Tag: ಪುಟ್ಬಾಲ್

  • ಮೂತ್ರ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದ ಬ್ರೇಜಿಲ್‍ನ ಪುಟ್ಬಾಲ್ ಆಟಗಾರ

    ಮೂತ್ರ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದ ಬ್ರೇಜಿಲ್‍ನ ಪುಟ್ಬಾಲ್ ಆಟಗಾರ

    ಬ್ರೆಸಿಲಿಯಾ: ಪುಟ್ಬಾಲ್ ಆಟಗಾರ ಬ್ರೇಜಿಲ್‍ನ ಪೀಲೆ(Edson Arantes do Nascimento) ಅವರು (ಯೂರಿನ್ ಇನ್ಫೆಕ್ಷನ್) ಮೂತ್ರದ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಖಾಸಗಿ ಸುದ್ದಿವಾಹಿನಿಗೆ ತಿಳಿಸಿದ್ದಾರೆ.

    81 ವರ್ಷದ ಪೀಲೆ ಅವರು ಫೆಬ್ರವರಿ 13ರಂದು ಸಾವೋ ಪೌಲೋಸ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೆಪ್ಟೆಂಬರ್ ನಲ್ಲಿ ಅವರ ಕರುಳಿನಿಂದ ಗೆಡ್ಡೆಯನ್ನು ತೆಗೆದುಹಾಕಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ನಂತರ ಕೀಮೋಥೆರಪಿಯನ್ನು ಮುಂದುವರಿಸಲು ಅವರ ಕ್ಲಿನಿಕಲ್ ಸ್ಥಿತಿ ಸ್ಥಿರವಾಗಿದೆ. ಮುಂದಿನ ಕೆಲವು ದಿನಗಳಲ್ಲಿ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುತ್ತೇವೆ. ಕಿಮೊಥೆರಪಿ ನಂತರ ಅವರ ಆರೋಗ್ಯ ಸ್ಥಿತಿ ಸುಧಾರಿಸುತ್ತದೆ ಎಂದು ವೈದ್ಯರು ಹೇಳಿದ್ದಾರೆ.

    ನಾನು ನನ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗುತ್ತಿದ್ದೇನೆ. ನಾನು ಈಗಾಗಲೇ ದೊಡ್ಡ ಟಿವಿ ಅನ್ನು ಆರ್ಡರ್ ಮಾಡಿದ್ದೇನೆ. ನಾನು ಸೂಪರ್ ಬೌಲ್ ಅನ್ನು ವೀಕ್ಷಿಸುತ್ತೇನೆ. ನನ್ನ ಸ್ನೇಹಿತ  @tombrady ಅವರ ಪಂದ್ಯವನ್ನು ನೋಡುತ್ತೇನೆ. ಎಲ್ಲಾ ಪ್ರೀತಿಯ ಸಂದೇಶಗಳಿಗೆ ಧನ್ಯವಾದಗಳು ಎಂದು ಸೋಶಿಯಲ್ ಮೀಡಿಯಾದಲ್ಲಿ  ಪೀಲೆ  ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಬಾಲಿವುಡ್ ನಟ ಸೋನು ಸೂದ್ ವಿರುದ್ಧ FIR ದಾಖಲು

    ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರೆಂದು  ಪರಿಗಣಿಸಲ್ಪಟ್ಟ ಪೀಲೆ ಅವರು 21 ವರ್ಷಗಳ ಕಾಲ 1,363-ಪಂದ್ಯಗಳ ವೃತ್ತಿಪರ ವೃತ್ತಿಜೀವನದಲ್ಲಿ 1,281 ಗೋಲುಗಳ ವಿಶ್ವ ದಾಖಲೆಯ ಮೊತ್ತವನ್ನು ಗಳಿಸಿದ್ದಾರೆ. ಅವರು ಬ್ರೆಜಿಲ್‍ಗಾಗಿ 91 ಬಾರಿ ಕ್ಯಾಪ್ ಪಡೆದರು, 77 ಅಂತರರಾಷ್ಟ್ರೀಯ ಗೋಲುಗಳನ್ನು ಗಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

  • ಕಿರಿಯರ ಫುಟ್ಬಾಲ್ ಚಾಂಪಿಯನ್‍ಶಿಪ್‍ಗೆ ಆಯ್ಕೆಯಾದ ಪ್ರಿಯಾಂಕಾಗೆ ನೆರವಿನ ಹಸ್ತ

    ಕಿರಿಯರ ಫುಟ್ಬಾಲ್ ಚಾಂಪಿಯನ್‍ಶಿಪ್‍ಗೆ ಆಯ್ಕೆಯಾದ ಪ್ರಿಯಾಂಕಾಗೆ ನೆರವಿನ ಹಸ್ತ

    – ಶಾಸಕ, ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ

    ಬೆಳಗಾವಿ: ಉಕ್ರೇನ್‍ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕಿರಿಯರ ಫುಟ್ಬಾಲ್ ಚಾಂಪಿಯನ್‍ಶಿಪ್‍ನಲ್ಲಿ ಪಾಲ್ಗೊಳ್ಳುವ ಭಾರತೀಯ ತಂಡದಲ್ಲಿ ಕರ್ನಾಟಕದ ಐವರು ಸ್ಥಾನ ಪಡೆದಿದ್ದಾರೆ. ಇದರಲ್ಲಿ ಬೆಳಗಾವಿ ಜಿಲ್ಲೆಯ ಮೂವರು ಬಾಲಕಿಯರಿದ್ದಾರೆ. ಕ್ರೀಡಾಕೂಟಕ್ಕೆ ಆಯ್ಕೆಯಾದರೂ ಹಣಕಾಸಿನ ತೊಂದರೆ ಅನುಭವಿಸುತ್ತಿದ್ದ ಬೆಳಗಾವಿಯ ಕ್ರೀಡಾಪಟುವಿಗೆ ಸ್ಥಳೀಯ ಕೆಲವು ಜನಪ್ರತಿನಿಧಿಗಳು, ಅಧಿಕಾರಿಗಳು ಸಹಾಯ ಹಸ್ತ ಚಾಚಿ ಶುಭ ಹಾರೈಸಿದ್ದಾರೆ.

    ಉಕ್ರೇನ್‍ನಲ್ಲಿ ಅಂತಾರಾಷ್ಟ್ರೀಯ ಕಿರಿಯರ ಪುಟ್ಬಾಲ್ ಚಾಂಪಿಯನ್ ಶಿಪ್ ಪಂದ್ಯ ಆಯೋಜಿಸಲಾಗಿದೆ. ಇವರಲ್ಲಿ ಬೆಳಗಾವಿಯ ಪ್ರಿಯಾಂಕಾ ಕಂಗ್ರಾಳಕರ್, ಅದಿಥಿ ಜಾಧವ್, ಅಂಜಲಿ ಹಿಂಡಲಗೇಕರ್ ಇದ್ದಾರೆ. ಬೆಳಗಾವಿ ಜಿಲ್ಲೆಯ ಮೂವರು ಬಾಲಕಿಯರಿರುವುದು ಕುಂದಾನಗರಿಯ ಗೌರವ ಹೆಚ್ಚಿಸಿದೆ. ಆದರೆ ಕಡುಬಡ ಕುಟುಂಬದ ಪ್ರಿಯಾಂಕಾ ಕಂಗ್ರಾಳಕರ್ ಆರ್ಥಿಕ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳಲ್ಲಿ ಸಿಲುಕಿಕೊಂಡಿದ್ದಳು. ಸುದ್ದಿ ತಿಳಿದ ಮಾಜಿ ನಗರ ಸೇವಕಿ, ಸಾಮಾಜಿಕ ಕಾರ್ಯಕರ್ತೆ ಸರಳಾ ಹೇರೇಕರ್ ಪ್ರಿಯಾಂಕಾ ನೆರವಿಗೆ ನಿಂತರು.

    ಬಳಿಕ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಭೇಟಿ ಮಾಡಿ ಪ್ರಿಯಾಂಕಾಗೆ ನೆರವು ಕೊಡಿಸುವಲ್ಲಿ ಯಶಸ್ವಿಯಾದರು. ಈಗ ಸಂತಸದಲ್ಲಿ ಪ್ರಿಯಾಂಕಾ ಭಾರತೀಯ ತಂಡ ಸೇರಿಸಿಕೊಳ್ಳುವ ತವಕದಲ್ಲಿದ್ದಾಳೆ. ಪ್ರಿಯಾಂಕಾಗೆ ಆರ್ಥಿಕ ನೆರವು ನೀಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಪಾಲಿಕೆ ಆಯುಕ್ತ ಜಗದೀಶ್, ಡಿಸಿಪಿ ಡಾ.ವಿಕ್ರಮ ಆಮ್ಟೆ ಅವರ ಮಾನವೀಯ ಕಾರ್ಯಕ್ಕೆ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಯಡಿಯೂರಪ್ಪರನ್ನು ನೆನೆದು ಭಾವುಕರಾದ ರೇಣುಕಾಚಾರ್ಯ

    ಈ ವೇಳೆ ನೆರವು ಪಡೆದ ಪ್ರಿಯಾಂಕಾ ಕಂಗ್ರಾಳಕರ್ ಮಾಧ್ಯಮಗಳೊಂದಿಗೆ ಮಾತನಾಡಿ, ಕರ್ನಾಟಕದಿಂದ ನಾವು 5 ಜನ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದೇವೆ. 23 ವರ್ಷದೊಳಗಿನ ಮಿನಿ ಪುಟ್ಬಾಲ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದೇವೆ. ನಮ್ಮನ್ನು ಪ್ರೋತ್ಸಾಹಿಸುತ್ತಿರುವ ಎಲ್ಲರಿಗೂ ಕೃತಜ್ಞತೆಗಳು ಎಂದರು.

    ಸಾಮಾಜಿಕ ಕಾರ್ಯಕರ್ತೆ ಸರಳಾ ಹೇರೇಕರ್ ಮಾತನಾಡಿ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿದ್ದ ಕ್ರೀಡಾಪ್ರತಿಭೆ ಪ್ರಿಯಾಂಕಾ ನೆರವಿಗೆ ಬಂದವರನ್ನು ಯಾವ ಕಾರಣಕ್ಕೂ ಮರೆಯುವಂತಿಲ್ಲ. ಶಾಸಕ ಸತೀಶ್ ಜಾರಕಿಹೊಳಿ, ಡಿಸಿಪಿ ಡಾ.ವಿಕ್ರಮ ಆಮ್ಟೆ, ಪಾಲಿಕೆ ಆಯುಕ್ತ ಜಗದೀಶ್ ಕೆ.ಎಚ್ ಸೇರಿ ಹಲವು ಅಧಿಕಾರಿಗಳು ಹಲವು ಬಗೆಯಲ್ಲಿ ನೆರವು ನೀಡಿದ್ದಾರೆ. ಅವರೆಲ್ಲರಿಗೂ ಬೆಳಗಾವಿ ಜನತೆಯ ಪರವಾಗಿ ಕೃತಜ್ಞತೆಗಳು. ದೇಶದ ತಂಡದಲ್ಲಿ ಸ್ಥಾನ ಪಡೆದಿರುವ ಪ್ರಿಯಾಂಕಾ ಸೇರಿ ಎಲ್ಲ ಕ್ರೀಡಾಪಟುಗಳು ದೇಶ ಹೆಮ್ಮೆ ಪಡುವಂತಹ ಸಾಧನೆ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ವೇಳೆ ಬಸವನಗೌಡ ಪಾಟೀಲ್, ಶುಭಂ ಪಾಟೀಲ್ ಮತ್ತಿತರರು ಇದ್ದರು.

  • 22ರ ಯುವಕನೊಂದಿಗೆ 52ರ ಹರೆಯದ ನೇಮರ್ ತಾಯಿ ಡೇಟಿಂಗ್

    22ರ ಯುವಕನೊಂದಿಗೆ 52ರ ಹರೆಯದ ನೇಮರ್ ತಾಯಿ ಡೇಟಿಂಗ್

    – ಹುಚ್ಚು ಪ್ರೀತಿಗೆ ನೇಮರ್ ಒಪ್ಪಿಗೆ

    ಬ್ರೆಸಿಲಿಯಾ: ಪ್ರೀತಿ, ಕಾಮಕ್ಕೆ ಕಣ್ಣಿಲ್ಲ. ಇದಕ್ಕೆ ವಯಸ್ಸಿನ ಅಂತರವೂ ತಿಳಿಯುವುದಿಲ್ಲ ಎಂಬ ಮಾತಿದೆ. ಪ್ರೀತಿಯ ಬಲೆಗೆ ಬಿದ್ದು, ತನಗಿಂತ 10 ವರ್ಷದ ಹಿರಿಯರನ್ನ ಮದುವೆಯಾದ ಬಗ್ಗೆ ಕೇಳಿದ್ದೇವೆ, ನೋಡಿದ್ದೇವೆ. ಆದ್ರೆ 30 ವರ್ಷಗಳ ಅಂತರವಿರುವ ಜೋಡಿ ಡೇಟಿಂಗ್ ನಡೆಸಿರುವ ಬಗ್ಗೆ ಕೇಳಿದ್ದೀರಾ? ಇಲ್ವಾಲ್ಲಾ… ಅಂತಹದೊಂದು ವಿಚಿತ್ರ ಸನ್ನಿವೇಶ ಬ್ರೆಜಿಲ್‍ನ ಖ್ಯಾತ ಫುಟ್ಬಾಲ್ ಪ್ಲೇಯರ್ ನೇಮರ್ ಜೀವನದಲ್ಲಿ ನಡೆದಿದೆ.

    ಹೌದು. ಆದರೆ ಡೇಟಿಂಗ್ ನಡೆಸಿದ್ದು 28 ವರ್ಷದ ನೇಮರ್ ಎಂದು ಕೊಂಡ್ರೆ ತಪ್ಪಾಗುತ್ತದೆ. ಇಲ್ಲಿ ಹೇಳ ಹೊರಟಿರುವುದು ನೇಮರ್ ತಾಯಿ ನಾಡಿನ್ ಗೋಂಕಾವ್ಸ್ ಕಥೆ.

    ನಾಡಿನ್ ಗೋಂಕಾವ್ಸ್ ಚಿಕ್ಕ ವಯಸ್ಸಿನ ಹುಡುಗನೊಂದಿಗೆ ಡೇಟಿಂಗ್ ನಡೆಸಿದ್ದಾರೆ. 52ರ ಹರೆಯದ ನಾಡಿನ್ ಗೋಂಕಾವ್ಸ್ 22 ವರ್ಷದ ಟಿಯಾಗೋ ರ್ಯಾಮೋಸ್ ಜೊತೆಗೆ ಡೇಟಿಂಗ್‍ನಲ್ಲಿದ್ದು, ಇದಕ್ಕೆ ನೇಮರ್ ಕೂಡ ಒಪ್ಪಿಗೆ ಸೂಚಿಸಿದ್ದಾರೆ. ಅಷ್ಟೇ ಅಲ್ಲದೆ ಮತ್ತೊಂದು ಶಾಕಿಂಗ್ ವಿಚಾರವೆಂದ್ರೆ ನೇಮರ್‍ಗಿಂತ ಟಿಯಾಗೋ 6 ವರ್ಷ ಚಿಕ್ಕವನಾಗಿದ್ದಾರೆ.

    ಗೋಂಕಾವ್ಸ್ ಮತ್ತು ಟಿಯಾಗೋ ಸಂಬಂಧದ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಈ ಜೋಡಿಯ ನಡುವಿನ ಅಂತರದ ಬಗ್ಗೆ ಅನೇಕರು ಗೇಲಿ ಮಾಡಿದ್ದಾರೆ. ಆದ್ರೆ ನೇಮರ್ ಮಾತ್ರ ಇದಕ್ಕೆಲ್ಲ ಕ್ಯಾರೆ ಎಂದಿಲ್ಲ. ಬದಲಿಗೆ ನೇಮರ್ ತನ್ನ ತಾಯಿ ಮತ್ತು ಹುಡುಗನ ಸಂಬಂಧಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.

    ಟಿಯಾಗೋ ತನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಗೋಂಕಾವ್ಸ್ ಗೆ ಕಿಸ್ ಕೊಡುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಜೊತೆಗೆ ‘ವಿವರಿಸಲಾಗದ’ ಎಂದು ಬರೆದು, ಲವ್ ಎಮೋಜಿ ಹಾಕಿದ್ದಾರೆ. ಈ ಪೋಸ್ಟ್ ಅನ್ನು ಒಂದು ಲಕ್ಷಕ್ಕೂ ಅಧಿಕ ಜನರು ಲೈಕ್ ಮಾಡಿದ್ದು, ಅನೇಕರು ತಮ್ಮದೆ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಗೋಂಕಾವ್ಸ್ ಕೂಡ ಇದೇ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ನೇಮರ್ ಕೂಡ ಕಮೆಂಟ್ ಮಾಡಿ, ‘ಖುಷ್ಯಾಗಿರು ಅಮ್ಮ, ಲವ್ ಯೂ’ ಎಂದು ತಿಳಿಸಿದ್ದಾರೆ.

    ಯಾರು ಈ ಟಿಯಾಗೋ?
    ಟಿಯಾಗೋ ಫುಟ್ಬಾಲ್ ಆಟಗಾರ ಅಷ್ಟೇ ಅಲ್ಲದೆ ರೂಪದರ್ಶಿ ಕೂಡ ಹೌದ. ಅವರು 4ಕೆ ಈಸಿ ತಂಡದ ಪರ ಆಡುತ್ತಾರೆ. ನಾರ್ತರ್ನ್ ಫುಟ್ಬಾಲ್ ಅಲಾಯನ್ಸ್ (ಎನ್‍ಎಫ್‍ಎ) ಲೀಗ್‍ನಲ್ಲಿ ಈ ತಂಡವು ಭಾಗವಹಿಸುತ್ತದೆ. ನಾಡಿನ್ ಗೋಂಕಾವ್ಸ್, ವ್ಯಾಗ್ನರ್ ರಿಬೈರೊ ಅವರೊಂದಿಗೆ ಮದ್ವೆ ಆಗಿದ್ದರು. ಆದ್ರೆ 25 ವರ್ಷಗಳ ಬಳಿಕ ಅಂದ್ರೆ 2016ರಲ್ಲಿ ವಿಚ್ಛೇದನ ಪಡೆದಿದ್ದರು.

    https://www.instagram.com/p/B-26GxwF476/

    ವಿಚಿತ್ರವೆಂದ್ರೆ ನಾಡಿನ್ ಗೋಂಕಾವ್ಸ್ ಜೊತೆಗೆ ಡೇಟಿಂಗ್‍ನಲ್ಲಿರುವ ಟಿಯಾಗೋ ನೇಮರ್ ಅವರ ಅಭಿಮಾನಿಯಾಗಿದ್ದಾರೆ. ಈ ವಿಚಾರವನ್ನ ಟಿಯಾಗೋ 2017ರಲ್ಲೇ ನೇಮರ್ ಬಳಿ ಹೇಳಿಕೊಂಡಿದ್ದರಂತೆ.

    ‘ನಾನು ನಿಮ್ಮ ಅಭಿಮಾನಿ. ಒಂದು ದಿನ ನಿಮ್ಮ ಪಕ್ಕದಲ್ಲಿ ನಿಂತೇ ನಿಲ್ಲುತ್ತೇನೆ. ಆ ನಂಬಿಕೆಯಿದೆ,’ ಎಂದು ಟಿಯಾಗೋ ನೇಮರ್ ಅವರಿಗೆ ಹೇಳಿದ್ದರಂತೆ. ಆದ್ರೆ ಟಿಯಾಗೋ ನೇಮರ್ ತಾಯಿಯ ಜೊತೆಗೆ ಡೇಟಿಂಗ್ ನಡೆಸಿ, ಹೀಗೆ ಪಕ್ಕದಲ್ಲಿ ನಿಲ್ಲುತ್ತಾರೆ ಎಂದು ಯಾರೂ ಊಹೆ ಕೂಡ ಮಾಡಿರಲಿಕ್ಕಿಲ್ಲ. ಇದನ್ನು ಸ್ವತಃ ನೇಮರ್ ಕೂಡ ಊಹೆ ಮಾಡಿರಲಿಲ್ಲವೆಂದ ಅನಿಸುತ್ತದೆ.