Tag: ಪುಡಿ ರೌಡಿ

  • ಬೆಂಗಳೂರಿನಲ್ಲಿರುವ SLV ಭವನ ನೆಲಸಮಗೈದ ಪುಡಿರೌಡಿಗಳು!

    ಬೆಂಗಳೂರಿನಲ್ಲಿರುವ SLV ಭವನ ನೆಲಸಮಗೈದ ಪುಡಿರೌಡಿಗಳು!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಪುಡಿರೌಡಿಗಳು ಅಟ್ಟಹಾಸ ಮುಂದುವರಿಸಿದ್ದಾರೆ. ಅನಾಮಿಕ ವ್ಯಕ್ತಿಗಳು ರಾತ್ರೋರಾತ್ರಿ ಅವಿನ್ಯೂ ರೋಡ್ ನಲ್ಲಿರುವ ಎಸ್‍ಎಲ್‍ವಿ ಭವನ (SLV Bhavan) ವನ್ನು ಪುಡಿಗೈದಿದ್ದಾರೆ.

    ರಾತ್ರಿ ಸುಮಾರು 30 ಮಂದಿ ಹೋಟೆಲ್‍ಗೆ ಸುತ್ತಿಗೆ ರಾಡ್ ತೆಗೆದುಕೊಂಡು ಬಂದು ಹೋಟೆಲ್ ನೆಲಸಮ ಮಾಡಿದ್ದಾರೆ. ಮಾಸ್ಕ್ ಮಂಕಿಕ್ಯಾಪ್ ಧರಿಸಿ ಬಂದು 7 ಮಂದಿ ಹೊಟೇಲ್ ಸಿಬ್ಬಂದಿಗೆ ಚಾಕು ತೋರಿಸಿ ಬೆದರಿಕೆ ಹಾಕಿ, ಮೊಬೈಲ್ ಕಿತ್ತುಕೊಂಡಿದ್ದಾರೆ.

    ರಾತ್ರಿ 1-2 ಗಂಟೆ ವೇಳೆ ಈ ಕೃತ್ಯ ನಡೆದಿದೆ. ಹೋಟೆಲ್ ಗಣೇಶ್ ಮತ್ತು ಮೂರು ಜನ ಪಾರ್ಟ್ ನರ್ ಶಿಪ್ ನಲ್ಲಿ ನಡೆಯುತ್ತಿದೆ. ಜಾಗದ ಮಾಲೀಕತ್ವದ ವಿಚಾರದಲ್ಲಿ ಗಲಾಟೆಯಾಗಿತ್ತು ಎನ್ನಲಾಗಿದ್ದು, ಇದುವೇ ಕೃತ್ಯಕ್ಕೆ ಕಾರಣ ಅಂತ ಹೇಳಲಾಗುತ್ತಿದೆ. ಇದನ್ನೂ ಓದಿ: ಹಲವು ವಾಹನಗಳಿಗೆ ಡಿಕ್ಕಿ, ಕಾರನ್ನು 3 ಕಿ.ಮೀ ದೂಡಿಕೊಂಡೇ ಹೋದ ಬಸ್ – ಚಾಲಕ ಅರೆಸ್ಟ್

    ಸದ್ಯ ಘಟನೆಯಿಂದ ಹೋಟೆಲ್ ನಡೆಸುತ್ತಿದ್ದವರು ಕಣ್ಣೀರು ಹಾಕಿದ್ದಾರೆ. ಅನ್ನ ಕೊಡುತ್ತಿದ್ದ ಹೋಟೆಲ್ ನ್ನು ಪುಡಿ ಮಾಡಿದ್ದಾರೆ, ಬದುಕು ಬೀದಿಗೆ ಅಂತಾ ಕಣ್ಣೀರು ಸುರಿಸಿದ್ದಾರೆ. ಸುಮಾರು ಹತ್ತು ಲಕ್ಷಕ್ಕಿಂತಲೂ ಹೆಚ್ಚು ನಷ್ಟವಾಗಿದೆ ಅಂತಾ ಬೇಸರ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪುಡಿ ರೌಡಿಯನ್ನ ಕಿಡ್ನಾಪ್‍ಗೈದು ಬರ್ಬರ ಕೊಲೆ

    ಪುಡಿ ರೌಡಿಯನ್ನ ಕಿಡ್ನಾಪ್‍ಗೈದು ಬರ್ಬರ ಕೊಲೆ

    ಬೆಂಗಳೂರು: ಪುಡಿ ರೌಡಿಯೊಬ್ಬನನ್ನು ಕಿಡ್ನಾಪ್ ಮಾಡಿ ಬಳಿಕ ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೆಂಗಳೂರು ಹೊರವಲಯದ ಬೇಗೂರು, ಹೊಂಗಸಂದ್ರ ರಸ್ತೆಯಲ್ಲಿ ನಡೆದಿದೆ.

    ಬೇಗೂರಿನ ನಿವಾಸಿ ಸುನೀಲ್ ಹತ್ಯೆಯಾದ ಪುಡಿ ರೌಡಿ. ಸುನೀಲ್ ಬೊಮ್ಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ಅಷ್ಟೇ ಅಲ್ಲದೆ ಅನೇಕ ಬಾರಿ ಜೈಲಿಗೂ ಹೋಗಿ ಬಂದಿದ್ದನು.

    ಬೇಗೂರು, ಹೊಂಗಸಂದ್ರ ರಸ್ತೆಯಲ್ಲಿ ಭಾನುವಾರ ಸಂಜೆ ಬಂದ ಗುಂಪೊಂದು ಸುನೀಲ್‍ನನ್ನು ಎಳೆದುಕೊಂಡು ಹೋಗಿದೆ. ಬಳಿಕ ನಿರ್ಜನ ಪ್ರದೇಶದಲ್ಲಿ ಹಲ್ಲೆ ಮಾಡಿದೆ. ಅಷ್ಟಕ್ಕೆ ನಿಲ್ಲಿಸದೇ ಸುನೀಲ್ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ, ಸ್ಥಳದಿಂದ ಪರಾರಿಯಾಗಿದೆ.

    ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ತನಿಖೆ ಆರಂಭಿಸಿರುವ ಪೊಲೀಸರು, ಸುನೀಲ್ ಸ್ನೇಹಿತರಿಂದಲೇ ಹತ್ಯೆಯಾಗಿದ್ದಾನೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

  • ಮಡಿಕೇರಿ: ಮೊಬೈಲ್ ಅಂಗಡಿಗೆ ನುಗ್ಗಿ ಮಾಲೀಕನ ಮೇಲೆ ರಾಡ್‍ನಿಂದ ಹಲ್ಲೆ!

    ಮಡಿಕೇರಿ: ಮೊಬೈಲ್ ಅಂಗಡಿಗೆ ನುಗ್ಗಿ ಮಾಲೀಕನ ಮೇಲೆ ರಾಡ್‍ನಿಂದ ಹಲ್ಲೆ!

    – ಗೂಂಡಾಗಿರಿ ಸಿಸಿಟಿವಿಯಲ್ಲಿ ಸೆರೆ

    ಮಡಿಕೇರಿ: ನಗರದಲ್ಲಿ ಪುಡಿ ರೌಡಿಗಳ ಅಟ್ಟಹಾಸ ಮುಂದುವರೆದಿದ್ದು, ಕ್ಷುಲ್ಲಕ ಕಾರಣಕ್ಕೆ ಗುಂಪು-ಗುಂಪಲ್ಲಿ ತೆರಳಿ ಸಿಕ್ಕವರ ಮೇಲೆ ಹಲ್ಲೆ ಮಾಡೋ ಪ್ರವೃತ್ತಿ ಹೆಚ್ಚಾಗ್ತಿದೆ. ಕಳೆದ ರಾತ್ರಿ ನಗರದ ಮೊಬೈಲ್ ಶಾಪ್‍ವೊಂದಕ್ಕೆ ತೆರಳಿರೋ ಪುಂಡರ ಗುಂಪೊಂದು ಜಗಳ ತೆಗೆದು ಶಾಪ್ ಮಾಲಿಕನಿಗೆ ರಾಡ್‍ನಿಂದ ಮಾರಣಾಂತಿಕ ಹಲ್ಲೆ ನಡೆಸಿದೆ. ಈ ಘಟನೆ ಅಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

    ನಗರದಲ್ಲಿರುವ ಪಡ್ಡೆ ಹುಡುಗರಿಗೆ ಹೆಸರು ಮಾಡೋ ಹುಚ್ಚು, ದೊಡ್ಡೋರಿಗೆ ಹುಡುಗರನ್ನು ಬೆಳೆಸೋ ಆಸೆ. ಇದರ ಪರಿಣಾಮವೇ ನಗರದಲ್ಲಿ ಚಿಗುರು ಮೀಸೆಯ ಹುಡುಗರೆಲ್ಲಾ ಪುಡಿ ರೌಡಿಗಳಾಗ್ತಿದ್ದಾರೆ. ತಮ್ಮದೇ ಗುಂಪುಗಳನ್ನು ಕಟ್ಕೊಂಡು ಏರಿಯಾ ಹೆಸರಲ್ಲಿ ಹೊಡೆದಾಡ್ಕೊಳ್ತಿದ್ದಾರೆ. ಇಂತಹ ಹೊಡೆದಾಟಕ್ಕೆ ಒಂದು ವಾರದ ಹಿಂದೆ ಒಬ್ಬ ಹರೆಯದ ಹುಡುಗನ ಬರ್ಬರ ಹತ್ಯೆಯೂ ಆಗಿತ್ತು.

    ಪುಡಿ ರೌಡಿಗಳ ವಾರ್ ಯಾವಾಗ ಜಾಸ್ತಿ ಆಯ್ತೋ ತಕ್ಷಣ ಪೊಲಿಸ್ರು ಎಚ್ಚೆತ್ತುಕೊಂಡು ಪಡ್ಡೆ ಹುಡುಗ್ರ ಮೇಲೆ ನಿಗಾ ಇಟ್ರು. ಆದ್ರೂ ನಗರದಲ್ಲಿ ದಿನವೂ ಗುಂಪು ಕಟ್ಕೊಂಡು ಹೊಡೆದಾಡೋ ಪ್ರವೃತ್ತಿ ನಿಂತಿಲ್ಲ. ಕಳೆದ ರಾತ್ರಿಯೂ ಅದೇ ಆಗಿದ್ದು, ನಗರ ಕೈಗಾರಿಕಾ ಬಡಾವಣೆಯಲ್ಲಿರೋ ಝೆಡ್ ಮೊಬೈಲ್ ಶಾಪ್‍ಗೆ ಎಂಟ್ರಿ ಕೊಟ್ಟ ನಾಲ್ಕೈದು ಮಂದಿಯ ಪುಡಿ ರೌಡಿಗಳು ಶಾಪ್ ಕ್ಲೋಸ್ ಮಾಡು ಎಂದು ತಗಾದೆ ತೆಗೆದಿದ್ದಾರೆ. ಇದನ್ನು ಅಂಗಡಿ ಮಾಲೀಕ ಜುಬೇರ್ ವಿರೋಧಿಸಿದಾಗ ರಾಡ್‍ನಿಂದ ಹಲ್ಲೆ ನಡೆಸಿದ್ದಾರೆ. ಈ ದೃಶ್ಯಾವಳಿ ಶಾಪ್‍ನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

    ಪ್ರಕರಣ ದಾಖಲಿಸಿಕೊಂಡಿರುವ ಮಡಿಕೇರಿ ನಗರ ಠಾಣಾ ಪೊಲೀಸರು ಸಿಸಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ನಗರದ ಪ್ರಶಾಂತ್ ಹಾಗೂ ಅಭಿಲಾಶ್ ಮೇಲೆ ಎಫ್‍ಐಆರ್ ದಾಖಲಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಇಬ್ಬರ ಬಗ್ಗೆ ತನಿಖೆ ಚುರುಕುಗೊಳಿಸಿದ್ದಾರೆ. ಪುಡಿ ರೌಡಿಗಳು ಯಾವ ಕಾರಣಕ್ಕೆ ಅಂಗಡಿ ಮಚ್ಚುವಂತೆ ಹೇಳಿದರು ಎಂಬುದು ಮಾತ್ರ ಸದ್ಯ ಗೌಪ್ಯವಾಗಿದ್ದು, ಹಲ್ಲೆಗೆ ನಿಖರ ಕಾರಣ ಮಾತ್ರ ತಿಳಿದುಬಂದಿಲ್ಲ.

    https://www.youtube.com/watch?v=6Os2rDOpWg4