Tag: ಪುಟ್ಟರಂಗ ಶೆಟ್ಟಿ

  • ಚಾ.ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ – ಸಚಿವ, ಶಾಸಕರ ನಡುವೆ ಜಟಾಪಟಿ

    ಚಾ.ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ – ಸಚಿವ, ಶಾಸಕರ ನಡುವೆ ಜಟಾಪಟಿ

    ಚಾಮರಾಜನಗರ: ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ವಿಚಾರವಾಗಿ ಸಚಿವ ಮತ್ತು ಶಾಸಕರ ನಡುವೆ ಜಟಾಪಟಿ ನಡೆದಿದೆ.

    ಕಾವೇರಿ ಕುಡಿಯುವ ನೀರಿನ ಸಮಸ್ಯೆ ವಿಚಾರದ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಶಾಸಕರತ್ತ ಬೊಟ್ಟು ಮಾಡಿ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟೇಶ್ ಉತ್ತರಿಸಿದರು. ಈ ವೇಳೆ ಸಚಿವ ವೆಂಕಟೇಶ್ ಹಾಗೂ ಶಾಸಕ ಪುಟ್ಟರಂಗಶೆಟ್ಟಿ ನಡುವೆ ಮಾತಿನ ಜಟಾಪಟಿ ನಡೆಯಿತು.

    ನಿನ್ನ ಜವಾಬ್ದಾರಿ ಮಾಡಪ್ಪ ಎಂದು ಶಾಸಕ ಪುಟ್ಟರಂಗಶೆಟ್ಟಿಗೆ ಸಚಿವ ವೆಂಕಟೇಶ್ ಹೇಳಿದರು. ಡಿಸಿ ಬಳಿ ಪ್ರಾಕೃತಿಕ ವಿಕೋಪ ಅನುದಾನ ಇದೆ. ಪಟ್ಟಣಪ್ರದೇಶಕ್ಕೆ ಅನುದಾನ ಕೊಡುವ ಜವಾಬ್ದಾರಿ ಡಿಸಿ ಅವರದ್ದು ಅಂತ ಶಾಸಕ ಪುಟ್ಟರಂಗಶೆಟ್ಟಿ ಹೇಳಿದರು. ‘ಹೇಳಿದ್ದನ್ನ ಕೇಳ್ರೀ… ಜವಾಬ್ದಾರಿ ಡಿಸಿಯದ್ದೆ ಅಂತ ಒಪ್ಕೊಳ್ಳೋಣ’ ಎಂದು ಸಚಿವರು ಪ್ರತಿಯಾಗಿ ಮಾತನಾಡಿದ್ದಾರೆ. ಇದು ಡಿಸಿ ಕರ್ತವ್ಯ ಎಂದು ಶಾಸಕ ಉತ್ತರಿಸಿದರು. ಇದು ಸ್ಥಳೀಯ ಸಂಸ್ಥೆಗಳಲ್ಲಿ ಜನಪ್ರತಿನಿಧಿಗಳು ಇದ್ದಮೇಲೆ ಡಿಸಿ ಹೇಗೆ ಜವಾಬ್ದಾರಿ ಎಂದು ಸಚಿವರು ಪ್ರಶ್ನಿಸಿದರು. ಕ್ರಿಯಾ ಯೋಜನೆಗೆ ಸಹಿ ಹಾಕೋದೆ ಡಿಸಿ ಅಂತ ಶಾಸಕ ಪ್ರತಿಯಾಗಿ ಮಾತನಾಡಿದರು. ಪ್ರಾಕೃತಿಕ ವಿಕೋಪ ಅನುದಾನ ಬಳಕೆಗೆ ಬರ ಘೋಷಣೆಯಾಗಬೇಕು. ಅದೇ ಬೇರೆ ಹಣ ಎಂದು ಸಚಿವರು ಸಮಜಾಯಿಸಿ ನೀಡಿದರು.

    ಕುಡಿಯುವ ನೀರಿಗೆ ವಿಶೇಷ ಅನುದಾನ ಇದೆ ಅಂತ ಶಾಸಕ ಪುಟ್ಟರಂಗಶೆಟ್ಟಿ ಹೇಳಿದರು. ಇದ್ದರೆ ಕೊಡ್ಸೋಣ ಬಿಡಪ್ಪ ಎಂದು ಸಚಿವ ವೆಂಕಟೇಶ್ ಹೇಳಿದ್ದಾರೆ.

  • ಸಿದ್ದರಾಮಯ್ಯ ಗೆದ್ರೆ ಮೋದಿ ಸೋಲುತ್ತಾರೆ: ಶಾಸಕ ಪುಟ್ಟರಂಗಶೆಟ್ಟಿ

    ಸಿದ್ದರಾಮಯ್ಯ ಗೆದ್ರೆ ಮೋದಿ ಸೋಲುತ್ತಾರೆ: ಶಾಸಕ ಪುಟ್ಟರಂಗಶೆಟ್ಟಿ

    ಚಾಮರಾಜನಗರ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಗೆದ್ದರೇ ಸಿಎಂ ಆಗೋದಷ್ಟೆ ಅಲ್ಲದೇ, ಪ್ರಧಾನಿ ಮೋದಿಯನ್ನು (Narendra Modi) ಸೋಲಿಸುತ್ತಾರೆ ಎಂದು ಶಾಸಕ ಪುಟ್ಟರಂಗಶೆಟ್ಟಿ (Puttaranga Shetty) ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ (Siddaramaiah) ಅವರನ್ನು ಕಂಡರೆ ಬಿಜೆಪಿಗೆ (BJP) ಭಯ. ಏಕೆಂದರೆ ಇಡೀ ದೇಶದಲ್ಲೇ ಮೋದಿ ಅವರನ್ನು ನೇರವಾಗಿ ವಾಗ್ದಾಳಿ ನಡೆಸುವುದು ಸಿದ್ದರಾಮಯ್ಯರೊಬ್ಬರೇ ಆಗಿದ್ದಾರೆ ಎಂದು ಹೇಳಿದರು.

    ಇದೇ ವೇಳೆ ಬಿಜೆಪಿ ಎಂಎಲ್‌ಸಿ ಸಿ.ಪಿ. ಯೋಗೇಶ್ವರ್ (CP Yogeshwar) ಅವರ ವೈರಲ್‌ ಆದ ಆಡಿಯೋದಲ್ಲಿದ್ದ ಮೈಸೂರು ಭಾಗದ ಕಾಂಗ್ರೆಸ್ ಶಾಸಕರು ಬಿಜೆಪಿ ಸೇರುತ್ತಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನವರು ಬಿಜೆಪಿಗೆ ಸೇರುವುದಲ್ಲ, ಬಿಜೆಪಿ ಅವರೇ ಕಾಂಗ್ರೆಸ್‌ಗೆ ಬರುತ್ತಾರೆ ಎಂದು ಹೇಳಬೇಕು. ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ, ಕಾಂಗ್ರೆಸ್‌ಗೆ ಬಿಜೆಪಿಯವರು ಬರುತ್ತಾರೆ. ಬಿಜೆಪಿಯವರು ಕಾಂಗ್ರೆಸ್‌ಗೆ ಬರೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ನಮ್ಮ ನಾಯಕರೇ ಅವರನ್ನು ಸೇರಿಸಿಕೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದಾರೆ ಎಂದರು. ಇದನ್ನೂ ಓದಿ: ಪ್ರೀತಿ ನಿರಾಕರಿಸಿದ್ದಕ್ಕೆ ಹುಡುಗಿ ಕೊಂದು ತಾನೂ ಆತ್ಮಹತ್ಯೆ

    ಹೆಚ್. ವಿಶ್ವನಾಥ್ ಬಿಜೆಪಿಗೆ ಹೋಗಿದ್ರು, ಆದರೆ ಇದೀಗ ಮತ್ತೆ ಕಾಂಗ್ರೆಸ್‌ಗೆ ಬರುತ್ತಿಲ್ವಾ? ಅದೇ ರೀತಿ ಎಂಟಿಬಿ ನಾಗರಾಜ್ ಸೀಟು ಕೊಟ್ರೆ ಕಾಂಗ್ರೆಸ್ ಸೇರೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಎಲ್ಲಾ ಕಾದು ನೋಡಿ ಎಷ್ಟೆಷ್ಟು ಜನ ಬರ್ತಾರೆ ಎಂದು ಹೇಳಿದ ಅವರು, ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರ್ತಾರೆ ಎಂಬ ಸಚಿವರ ಹೇಳಿಕೆಯನ್ನು ಅಲ್ಲಗಳೆದರು. ಇದನ್ನೂ ಓದಿ: ಅಯ್ಯಪ್ಪನ ದರ್ಶನ ಮುಗಿಸಿ ವಾಪಸ್ಸಾಗುತ್ತಿದ್ದ ಮಡಿಕೇರಿಯ ಯುವಕ ಸಮುದ್ರಪಾಲು

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಚಿವ ಸುರೇಶ್ ಕುಮಾರ್ ಮನಸ್ಸಿಗೆ ಬಂದಂತೆ ಶಿಷ್ಠಾಚಾರ ಪಾಲಿಸ್ತಿದ್ದಾರೆ: ಪುಟ್ಟರಂಗಶೆಟ್ಟಿ ವಾಗ್ದಾಳಿ

    ಸಚಿವ ಸುರೇಶ್ ಕುಮಾರ್ ಮನಸ್ಸಿಗೆ ಬಂದಂತೆ ಶಿಷ್ಠಾಚಾರ ಪಾಲಿಸ್ತಿದ್ದಾರೆ: ಪುಟ್ಟರಂಗಶೆಟ್ಟಿ ವಾಗ್ದಾಳಿ

    ಚಾಮರಾಜನಗರ: ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಮನಸ್ಸಿಗೆ ಬಂದಂತೆ ಶಿಷ್ಠಾಚಾರ ಪಾಲನೆ ಮಾಡುತ್ತಿದ್ದಾರೆ, ರಾತ್ರಿ ಹೊರಟ, ಹಗಲಿನಲ್ಲಿ ಬಂದ. ಎಲ್ಲಿಗೆ ಬಂದ ಎಲ್ಲಿಗೆ ಹೋದ ಅನ್ನೋದೇ ಗೊತ್ತಾಗ್ತಾ ಇಲ್ಲ ಎಂದು ಮಾಜಿ ಉಸ್ತುವಾರಿ ಸಚಿವ, ಶಾಸಕ ಸಿ. ಪುಟ್ಟರಂಗಶೆಟ್ಟಿ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

    ನನ್ನ ಕ್ಷೇತ್ರದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಆದರೆ ನನಗೆ ತಿಳಿಸದೆ ಸುರೇಶ್ ಕುಮಾರ್ ಕಾಮಗಾರಿ ವೀಕ್ಷಣೆಗೆ ಹೋಗಿರುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ. ಈಗಾಗ್ಲೇ ನಾಲ್ಕೈದು ಬಾರಿ ಇದೇ ರೀತಿ ಮಾಡಿದ್ದಾರೆ ನಾಲ್ಕೈದು ಬಾರಿಯೂ ಕ್ಷಮೆ ಕೇಳಿದ್ದಾರೆ. ಆದರೆ ಮಾಡೋದನ್ನೇ ಮಾಡ್ತಾ ಇದ್ರೆ ನಾನು ನೋಡ್ತಾ ಕುಳಿತುಕೊಳ್ಳಬೇಕಾ ಎಂದು ಹರಿಹಾಯ್ದಿದ್ದಾರೆ.

    ಮೊನ್ನೆ ಚಾಮರಾಜನಗರಕ್ಕೆ ಭೇಟಿ ನೀಡಿದ್ದ ಸಚಿವ ಸುರೇಶ್ ಕುಮಾರ್ ಕೃಷಿ, ನೀರಾವರಿ ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಪ್ರತ್ಯೇಕ ಸಭೆ ನಡೆಸಿದ್ದರು. ಈ ಸಭೆಗಳಿಗೆ ತಮ್ಮನ್ನು ಆಹ್ವಾನಿಸದೆ ಕಡೆಗಣಿಸಲಾಗಿದೆ ಎಂದು ಕಾಂಗ್ರೆಸ್ ಶಾಸಕ ಸಿ. ಪುಟ್ಟರಂಗಶೆಟ್ಟಿ, ಆರ್. ನರೇಂದ್ರ ಸೇರಿದಂತೆ ಕಾಂಗ್ರೆಸ್ ಜನಪ್ರತಿನಿಧಿಗಳು ಕೋವಿಡ್ ಪರಿಶೀಲನಾ ಸಭೆಯಲ್ಲಿ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದ್ದರು.

    ಈ ಎಲ್ಲಾ ಸಭೆಗಳು ಮುಗಿದ ಬಳಿಕ ಸಚಿವ ಸುರೇಶ್ ಕುಮಾರ್, ಹದಗೆಟ್ಟು ಹೋಗಿರುವ ರಾಷ್ಟ್ರೀಯ ಹೆದ್ದಾರಿ 209ಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆದರೆ ಪರಿಶೀಲನೆ ವೇಳೆಯಲ್ಲೂ ಸಚಿವ ಸುರೇಶ್ ಕುಮಾರ್ ತಮ್ಮನ್ನು ಆಹ್ವಾನಿಸದೆ ಕಡೆಗಣಿಸಿದ್ದಾರೆ ಎಂದು ಶಾಸಕ ಪುಟ್ಟರಂಗಶೆಟ್ಟಿ ಗರಂ ಆಗಿದ್ದಾರೆ.

    ಇದೇ ವೇಳೆ ಗುಂಡ್ಲುಪೇಟೆ ಶಾಸಕ ನಿರಂಜನ್ ಕುಮಾರ್ ವಿರುದ್ಧವೂ ಕೆಂಡಾಮಂಡಲವಾಗಿರುವ ಪುಟ್ಟರಂಗಶೆಟ್ಟಿ, ಇಡೀ ಜಿಲ್ಲೆಯಲ್ಲಿ ತಾನೊಬ್ಬನೇ ಶಾಸಕ ಎಂದು ನಿರಂಜನ್ ಕುಮಾರ್ ತಿಳಿದುಕೊಂಡಿದ್ದಾರೆ. ನಮ್ಮನ್ನೆಲ್ಲ ದನಕಾಯೋರು ಅನ್ಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ನಾನು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಉಡಿಗಾಲ ಕೆರೆ ತುಂಬಿಸುವ ಯೋಜನೆ ಮಾಡಿದ್ದೆ. ಆದರೆ ಯಾರನ್ನೂ ಕರೆಯದೆ ತಮಗೆ ಬೇಕಾದವರನ್ನು ಕರೆದುಕೊಂಡು ಹೋಗಿ ಉದ್ಘಾಟನೆ ಮಾಡಿದ್ದಾರೆ. ಜವಬ್ದಾರಿಯಿಂದ ತನ್ನ ಕೆಲಸ ತಾನು ಮಾಡಬೇಕು ಮುಂದಿನ ದಿನಗಳಲ್ಲಿ ಸರಿಯಾಗಿ ಹೇಳಬೇಕಾಗುತ್ತದೆ ಎಂದು ಹರಿಹಾಯ್ದಿದ್ದಾರೆ.

    ನಾನು ಕ್ಷೇತ್ರದ ಶಾಸಕ ನನ್ನ ಅಧ್ಯಕ್ಷತೆಯಲ್ಲಿ ಎಲ್ಲ ಕಾರ್ಯಕ್ರಮಗಳೂ ನಡೆಯಬೇಕು. ಶಿಷ್ಠಾಚಾರದಲ್ಲಿ ಲೋಪವಾಗದಂತೆ ನೋಡಿಕೊಳ್ಳಿ ಎಂದು ಸಚಿವ ಸುರೇಶ್ ಕುಮಾರ್ ಮಾಜಿ ಸಚಿವ ಪುಟ್ಟರಂಗಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.

  • ಪರೀಕ್ಷಾ ಕೇಂದ್ರದ ಸಿಬ್ಬಂದಿಗೆ 1 ಸಾವಿರ ಗ್ಲೌಸ್ ನೀಡಿದ ಶಾಸಕ ಪುಟ್ಟರಂಗ ಶೆಟ್ಟಿ

    ಪರೀಕ್ಷಾ ಕೇಂದ್ರದ ಸಿಬ್ಬಂದಿಗೆ 1 ಸಾವಿರ ಗ್ಲೌಸ್ ನೀಡಿದ ಶಾಸಕ ಪುಟ್ಟರಂಗ ಶೆಟ್ಟಿ

    – ನಾಳೆ ವಿದ್ಯಾರ್ಥಿಗಳಿಗೆ 5 ಸಾವಿರ ಮಾಸ್ಕ್ ವಿರತಣೆ

    ಚಾಮರಾಜನಗರ: ಇಂದಿನಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಆರಂಭವಾಗಿದ್ದು, ವಿದ್ಯಾರ್ಥಿಗಳಿಗೆ ಚಾಮರಾಜನಗರ ಕ್ಷೇತ್ರದ ಶಾಸಕ ಪುಟ್ಟರಂಗಶೆಟ್ಟಿ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಅಲ್ಲದೆ ಕೊಠಡಿ ಶಿಕ್ಷಕರಿಗೆ ಒಂದು ಸಾವಿರ ಗ್ಲೌಸ್ ನೀಡಿದ್ದಾರೆ.

    ಇದೇ ವೇಳೆ ಚಾಮರಾಜನಗರದ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಚೆನ್ನಾಗಿ ಬರೆಯುವಂತೆ ಶಾಸಕರು ಸಲಹೆ ನೀಡಿದ್ದಾರೆ. ಭಯವಿಲ್ಲದೆ ಪರೀಕ್ಷೆ ಬರೆಯುವಂತೆ ಧೈರ್ಯ ತುಂಬಿದ್ದಾರೆ. ಅಲ್ಲದೆ ಕೊಠಡಿ ಶಿಕ್ಷಕರಿಗೆ ಒಂದು ಸಾವಿರ ಗ್ಲೌಸ್ ನೀಡಿದ್ದಾರೆ.

    ಚಾಮರಾಜನಗರ ಕ್ಷೇತ್ರದ ಎಲ್ಲಾ ಪರೀಕ್ಷಾ ಸಿಬ್ಬಂದಿಗೆ ಗ್ಲೌಸ್ ನೀಡಿದ್ದಾರೆ. ನಾಳೆಯಿಂದ ವಿಧ್ಯಾರ್ಥಿಗಳಿಗೆ 5 ಸಾವಿರ ಮಾಸ್ಕ್ ವಿತರಿಸುತ್ತೇನೆಂದು ಭರಸವೆ ಕೂಡ ನೀಡಿದ್ದಾರೆ.

    ಕೊರೊನಾ ಮಹಾಮಾರಿಯ ನರ್ತನದ ನಡುವೆಯೇ ರಾಜ್ಯದಲ್ಲಿ ಇಂದಿನಿಂದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಆರಂಭವಾಗಿದೆ. ಕೊರೊನಾದಿಂದ ಮೂರು ತಿಂಗಳಿನಿಂದ ಮುಂದೂಡಿಕೆಯಾಗಿದ್ದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಇಂದಿನಿಂದ ಜುಲೈ 4ರವರೆಗೆ ನಡೆಯಲಿದೆ.

  • ಸಚಿವ ಪುಟ್ಟರಂಗಶೆಟ್ಟಿಗೆ ಸಿದ್ದರಾಮಯ್ಯ ಕ್ಲಾಸ್..!

    ಸಚಿವ ಪುಟ್ಟರಂಗಶೆಟ್ಟಿಗೆ ಸಿದ್ದರಾಮಯ್ಯ ಕ್ಲಾಸ್..!

    – ಪ್ರತಿಭಟನೆಗೆ ಬಿಜೆಪಿ ಕರೆ

    ಬೆಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ಮೇಲೆ ಮಾಜಿ ಸಿಎಂ ಸಿದ್ದರಾಮಯ್ಯ ಫುಲ್ ಗರಂ ಆಗಿದ್ದಾರೆ. ವಿಧಾನಸೌಧದಲ್ಲಿ ಪತ್ತೆಯಾದ ಅಕ್ರಮ ಹಣ ಸಚಿವ ಪುಟ್ಟರಂಗಶೆಟ್ಟಿಯದ್ದು ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ತನ್ನನ್ನು ಭೇಟಿ ಮಾಡುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಬುಲಾವ್ ನೀಡಿದ್ರು.

    ಹೀಗಾಗಿ ಶನಿವಾರ ರಾತ್ರಿ ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯರನ್ನ ಭೇಟಿ ಮಾಡಿದ ಪುಟ್ಟರಂಗಶೆಟ್ಟಿ ಒಂದು ಗಂಟೆಗಳ ಕಾಲ ಸಭೆ ನಡೆಸಿದ್ದಾರೆ. ಸಿದ್ದರಾಮಯ್ಯ ಭೇಟಿ ಬಳಿಕ ಮುಖ ಸಪ್ಪಗೆ ಮಾಡಿಕೊಂಡು ಹೊರ ಬಂದ ಪುಟ್ಟರಂಗ ಶೆಟ್ಟಿ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ತಮ್ಮ ಕಾರಿನಲ್ಲಿ ತೆರಳಿದ್ರು. ಒಂದು ಗಂಟೆಗಳ ಕಾಲ ನಡೆದ ಮಾತು ಕತೆಯಲ್ಲಿ ಸಿದ್ದರಾಮಯ್ಯ, ಪುಟ್ಟರಂಗಶೆಟ್ಟಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗ್ತಿದೆ. ಇದನ್ನೂ ಓದಿ:  ಯಾವುದೇ ತನಿಖೆಗೂ ಸಿದ್ಧ, ನನ್ನ ವಿರುದ್ಧ ಷಡ್ಯಂತ್ರ: ಪುಟ್ಟರಂಗಶೆಟ್ಟಿ

    ಬಿಜೆಪಿ ಪ್ರತಿಭಟನೆ:
    ಇತ್ತ ಸಚಿವ ಪುಟ್ಟರಂಗಶೆಟ್ಟಿ ರಾಜೀನಾಮೆಗೆ ಒತ್ತಾಯಿಸಿ ಇಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದೆ. ಕೇಂದ್ರ ಸಚಿವ ಡಿ.ವಿ ಸದಾನಂದಗೌಡ, ಪ್ರಜಾಪ್ರಭುತ್ವದ ದೇವಸ್ಥಾನದಲ್ಲಿ ಸಿಕ್ಕಿ ಹಾಕಿಕೊಂಡ ಹಣಕ್ಕೆ ಯಾರು ಜವಾಬ್ದಾರರು ಎಂಬುದು ಪ್ರಶ್ನೆ ಮಾಡಿದ್ದಾರೆ.  ಇದನ್ನೂ ಓದಿ: ವಿಧಾನಸೌಧದಲ್ಲಿ ಹಣ ಸಿಕ್ಕಿರುವುದು ಕಾಂಗ್ರೆಸ್‍ಗೆ ಪುಟುಗೋಸಿ ಡೀಲ್- ಪ್ರತಾಪ್ ಸಿಂಹ ಲೇವಡಿ

    ಸಂಬಂಧಪಟ್ಟ ಸಚಿವರು, ಸರ್ಕಾರದ ಮುಖ್ಯಸ್ಥ ಕುಮಾರಸ್ವಾಮಿ, ಸಮನ್ವಯ ಸಮಿತಿ ಮುಖ್ಯಸ್ಥ ಸಿದ್ದರಾಮಯ್ಯ, ಪುಟುಗೋಸಿ ಅಂತ ಬಿಟ್ಟು ಬಿಡಬೇಕಾ ದಿನೇಶ್ ಗುಂಡೂರಾವ್..? ಹುಚ್ಚರ ಮದುವೆಯಲ್ಲಿ ಉಂಡವನೇ ಜಾಣ.. ನಾಚಿಕೆ ಇಲ್ಲದ ಮದುವೆ ಎಂದು ದೋಸ್ತಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಹುಚ್ಚನ ಮನೇಲಿ ಉಂಡವನೇ ಜಾಣ ಅನ್ನುವಂತೆ ಸರ್ಕಾರವಿದೆ- ಶಾಸಕ ಸಿಟಿ ರವಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಾಮರಾಜನಗರ, ಕೊಳ್ಳೇಗಾಲದಲ್ಲಿ ಅತಂತ್ರ: ಸಚಿವ ಪುಟ್ಟರಂಗಶೆಟ್ಟಿಗೆ ಮುಖಭಂಗ

    ಚಾಮರಾಜನಗರ, ಕೊಳ್ಳೇಗಾಲದಲ್ಲಿ ಅತಂತ್ರ: ಸಚಿವ ಪುಟ್ಟರಂಗಶೆಟ್ಟಿಗೆ ಮುಖಭಂಗ

    ಚಾಮರಾಜನಗರ: ಕೊಳ್ಳೇಗಾಲ ಮತ್ತು ಚಾಮರಾಜನಗರ ನಗರಸಭೆ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.

    ಚಾಮರಾಜನಗರ ನಗರಸಭೆಯ 31 ಸ್ಥಾನಗಳ ಪೈಕಿ ಬಿಜೆಪಿ 15 ಸ್ಥಾನಗಳನ್ನ ಗೆಲ್ಲುವ ಮೂಲ ಅತೀದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಕಾಂಗ್ರೆಸ್ 8 ಸ್ಥಾನವನ್ನ ಪಡೆದು ಕೊಳ್ಳುವ ಮೂಲಕ 2ನೇ ಸ್ಥಾನಕ್ಕೆ ತೃಪ್ತಿ ಪಟ್ಟು ಕೊಂಡಿದೆ. ಉಳಿದಂತೆ ಎಸ್‍ಡಿಪಿಐ 6, ಬಿಎಸ್‍ಪಿ 1 ಮತ್ತು ಪಕ್ಷೇತರವಾಗಿ 1 ಇಬ್ಬರು ಅಭ್ಯರ್ಥಿಗಳು ಜಯಗಳಿಸಿದ್ದಾರೆ.

    ಇದರೊಂದಿಗೆ ಎರಡನೇ ಬಾರಿಗೆ ಚಾಮರಾಜನಗರ ನಗರಸಭೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದಂತಾಗಿದೆ. ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲು 1 ಸ್ಥಾನದ ಅವಶ್ಯಕತೆ ಇದ್ದು ಏನೂ ಮಾಡಲಿದೆ ಎನ್ನುವುದು ಸದ್ಯದ ಕುತೂಹಲ. ಕಾಂಗ್ರೆಸ್ ಹೀನಾಯ ಸ್ಥಿತಿ ಅನುಭವಿಸಿದ್ದು ಸಚಿವ ಸಿ.ಪುಟ್ಟರಂಗಶೆಟ್ಟಿ ಭಾರೀ ಮುಖಭಂಗ ಅನುಭವಿಸಿದ್ದಾರೆ.

    ಕೊಳ್ಳೇಗಾಲ ನಗರಸಭೆಯ 30 ಸ್ಥಾನಗಳ ಪಲಿತಾಂಶ ಹೊರ ಬಂದಿದೆ. ಇವುಗಳಲ್ಲಿ 11 ಸ್ಥಾನವನ್ನ ಪಡೆದ ಕಾಂಗ್ರೆಸ್ ಪ್ರಥಮ ಸ್ಥಾನ ಪಡೆದು ಕೊಂಡಿದೆ. ಬಿಎಸ್ ಪಿ 9 ಸ್ಥಾನ ಪಡೆದು ಕೊಳ್ಳುವ ಮೂಲಕ 2ನೇ ಸ್ಥಾನಕ್ಕೆ ತೃಪ್ತಿ ಪಟ್ಟು ಕೊಂಡಿದೆ. ಉಳಿದಂತೆ ಬಿಜೆಪಿ 6, ಪಕ್ಷೇತರವಾಗಿ 4 ಮಂದಿ ಆಯ್ಕೆಯಾಗಿ ಅತಂತ್ರ ನಗರಸಭೆ ನಿರ್ಮಾಣ ಆಗಿದೆ. ಕಳೆದ ಬಾರಿ ಕಾಂಗ್ರೆಸ್ 20 ಸ್ಥಾನ ಗೆಲ್ಲುವ ಮೂಲಕ ಅಧಿಕಾರ ನಡೆಸಿತ್ತು. ಈ ಬಾರಿ 9 ಸ್ಥಾನ ಕಳೆದು ಕೊಂಡಿದೆ. ಕಾಂಗ್ರೆಸ್ ಮತ್ತು ಬಿಎಸ್ ಪಿ ಒಟ್ಟು ಸೇರಿ ಅಧಿಕಾರ ನಡೆಸುವ ಸಾಧ್ಯತೆ ದಟ್ಟವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗಿರಿಜನರನ್ನು ಬೆದರಿಸಿ ಮಹಿಳಾ ಅಧಿಕಾರಿ ವಿರುದ್ಧ ಕೈ ಶಾಸಕ ಪುಟ್ಟರಂಗಶೆಟ್ಟಿಯಿಂದ ಪ್ರತಿಭಟನೆ

    ಗಿರಿಜನರನ್ನು ಬೆದರಿಸಿ ಮಹಿಳಾ ಅಧಿಕಾರಿ ವಿರುದ್ಧ ಕೈ ಶಾಸಕ ಪುಟ್ಟರಂಗಶೆಟ್ಟಿಯಿಂದ ಪ್ರತಿಭಟನೆ

    ಚಾಮರಾಜನಗರ: ಶಾಸಕ ಪುಟ್ಟರಂಗಶೆಟ್ಟಿ ಅವರು ಮಹಿಳಾ ಅಧಿಕಾರಿಗೆ ನೀಡಿರುವ ಮಾನಸಿಕ ಕಿರುಕುಳ ಆರೋಪವನ್ನು ಮುಚ್ಚಿ ಹಾಕಲು, ಗಿರಿಜನರನ್ನು ಬೆದರಿಸಿ ಚಾಮರಾಜನಗರಕ್ಕೆ ಕರೆತಂದು ಅಧಿಕಾರಿ ವಿರುದ್ಧ ಪ್ರತಿಭಟನೆ ಮಾಡಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.

    ಚಾಮರಾಜನಗರ ವಿಧಾನ ಸಭಾ ಕ್ಷೇತ್ರದ ಶಾಸಕ ಪುಟ್ಟರಂಗಶೆಟ್ಟಿ ಅವರು ನನಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ಮಹಿಳಾ ಅಧಿಕಾರಿ ಸರಸ್ವತಿ ಅವರು ಆರೋಪ ಮಾಡಿದ್ದರು. ಈ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ವಿಸ್ತೃತ ವರದಿಯಾಗಿತ್ತು. ಮಂಗಳವಾರ ಚಾಮರಾಜನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಗಿರಿಜನರು ಸರಸ್ವತಿ ಅವರ ವಿರುದ್ಧ ಘೋಷಣೆ ಕೂಗಿದ್ದರು. ಇದನ್ನು ನೋಡಿದವರು ಸರಸ್ವತಿ ಅವರು ಭ್ರಷ್ಟ ಅಧಿಕಾರಿ ಇರಬಹುದು ಎಂದುಕೊಂಡಿದ್ದರು. ಆದರೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರನ್ನು ಮಾತನಾಡಿಸಿದಾಗ ಇದು ಶಾಸಕ ಪುಟ್ಟರಂಗಶೆಟ್ಟಿ ಅವರ ಕುತಂತ್ರ ಎಂಬುದು ಬಯಲಾಗಿದೆ.

    ಚಾಮರಾಜನಗರದಲ್ಲಿ ಒಂದು ಸಭೆ ಇದೆ ಅಲ್ಲಿಗೆ ಬನ್ನಿ ಎಂದು ಪುಟ್ಟರಂಗಶೆಟ್ಟಿ ಅವರ ಬಂಟರು ಗಿರಿಜನರನ್ನು ಕರೆದಿದ್ದು, ಇದಕ್ಕೆ ಒಪ್ಪದ ಗಿರಿಜನರು ನಾವು ಬರುವುದಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಅವರು ನೀವು ಬರಲಿಲ್ಲ ಎಂದರೆ ನಿಮ್ಮ ಮನೆಗಳನ್ನು ಕೆಡುವುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಇದಕ್ಕೆ ದಿಕ್ಕು ತೋಚದ ಜನರು ಚಾಮರಾಜನಗರದಲ್ಲಿ ಸಭೆ ಇದೆ ಎಂದು ಬಂದಿದ್ದಾರೆ. ನಗರಕ್ಕೆ ಬಂದ ಮೇಲೆ ಎಲ್ಲರೂ ಸರಸ್ವತಿ ಅವರ ವಿರುದ್ಧ ಪ್ರತಿಭಟನೆ ಮಾಡಬೇಕು ಎಂದು ಹೆದರಿಸಿದ್ದಾರೆ. ಇದಕ್ಕೆ ಹೆದರಿದ ಗಿರಿಜನರು ಸರಸ್ವತಿ ಅವರ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ.

    ಸರಸ್ವತಿ ಮೇಡಂ ನಮಗೆ ಒಳ್ಳೆಯ ಕೆಲಸ ಮಾಡಿದ್ದಾರೆ. ಈ ಮೊದಲೇ ವಿಷಯ ತಿಳಿದಿದ್ದರೆ ನಾವು ಪ್ರತಿಭಟನೆಗೆ ಹೋಗುತ್ತಿರಲಿಲ್ಲ ಎಂದು ಪ್ರತಿಭಟನೆಯಲ್ಲಿ ಭಾಗಿಯಾದವರು ಹೇಳುತ್ತಾರೆ.