Tag: ಪುಟ್ಟಚಿನ್ನಮ್ಮಣಿ

  • ಅರಮನೆಯಲ್ಲಿ ನಡೆಯಬೇಕಿದ್ದ ಜಟ್ಟಿ ಕಾಳಗ ರದ್ದು

    ಅರಮನೆಯಲ್ಲಿ ನಡೆಯಬೇಕಿದ್ದ ಜಟ್ಟಿ ಕಾಳಗ ರದ್ದು

    ಮೈಸೂರು: ರಾಜಮಾತೆ ಪ್ರಮೋದಾ ದೇವಿ ಒಡೆಯರ್ ತಾಯಿ ನಿಧನ ಹಿನ್ನೆಲೆಯಲ್ಲಿ ಅಂಬಾ ವಿಲಾಸ ಅರಮನೆಯಲ್ಲಿ ನಡೆಯಬೇಕಿದ್ದ ಜಟ್ಟಿ ಕಾಳಗ ರದ್ದು ಮಾಡಲಾಗಿದೆ.

    ಗಣಪತಿ ಪೂಜೆ, ಬನ್ನಿ ಪೂಜೆ ಸೇರಿ ವಿಜಯರಥ ಮೆರವಣಿಗೆಯೂ ರದ್ದಾಗುವ ಸಾಧ್ಯತೆ ಇದೆ. ಅದು ಕೂಡ ಅನುಮಾನವಾಗಿದೆ. ಮೈಸೂರು ಸಂಸ್ಥಾನದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸೂತಕ ಬಂದು ಎಲ್ಲ ಪೂಜಾ ಕೈಂಕರ್ಯಗಳು ರದ್ದಾಗಿದೆ. ಅಜ್ಜಿ ಸಾವಿನಲ್ಲಿ ಯದುವೀರ್ ಸರಳವಾಗಿ ಪೂಜೆ ಸಲ್ಲಿಸಲಿದ್ದು, ಬೆಳ್ಳಿ ಪಲ್ಲಕ್ಕಿ ಏರಿ ವಿಜಯ ಯಾತ್ರೆ ಮಾಡುವುದು ಅನುಮಾನವಾಗಿದೆ.

     

    ಇಂದು ನಡೆಯಬೇಕಿದ್ದ ಜಟ್ಟಿ ಕಾಳಗ ಅಕ್ಟೋಬರ್ 22ಕ್ಕೆ ಮುಂದೂಡಿಕೆ ಮಾಡಲಾಗಿದೆ. ಇಂದು ಅನಾರೋಗ್ಯದ ಬಳಲುತ್ತಿದ್ದ ರಾಜವಂಶಸ್ಥೆ ಪ್ರಮೋದಾ ದೇವಿ ಅವರ ತಾಯಿ ಪುಟ್ಟಚಿನ್ನಮ್ಮಣಿ ಅವರು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧಾನರಾಗಿದ್ದಾರೆ. ಇದರಿಂದ ಅರಮನೆಯಲ್ಲಿ ಸೂತಕದ ವಾತಾವರಣ ಆವರಿಸಿಕೊಂಡಿದೆ.

    ಧಾರ್ಮಿಕ ಪೂಜಾ ವಿಧಾನಗಳ ಬಗ್ಗೆ ಅರಮನೆಯ ಪುರೋಹಿತರೊಂದಿಗೆ ಪ್ರಮೋದಾ ದೇವಿ ಚೆರ್ಚೆ ನಡೆಸುತ್ತಿದ್ದು, ವಿಜಯ ದಶಮಿ ಪೂಜೆಯಲ್ಲಿ ಪ್ರಮೋದಾ ದೇವಿ ಒಡೆಯರ್ ಭಾಗವಹಿಸುವುದು ಅನುಮಾನವಾಗಿದೆ. ಈಗಾಗಲೇ ಸಮರ್ ಪ್ಯಾಲೇಸ್ ನಲ್ಲಿ ಅಂತಿಮ ಸಂಸ್ಕಾರ ನಡೆಸುವ ಬಗ್ಗೆ ಚೆರ್ಚೆ ಮಾಡುತ್ತಿದ್ದಾರೆ. ಇದನ್ನೂ ಓದಿ:  ರಾಜಮಾತೆಗೆ ಮಾತೃವಿಯೋಗ- ಇದು ಯಾವುದರ ಸಂಕೇತ…? ಶ್ರೀ ರೇಣುಕಾರಾಧ್ಯ ಗುರೂಜಿ ಸ್ಪಷ್ಟನೆ

    ಅರಮನೆ ಉಪ ನಿರ್ದೇಶಕ ಸುಬ್ರಮಣ್ಯ ಅವರು ಗೋಪಾಲಗೌಡ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಆಸ್ಪತ್ರೆಯಲ್ಲಿ ಪುಟ್ಟಚಿನ್ನಮ್ಮಣ್ಣಿ ಪಾರ್ಥಿವ ಶರೀರ ರವಾನೆಗೆ ಸಿದ್ಧತೆ ಮಾಡಲಾಗುತ್ತಿದೆ. ಅಂಬ್ಯುಲೆನ್ಸ್ ನಲ್ಲಿ ಕೆಫಿನ್ ಬಾಕ್ಸ್ ಇಟ್ಟು ಪಾರ್ಥಿವ ಶರೀರ ರವಾನೆಗೆ ಆಸ್ಪತ್ರೆ ಸಿಬ್ಬಂದಿ ಸಿದ್ಧ ಮಾಡುತ್ತಿದ್ದಾರೆ. ಆಸ್ಪತ್ರೆಯಿಂದ ಸಮ್ಮರ್ ಪ್ಯಾಲೇಸ್ ಗೆ ಚಿನ್ನಮ್ಮಣ್ಣಿ ಪಾರ್ಥಿವ ಶರೀರ ರವಾನೆ ಸಾಧ್ಯತೆ ಇದೆ.

    ಸಚಿವ ಸಾರಾ ಮಹೇಶ್ ಅವರು ಆಸ್ಪತ್ರೆಗೆ ಭೇಟಿ ನೀಡಿ ತಾಯಿ ಪ್ರಮೋದಾ ದೇವಿ ಅವರ ತಾಯಿಯ ದರ್ಶನ್ ಪಡೆದು ಬಳಿಕ, ರಾಜಮಾತೆಯವರ ತಾಯಿ ನಿಧನರಾಗಿದ್ದಾರೆ. ಸಮ್ಮರ್ ಪ್ಯಾಲೇಸ್ ನಲ್ಲಿ ಅಂತಿಮ ದರ್ಶನಕ್ಕೆ ಇಡಲಾಗುವುದು. ರಾಜಮಾತೆಯವರು ಸಮ್ಮರ್ ಪ್ಯಾಲೇಸ್‍ಗೆ ಆಗಮಿಸುತ್ತಾರೆ. ಪರಕಾಲ ಮಠದ ಅಭಿಪ್ರಾಯವನ್ನು ಕೇಳಿದ್ದಾರೆ. ಪರಕಾಲ ಮಠ ಯಾವ ರೀತಿ ಶಾಸ್ತ್ರ ವಿಧಿ-ವಿಧಾನ ಸೂಚಿಸುತ್ತಾರೋ ಹಾಗೆ ಕಾರ್ಯಕ್ರಮಗಳು ನಿರ್ಧಾರವಾಗಲಿವೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಜಯದಶಮಿ ದಿನವೇ ಪ್ರಮೋದಾ ದೇವಿಯ ತಾಯಿ ವಿಧಿವಶ

    ವಿಜಯದಶಮಿ ದಿನವೇ ಪ್ರಮೋದಾ ದೇವಿಯ ತಾಯಿ ವಿಧಿವಶ

    ಮೈಸೂರು: ಇಂದು ಸಮಸ್ತ ನಾಡಿನ ಜನತೆಯೂ ಜಂಬೂಸವಾರಿಗೆ ಕಾತುರದಿಂದ ಕಾಯುತ್ತಿದ್ದಾರೆ. ಆದ್ರೆ ವಿಜಯದಶಮಿ ದಿನವೇ ಪ್ರಮೋದಾ ದೇವಿ ಅವರ ತಾಯಿ ವಿಧಿವಶರಾಗಿದ್ದಾರೆ.

    ರಾಜವಂಶಸ್ಥೆ ಪ್ರಮೋದಾ ದೇವಿ ಅವರ ತಾಯಿ ಪುಟ್ಟಚಿನ್ನಮ್ಮಣಿ(98) ಅವರು ನಿಧನರಾಗಿದ್ದಾರೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಪುಟ್ಟಚಿನ್ನಮ್ಮಣಿ ಅವರು ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.

    ಪುಟ್ಟಚಿನ್ನಮ್ಮಣಿ ಅವರು ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

    ಅರಮನೆಯಲ್ಲಿ ಜಂಬೂಸವಾರಿಯ ಹಬ್ಬದ ವಾತಾವರಣ ಕಂಗೊಳಿಸುತ್ತಿತ್ತು. ಆದರೆ ಈಗ ಪುಟ್ಟಚಿನ್ನಮ್ಮಣಿ ಅವರ ಸಾವಿನಿಂದ ಅರಮನೆಯಲ್ಲಿ ಸೂತಕದ ವಾತಾವರಣ ಆವರಿಸಿಕೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv