Tag: ಪುಟ್ಟ ಗೌರಿ ಮದುವೆ

  • ಸಾನ್ಯ ಬೆಸ್ಟ್ ಫ್ರೆಂಡ್‌ಗಿಂತ ಮೇಲೆ – ಮದುವೆ ಬಗ್ಗೆ ಬಾಯ್ಬಿಟ್ಟ ರೂಪೇಶ್ ಶೆಟ್ಟಿ

    ಸಾನ್ಯ ಬೆಸ್ಟ್ ಫ್ರೆಂಡ್‌ಗಿಂತ ಮೇಲೆ – ಮದುವೆ ಬಗ್ಗೆ ಬಾಯ್ಬಿಟ್ಟ ರೂಪೇಶ್ ಶೆಟ್ಟಿ

    ಬಿಗ್ ಬಾಸ್ ಮನೆಯಲ್ಲಿ ಲವ್ ಬರ್ಡ್ಸ್ ಆಗಿ ಹೈಲೈಟ್ ಆಗಿರುವ ಸಾನ್ಯ ಅಯ್ಯರ್ ಮತ್ತು ರೂಪೇಶ್ ಶೆಟ್ಟಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಎಲಿಮಿನೇಷನ್ ನಂತರವೂ ದೊಡ್ಮನೆಯಲ್ಲಿ ಸಾನ್ಯ ಟಾಕ್ ಆಗಿದ್ದಾರೆ. ಇದೀಗ ಸಂಬರ್ಗಿ ರೂಪೇಶ್‌ಗೆ ನೇರವಾಗಿ ಪ್ರಶ್ನೆಯೊಂದನ್ನ ಕೇಳಿದ್ದಾರೆ. ಮುಂದಿನ ಮೂರು ವರ್ಷಗಳಲ್ಲಿ ಸಾನ್ಯನ ಮದುವೆಯಾಗುವ ಪ್ರಪೋಸಲ್ ಬಂದರೆ ಏನು ಮಾಡ್ತೀರಾ ಎಂದು ಕೇಳಿದ್ದಾರೆ.

    ದೊಡ್ಮನೆಯ ಪ್ರೇಮ ಪಕ್ಷಿಗಳು ಸಾನ್ಯ, ರೂಪೇಶ್ ದೂರ ದೂರ ಆಗಿದ್ದಾರೆ. ಸಾನ್ಯ ಎಲಿಮಿನೇಷನ್‌ನಿಂದ ರೂಪೇಶ್ ಶೆಟ್ಟಿ ಕಣ್ಣೀರಿಟ್ಟಿದ್ದಾರೆ. ಸಾನ್ಯ ಜೊತೆಗಿನ ಬಾಂಧವ್ಯ ನೋಡಿರುವ ಪ್ರಶಾಂತ್ ಸಂಬರ್ಗಿ ರೂಪೇಶ್‌ಗೆ, ಖಾಸಗಿ ಪ್ರಶ್ನೆಯೊಂದನ್ನ ಕೇಳಿದ್ದಾರೆ. ನಿಮ್ಮ ಫ್ಯಾಮಿಲಿಯವರು ಬಂದು, ನೀವಿಬ್ಬರು ಒಳ್ಳೆಯ ಜೋಡಿ, ನಿನಗೂ ಒಳ್ಳೆಯ ಜೋಡಿ ಅನಿಸಿದ್ದರೆ, ನೀವು ಸಾನ್ಯನ ಮುಂದಿನ 3 ವರ್ಷಗಳಲ್ಲಿ ಮದುವೆಯಾಗುವ ಸಾಧ್ಯತೆ ಇದ್ಯಾ ಎಂದು ರೂಪೇಶ್‌ಗೆ ನೇರವಾಗಿ ಸಂಬರ್ಗಿ ಕೇಳಿದ್ದಾರೆ. ಇದನ್ನೂ ಓದಿ:ಸ್ಟಾರ್ ಮಕ್ಕಳ ನೆಪೋಟಿಸಂ ಬಗ್ಗೆ ಶ್ರುತಿ ಹಾಸನ್ ಸ್ಪಷ್ಟನೆ

    ನಿಮ್ಮ ಕುಟುಂಬದವರು, ನೀವಿಬ್ಬರು ಒಳ್ಳೆಯ ಜೋಡಿ ಎಂದ್ಹೇಳಿ, ನೀವು ಸಾನ್ಯನ ಮುಂದಿನ 3 ವರ್ಷಗಳಲ್ಲಿ ಮದುವೆಯಾಗುವ ಸಾಧ್ಯತೆ ಇದ್ಯಾ ಎಂದು ರೂಪೇಶ್‌ಗೆ ನೇರವಾಗಿ ಸಂಬರ್ಗಿ ಕೇಳಿದಾಗ, ಅಷ್ಟೇಲ್ಲಾ ಯಾರು ಥಿಂಕ್ ಮಾಡುತ್ತಾರೆ ಈಗೆಲ್ಲಾ ನಾನು ಯೋಚನೆ ಮಾಡಿಲ್ಲ ಎಂದು ರೂಪೇಶ್ ಹೇಳುತ್ತಾರೆ. ಆಗ ರಾಜಣ್ಣ ಕೂಡ ನೇರವಾಗಿ ಹೇಳಿ ಎಂದು ಶೆಟ್ರಿಗೆ ಕೇಳುತ್ತಾರೆ. ಸಾನ್ಯ ನಿಮ್ಮನ್ನ ಜೀವನ ಸಂಗಾತಿಯಾಗಿ ಕಾಣುವ ದೃಷ್ಟಿಕೋನ ಇದ್ಯಾ ಎಂದಿದ್ದಾರೆ. ಈ ಬಗ್ಗೆ ನಾನು ಯೋಚನೆ ಮಾಡಿಲ್ಲ ಆದರೆ, ಪ್ರಪೋಸಲ್ ಬಂದ್ರೆ ನೋ ಅಂತಾ ಹೇಳಲ್ಲ. ಸಾನ್ಯ ಬೆಸ್ಟ್ ಫ್ರೆಂಡ್‌ಗಿಂತ ಮೇಲೆನೇ ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ.

    ಇನ್ನೂ ಸಾನ್ಯ ಅಯ್ಯರ್ ವೈರ್ಲ್ಡ್ ಕಾರ್ಡ್ ಎಂಟ್ರಿಯ ಮೂಲಕ ಬಿಗ್ ಬಾಸ್ ಮನೆಗೆ ಮತ್ತೆ ಬರಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಒಂದು ವೇಳೆ ಬಂದಲ್ಲಿ ಸಾಕಷ್ಟು ರೋಚಕ ತಿರುವುಗಳನ್ನು ಪಡೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಸೋನು-ಸಾನ್ಯ ಕಿರಿಕ್: ಸೋನು ಗೌಡಗೆ ಲೂಸಾ ನೀನು ಎಂದು ಕಣ್ಣೀರಿಟ್ಟ ಪುಟ್ಟಗೌರಿ

    ಸೋನು-ಸಾನ್ಯ ಕಿರಿಕ್: ಸೋನು ಗೌಡಗೆ ಲೂಸಾ ನೀನು ಎಂದು ಕಣ್ಣೀರಿಟ್ಟ ಪುಟ್ಟಗೌರಿ

    ಬಿಗ್ ಬಾಸ್ ಓಟಿಟಿ ಕಾರ್ಯಕ್ರಮ ಶುರುವಾದ ದಿನದಿಂದ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಲೇ ಇರುವ ಸೋನು ಗೌಡ ಇದೀಗ ಮತ್ತೆ ಬಿಗ್ ಬಾಸ್ ಮನೆಯಲ್ಲಿ ಕಿರಿಕ್ ಮಾಡಿಕೊಂಡಿದ್ದಾರೆ. ಟಾಸ್ಕ್ ಆಡುವಾಗ ಸಾನ್ಯ ಜತೆ ಸೋನು ಕಿರಿಕ್ ಮಾಡಿದ್ದಾರೆ. ಸೋನು ಅವತಾರಕ್ಕೆ ಸಾನ್ಯ ಉರಿದು ಬಿದ್ದಿದ್ದಾರೆ.

    ದೊಡ್ಮನೆ ಬಿಗ್ ಬಾಸ್‌ನಲ್ಲಿ ಎರಡನೇ ವಾರದ ಆಟ ಭರದಿಂದ ಸಾಗುತ್ತಿದೆ. ಪ್ರತಿದಿನ ಟಾಸ್ಕ್‌ಗಳಿಂದ ಸ್ಪರ್ಧಿಗಳು ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿದ್ದಾರೆ. (ಆಗಸ್ಟ್ 17)ರ ಎಪಿಸೋಡ್‌ನಲ್ಲಿ ಲಿಪ್ ರೀಡಿಂಗ್ ಟಾಸ್ಕ್ ನೋಡುಗರಿಗೆ ಮನರಂಜನೆ ಕೊಟ್ಟಿದೆ. ಆದರೆ ಈ ಟಾಸ್ಕ್‌ನಲ್ಲಿ ಸೋನು ನಡೆ ಸಾನ್ಯ ಅವರನ್ನ ಅಳುವಂತೆ ಮಾಡಿದೆ. ಎರಡು ಟೀಂ ಮಾಡಿ ಒಂದು ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್ನ ಪ್ರಕಾರ ಒಂದು ಟೀಂನಿಂದ ಇಬ್ಬರು ಆಟಕ್ಕೆ ಇಳಿಯಬೇಕು. ಒಬ್ಬರ ಕಿವಿಗೆ ಹೆಡ್‌ಫೋನ್ ಹಾಕಿ ಸಾಂಗ್ ಹಾಕಲಾಗುತ್ತದೆ. ಎದುರು ಇದ್ದವರು ಬಿಗ್ ಬಾಸ್ ನೀಡಿದ ಲೈನ್‌ನ ಜೋರಾಗಿ ಹೇಳಬೇಕು. ಹೆಡ್‌ಫೋನ್ ಹಾಕಿಕೊಂಡವರು ಇದನ್ನು ಗೆಸ್ ಮಾಡಬೇಕು. ಈ ಆಟಕ್ಕೆ ಸೋನು ಹಾಗೂ ಸಾನ್ಯಾ ಇಳಿದಿದ್ದಾರೆ. ಇದನ್ನೂ ಓದಿ:ಏನು ಶ್ರೀಳು ವರ್ಷ ಮದುವೆ ಆಗಲ್ಲ ಎಂದು ಶಾಕಿಂಗ್‌ ಸುದ್ದಿ ಕೊಟ್ಟ ಸೋನಿವಾಸ್ ಗೌಡ

    ಸೋನು ಕಿವಿಗೆ ಹೆಡ್‌ಫೋನ್ ಹಾಕಿಕೊಂಡರೆ, ಸಾನ್ಯಾ ಸಾಲುಗಳನ್ನ ಹೇಳಿದರು. ಆದರೆ, ಒಂದೇ ಒಂದು ವಾಕ್ಯವನ್ನು ಸರಿಯಾಗಿ ಹೇಳಿಲ್ಲ ಸೋನು. ಹೆಡ್‌ಫೋನ್‌ನಲ್ಲಿ ಸಾಂಗ್ ದೊಡ್ಡದಾಗಿ ಬರುತ್ತಿದೆ ಎಂದು ಕೂಗುವುದೊಂದೇ ಮಾಡುತ್ತಿದ್ದರು. ಇದರಿಂದ ಸಾನ್ಯಾ ಅಸಮಾಧಾನಗೊಂಡರು. ಇಬ್ಬರ ನಡುವೆ ಕಿರಿಕ್ ಆಯಿತು. ಸೋನು ತನ್ನ ತಪ್ಪಿಲ್ಲ ಎಂದು ವಾದಿಸೋಕೆ ಶುರು ಮಾಡಿದರು. ಅಷ್ಟೇ ಅಲ್ಲ ಸಾನ್ಯಾ ಮೇಲೆ ತಪ್ಪನ್ನು ಎತ್ತಿ ಹಾಕಿದರು. ಈ ವಿಚಾರದಿಂದ ಸಾನ್ಯಾ ಸಿಕ್ಕಾಪಟ್ಟೆ ಡಲ್ ಆದರು. ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ನೀನು ಲೂಸಾ ಎಂದು ಹೇಳುತ್ತಾ ತಾಳ್ಮೆ ಕಳೆದುಕೊಂಡರ. ನಂತರ ಸಾನ್ಯಾ ಅಳೋಕೆ ಆರಂಭಿಸಿದರು. ಸಾನ್ಯ ಅಳೋದನ್ನ ನೋಡಿ, ಇಡೀ ತಂಡ ಸಾನ್ಯಗೆ ಸಾಥ್ ನೀಡಿದ್ದರು.

    Live Tv
    [brid partner=56869869 player=32851 video=960834 autoplay=true]