Tag: ಪುಟ್ಟರಂಗಶೆಟ್ಟಿ

  • ಆಪರೇಷನ್ ಕಮಲಕ್ಕೆ ಸಿಕ್ಕಿ ಜಗ್ಗೇಶ್ ರಾಜಕೀಯ ಭವಿಷ್ಯ ಹಾಳಾಯ್ತು: ಸಚಿವ ಪುಟ್ಟರಂಗಶೆಟ್ಟಿ

    ಆಪರೇಷನ್ ಕಮಲಕ್ಕೆ ಸಿಕ್ಕಿ ಜಗ್ಗೇಶ್ ರಾಜಕೀಯ ಭವಿಷ್ಯ ಹಾಳಾಯ್ತು: ಸಚಿವ ಪುಟ್ಟರಂಗಶೆಟ್ಟಿ

    ರಾಯಚೂರು: ಆಪರೇಷನ್ ಕಮಲಕ್ಕೆ ಒಳಗಾದ ತುರುವೆಕೆರೆ ಮಾಜಿ ಶಾಸಕ ಜಗ್ಗೇಶ್ ಅವರ ರಾಜಕೀಯ ಭವಿಷ್ಯವೇ ಹಾಳಾಗಿದೆ. ಕಾಂಗ್ರೆಸ್ ಶಾಸಕರು ಯಾವುದೇ ಕಾರಣಕ್ಕೂ ಬಿಜೆಪಿ ಸೇರುವುದಿಲ್ಲ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಸಚಿವರು, ಮಾಜಿ ಶಾಸಕ ಸಿ.ಪಿ.ಯೋಗಿಶ್ವರ್ ಬಿಜೆಪಿ ಸೇರುವಂತೆ ಆಮಿಷ ಒಡ್ಡಿದ್ದರು. ಆದರೆ ನಾನು ಅವರ ಆಮಿಷಕ್ಕೆ ಒಳಗಾಗಿಲ್ಲ. ನಾನು ಬಿಜೆಪಿ ಸೇರಲ್ಲ ಅಂತ ಯೋಗಿಶ್ವರ್‍ಗೆ ಬೈದಿದ್ದೇನೆ. ಚುನಾವಣೆಗೆ ಮುನ್ನವೇ ನನಗೆ ಒತ್ತಾಯಿಸಿ, ಸಚಿವ ಸ್ಥಾನ ಕೊಡುವುದಾಗಿ ಆಮಿಷ ಒಡ್ಡಿದ್ದರು. ಅಂದು ಬೈದಿದ್ದಕ್ಕೆ ಈಗ ಯೋಗಿಶ್ವರ್ ನನ್ನನ್ನ ಸಂಪರ್ಕಿಸಿಲ್ಲ ಎಂದು ತಿಳಿಸಿದರು.

    ಬಿಜೆಪಿಯವರು ಸರ್ಕಾರ ಅತಂತ್ರಗೊಳಿಸುವ ಕೆಲಸ ಮಾಡಬಾರದು. ಬಿಜೆಪಿಯಿಂದ ನಮಗೆ ಯಾವುದೇ ಭಯವಿಲ್ಲ. ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಶಾಸಕ ಸತೀಶ್ ಜಾರಕಿಹೊಳಿ ಸಹೋದರರು ಪಕ್ಷ ಬಿಟ್ಟು ಹೋಗುವುದಿಲ್ಲ ಎಂದ ಸಚಿವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಬಯಕೆ ವ್ಯಕ್ತಪಡಿಸಿದ್ದರು. ಅದಕ್ಕೂ ಬೆಳಗಾವಿ ಗೊಂದಲಕ್ಕೂ ಸಂಬಂಧವಿಲ್ಲ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನನಗೆ ಈಗಲೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಗಳು: ಸಚಿವ ಪುಟ್ಟರಂಗ ಶೆಟ್ಟಿ

    ನನಗೆ ಈಗಲೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಗಳು: ಸಚಿವ ಪುಟ್ಟರಂಗ ಶೆಟ್ಟಿ

    ದಾವಣಗೆರೆ: ನನಗೆ ಈಗಲೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಗಳು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಪುಟ್ಟರಂಗಶೆಟ್ಟಿ ನಗರದಲ್ಲಿ ಹೇಳಿಕೆ ನೀಡಿದ್ದಾರೆ.

    ನಗರದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯನವರು ನನಗೆ ಪಕ್ಷದಲ್ಲಿ ಟಿಕೆಟ್ ಕೊಡಿಸಿ ಗೆಲ್ಲುವಂತೆ ಮಾಡಿದ್ದಾರೆ. ಅವರು ಉಪ್ಪಾರ ಜನಾಂಗಕ್ಕೆ ಹಲವು ಸೌಲಭ್ಯಗಳನ್ನು ಸಹ ಕಲ್ಪಿಸಿಕೊಟ್ಟಿರುವುದರಿಂದ ನನಗೆ ಯಾವಾಗಲೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಗಳು ಎಂದು ಹೇಳಿದರು.

    ಕೇವಲ ನಾನು ಜಿಲ್ಲಾ ಪಂಚಾಯತ್ ಅಧ್ಯಕ್ಷ ಹುದ್ದೆ ಸಾಕು ಎಂದುಕೊಂಡಿದ್ದ ನನಗೆ ಅವರು, ಸಚಿವರನ್ನಾಗಿ ಮಾಡಿದ್ದಾರೆ. ನಾನು ಸಚಿವನಾದ ಕೀರ್ತಿಯು ಕೇವಲ ಸಿದ್ದರಾಮಯ್ಯನವರಿಗೆ ಸಲ್ಲಿಸುತ್ತದೆ. ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆದರೆ ನನಗೆ ಎಂದಿಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಗಳು ಎಂದು ತಿಳಿಸಿದರು.

    ಇಂದು ರಾಜ್ಯದಲ್ಲಿ ಹಿಂದುಳಿದ ಜನಾಂಗದವರು ಮುಂದುವರಿಯುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ನಮ್ಮ ನಾಯಕರಾದ ಸಿದ್ದರಾಮಯ್ಯನವರ ಅಭಿವೃದ್ಧಿ ಕಾರ್ಯಗಳೇ. ನಾನು ಹಿಂದುಳಿದ ಇಲಾಖೆಯಲ್ಲಿ ಸಲ್ಲಿಸುವ ಪ್ರತಿಯೊಂದು ಸೇವೆಯ ಕೀರ್ತಿಯು ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ ಎಂದು ಹಾಡಿ ಹೊಗಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಅಧಿಕಾರ ಬಂದ ಮೇಲೆ ಎಲ್ಲರು ಕಣ್ಣಿಗೆ ಕಾಣ್ತಿದ್ದಾರಾ? ಪುಟ್ಟರಂಗ ಶೆಟ್ಟಿಗೆ ಮಾಜಿ ಸಿಎಂ ಪ್ರಶ್ನೆ

    ಅಧಿಕಾರ ಬಂದ ಮೇಲೆ ಎಲ್ಲರು ಕಣ್ಣಿಗೆ ಕಾಣ್ತಿದ್ದಾರಾ? ಪುಟ್ಟರಂಗ ಶೆಟ್ಟಿಗೆ ಮಾಜಿ ಸಿಎಂ ಪ್ರಶ್ನೆ

    ಮೈಸೂರು: ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ಅವರಿಗೆ ನಗುತ್ತಲೇ ಮಾಜಿ ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

    ಪುಟ್ಟರಂಗಶೆಟ್ಟಿ ಅವರು ಸಿದ್ದರಾಮಯ್ಯನವರ ಮನೆಗೆ ಭೇಟಿ ಮಾಡಲು ಬಂದಾಗ, “ಏನ್ ಪುಟ್ಟರಂಗ ಶೆಟ್ಟರೇ ಅಧಿಕಾರ ಸ್ವೀಕಾರ ಮಾಡಿದ್ರಾ? ಅಧಿಕಾರಿಗಳ ಜೊತೆ ಸಭೆ ನಡೆಸಿದ್ರಾ? ಎಂದು ಮಾಜಿ ಸಿಎಂ ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ, ಅಧಿಕಾರ ತೆಗೆದುಕೊಂಡಿದ್ದೀನಿ ಸಭೆ ನಡೆಸಿಲ್ಲ ಎಂದು ಉತ್ತರಿಸಿದ್ದಾರೆ.

    ಅಧಿಕಾರ ಬಂದ ಮೇಲೆ ಎಲ್ಲರು ಕಣ್ಣಿಗೆ ಕಾಣ್ತಿದ್ದಾರಾ ಅಥವಾ ಇಲ್ವಾ?. ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು. ಅಲ್ಲದೇ ಸಿರಿ ಬಂದೋರಿಗೆ ಜನ ಕಣ್ಣಿಗೆ ಕಾಣೋಲ್ಲ ಎಂಬ ಮಾತಿದೆ. ನೀವು ಆ ರೀತಿ ಆಗಬೇಡಿ ಎಂದು ಜನಪರ ಕೆಲಸಗಳನ್ನು ಮಾಡಿ ಎಂದು ಸಲಹೆ ನೀಡಿದರು.

  • Exclusive: ಮಹಿಳಾ ಅಧಿಕಾರಿಗೆ ಚಾಮರಾಜನಗರ ಕಾಂಗ್ರೆಸ್ ಶಾಸಕನಿಂದ ಮಾನಸಿಕ ಕಿರುಕುಳ!

    Exclusive: ಮಹಿಳಾ ಅಧಿಕಾರಿಗೆ ಚಾಮರಾಜನಗರ ಕಾಂಗ್ರೆಸ್ ಶಾಸಕನಿಂದ ಮಾನಸಿಕ ಕಿರುಕುಳ!

    ಚಾಮರಾಜನಗರ: ಸಿಎಂ ಸಂಸದೀಯ ಕಾರ್ಯದರ್ಶಿ ಹಾಗೂ ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ಮಹಿಳಾ ಅಧಿಕಾರಿಯೊಬ್ಬರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

    ಶಾಸಕರು ಸಣ್ಣ ಸಣ್ಣ ವಿಚಾರಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಜಿಲ್ಲಾ ಸಮಾಜಕಲ್ಯಾಣ ಇಲಾಖೆ ಮಹಿಳಾ ಅಧಿಕಾರಿಯಾಗಿರುವ ಸರಸ್ವತಿ ಆರೋಪಿಸಿದ್ದಾರೆ.

    ಶಾಸಕ ಪುಟ್ಟರಂಗೇಗೌಡ ಅಧಿಕಾರಿಯನ್ನು ದುರುಪಯೋಗ ಮಾಡಿಕೊಳ್ಳಲು ಮುಂದಾಗಿದ್ದು, ಇದಕ್ಕೆ ನಾನು ನಿರಾಕರಿಸಿದ್ದಕ್ಕೆ ಪ್ರತಿನಿತ್ಯವೂ ಒಂದೆಲ್ಲಾ ಒಂದು ಕಾರಣ ಇಟ್ಟುಕೊಂಡು ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಸರಸ್ವತಿ ಹೇಳಿದ್ದಾರೆ.

    ವರ್ಗಾವಣೆಗೆ ಒತ್ತಡ: ಮಹಿಳಾ ಅಧಿಕಾರಿಯನ್ನು ಜಿಲ್ಲೆಯಿಂದ ವರ್ಗಾಯಿಸಲು ಶಾಸಕ ಪುಟ್ಟರಂಗಶೆಟ್ಟಿ ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದಾರೆ. ಸರ್ಕಾರಿ ಯೋಜನೆಯನ್ನು ತಿರುಚುವಂತೆ ಒತ್ತಡ ಹೇರುತ್ತಿರುವ ಶಾಸಕ, ಕಾರಣವಿಲ್ಲದೇ ಮಹಿಳಾ ಅಧಿಕಾರಿ ವಿರುದ್ಧ ಕ್ಯಾತೆ ತೆಗೆಯುತ್ತಿದ್ದಾರಂತೆ. ಇದರಿಂದ ಕಾಂಗ್ರೆಸ್ ಶಾಸಕರು ಅಧಿಕಾರಿಗಳು ಮೇಲೆ ಹೇರುತ್ತಿರುವ ಕಿರುಕುಳ ಮತ್ತಷ್ಟು ಹೆಚ್ಚುತ್ತಿದೆ.

    ಧ್ವನಿ ಎತ್ತಲು ಆಗುತ್ತಿಲ್ಲ: ಶಾಸಕರ ಕಿರುಕುಳದಿಂದ ರೋಸಿ ಹೋಗಿರುವ ಅಧಿಕಾರಿ ಶಾಸಕರ ವಿರುದ್ಧ ಧ್ವನಿ ಎತ್ತಲು ಸಾಧ್ಯವಾಗುತ್ತಿಲ್ಲ. ಒಂದು ಹಂತದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗೆ ದೂರನ್ನು ನೀಡಲು ಮುಂದಾಗಿದ್ದರು. ಆದರೆ ಮಹಿಳಾ ಅಧಿಕಾರಿ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲದೆ ದೂರನ್ನು ನೀಡದೆ ಅಸಹಾಯಕಿಯಾಗಿ ಈಗ ನಿಂತಿದ್ದಾರೆ.

    “ಮೆಂಟಲಿ ತುಂಬಾ ಟಾರ್ಚರ್ ಆಗ್ತಿದೆ. ಅವರು ಯಾರು ಹೇಳಿದ್ರೂ ಕೇಳುತ್ತಿಲ್ಲ. ನಾನು ಟ್ರಾನ್ಫರ್ ತಗೊಂಡು 2 ವರ್ಷ ಆಯ್ತು. ಈಗ ನನನ್ನು ಟ್ರಾನ್ಫರ್ ಮಾಡ್ತಾರೆ. ಮಧ್ಯದಲ್ಲೇ ನಾವು ಕೇಳಿದ್ರೆ ಟ್ರಾನ್ಫರ್ ಸಿಗಲ್ಲ. ಅವರು ಮಿನಿಸ್ಟರ್‍ಗೆ ಲೆಟರ್ ಕೊಟ್ಟಿದ್ದಾರೆ. ಖಾದರ್ ಸರ್‍ಗೆ ಲೆಟರ್ ಕೊಟ್ಟಿದ್ದಾರೆ. ಎಲ್ಲರಿಗೂ ಲೆಟರ್ ಕೊಟ್ಟು ನನ್ನನ್ನು ಟ್ರಾನ್ಫರ್ ಮಾಡಿಸ್ಬೇಕು ಅಂತ ಹೇಳಿದ್ದಾರೆ. ತುಂಬಾ ಟಾರ್ಚರ್ ಆಗ್ತಿದೆ. ಇದು ಈಗಿನದ್ದಲ್ಲ, ಕಳೆದ 7 ತಿಂಗಳಿಂದ ನಡೆಯುತ್ತಿದೆ”
    ಸರಸ್ವತಿ, ಜಿಲ್ಲಾ ಸಮಾಜಕಲ್ಯಾಣ ಇಲಾಖೆ ಮಹಿಳಾ ಅಧಿಕಾರಿ

     

    https://youtu.be/685txtxb4Bc