Tag: ಪುಟ್ಟಣ್ಣ

  • ಪುಟ್ಟಣ್ಣ ಗೆಲುವು ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆ ಜನರ ಮನಸ್ಥಿತಿಗೆ ಸಾಕ್ಷಿ: ಡಿಕೆಶಿ

    ಪುಟ್ಟಣ್ಣ ಗೆಲುವು ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆ ಜನರ ಮನಸ್ಥಿತಿಗೆ ಸಾಕ್ಷಿ: ಡಿಕೆಶಿ

    ಬೆಂಗಳೂರು: ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ (Vidhan Parishad By Election)  ಕಾಂಗ್ರೆಸ್ ಅಭ್ಯರ್ಥಿ ಗೆಲುವು ಕೇವಲ ಆರಂಭವಷ್ಟೇ. ಲೋಕಸಭೆ ಚುನಾವಣೆಯಲ್ಲಿ (Lok Sabha Election) ಜನರ ಮನಸ್ಥಿತಿ ಏನು ಎಂಬುದಕ್ಕೆ ಈ ಫಲಿತಾಂಶ ಸಾಕ್ಷಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಿಜೆಪಿ (BJP) ಹಾಗೂ ಜೆಡಿಎಸ್ (JDS) ನಾಯಕರು ಈ ಚುನಾವಣೆಯನ್ನು ರಾಜ್ಯ ರಾಜಕೀಯದ, ಮುಂದಿನ ಲೋಕಸಭೆ ಚುನಾವಣೆಯ ದಿಕ್ಸೂಚಿ ಎಂದು ಬಣ್ಣಿಸುತ್ತಿದ್ದರು. ಇಂದು ಪ್ರಜ್ಞಾವಂತ ಶಿಕ್ಷಕರು ಕಾಂಗ್ರೆಸ್ (Congress) ಅಭ್ಯರ್ಥಿ ಪುಟ್ಟಣ್ಣ (Puttanna) ಅವರಿಗೆ ಹೆಚ್ಚಿನ ಮತ ನೀಡಿ ಗೆಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಪುಟ್ಟಣ್ಣ ಅವರಿಗೆ ಅಭಿನಂದನೆ ಹಾಗೂ ಮತದಾರರಿಗೆ ಧನ್ಯವಾದ ಸಲ್ಲಿಸುತ್ತೇನೆ. ರಾಜ್ಯ ಹಾಗೂ ಸರ್ಕಾರಕ್ಕೆ ಇಂದು ವಿಶೇಷವಾದ ದಿನ ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಗಂಡಸರು ಎಂದು ಹೇಳಿಕೊಳ್ಳೋ ಬಿಜೆಪಿಯವ್ರು ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಬಿಡುಗಡೆ ಮಾಡಿಸಿ: ಹೆಚ್.ಸಿ ಬಾಲಕೃಷ್ಣ

    ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆ ನಡೆದಿದೆ. ಹಿಂದೆ ಪುಟ್ಟಣ್ಣ ಅವರೇ ಬಿಜೆಪಿಯಿಂದ ಗೆದ್ದಿದ್ದರು. ಅದು ಬಿಜೆಪಿಯ ಕ್ಷೇತ್ರವಾಗಿತ್ತು. ಆದರೆ ಅವರು ಈ ಮೈತ್ರಿಯಿಂದ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟು, ಮೈತ್ರಿ ಮಾಡಿಕೊಂಡು ಅಭ್ಯರ್ಥಿ ಕಣಕ್ಕಿಳಿಸಿದ್ದರು. ಪುಟ್ಟಣ್ಣ ಅವರು ಸತತವಾಗಿ ಐದನೇ ಬಾರಿಗೆ ಗೆದ್ದಿದ್ದಾರೆ. ಅವರು ಶಿಕ್ಷಕರು ಹಾಗೂ ಶಿಕ್ಷಣ ಕ್ಷೇತ್ರದ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಬೆಳಗಾವಿಯಲ್ಲಿ ಪ್ರಕಾಶ್ ಹುಕ್ಕೇರಿ, ಮಂಡ್ಯದಲ್ಲಿ ಮಧು ಮಾದೇಗೌಡ ಅವರು ಗೆದ್ದಿದ್ದರು. ಈ ಫಲಿತಾಂಶದ ಮೂಲಕ ವಿದ್ಯಾವಂತ ಹಾಗೂ ಪ್ರಜ್ಞಾವಂತ ಮತದಾರರು ರಾಜ್ಯದಲ್ಲಿ ಬದಲಾವಣೆ ಬಯಸಿ ಕಾಂಗ್ರೆಸ್ ಪಕ್ಷದ ಪರವಾಗಿ ನಿಂತಿದ್ದಾರೆ. ಇದು ಹೆಮ್ಮೆ ತಂದಿದ್ದು, ಇವರ ಸೇವೆ ನಾವು ಮಾಡುತ್ತೇವೆ ಎಂದರು. ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಮತದಾರ ಒಪ್ಪಿಲ್ಲ: ಸಿದ್ದರಾಮಯ್ಯ

    ಪುಟ್ಟಣ್ಣ ಅವರು ಶಿಕ್ಷಕರ ಪರವಾಗಿ ಎತ್ತುವ ಧ್ವನಿಗೆ ನಾವು ಆದ್ಯತೆ ನೀಡುತ್ತೇವೆ. ನಮ್ಮ ಸರ್ಕಾರ ಈಗಾಗಲೇ ನಿರುದ್ಯೋಗ ಪದವೀಧರರಿಗೆ ಯುವನಿಧಿ ಮೂಲಕ ನಿರುದ್ಯೋಗ ಭತ್ಯೆ ನೀಡುತ್ತಿದೆ. ನಮಗೆ ಬೆಂಬಲವಾಗಿ ನಿಂತ ಕಾರ್ಯಕರ್ತರು, ಶಿಕ್ಷಣ ಆಡಳಿತ ಮಂಡಳಿಗಳು, ಮುಖಂಡರಿಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಹಿರಿಯ ಐಪಿಎಸ್ ಅಧಿಕಾರಿ ಪ್ರತಾಪ್ ರೆಡ್ಡಿ ಸ್ವಯಂ ನಿವೃತ್ತಿ ಘೋಷಣೆ

    ಅಧಿಕಾರಿಗಳ ದುರ್ಬಳಕೆಯಾಗಿದೆ ಎಂಬ ಮೈತ್ರಿ ಅಭ್ಯರ್ಥಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸೋತವರು ಏನು ಹೇಳಲು ಸಾಧ್ಯ? ಬಿದ್ದರು ಮೀಸೆ ಮಣ್ಣಾಗಲಿಲ್ಲ ಎಂಬ ಗಾದೆ ಇದೆ. ಅವರು ಎಲ್ಲಾ ಪ್ರಯತ್ನ ಮಾಡಿದ್ದಾರೆ ಎಂದರು. ರಾಜ್ಯಸಭೆ ಚುನಾವಣೆಗೆ ಆಮಿಷ ನೀಡುತ್ತಿರುವ ಬಗ್ಗೆ ಕಾಂಗ್ರೆಸ್ ಶಾಸಕರು ಚುನಾವಣಾ ಆಯೋಗಕ್ಕೆ ದೂರು ನೀಡಿರುವ ಬಗ್ಗೆ ಕೇಳಿದಾಗ, ನನಗೂ ಈ ವಿಚಾರವಾಗಿ ಮಾಹಿತಿ ಬಂದಿವೆ. ತನಿಖಾ ತಂಡ ಇದರ ತನಿಖೆ ಮಾಡಲಿದೆ ಎಂದು ತಿಳಿಸಿದರು. ಇದನ್ನೂ ಓದಿ: 70 ವರ್ಷಗಳ ಕಾಂಗ್ರೆಸ್ ದುರಾಡಳಿತದಿಂದ ಭಾರತ ಪ್ರಗತಿ ಕಂಡಿಲ್ಲ: ಜಗದೀಶ್ ಶೆಟ್ಟರ್

  • ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಮತದಾರ ಒಪ್ಪಿಲ್ಲ: ಸಿದ್ದರಾಮಯ್ಯ

    ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಮತದಾರ ಒಪ್ಪಿಲ್ಲ: ಸಿದ್ದರಾಮಯ್ಯ

    – ಪರಿಷತ್ ಉಪಚುನಾವಣೆಯಲ್ಲಿ ಸೋತ ಮೈತ್ರಿ ಅಭ್ಯರ್ಥಿ; ಸಿಎಂ ಟಾಂಗ್
    – ಈ ಅಪವಿತ್ರ ಮೈತ್ರಿಗೆ ಗ್ಯಾರಂಟಿ, ವಾರೆಂಟಿ ಯಾವುದೂ ಇಲ್ಲ

    ಬೆಂಗಳೂರು: ಬಿಜೆಪಿ (BJP) ಮತ್ತು ಜೆಡಿಎಸ್ (JDS) ನಾಯಕರ ನಡುವೆ ಮೈತ್ರಿಯಾಗಿದೆಯೇ ವಿನಃ ಇದಕ್ಕೆ ಮತದಾರರ ಒಪ್ಪಿಗೆ ಇಲ್ಲ ಎಂಬುದನ್ನು ವಿಧಾನ ಪರಿಷತ್ ಉಪಚುನಾವಣೆ (Vidhan Parishad By-Election) ಫಲಿತಾಂಶ ಸ್ಪಷ್ಟಪಡಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

    ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ನ ಜಾತ್ಯತೀತ ಮುಖವಾಡ ಕಳಚಿದೆ. ಜೆಡಿಎಸ್‌ನ ಕೋಮುವಾದಿ ಅವತಾರಕ್ಕೆ ಮತದಾರ ಕಪಾಳಮೋಕ್ಷ ಮಾಡಿದ್ದಾನೆ. ವಿಧಾನಪರಿಷತ್‌ನ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಜಯಗಳಿಸಿರುವ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣನವರಿಗೆ (Puttanna) ಅಭಿನಂದನೆಗಳು. ಇದು ನಮ್ಮ ಸರ್ಕಾರದ 9 ತಿಂಗಳ ಜನಪರವಾದ ಆಡಳಿತ ಮತ್ತು ಸರ್ಕಾರದ ಬಗ್ಗೆ ಪ್ರಜ್ಞಾವಂತ ಮತದಾರರು ಇಟ್ಟಿರುವ ವಿಶ್ವಾಸದ ಗೆಲುವಾಗಿದೆ ಎಂದರು. ಇದನ್ನೂ ಓದಿ: ಇಡಿ, ಐಟಿಯನ್ನು ಮೋದಿ, ಅಮಿತ್ ಶಾ ಕಂಟ್ರೋಲ್ ಮಾಡುತ್ತಿದ್ದಾರೆ: ಮಲ್ಲಿಕಾರ್ಜುನ್ ಖರ್ಗೆ

    ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒಟ್ಟಾಗಿ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಹೊರತಾಗಿಯೂ ಸೋಲು ಕಂಡಿವೆ. ಇದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು, ಕುಮಾರಸ್ವಾಮಿ ಹಾಗೂ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರ ನಡುವಿನ ಮೈತ್ರಿಯೇ ಹೊರತು ಎರಡೂ ಪಕ್ಷಗಳ ಮತದಾರರ ನಡುವಿನ ಮೈತ್ರಿಯಲ್ಲ ಎಂಬುದು ಸಾಬೀತಾಗಿದೆ ಎಂದು ಟೀಕೆ ಮಾಡಿದರು. ಇದನ್ನೂ ಓದಿ: ಸರಿಯಾದ ಮಾದರಿಯಲ್ಲಿ ಮನವಿ ಸಲ್ಲಿಸಿ, ಕೇಂದ್ರದ ಅನುದಾನ ಬರುತ್ತದೆ: ಕಾಂಗ್ರೆಸ್‌ಗೆ ಬೊಮ್ಮಾಯಿ ಠಕ್ಕರ್

    ಕುಟುಂಬದ ಹಿತಕ್ಕಾಗಿ ಕೋಮುವಾದಿಗಳ ಜೊತೆ ಕೈಜೋಡಿಸಿರುವ ಜೆಡಿಎಸ್ ಪಕ್ಷವನ್ನು ಹಾಗೂ ಸದಾಕಾಲ ಕುಟುಂಬ ರಾಜಕಾರಣದ ವಿರುದ್ಧ ಟೀಕೆ ಮಾಡಿ, ಒಂದು ಕುಟುಂಬವೇ ರಾಜಕೀಯ ಪಕ್ಷದಂತಿರುವ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡ ಬಿಜೆಪಿಯನ್ನು ಮತದಾರ ಬಂಧುಗಳ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಪರಿಷತ್ ಉಪಚುನಾವಣೆಯಲ್ಲಿ ‘ಕೈ’ ಅಭ್ಯರ್ಥಿ ಪುಟ್ಟಣ್ಣಗೆ ಗೆಲುವು; ಬಿಜೆಪಿ-ಜೆಡಿಎಸ್ ಮೈತ್ರಿಗೆ ಮುಖಭಂಗ

    ಸ್ವಾರ್ಥ ಸಾಧನೆಯೊಂದೇ ಗುರಿಯಾಗಿರುವ ಈ ಅಪವಿತ್ರ ಮೈತ್ರಿಗೆ ಗ್ಯಾರಂಟಿ, ವಾರೆಂಟಿ ಯಾವುದೂ ಇಲ್ಲ. ಲೋಕಸಭಾ ಚುನಾವಣೆ (Lok Sabha Election) ಬಳಿಕ ಕುಮಾರಸ್ವಾಮಿ ಮತ್ತವರ ಕುಟುಂಬ ಕೇಸರಿಶಾಲು ಕಿತ್ತೆಸೆಯುವುದು ನಿಶ್ಚಿತ ಎಂದು ಟಾಂಗ್ ನೀಡಿದರು. ಇದನ್ನೂ ಓದಿ: ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ರಾಜ್ಯಸಭೆಗೆ ಅವಿರೋಧ ಆಯ್ಕೆ

  • ಬಿಜೆಪಿಗೆ ಮತ್ತೆ ಮುಜುಗರ – ಕಾಂಗ್ರೆಸ್‌ ಅಭ್ಯರ್ಥಿ ಪರ ಎಸ್‌ಟಿ ಸೋಮಶೇಖರ್‌ ಬಹಿರಂಗ ಪ್ರಚಾರ

    ಬಿಜೆಪಿಗೆ ಮತ್ತೆ ಮುಜುಗರ – ಕಾಂಗ್ರೆಸ್‌ ಅಭ್ಯರ್ಥಿ ಪರ ಎಸ್‌ಟಿ ಸೋಮಶೇಖರ್‌ ಬಹಿರಂಗ ಪ್ರಚಾರ

    ಬೆಂಗಳೂರು: ಯಶವಂತಪುರದ (Yeshwanthpur) ಬಿಜೆಪಿ ಶಾಸಕ ಎಸ್‌ಟಿ ಸೋಮಶೇಖರ್‌ (ST Somashekhar) ಅವರು ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆಗೆ ಪುಟ್ಟಣ್ಣ (Puttanna) ಪರ ಮತಯಾಚನೆ ಮಾಡಿದ್ದಾರೆ.

    ಯಶವಂತಪುರ ವಿಧಾನಸಭಾ ಕ್ಷೇತ್ರದ ಶಿಕ್ಷಕರ (Teacher) ಜೊತೆ ಸೋಮವಾರ ಸೋಮಶೇಖರ್ ಸಭೆ ನಡೆಸಿದ್ದರು. ಈ ವೇಳೆ ಪುಟ್ಟಣ್ಣಗೆ ಮತ ನೀಡುವಂತೆ ಪ್ರಚಾರ ಮಾಡಿದ್ದಾರೆ. ಸೋಮವಾರದಿಂದ ವಿಧಾನಸಭಾ ಅಧಿವೇಶನ ಆರಂಭವಾಗಿದ್ದು ಶಾಸಕಾಂಗ ಪಕ್ಷದ ಸಭೆಗೆ ಗೈರಾಗಿ ಪುಟ್ಟಣ್ಣ ಪರ ಪತಯಾಚನೆ ಮಾಡಿದ್ದಕ್ಕೆ ಬಿಜೆಪಿ ನಾಯಕರು ಗರಂ ಆಗಿದ್ದಾರೆ.  ಇದನ್ನೂ ಓದಿ: ಕ್ರಿಕೆಟಿಗ ಯುವರಾಜ್‌ ಸಿಂಗ್‌ ಗುರುದಾಸ್‌ಪುರದ ಬಿಜೆಪಿ ಅಭ್ಯರ್ಥಿ?

     

    ಸೋಮಶೇಖರ್‌ ಅವರು ಬಿಜೆಪಿಗೆ ಮುಜುಗರ ಮಾಡುತ್ತಿರುವುದು ಇದು ಹೊಸದೆನಲ್ಲ. ಈ ಹಿಂದೆ ಗೃಹಲಕ್ಷ್ಮಿ ಯೋಜನೆ ಜಾರಿ ಸಂಬಂಧ ಕ್ಷೇತ್ರದ ಬೆಂಬಲಿಗರು, ಆಪ್ತರು ಹಾಗೂ ಕಾರ್ಯಕರ್ತರ ಸಭೆಯನ್ನು ಸೋಮಶೇಖರ್‌ ಕರೆದಿದ್ದರು.

    ಈ ಹಿಂದೆ ಡಿಸಿಎಂ ಡಿಕೆ ಶಿವಕುಮಾರ್‌ ಅವರನ್ನು ಗುಣಗಾನವನ್ನು ಮಾಡಿದ್ದ ಎಸ್.ಟಿ.ಸೋಮಶೇಖರ್ ಪುಟ್ಟಣ್ಣ ಪರ ಪ್ರಚಾರ ಮಾಡುವ ಮೂಲಕ ಕಾಂಗ್ರೆಸ್ ಸೇರುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದೆ ಇರಿಸಿದ್ರಾ ಎಂಬ ಪ್ರಶ್ನೆ ಎದ್ದಿದೆ. ಇದನ್ನೂ ಓದಿ: ಫೆಬ್ರವರಿ ಕೊನೆಯಲ್ಲಿ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ – ಯಾರಿಗೆ ಸಿಗಲಿದೆ ಟಿಕೆಟ್‌?

     

  • ಬಿಜೆಪಿ ಎಂಎಲ್‌ಸಿ ಪುಟ್ಟಣ್ಣ ಕಾಂಗ್ರೆಸ್‌ ಸೇರ್ಪಡೆ

    ಬಿಜೆಪಿ ಎಂಎಲ್‌ಸಿ ಪುಟ್ಟಣ್ಣ ಕಾಂಗ್ರೆಸ್‌ ಸೇರ್ಪಡೆ

    ಬೆಂಗಳೂರು: ಬಿಜೆಪಿಯ ಮೊದಲ ವಿಕೆಟ್‌ ಪತನಗೊಂಡಿದ್ದು ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ (BJP MLC Puttanna) ಕಾಂಗ್ರೆಸ್‌ ಪಕ್ಷವನ್ನು ಸೇರಿದ್ದಾರೆ.

    ಕೆಪಿಸಿಸಿ (KPCC) ಕಚೇರಿಯಲ್ಲಿ ಗುರುವಾರ ಸಂಜೆ ಸುರ್ಜೇವಾಲಾ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಪುಟ್ಟಣ್ಣ ಕಾಂಗ್ರೆಸ್‌ (Congress) ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇದನ್ನೂ ಓದಿ: ದಶಪಥ ರಸ್ತೆ ಜೆಡಿಎಸ್ ಸರ್ಕಾರದ ಕೊಡುಗೆ – ಶಾಸಕ ಪುಟ್ಟರಾಜು

    ಇಂದು ಮಧ್ಯಾಹ್ನ ಪರಿಷತ್‌ ಸ್ಥಾನಕ್ಕೆ ಪುಟ್ಟಣ್ಣ ರಾಜೀನಾಮೆ ನೀಡಿದ್ದಾರೆ. ಸೇರ್ಪಡೆ ಸ್ಥಳಕ್ಕೆ ಬರುವ ವಿಚಾರದಲ್ಲಿ ಪುಟ್ಟಣ್ಣ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.

    ಪಕ್ಷವನ್ನು ಅಧಿಕಾರಕ್ಕೆ ತರಲು ತ‌ಮ್ಮನ್ನು ಚೆನ್ನಾಗಿ ಬಳಸಿಕೊಂಡಿದ್ದರು. ಬಳಿಕ ನನ್ನನ್ನು ಬಿಜೆಪಿ ನಾಯಕರು ನಿರ್ಲಕ್ಷಿಸಿದ್ದಾರೆ ಎಂದು ಪುಟ್ಟಣ್ಣ ಆಪ್ತರ ಬಳಿ ನೋವು ತೋಡಿಕೊಂಡಿದ್ದರು. ಪುಟ್ಟಣ್ಣ ಅವರು 2019ರಲ್ಲಿ ಜೆಡಿಎಸ್‌ ಬಿಟ್ಟು ಬಿಜೆಪಿ ಸೇರಿದ್ದು, ಪರಿಷತ್ತಿಗೆ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿದ್ದರು.

  • ಸ್ಯಾಂಡಲ್‍ವುಡ್‍ನವರಿಂದಲೇ ಕೋಟಿಗೊಬ್ಬನ ಓಟಕ್ಕೆ ತಡೆ – ಜಾಕ್ ಮಂಜು ಆರೋಪ

    ಸ್ಯಾಂಡಲ್‍ವುಡ್‍ನವರಿಂದಲೇ ಕೋಟಿಗೊಬ್ಬನ ಓಟಕ್ಕೆ ತಡೆ – ಜಾಕ್ ಮಂಜು ಆರೋಪ

    – ಕೋಟಿಗೊಬ್ಬನಿಗೆ ಅಡ್ಡಗಾಲಾಗಿದ್ದೇ ಇಂಡಸ್ಟ್ರೀಯವರು
    – ಸಿ. ಪುಟ್ಟಣ್ಣ ವಿರುದ್ಧ ಗರಂ ಆದ ಜಾಕ್ ಮಂಜು

    ಬೆಂಗಳೂರು: ಆಯುಧ ಪೂಜೆ ದಿನ ತೆರೆಗೆ ಬರಲು ಸಿದ್ಧವಾಗಿದ್ದ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ ಸಿನಿಮಾ ವಿತರಕರ ತೊಂದರೆಯಿಂದಾಗಿ ತೆರೆಗೆ ಬಂದಿರಲಿಲ್ಲ. ಇದಕ್ಕೆ ಕಾರಣ ಕನ್ನಡ ಸಿನಿಮಾ ಇಂಡಸ್ಟ್ರಿಯವರು. ನಿರ್ಮಾಪಕರಾಗಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದವರು ಸುದೀಪ್ ಸಿನಿಮಾಗೆ ಸಮಸ್ಯೆ ಮಾಡಿದ್ದಾರೆ ಎಂದು ಸುದೀಪ್ ಆಪ್ತ ಜಾಕ್ ಮಂಜು ಆರೋಪಿಸಿದ್ದಾರೆ.

    ಸಿನಿಮಾ ನಿನ್ನೆ ರಿಲೀಸ್ ಆಗ ಬೇಕಿತ್ತು ಆದರೆ ಆಗಿರಲಿಲ್ಲ ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕೋಟಿಗೊಬ್ಬ ಸಿನಿಮಾ ನಿಲ್ಲಿಸಿದವರು ಸ್ಯಾಂಡಲ್‍ವುಡ್‍ನವರೇ. ಕೆಲವು ರಾಜಕಾರಣಿಗಳು ಎಲೆಕ್ಷನ್ ಪ್ರಾಚಾರಕ್ಕೆ ಕರೆಯುತ್ತಾರೆ. ಕೆಲವರು ಸುದೀಪ್ ಅವರ ಮನೆಗೆ ಬಂದು ಅಣ್ಣಾ ಅಂತ ಫೋಟೋ ತೆಗೆಸಿಕೊಳ್ತಾರೆ. ಅವರೇ ಸುದೀಪ್ ಸಿನಿಮಾಗೆ ಥೇಟರ್ ಕೊಡ್ಬೇಡಿ ಅಂತ ಫೋನ್ ಮಾಡ್ತಾರೆ. ಕೋಟಿಗೊಬ್ಬ ಸಿನಿಮಾದ ವಿತರಕರಿಗೆ ಹಣ ಸಿಗದಂತೆ ಕಡೆಗಳಿಕೆಯಲ್ಲಿ ಕೆಲಸ ಮಾಡಿದ್ದಾರೆ ಸಿನಿಮಾ ರಿಲೀಸ್ ತಡವಾಗಿದ್ದರಿಂದ ಸುಮಾರು 10-12 ಕೋಟಿ ರೂ. ನಷ್ಟವಾಗಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಇಂದಿನಿಂದ ಕೋಟಿಗೊಬ್ಬ 3 ಅಬ್ಬರ – 300ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ರಿಲೀಸ್

    ಕೆಲವು ನಿರ್ಮಾಪರು, ಸುದೀಪ್ ಅವರ ಸಿನಿಮಾ ಬಿಡುಗಡೆಗೆ ಸಮಸ್ಯೆ ಮಾಡಿದ್ದಾರೆ. ಜೊತೆಗೆ ಪೈರಸಿ ಮಾಡಿ ಸಿಕ್ಕಿಹಾಕಿಕೊಂಡಿದ್ದ ಆರೋಪಿಗಳ ಪರವಾಗಿ ಪೊಲೀಸರಿಗೆ ಫೋನ್ ಮಾಡಿ ಬಿಡಿಸುವ ಕೆಲಸ ಎಂಎಲ್‍ಸಿ ಪುಟ್ಟಣ್ಣ ಅವರು ಮಾಡಿದ್ದಾರೆ. ಇದು ತಪ್ಪು. ಗಂಡಸಾಗಿದ್ರೆ ಒಳ್ಳೆ ರೀತಿಯಲ್ಲಿ ಬದುಕಿ, ಬದುಕಲು ಬಿಡಿ. ಈ ರೀತಿಯಲ್ಲಿ ಬದುಕಬೇಡಿ ಎಂದು ಜಾಕ್ ಮಂಜು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಿಚ್ಚನ ಅಭಿಮಾನಿಗಳಲ್ಲಿ ಸೂರಪ್ಪ ಬಾಬು ಕ್ಷಮೆ

    ಸುದೀಪ್ ಅವರು ಭೂಗತಪಾತಕಿಗಳ ಜೊತೆ ಸೇರಲ್ಲ. ಅವರಿಗೋಸ್ಕರ ಸಿನಿಮಾ ಮಾಡಲ್ಲ. ಕೆಲವು ರಾಜಕಾರಣಿಗಳ ಜೊತೆ ಸೇರಲ್ಲ. ಅವರೆಲ್ಲಾ ಒಟ್ಟಾಗಿ ಸೇರಿ ಈ ಷ್ಯಂಡ್ಯಂತ್ರ ಮಾಡಿದ್ದಾರೆ ಎಂದು ಜಾಕ್ ಮಂಜು ಗಂಭೀರ ಆರೋಪಮಾಡಿದ್ದಾರೆ. ಇದನ್ನೂ ಓದಿ: ಕೋಟಿಗೊಬ್ಬ-3 ಸಿನಿಮಾ ರಿಲೀಸ್ ವಿಳಂಬ- ಅಭಿಮಾನಿಗಳಲ್ಲಿ ಕಿಚ್ಚ ಕ್ಷಮೆ

  • ಪರಿಷತ್‍ನಲ್ಲಿ ಪುಟ್ಟಣ್ಣ ಖುರ್ಚಿ ಗಲಾಟೆ ಪ್ರಸಂಗ

    ಪರಿಷತ್‍ನಲ್ಲಿ ಪುಟ್ಟಣ್ಣ ಖುರ್ಚಿ ಗಲಾಟೆ ಪ್ರಸಂಗ

    ಬೆಂಗಳೂರು: ವಿಧಾನ ಪರಿಷತ್ ಕಲಾಪ ಇಂದು ಖುರ್ಚಿ ಗಲಾಟೆಯೊಂದಕ್ಕೆ ಸಾಕ್ಷಿಯಾಗಿತ್ತು. ಜೆಡಿಎಸ್‍ನಿಂದ ಉಚ್ಛಾಟಿತರಾದ ಸದಸ್ಯ ಪುಟ್ಟಣ್ಣರ ಖುರ್ಚಿ ಪ್ರಸಂಗ, ಗದ್ದಲ, ಗಲಾಟೆ, ಹಾಸ್ಯಕ್ಕೆ ಸಾಕ್ಷಿಯಾಗಿ ಕೊನೆಗೆ ಸುಖಾಂತ್ಯ ಕಂಡಿತು.

    ಪರಿಷತ್‍ನಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚೆ ನಡೆಯುತ್ತಿತ್ತು. ಕಾಂಗ್ರೆಸ್ಸಿನ ಪ್ರಕಾಶ್ ರಾಥೋಡ್ ಮಂಗಳೂರು ಗಲಭೆಯ ಫೋಟೋಗಳನ್ನ ಸದನದಲ್ಲಿ ಪ್ರದರ್ಶನ ಮಾಡಿದ್ರು. ಈ ವೇಳೆ ಬಿಜೆಪಿ ಸದಸ್ಯರು ಫೋಟೋಗಳನ್ನು ಪ್ರದರ್ಶನ ಮಾಡಿದ್ರು. ಕೂಡಲೇ ಎದ್ದು ನಿಂತ ಸಿಎಂ ಇಬ್ರಾಹಿಂ ಈ ಫೋಟೋಗಳು ಸದನದ ಆಸ್ತಿ ಇದನ್ನ ಮುಟ್ಟುಗೋಲು ಹಾಕಿಕೊಳ್ಳಿ ಎಂದು ಸಭಾಪತಿಗಳಿಗೆ ಮನವಿ ಮಾಡಿದರು. ಈ ವೇಳೆ ಮಾತನಾಡಲು ಜೆಡಿಎಸ್ ಉಚ್ಚಾಟಿತ ಸದಸ್ಯ ಪುಟ್ಟಣ್ಣ ಎದ್ದು ನಿಂತರು. ಪುಟ್ಟಣ್ಣ ಮಾತಿಗೆ ಜೆಡಿಎಸ್ ಸದಸ್ಯರು ವಿರೋಧ ಮಾಡಿ ಗಲಾಟೆಗೆ ಮುಂದಾದರು.

    ಪುಟ್ಟಣ್ಣ ಅವರ ಕೋರಿಕೆ ಮೇರೆಗೆ ಸಭಾಪತಿಗಳು ಆಡಳಿತ ಪಕ್ಷದ ಸಾಲಿನ ಕೊನೆ ಸಾಲಿನಲ್ಲಿ ಪುಟ್ಟಣ್ಣ ಅವ್ರಿಗೆ ಸೀಟು ಕೊಟ್ಟಿದ್ರು. ಹೀಗಾಗಿ ಪುಟ್ಟಣ್ಣ ಅಲ್ಲಿ ಕುಳಿತು ಮಾತನಾಡಲು ಎದ್ದರು. ಪುಟ್ಟಣ್ಣ ಮಾತನಾಡಲು ಎದ್ದಾಗ ಕೂಡಲೇ ಇದಕ್ಕೆ ಜೆಡಿಎಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಪುಟ್ಟಣ್ಣ ಅವರ ಸೀಟು ನಮ್ಮ ಕಡೆ ಇದೆ. ಆದ್ರೆ ಅವರು ಬೇರೆ ಕಡೆಗೆ ಹೋಗಿ ಹೇಗೆ ಕುಳಿತುಕೊಳ್ತಾರೆ ಅಂತ ಜೆಡಿಎಸ್ ಸದಸ್ಯರು ಗದ್ದಲ ಎಬ್ಬಿಸಿದರು.

    ಮೊದಲು ಪುಟ್ಟಣ್ಣರವರ ಸೀಟು ಯಾವುದು ಅಂತ ಹೇಳಿ. ಆಮೇಲೆ ಮಾತಾಡುವುದಕ್ಕೆ ಅವಕಾಶ ಕೊಡಿ ಅಂತ ಜೆಡಿಎಸ್ ಸದಸ್ಯರು ಗದ್ದಲ ಮಾಡಿದ್ರು. ಜೆಡಿಎಸ್ ಸದಸ್ಯರ ಗದ್ದಲದಿಂದ ಸಿಟ್ಟಿಗೆದ್ದ ಪುಟ್ಟಣ್ಣ, ಸಭಾಪತಿಗಳು ನನಗೆ ಈ ಸ್ಥಾನ ಕೊಟ್ಟಿದ್ದಾರೆ. ಅದಕ್ಕೆ ಕುಳಿತಿದ್ದೇನೆ. ನಾನು ಒಳಗೊಂದು ಹೊರಗೊಂದು ಇಲ್ಲ. ಯಾರಿಗೂ ಹೆದರುವುದೂ ಇಲ್ಲ. ನನಗೆ ಕೊಟ್ಟ ಸೀಟು ಕೂತಿದ್ದೀನಿ ಅಂತ ಜೆಡಿಎಸ್ ಸದಸ್ಯರ ವಿರುದ್ಧ ಕಿಡಿಕಾರಿದ್ರು. ಕೊನೆಗೆ ಪುಟ್ಟಣ್ಣಗೆ ಪ್ರತ್ಯೇಕ ಸೀಟು ಹಂಚಿಕೆ ಮಾಡಿರುವುದರ ಕುರಿತು ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿಯವರು ಸ್ಪಷ್ಟನೆ ನೀಡಿದರು. ಆಗ ಗದ್ದಲ ಮಾಡುತ್ತಿದ್ದ ಜೆಡಿಎಸ್ ಸದಸ್ಯರು ಮರು ಮಾತಾಡದೇ ಸುಮ್ಮನೆ ಕುಳಿತುಕೊಂಡರು.

  • ಜೆಡಿಎಸ್ ಎಂಎಲ್‌ಸಿ ಪುಟ್ಟಣ್ಣ ಉಚ್ಚಾಟನೆ

    ಜೆಡಿಎಸ್ ಎಂಎಲ್‌ಸಿ ಪುಟ್ಟಣ್ಣ ಉಚ್ಚಾಟನೆ

    ಬೆಂಗಳೂರು: ಪರಿಷತ್ ಸದಸ್ಯ ಪುಟ್ಟಣ್ಣ ಅವರನ್ನು ಜೆಡಿಎಸ್ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.

    ಪಕ್ಷ ವಿರೋಧಿ ಚಟುವಟಿಕೆ, ವರಿಷ್ಠರ ವಿರುದ್ಧ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜೆಡಿಎಸ್ ಪಕ್ಷದಿಂದ ಉಚ್ಚಾಟನೆ ಮಾಡಿ ಪಕ್ಷದ ಅಧ್ಯಕ್ಷ ಎಚ್.ಕೆ ಕುಮಾರಸ್ವಾಮಿ ಆದೇಶ ಹೊರಡಿಸಿದ್ದಾರೆ.

    ಈ ಹಿಂದೆ ರಾಮನಗರದಲ್ಲಿ ಮಾತನಾಡಿದ್ದ ಪುಟ್ಟಣ್ಣ ಅವರು, ನಾನು ಜೆಡಿಎಸ್ ಪಕ್ಷ ಬಿಡಲು ತೀರ್ಮಾನ ಮಾಡಿದ್ದೇನೆ. ಆದರೆ ಮುಂದಿನ ನಡೆ ಗೊತ್ತಿಲ್ಲ. 2-3 ಜನ ಹೊರತುಪಡಿಸಿದರೆ ಉಳಿದೆಲ್ಲ ಪರಿಷತ್ ಸದಸ್ಯರು ಈ ನಿಟ್ಟಿನಲ್ಲಿ ಆಲೋಚನೆ ಮಾಡುತ್ತಿದ್ದಾರೆ. ಎಲ್ಲರೂ ಸೇರಿ ತೀರ್ಮಾನ ತೆಗೆದುಕೊಳ್ಳಬೇಕೆಂದು ನಿರ್ಧರಿಸಿದ್ದೇವೆ. ಜೆಡಿಎಸ್ ಬಿಡಲು ಕಾರಣ ಮುಂದಿನ ದಿನಗಳಲ್ಲಿ ಹೇಳುತ್ತೇವೆ. ಅದಕ್ಕೂ ಸಮಯ ಬರುತ್ತದೆ ಎಂದಿದ್ದರು.

    ದೇವೇಗೌಡರು ಹಿರಿಯರು ಅವರ ಬಗ್ಗೆ ಗೌರವವಿದೆ. ಚಲುವರಾಯಸ್ವಾಮಿ ತೀರ್ಮಾನ ತೆಗೆದುಕೊಂಡು ಕಾಂಗ್ರೆಸ್ ಸೇರಿದ್ದಾರೆ. ಅಧಿಕಾರಾವಧಿ ಇರುವುದರಿಂದ ನಾವು ತೀರ್ಮಾನ ತೆಗೆದುಕೊಳ್ಳಲು 2020ರ ವರೆಗೆ ಸಮಯವಿದೆ. ಆದರೆ ಈಗ ಎಲ್ಲರೂ ಸೇರಿ ತೀರ್ಮಾನ ಕೈಗೊಳ್ಳಲು ನಿರ್ಧರಿಸಿದೆವು. ಹೀಗಾಗಿ ಈಗಲೇ ಬಹುತೇಕ ಎಲ್ಲ ಎಂಎಲ್‌ಸಿಗಳೂ ಸೇರಿ ತೀರ್ಮಾನ ತೆಗೆದುಕೊಳ್ಳಬೇಕು ಎನ್ನುತ್ತಿದ್ದಾರೆ. ಈ ಕುರಿತು ಹೊರಟ್ಟಿಯವರು ಮಾತನಾಡಿದ್ದಾರೆ. ಇಂದು ಚರ್ಚೆ ಮಾಡೋಣ ಎಂದಿದ್ದರು. ನೀವು ತೀರ್ಮಾನ ಮಾಡಿ ನಾನು ಅದಕ್ಕೆ ಬದ್ಧ ಎಂದು ಹೇಳಿದ್ದೇನೆ ಎಂದು ತಿಳಿಸಿದ್ದರು. ಇದನ್ನೂ ಓದಿ: ಜೈಲಿನಲ್ಲಿ ಚಡ್ಡಿ ಹಾಕಿ ನಿಂತಿದ್ದ ಪುಟ್ಟಣ್ಣಗೆ ಟಿಕೆಟ್ ನೀಡಿದ್ದು ಜೆಡಿಎಸ್ – ರೇವಣ್ಣ ವಾಗ್ದಾಳಿ

    ಹಾಲಿ ಎಂಎಲ್‌ಸಿಗಳು ಒಮ್ಮೆ ತೀರ್ಮಾನ ಮಾಡಿದ್ದಾರೆ ಮತ್ತೊಮ್ಮೆ ಸೇರಲು ನಿರ್ಧರಿಸಿದ್ದಾರೆ. ಕೆಲವರಿಗೆ ಯಾರಿಗೆ ನೋವಾದರೂ, ಯಾರು ಸತ್ತರೂ ಏನೂ ಅನಿಸುವುದಿಲ್ಲ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಹೇಳುವ ಮೂಲಕ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೆಸರನ್ನು ಹೇಳದೆ ಟಾಂಗ್ ನೀಡಿದ್ದರು.

  • ಜೈಲಿನಲ್ಲಿ ಚಡ್ಡಿ ಹಾಕಿ ನಿಂತಿದ್ದ ಪುಟ್ಟಣ್ಣಗೆ ಟಿಕೆಟ್ ನೀಡಿದ್ದು ಜೆಡಿಎಸ್ – ರೇವಣ್ಣ ವಾಗ್ದಾಳಿ

    ಜೈಲಿನಲ್ಲಿ ಚಡ್ಡಿ ಹಾಕಿ ನಿಂತಿದ್ದ ಪುಟ್ಟಣ್ಣಗೆ ಟಿಕೆಟ್ ನೀಡಿದ್ದು ಜೆಡಿಎಸ್ – ರೇವಣ್ಣ ವಾಗ್ದಾಳಿ

    ಹಾಸನ: ಚನ್ನಪಟ್ಟಣದ ಜೈಲಿನಲ್ಲಿ ಚಡ್ಡಿ ಮೇಲೆ ನಿಲ್ಲಿಸಿದ್ದವರನ್ನು ಕರೆದು ಜೆಡಿಎಸ್‍ನಲ್ಲಿ ಸ್ಥಾನ ನೀಡಲಾಗಿತ್ತು. ಇವರಿಗಾಗಿ ದೇವೇಗೌಡರು ಪಾದಯಾತ್ರೆಯನ್ನು ಸಹ ಮಾಡಿದ್ದರು. ನೈತಿಕತೆ ಇದ್ದರೆ ಇವರು ಜೆಡಿಎಸ್‍ಗೆ ರಾಜೀನಾಮೆ ನೀಡಿ ಹೋಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ವಿರುದ್ಧ ಮಾಜಿ ಸಚಿವ ಎಚ್.ಡಿ.ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಮಕೂರು, ಮಂಡ್ಯದಲ್ಲಿ ನಮ್ಮ ಅಭ್ಯರ್ಥಿಗಳನ್ನು ಸೋಲಿಸಿದ್ದು ಇವರೇ. ಗೌರವ, ನೈತಿಕತೆ ಇದ್ದರೆ ಅವರು ರಾಜೀನಾಮೆ ನೀಡಲಿ. ಎಂಎಲ್ಸಿ, ಉಪಸಭಾಪತಿ ಮಾಡಿದ್ದು ಯಾರು? ಆದರೆ ಇವರು ನಾಲ್ಕು ವರ್ಷದಿಂದ ಯಾರ ಜೊತೆಗೆ ಓಡಾಡುತ್ತಿದ್ದಾರೆ ಎಂದು ತಿಳಿದಿದೆ. ಜೆಡಿಎಸ್ ಹಂಗಿನಲ್ಲಿ ಹೊಟ್ಟೆ ಉರಿಯುತ್ತಿರುವ ಇಂತವರಿಗೆ ಸೊಪ್ಪು ಹಾಕುವ ಅಗತ್ಯವಿಲ್ಲ ಎಂದು ಕಿಡಿ ಕಾರಿದರು. ಇದನ್ನೂ ಓದಿ: ಜೆಡಿಎಸ್ ಬಿಡಲು ತೀರ್ಮಾನಿಸಿದ್ದೇನೆ, ಬಹುತೇಕ ಎಂಎಲ್‍ಸಿಗಳು ಸಹ ತೊರೆಯಲು ಚಿಂತಿಸಿದ್ದಾರೆ- ಪುಟ್ಟಣ್ಣ

    ಚನ್ನಪಟ್ಟಣದ ಜೈಲಲ್ಲಿ ಚಡ್ಡಿಯಲ್ಲಿ ನಿಲ್ಲಿಸಿದವರಿಗೆ ದೇವೇಗೌಡರು ರಾಜಕೀಯ ಭವಿಷ್ಯ ನೀಡಿದರು. ಪುಟ್ಟಣ್ಣ ಅವರಿಂದ ಜೆಡಿಎಸ್‍ಗೆ ಏನೂ ಆಗಬೇಕಿಲ್ಲ. ಅವರು ಹೋದರೆ ಜೆಡಿಎಸ್ ಹಾಗೂ ದೇವೇಗೌಡರಿಗೆ ಶಾಕ್ ಆಗುವುದಿಲ್ಲ ಎಂದರು.

    ಬಸವರಾಜ ಹೊರಟ್ಟಿ ನಮ್ಮ ಪಕ್ಷದ ಆಸ್ತಿ. ಪಕ್ಷದಲ್ಲಿ ಸಣ್ಣ ಪುಟ್ಟ ಗೊಂದಲಗಳಿರಬಹುದು. ಹೊರಟ್ಟಿ ಸೇರಿದಂತೆ ಇತರೆ ಪರಿಷತ್ ಸದಸ್ಯರ ಜೊತೆ ಚರ್ಚಿಸಿ ಮನವೊಲಿಸುತ್ತೇವೆ. ಸಣ್ಣಪುಟ್ಟ ಸಮಸ್ಯೆ ಇದ್ದರೆ ಕುಳಿತು ಬಗೆ ಹರಿಸಿಕೊಳ್ಳುತ್ತೇವೆ ಎಂದು ಹೇಳಿದರು.

    ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್‍ನವರು ನಮ್ಮನ್ನು ಬಿಜೆಪಿಯ ಬಿ ಟೀಂ ಅಂದರು. ನಂತರ ಅವರೇ ನಮ್ಮ ಬಳಿ ಬಂದರು. ನಂತರ 14 ತಿಂಗಳು ಸರ್ಕಾರ ಮಾಡಿದೆವು. ಆ ಸಂದರ್ಭದಲ್ಲಿ ಅನುಭವಿಸಿದ ನೋವು ನಮಗೇ ಗೊತ್ತು. ನನ್ನನ್ನು ಸೂಪರ್ ಸಿಎಂ ಎಂದು ಬಿಂಬಿಸಿದರು. ಇದೀಗ ಕುಮಾರಸ್ವಾಮಿ-ಯಡಿಯೂರಪ್ಪ ನಡುವೆ ಒಳ ಒಪ್ಪಂದ ಆಗಿದೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಹಾಗಿದ್ದಿದ್ದರೆ ಕೆಎಂಎಫ್ ಅಧ್ಯಕ್ಷ ಚುನಾವಣೆಯಲ್ಲಿ ಯಡಿಯೂರಪ್ಪ ಮನೆಗೆ ನಾನೇ ಹೋಗಿ ಕೇಳುತ್ತಿದ್ದೆ. ಆದರೆ ಯಡಿಯೂರಪ್ಪನವರ ಮನೆಗೆ ಯಾರು ಹೋಗಿದ್ದರು ಎಂಬುದನ್ನು ಅರಿಯಲಿ. ವಿಪಕ್ಷ ನಾಯಕರಾಗಿರುವವರು ಜಬಾಬ್ದಾರಿಯಿಂದ ಮಾತನಾಡಲಿ ಎಂದು ತಿರುಗೇಟು ನೀಡಿದರು.

    ಸಮ್ಮಿಶ್ರ ಸರ್ಕಾರ ಬೀಳಿಸುವ ತಪ್ಪನ್ನು ಕುಮಾರಸ್ವಾಮಿ ಏನು ಮಾಡಿದ್ದರು? 14 ಶಾಸಕರನ್ನು ಹಿಡಿದಿಡಲು ಆಗುತ್ತಿರಲಿಲ್ಲವೇ? ಅಭಿವೃದ್ಧಿ ವಿಚಾರದಲ್ಲಿ ಹಾಸನ ಜಿಲ್ಲೆಯ ಜನರನ್ನು ಎದುರು ಹಾಕಿಕೊಳ್ಳಬೇಡಿ. ವಿಪಕ್ಷ ನಾಯಕರು ಜೆಡಿಎಸ್ ಸಹವಾಸ ಸಾಕು ಎಂದಿದ್ದಾರೆ. ಆದರೆ ಸರ್ಕಾರ ರಚನೆ ವೇಳೆ ನಾವು ಅವರ ಬಳಿ ಹೋಗಿರಲಿಲ್ಲ. ಅವರೇ ನಮ್ಮ ಬಳಿ ಬಂದಿದ್ದರು ಎಂದು ತಿರುಗೇಟು ನೀಡಿದರು.

    ಕುಮಾರಸ್ವಾಮಿ ಬಿಜೆಪಿಗೆ ಜೆಡಿಎಸ್ ಪಕ್ಷ ಬರೆದು ಕೊಡುತ್ತೇವೆ ಎಂದಿಲ್ಲ. ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡುತ್ತೇವೆ ಎಂದೂ ಹೇಳಿಲ್ಲ. ನೆರೆ ಸಂತ್ರಸ್ತರ ಹಿತದೃಷ್ಟಿಯಿಂದ ಬಿಜೆಪಿ ಸರ್ಕಾರ ಮುಂದುವರಿಯಲಿ ಎಂದಿದ್ದಾರೆ ಎಂದು ಹೇಳುವ ಮೂಲಕ ಎಚ್‍ಡಿಕೆ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

    ಬಿಜೆಪಿ ಸರ್ಕಾರ ಬಂದ ನಂತರ ಜಿಲ್ಲೆಯಲ್ಲಿ ಅಭಿವೃದ್ಧಿ ಕುಂಠಿತ ಆಗಿದೆ. ಕಾವೇರಿ ನೀರಾವರಿ ನಿಗಮದ 7 ಸಾವಿರ ಕೋಟಿ ರೂ. ಕೆಲಸವನ್ನು ನಿಲ್ಲಿಸಲಾಗಿದೆ. ಸಿಎಂ ಯಾವುದೇ ಕೆಲಸ ನಿಲ್ಲಿಸುವುದಿಲ್ಲ ಎಂದಿದ್ದರು. ಆದರೆ ಯಾವುದೇ ಕೆಲಸ ಆರಂಭ ಆಗಿಲ್ಲ. ಈ ಬಗ್ಗೆ ಮುಂದಿನ ವಾರ ನಮ್ಮ ಎಲ್ಲ ಶಾಸಕರು ಸೇರಿ ಸಿಎಂ ಭೇಟಿ ಮಾಡಿ ಕೇಳುತ್ತೇವೆ ಎಂದು ಹೇಳಿದರು.

  • ಜೆಡಿಎಸ್ ಬಿಡಲು ತೀರ್ಮಾನಿಸಿದ್ದೇನೆ, ಬಹುತೇಕ ಎಂಎಲ್‍ಸಿಗಳು ಸಹ ತೊರೆಯಲು ಚಿಂತಿಸಿದ್ದಾರೆ- ಪುಟ್ಟಣ್ಣ

    ಜೆಡಿಎಸ್ ಬಿಡಲು ತೀರ್ಮಾನಿಸಿದ್ದೇನೆ, ಬಹುತೇಕ ಎಂಎಲ್‍ಸಿಗಳು ಸಹ ತೊರೆಯಲು ಚಿಂತಿಸಿದ್ದಾರೆ- ಪುಟ್ಟಣ್ಣ

    ರಾಮನಗರ: ನಾನು ಜೆಡಿಎಸ್ ಪಕ್ಷ ಬಿಡಲು ತೀರ್ಮಾನ ಮಾಡಿದ್ದೇನೆ. ಎಲ್ಲ ವಿಧಾನ ಪರಿಷತ್ ಸದಸ್ಯರೂ ಈ ಕುರಿತು ಆಲೋಚನೆ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಜೆಡಿಎಸ್ ಪಕ್ಷ ಬಿಡಲು ತೀರ್ಮಾನ ಮಾಡಿದ್ದೇನೆ. ಆದರೆ ಮುಂದಿನ ನಡೆ ಗೊತ್ತಿಲ್ಲ. 2-3 ಜನ ಹೊರತುಪಡಿಸಿದರೆ ಉಳಿದೆಲ್ಲ ಪರಿಷತ್ ಸದಸ್ಯರು ಈ ನಿಟ್ಟಿನಲ್ಲಿ ಆಲೋಚನೆ ಮಾಡುತ್ತಿದ್ದಾರೆ. ಎಲ್ಲರೂ ಸೇರಿ ತೀರ್ಮಾನ ತೆಗೆದುಕೊಳ್ಳಬೇಕೆಂದು ನಿರ್ಧರಿಸಿದ್ದೇವೆ. ಜೆಡಿಎಸ್ ಬಿಡಲು ಕಾರಣ ಮುಂದಿನ ದಿನಗಳಲ್ಲಿ ಹೇಳುತ್ತೇವೆ. ಅದಕ್ಕೂ ಸಮಯ ಬರುತ್ತದೆ ಎಂದರು.

    ನನ್ನ ಬೆನ್ನ ಹಿಂದೆ, ಶ್ರೇಯಸ್ಸಿನ ಹಿಂದೆ ನಿಂತಿರುವವರು ಶಿಕ್ಷಕರು, ಸ್ನೇಹಿತರು. ಅವರ ಜೊತೆಗೆ ಚರ್ಚೆ ಮಾಡಿ ನಾನು ನಿರ್ಧಾರ ಹೇಳುತ್ತೇನೆ. ನಿರ್ಧಾರ ನನ್ನದಾದರೂ ಶಿಕ್ಷಕರು ಸ್ನೇಹಿತರ ಜೊತೆ ಚರ್ಚೆ ಮಾಡಬೇಕು. ಹೀಗಾಗಿ ಮುಂದಿನ ದಿನಗಳಲ್ಲಿ ಕಾರಣ ತಿಳಿಸುತ್ತೇನೆ ಎಂದು ಹೇಳಿದರು.

    ದೇವೇಗೌಡರು ಹಿರಿಯರು ಅವರ ಬಗ್ಗೆ ಗೌರವವಿದೆ. ಚಲುವರಾಯಸ್ವಾಮಿ ತೀರ್ಮಾನ ತೆಗೆದುಕೊಂಡು ಕಾಂಗ್ರೆಸ್ ಸೇರಿದ್ದಾರೆ. ಅಧಿಕಾರಾವಧಿ ಇರುವುದರಿಂದ ನಾವು ತೀರ್ಮಾನ ತೆಗೆದುಕೊಳ್ಳಲು 2020ರ ವರೆಗೆ ಸಮಯವಿದೆ. ಆದರೆ ಈಗ ಎಲ್ಲರೂ ಸೇರಿ ತೀರ್ಮಾನ ಕೈಗೊಳ್ಳಲು ನಿರ್ಧರಿಸಿದೆವು. ಹೀಗಾಗಿ ಈಗಲೇ ಬಹುತೇಕ ಎಲ್ಲ ಎಂಎಲ್‍ಸಿಗಳೂ ಸೇರಿ ತೀರ್ಮಾನ ತೆಗೆದುಕೊಳ್ಳಬೇಕು ಎನ್ನುತ್ತಿದ್ದಾರೆ. ಈ ಕುರಿತು ಹೊರಟ್ಟಿಯವರು ಮಾತನಾಡಿದ್ದಾರೆ. ಇಂದು ಚರ್ಚೆ ಮಾಡೋಣ ಎಂದಿದ್ದರು. ನೀವು ತೀರ್ಮಾನ ಮಾಡಿ ನಾನು ಅದಕ್ಕೆ ಬದ್ಧ ಎಂದು ಹೇಳಿದ್ದೇನೆ ಎಂದರು.

    ಹಾಲಿ ಎಂಎಲ್‍ಸಿಗಳು ಒಮ್ಮೆ ತೀರ್ಮಾನ ಮಾಡಿದ್ದಾರೆ ಮತ್ತೊಮ್ಮೆ ಸೇರಲು ನಿರ್ಧರಿಸಿದ್ದಾರೆ. ಕೆಲವರಿಗೆ ಯಾರಿಗೆ ನೋವಾದರೂ, ಯಾರು ಸತ್ತರೂ ಏನು ಅನಿಸುವುದಿಲ್ಲ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಹೇಳುವ ಮೂಲಕ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೆಸರನ್ನು ಹೇಳದೆ ಟಾಂಗ್ ನೀಡಿದರು.