Tag: ಪುಣೆ

  • ಅಪ್ರಾಪ್ತೆ ಮೇಲೆ ತಂದೆ, ಅಣ್ಣನಿಂದ ಅತ್ಯಾಚಾರ – ಅಜ್ಜ, ಚಿಕ್ಕಪ್ಪನಿಂದ ಕಿರುಕುಳ

    ಅಪ್ರಾಪ್ತೆ ಮೇಲೆ ತಂದೆ, ಅಣ್ಣನಿಂದ ಅತ್ಯಾಚಾರ – ಅಜ್ಜ, ಚಿಕ್ಕಪ್ಪನಿಂದ ಕಿರುಕುಳ

    ಮುಂಬೈ: ಅಣ್ಣ, ತಂದೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದು, ಆಕೆಯ ಅಜ್ಜ ಹಾಗೂ ಚಿಕ್ಕಪ್ಪ ಕಳೆದ 5 ವರ್ಷಗಳಿಂದ ಕಿರುಕುಳ ನೀಡಿದ ಘಟನೆ ಪುಣೆದಲ್ಲಿ ನಡೆದಿದೆ.

    11 ವರ್ಷದ ಬಾಲಕಿಯ ಮೇಲೆ ಅಪ್ರಾಪ್ತ ಸಹೋದರ, ಸಂತ್ರಸ್ತೆಯ ತಂದೆ (45) ಪ್ರತ್ಯೇಕವಾಗಿ ಅತ್ಯಾಚಾರವೆಸಗಿದ್ದಾರೆ. ಇದರ ಜೊತೆಗೆ ಆಕೆಯ ಅಜ್ಜ(60) ಹಾಗೂ ಚಿಕ್ಕಪ್ಪ (25) ಕಳೆದ 5 ವರ್ಷಗಳಿಂದ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ಸಂತ್ರಸ್ತೆ ಹಾಗೂ ಆಕೆಯ ಕುಟುಂಬದವರು ಮೂಲತಃ ಬಿಹಾರದವರಾಗಿದ್ದು, ಸದ್ಯ ಪುಣೆಯಲ್ಲಿ ವಾಸಿಸುತ್ತಿದ್ದಾರೆ.

    STOP RAPE

    ಈ ಬಗ್ಗೆ ಪೊಲೀಸ್ ಇನ್ಸ್‍ಪೆಕ್ಟರ್ ಅಶ್ವಿನಿ ಸತ್ಪುಟೆ ಮಾತನಾಡಿ, ಬಾಲಕಿಯು ತನ್ನ ಶಾಲೆಯಲ್ಲಿ ಗುಡ್ ಟಚ್ ಹಾಗೂ ಬ್ಯಾಡ್ ಟಚ್ ಚರ್ಚೆಯಲ್ಲಿ ಮಾತನಾಡುವಾಗ ಈ ಘಟನೆ ಬೆಳಕಿಗೆ ಬಂದಿದೆ. ಕಳೆದ 5 ವರ್ಷಗಳಿಂದ ನಿರಂತರವಾಗಿ ಆಕೆಯ ಮೇಲೆ ಅತ್ಯಾಚಾರ ಹಾಗೂ ಕಿರುಕುಳ ನಡೆಯುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕಾರು ಪಲ್ಟಿ – ಪ್ರಾಣಾಪಾಯದಿಂದ ಟಿಬಿ ಜಯಚಂದ್ರ ಪಾರು

    POLICE JEEP

    ಎಲ್ಲಾ ಘಟನೆಗಳು ಪ್ರತ್ಯೇಕವಾಗಿ ಸಂಭವಿಸಿರುವುದರಿಂದ ಮತ್ತು ಆರೋಪಿಗಳು ಪರಸ್ಪರರ ಕೃತ್ಯಗಳ ಬಗ್ಗೆ ತಿಳಿದಿರದ ಕಾರಣ, ಇದು ಸಾಮೂಹಿಕ ಅತ್ಯಾಚಾರದ ಪ್ರಕರಣವಲ್ಲ ಎಂದು ಹೇಳಿದರು. ಸದ್ಯ ಪುಣೆ ನಗರದ ಬಂಡ್‍ಗಾರ್ಡನ್ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಆದರೆ ಈವರೆಗೂ ಯಾರನ್ನು ಬಂಧಿಸಿಲ್ಲ. ಇದನ್ನೂ ಓದಿ: ದೆಹಲಿಯಲ್ಲೂ ಪ್ರಾರಂಭವಾಯ್ತು ಬುಲ್ಡೋಜರ್ ಸದ್ದು

  • ಕೋವಿಡ್: ಐಪಿಎಲ್ 2022ರ ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್ ಪಂದ್ಯ ಮುಂಬೈಗೆ ಸ್ಥಳಾಂತರ

    ಕೋವಿಡ್: ಐಪಿಎಲ್ 2022ರ ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್ ಪಂದ್ಯ ಮುಂಬೈಗೆ ಸ್ಥಳಾಂತರ

    ಮುಂಬೈ: ಐಪಿಎಲ್ 2022ರ ಆವೃತ್ತಿಗೆ ಈಗಾಗಲೇ ಕೋವಿಡ್-19ನ ಕರಿನೆರಳು ಆವರಿಸಿದ್ದು, ಕೊರೊನಾ ಭೀತಿಯಿಂದಾಗಿ ಪುಣೆಯಲ್ಲಿ ಬುಧವಾರ ನಡೆಯಬೇಕಿದ್ದ ಪಂಜಾಬ್ ಕಿಂಗ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ಪಂದ್ಯವನ್ನು ಮುಂಬೈಗೆ ಸ್ಥಳಾಂತರಿಸಲಾಗಿದೆ ಎಂದು ಬಿಸಿಸಿಐ ಮೂಲವು ತಿಳಿಸಿದೆ.

    ದೆಹಲಿ ತಂಡದ ಆಟಗಾರ, ಸಿಬ್ಬಂದಿ ಸೇರಿದಂತೆ ಈಗಾಗಲೇ 5 ಮಂದಿಗೆ ಕೋವಿಡ್ ದೃಢಪಟ್ಟಿರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಸಿಸಿಐ ಮೂಲವು ತಿಳಿಸಿದೆ.

    corona

    ಮೊನ್ನೆ ದೆಹಲಿ ಕ್ಯಾಪಿಟಲ್ಸ್ ತಂಡದ ಫಿಸಿಯೋ ಪ್ಯಾಟ್ರಿಕ್ ಫರ್ಹಾರ್ಟ್ ಅವರಿಗೆ ಕೋವಿಡ್ ಧೃಡವಾಗಿತ್ತು. ಈಗ ದೆಹಲಿ ಕ್ಯಾಪಿಟಲ್ಸ್‍ನ ಆಲ್‍ರೌಂಡರ್ ಮಿಚೆಲ್ ಮಾರ್ಷ್‍ಗೂ ಕೂಡಾ ಕೋವಿಡ್ ದೃಢವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ದೆಹಲಿ ತಂಡವು ಪ್ರಸ್ತುತ ಮುಂಬೈನಲ್ಲಿ ಕ್ವಾರಂಟೈನ್‍ನಲ್ಲಿದೆ. ಮಿಚೆಲ್ ಮಾರ್ಷ್ ಅವರು ಇತ್ತೀಚಿಗಷ್ಟೇ ಗಾಯದಿಂದ ಚೇತರಿಸಿಕೊಂಡು ಐಪಿಎಲ್ 2022ಕ್ಕೆ ಪಾದಾರ್ಪಣೆ ಮಾಡಿದ್ದರು. ಫಿಸಿಯೋ ಪ್ಯಾಟ್ರಿಕ್ ಫರ್ಹಾರ್ಟ್ ಅವರೊಂದಿಗಿನ ನಿಕಟ ಸಂಪರ್ಕದಲ್ಲಿ ಸಾಕಷ್ಟು ಸಮಯ ಕಳೆಯುತ್ತಿದ್ದ ಕಾರಣ ಅವರಿಗೆ ಕೋವಿಡ್ ಸೋಂಕು ಹರಡಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಒಂದು ವೇಳೆ ಯಾರಲ್ಲಾದರೂ ಕೋವಿಡ್ ಸೋಂಕು ಪತ್ತೆಯಾಗದೆ ಇದ್ದು, ಅವರು ಮುಚ್ಚಿದ ವಾತಾವರಣದಲ್ಲಿ ಪ್ರಯಾಣ ಮಾಡುವ ವೇಳೆ ಅದು ಇನ್ನೊಬ್ಬರಿಗೂ ಹರಡಿ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕೆ ಬಿಸಿಸಿಐ ಈ ಕ್ರಮಕೈಗೊಂಡಿದೆ.

    ಈಗಾಗಲೇ ಸೋಂಕು ದೃಢಪಟ್ಟಿರುವ ಐವರನ್ನು ಕ್ವಾರಂಟೈನ್‍ನಲ್ಲಿಡಲಾಗಿದೆ. ಅವರಿಗೆಲ್ಲಾ ಎರಡು ಬಾರಿ ಕೋವಿಡ್ ನೆಗಟಿವ್ ವರದಿ ಬಂದ ಮೇಲೆ ತಂಡದಲ್ಲಿ ಸೇರಿಸಿಕೊಳ್ಳಲಾಗುವುದು ಎಂದು ಬಿಸಿಸಿಐ ಸೂಚಿಸಿದೆ.

  • ಸತತ ಸೋಲಿನ ಸುಳಿಯಲ್ಲಿರುವ ಮುಂಬೈಗೆ ಮತ್ತೊಂದು ಬರೆ

    ಸತತ ಸೋಲಿನ ಸುಳಿಯಲ್ಲಿರುವ ಮುಂಬೈಗೆ ಮತ್ತೊಂದು ಬರೆ

    ಮುಂಬೈ: 15 ಐಪಿಎಲ್ ಆವೃತ್ತಿಯಲ್ಲಿ ಕಳೆದ 5 ಪಂದ್ಯಗಳಲ್ಲೂ ಸತತವಾಗಿ ಸೋಲನ್ನು ಅನುಭವಿಸಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಮತ್ತೊಂದು ಬರೆ ಬಿದ್ದಿದೆ.

    ಹೌದು.. ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಸೇರಿದಂತೆ 11 ಸಹ ಆಟಗಾರರಿಗೆ ಪಂಜಾಬ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ದಂಡ ವಿಧಿಸಲಾಗಿದೆ. ಇದನ್ನೂ ಓದಿ: 4 ತಿಂಗಳ ಕಾಲ ಕ್ರಿಕೆಟ್‍ನಿಂದ ಹೊರಗುಳಿಯಬೇಕಾಗಿದೆ ದೀಪಕ್ ಚಹರ್ – ಟಿ20 ವಿಶ್ವಕಪ್‍ಗೂ ಡೌಟ್

    IPL 2022 MI (1)

    ಬುಧವಾರ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಆಸೋಸಿಯೆಶನ್ ಸ್ಟೇಡಿಯಂನಲ್ಲಿ ನಡೆದ ಕಿಂಗ್ಸ್ ಪಂಜಾಬ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಪ್ರದರ್ಶಿಸಿದ್ದಕ್ಕಾಗಿ ರೋಹಿತ್ ಶರ್ಮಾಗೆ 24 ಲಕ್ಷ ರೂ. ದಂಡ ವಿಧಿಸಲಾಗಿದೆ. ತಂಡದ 10 ಸಹ ಆಟಗಾರರಿಗೆ ತಲಾ 6 ಲಕ್ಷ ಅಥವಾ ಅವರ ಪಂದ್ಯದ ಶುಲ್ಕದ ಶೇ.25 ಪ್ರತಿಶತದಷ್ಟು ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಆಯೋಜಕರು ತಿಳಿಸಿದ್ದಾರೆ.

    15ನೇ ಆವೃತ್ತಿಯ ಐಪಿಎಲ್‌ನ ಕಿಂಗ್ಸ್ ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ 186 ರನ್‌ಗಳಿಸಿದ ಮುಂಬೈ ಇಂಡಿಯನ್ಸ್ ತಂಡವು 12 ರನ್‌ಗಳ ಅಂತರದಿಂದ ಸೋಲನ್ನು ಅನುಭವಿಸಿದೆ. ಇದರಿಂದಾಗಿ ಐಪಿಎಲ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿಯುವಂತಾಗಿದೆ. ಇದನ್ನೂ ಓದಿ: ಜ್ಯೂನಿಯರ್ ಎಬಿಡಿ ಅಬ್ಬರದಾಟ ವ್ಯರ್ಥ – ಮುಂಬೈ ವಿರುದ್ಧ ಪಂಜಾಬ್‍ಗೆ 12 ರನ್‌ಗಳ ಜಯ

    suryakumar and rohith sharma

    ಪಂದ್ಯದ ಬಳಿಕ ಮಾತನಾಡಿದ ಕ್ಯಾಪ್ಟನ್ ರೋಹಿತ್ ಶರ್ಮಾ, ಮುಂಬೈ ಇಂಡಿಯನ್ಸ್ ಸತತವಾಗಿ 5 ಪಂದ್ಯಗಲ್ಲಿ ಸೋಲನ್ನು ಕಂಡಿದೆ. ಪಂಜಾಬ್ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ನಾವು ಮೈದಾನದಲ್ಲಿ ಉತ್ತಮ ಪ್ರದರ್ಶನವನ್ನೇ ನೀಡಿದ್ದೇವೆ. ಕೊನೆಯ ಇನ್ನಿಂಗ್ಸನಲ್ಲಂತೂ ಗೆಲುವಿನ ಸಮೀಪಕ್ಕೆ ಬಂದಿದ್ದೇವೆ. ಆದರೆ, ಪ್ರಮುಖ ರನೌಟ್‌ಗಳು ಸಂಭವಿಸಿದ್ದರಿಂದ ಸೋಲಾಯಿತು. ಬದಲಾವಣೆಗಾಗಿ ಹೊಸ ಆಲೋಚನಾ ಕ್ರಮವನ್ನು ಅನುಸರಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

     

  • 1 ಲಕ್ಷ ಖರ್ಚು ಮಾಡಿ ಹೆಣ್ಣುಮಗುವನ್ನು ಚಾಪರ್‌ನಲ್ಲಿ ಮನೆಗೆ ಕರೆತಂದ್ರು!

    1 ಲಕ್ಷ ಖರ್ಚು ಮಾಡಿ ಹೆಣ್ಣುಮಗುವನ್ನು ಚಾಪರ್‌ನಲ್ಲಿ ಮನೆಗೆ ಕರೆತಂದ್ರು!

    ಮುಂಬೈ: ಹುಟ್ಟಿದ ಮಗು ಹೆಣ್ಣು ಅಂದ್ರೆ ಮೂಗು ಮುರಿಯುವವರೇ ಹೆಚ್ಚು. ಆದರೆ ಇಲ್ಲೊಂದು ದಂಪತಿ ತಮಗೆ ಹೆಣ್ಣು ಮಗು ಹುಟ್ಟಿದ ಸಂತಸದಲ್ಲಿ ಆ ಆಗುವನ್ನು ವಿಶೇಷವಾಗಿ ತಮ್ಮ ಕುಟುಂಬಕ್ಕೆ ಬರಮಾಡಿಕೊಂಡ ಘಟನೆ ಪುಣೆಯ ಶೆಲ್ಗಾಂವ್‍ನಲ್ಲಿ ನಡೆದಿದೆ.

    ಹಲವು ವರ್ಷಗಳ ಬಳಿಕ ವಿಶಾಲ್ ಝರೇಕರ್ ಕುಟುಂಬದಲ್ಲಿ ಹೆಣ್ಣು ಮಗು ಜನಿಸಿದೆ. ಹುಟ್ಟಿದ ಮಗು ಹೆಣ್ಣು ಅಂತ ಗೊತ್ತಾದ ಕೂಡಲೇ ವಿಶಾಲ್ ಕುಟುಂಬಸ್ಥರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಇದೇ ಖುಷಿಯಲ್ಲಿ ವಿಶಾಲ್ ದಂಪತಿ ತಮ್ಮ ಮಗಳನ್ನು ವಿಶೇಷವಾಗಿ ಚಾಪರ್ ಮೂಲಕ ಮನೆಗೆ ಕರೆದುಕೊಂಡು ಬರಲು ತೀರ್ಮಾನಿಸಿದ್ದಾರೆ.

    ನಮ್ಮ ಇಡೀ ಕುಟುಂಬದಲ್ಲಿ ಹೆಣ್ಣು ಮಗುವಿರಲಿಲ್ಲ. ಆದರೆ ಇದೀಗ ನಮಗೆ ಹೆಣ್ಣು ಮಗು ಜನಿಸಿದೆ. ಹೀಗಾಗಿ ನಮಗೆ ಹುಟ್ಟಿದ ಮಗುವನ್ನು ವಿಶೇಷವಾಗಿ ಮನೆಗೆ ಬರಮಾಡಿಕೊಳ್ಳಬೇಕೆಂದು ನಿರ್ಧಾರ ಮಾಡಿದೆವು. ಅಂತೆಯೇ 1 ಲಕ್ಷ ನೀಡಿ ಚಾಪರ್ ನಲ್ಲಿ ಕರೆದುಕೊಂಡು ಬಂದೆವು ಎಂದು ಮಗುವಿನ ತಂದೆ ವಿಶಾಲ್ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ರಾಜಸ್ಥಾನದಲ್ಲಿ ಮುಸ್ಲಿಂ ಏರಿಯಾಗಳಿಗೆ ದಿನದ 24 ಗಂಟೆ ನಿರಂತರ ವಿದ್ಯುತ್

    ವಿಶಾಲ್ ತಮ್ಮ ಮಗಳನ್ನು ಚಾಪರ್‍ನಲ್ಲಿ ಕರೆದುಕೊಂಡು ಬಂದು ಇಳಿಯುತ್ತಿರುವ ದೃಶ್ಯವನ್ನು ಸೆರೆ ಹಿಡಿಯಲಾಗಿದೆ. ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಕೆಲವರು ತಂದೆಯ ಕಾರ್ಯಕ್ಕೆ ಹೆಮ್ಮೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಅಷ್ಟು ಚಿಕ್ಕ ಮಗುವನ್ನು ಹೆಲಿಕಾಪ್ಟರ್ ನಲ್ಲಿ ಯಾಕೆ ಕರೆದುಕೊಂಡು ಬಂದ್ರಿ..?, ಜೋರಾದ ಶಬ್ಧದಿಂದ ಮಗುವಿಗೆ ತೊಂದರೆಯಾಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ. ಹೀಗೆ ಹಲವಾರು ಪರ- ವಿರೋಧ ಕಾಮೆಂಟ್ ಗಳು ಬರುತ್ತಿವೆ.

  • ತಂದೆಯ ಕ್ಲೋಸ್ ಫ್ರೆಂಡ್ ಹೇಳಿ ಶಾಲೆಯ ವಾಶ್‍ರೂಂನಲ್ಲೇ ಬಾಲಕಿಯ ಅತ್ಯಾಚಾರ!

    ತಂದೆಯ ಕ್ಲೋಸ್ ಫ್ರೆಂಡ್ ಹೇಳಿ ಶಾಲೆಯ ವಾಶ್‍ರೂಂನಲ್ಲೇ ಬಾಲಕಿಯ ಅತ್ಯಾಚಾರ!

    ಮುಂಬೈ: ನಾನು ನಿನ್ನ ತಂದೆಯ ಕ್ಲೋಸ್ ಫ್ರೆಂಡ್ ಎಂದು ಹೇಳಿ ಶಾಲೆಯ ವಾಶ್ ರೂಂನಲ್ಲಿಯೇ 11 ವರ್ಷದ ಬಾಲಕಿಯ ಅತ್ಯಾಚಾರ ಮಾಡಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತನನ್ನು ಮಂಗೇಶ್ ಪದಮುಲು(40) ಎಂದು ಗುರುತಿಸಲಾಗಿದೆ. ಘಟನೆ ನಡೆದ 10 ಗಂಟೆಗಳೊಳಗೆ ಆರೋಪಿಯನ್ನು ಪುಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಶಾಲೆಯಲ್ಲಿ ಗುರುವಾರ ಮಧ್ಯಾಹ್ನದ ಬಳಿಕ ಅಪರಿಚಿತ ವ್ಯಕ್ತಿಯೊಬ್ಬ ತನ್ನ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಬಾಲಕಿ ತನ್ನ ಹೆತ್ತವರ ಮುಂದೆ ಹೇಳಿಕೊಂಡಿದ್ದಾಳೆ. ಕೂಡಲೇ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಯುವತಿಯ ಮೇಲೆ ಗ್ಯಾಂಗ್ ರೇಪ್ – ಇಬ್ಬರು ಅಪ್ರಾಪ್ತರು, ನಾಲ್ವರು ಅರೆಸ್ಟ್

    ಇತ್ತ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ಪತ್ತೆಗಾಗಿ 5 ತಂಡಗಳನ್ನು ರಚಿಸಿದ್ದಾರೆ. ಅಲ್ಲದೆ ಆರೋಪಿ ಪತ್ತೆಗೆ ಬಲೆ ಬೀಸಿದರು. ಈ ವೇಳೆ ಸ್ಥಳೀಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದ್ದಾರೆ. ಆಗ ಅಪರಿಚಿತ ವ್ಯಕ್ತಿ ಬಾಲಕಿಯನ್ನು ಪ್ರಶ್ನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಅಂತೆಯೇ ಆತನ ಸ್ಕೆಚ್ ಮಾಡಿ ಪೊಲೀಸರು ಆರೋಪಿಯನ್ನು ಸೆರೆ ಹಿಡಿಯಲು ಎಲ್ಲಾ ಪ್ರಯತ್ನಗಳನ್ನು ನಡೆಸಿ ಕೊನೆಗೆ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಬಾಲಕಿ ಶಾಲೆಯಲ್ಲಿರುವ ಸಂದರ್ಭದಲ್ಲಿ ಅಲ್ಲಿಗೆ ಬಂದ ವ್ಯಕ್ತಿ ಆಕೆಯನ್ನು ಮೂಲೆಯೊಂದಕ್ಕೆ ತಳ್ಳಿದ್ದಾನೆ. ನಂತರ ನಾನು ನಿನ್ನ ತಂದೆಯ ಕ್ಲೋಸ್ ಫ್ರೆಂಡ್ ಎಂದು ಹೇಳಿದ್ದಾನೆ. ಅಲ್ಲದೆ ಆಕೆಯನ್ನು ಶಾಲೆಯ ಶೌಚಾಲಯಕ್ಕೆ ತಳ್ಳಿ ತನ್ನ ಕಾಮ ತೃಷೆ ತೀರಿಸಿಕೊಂಡಿದ್ದಾನೆ. ಇದನ್ನೂ ಓದಿ: ಶಾಲೆಯಿಂದ ಗೇಟ್ ಪಾಸ್ – 10ನೇ ಕ್ಲಾಸ್ ಟಾಪರ್ ಆತ್ಮಹತ್ಯೆ

    ಅತ್ಯಾಚಾರಕ್ಕೂ ಮುನ್ನ ಬಾಲಕಿ ಸಹಾಯಕ್ಕಾಗಿ ಕಿರುಚಾಡಿದ್ದಾಳೆ. ಈ ವೇಳೆ ಆರೋಪಿ ಬಾಲಕಿಗೆ ಬೆದರಿಕೆ ಹಾಕಿದ್ದಾನೆ. ಹೀಗಾಗಿ ಬಾಲಕಿ ತನ್ನ ಗೆಳತಿಯರ ಜೊತೆ ಈ ಬಗ್ಗೆ ಹೇಳಿಕೊಂಡಿಲ್ಲ. ಆದರೆ ಮನೆಗೆ ಬಂದ ಬಳಿಕ ಹೆತ್ತವರ ಬಳಿ ನಡೆದ ಘಟನೆಯನ್ನು ವಿವರಿಸಿದ್ದು, ಅದರಂತೆ ಪೊಲೀಸರಿಗೆ ಪೋಷಕರು ದೂರು ನೀಡಿದ್ದಾರೆ.

  • ಅಪ್ಪ, ಸಹೋದರ, ತಾತ, ಚಿಕ್ಕಪ್ಪನಿಂದಲೇ 5 ವರ್ಷದ ಹುಡುಗಿ ಮೇಲೆ ನಿರಂತರ ಅತ್ಯಾಚಾರ

    ಅಪ್ಪ, ಸಹೋದರ, ತಾತ, ಚಿಕ್ಕಪ್ಪನಿಂದಲೇ 5 ವರ್ಷದ ಹುಡುಗಿ ಮೇಲೆ ನಿರಂತರ ಅತ್ಯಾಚಾರ

    ಮುಂಬೈ: ಅಪ್ರಾಪ್ತ ಬಾಲಕಿಯ ಮೇಲೆ ಆಕೆಯ ಹದಿಹರೆಯದ ಸಹೋದರ ಮತ್ತು ಆಕೆಯ ತಂದೆಯಿಂದಲೇ ಕೆಲವು ವರ್ಷಗಳಿಂದ ನಿರಂತರವಾಗಿ ಅತ್ಯಾಚಾರ ನಡೆದಿರುವ ಅಮಾನವೀಯ ಘಟನೆ ನಡೆದಿದೆ.

    ಹುಡುಗಿಯ ಅಜ್ಜ ಹಾಗೂ ದೂರದ ಸಂಬಂಧಿ ಸಹ ಲೈಂಗಿಕ ಕಿರುಕುಳ ನೀಡಿದ್ದಾರೆ. ಹುಡುಗಿ ಶಾಲೆಯಲ್ಲಿ ನಡೆದ `ಗುಡ್ ಟಚ್ ಮತ್ತು ಬ್ಯಾಡ್ ಟಚ್’ ಅಧಿವೇಶನದಲ್ಲಿ ಘಟನೆ ಬೆಳಕಿಗೆ ಬಂದಿದೆ. ನಂತರ ಹುಡುಗಿಯಿಂದ ಹೇಳಿಕೆ ಪಡೆದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: 3 ಮಿಲಿಯನ್ ಬ್ಯಾರಲ್ ಕಚ್ಚಾ ತೈಲ ಆಮದಿಗೆ ರಷ್ಯಾದೊಂದಿಗೆ ಭಾರತ ಒಪ್ಪಂದ

    ಅತ್ಯಾಚಾರ ಮತ್ತು ಕಿರುಕುಳಕ್ಕಾಗಿ ಐಪಿಸಿ ಸೆಕ್ಷನ್ 376ರ ಅಡಿಯಲ್ಲಿ ಹುಡುಗಿಯ 11 ವರ್ಷದ ಸಹೋದರ ಮತ್ತು 45 ವರ್ಷದ ತಂದೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸೆಕ್ಷನ್ 354 ಅಡಿಯಲ್ಲಿ ಆಕೆಯ ಅಜ್ಜ (60) ವಿರುದ್ಧ ಹಾಗೂ ಚಿಕ್ಕಪ್ಪನ (25) ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

    2017ರಲ್ಲಿ ಹುಡುಗಿ ಮತ್ತು ಆಕೆಯ ಕುಟುಂಬಸ್ಥರು ಬಿಹಾರದಲ್ಲಿ ನೆಲೆಸಿದ್ದಾಗ ತಂದೆಯೇ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಹುಡುಗಿಯ ಹಿರಿಯ ಸಹೋದರ 2020ರ ನವಂಬರ್ ತಿಂಗಳಿನಿಂದ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಮುಂದಾಗಿದ್ದಾನೆ. ಅಜ್ಜ ಮತ್ತು ಚಿಕ್ಕಪ್ಪ ಕೂಡ ಆಕೆಯೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದರು. ಜೊತೆಗೆ ಲೈಂಗಿಕ ಕಿರುಕುಳವನ್ನೂ ನೀಡುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ಮಾದರಿಯಲ್ಲಿ ಯಾವೆಲ್ಲ ಚಿತ್ರಗಳು ಬರಬೇಕು : ಪ್ರಕಾಶ್ ರೈ ಲಿಸ್ಟ್ ನೋಡಿ

    ಕೆಲ ವರ್ಷಗಳಿಂದಲೂ ಆಕೆಗೆ ಕಿರುಕುಳ ನೀಡಲಾಗುತ್ತಿದೆ ಎನ್ನುವುದು ಇಲ್ಲಿ ಗೊತ್ತಾಗಿದೆ. ಎಲ್ಲಾ ಘಟನೆಗಳು ಪ್ರತ್ಯೇಕವಾಗಿ ನಡೆದಿರುವುದರಿಂದ ಆರೋಪಿಗಳು ಪರಸ್ಪರ ಕೃತ್ಯಗಳ ಬಗ್ಗೆ ತಿಳಿದಿರಬಹುದು ಎಂದು ಪುಣೆ ಪೊಲೀಸ್ ಅಧಿಕಾರಿ ಅಶ್ವಿನಿ ಸತ್ಪುಟೆ ಹೇಳಿದ್ದಾರೆ.

  • 10ನೇ ತರಗತಿ ಬಾಲಕಿಯನ್ನ ಚಾಕುವಿನಿಂದ ಇರಿದು ಆತ್ಮಹತ್ಯೆಗೆ ಯತ್ನಿಸಿದ ಆರೋಪಿಗಳು

    10ನೇ ತರಗತಿ ಬಾಲಕಿಯನ್ನ ಚಾಕುವಿನಿಂದ ಇರಿದು ಆತ್ಮಹತ್ಯೆಗೆ ಯತ್ನಿಸಿದ ಆರೋಪಿಗಳು

    ಮುಂಬೈ: 10ನೇ ತರಗತಿ ಓದುತ್ತಿದ್ದ ಬಾಲಕಿಯನ್ನು ಶಾಲಾ ಆವರಣದಲ್ಲಿಯೇ 21 ವರ್ಷದ ಇಬ್ಬರು ಯುವಕರು ಚಾಕುವಿನಿಂದ ಇರಿದಿರುವ ಶಾಕಿಂಗ್ ಸುದ್ದಿ ಪುಣೆಯಲ್ಲಿ ಬೆಳಕಿಗೆ ಬಂದಿದೆ.

    ಪುಣೆಯ ವಡ್ಗಾಂವ್ ಶೇರಿ ಪ್ರದೇಶದ ಶಾಲಾ ಆವರಣದಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಬಾಲಕಿಯನ್ನು ಸೋಮವಾರ(ಇಂದು) 21 ವರ್ಷದ ಇಬ್ಬರು ಯುವಕರು ಚಾಕುವಿನಿಂದ ಇರಿದು ಕೊಂದಿದ್ದಾರೆ. ಬಾಲಕಿ ನೆಲದ ಮೇಲೆ ಬಿದ್ದು ಒದ್ದಾಡುತ್ತಿರುವಾಗ ಆರೋಪಿಗಳು ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದಾರೆ ಎಂದು ಪೊಲೀಸರಿಗೆ ಸ್ಥಳೀಯರು ತಿಳಿಸಿದ್ದಾರೆ. ಇದನ್ನೂ ಓದಿ: RSS ಪಥಸಂಚಲನ – ರಸ್ತೆಯುದ್ದಕ್ಕೂ ರಂಗೋಲಿ ಬಿಡಿಸಿ ಹೂಹಾರ ಹಾಕಿ ಸ್ವಾಗತ

    ಬಾಲಕಿಗೆ ಚಾಕುವಿನಿಂದ ಇರಿದ ಬಳಿಕ ಆರೋಪಿಗಳು ವಿಷ ಸೇವಿಸಿದ್ದು, ಇಬ್ಬರನ್ನೂ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಉದ್ದೇಶ ಏನು ಎಂಬುದು ಮಾತ್ರ ಇನ್ನು ತಿಳಿದುಬಂದಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ರೋಹಿದಾಸ್ ಪವಾರ್ ಮಾಧ್ಯಮಗಳಿಗೆ ಹೇಳಿದ್ದಾರೆ.

    ಘಟನೆ ವೇಳೆ ಸ್ಥಳದಲ್ಲಿದ್ದ ಶಿಕ್ಷಕರು ಮತ್ತು ಇತರರು ಬಾಲಕಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲೇ ಇವರಿಗೆ ಚಿಕಿತ್ಸೆಯನ್ನು ಕೊಡಿಸಲಾಗಿದೆ. ಆರೋಪಿಗಳನ್ನು ಸಹ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಘಟನೆ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ವಿವರಿಸಿದರು. ಇದನ್ನೂ ಓದಿ:  ಹಿಜಬ್ ತೀರ್ಪು: ಮಂಗಳವಾರ ಉಡುಪಿ, ಶಿವಮೊಗ್ಗ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

  • ಟಿಕೆಟ್ ಖರೀದಿಸಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದ ಮೋದಿ

    ಟಿಕೆಟ್ ಖರೀದಿಸಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದ ಮೋದಿ

    ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಪುಣೆ ಮೆಟ್ರೋ ರೈಲು ಯೋಜನೆಯನ್ನು ಉದ್ಘಾಟಿಸಿದರು. ಸ್ವಲ್ಪ ಸಮಯದ ಬಳಿಕ ಯಂಗ್ ಫ್ರೆಂಡ್ಸ್ ಜೊತೆಗೆ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ.

    ಒಟ್ಟು 32.2 ಕಿಲೋಮೀಟರ್ ಪುಣೆ ಮೆಟ್ರೋ ರೈಲು ಯೋಜನೆಯ 12 ಕಿ.ಮೀ. ವ್ಯಾಪ್ತಿಯನ್ನು ಉದ್ಘಾಟಿಸಿದ ಮೋದಿ ಅವರು ನಂತರ ಟಿಕೆಟ್ ಖರೀದಿಸಿ ಮಕ್ಕಳೊಂದಿಗೆ ಗಾರ್ವೇರ್ ಮೆಟ್ರೋ ನಿಲ್ದಾಣದಿಂದ ಆನಂದನಗರ ನಿಲ್ದಾಣದವರೆಗೆ ಪ್ರಯಾಣಿಸಿದರು. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಪುಣೆಯ ಜನತೆ ಅನುಕೂಲಕರವಾಗಿ ಮತ್ತು ಆರಾಮದಾಯಕವಾಗಿ ಪ್ರಯಾಣಿಸಬಹುದು ಎಂದು ಖಾತ್ರಿಪಡಿಸಿರುವ ಮೋದಿ ಅವರು, ಟ್ವಿಟ್ಟರ್‌ನಲ್ಲಿ ಮಕ್ಕಳ ಜೊತೆ ಕುಳಿತಿರುವ ಫೋಟೋವನ್ನು ಹಂಚಿಕೊಳ್ಳುವುದರ ಜೊತೆಗೆ ಕ್ಯಾಪ್ಷನ್‍ನಲ್ಲಿ ಪುಣೆ ಮೆಟ್ರೋದಲ್ಲಿ ಯಂಗ್ ಫ್ರೆಂಡ್ಸ್ ಜೊತೆಗೆ ಪ್ರಯಾಣ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಯುಪಿ ಭವಿಷ್ಯ ಅಖಿಲೇಶ್ ಯಾದವ್ ಕೈಯಲ್ಲಿ ಸುರಕ್ಷಿತವಾಗಿರುತ್ತೆ: ಮಯಾಂಕ್ ಜೋಶಿ

    ಪುಣೆ ಮೆಟ್ರೋ ಯೋಜನೆಗೆ ಒಟ್ಟು 11,400 ಕೋಟಿಗೂ ಹೆಚ್ಚು ಮೊತ್ತ ವೆಚ್ಚವಾಗಿದ್ದು, ಈ ಯೋಜನೆಗೆ 2016ರ ಡಿಸೆಂಬರ್ 24 ರಂದು ಮೋದಿ ಅವರು ಅಡಿಗಲ್ಲು ಹಾಕಿದ್ದರು. ಇದನ್ನೂ ಓದಿ: ಮೊದಲು ಉಕ್ರೇನ್ ಸ್ವರ್ಗದಂತಿತ್ತು, ಈಗ ನರಕವಾಗಿದೆ – ಉಕ್ರೇನ್‍ನಲ್ಲಿ ಸಿಲುಕಿದ್ದ ಬೀದರ್ ಮೂಲದ ಯುವಕ

  • ಕಾಡು ಪ್ರಾಣಿಗಳಿಗಿಟ್ಟ ನಾಡಬಾಂಬ್ ಸ್ಫೋಟ- ಬಾಲಕಿ ಸಾವು

    ಕಾಡು ಪ್ರಾಣಿಗಳಿಗಿಟ್ಟ ನಾಡಬಾಂಬ್ ಸ್ಫೋಟ- ಬಾಲಕಿ ಸಾವು

    ಮುಂಬೈ: ಕಾಡು ಪ್ರಾಣಿಗಳನ್ನು ಕೊಲ್ಲಲು ಬಳಸುವ ನಾಡಸ್ಫೋಟಗೊಂಡು ಬಾಲಕಿ ಸಾವನ್ನಪ್ಪಿದ್ದು, ಇಬ್ಬರು ಮಕ್ಕಳಿಗೆ ತೀವ್ರ ಗಾಯಗಾಳದ ಘಟನೆ ಮಹಾರಾಷ್ಟ್ರದ ಪುಣಾದ ವಾಡ್ಮುಖವಾಡಿ, ಚಾರ್ಹೋಲಿ ಬುದ್ರುಕ್‍ನ ಹೊಲದಲ್ಲಿ ನಡೆದಿದೆ.

    ರಾಧಾ ಗೋಕುಲ್ ಗಾವ್ಲಿ(5) ಮೃತ ದುರ್ದೈವಿ. ಆರತಿ ಗಾವ್ಲಿ(4) ಮತ್ತು ರಾಜು ಗಾವ್ಲಿ ಗಾಯಗೊಂಡ ಮಕ್ಕಳು. ಪುಣೆ ನಗರದಿಂದ ಸುಮಾರು 20 ಕಿಮೀ ದೂರದಲ್ಲಿರುವ ವಾಡ್ಮುಖವಾಡಿಯ ಕಬ್ಬಿನ ಗದ್ದೆಯ ಬಳಿ ಈ ಮೂವರು ಮಕ್ಕಳು ಆಟವಾಡುತ್ತಿದ್ದರು. ಹೊಲದಲ್ಲಿ ಕಾಡು ಪ್ರಾಣಿಗಳ ರಕ್ಷಣೆಗೆಂದು ಇಟ್ಟಿದ್ದ ನಾಡಬಾಂಬ್ ಇಡಲಾಗಿತ್ತು. ಅದರ ಮೇಲೆ ಬಾಲಕಿಯು ಆಕಸ್ಮಿಕವಾಗಿ ಎಡವಿ ಬಿದ್ದಿದ್ದಾರೆ. ಆ ವೇಳೆಗೆ ನಾಡಬಾಂಬ್ ಸ್ಫೋಟ ಸಂಭವಿಸಿದೆ. ಇದರಿಂದ ಒಂದು ಮಗು ಸಾವನ್ನಪ್ಪಿದೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ.

    ಮಕ್ಕಳ ಪೋಷಕರು ಹಾಲು ಮಾರಾಟಗಾರುವುದರಿಂದ ಘಟನೆ ನಡೆದಾಗ ಸ್ಥಳದಲ್ಲಿ ಅವರು ಇರಲಿಲ್ಲ. ಗಾಯಗೊಂಡ ಮಕ್ಕಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಆಸ್ಪತ್ರೆಯಲ್ಲಿ ಬಾಲಕಿಯು ಸಾವನ್ನಪ್ಪಿದ್ದಾಳೆ. ಪ್ರಕರಣ ಸಂಬಂಧಿಸಿ ಸ್ಫೋಟಕಗಳು ಅಲ್ಲಿಗೆ ಹೇಗೆ ಬಂದವು ಎಂಬುವ ಕುರಿತು ತನಿಖೆ ಆರಂಭಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.ದನ್ನೂ ಓದಿ:  ಟಾಟಾ ಏಸ್ ವಾಹನಕ್ಕೆ ಗುದ್ದಿದ ಅಪರಿಚಿತ ವಾಹನ – 2 ಸಾವು, 10 ಮಂದಿಗೆ ಗಾಯ

  • ನಿರ್ಮಾಣ ಹಂತದ ಕಟ್ಟಡ ಕುಸಿದು 5 ಕಾರ್ಮಿಕರ ದುರ್ಮರಣ

    ಮುಂಬೈ: ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿದು ಐವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಪುಣೆಯ ಯೆರವಾಡ ಪ್ರದೇಶದಲ್ಲಿ ನಡೆದಿದೆ.

    ಗುರುವಾರ ತಡರಾತ್ರಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಒಂದು ಭಾಗ ಕುಸಿದು ಬಿದ್ದ ಪರಿಣಾಮ ಐವರು ಕಾರ್ಮಿಕರು ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ ಎಂದು ಪುಣೆಯ ಟ್ರಾಫಿಕ್ ಪೊಲೀಸ್ ಕಮಿಷನರ್ ರಾಹುಲ್ ಶ್ರೀರಾಮೆ ತಿಳಿಸಿದ್ದಾರೆ. ಇದನ್ನೂ ಓದಿ: ಶಾರ್ಟ್ ಸರ್ಕ್ಯೂಟ್‌ನಿಂದ ಕಾರು ಗ್ಯಾರೇಜ್ ಧಗಧಗ – 3 ಬೈಕ್, 2 ಕಾರು ಸುಟ್ಟು ಕರಕಲು

    ಕಟ್ಟಡ ಮಾಲ್‌ಗಾಗಿ ನಿರ್ಮಾಣವಾಗುತ್ತಿದ್ದು, ಅದರ ನೆಲಮಾಳಿಗೆಯ ಪಾರ್ಕಿಂಗ್ ಮಹಡಿಯಲ್ಲಿ ಚಪ್ಪಡಿಗಳನ್ನು ಹಾಕಲು ಕಬ್ಬಿಣದ ಸರಳುಗಳನ್ನು ತರಿಸಲಾಗಿತ್ತು. 16 ಎಂಎಂ ಗಾತ್ರದ ಸರಳುಗಳು ಕುಸಿತದ ಸಂದರ್ಭದಲ್ಲಿ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ 10 ಮಂದಿ ಕಾರ್ಮಿಕರ ಮೇಲೆ ಬಿದ್ದಿದೆ. ಇದನ್ನೂ ಓದಿ: ಮನೆಯ ಮೇಲೆ ಲ್ಯಾಂಡಿಂಗ್‌ – ಅಮೆರಿಕ ಸೇನೆಗೆ ಹೆದರಿ ಐಸಿಸ್‌ ಮುಖ್ಯಸ್ಥ ಆತ್ಮಾಹುತಿ

    ಅಪಘಾತದ ಬಗ್ಗೆ ಮಾಹಿತಿ ತಿಳಿದ ಅಗ್ನಿಶಾಮಕ ದಳ ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಕಾರ್ಮಿಕರ ದೇಹಕ್ಕೆ ಚುಚ್ಚಿದ್ದ ಕಬ್ಬಿಣದ ಸರಳುಗಳನ್ನು ಕಟರ್ ಸಹಾಯದಿಂದ ತೆಗೆಯಲಾಗಿದೆ. ಐವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪದ್ದಾರೆ ಎಂದು ಶ್ರೀರಾಮೆ ತಿಳಿಸಿದರು.