Tag: ಪುಣೆ

  • 75 ವರ್ಷಗಳ ಬಳಿಕ ಪಾಕಿಸ್ತಾನದಲ್ಲಿರುವ ಮನೆಗೆ ಹೋಗಿ 90ರ ಅಜ್ಜಿ ಭಾವುಕ

    75 ವರ್ಷಗಳ ಬಳಿಕ ಪಾಕಿಸ್ತಾನದಲ್ಲಿರುವ ಮನೆಗೆ ಹೋಗಿ 90ರ ಅಜ್ಜಿ ಭಾವುಕ

    ಇಸ್ಲಾಮಾಬಾದ್: ಪುಣೆಯಲ್ಲಿ ವಾಸ ಮಾಡುತ್ತಿರುವ 90 ವರ್ಷದ ರೀನಾ ವರ್ಮಾ ತಾನು ಹುಟ್ಟಿ ಬೆಳೆದ ಪಾಕಿಸ್ತಾನದ ಮನೆಯ ದರ್ಶನ ಮಾಡಿದ್ದಾರೆ. ರಾವಲ್ಪಿಂಡಿಯ ಜನತೆ ರೀನಾ ವರ್ಮಾರನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಗುಲಾಬಿ ಪಕಳೆಗಳ ಮಳೆ ಸುರಿಸಿ, ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ರೀನಾ ವರ್ಮಾ ತಾವು ಹುಟ್ಟಿ ಬೆಳೆದ ಮನೆಯನ್ನು ನೋಡಿ, ಆನಂದ ಭಾಷ್ಪ ಸುರಿಸಿದ್ದಾರೆ. ಈ ಮೂಲಕ ತಮ್ಮ 75 ವರ್ಷದ ಕನಸನ್ನು ನನಸು ಮಾಡಿಕೊಂಡಿದ್ದಾರೆ.

    ಭಾರತ-ಪಾಕ್ ವಿಭಜನೆ ಸಂದರ್ಭದಲ್ಲಿ ರೀನಾ ವರ್ಮಾ ಕುಟುಂಬ ರಾವಲ್ಪಿಂಡಿಯಿಂದ ಭಾರತಕ್ಕೆ ಬಂದು ನೆಲೆಸಿತ್ತು. 1960-70ರ ದಶಕದಲ್ಲಿ ರೀನಾ ವರ್ಮಾ ಬೆಂಗಳೂರಿನ ಕಾವೇರಿ ಎಂಪೋರಿಯಂನಲ್ಲಿ ಕೆಲಸ ಮಾಡಿದ್ದರು. 2021ರಲ್ಲಿ ರೀನಾ ಮಾತನಾಡುತ್ತಾ, ತನ್ನ ಬಾಲ್ಯವನ್ನು ನೆನಪು ಮಾಡಿಕೊಂಡಿದ್ದರು. ರಾವಲ್ಪಿಂಡಿಯ ಮನೆ ಬಗ್ಗೆ ಪ್ರಸ್ತಾಪಿಸಿ, ತಾನು ಸಾಯೋದ್ರೊಳಗೆ ಒಮ್ಮೆ ಅದನ್ನು ನೋಡಬೇಕು ಎಂಬ ಬಯಕೆ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: 1,107 ಮಂದಿ ಡಿಸ್ಚಾರ್ಜ್ – 1,562 ಕೊರೊನಾ ಪತ್ತೆ

    ಇದನ್ನು ಗಮನಿಸಿದ ರಾವಲ್ಪಿಂಡಿಯ ಎನ್‌ಜಿಒ ರೀನಾ ಮನೆಯನ್ನು ಹುಡುಕಿ ತೋರಿಸಿತ್ತು. ಪಾಕಿಸ್ತಾನಕ್ಕೆ ಹೋಗೋಣ ಎಂದರೆ, ರೀನಾಗೆ ವೀಸಾ ಸಿಕ್ಕಿರಲಿಲ್ಲ. ಕೊನೆಗೆ ರೀನಾ ಕತೆ ಪಾಕ್ ಸರ್ಕಾರದ ಮಂತ್ರಿಯೊಬ್ಬರ ಕಿವಿಗೂ ಬಿತ್ತು. ಅಂತಿಮವಾಗಿ ಜುಲೈ 16ಕ್ಕೆ ಹೊರಟು, ಬುಧವಾರ ರಾವಲ್ಪಿಂಡಿ ತಲುಪಿ ತಮ್ಮ ಮನೆಗೆ ಕಾಲಿಟ್ಟಿದ್ದಾರೆ. ಇದನ್ನೂ ಓದಿ: ಭಾರತದಲ್ಲೇ ಮೊದಲು – ನಮ್ಮ ಮೆಟ್ರೋದಲ್ಲಿ 5ಜಿ ನೆಟ್‌ವರ್ಕ್ ಪರೀಕ್ಷೆ

    ರೀನಾ ವರ್ಮಾರ ಮನೆ ಹಿಂದೆ ಇದ್ದಂತೆಯೇ ಇದೆ. ಸುಣ್ಣ ಬಣ್ಣ ಹೊಡೆಸಲಾಗಿದೆ ಅಷ್ಟೇ ಎಂದು ಅವರು ನುಡಿದಿದ್ದಾರೆ. ಸುತ್ತಮುತ್ತಲ ಜನ ಪ್ರೀತಿಯಿಂದ ಅವರನ್ನು ಆದರಿಸಿಕೊಂಡಿದ್ದಾರೆ. ಸೆಲ್ಫಿ ತೆಗೆದು, ಖುಷಿ ಹಂಚಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಚಾರ್ಜಿಂಗ್ ವೇಳೆ ಬೆಂಕಿ ಹೊತ್ತಿಕೊಂಡ 7 ಎಲೆಕ್ಟ್ರಿಕಲ್ ಬೈಕ್

    ಚಾರ್ಜಿಂಗ್ ವೇಳೆ ಬೆಂಕಿ ಹೊತ್ತಿಕೊಂಡ 7 ಎಲೆಕ್ಟ್ರಿಕಲ್ ಬೈಕ್

    ಮುಂಬೈ: ಶೋರೂಮ್‍ನಲ್ಲಿ ಎಲೆಕ್ಟ್ರಿಕಲ್ ಬೈಕ್‍ಗಳನ್ನು ಚಾರ್ಚಿಂಗ್ ಮಾಡುತ್ತಿದ್ದ ವೇಳೆ ಔಟ್‍ಲೆಟ್‍ನಲ್ಲಿ ಬೆಂಕಿ ಕಾಣಿಸಿಕೊಂಡು 7 ಎಲೆಕ್ಟ್ರಿಕಲ್ ಬೈಕ್‍ಗಳು ಸುಟ್ಟು ಕರಕಲಾಗಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

    ಸೋಮವಾರ ಸಂಜೆ ಪುಣೆಯ ಗಂಗಾಧಾಮ್ ಪ್ರದೇಶದ ಬಳಿ ಇರುವ ಇ-ಬೈಕ್ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇದನ್ನೂ ಓದಿ: NEET ಪರೀಕ್ಷಾರ್ಥಿಗಳಿಗೆ ಒಳಉಡುಪು ತೆಗೆಯಲು ಒತ್ತಾಯ- ತನಿಖೆ ಆರಂಭಿಸಿದ ಪೊಲೀಸರು

    ಈ ಬಗ್ಗೆ ಮಾತನಾಡಿದ ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು, ಬೈಕ್‍ಗಳಿಗೆ ಪ್ಲಗ್ ಹಾಕಿ ಚಾರ್ಚಿಂಗ್ ಮಾಡುವ ವೇಳೆ ಶಾರ್ಟ್ ಸರ್ಕ್ಯೂಟ್ ಆಗಿ ಬೈಕ್‍ಗಳಿಗೆ ಬೆಂಕಿ ಹೊತ್ತಿಕೊಂಡಿರಬಹುದು. ಆದರೆ ಬೆಂಕಿ ಹೊತ್ತಿಕೊಳ್ಳಲು ನಿಖರವಾದ ಕಾರಣವೇನು ಎಂಬುವುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ತನ್ನ ಪ್ರಾಣ ಅರ್ಪಿಸಲು ಸಿದ್ಧವೆಂದು ಭಯೋತ್ಪಾದನಾ ಗುಂಪಿಗೆ ಬೆಂಬಲ ಸೂಚಿಸಿದ್ದ ವಿದ್ಯಾರ್ಥಿ ಅರೆಸ್ಟ್

    ಈ ಘಟನೆ ಕುರಿತಂತೆ ನಮಗೆ ರಾತ್ರಿ 8 ಗಂಟೆ ಸುಮಾರಿಗೆ ಕರೆ ಬಂದಿದ್ದು, ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ, ಬೆಂಕಿಯನ್ನು ನಂದಿಸಲಾಗಿದೆ ಎಂದು ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಮುನ್ನ ಮಾರ್ಚ್‍ನಲ್ಲಿಯೂ ಪುಣೆಯಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗೆ ಬೆಂಕಿ ಹತ್ತಿಕೊಂಡಿತ್ತು. ಹೀಗಾಗಿ ಓಲಾ ಎಲೆಕ್ಟ್ರಿಕ್ ಕಂಪನಿಯು ಪರಿಶೀಲನೆ ನಡೆಸಲು 1,441 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಹಿಂಪಡೆದಿತ್ತು.

    Live Tv
    [brid partner=56869869 player=32851 video=960834 autoplay=true]

  • ಕ್ಯಾಂಪಸ್ ಇಂಟರ್‌ ವ್ಯೂನಲ್ಲಿ ಕೆಲಸ ಸಿಗದಿದ್ದಕ್ಕೆ ಹೆದರಿ ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

    ಕ್ಯಾಂಪಸ್ ಇಂಟರ್‌ ವ್ಯೂನಲ್ಲಿ ಕೆಲಸ ಸಿಗದಿದ್ದಕ್ಕೆ ಹೆದರಿ ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

    ಮುಂಬೈ: ಕ್ಯಾಂಪಸ್ ಇಂಟರ್‌ ವ್ಯೂನಲ್ಲಿ ಕೆಲಸ ಸಿಗದಿದಕ್ಕೆ ಹೆದರಿ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

    ಪಶ್ಚಿಮ ಪುಣೆಯ ಐಟಿ ಕೇಂದ್ರವಾದ ಹಿಂಜಾವಾಡಿ ಬಳಿಯ ಸುಸ್ಗಾಂವ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅಕ್ಷಯ್ ಮಾತೆಗಾಂವ್ಕರ್(21) ಪ್ರತಿಷ್ಠಿತ ಎಂಜಿನಿಯರಿಂಗ್ ಸಂಸ್ಥೆಯಲ್ಲಿ ಕಂಪ್ಯೂಟರ್ ಸೈನ್ಸ್‌ನ ನಾಲ್ಕನೇ ವರ್ಷದ ವಿದ್ಯಾರ್ಥಿಯಾಗಿದ್ದನು. ಆದರೆ ಆತನಿಗೆ ಕಾಲೇಜ್ ಕ್ಯಾಂಪಸ್ ಇಂಟರ್ ವ್ಯೂನಲ್ಲಿ ಕೆಲಸ ಸಿಕ್ಕಿರಲಿಲ್ಲ. ಇದರಿಂದಾಗಿ ಮುಂದೆಯೂ ಕೆಲಸ ಸಿಗಲ್ಲ ಎಂದು ಹೆದರಿ ತನ್ನ ಮನೆಯ 8 ಮಹಡಿಯಿಂದ ಹಾರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ಮಹಿಳೆಯ ಕುತ್ತಿಗೆ ಕೊಯ್ದು ಬರ್ಬರ ಕೊಲೆ – ಚಿನ್ನಾಭರಣ ದೋಚಿ ಕಳ್ಳರು ಪರಾರಿ

    ಘಟನೆ ಸಂಬಂಧಿಸಿ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ಕೋರ್ಸ್ ಮುಗಿದ ನಂತರವೂ ಯಾವುದೇ ಕಡೆ ಉದ್ಯೋಗ ಸಿಗುವುದಿಲ್ಲ ಎಂದು ಬರೆದುಕೊಂಡಿದ್ದಾನೆ. ಈ ಸಂಬಂಧ ಹಿಂಜಾವಾಡಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ: ವೀಡಿಯೋ ಬಂದ್ ವಿಚಾರ – ಯಾರು ಏನೇ ಹೇಳಲಿ, ಈಗ ಮೊದಲಿನಂತೆ ನಿಯಮ ಇರಲಿದೆ: ಸಿಎಂ

    Live Tv
    [brid partner=56869869 player=32851 video=960834 autoplay=true]

  • ಮಳೆಯ ಆರ್ಭಟ: ಹಳಿ ತಪ್ಪುವ ಆತಂಕದಿಂದ 165 ರೈಲುಗಳ ಸಂಚಾರ ಸಂಪೂರ್ಣ ರದ್ದು

    ಮಳೆಯ ಆರ್ಭಟ: ಹಳಿ ತಪ್ಪುವ ಆತಂಕದಿಂದ 165 ರೈಲುಗಳ ಸಂಚಾರ ಸಂಪೂರ್ಣ ರದ್ದು

    ನವದೆಹಲಿ: ದೇಶಾದ್ಯಂತ ವಿವಿಧೆಡೆ ಮಳೆಯ ಆರ್ಭಟ ಜೋರಾಗಿದೆ. ನೈಸರ್ಗಿಕ ವಾತಾವರಣದ ಬದಲಾವಣೆ ಹಾಗೂ ಹವಾಮಾನ ವೈಪರೀತ್ಯ ಕಾರಣಗಳಿಂದಾಗಿ ಇಂದು ವಿವಿಧೆಡೆಯಿಂದ ಸಂಚರಿಸಬೇಕಿದ್ದ ಒಟ್ಟು 165ಕ್ಕೂ ಹೆಚ್ಚು ರೈಲುಗಳ ಸಂಚಾರವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ ಎಂದು ಭಾರತೀಯ ರೈಲ್ವೆ ಇಂದು ಬೆಳಗ್ಗೆ ಪ್ರಕಟಿಸಿದೆ.

    ಇತ್ತೀಚಿನ ಅಧಿಸೂಚನೆಯ ಪ್ರಕಾರ IRCTC ವೆಬ್‌ಸೈಟ್‌ನಲ್ಲಿ ಸುಮಾರು 37 ರೈಲುಗಳ ಸಂಚಾರವನ್ನು ರದ್ದುಗೊಳಿರುವುದಾಗಿ ತಿಳಿಸಿದೆ. ಈ ಪಟ್ಟಿಯಲ್ಲಿ ಪುಣೆ, ಪಠಾಣ್‌ಕೋಟ್, ಅಜಿಮ್‌ಗಂಜ್, ಬೊಕಾರೊ, ಸತಾರಾ ಮುಂತಾದ ಹಲವಾರು ಭಾರತೀಯ ನಗರಗಳಿಂದ ಚಲಿಸುವ ರೈಲುಗಳೂ ಸೇರಿವೆ. ಇದನ್ನೂ ಓದಿ: ಲೈಂಗಿಕ ಸಂಬಂಧ ಮದುವೆಯಲ್ಲಿ ಅಂತ್ಯವಾಗದ ಮಾತ್ರಕ್ಕೆ ಅತ್ಯಾಚಾರ ಆಗುವುದಿಲ್ಲ: ಹೈಕೋರ್ಟ್

    ವಿವಿಧೆಡೆ ರೈಲು ಸಂಚಾರಕ್ಕೆ ಅಡಚಣೆ, ಹಳಿ ತಪ್ಪುವ ಆತಂಕ ಹಾಗೂ ನೈಸರ್ಗಿಕ ಕಾರಣಗಳನ್ನು ಉಲ್ಲೇಖಿಸಿ ಭಾರತೀಯ ರೈಲ್ವೇ ಸುಮಾರು 8 ರೈಲುಗಳ ವೇಳಾಪಟ್ಟಿಯನ್ನು ಮರುಹೊಂದಿಸಿದೆ. ಈ ಕುರಿತಂತೆ ಯಾವುದೇ ಸಂದೇಹಗಳಿದ್ದರೂ enquiry.indianrail.gov.inಗೆ ಭೇಟಿ ನೀಡಿ ಪರಿಶೀಲಿಸಿಕೊಳ್ಳಬಹುದು ಎಂದು ತಿಳಿಸಿದೆ. ಇನ್ನೂ ನಿಗದಿತ ರೈಲುಗಳ ಅಗಮನ ಮತ್ತು ನಿರ್ಗಮನದ ಸಮಯವನ್ನು ವೆಬ್‌ಸೈಟ್‌ನಲ್ಲಿ ಪರಿಶೀಲಿಸಿಕೊಳ್ಳಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • SSLC ಪರೀಕ್ಷೆಯಲ್ಲಿ ಪಾಸ್ ಆದ 43 ವರ್ಷದ ಅಪ್ಪ – ಫೇಲ್ ಆದ ಮಗ

    SSLC ಪರೀಕ್ಷೆಯಲ್ಲಿ ಪಾಸ್ ಆದ 43 ವರ್ಷದ ಅಪ್ಪ – ಫೇಲ್ ಆದ ಮಗ

    ಮುಂಬೈ: ಪುಣೆಯ 43 ವರ್ಷದ ವ್ಯಕ್ತಿ ಮತ್ತು ಅವರ ಮಗ ಇಬ್ಬರೂ ಒಟ್ಟಿಗೆ ಈ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದಿದ್ದರು. ಆದರೆ ಪರೀಕ್ಷೆಯಲ್ಲಿ ಅಪ್ಪ ಪಾಸ್ ಆಗಿದ್ದು, ಮಗ ಫೇಲ್ ಆಗಿದ್ದಾನೆ.

    ಖಾಸಗಿ ಉದ್ಯೋಗದಲ್ಲಿರುವ ಪುಣೆ ನಗರದ ಬಾಬಾಸಾಹೇಬ್ ಅಂಬೇಡ್ಕರ್ ಡಯಾಸ್ ಪ್ಲಾಟ್ ನಿವಾಸಿ ಭಾಸ್ಕರ್ ವಾಘಮಾರೆ ಅವರು 7ನೇ ತರಗತಿಯ ಬಳಿಕ ವಿದ್ಯಾಭ್ಯಾಸ ತ್ಯಜಿಸಿ ತಮ್ಮ ಕುಟುಂಬಕ್ಕಾಗಿ ಕೆಲಸ ಮಾಡಲು ಆರಂಭಿಸಿದ್ದರು. ಹೀಗಾಗಿ ಅವರಿಗೆ ಓದಲು ಸಾಧ್ಯವಾಗಲಿಲ್ಲ. ಆದರೆ 30 ವರ್ಷಗಳ ನಂತರ ತಮ್ಮ ಮಗನೊಂದಿಗೆ ಈ ವರ್ಷ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಹಾಜರಾಗಿದ್ದರು. ಶುಕ್ರವಾರ ಮಹಾರಾಷ್ಟ್ರ ಸ್ಟೇಟ್ ಬೋರ್ಡ್ ಆಫ್ ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿ ಎಜುಕೇಶನ್ ನಡೆಸಿದ 10ನೇ ತರಗತಿಯ ವಾರ್ಷಿಕ ಪರೀಕ್ಷೆ ಫಲಿತಾಂಶವನ್ನು ಪ್ರಕಟಿಸಿದ್ದು, ಭಾಸ್ಕರ್ ವಾಘಮಾರೆ ಪಾಸ್ ಆಗಿದ್ದಾರೆ.  ಇದನ್ನೂ ಓದಿ: ಸದ್ಗುರು ಕಾಲು ಮುಟ್ಟಿ ನಮಸ್ಕರಿಸಿದ BSY – ಭಾಷಣದ ವೇಳೆ ಕೆಮ್ಮಿದಾಗ ನೀರು ತಂದುಕೊಟ್ಟ ಜಗ್ಗಿ ವಾಸುದೇವ್

    ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೆ ಓದಬೇಕೆಂಬ ಆಸೆ ಇತ್ತು. ಆದರೆ ಕುಟುಂಬದ ಜವಾಬ್ದಾರಿಗಳಿಂದ ಮತ್ತು ಜೀವನವನ್ನು ಸಾಗಿಸಲು ಓದಲು ಸಾಧ್ಯವಾಗಲಿಲ್ಲ. ಕೆಲ ದಿನಗಳ ಹಿಂದೆ ಮತ್ತೆ ಓದುವುದನ್ನು ಆರಂಭಿಸಬೇಕು ಮತ್ತು ಕೆಲವು ಕೋರ್ಸ್‍ಗಳನ್ನು ಮಾಡಬೇಕೆಂದು ಅಂದುಕೊಂಡಿದ್ದೆ. ಆದ್ದರಿಂದ 10ನೇ ತರಗತಿ ಪರೀಕ್ಷೆ ಬರೆಯಲು ನಿರ್ಧರಿಸಿದೆ. ಇದೇ ವೇಳೆ ನನ್ನ ಮಗ ಕೂಡ 10ನೇ ತರಗತಿ ಪರೀಕ್ಷೆ ಹಾಜರಾಗುತ್ತಿದ್ದನು ಮತ್ತು ಇದು ನನಗೆ ಸಹಾಯಕವಾಗಿತ್ತು. ಕೆಲಸ ಮುಗಿಸಿ ಮನೆಗೆ ಬಂದ ನಂತರ ನಾನು ಪ್ರತಿದಿನ ಓದುತ್ತಿದ್ದೆ. ನನ್ನ ಮಗನಿಗೆ ಪೂರಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಬೆಂಬಲಿಸುತ್ತೇನೆ ಮತ್ತು ಅವನು ಕೂಡ ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತಾನೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

    ನಂತರ ಮಾತನಾಡಿದ ಭಾಸ್ಕರ್ ವಾಘಮಾರೆ ಅವರ ಮಗ ಸಾಹಿಲ್, ನನ್ನ ತಂದೆ ಅಂದುಕೊಂಡಿದ್ದನ್ನು ಸಾಧಿಸಿರುವುದನ್ನು ಕಂಡು ನನಗೆ ಸಂತಸವಾಗಿದೆ. ಹಾಗೇ ನಾನು ಕೂಡ ಬಿಡುವುದಿಲ್ಲ. ನಾನು ಪೂರಕ ಪರೀಕ್ಷೆಗಳಿಗೆ ತಯಾರಿ ನಡೆಸಿ, ಎಲ್ಲಾ ಪರೀಕ್ಷೆಯಲ್ಲೂ ಉತ್ತೀರ್ಣನಾಗಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾನೆ.  ಇದನ್ನೂ ಓದಿ: 52ನೇ ವಸಂತಕ್ಕೆ ಕಾಲಿಟ್ಟ ರಾಹುಲ್ ಗಾಂಧಿ – ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಬ್ರೇಕ್ ಹಾಕಿದ್ದೇಕೆ?

    Live Tv

  • ಹಸು ಜೊತೆಗೆ ಸೆಕ್ಸ್ – ವಿಕೃತ ಕಾಮಿ ಅರೆಸ್ಟ್

    ಹಸು ಜೊತೆಗೆ ಸೆಕ್ಸ್ – ವಿಕೃತ ಕಾಮಿ ಅರೆಸ್ಟ್

    ಮುಂಬೈ: ಹಸುವಿನೊಂದಿಗೆ ಅಸ್ವಾಭಾವಿಕ ಸಂಭೋಗ ನಡೆಸಿದ ಆರೋಪದಡಿ ವಿಕೃತ ಕಾಮಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿಯನ್ನು 22 ವರ್ಷದ ದೀಪಕ್ ರಾಜವಾಡೆ ಎಂದು ಗುರುತಿಸಲಾಗಿದ್ದು, ಈತ ಪುಣೆಯ ಕುಸ್ಗಾಂವ್ ನಿವಾಸಿಯಾಗಿದ್ದಾನೆ. ಇದೀಗ ಲೋನಾವಾಲಾ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 377ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಉಡದ ಮೇಲೆ ಅತ್ಯಾಚಾರಗೈದ ನಾಲ್ವರು ಅರೆಸ್ಟ್

    ಮೇ 31 ರಂದು ಈ ಘಟನೆ ನಡೆದಿದ್ದು, ದೂರುದಾರರಾದ ಸತೀಶ್ ದಗ್ದು ಕೊಕರೆ ಅವರು ಹಸು ಏಕಾಏಕಿ ಚಿರಾಡುತ್ತಿರುವುದನ್ನು ಕೇಳಿಸಿಕೊಂಡು ದನದ ಕೊಟ್ಟಿಗೆ ಹೋಗಿ ನೋಡಿದ್ದಾರೆ. ಈ ವೇಳೆ ಯುವಕನೋರ್ವ ಬಟ್ಟೆ ಬಿಚ್ಚಿ ಹಸುವಿನ ಮೇಲೆ ಹಲ್ಲೆ ನಡೆಸಿ ಸೆಕ್ಸ್ ಮಾಡುತ್ತಿರುವುದನ್ನು ನೋಡಿ ಬೆಚ್ಚಿಬಿದ್ದಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ 2 ಪ್ರತ್ಯೇಕ ಸ್ಥಳಗಳಲ್ಲಿ ಗುಂಡಿನ ದಾಳಿ- ಮೂವರು ಸಾವು

    police (1)

    ನಂತರ ಆರೋಪಿಯನ್ನು ದೀಪಕ್ ಎಂದು ಸತೀಶ್ ಗುರುತಿಸುತ್ತಿದ್ದಂತೆ, ದನದ ಕೊಟ್ಟಿಗೆ ಬಳಿ ಸತೀಶ್ ಕುಟುಂಬಸ್ಥರು ಜಮಾಯಿಸಿದ್ದಾರೆ. ಬಳಿಕ ತಕ್ಷಣ ದೀಪಕ್ ಸ್ಥಳದಿಂದ ಪರಾರಿಯಾಗಿದ್ದಾನೆ. ಆದರೆ ಕೊಟ್ಟಿಗೆ ಬಳಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈತನ ಕೃತ್ಯ ಸೆರೆಯಾಗಿದೆ.

  • ಮಗನ ಕಾಯಿಲೆ ಗುಣಪಡಿಸ್ತೀನೆಂದು ಮಹಿಳೆ ಮೇಲೆ ಸ್ವಯಂಘೋಷಿತ ದೇವಮಾನವ ರೇಪ್

    ಮಗನ ಕಾಯಿಲೆ ಗುಣಪಡಿಸ್ತೀನೆಂದು ಮಹಿಳೆ ಮೇಲೆ ಸ್ವಯಂಘೋಷಿತ ದೇವಮಾನವ ರೇಪ್

    ಮುಂಬೈ: ಮಗನ ಅಂಗವೈಕಲ್ಯವನ್ನು ಗುಣಪಡಿಸುತ್ತೇನೆ ಅಂತ 36 ವರ್ಷದ ಮಹಿಳೆಯ ಮೇಲೆ 60 ವರ್ಷದ ಸ್ವಯಂಘೋಷಿತ ದೇವಮಾನವ ಅತ್ಯಾಚಾರವೆಸಗಿರುವ ಘಟನೆ ಪುಣೆಯಲ್ಲಿ ನಡೆದಿದೆ.

    ಆರೋಪಿ ದೇವಮಾನವನನ್ನು ಮಾಟಮಂತ್ರ ಮಾಡುವ ಧನಂಜಯ್ ಗೋಹದ್ ಅಲಿಯಾಸ್ ನಾನಾ (60) ಎಂದು ಗುರುತಿಸಲಾಗಿದೆ. ಇದೀಗ ಪೊಲೀಸರು ಆತನ ಸಹಚರ ಮಹಿಳೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ವಿಮಾನ ಪತನದ ಸ್ಥಳದಲ್ಲಿ 16 ಮೃತದೇಹ ಪತ್ತೆ- ಪ್ರಯಾಣಿಕರೆಲ್ಲರೂ ಮೃತಪಟ್ಟಿರುವ ಶಂಕೆ

    RAPE CASE

    ಶನಿವಾರ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ತನ್ನ ಅಂಗವಿಕಲ ಮಗನಿಗೆ ಚಿಕಿತ್ಸೆ ಕೊಡಿಸಲು ಹುಡುಕಾಟ ನಡೆಸುತ್ತಿದ್ದ ವೇಳೆ 2021ರ ಜನವರಿಯಂದು ಮಹಿಳೆಗೆ ಆರೋಪಿಯ ಪರಿಚಯವಾಗಿದೆ ಎಂದು ಸಂತ್ರಸ್ತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ. ‘ಮಂತ್ರ ಮಾಂಗಲ್ಯ’ ಮದುವೆ ಮೂಲಕ ಮಾದರಿಯಾದ ನಿರ್ದೇಶಕ ಕೆ.ಎಂ. ರಘು

    ಏಪ್ರಿಲ್ ತಿಂಗಳಿನಲ್ಲಿ ಧನಂಜಯ್ ಗೊಹಾದ್ ಋಣಾತ್ಮಕ ಶಕ್ತಿಗಳನ್ನು ತೆಗೆದುಹಾಕುವ ನೆಪದಲ್ಲಿ ತನ್ನ ನಿವಾಸಕ್ಕೆ ಬಂದು ಬಟ್ಟೆ ಬಿಚ್ಚುವಂತೆ ಕೇಳಿಕೊಂಡನು. ನಂತರ ಗೋಹಾದ್ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ. ಅಲ್ಲದೇ ಈ ಘಟನೆ ಬಗ್ಗೆ ಯಾರಿಗಾದರೂ ಹೇಳಿದರೆ ತನ್ನ ಪತಿ ಮತ್ತು ಸಹೋದರ ಅಪಘಾತದಲ್ಲಿ ಸಾಯುತ್ತಾರೆ. ಅಲ್ಲದೆ ಜನಿಸುವ ಎರಡನೇ ಮಗು ಅಂಗವಿಕಲತೆಯಿಂದ ಹುಟ್ಟುತ್ತದೆ ಎಂದು ಬೆದರಿಕೆಯೊಡ್ಡಿದ್ದಾನೆ. ಆರೋಪಿ ತನ್ನ ಮಗನನ್ನು ಗುಣಪಡಿಸಲು ಮಾಟಮಂತ್ರಗಳನ್ನು ಮಾಡಿದರೂ ಯಶಸ್ವಿಯಾಗಲಿಲ್ಲ ಎಂದು ಮಹಿಳೆ ಆರೋಪಿಸಿದ್ದಾಳೆ.

    ಮೇ 27 ರಂದು ಘಟನೆ ಸಂಬಂಧ ಮಹಿಳೆ ಹದಾಸ್‍ಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಇದೀಗ ಪೊಲೀಸರು ಆರೋಪಿ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸಂಬಂಧಿತ ಪ್ರಕರಣ ದಾಖಲಿಸಿದ್ದಾರೆ

  • ಭಯೋತ್ಪಾದಕ ಸಂಘಟನೆ ಜೊತೆಗೆ ನಂಟು – ವ್ಯಕ್ತಿ ಅರೆಸ್ಟ್

    ಭಯೋತ್ಪಾದಕ ಸಂಘಟನೆ ಜೊತೆಗೆ ನಂಟು – ವ್ಯಕ್ತಿ ಅರೆಸ್ಟ್

    ಮುಂಬೈ: ಭಯೋತ್ಪಾದಕ ಸಂಘಟನೆ ಜೊತೆಗೆ ನಂಟು ಹೊಂದಿದ್ದ ವ್ಯಕ್ತಿಯೋರ್ವನನ್ನು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಅಧಿಕಾರಿಗಳು ಬಂಧಿಸಿದ್ದು, ಆರೋಪಿಯನ್ನು ಇಂದು ಪುಣೆಯ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ.

    ಬಂಧಿತ ಆರೋಪಿಯನ್ನು ಜುನೈದ್ ಎಂದು ಗುರುತಿಸಲಾಗಿದ್ದು, ಈತ ಬಹಳ ದಿನಗಳಿಂದ ಪುಣೆಯಲ್ಲಿ ನೆಲೆಸಿದ್ದನು. ಆರೋಪಿ ಲಷ್ಕರ್-ಎ-ತೈಬಾ (ಎಲ್‍ಇಟಿ) ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದನು ಮತ್ತು ಎಲ್‍ಇಟಿಗೆ ಭಯೋತ್ಪಾದಕರನ್ನು ಸೇರಿಸಿಕೊಳ್ಳುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದನು. ಇದನ್ನೂ ಓದಿ: ಮನಿ ಡಬಲ್‌ ಮಾಡುತ್ತೇವೆ ಎಂದು ನಂಬಿಸಿ ಮೋಸ ಮಾಡುತ್ತಿದ್ದ ಖದೀಮರ ಬಂಧನ

    ನಿಷೇಧಿತ ಲಷ್ಕರ್-ಎ-ತೊಯ್ಬಾ (ಎಲ್‍ಇಟಿ) ಸಂಘಟನೆಯ ಐವರು ‘ಹೈಬ್ರಿಡ್’ ಭಯೋತ್ಪಾದಕರನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಧಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ. ಈ ಐವರು ಭಯೋತ್ಪಾದಕರಲ್ಲಿ ಮೂವರು ಕೆಲವು ದಿನಗಳ ಹಿಂದೆ ನಡೆದ ಬಾರಾಮುಲ್ಲಾ ಜಿಲ್ಲೆಯಲ್ಲಿನ ಸರಪಂಚ್ ಹತ್ಯೆಯಲ್ಲಿ ಶಾಮೀಲಾಗಿದ್ದಾರೆ. ಇವರಲ್ಲಿ ಇಬ್ಬರನ್ನು ಸೋಮವಾರ ಶ್ರೀನಗರದಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳೊಂದಿಗೆ ಪೊಲೀಸರು ಬಂಧಿಸಿದ್ದರೆ, ಉಳಿದ ಮೂವರನ್ನು ಬಾರಾಮುಲ್ಲಾದಲ್ಲಿ ಬಂಧಿಸಿದ್ದಾರೆ. ಇದನ್ನೂ ಓದಿ: ಕುತುಬ್ ಮಿನಾರ್ ಬಳಿ ಪೂಜೆ ಮಾಡುವ ಹಕ್ಕು ಯಾರಿಗೂ ಇಲ್ಲ – ASI ಖಡಕ್ ಉತ್ತರ

  • ರಾಜ್ಯವನ್ನೇ ಹುಡುಕಿದರೂ ಸಿಗದ ಕಿಂಗ್‌ಪಿನ್ ದಿವ್ಯಾ ಹಾಗರಗಿ ಅರೆಸ್ಟ್ ಆದ ಕಥೆಯೇ ರೋಚಕ

    ರಾಜ್ಯವನ್ನೇ ಹುಡುಕಿದರೂ ಸಿಗದ ಕಿಂಗ್‌ಪಿನ್ ದಿವ್ಯಾ ಹಾಗರಗಿ ಅರೆಸ್ಟ್ ಆದ ಕಥೆಯೇ ರೋಚಕ

    ಬೆಂಗಳೂರು/ಕಲಬುರಗಿ: ರಾಜ್ಯಾದ್ಯಂತ ಹುಡುಕಾಡಿದರೂ ಸಿಗದ ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದ ಕಿಂಗ್‌ಪಿನ್ ಆರೋಪಿ ದಿವ್ಯಾ ಹಾಗರಗಿ ಸಿಐಡಿ ಬೋನಿಗೆ ಬಿದ್ದದೆ ರೋಚಕ.

    ದಿನಕ್ಕೊಂದು ರಹಸ್ಯಗಳನ್ನು ಬಯಲು ಮಾಡುತ್ತಿದ್ದ ಈ ಪ್ರಕರಣದಲ್ಲಿ ವಿಶೇಷ ತಂಡಗಳನ್ನು ರಚಿಸಿ ಫುಲ್ ಆಕ್ಟೀವ್ ಆಗಿ ಕೆಲಸ ಮಾಡುತ್ತಿದ್ದ ಸಿಐಡಿ ಅಧಿಕಾರಿಗಳು, ಹೊಂಚುಹಾಕಿ ಸಿನಿಮೀಯ ರೀತಿಯಲ್ಲಿ ಆಕೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಜಮೀರ್‌ಗೆ ಬಿಜೆಪಿ `ಮಹಾನಾಯಕ’ನ ಬೆಂಬಲವಿದೆ, ನಮ್ಮವರೇ ಸುಲಿಗೆ ಮಾಡುತ್ತಿದ್ದಾರೆ: ಯತ್ನಾಳ್

    Divya hagaragi (2)

    ದಿವ್ಯಾ ಎಸ್ಕೇಪ್ ಆಗಿದ್ದು ಹೇಗೆ?: ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ವಿಚಾರ ಕೇಳಿಬರುತ್ತಿದ್ದಂತೆ ದಿವ್ಯಾ ಹಾಗರಗಿ, ಕಾರುಚಾಲಕ ಸದ್ದಾಂ ಹುಸೇನ್‌ನ ಸಹಾಯದಿಂದ ತನ್ನ ಇನ್ನೋವಾ ಕಾರಿನಲ್ಲಿ ಅರ್ಚನಾ, ಸುನೀತಾಳನ್ನ ಕೂರಿಸಿಕೊಂಡು ಎಸ್ಕೇಪ್ ಆಗಿದ್ದಾಳೆ. ಅಷ್ಟರಲ್ಲಾಗಲೇ ಫುಲ್ ಆಕ್ಟೀವ್ ಆಗಿದ್ದ ಸಿಐಡಿಯ ಸೈಬರ್ ಕ್ರೈಂ ತಂಡವು ದಿವ್ಯಾ ಎಲ್ಲೆಲ್ಲಿ ಹೋಗ್ತಿದ್ದಾಳೆ? ಎಂಬ ಮಾಹಿತಿಯನ್ನು ಕಲೆಹಾಕತೊಡಗಿತ್ತು. ಇದಕ್ಕಾಗಿ ಸಿಐಡಿಯು 6 ವಿಶೇಷ ತಂಡಗಳನ್ನು ರಚಿಸಿಕೊಂಡಿತ್ತು. ಎಸ್ಪಿ ನಾಗೇಶ್ ಅವರ ಟೀಂ ನಿಂದ ಟೆಕ್ನಿಕಲ್ ಸಹಕಾರ ನೀಡಿತ್ತು. ಇದನ್ನೂ ಓದಿ: ತಾಕತ್ತಿದ್ದರೆ ನನ್ನ ವಿರುದ್ಧ ರೇವಣ್ಣ ನಿಲ್ಲಲಿ: ಪ್ರೀತಂ ಸವಾಲು

    divya hagaragi

    ಎಸ್ಕೇಪ್ ಆಗಿ ಸೊಲ್ಲಾಪುರಕ್ಕೆ ತೆರಳಿದ್ದ ದಿವ್ಯಾ ಅಲ್ಲಿ ಟೆಲಿಕಾಂ ಬ್ಯುಸಿನಸ್ ಮಾಡ್ತಿದ್ದ ಸುರೇಶ್ ಕಾಟ್ಗಾಂವ್ ನನ್ನ ಭೇಟಿಯಾಗಿದ್ದಳು. ನಂತರ ಆತನ ಬಳಿ ಆಶ್ರಯ ನೀಡುವಂತೆ ದುಂಬಾಲುಬಿದ್ದಿದ್ದಳು. ಈ ಹಿಂದೆ ಕಲಬುರಗಿಯ ಅಫ್ಜಲ್ ಪುರದಲ್ಲಿ ಸ್ಯಾಂಡ್ ಬ್ಯುಸಿನೆಸ್ ಮಾಡಿಕೊಂಡಿದ್ದಾಗ ಸುರೇಶ್‌ನ ಪರಿಚಯವಾಗಿತ್ತು. ದಿವ್ಯಾ ಸುರೇಶ್‌ಗೆ ಹಣಕಾಸಿನ ಸಹಾಯ ಮಾಡುತ್ತಿದ್ದಳು. ಆ ಋಣವನ್ನ ತೀರಿಸೋಕೆ ಸುರೇಶ್ ದಿವ್ಯಾ ಸಹಾಯಕ್ಕಾಗಿ ನಿಂತಿದ್ದನು.

    kalaburagi - divya

    ಅಕ್ರಮ ನೇಮಕಾತಿ ವಿಚಾರ ಬಯಲಾಗುತ್ತಿದ್ದಂತೆ ಅಫ್ಜಲ್‌ಪುರ ತಲುಪುವ ಮುನ್ನವೇ ದಿವ್ಯಾ ಮೊಬೈಲ್ ಸ್ವಿಚ್‌ಆಫ್ ಮಾಡಿಕೊಂಡಿದ್ದಾಳೆ. ನಂತರ ದಿವ್ಯಾ ಅಂಡ್ ಟೀಂ ಮೊಬೈಲ್ ಬಳಸದೇ ಮಹಾರಾಷ್ಟ್ರದ ಪುಣೆ ತಲುಪಿದೆ. ಇದಕ್ಕೂ ಮುನ್ನವೇ ಗುಜರಾತ್-ಮಹಾರಾಷ್ಟ್ರ ಭಾಗಗಳಲ್ಲಿ ಕಾರಿನಲ್ಲಿ ಓಡಾಟ ನಡೆಸಿದ್ದರು. ದಿವ್ಯಾಳ ಮೊಬೈಲ್ ಸ್ವಿಚ್ ಆಫ್ ಆಗೋಕು ಮುನ್ನ ಸುರೇಶನಿಗೆ ಕಾಲ್ ಮಾಡಿದ್ದಳು. ಈ ಆಧಾರದ ಮೇಲೆಯೇ ಸುರೇಶ್ ಚಲನವಲನದ ಬಗ್ಗೆ ಗಮನಹರಿಸಿದ್ದ ಸಿಐಡಿ ಟೀಂ ಸುರೇಶನ ಬೆಂಬಿದ್ದಿದೆ. ನಂತರ ಸುರೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ದಿವ್ಯಾಳ ಬಗ್ಗೆ ಸತ್ಯ ಬಾಯ್ಬಿಟ್ಟಿದ್ದಾನೆ. ಪುಣೆಗೆ ಹೋಗ್ತೀನಿ ಅಂದಿದ್ರು ಆದರೆ, ಎಲ್ಲಿ ಅಂತ ಗೊತ್ತಿಲ್ಲ ಎಂದು ಬಾಯ್ಬಿಟ್ಟಿದ್ದಾನೆ. ಇದನ್ನೂ ಓದಿ: ಮನೆಯಿಂದ ಹೋಗಬೇಕಾದ್ರೆ ರಾಜಕುಮಾರಿ ತರ ಹೋದ್ಳು, ಆದರೆ ಈಗ….: ಆ್ಯಸಿಡ್ ಸಂತ್ರಸ್ತೆ ತಾಯಿ ಅಳಲು 

    DIVYA - POLICE - KALBURAGI (3)

    ನಂತರ ಸಿಐಡಿ ಅಧಿಕಾರಿಗಳು ಸುರೇಶ್‌ನನ್ನು ಪುಣೆಗೆ ಕರೆದೊಯ್ದು ದಿವ್ಯಾಳಿಗೆ ಫೋನ್ ಮಾಡಿಸಿದ್ದಾರೆ. ಲಾಡ್ಜ್ ಒಂದರ ಮಾಹಿತಿಯನ್ನ ನೀಡಿದ್ದ ದಿವ್ಯಾ. ಆ ಲಾಡ್ಜ್ ನಲ್ಲಿ ಅಡುಗೆಭಟ್ಟ ಕಾಳಿದಾಸನಿಂದ ಬಗೆಬಗೆಯ ಅಡುಗೆ ಮಾಡಿಸಿಕೊಂಡು ತಿನ್ನುತ್ತಿದ್ದರು. ಕಾಳಿದಾಸನ ಮೊಬೈಲ್ ನಿಂದಲೇ ವಾಟ್ಸಪ್ ಕಾಲ್ ಮಾಡ್ತಿದ್ರು. ಇದರಿಂದ ಆಕೆ ಲಾಡ್ಜ್ನಲ್ಲಿ ಇರುವುದು ಕನ್ಫರ್ಮ್ ಆಗಿದೆ. ಲಾಡ್ಜ್ ಅನ್ನು ಸುತ್ತುವರಿದ ಪೊಲೀಸರು ದಿವ್ಯಾ, ಅರ್ಚನಾ, ಸುನೀತಾ, ಕಾರು ಚಾಲಕ ಸದ್ದಾಂನನ್ನು ಅರೆಸ್ಟ್ ಮಾಡಿದ್ದಾರೆ. ಉಳಿದಂತೆ ಎಂಎಸ್ ಬಿಲ್ಡಿಂಗ್‌ನ ಡಿಪಿಆರ್ ಸೆಕ್ಷನ್‌ನಲ್ಲಿದ್ದ ಜ್ಯೋತಿ ಸಹ ತಗಲ್ಲಾಕ್ಕೊಂಡಿದ್ದಾಳೆ.

    ಜ್ಯೋತಿ, ಶಾಂತಾಭಾಯಿ ಎಂಬಾಕೆಯನ್ನು ಪಿಎಸ್‌ಐ ಅಕ್ರಮ ನೇಮಕಾತಿ ಮಾಡಿಸಿದ್ದಳು. 15 ಉತ್ತರವನ್ನಷ್ಟೇ ಶಾಂತಾಭಾಯಿ ಉತ್ತರಿಸಿದ್ದಳು. ಆದರೆ, ಓಎಂಆರ್ ಶೀಟ್ ನಲ್ಲಿ 130 ಅಂಕ ಪಡೆಯುವಂತೆ ಮಾಡಲಾಗಿದೆ. ಒಟ್ಟಿನಲ್ಲಿ ಶಾಂತಾಭಾಯಿ ಎಸ್ಕೇಪ್ ಆಗಿದ್ದು ಆಕೆಯ ಹುಡುಕಾಟದಲ್ಲಿ ಸಿಐಡಿ ಬ್ಯುಸಿಯಾಗಿದೆ.

  • ಮೊಮ್ಮಗಳು ಜನಿಸಿದ ಖುಷಿಯಲ್ಲಿ ಕರೆತರಲು ಹೆಲಿಕಾಪ್ಟರ್ ಬುಕ್ ಮಾಡಿದ ರೈತ

    ಮೊಮ್ಮಗಳು ಜನಿಸಿದ ಖುಷಿಯಲ್ಲಿ ಕರೆತರಲು ಹೆಲಿಕಾಪ್ಟರ್ ಬುಕ್ ಮಾಡಿದ ರೈತ

    ಮುಂಬೈ: ಮೊಮ್ಮಗಳು ಜನಿಸಿದ ಖುಷಿಯಲ್ಲಿ ರೈತರೊಬ್ಬರು ಪ್ರೀತಿಯ ಪುಟ್ಟ ಕಂದಮ್ಮನನ್ನು ಮನೆಗೆ ಬರಮಾಡಿಕೊಳ್ಳಲು ಹೆಲಿಕಾಪ್ಟರನ್ನೇ ಬುಕ್ ಮಾಡಿದ್ದಾರೆ.

    ಪುಣೆಯ ಹೊರವಲಯದಲ್ಲಿರುವ ಬಾಲೆವಾಡಿ ಪ್ರದೇಶದ ನಿವಾಸಿ ಅಜಿತ್ ಪಾಂಡುರಂಗ ಬಲ್ವಾಡ್ಕರ್ ಈ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿ, ಕುಟುಂಬಕ್ಕೆ ಹೊಸ ಸದಸ್ಯೆ ಕ್ರುಶಿಕಾಗೆ ಸ್ವಾಗತ ಕೋರಲು ಹೆಲಿಕಾಪ್ಟರ್ ಬಾಡಿಗೆಗೆ ಪಡೆದಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಸಿನಿಮಾದಲ್ಲಿ ಅವಕಾಶ ಕೊಡಿಸೋ ನೆಪದಲ್ಲಿ ಅತ್ಯಾಚಾರ – ನಟ ವಿಜಯ್ ಬಾಬು ವಿರುದ್ಧ ಪ್ರಕರಣ ದಾಖಲು

    ಶೆವಾಲ್ ವಾಡಿಯಲ್ಲಿರುವ ತವರು ಮನೆಯಿಂದ ತಾಯಿ ಹಾಗೂ ಮಗುವನ್ನು ಮನೆಗೆ ಕರೆದುಕೊಂಡು ಬರುವ ಸಮಯ ಬಂದಾಗ ಹೆಲಿಕಾಪ್ಟರ್ ಬುಕ್ ಮಾಡಿರುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಆಫ್‌ಸ್ಕ್ರೀನ್‌ನಲ್ಲಿ ಹೆಂಡತಿಗೆ ಮುತ್ತಿಟ್ಟ ಯಶ್‌