Tag: ಪುಟ್ಟಸ್ವಾಮಿಗೌಡ

  • 4 ಶಾಲೆಯ ವಿದ್ಯಾರ್ಥಿಗಳಿಗೆ 205 ಟ್ಯಾಬ್ ವಿತರಿಸಿದ ಪುಟ್ಟಸ್ವಾಮಿಗೌಡ

    4 ಶಾಲೆಯ ವಿದ್ಯಾರ್ಥಿಗಳಿಗೆ 205 ಟ್ಯಾಬ್ ವಿತರಿಸಿದ ಪುಟ್ಟಸ್ವಾಮಿಗೌಡ

    ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ತಾಲೂಕಿನ 4 ಸರ್ಕಾರಿ ಪ್ರೌಢ ಶಾಲೆಗಳ ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಇಂದು ಕೆಹೆಚ್‍ಪಿ ಫೌಂಡೇಶನ್ ಅಧ್ಯಕ್ಷ ಹೆಚ್.ಕೆ ಪುಟ್ಟಸ್ವಾಮಿಗೌಡ ಪಬ್ಲಿಕ್ ಟಿವಿ ಹಾಗೂ ರೋಟರಿ ಸಂಸ್ಥೆ ಸಹಯೋಗದ ಜ್ಞಾನದೀವಿಗೆ ಅಭಿಯಾನದ ಮೂಲಕ ಫ್ರೀ ಟ್ಯಾಬ್ ವಿತರಿಸಿದರು.

    ಗೌರಿಬಿದನೂರು ತಾಲೂಕಿನ ಕಲ್ಲಿನಾಯಕನಹಳ್ಳಿ ಸರ್ಕಾರಿ ಪ್ರೌಢ ಶಾಲೆಯ 43 ಮಂದಿ ವಿದ್ಯಾರ್ಥಿಗಳಿಗೆ 22 ಟ್ಯಾಬ್ ಹಾಗೂ ಅಲಕಾಪುರ ಸರ್ಕಾರಿ ಪ್ರೌಢ ಶಾಲೆಯ ಕನ್ನಡ ಹಾಗೂ ಇಂಗ್ಲೀಷ್ ಮಾಧ್ಯಮ ಸೇರಿ 125 ಮಂದಿ ವಿದ್ಯಾರ್ಥಿಗಳಿಗೆ 62 ಟ್ಯಾಬ್ ಹಾಗೂ ಗೌರಿಬಿದನೂರು ನಗರದ ಕೋಟೆ ಬಾಲಕಿಯರ ಪ್ರೌಢ ಶಾಲೆಯ 215 ಮಂದಿ ಬಾಲಕಿಯರಿಗೆ 107 ಟ್ಯಾಬ್‍ಗಳು ಸೇರಿದಂತೆ ಹೆಚ್ ನಾಗಸಂದ್ರ ಸರ್ಕಾರಿ ಪ್ರೌಢ ಶಾಲೆಯ 27 ವಿದ್ಯಾರ್ಥಿಗಳಿಗೆ 14 ಟ್ಯಾಬ್‍ಗಳನ್ನು ನೀಡಿದರು.

    ಬೆಳಿಗ್ಗೆ 10 ಗಂಟೆಗೆ ಕಲ್ಲಿನಾಯಕನಹಳ್ಳಿ ಹಾಗೂ 12 ಗಂಟೆಗೆ ಅಲಕಾಪುರ, 2 ಗಂಟೆಗೆ ಗೌರಿಬಿದನೂರು ನಗರದ ಕೋಟೆ ಬಾಲಕಿಯರ ಶಾಲೆ ಸೇರಿದಂತೆ ಸಂಜೆ 4 ಗಂಟೆಗೆ ಹೆಚ್ ನಾಗಸಂದ್ರ ಶಾಲೆಯಲ್ಲಿ ಈ ಟ್ಯಾಬ್‍ಗಳನ್ನ ವಿತರಿಸಲಾಯಿತು.

    ಪಬ್ಲಿಕ್ ಟಿವಿ ರೋಟರಿ ಕ್ಲಬ್ ಹಾಗೂ ಟ್ಯಾಬ್ ಕೊಡುಗೆ ನೀಡಿದ ಹೆಚ್‍ಕೆಪಿ ಫೌಂಡೇಶನ್ ಅಧ್ಯಕ್ಷ ಪುಟ್ಟಸ್ವಾಮಿಗೌಡರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಕೊರೊನಾ ಸಂಕಷ್ಟ ಕಾಲದಲ್ಲಿ ರೋಟರಿ ಸಂಸ್ಥೆ ಸಹಯೋಗದೊಂದಿಗೆ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಎಚ್‍ಆರ್ ರಂಗನಾಥ್‍ರವರು ರೂಪಿಸಿದ ಈ ಮಹಾಯಜ್ಞ ಪಬ್ಲಿಕ್ ಟಿವಿಯ ಜ್ಞಾನದೀವಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಿಕ್ಷಣ ಇಲಾಖಾಧಿಕಾರಿಗಳು, ಶಾಲೆಯ ಶಿಕ್ಷಕರು ಹಾಗೂ ಜನಪ್ರತಿನಿಧಿಗಳು ಅಭಿನಂದನೆ ತಿಳಿಸಿದರು.

    ಟ್ಯಾಬ್‍ಗಳನ್ನು ಪಡೆದ ವಿದ್ಯಾರ್ಥಿಗಳು ಈ ಬಾರಿ ಉತ್ತಮ ಫಲಿತಾಂಶ ಪಡೆದರೆ ಅದೇ ನೀವು ನಮಗೆ ನೀಡುವ ಫ್ರತಿಫಲ ಎಂದು ಹೆಚ್‍ಕೆ ಪುಟ್ಟಸ್ವಾಮಿಗೌಡ ತಮ್ಮ ಆಶಯವನ್ನು ವ್ಯಕ್ತಪಡಿಸಿದರು. ಅಂದಹಾಗೆ ಪುಟ್ಟಸ್ವಾಮಿಗೌಡರು 300 ಟ್ಯಾಬ್‍ಗಳಿಗೆ 10 ಲಕ್ಷದ 46 ಸಾವಿರ ರೂ. ದೇಣಿಗೆ ನೀಡಿದ್ದರು.

  • ‘ಜ್ಞಾನದೀವಿಗೆ’ಗೆ ಪುಟ್ಟಸ್ವಾಮಿಗೌಡ 10.48 ಲಕ್ಷ ಸಹಾಯ

    ‘ಜ್ಞಾನದೀವಿಗೆ’ಗೆ ಪುಟ್ಟಸ್ವಾಮಿಗೌಡ 10.48 ಲಕ್ಷ ಸಹಾಯ

    – 300 ಟ್ಯಾಬ್‍ಗಳಿಗೆ ಹಣ ನೀಡಿದ ಉದ್ಯಮಿ
    – ಗೌರಿಬಿದನೂರು ಕ್ಷೇತ್ರದ ವಿದ್ಯಾರ್ಥಿಗಳಿಗೆ ಟ್ಯಾಬ್

    ಚಿಕ್ಕಬಳ್ಳಾಪುರ: ಪಬ್ಲಿಕ್ ಟಿವಿ ರೋಟರಿ ಸಂಸ್ಥೆ ಸಹಯೋಗದೊಂದಿಗೆ ನಡೆಸುತ್ತಿರುವ ರಾಜ್ಯದ ಸರ್ಕಾರಿ ಶಾಲೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಣೆಯ ‘ಜ್ಞಾನದೀವಿಗೆ’ ಮಹಾಯಜ್ಞಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಇದೀಗ ಗೌರಿಬಿದನೂರಿನ ಏಷಿಯನ್ ಫ್ಯಾಬ್ ಟೆಕ್ ಸೋಲಾರ್ ಪ್ಲಾಂಟ್‍ನ ಉದ್ಯಮಿ ಹಾಗೂ ಸಮಾಜಸೇವಕ ಪುಟ್ಟಸ್ವಾಮಿಗೌಡ ಅವರು 10.48 ಲಕ್ಷ ರೂ.ಗಳನ್ನು ನೀಡಿದ್ದಾರೆ.

    ಜಿಲ್ಲೆಯ ಗೌರಿಬಿದನೂರಿನ ಏಷಿಯನ್ ಫ್ಯಾಬ್ ಟೆಕ್ ಸೋಲಾರ್ ಪ್ಲಾಂಟ್ ನ ಉದ್ಯಮಿ ಹಾಗೂ ಸಮಾಜಸೇವಕರಾದ ಪುಟ್ಟಸ್ವಾಮಿಗೌಡರು 300 ಟ್ಯಾಬ್ ಗಳಿಗೆ ಬೇಕಾಗುವ 10,48,500 ರೂಪಾಯಿಗಳ ಚೆಕ್‍ನ್ನು ಪಬ್ಲಿಕ್ ಟಿವಿಗೆ ಹಸ್ತಾಂತರಿಸಿದ್ದಾರೆ.

    ಪಬ್ಲಿಕ್ ಟಿವಿಯ ಸಮಾಜಮುಖಿ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿರುವ ಪುಟ್ಟಸ್ವಾಮಿಗೌಡರು, ಈ ಟ್ಯಾಬ್‍ಗಳನ್ನು ಗೌರಿಬಿದನೂರು ತಾಲೂಕಿನ ಸರ್ಕಾರಿ ಶಾಲೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ವಿತರಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಕೊರೊನಾ ಸಂಕಷ್ಟ ಕಾಲದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಟ್ಯಾಬ್‍ಗಳು ಸಹಾಯವಾಗಲಿವೆ. ಇದು ಗೌರಿಬಿದನೂರಿನ ವಿದ್ಯಾರ್ಥಿಗಳಿಗೆ ಸದುಪಯೋಗವಾಗಲಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕಾಗಲಿ ಎಂದು ಪುಟ್ಟಸ್ವಾಮಿಗೌಡರು ಆಶಿಸಿದ್ದಾರೆ.