೆದ ಒಂದು ದಿನದ ನಂತರ ಮಹಿಳೆಯನ್ನು ಕೊಲ್ಲಲು ಪ್ರಯತ್ನಿಸಿದ್ದಾನೆ. ನಂತರ ಆಕೆ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಕೊಂಡ್ವಾ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಉನ್ನತ ಶಿಕ್ಷಣ ಸಚಿವರು ನಮಗೆ ಕೊಟ್ಟಿದ್ದು ಸಿಹಿಯಲ್ಲ, ಕಹಿ: ಅತಿಥಿ ಉಪನ್ಯಾಸಕರ ಆಕ್ರೋಶ

    ಜನವರಿ 11 ರಂದು ಮಹಿಳೆ ಪತಿಯೊಂದಿಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಮಾರುಕಟ್ಟೆಗೆ ಹೋಗಿದ್ದಳು. ಈ ವೇಳೆ ಅಲ್ಲಿಗೆ ಬಂದ ವ್ಯಕ್ತಿ ಆಕೆಯನ್ನು ಅನುಚಿತವಾಗಿ ಸ್ಪರ್ಶಿಸಿದ್ದಾನೆ. ಎಲ್ಲರ ಮುಂದೆ ಅಸಭ್ಯವಾಗಿ ನಡೆದುಕೊಂಡಿದ್ದಕ್ಕೆ ಮಹಿಳೆ ಕಿಡಿಕಾರಿದ್ದಾಳೆ.

    ಮರುದಿನ ಮಹಿಳೆ ಪತಿಯೊಂದಿಗೆ ಕಾರಿನಲ್ಲಿ ಹೋಗುತ್ತಿರುವಾಗ ಅದೇ ವ್ಯಕ್ತಿ ಅವಳನ್ನು ಹಿಂಬಾಲಿಸಿದ್ದಾನೆ. ನಂತರ ಕೊಂಡ್ವಾ ಪ್ರದೇಶದಲ್ಲಿ ಆರೋಪಿ ಬೈಕ್‍ನಿಂದ ಕಾರಿಗೆ ಡಿಕ್ಕಿ ಹೊಡೆದು ಕಾರನ್ನು ನಿಲ್ಲಿಸಿದ್ದಾನೆ. ಏಕೆ ಈ ರೀತಿ ಓಡಿಸುತ್ತಿದ್ದಿರಾ ಎಂದು ಆಕೆಯ ಪತಿ ಕೇಳಿದ್ದಾನೆ. ಇದರಿಂದ ಸಿಟ್ಟಿಗೆದ್ದ ಆರೋಪಿ, ಮಹಿಳೆಯ ಪತಿಯನ್ನು ಆರೋಪಿ ಥಳಿಸಿದ್ದಾನೆ. ಇತ್ತ ಕಾರಿನಲ್ಲಿದ್ದ ಮಹಿಳೆಯನ್ನು ಆರೋಪಿ ಕೊಲ್ಲಲು ಯತ್ನಿಸಿದ್ದಾನೆ.

    ಘಟನೆಯಲ್ಲಿ ಮಹಿಳೆ ಮತ್ತು ಆಕೆಯ ಪತಿ ಗಾಯಗೊಂಡಿದ್ದು, ಈ ಕುರಿತು ಪೊಲೀಸರಿಗೆ ಮಹಿಳೆ ದೂರು ನೀಡಿದ್ದಾಳೆ. ದೂರಿನ ಆಧಾರ ಮೇಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: MPSC ಹುದ್ದೆ ಆಕಾಂಕ್ಷಿ ಅನುಮಾನಾಸ್ಪದ ರೀತಿಯಲ್ಲಿ ಕೊಠಡಿಯಲ್ಲಿ ಶವವಾಗಿ ಪತ್ತೆ

    ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 307(ಕೊಲೆ ಯತ್ನ), 323(ಗಾಯಗೊಳಿಸುವುದು) ಮತ್ತು 354(ಹೆಣ್ಣಿನ ಮೇಲೆ ದೌರ್ಜನ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

  • ಕೊರೊನಾದಿಂದ MPSC ಪರೀಕ್ಷೆ ವಿಳಂಬ – ಉದ್ಯೋಗಾಕಾಂಕ್ಷಿ ಆತ್ಮಹತ್ಯೆ?

    ಕೊರೊನಾದಿಂದ MPSC ಪರೀಕ್ಷೆ ವಿಳಂಬ – ಉದ್ಯೋಗಾಕಾಂಕ್ಷಿ ಆತ್ಮಹತ್ಯೆ?

    ಪುಣೆ: ಮಹಾರಾಷ್ಟ್ರ ಸಾರ್ವಜನಿಕ ಸೇವಾ ಆಯೋಗದ (ಎಂಪಿಎಸ್‍ಸಿ) ಹುದ್ದೆ ಆಕಾಂಕ್ಷಿಯೊಬ್ಬರು ನಿನ್ನೆ ಮಧ್ಯಾಹ್ನ ಪುಣೆಯ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

    33 ವರ್ಷದ ವ್ಯಕ್ತಿಯೊಬ್ಬ ಎಂಪಿಎಸ್‍ಸಿ ಆಕಾಂಕ್ಷಿಯಾಗಿದ್ದು, ಅವರು ಪುಣೆಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಇತ್ತೀಚೆಗೆ ವೈದ್ಯಕೀಯ ಕಾರಣಗಳ ಆಧಾರದ ಮೇಲೆ ಎಂಪಿಎಸ್‍ಸಿ ಆಯ್ಕೆ ಪ್ರಕ್ರಿಯೆಯಲ್ಲಿ ಅವರನ್ನು ನಿರಾಕರಿಸಲಾಗಿತ್ತು. ನಂತರ ಇವರು ರಾಜ್ಯ ಪೊಲೀಸ್ ಪಡೆಗೆ ಸಬ್ ಇನ್ಸ್ ಪೆಕ್ಟರ್ ಆಗಿ ಆಯ್ಕೆಯಾಗಲು ತಯಾರಿ ನಡೆಸುತ್ತಿದ್ದರು. ಆದರೆ ಈಗ ಅವರು ವಾಸವಾಗಿದ್ದ ಕೋಣೆಯಲ್ಲೇ ಶವವಾಗಿ ಪತ್ತೆಯಾಗಿದ್ದಾರೆ. ಇದನ್ನೂ ಓದಿ: ಆಫ್ಘಾನ್ ಸಂಗೀತಗಾರನ ಮುಂದೆಯೇ ವಾದ್ಯ ಸುಟ್ಟ ತಾಲಿಬಾನ್

    ಘಟನೆ ಕುರಿತು ಪೊಲೀಸ್ ಇನ್ಸ್ ಪೆಕ್ಟರ್ ಕುಂಡಲಿಕ್ ಕೈಗುಡೆ ಪ್ರತಿಕ್ರಿಯಿಸಿದ್ದು, ಆಕಾಂಕ್ಷಿಯು 2010ರಿಂದ ಸದಾಶಿವ ಪೇಟೆಯ ಹಾಸ್ಟೆಲ್‍ನಲ್ಲಿ ವಾಸಿಸುತ್ತಿದ್ದರು. ಇತ್ತೀಚೆಗೆ ಸಬ್ ಇನ್ಸ್‍ಪೆಕ್ಟರ್ ಆಗಲು ಅವರು ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದರು. ಈ ಮಧ್ಯೆ ಅವರಿಗೆ ಕೌಟುಂಬಿಕ ಸಮಸ್ಯೆಗಳಿತ್ತು ಎಂದು ವಿವರಿಸಿದ್ದಾರೆ. ಅಷ್ಟೇ ಅಲ್ಲದೇ ಇದು ಆತ್ಮಹತ್ಯೆ ಇರಬಹುದು ಎಂದು ಶಂಕಿಸಿದ್ದಾರೆ.

    ಈ ಹಿಂದೆ ಜುಲೈ 2021 ರಲ್ಲಿ ಎಂಪಿಎಸ್‍ಸಿ ಆಕಾಂಕ್ಷಿಯೊಬ್ಬ ಪುಣೆ ನಗರದ ಹಡಪ್ಸರ್ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ವಾರಪೂರ್ತಿ ಜನಜಾತ್ರೆ, ವಾರಾಂತ್ಯದಲ್ಲಿ ಕರ್ಫ್ಯೂ – ಆತಂಕದಲ್ಲಿ ಕಾಫಿನಾಡು ಜನತೆ

    ಡಿಸೆಂಬರ್ 2021 ರಲ್ಲಿ ಮತ್ತೊಬ್ಬ ಯುವಕನ ಶವ ದೌಂಡ್ ಪ್ರದೇಶದಲ್ಲಿ ಪತ್ತೆಯಾಗಿತ್ತು. ಇವರೆಲ್ಲರೂ ಎಂಪಿಎಸ್‍ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಮಹಾರಾಷ್ಟ್ರ ಸಾರ್ವಜನಿಕ ಸೇವಾ ಆಯೋಗ (ಎಂಪಿಎಸ್‍ಸಿ) ಪರೀಕ್ಷೆಯು ವಿಳಂಬವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಕಾಂಕ್ಷಿಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

  • ಚಾಲಕನ ಪ್ರಜ್ಞೆ ತಪ್ಪಿ ಕಾಡಿನ ಮಧ್ಯೆ ನಿಂತ ಬಸ್‌ – 10 ಕಿ.ಮೀ. ಬಸ್ ಚಲಾಯಿಸಿ ಪ್ರಯಾಣಿಕರ ಕಾಪಾಡಿದ ಮಹಿಳೆ

    ಚಾಲಕನ ಪ್ರಜ್ಞೆ ತಪ್ಪಿ ಕಾಡಿನ ಮಧ್ಯೆ ನಿಂತ ಬಸ್‌ – 10 ಕಿ.ಮೀ. ಬಸ್ ಚಲಾಯಿಸಿ ಪ್ರಯಾಣಿಕರ ಕಾಪಾಡಿದ ಮಹಿಳೆ

    ಮುಂಬೈ: ಬಸ್ ಚಾಲಕ ಮೂರ್ಛೆ ರೋಗದಿಂದ ಪ್ರಜ್ಞೆ ತಪ್ಪಿ ಬಿದ್ದ ಕಾರಣ ಬಸ್‍ನಲ್ಲಿದ್ದ ಮಹಿಳೆಯೊಬ್ಬರು ತಾವೇ 10 ಕಿ.ಮೀ. ಬಸ್ ಚಲಿಸಿ ಭಾರೀ ಅನಾಹುತ ತಪ್ಪಿಸಿರುವ ಘಟನೆ ಪುಣೆಯಲ್ಲಿ ನಡೆದಿದೆ. ಈ ವೀಡಿಯೋ ವೈರಲ್ ಆಗಿದ್ದು, ಮಹಿಳೆಯ ಸಾಹಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಯೋಗಿತಾ ಸತಾವ್(42) ಬಸ್‍ನ್ನು ಓಡಿಸಿದ ಮಹಿಳೆ. ಇವರು ತಮ್ಮ ಮಕ್ಕಳು ಹಾಗೂ ಇತರೆ ಮಹಿಳೆಯರು ಮತ್ತು ಅವರ ಮಕ್ಕಳ ಜೊತೆ ಕೃಷಿ ಪ್ರವಾಸಕ್ಕೆ ತೆರಳಿದ್ದರು. ಅಲ್ಲಿಂದ ವಾಪಸ್ಸಾಗುವ ವೇಳೆ ಕಾಡಿನ ರಸ್ತೆಯಲ್ಲಿ ಇದ್ದಕ್ಕಿದ್ದಂತೆ ಮಿನಿಬಸ್‍ನ ಚಾಲಕ ಪ್ರಜ್ಞೆ ತಪ್ಪಿದಂತಾಗಿ ನಿರ್ಜನ ಪ್ರದೇಶದಲ್ಲಿ ಬಸ್ ನಿಲ್ಲಿಸಿದ್ದಾನೆ. ಇದರಿಂದ ಬಸ್‍ನಲ್ಲಿದ್ದ ಪ್ರಯಾಣಿಕರೆಲ್ಲರೂ ಭಯಭೀತರಾಗಿದ್ದರು.

    ಈ ವೇಳೆ ಆತಂಕಗೊಳ್ಳದ ಯೋಗಿತಾ, ಉಳಿದವರಿಗೂ ಧೈರ್ಯ ತುಂಬಿ ತಾವೇ ಬಸ್ ಚಲಿಸಿದ್ದಾರೆ. ಮೊದಲೇ ಕಾರು ಚಲಾಯಿಸಿ ಅನುಭವವಿದ್ದ ಯೋಗಿತಾ, 10 ಕಿ.ಮೀ. ದೂರ ಬಸ್ ಚಲಾಯಿಸಿಕೊಂಡು ಹೋಗಿ ಸಮೀಪದ ಆಸ್ಪತ್ರೆಗೆ ಚಾಲಕನನ್ನು ದಾಖಲಿಸಿ, ಆತನ ಪ್ರಾಣ ಕಾಪಾಡಿದ್ದಾರೆ. ಅಲ್ಲದೇ ಇತರೆ ಪ್ರಯಾಣಿಕರನ್ನು ಸುರಕ್ಷಿತವಾಗಿ ಮನೆಗೆ ಬಿಟ್ಟಿದ್ದಾರೆ. ಇದನ್ನೂ ಓದಿ: ಡೊನಾಲ್ಡ್‌ ಟ್ರಂಪ್‌ಗೆ ಜೀವ ಬೆದರಿಕೆ – ಇರಾನ್ ನಾಯಕನಿಗೆ ಸಂಬಂಧಿಸಿದ ಖಾತೆ ಬ್ಯಾನ್‌ ಮಾಡಿದ ಟ್ವಿಟ್ಟರ್‌

    ಆತಂಕದ ಸಮಯದಲ್ಲೂ ಧೃತಿಗೆಡದೇ ಬಸ್ ಚಲಾಯಿಸಿದ ಯೋಗಿತಾ ಅವರ ವೀಡಿಯೋ ಇದೀಗ ವೈರಲ್ ಆಗಿದ್ದು, ಅವರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ: ಚುನಾವಣೆ ಮುಂದೂಡುವಂತೆ ಆಯೋಗಕ್ಕೆ ಪಂಜಾಬ್‌ ಸಿಎಂ ಮನವಿ ಪತ್ರ

  • ಗಾಳಿಪಟ ಹಾರಿಸುವಾಗ ಬಿದ್ದು ಒಂದೇ ದಿನ 63ಕ್ಕೂ ಹೆಚ್ಚು ಮಂದಿಗೆ ಗಾಯ

    ಗಾಳಿಪಟ ಹಾರಿಸುವಾಗ ಬಿದ್ದು ಒಂದೇ ದಿನ 63ಕ್ಕೂ ಹೆಚ್ಚು ಮಂದಿಗೆ ಗಾಯ

    ಗಾಂಧಿನಗರ: ರಾಜ್ಯದಾದ್ಯಂತ ಇಂದು ಗಾಳಿಪಟ ಹಾರಿಸುವಾಗ 63ಕ್ಕೂ ಹೆಚ್ಚು ಮಂದಿ ಮೇಲಿನಿಂದ ಬಿದ್ದು ಗಾಯಗೊಂಡಿದ್ದಾರೆ. 108 ಅಂಬುಲೆನ್ಸ್ ಸೇವೆಗೆ 1,203 ದೂರುಗಳು ಬಂದಿವೆ ಎನ್ನಲಾಗಿದೆ.

    ರಸ್ತೆಯಲ್ಲಿ ಪ್ರಯಾಣಿಸುವವರೇ ಅಪಘಾತಕ್ಕೆ ಸಿಲುಕೊಂಡವರು. ನೇತಾಡುತ್ತಿದ್ದ ಗಾಳಿಪಟದ ದಾರಗಳು ಸಾರ್ವಜನಿಕರ ಕುತ್ತಿಗೆ ಮುಖಕ್ಕೆ ಸಿಲುಕಿಕೊಂಡಿವೆ. ಹೆಚ್ಚಿನವರು ಹೀಗೆ ಅಪಘಾತಕ್ಕೆ ಸಿಲುಕಿಕೊಂಡಿದ್ದಾರೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅಂಬುಲೆನ್ಸ್ ಸೇವೆಗಳು ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ, 63 ಜನರಲ್ಲಿ 21 ಜನರು ಅಹಮದಾಬಾದ್‍ನವರಾಗಿದ್ದಾರೆ, ವಡೋದರಾ ಮತ್ತು ರಾಜ್‍ಕೋಟ್ ತಲಾ ಏಳು ಪ್ರಕರಣಗಲಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ:  ಧಗ ಧಗ ಉರಿಯುವ ಬೆಂಕಿ ಮೈ ಆವರಿಸಿದ್ದರೂ ರಸ್ತೆಗೆ ಓಡಿದ ದಂಪತಿ

    ಟೆರೇಸ್‍ಗಳಿಂದ ಅಥವಾ ಎತ್ತರದಿಂದ ಬಿದ್ದ ನಂತರ 69 ಜನರು ಗಾಯಗೊಂಡಿದ್ದಾರೆ. ಕಳೆದ ವರ್ಷ ಪುಣೆಯಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ಗಾಳಿಪಟದ ದಾರದಿಂದ ಬೈಕ್ ಸವಾರನ ಕತ್ತು ಸೀಳಿತ್ತು ಎಂದಿದ್ದಾರೆ. ಇದನ್ನೂ ಓದಿ:  190 ವರ್ಷದ ಆಮೆ- ಗಿನ್ನಿಸ್ ಪುಟಕ್ಕೆ ಸೇರ್ಪಡೆ

  • ಇನ್ನೊಂದು ಮದುವೆಯಾಗ್ತೀನಿ ಎಂದ ತಂದೆಯನ್ನು ಕೊಂದ ಮಗ!

    ಇನ್ನೊಂದು ಮದುವೆಯಾಗ್ತೀನಿ ಎಂದ ತಂದೆಯನ್ನು ಕೊಂದ ಮಗ!

    ಮುಂಬೈ: ಮತ್ತೊಂದು ಮದುವೆಯಾಗುವ ಆಸೆಯನ್ನು ವ್ಯಕ್ತಪಡಿಸಿದ ತಂದೆಯನ್ನು ಮಗನೇ ರುಬ್ಬುವ ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಶಂಕರ್ ರಾಂಭೌ ಬೋರ್ಹಾಡೆ (80) ಮೃತ ವ್ಯಕ್ತಿ. ಶೇಖರ್ ಬೋರ್ಹಾಡೆ (47) ಆರೋಪಿ. ಇವರು ವೈಶಂಪಾಯನಲಿ ಪ್ರದೇಶದ ಹೌಸಿಂಗ್ ಸೊಸೈಟಿಯ ನಿವಾಸಿಯಾಗಿದ್ದರು. ಮಹಾರಾಷ್ಟ್ರದ ಪುಣೆ ಜಿಲ್ಲೆಯ ರಾಜಗುರುನಗರದಲ್ಲಿ ಘಟನೆ ನಡೆದಿದೆ. ಶಂಕರ್ ಬೋರ್ಹಾಡೆ ಮ್ಯಾಟ್ರಿಮೋನಿಯಲ್ಲಿ ಮರು ಮದುವೆ ಮಾಡಿಕೊಳ್ಳುವ ಸಲುವಾಗಿ ತಮ್ಮ ಹೆಸರನ್ನು ನೋಂದಾಯಿಸಿ ಕೊಂಡಿದ್ದರು. ಈ ವಿಷಯ ತಿಳಿದ ಶೇಖರ್ ಕೋಪಗೊಂಡಿದ್ದ. ಇದರಿಂದಾಗಿ ಆತ ಚಾಕುವಿನಿಂದ ತನ್ನ ತಂದೆಯ ಕತ್ತನ್ನು ಕೊಯ್ದಿದ್ದಾನೆ. ನಂತರ ಸಾವು ಬದುಕಿನ ನಡುವೆ ನರಳುತ್ತಿದ್ದ ತಂದೆಯನ್ನು ನೋಡಿದ ಶೇಖರ್, ತಲೆಗೆ ರುಬ್ಬುವ ಕಲ್ಲಿನಿಂದ ಹೊಡೆದಿದ್ದಾರೆ.

    ಬಳಿಕ ಶೇಖರ್ ರಾಜಗುರು ಪೊಲೀಸ್ ಠಾಣೆಗೆ ತೆರಳಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಜೊತೆಗೆ ತನ್ನ ತಂದೆ ಮರು ಮದುವೆಯಾಗಲು ಬಯಸಿದ್ದರು. ಇದರಿಂದಾಗಿ ಕೋಪಗೊಂಡು ಅವರನ್ನು ಹತ್ಯೆಗೈದಿದ್ದೇನೆ ಎಂದು ಹೇಳಿಕೆಯನ್ನು ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶೇಖರ್‍ನನ್ನು ಬಂಧಿಸಲಾಗಿದೆ. ಇನ್ಸ್‍ಪೆಕ್ಟರ್ ಸತೀಶ್ ಕುಮಾರ್ ಗೌರವ್ ನೇತೃತ್ವದಲ್ಲಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಅಧಿಕಾರದಲ್ಲಿದ್ದಾಗ ಕುಂಭಕರ್ಣ ನಿದ್ದೆ, ಈಗ ಮೇಕೆದಾಟು ಹೋರಾಟ: ಡಿಕೆಶಿಗೆ ಕಾರಜೋಳ ಟಾಂಗ್

  • ಪದ್ಮಶ್ರೀ ಪುರಸ್ಕೃತೆ ಸಿಂಧುತಾಯಿ ಸಪ್ಕಾಲ್ ನಿಧನ

    ಪದ್ಮಶ್ರೀ ಪುರಸ್ಕೃತೆ ಸಿಂಧುತಾಯಿ ಸಪ್ಕಾಲ್ ನಿಧನ

    ಪುಣೆ: ಸಮಾಜ ಸೇವಕಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸಿಂಧುತಾಯಿ ಸಪ್ಕಾಲ್ ಹೃದಯಾಘಾತದಿಂದ ಪುಣೆಯಲ್ಲಿ ನಿಧನರಾಗಿದ್ದಾರೆ.

    ಸಿಂಧೂತಾಯಿ ಸಪ್ಕಾಲ್(74) ಪುಣೆಯ ಗ್ಯಾಲಕ್ಸಿ ಕೇರ್ ಆಸ್ಪತ್ರೆಯಲ್ಲಿ ಮಂಗಳವಾರ 8.10ಕ್ಕೆ ಕೊನೆಯುಸಿರೆಳೆದರು. ಕಳೆದ ಒಂದು ತಿಂಗಳ ಹಿಂದೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾದೆ ಮಂಗಳವಾರ ರಾತ್ರಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

    ಹಿನ್ನೆಲೆ: ಮಹಾರಾಷ್ಟ್ರದ ವಾರ್ಧಾದಲ್ಲಿ ಬಡ ಕುಟುಂಬದಲ್ಲಿ ಜನಿಸಿದ ಸಿಂಧೂತಾಯಿ, ಹುಟ್ಟಿನಿಂದಲೇ ತಾರತಮ್ಯಕ್ಕೆ ಒಳಗಾಗಿದ್ದರು. ಸಿಂಧೂತಾಯಿಯ ತಾಯಿ ಶಿಕ್ಷಣದಿಂದ ದೂರವಾಗಿದ್ದರು. ದನ ಮೇಯಿಸಲು ಹೊರಗೆ ಹೋಗುತ್ತಾಳೆ ಎನ್ನುವ ನೆಪದಲ್ಲಿ ಅವರ ತಾಯಿಗೆ ಯಾರಿಗೂ ತಿಳಿಯದಂತೆ ಶಾಲೆಗೆ ಕಳುಹಿಸುತ್ತಿದ್ದರು. ಇದನ್ನೂ ಓದಿ: ಆಸ್ತಿ ವಿವಾದಕ್ಕೆ 70ರ ತಂದೆಯ ಕತ್ತು ಸೀಳಿ ಹತ್ಯೆಗೈದ ಮಗ

    ಮಾಯಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಸಪ್ಕಾಲ್, ಪುಣೆಯಲ್ಲಿ ಸನ್ಮತಿ ಬಾಲ ನಿಕೇತನ ಸಂಸ್ಥೆ ಅನಾಥಾಶ್ರಮ ಹಾಗೂ ಪ್ರಭುನೆ ಪುನರುತ್ತನ್ ಸಮರಸತಾ ಗುರುಕುಲಂ ಎಂಬ ಎನ್‍ಜಿಒ ನಡೆಸುತ್ತಿದ್ದರು. ಎನ್‍ಜಿಒ ಪಾರ್ಧಿ ಸಮುದಾಯ ಮತ್ತು ಅವರ ಮಕ್ಕಳ ಉನ್ನತಿಗಾಗಿ ಕೆಲಸ ಮಾಡುತ್ತದೆ. ಅವರು ಪಾರ್ಧಿ ಮಕ್ಕಳಿಗಾಗಿ ಶಾಲೆ ಮತ್ತು ಹಾಸ್ಟೆಲ್ ಸಹ ನಡೆಸುತ್ತಿದ್ದಾರೆ.

    ಸಾಮಾಜಿಕ ಕಾರ್ಯ: ಸಪ್ಕಾಲ್ ತನ್ನ ಸುದೀರ್ಘ ವೃತ್ತಿಜೀವನದಲ್ಲಿ 1,000ಕ್ಕೂ ಹೆಚ್ಚು ಅನಾಥ ಮಕ್ಕಳನ್ನು ದತ್ತು ಪಡೆದ್ದರು. ಸಾಮಾಜಿಕ ಸೇವೆಗಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. 2010ರಲ್ಲಿ, ಮಹಾರಾಷ್ಟ್ರದಲ್ಲಿ ಮಿ ಸಿಂಧುತೈ ಸಪ್ಕಲ್ ಬೋಲ್ತೆ ಎಂಬ ಶೀರ್ಷಿಕೆಯ ಸಪ್ಕಾಲ್‍ನ ಮರಾಠಿ ಜೀವನಚರಿತ್ರೆ ಬಯೊಪಿಕ್ ಬಿಡುಗಡೆಯಾಗಿದೆ.

    ಮೋದಿ ಟ್ವೀಟ್: ಡಾ.ಸಿಂಧೂತಾಯಿ ಸಪ್ಕಲ್ ಅವರು ಸಮಾಜಕ್ಕೆ ಸಲ್ಲಿಸಿದ ಉದಾತ್ತ ಸೇವೆಗಾಗಿ ಸ್ಮರಣೀಯರು. ಅವರ ಪ್ರಯತ್ನದಿಂದಾಗಿ, ಅನೇಕ ಮಕ್ಕಳು ಉತ್ತಮ ಗುಣಮಟ್ಟದ ಜೀವನವನ್ನು ನಡೆಸಿದ್ದರೆ. ಅವರ ನಿಧನದ ಸುದ್ದಿಯಿಂದ ನೋವಾಗಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ ಎಂದು ಬರೆದುಕೊಂಡು ಸಂತಾಪವನ್ನು ಸೂಚಿಸಿದ್ದಾರೆ.

  • 30 ಲಕ್ಷ ರೂ. ಮೌಲ್ಯದ ಗಾಂಜಾ ವಶ – 12 ಜನ ಅರೆಸ್ಟ್

    30 ಲಕ್ಷ ರೂ. ಮೌಲ್ಯದ ಗಾಂಜಾ ವಶ – 12 ಜನ ಅರೆಸ್ಟ್

    ಪುಣೆ: 30 ಲಕ್ಷ ರೂ. ಮೌಲ್ಯದ 167.25 ಕೆಜಿ ಗಾಂಜಾವನ್ನು ಸಾಗಿಸುತ್ತಿದ್ದ ಎರಡು ಟ್ರಕ್‌ಗಳನ್ನು ವಶಕ್ಕೆ ತೆಗೆದುಕೊಂಡ ಘಟನೆ ಭಾನುವಾರ  ಮಹಾರಾಷ್ಟ್ರದ  ಯಾವತ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

    ಕರ್ನಾಟಕ, ಆಂಧ್ರಪ್ರದೇಶದಿಂದ ಎರಡು ಸರಕು ಟ್ರಕ್‌ಗಳು ಸೋಲಾಪುರ-ಪುಣೆ ಹೆದ್ದಾರಿಯಿಂದ ಪುಣೆಗೆ ಗಾಂಜಾವನ್ನು ಮಾರಾಟಕ್ಕೆ ತರಲು ಹೋಗುತ್ತಿರುವ ವಿಷಯ ಕೆಲ ಮೂಲಗಳಿಂದ ಮಾಹಿತಿ ಸಿಕ್ಕಿತು. ಮಾಹಿತಿಯ ಆಧಾರದ ಮೇರೆಗೆ ಎರಡು ತಂಡಗಳನ್ನು ನಿಯೋಜಿಸಲಾಗಿತ್ತು. ಬಳಿಕ ಮಧ್ಯಾಹ್ನ ಸುಮಾರು 1:35 ಗಂಟೆಗೆ ಸರಿಯಾಗಿ ಟ್ರಕ್‌ಗಳನ್ನು ಪಟಾಸ್ ಗ್ರಾಮದ ಬಳಿ ತಡೆಯಲಾಗಿದೆ ಎಂದು ಇನ್ಸ್ಪೆಕ್ಟರ್ ನಾರಾಯಣ್ ಹೇಳಿದ್ದಾರೆ. ಇದನ್ನೂ ಓದಿ: ನನಗೆ ಮೂರು ಬಾರಿ ಕಚ್ಚಿತು : ಹಾವು ಕಡಿತದ ಬಗ್ಗೆ ವಿವರಿಸಿದ ಸಲ್ಲು

    ಸುಮಾರು 30 ಲಕ್ಷ ರೂ. ಮೌಲ್ಯದ ಗಾಂಜಾವನ್ನು ವಶ ಪಡೆಸಿಕೊಂಡಿದ್ದು, ಈ ಪ್ರಕರಣದಲ್ಲಿ ಎರಡು ಟ್ರಕ್‌ಗಳಲ್ಲಿ ಪ್ರಯಾಣಿಸುತ್ತಿದ್ದ ಒಟ್ಟು 12 ಜನರನ್ನು ಬಂಧಿಸಲಾಗಿದೆ. 12 ಮಂದಿಯಲ್ಲಿ, 5 ಮಹಿಳೆಯರು ಮತ್ತು 7 ಪುರುಷರು. ಆರೋಪಿಗಳು ಮಾದಕ ದ್ರವ್ಯವನ್ನು ಪ್ಯಾಕೆಟ್‌ಗಳಲ್ಲಿ ಸುತ್ತಿ ಚಾಲಕನ ಸೀಟಿನ ಅಡಿಯಲ್ಲಿ 6 ಚೀಲಗಳಲ್ಲಿ ಅಡಗಿಸಿಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿಗಳ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಕಾಯ್ದೆ, 1985ರ ಸಂಬಂಧಿತ ಅಡಿಯಲ್ಲಿ ಈ ಕುರಿತು ಯಾವತ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನ್ಯೂ ಇಯರ್ ಎಲ್ಲಾದ್ರೂ ಮಾಡ್ಲಿ, ಕೊರೊನಾ ನಿಯಮ ಪಾಲಿಸಲಿ: ಬೊಮ್ಮಾಯಿ

  • ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿರುವ ಮೊದಲ ಓಮಿಕ್ರಾನ್ ಸೋಂಕಿತ

    ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿರುವ ಮೊದಲ ಓಮಿಕ್ರಾನ್ ಸೋಂಕಿತ

    ಮುಂಬೈ: ಕೊರೊನಾ ರೂಪಾಂತರಿ ತಳಿ ಓಮಿಕ್ರಾನ್ ಸೋಂಕಿಗೆ ಒಳಗಾಗಿದ್ದ ಪುಣೆಯ ವ್ಯಕ್ತಿಗೆ ನೆಗಟಿವ್ ವರದಿ ಬಂದಿದ್ದು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಾರೆ.

    ಗುರುವಾರ ಸವೆನ್ ಹಿಲ್ ಆಸ್ಪತ್ರೆಯಲ್ಲಿ ನಡೆಸಿದ ಕೊರೊನಾ ಪರೀಕ್ಷೆಯಲ್ಲಿ ರೋಗಿಗೆ ನೆಗೆಟಿವ್ ವರದಿ ಬಂದಿದ್ದು, ಓಮಿಕ್ರಾನ್‍ನಿಂದ ಗುಣಮುಖರಾಗಿ ಶೀಘ್ರ ಮನೆಗೆ ಹಿಂದಿರುಗುತ್ತಿದ್ದಾರೆ ಎಂದು ಮಹಾರಾಷ್ಟ್ರದ ಪುಣೆ ಮಹಾನಗರ ಪಾಲಿಕೆಯ ಸಹಾಯಕ ವೈದ್ಯಾಧಿಕಾರಿ ಡಾ.ಸಂಜೀವ್ ವಾವರೆ ಹೇಳಿದ್ದಾರೆ. ಇದನ್ನೂ ಓದಿ: ಮೆಕ್ಸಿಕೋ ಅಪಘಾತ – 49 ಮಂದಿ ಸಾವು, 58 ಮಂದಿಗೆ ಗಾಯ

    ರೋಗಿಗೆ 40 ವರ್ಷ ವಯಸ್ಸಾಗಿದ್ದು, ಇವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿರುವ ಮೊದಲ ಓಮಿಕ್ರಾನ್ ಸೋಂಕಿತರಾಗಿದ್ದಾರೆ. ಸದ್ಯ ಮನೆಗೆ ಹಿಂದಿರುಗುತ್ತಿರುವ ಬಗ್ಗೆ ರೋಗಿ ಸಂತಸ ವ್ಯಕ್ತಪಡಿಸಿದ್ದಾರೆ ಮತ್ತು ರೋಗಿಯ ಜೊತೆಗೆ ಸಂಪರ್ಕ ಹೊಂದಿದ್ದ 40 ಮಂದಿಯಲ್ಲಿ ಯಾರಿಗೂ ಸಹ ಕೊರೊನಾ ದೃಢಪಟ್ಟಿರಲಿಲ್ಲ. ರೋಗಿ ಜೂನ್‍ನಲ್ಲಿ ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದ ಎಂದು ತಿಳಿಸಲಾಗಿದೆ. ಸದ್ಯ ರೋಗಿ ಯಾವುದೇ ಗುಣಲಕ್ಷಣಗಳಿಲ್ಲದೇ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಾರೆ. ಇದನ್ನೂ ಓದಿ:  ಕೇರಳದ ಆಲಪ್ಪುಳದಲ್ಲಿ ಹಕ್ಕಿಜ್ವರ – ಕೋಳಿ, ಮೊಟ್ಟೆ ನಾಶಕ್ಕೆ ಸರ್ಕಾರ ಆದೇಶ

    ಪುಣೆಯಲ್ಲಿ ಪತ್ತೆಯಾದ ಮೊದಲ ಓಮಿಕ್ರಾನ್ ಸೋಂಕಿಗೆ ಒಳಗಾಗಿದ್ದ ಇವರಿಗೆ 10 ದಿನಗಳ ಕ್ವಾರಂಟೈನ್ ಬಳಿಕ ಗುರುವಾರ ಕೊರೊನಾ ನೆಗೆಟಿವ್ ಬಂದಿದೆ. ಸದ್ಯ ಮಹಾರಾಷ್ಟ್ರದಲ್ಲಿ ಗುರುವಾರ ಯಾವುದೇ ಕೊರೊನಾ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ. ಅದನ್ನು ಹೊರತುಪಡಿಸಿ ರಾಜ್ಯದಲ್ಲಿ ಒಟ್ಟು 10 ಓಮಿಕ್ರಾನ್ ಪ್ರಕರಣಗಳು ದಾಖಲಾಗಿದೆ. ಇನ್ನೂ ಓಮಿಕ್ರಾನ್ ಭೀತಿಯಿಂದ ವಿಮಾನ ನಿಲ್ದಾಣಕ್ಕೆ ಆಗಮಿಸುವ ವಿದೇಶಿಗರನ್ನು ಕ್ವಾರಂಟೈನ್‍ಗೊಳಿಸಲಾಗುತ್ತಿದೆ.