Tag: ಪುಟ್ಟಸ್ವಾಮಿ

  • ಮುಕುಡಪ್ಪ, ಪುಟ್ಟಸ್ವಾಮಿ ವಿರುದ್ಧ ಸಿದ್ದರಾಮಯ್ಯ ಬೆಂಬಲಿಗರ ಆಕ್ರೋಶ – ಮನೆ ಬಾಗಿಲು, ಗೇಟ್ ತಳ್ಳಿ ನುಗ್ಗೋ ಯತ್ನ

    ಮುಕುಡಪ್ಪ, ಪುಟ್ಟಸ್ವಾಮಿ ವಿರುದ್ಧ ಸಿದ್ದರಾಮಯ್ಯ ಬೆಂಬಲಿಗರ ಆಕ್ರೋಶ – ಮನೆ ಬಾಗಿಲು, ಗೇಟ್ ತಳ್ಳಿ ನುಗ್ಗೋ ಯತ್ನ

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಬಗ್ಗೆ ಅವಹೇಳಕಾರಿ, ಕೀಳುಮಟ್ಟದ ಪದ ಬಳಕೆ ಮಾಡಿದ ಮುಕಡಪ್ಪ (Mukudappa) ಮತ್ತು ಪುಟ್ಟಸ್ವಾಮಿ (Puttaswamy)  ವಿರುದ್ಧ ಮುಕುಡಪ್ಪರವರ ನಿವಾಸ ಎದುರು ಕುರುಬ ಸಮಾಜದ (Kuruba Community) ಮುಖಂಡರು, ಸಿದ್ದರಾಮಯ್ಯರವರ ಅಭಿಮಾನಿಗಳು ಪ್ರತಿಭಟನೆ ಮಾಡಿದರು.

    ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಜಿ.ಕೃಷ್ಣಮೂರ್ತಿ, ಮಾಜಿ ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯರವರ 45 ವರ್ಷಗಳ ರಾಜಕೀಯ ಜೀವನವನ್ನು ಕಪ್ಪುಚುಕ್ಕೆ ಇಲ್ಲದಂತೆ ಸಾಗಿಸಿದ್ದಾರೆ. ಹೆಚ್ಚು ಬಾರಿ ಬಜೆಟ್ ಮಂಡಿಸಿದ ಕೀರ್ತಿ ಸಿದ್ದರಾಮಯ್ಯರವರಿಗೆ ಸಲ್ಲುತ್ತದೆ. ಅವರ ಆಡಳಿತದಲ್ಲಿ ಹಸಿವಿನಿಂದ ಯಾರು ಬಳಲಬಾರದು ಎಂದು ಅನ್ನಭಾಗ್ಯ ಯೋಜನೆ ಜಾರಿಗೆ ತಂದು 4 ಕೋಟಿ ಜನರು ಈ ಯೋಜನೆಯ ಫಲಾನುಭವಿಗಳು, ಇಂದಿರಾ ಕ್ಯಾಂಟೀನ್ ಮತ್ತು ಜನತೆಗೆ ನೀಡಿದ 165 ಭರವಸೆಗಳನ್ನು ಪೂರೈಸಿದ ಮೊಟ್ಟ ಮೊದಲ ಸರ್ಕಾರ ಸಿದ್ದರಾಮಯ್ಯರವರ ನೇತೃತ್ವದಲ್ಲಿ ಸರ್ಕಾರ. ಎಲ್ಲ ಧರ್ಮ, ಜಾತಿ,ವರ್ಗದವರಿಗೆ ಸಾಮಾಜಿಕ ನ್ಯಾಯ ಮತ್ತು ಸಮಾನತೆಯಿಂದ ಅವರು ನೋಡುತ್ತಾರೆ. ಇಂದು ಕರ್ನಾಟಕ ಜನರ ಮನೆ ಮಾತಾಗಿರುವ ಸಿದ್ದರಾಮಯ್ಯರವರು ಹೆಸರಿಗೆ ಮಸಿ ಬಳೆಯಬೇಕು ಸಮಾಜದ ಪಟ್ಟಬದ್ರ ಹಿತಾಸಕ್ತಿಗಳು ಕುತಂತ್ರ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸುದ್ದಿಗೋಷ್ಠಿ ಕರೆದು ಸಿದ್ದರಾಮಯ್ಯ ವಿರುದ್ಧ ಅಶ್ಲೀಲ ಮಾತು

    ಮುಕುಡಪ್ಪರವರು ಅಧಿಕಾರ ಇರುವ ಪಕ್ಷದ ಕಡೆ ವಾಲುತ್ತಾರೆ. ಮುಕುಡಪ್ಪ ಮತ್ತು ಪುಟ್ಟಸ್ವಾಮಿರವರು ಸಿದ್ಜರಾಮಯ್ಯರವರ ಆಡಿರುವ ಅವಹೇಳನಕಾರಿ, ಕೀಳುಮಟ್ಟದ ಪದ ಪ್ರಯೋಗಕ್ಕೆ ಕೊಡಲೆ ರಾಜ್ಯದ ಜನರು ಮುಂದೆ ಕ್ಷಮೆ ಕೇಳಬೇಕು ಇವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಬೇಕು ಎಂದು ನಮ್ಮ ರಾಜ್ಯಾದ್ಯಂತ ಹೋರಾಟ ಮುಂದುವರೆಯಲಿದೆ ಎಂದರು.

    ಪ್ರತಿಭಟನೆಯಲ್ಲಿ ನಿಕಟಪೂರ್ವ ಬಿ.ಬಿ.ಎಂ.ಪಿ.ಸದಸ್ಯರಾದ ಜಿ.ಕೃಷ್ಣಮೂರ್ತಿ, ಆನಂದ್ ಕುಮಾರ್, ಮು.ಗಣೇಶ, ಕೆ.ಟಿ.ಗಣೇಶ್, ಶ್ರೀನಿವಾಸ್, ಸೋಮು, ಶಶಿ, ಕಾಂತಮಣಿ, ಮಂಜುಳರವರು ಪಾಲ್ಗೊಂಡಿದ್ದರು. ಇದನ್ನೂ ಓದಿ: ರೂಂಗೆ ಹೋದ ನಂತ್ರ ಬಟ್ಟೆ ಬಿಚ್ಚಲು ಶ್ರೀಗಳು ಹೇಳ್ತಿದ್ದರು: ಹಳೆ ವಿದ್ಯಾರ್ಥಿನಿ ಸ್ಫೋಟಕ ಹೇಳಿಕೆ

    ಏನಿದು ವಿವಾದ?:
    ನಿನ್ನೆ ಸುದ್ದಿಗೋಷ್ಠಿಯಲ್ಲಿ ಮುಕುಡಪ್ಪ ಹಾಗೂ ಪುಟ್ಟಸ್ವಾಮಿ ಇಬ್ಬರು 20 ಕುರಿಗಳ ಮೇಲೆ ಒಂದು ಟಗರು ಎಗರಿ ಬೀಳುತ್ತೆ ಎಂದು ಮಾತನಾಡುತ್ತಿದ್ದರು. ಆ ವೇಳೆ ಮುಕುಡಪ್ಪ, ಯಾರು ಅಂತಾ ಅಲ್ಲ ಎಲ್ಲರೂ ಹೇಳುತ್ತಾರೆ. ಆಗ ಮುಕುಡಪ್ಪ, ಎಲ್ಲರದ್ದೂ ಅಷ್ಟೇ, ಕೆಲವರದ್ದು ಹೊರಗೆ ಬರುತ್ತೆ, ಕೆಲವರದ್ದು ಹೊರಗೆ ಬರಲ್ಲ ಅಷ್ಟೇ ಎಂದು ಹೇಳುತ್ತಾರೆ. ಆಗ ಸಿದ್ದರಾಮಯ್ಯ ಅವರನ್ನು ಹೆಸರನ್ನು ಪ್ರಸ್ತಾಪಿಸಿ ಅವಹೇಳನ ಮಾಡುತ್ತಾರೆ. ಸಿದ್ದರಾಮಯ್ಯನ ಬಗ್ಗೆ ಮಾತನಾಡುವಾಗ ಹುಷಾರು.. ಸೂ.. ಮಗಾ ಎಂದು ಹೇಳಿ ಮುಕ್ಕಡಪ್ಪ ನಗುತ್ತಾರೆ. ಅದಕ್ಕೆ ಪುಟ್ಟಸ್ವಾಮಿ ಪ್ರತಿಕ್ರಿಯಿಸಿ, ಹೌದು, ಅವನು ಬುದ್ಧಿವಂತ.. ಮನೆ ಒಳಗೆ ಸೇರಿಕೊಂಡುಬಿಡ್ತಾನೆ ಎಂದು ಹೇಳಿದ್ದರು.

    Live Tv
    [brid partner=56869869 player=32851 video=960834 autoplay=true]

  • ಕುಟುಂಬ ರಾಜಕಾರಣ ಮಾಡೋದಕ್ಕೆ ಜೆಡಿಎಸ್ ಪಕ್ಷ ಹುಟ್ಟಿರೋದು: ಪುಟ್ಟಸ್ವಾಮಿ

    ಕುಟುಂಬ ರಾಜಕಾರಣ ಮಾಡೋದಕ್ಕೆ ಜೆಡಿಎಸ್ ಪಕ್ಷ ಹುಟ್ಟಿರೋದು: ಪುಟ್ಟಸ್ವಾಮಿ

    ಚಿಕ್ಕಬಳ್ಳಾಪುರ: ಜೆಡಿಎಸ್ ಪಕ್ಷ ಹುಟ್ಟಿರುವುದೇ ಕುಟುಂಬ ರಾಜಕಾರಣ ಮಾಡುವುದಕ್ಕೆ. ಕುಟುಂಬ ರಾಜಕಾರಣದಿಂದಲೇ ನಿಖಿಲ್ ಕುಮಾರಸ್ವಾಮಿ ಹಾಗೂ ಎಚ್.ಡಿ ದೇವೇಗೌಡ ಸೋತರು ಎಂದು ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ಪುಟ್ಟಸ್ವಾಮಿ ಹೇಳಿದರು.

    ಚಿಕ್ಕಬಳ್ಳಾಪುರ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಡಾ ಕೆ. ಸುಧಾಕರ್ ಪರ ಪುಟ್ಟಸ್ವಾಮಿ ಚುನಾವಣಾ ಪ್ರಚಾರ ಸಭೆಗೆ ಇಳಿದಿದ್ದರು. ಈ ವೇಳೆ ಅವರು ಸಮ್ಮಿಶ್ರ ಸರ್ಕಾರದಲ್ಲಿ ಎಚ್.ಡಿ ಕುಮಾರಸ್ವಾಮಿ ಹಾಗೂ ಅವರ ಸಹೋದರ ರೇವಣ್ಣ ಅಘೋಷಿತ ಸಿಎಂ, ಸಂಬಂಧಿಗಳಾದ ತಮ್ಮಣ್ಣ ಹಾಗೂ ಸಾರಾ ಮಹೇಶ್ ಸಚಿವರಾದರು. ಹೀಗಾಗಿ ಜೆಡಿಎಸ್ ಪಕ್ಷ ಜಾತ್ಯಾತೀತ ತತ್ವಗಳಿಗೆ ಅವಮಾನ ಮಾಡಿದೆ ಎಂದರು.

    ಅಲ್ಲದೆ ಪಕ್ಷವನ್ನು ನಂಬಿದ ಜನರೇ ಜೆಡಿಎಸ್ ಬಗ್ಗೆ ಅಸಹ್ಯಪಡುತ್ತಿದ್ದು, ನಿಖಿಲ್ ಹಾಗೂ ಎಚ್.ಡಿ ದೇವೇಗೌಡ ಅವರನ್ನು ಸೋಲಿಸಿದರು. ಮುಂದಿನ ಚುನಾವಣೆಗೆ ರಾಜ್ಯದಲ್ಲಿ ಜೆಡಿಎಸ್ ಪರಿಸ್ಥಿತಿ ಅಧೋಗತಿಗೆ ತಲುಪಲಿದೆ ಎಂದು ಹೇಳಿದರು.

    ಇದೇ ವೇಳೆ ಸಿದ್ದರಾಮಯ್ಯ ವಿರುದ್ಧವೂ ವಾಗ್ದಾಳಿ ನಡೆಸಿದ ಪುಟ್ಟಸ್ವಾಮಿ, ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ ಏಕಾಂಗಿ ಹೋರಾಟ ಮಾಡುತ್ತಿದ್ದಾರೆ. ಕಾಂಗ್ರೆಸ್‍ನಲ್ಲಿ ಮೂಲ ಕಾಂಗ್ರೆಸ್ಸಿಗರು ಹಾಗೂ ವಲಸಿಗ ಕಾಂಗ್ರೆಸ್ಸಿಗರು ಎರಡು ಭಾಗಗಳಾಗಿವೆ. ಉಪಚುನಾವಣಾ ಪ್ರಚಾರಕ್ಕೆ ಮೂಲ ಕಾಂಗ್ರೆಸ್ಸಿಗರು ಬರುತ್ತಿಲ್ಲ. ಈ ಉಪಚುನಾವಣೆಯಲ್ಲಿ ಬಿಜೆಪಿ 15 ಸ್ಥಾನ ಗಳಿಸಲಿದ್ದು, ಇದರಿಂದ ವಿರೋಧ ಪಕ್ಷದ ನಾಯಕ ಸ್ಥಾನ ಕಳೆದುಕೊಳ್ಳಲಿರುವ ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಪಡೆದರೂ ಆಶ್ಚರ್ಯವಿಲ್ಲ ಎಂದು ಪ್ರತಿಕ್ರಿಯಿಸಿದರು.

  • ವಿಷ ಪ್ರಸಾದ ದುರಂತ: ಅಂಗವಿಕಲ ಮಗಳ ಸಾವಿಗೆ ಕಾರಣನಾದ್ನಾ ಅಡುಗೆ ಭಟ್ಟ ಪುಟ್ಟಸ್ವಾಮಿ?

    ವಿಷ ಪ್ರಸಾದ ದುರಂತ: ಅಂಗವಿಕಲ ಮಗಳ ಸಾವಿಗೆ ಕಾರಣನಾದ್ನಾ ಅಡುಗೆ ಭಟ್ಟ ಪುಟ್ಟಸ್ವಾಮಿ?

    ಮೈಸೂರು: ಚಾಮರಾಜನಗರದ ಕಿಚ್‍ಗುತ್ ಮಾರಮ್ಮ ದೇವಸ್ಥಾನದ ಪ್ರಸಾದದಲ್ಲಿ ವಿಷ ಬೆರೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಡುಗೆ ಭಟ್ಟ ಪುಟ್ಟಸ್ವಾಮಿ ಪೊಲೀಸರು ವಶಕ್ಕೆ ಪಡೆಯುವ ಸಾಧ್ಯತೆಗಳಿವೆ.

    ಘಟನೆ ಸಂಬಂಧ ಪುಟ್ಟಸ್ವಾಮಿ ಈಗಾಗಲೇ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶೀಘ್ರವೇ ಚಾಮರಾಜನಗರ ಪೊಲೀಸರು ಅಲ್ಲಿಗೆ ತೆರಳಿ ವಶಕ್ಕೆ ಪಡೆಯಲಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಘಟನೆಯ ಬಳಿಕ ಯಾರಿಗೂ ಅನುಮಾನ ಬಾರದಿರಲಿ ಎಂದು ತನ್ನ ಮಗಳಿಗೂ ವಿಷ ಹಾಕಿ ಪುಟ್ಟಸ್ವಾಮಿ ಆಸ್ಪತ್ರೆಗೆ ದಾಖಲಾಗಿದ್ದಾನೋ ಎಂಬ ಅನುಮಾನವೊಂದು ಮೂಡಿದೆ. ಯಾಕಂದ್ರೆ ತಾನು ಪ್ರಸಾದ ತಿಂದಿದ್ದೇನೆ ಎಂದು ಆಸ್ಪತ್ರೆಯಲ್ಲಿ ಪುಟ್ಟಸ್ವಾಮಿ ಹೈಡ್ರಾಮಾ ಮಾಡಿದ್ದಾನೆ. ಹೀಗಾಗಿ ಪೊಲೀಸರು ಆಸ್ಪತ್ರೆಯ ವೈದ್ಯರ ಬಳಿ ಪುಟ್ಟಸ್ವಾಮಿ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಈ ವೇಳೆ ವೈದ್ಯರು ಪುಟ್ಟಸ್ವಾಮಿ ಸಂಪೂರ್ಣ ಆರೋಗ್ಯವಾಗಿದ್ದಾನೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಗ್ಯವಾಗಿರುವ ಕಾರಣ ವಶಕ್ಕೆ ಪಡೆಯುವ ಸಾಧ್ಯತೆಗಳಿವೆ.

    ಪುಟ್ಟಸ್ವಾಮಿ ಹೇಳಿದ್ದೇನು..?
    ಮಾರಮ್ಮನ ಮೇಲಾಣೆ…ಮಾದಪ್ಪನ ಮೇಲಾಣೆ.. ಅಡುಗೆಯಲ್ಲಿ ನಾನು ವಿಷ ಹಾಕಿಲ್ಲ. ನಾನು 2 ಸಾವಿರ ಸಂಬಳ ಕ್ಕೆ ಕೆಲಸಕ್ಕೆ ಹೋದವನು. ನಾನ್ಯಾಕೆ ಇಂತಹ ಕೆಲಸ ಮಾಡಲಿ. ನನಗೆ ಅಂಬಿಕಾ ಆಗಲಿ, ಅಂಬಿಕಾ ಪತಿಯಾಗಲಿ ಯಾರು ಅಷ್ಟು ಪರಿಚಯವಿಲ್ಲ. ಸಾಲೂರು ಬುದ್ಧಿಯನ್ನು ಇತ್ತೀಚೆಗೆ ನೋಡಿಯೇ ಇಲ್ಲ. ನನ್ನ ಮೇಲೆ ಅನುಮಾನ ಪಡಬೇಡಿ. ಯಾರೇ ತಪ್ಪು ಮಾಡಿದ್ದರು ಶಿಕ್ಷೆಯಾಗಲಿ. ನಾನೇ ತಪ್ಪು ಮಾಡಿದ್ದೇನೆ ಅಂದ್ರೂ ಶಿಕ್ಷೆ ಕೊಡಿ. ಆದರೆ ನಾನಂತೂ ವಿಷ ಹಾಕಿಲ್ಲ. ನನ್ನ ಮಗಳು ಅಂಗವಿಕಲೆ. ನನ್ನ ಒಬ್ಬಳು ಮಗಳಿಗೆ ಕಾಲು ಬರುತ್ತಿರಲಿಲ್ಲ. ನನಗೆ ಮೂವರು ಮಕ್ಕಳಿದ್ದಾರೆ ಎಂದು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾನೆ.  ಇದನ್ನೂ ಓದಿ: ಸುಳ್ವಾಡಿ ದುರಂತ- ಮಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗದ ತಂದೆಯ ಕಣ್ಣೀರ ಕಥೆ ಓದಿ

    ಅಂಗವಿಕಲ ಮಗ್ಳನ್ನೇ ಕೊಲೆಗೈದ್ನಾ..?
    ಪುಟ್ಟಸ್ವಾಮಿ ಸುಳ್ವಾಡಿಯ ಮಾರಮ್ಮನ ದೇವಾಸ್ವಾನದಲ್ಲಿ ರೈಸ್‍ಬತ್ ಪ್ರಸಾದ ತಯಾರಿಸಿದ್ದನು. ಈ ಪ್ರಸಾದ ತಿಂದು ಆತನ 12 ವರ್ಷದ ಮಗಳು ಅನಿತಾ ಮೃತಪಟ್ಟಿದ್ದಳು. ಆದ್ರೆ ವಿಷ ಹಾಕಿದ ವಿಷಯ ತಿಳಿಯಬಾರದು ಎಂದು ಪುಟ್ಟಸ್ವಾಮಿ ತಾನೂ ಪ್ರಸಾದ ತಿಂದಿದ್ದಾನೆ. ಬಳಿಕ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುವ ನಾಟಕವಾಡಿದ್ದಾನೆ ಅನ್ನೋ ಅನುಮಾನ ಮೂಡಿದೆ.

    ಒಟ್ಟಿನಲ್ಲಿ ಅಂಗವಿಕಲೆ ಮಗಳು ಪುಟ್ಟಸ್ವಾಮಿಗೆ ಭಾರವಾಗಿತ್ತು. ಹೀಗಾಗಿ ಅಡುಗೆ ಭಟ್ಟನೇ ವಿಷ ಹಾಕಿದ್ದಾನೆ ಅನ್ನೋ ಅನುಮಾನ ಪೊಲೀಸರಲ್ಲಿ ಬಲವಾಗಿ ಮೂಡಿದೆ.

    https://www.youtube.com/watch?v=gE3_7jm0p4M

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಸ್ಥಾನಕ್ಕೆ ಪುಟ್ಟಸ್ವಾಮಿ ರಾಜೀನಾಮೆ

    ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಸ್ಥಾನಕ್ಕೆ ಪುಟ್ಟಸ್ವಾಮಿ ರಾಜೀನಾಮೆ

    ಬೆಂಗಳೂರು: ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಸ್ಥಾನಕ್ಕೆ ಬಿ.ಜೆ. ಪುಟ್ಟಸ್ವಾಮಿ ರಾಜೀನಾಮೆ ನೀಡಿದ್ದಾರೆ.

    ಮಾಜಿ ಮುಖ್ಯಮಂತ್ರಿ ಹಾಗು ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿರುದ್ಧ ಆಪ್ತ ಬಿ.ಜೆ. ಪುಟ್ಟಸ್ವಾಮಿ ಅಸಮಾಧಾನಗೊಂಡಿದ್ದು, ಯಡಿಯೂರಪ್ಪಗೆ ಬಹಿರಂಗವಾಗಿ ಪತ್ರ ಬರೆದು ರಾಜೀನಾಮೆ ನೀಡಿದ್ದಾರೆ.

    ಪತ್ರದಲ್ಲಿ ಏನಿದೆ?
    ತಮ್ಮಿಂದ ನನ್ನ ಸ್ವಂತ ಲಾಭಕ್ಕೆ ಯಾವುದೇ ಆಸೆ ಪಟ್ಟವನಲ್ಲ. ನಮ್ಮ ಜನಾಂಗಕ್ಕೆ ತಾವು ಮಾಡಿರುವ ಸಹಾಯಕ್ಕೆ ನಾನು ಮತ್ತು ನಮ್ಮ ಜನಾಂಗ ಚಿತ ಋಣಿಯಾಗಿದೆ. ಅದರಲ್ಲಿ ಯಾವುದೇ ಲೋಪವಿಲ್ಲದಂತೆ ಸಾರ್ವಜನಿಕ ಉಪಯೋಗಕ್ಕೆ ಬಳಸಿದ್ದೇನೆ.

    ನಾನು ನಂಬಿದ್ದು ಪಕ್ಷದಲ್ಲಿ ಒಬ್ಬ ದೇವರನ್ನು ಮಾತ್ರ. ಪಕ್ಷದ ಹಿತದೃಷ್ಟಿಯಿಂದ ಯಾವುದೇ ಒಳ ಒಪ್ಪಂದವಿಲ್ಲದೇ ವಿರೋಧಿಗಳ ಹಲವು ಹಗರಣಗಳನ್ನು ಬಯಲಿಗೆ ಎಳೆದಿದ್ದೇನೆ. ಈಗ ನನ್ನ ರಕ್ಷಣೆಗೆ ಗತಿ ಯಾರು ಎಂಬ ಪ್ರಶ್ನೆ ಕಾಡುತ್ತಿದೆ. ತಾವು ಮಾಡಿದ ಸಹಾಯಕ್ಕೆ ಋಣ ಮುಕ್ತನಾಗಿ ನಡೆದುಕೊಂಡಿದ್ದೇನೆ.

    ನಾನು ಒಂದು ಜಾತಿಯ ಪ್ರತಿನಿಧಿಯೂ ಹೌದು. ಮುಖ್ಯವಾಗಿ ಹಿಂದುಳಿದ ವರ್ಗಗಳನ್ನು ಪ್ರತಿನಿಧಿಸುವ ನಾಯಕನಾಗಿದ್ದೇನೆ. ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ನನ್ನ ಉಪಸ್ಥಿತಿ ವಿಧಾನ ಪರಿಷತ್ತಿನ ಒಳಗೆ ಹಾಗೂ ಹೊರಗೆ ಮತ್ತು ಹಿಂದುಳಿದ ವರ್ಗಗಳ ಮತ್ತಷ್ಟು ಹೆಚ್ಚಿನ ಸಂಘಟನೆಗೆ ಮತ್ತು ಲೋಕಸಭಾ ಚುನಾವಣೆಗೆ ಅತ್ಯಂತ ಪರಿಣಾಮಕಾರಿಯಾಗಿ ಸಹಕಾರಿಯಾಗುತ್ತಿತ್ತು ಎಂಬ ದೃಢ ನಂಬಿಕೆ ನನಗಿತ್ತು.

    ಆದರೆ, ಯಾವ ಮಾನದಂಡ ಅನುಸರಿಸಿ ವಿಧಾನ ಪರಿಷತ್ತಿನ ಸದಸ್ಯತ್ವದ ಅಭ್ಯರ್ಥಿಯಾಗಿ ನನ್ನನ್ನು ಆಯ್ಕೆ ಮಾಡದಿರುವುದು ನನಗಾಗಲೀ ಅಧವಾ ಕರ್ನಾಟಕದ ಜನತೆಗಾಗಲೀ ಅರ್ಥವಾಗುತ್ತಿಲ್ಲ. ತಾವು ವಿಧಾನ ಪರಿಷತ್ತಿನ ಸದಸ್ಯತ್ವವನ್ನು ಮುಂದುವರೆಸುವುದರ ಜೊತೆಗೆ ಪಕ್ಷವನ್ನು ಪರಿಣಾಮಕಾರಿಯಾಗಿ ಸಮರ್ಥಿಸಲು ವಿಪಕ್ಷ ನಾಯಕರನ್ನಾಗಿ ಮಾಡಲು ಇಚ್ಛೆಯನ್ನು ಸಹ ವ್ಯಕ್ತಪಡಿಸಿದ್ದೀರಿ. ಆ ಮಾತು ತಪ್ಪಿದ್ದಕ್ಕೆ ಕಾರಣ ತಿಳಿಯುತ್ತಿಲ್ಲ.

    ನನ್ನ ಅವಿರತ ಶ್ರಮ, ಬದ್ಧತೆ, ನಂಬಿಕೆ, ಪ್ರಾನವನ್ನು ಲೆಕ್ಕಿಸದೆ ಮಾಡಿದ ಸಮರ್ಥನೆ ಇವುಗಳೆಲ್ಲವೂ ಸೋತಿರುವುದಕ್ಕೆ ಅತೀವ ನೋವಾಗಿದೆ. ನನ್ನ ಜೀವನದ ಕೊನೆ ಹಂತದಲ್ಲಿ ಸಕ್ರಿಯ ರಾಜಕೀಯಕ್ಕೆ ತೆರೆ ಎಳೆದಿರುವುದು ಯಾವ ತಪ್ಪಿಗೆ ಎಂದು ತಿಳಿಯುತ್ತಿಲ್ಲ.

    ಪಕ್ಷದ ಸಂಘಟನೆಯಲ್ಲಿ ನನ್ನ ಜೊತೆ ಎಲ್ಲಾ ವಿಧದಲ್ಲೂ ಸಹಕರಿಸಿದ ನನ್ನ ಸಹಪಾಠಿಗಳಿಗೆ ಮತ್ತು ಹಿಂದುಳಿದ ವರ್ಗಗಳಿಗೆ ನನ್ನ ತುಂಬು ಹೃದಯದ ಧನ್ಯವಾದಗಳು. ತಮ್ಮಗಳನ್ನು ರಾಜಕೀಯದಲ್ಲಿ ಸಾಧ್ಯವಾದಷ್ಟು ಗಟ್ಟಿ ಮಾಡುವ ಆಸೆ ನನ್ನದಾಗಿತ್ತು. ಅದು ಸಾಧ್ಯವಾಗದಿರುವುದಕ್ಕೆ ವಿಷಾಧಿಸುತ್ತೇನೆ.

    ಮಾಧ್ಯಮಗಳಲ್ಲಿ ಮತ್ತು ಕನಾಟಕ ಜನತೆಯ ಮನಸ್ಸಿನಲ್ಲಿ ನನ್ನನ್ನು ತಮ್ಮ ಆಪ್ತನೆಂದು ಗುರುತಿಸಲಾಗಿದೆ. ಅದಕ್ಕೆ ಚ್ಯುತಿ ಬರದಂತೆ ಪ್ರಾಮಾಣಿಕವಾಗಿ ನಿಷ್ಠೆಯಿಂದ ನಡೆದುಕೊಂಡಿದ್ದೇನೆ ಎಂದು ನನ್ನ ಆತ್ಮಸಾಕ್ಷಿಯಾಗಿ ಈ ಮೂಲಕ ಕರ್ನಾಟಕ ಜನತೆಯ ಮುಂದೆ ಪ್ರಮಾಣಿಕರಿಸುತ್ತೇನೆ. ಅದಕ್ಕಾಗಿ ಈ ವಿವರಣೆ.

    ಈ ನನ್ನ ರಾಜೀನಾಮೆಯನ್ನು ಅಂಗೀಕರಿಸುವಂತೆ ಮತ್ತೊಮ್ಮೆ ಕೋರುತ್ತೇನೆ.

  • ಪುಟ್ಟಸ್ವಾಮಿ ಆರೋಪ ಸುಳ್ಳಾಗಿದ್ದು, ನೇಣು ಹಾಕಿಕೊಳ್ಳಲು ಹೇಳಿ: ಸಿಎಂ

    ಪುಟ್ಟಸ್ವಾಮಿ ಆರೋಪ ಸುಳ್ಳಾಗಿದ್ದು, ನೇಣು ಹಾಕಿಕೊಳ್ಳಲು ಹೇಳಿ: ಸಿಎಂ

    ಮೈಸೂರು: ಬಿಜೆಪಿ ಮುಖಂಡ ಬಿಜೆ ಪುಟ್ಟಸ್ವಾಮಿ ಅವರ ಆರೋಪ ಸುಳ್ಳಾಗಿದ್ದು, ಅವರನ್ನು ನೇಣು ಹಾಕಿಕೊಳ್ಳಲಿ ಹೇಳಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

    ಸಿದ್ದರಾಮಯ್ಯ ಭೂಪಸಂದ್ರದ ಬಳಿ 300 ಕೋಟಿ ರೂ. ಬೆಲೆ ಬಾಳುವ ಜಾಗವನ್ನು ಅಕ್ರಮ ಡಿನೋಟಿಫಿಕೇಶನ್ ಮಾಡಿದ್ದಾರೆ ಎಂದು ಕಳೆದ ವಾರ ಪುಟ್ಟಸ್ವಾಮಿ ಸುದ್ದಿಗೋಷ್ಠಿ ನಡೆಸಿ ದಾಖಲೆ ಬಿಡುಗಡೆ ಮಾಡಿದ್ದರು. ಈ ವೇಳೆ ನನ್ನ ಆರೋಪ ಸುಳ್ಳಾದರೆ ವಿಧಾನ ಸೌಧದಲ್ಲಿ ನೇಣು ಹಾಕಿಕೊಳ್ಳುವುದಾಗಿ ಹೇಳಿದ್ದರು.

    ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಆರೋಪ ಮಾಡಿರುವವರು ಅವರೇ, ಅದನ್ನ ಸತ್ಯ ಅಂತ ಸಾಬೀತು ಮಾಡಬೇಕಿರುವುದು ಅವರೇ. ಈಗ ಅವರ ಆರೋಪ ಸುಳ್ಳಾಗಿದೆ. ಅವರನ್ನ ನಾನು ನೇಣು ಹಾಕಿಕೊಳ್ಳಲಿ ಅಂತ ನಾನು ಹೇಳೋಲ್ಲ, ಆದರೆ ಆರೋಪ ಮಾಡುವ ಮುನ್ನ ಯೋಚನೆ ಮಾಡಲಿ ಅಂತ ಹೇಳುತ್ತೇನೆ ಎಂದು ಹೇಳಿದರು.

    ಪುಟ್ಟಸ್ವಾಮಿ ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ, ಮೊದಲು ನೇಣು ಹಾಕಿಕೊಳ್ಳಲಿ ಎಂದು ಹೇಳಿ ನಂತರ ಪಾಪ ಅವರು ಹಾಗೇಲ್ಲ ಮಾಡಿಕೊಳ್ಳುದು ಬೇಡ ಎಂದರು.

    ಇದನ್ನೂ ಓದಿ: ಸಿಎಂನಿಂದ 300 ಕೋಟಿ ರೂ. ಬೆಲೆ ಬಾಳುವ ಜಾಗ ಡಿನೋಟಿಫಿಕೇಶನ್

     

     

  • ಸಿಎಂನಿಂದ 300 ಕೋಟಿ ರೂ. ಬೆಲೆ ಬಾಳುವ ಜಾಗ ಡಿನೋಟಿಫಿಕೇಶನ್

    ಸಿಎಂನಿಂದ 300 ಕೋಟಿ ರೂ. ಬೆಲೆ ಬಾಳುವ ಜಾಗ ಡಿನೋಟಿಫಿಕೇಶನ್

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮತ್ತೊಂದು ಅಕ್ರಮ ಡಿನೋಟಿಫಿಕೇಶನ್ ಚಾರ್ಜ್ ಶೀಟ್  ಬಿಡುಗಡೆ ಮಾಡಿದೆ. ಸಿಎಂ ಆಪ್ತನ ಕಾರಣಕ್ಕಾಗಿ ನ್ಯಾಯಾಲಯದ ಆದೇಶವನ್ನೂ ಉಲ್ಲಂಘಿಸಿ 300 ಕೋಟಿ ಬೆಲೆಬಾಳುವ 6.26 ಎಕರೆ ಭೂಮಿಯನ್ನು ಡಿನೋಟಿಫೈ ಮಾಡಿದ್ದಾರೆ ಎಂದು ಆರೋಪಿಸಿದ್ದು, ಅದಕ್ಕೆ ಸಂಬಂಧಪಟ್ಟ ಕೆಲ ದಾಖಲೆಗಳನ್ನು ಬಿಡುಗಡೆ ಮಾಡಿದೆ.

    ಬಿಜೆಪಿ ಕಚೇರಿಯಲ್ಲಿ ಮೂವರು ಶಾಸಕರ ಜತೆ ಸುದ್ದಿಗೋಷ್ಠಿ ನಡೆಸಿದ ಪರಿಷತ್ ಸದಸ್ಯ ಬಿ.ಜೆ.ಪುಟ್ಟಸ್ವಾಮಿ ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪಗಳ ಸುರಿಮಳೆಗೈದ್ರು. ಬೆಂಗಳೂರಿನ ಉತ್ತರ ವಲಯದ ಭೂಪಸಂದ್ರದ ಸರ್ವೆ ನಂ. 20 ಹಾಗೂ 21ರಲ್ಲಿ ಒಟ್ಟು 6.26 ಎಕರೆ ಭೂಮಿಯನ್ನ ಅಕ್ರಮವಾಗಿ ಡಿನೋಟಿಫಿಫೈ ಮಾಡಿದ್ದಾರೆ, ಡಿನೋಟಿಫೈ ಮಾಡುವಂತೆ ಸಿಎಂ ಸಿದ್ದರಾಮಯ್ಯ ಸಹಿ ಮಾಡಿದ್ದಾರೆ, ಮುಖ್ಯಮಂತ್ರಿಗಳೇ ಇದಕ್ಕೆ ನೇರ ಹೊಣೆ ಅಂತಾ ಆರೋಪಿಸಿದ್ದಾರೆ.

    ಬೆಳ್ತಂಗಡಿ ಶಾಸಕ ವಸಂತ ಬಂಗೇರಾ ಅವರ ಡಿನೋಟಿಫೈ ಮಾಡುವಂತೆ ಮನವಿ ಮಾಡಿರುವ ಪತ್ರದ ಮೇಲೆ ಪರಿಶೀಲಿಸಿ ಕೂಡಲೇ ಚರ್ಚಿಸಿ ಅಂತಾ ಬರೆದು ಸಿಎಂ ಸಿದ್ದರಾಮಯ್ಯ ಸಹಿ ಹಾಕಿರುವ ಪತ್ರವನ್ನು ಕೂಡ ಬಿಡುಗಡೆ ಮಾಡಿದ್ದಾರೆ. ಆದ್ರೆ ಡಿನೋಟಿಫೈ ಮಾಡಿರುವ ಅಗತ್ಯ ದಾಖಲೆಯ ಮಾತ್ರ ರಿಲೀಸ್ ಆಗಿಲ್ಲದಿರೋದು ಕೂಡ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

    ಬಿಜೆಪಿ ಆರೋಪಗಳೇನು?
    1988ರಲ್ಲಿ ರಾಜಮಹಲ್ ವಿಲಾಸ್ 2ನೇ ಹಂತದ ಬಡಾವಣೆಗೆ ಅಧಿಸೂಚನೆ ಹೊರಡಿಸಲಾಗಿತ್ತು. ಬೆಂಗಳೂರು ಉತ್ತರ ತಾಲೂಕು ಭೂಪಸಂದ್ರದ ಸ.ನಂ20ರಲ್ಲಿ 3.34 ಎಕರೆ, ಸ.ನಂ.21ರಲ್ಲಿ 2.32 ಎಕರೆ ನೋಟಿಫಿಕೇಶನ್ ಆಗಿತ್ತು. ಬಡಾವಣೆ ನಿರ್ಮಿಸಿ 22 ಮಂದಿಗೆ ಬಿಡಿಎ ಸೈಟ್ ಹಂಚಿಕೆ ಮಾಡಿತ್ತು. ಆದರೆ 1992ರಲ್ಲಿ ಅಂದಿನ ಸರ್ಕಾರ 6.26ಎಕರೆ ಭೂಮಿ ಡಿನೋಟಿಫಿಕೇಶನ್ ಮಾಡಿತ್ತು. ಈ ವೇಳೆ ಬಿಡಿಎಯಿಂದ ಜಾಗ ಪಡೆದವರು ಡಿನೋಟಿಫಿಕೇಶನ್ ರದ್ದು ಮಾಡುವಂತೆ ಹೈಕೋರ್ಟ್ ಮೊರೆ ಹೋಗಿದ್ದರು. 1996ರಲ್ಲಿ ಹೈಕೋರ್ಟ್ ಡಿನೋಟಿಫಿಕೇಶನ್ ರದ್ದು ಮಾಡಿತ್ತು. ಆದರೆ ಮೂಲ ಮಾಲೀಕರಲ್ಲಿ ಒಬ್ಬರಾದ ಸೈಯದ್ ಬಾಷಿದ್ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಕೆ ಮಾಡುತ್ತಾರೆ. ಅಲ್ಲೂ ಸೈಯದ್ ಬಾಷಿದ್ ಅರ್ಜಿ ತಿರಸ್ಕೃತವಾಗುತ್ತದೆ. ನಂತರ ಸುಪ್ರೀಂ ಕೋರ್ಟ್ ಮೊರೆ ಹೋದ್ರೂ ಅಲ್ಲೂ ಅರ್ಜಿ ವಜಾಗೊಳ್ಳುತ್ತದೆ.

    2015ರಲ್ಲಿ ಮತ್ತೊಬ್ಬ ಮೂಲ ಮಾಲೀಕರಾದ ಕೆ.ವಿ.ಜಯಲಕ್ಷ್ಮಮ್ಮ ಹೈಕೋರ್ಟ್ ಮೆಟ್ಟಿಲೇರುತ್ತಾರೆ. ಆದ್ರೆ ಹೈಕೋರ್ಟ್ ನಲ್ಲಿ ಜಯಲಕ್ಷ್ಮಮ್ಮ ಮನವಿ ಪುರಸ್ಕಾರವಾಗಿ ಡಿನೋಟಿಫಿಕೇಶನ್ ಯಥಾಸ್ಥಿತಿಗೆ ಆದೇಶ ನೀಡುತ್ತದೆ. ಹೈಕೋರ್ಟ್ ತೀರ್ಪು ಪ್ರಶ್ನಿಸಿ ದ್ವಿಸದಸ್ಯ ಪೀಠಕ್ಕೆ ಬಿಡಿಎ ಮೇಲ್ಮನವಿ ಸಲ್ಲಿಸುತ್ತದೆ. ಆದ್ರೆ ಮೇಲ್ಮನವಿಗೆ ಬಿಡಿಎ ಅರ್ಜಿ ಯೋಗ್ಯವಲ್ಲ ಎಂದು ಸರ್ಕಾರದ ಕಾನೂನು ಕೋಶ ಅಭಿಪ್ರಾಯ ವ್ಯಕ್ತಪಡಿಸುತ್ತದೆ. 2016ರ ಜೂನ್ 7 ರಂದು ಬಿಡಿಎ ಮನವಿ ಮೇರೆಗೆ ಮೇಲ್ಮನವಿಯನ್ನು ದ್ವಿಸದಸ್ಯ ಪೀಠ ರದ್ದುಗೊಳಿಸುತ್ತದೆ. ಆ ಬಳಿಕ 15-06-2016ರಂದು ಬಿಡಿಎ ಆಯುಕ್ತರು ಭೂ ಸ್ವಾಧೀನ ಪ್ರಕ್ರಿಯೆ ರದ್ದಾಗಿರುತ್ತದೆ ಎಂದು ಕೆ.ವಿ ಜಯಲಕ್ಷ್ಮಮ್ಮ ಮತ್ತು ಇತರರಿಗೆ ಹಿಂಬರಹ ನೀಡುತ್ತಾರೆ.

    ಈ ಆಸ್ತಿಯ ಇಂದಿನ ಮಾರುಕಟ್ಟೆ ಬೆಲೆ 300 ಕೋಟಿ ರೂ. ಆಗಿದ್ದು, ಸುಪ್ರೀಂ ಕೋರ್ಟ್ ತೀರ್ಪಿನಿಂದ ಉಳಿಸಿಕೊಂಡ ಆಸ್ತಿಯನ್ನು ಬಿಟ್ಟುಕೊಟ್ಟಿರುವುದರಲ್ಲಿ ಸರ್ಕಾರದ ನೇರ ಕೈವಾಡವಿದೆ. 37 ವರ್ಷದಿಂದ ಈ ವ್ಯವಹಾರದಲ್ಲಿ ಕಾಣಸಿದೇ ಇದ್ದ ಕೆ.ವಿ ಜಯಲಕ್ಷ್ಮಮ್ಮ ಮತ್ತು ಇತರರು ಸುಪ್ರೀಂ ಕೋರ್ಟ್ ತೀರ್ಪು ಬಂದ ಬಳಿಕ ನಂತರ ಹೈಕೋರ್ಟ್ ನಲ್ಲಿ ಅರ್ಜಿ ಹಾಕಿದ್ದು ಅನುಮಾನಕ್ಕೆ ಬರುತ್ತದೆ. ಜನತಾದಳದಲ್ಲಿ ಸಿದ್ದರಾಮಯ್ಯ ಜೊತೆಯಲ್ಲಿ ಆಪ್ತರಾಗಿದ್ದ ಪ್ರಬಲ ರಾಜಕಾರಣಿ ಜಯಲಕ್ಷ್ಮಮ್ಮ ರಿಂದ ಪವರ್ ಆಫ್ ಅಟಾರ್ನಿ ಪಡೆದು ಈ ಅವ್ಯವಹಾರದಲ್ಲಿ ಸಕ್ರಿಯರಾಗಿದ್ದರಿಂದಲೇ ಸರ್ಕಾರ ಬಿಡಿಎ ಸಲ್ಲಿಸಿದ್ದ ಮೇಲ್ಮನವಿಯನ್ನು ವಾಪಸ್ ಪಡೆಯಲು ಆದೇಶ ನೀಡಿದೆ. ಈ ಆರೋಪ ತಿರಸ್ಕರಿಸುವುದಾದರೆ ಸಿಎಂ ಸಿದ್ದರಾಮಯ್ಯ ಒಂದು ವಾರದಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿ ಆಸ್ತಿಯನ್ನು ಉಳಿಸಿಕೊಳ್ಳಬೇಕು. ಇಲ್ಲವಾದರೆ ಈ ಆರೋಪ ಸತ್ಯವಾಗುತ್ತದೆ ಎಂದು ಬಿಜೆಪಿ ಹೇಳಿದೆ.

    ಬ್ರಹ್ಮಾಂಡ ಭ್ರಷ್ಟಾಚಾರ: ಭೂಪಸಂದ್ರ ಡಿನೋಟಿಫಿಕೇಷನ್ ಹಗರಣದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ, ಸಿಎಂ ಬೇನಾಮಿ ಆಸ್ತಿ ಮಾಡಲು ಹೊರಟಿದ್ದಾರೆ, ಸಿಎಂ ವಿರುದ್ಧ ಬುಧವಾರ ಅಥವಾ ಗುರುವಾರ ಎಸಿಬಿ ಗೆ ದೂರು ಕೊಡುತ್ತೇವೆ. ಬಿಡಿಎ ಇದ್ದಿದ್ದು ಹಣ ಮಾಡೋಕಾ, ಮುಚ್ಚಿಬಿಡಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನು, ಮಾನ ಮರ್ಯಾದೆ ಇದೆಯೇನ್ರಿ ನಿಮಗೆ ಎಂದು ಸಿಎಂ ವಿರುದ್ಧ ಕೆಂಡಕಾರಿದ್ದಾರೆ. ಅಷ್ಟೇ ಅಲ್ಲ, ಮಾನನಷ್ಟ ಮೊಕದ್ದಮೆ ಹೂಡುವ ಸಿಎಂ ಹೇಳಿಕೆಗೆ ಸವಾಲು ಹಾಕಿರುವ ಪುಟ್ಟಸ್ವಾಮಿ, ನಾಳೆನೇ ನನ್ನ ಮೇಲೆ ಮೊಕದ್ದಮೆ ಹೂಡಲಿ, ಇನ್ನಷ್ಟು ವಿಚಾರ ಹೊರತೆಗೆಯುತ್ತೇನೆ, ಮಾನನಷ್ಟ ಮೊಕದ್ದಮೆ ಹೂಡಿದರೆ ಎದುರಿಸಲು ಸಿದ್ಧ ಅಂತಾ ಹೇಳಿದರು.