Tag: ಪುಂಡಿ

  • ಬಿಸಿಬಿಸಿಯಾಗಿ ಅಕ್ಕಿ ಕಡುಬು ಮಾಡಿ ಸವಿಯಿರಿ

    ಬಿಸಿಬಿಸಿಯಾಗಿ ಅಕ್ಕಿ ಕಡುಬು ಮಾಡಿ ಸವಿಯಿರಿ

    ಮುಖ್ಯವಾಗಿ ಕರಾವಳಿ ಭಾಗ ಹಾಗೂ ಮಲೆನಾಡು ಪ್ರದೇಶದಲ್ಲಿ ಈ ಅಕ್ಕಿ ಕಡುಬು ಅತ್ಯಂತ ಫೇಮಸ್. ಪುಂಡಿ, ಉಂಡಿ ಎಂತಲೂ ಕರೆಯಲಾಗುವ ಈ ತಿಂಡಿ ಚಟ್ನಿಯೊಂದಿಗೆ ಸವಿದರೆ ಬೆಳಗ್ಗಿನ ಉಪಾಹಾರಕ್ಕೂ, ನಾನ್‌ವೆಜ್ ಸಾರಿನೊಂದಿಗೆ ಬಾಡೂಟಕ್ಕೂ ಹೊಂದಿಕೆಯಾಗುತ್ತದೆ. ರುಚಿಕರವಾದ ಅಕ್ಕಿ ಕಡುಬು (Rice Ball) ಮಾಡುವ ವಿಧಾನ ಇಲ್ಲಿದೆ. ನೀವೂ ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    ಅಕ್ಕಿ – 2 ಕಪ್
    ಉಪ್ಪು – ರುಚಿಗೆ ತಕ್ಕಷ್ಟು
    ನೀರು – 4 ಕಪ್
    ತುರಿದ ತೆಂಗಿನಕಾಯಿ – ಅರ್ಧ ಕಪ್
    ಜೀರಿಗೆ – 1 ಟೀಸ್ಪೂನ್ ಇದನ್ನೂ ಓದಿ: ಗೋವಾ ಶೈಲಿಯ ಸಿಹಿಯಾದ ಸೂರ್ನೊಲಿ ದೋಸೆ ಟ್ರೈ ಮಾಡಿದ್ದೀರಾ?

    * ಮೊದಲಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆದು, ಬಸಿದು, ಬಿಸಿಲಿನಲ್ಲಿ ಒಣಗಿಸಿಟ್ಟುಕೊಳ್ಳಬೇಕು.
    * ಅಕ್ಕಿಯಲ್ಲಿ ನೀರಿನಂಶ ಇಲ್ಲದಿರುವುದನ್ನು ಖಚಿತಪಡಿಸಿಕೊಂಡ ಬಳಿಕ ಮಿಕ್ಸರ್ ಜಾರ್‌ಗೆ ಹಾಕಿ, ತರಿತರಿಯಾಗಿ ಪುಡಿ ಮಾಡಿಕೊಳ್ಳಿ.
    * ಈಗ ಒಂದು ದೊಡ್ಡ ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿ.
    * ನೀರು ಸ್ವಲ್ಪ ಬಿಸಿಯಾದ ಬಳಿಕ ಅದಕ್ಕೆ ತೆಂಗಿನ ತುರಿ, ಉಪ್ಪು ಮತ್ತು ಜೀರಿಗೆ ಹಾಕಿ ಕಲಸಿಕೊಳ್ಳಿ.
    * ನೀರು ಕುದಿಯಲು ಬಂದಂತೆ ಪುಡಿ ಮಾಡಿದ ಅಕ್ಕಿಯನ್ನು ಸ್ವಲ್ಪ ಸ್ವಲ್ಪವೇ ಸೇರಿಸಿ ಕಲಸಿಕೊಳ್ಳಿ.
    * ಅಕ್ಕಿ ಬೆಂದು, ಉಂಡೆ ಕಟ್ಟುವ ಹದಕ್ಕೆ ಬಂದಮೇಲೆ ಗ್ಯಾಸ್ ಅನ್ನು ಆಫ್ ಮಾಡಿಕೊಳ್ಳಿ.
    * ಹಿಟ್ಟು ಬಿಸಿಯಿರುವಾಗಲೇ ಕಡುಬು ಗಾತ್ರಕ್ಕೆ ಉಂಡೆಗಳನ್ನಾಗಿ ಕಟ್ಟಿಕೊಳ್ಳಿ.
    * ಇದೀಗ ಸ್ಟೀಮರ್‌ನಲ್ಲಿ ಉಂಡೆಗಳನ್ನಿಟ್ಟು, 15-20 ನಿಮಿಷಗಳ ವರೆಗೆ ಬೇಯಿಸಿ.
    * ಇದೀಗ ಅಕ್ಕಿ ಕಡುಬು ತಯಾರಾಗಿದ್ದು, ಬಿಸಿಬಿಸಿಯಾಗಿ ಬಡಿಸಿ. ಇದನ್ನೂ ಓದಿ: ಹೀಗೆ ಮಾಡಿ ಆರೋಗ್ಯಕರ ಹೆಸರು ಬೇಳೆ ದೋಸೆ

    Live Tv
    [brid partner=56869869 player=32851 video=960834 autoplay=true]

  • ಮಳೆಗೆ ಬಿಸಿಬಿಸಿಯಾಗಿ ಮಾಡಿ ಸವಿಯಿರಿ ಪುಂಡಿ

    ಮಳೆಗೆ ಬಿಸಿಬಿಸಿಯಾಗಿ ಮಾಡಿ ಸವಿಯಿರಿ ಪುಂಡಿ

    ರಾವಳಿಯವರು ಮಾಡುವ ಬ್ರೇಕ್ಫಾಸ್ಟ್ ಗಳಲ್ಲಿ ಇದು ಪುಂಡಿ ಒಂದು. ಇದನ್ನು ಕುಂದಾಪುರದ ಕಡೆ ಅಕ್ಕಿ ಉಂಡಿ ಎಂದು ಕರೆದರೆ ತುಳುವಲ್ಲಿ ಪುಂಡಿ ಎಂದು ಕರೆಯುತ್ತಾರೆ.

    ಪುಂಡಿ ಅಥವಾ ಕಡುಬನ್ನು ಎರಡು ವಿಧಾನದಲ್ಲಿ ಮಾಡಬಹುದು. ಮೊದಲನೆಯ ವಿಧಾನವೆಂದರೆ ಅಕ್ಕಿಯನ್ನು ನೆನೆಸಿ, ರುಬ್ಬಿ, ಹಿಟ್ಟು ತಯಾರು ಮಾಡಿಕೊಂಡು ನಂತರ ಸಣ್ಣ ಉರಿಯಲ್ಲಿ ಕಲಕಿ ಬೇಯಿಸುತ್ತ ಮಿಶ್ರಣವನ್ನು ದಪ್ಪವಾಗಿಸಬೇಕು. ಹೀಗೆ ಮಾಡಿದ ಮಿಶ್ರಣದಿಂದ ಉಂಡೆ ಕಟ್ಟಿ ಹಬೆಯಲ್ಲಿ ಬೇಯಿಸಬೇಕು.

    ಇನ್ನೊಂದು ವಿಧಾನವೆಂದರೆ ಅಕ್ಕಿಯನ್ನು ನೆನೆಸಿ ರುಬ್ಬುವ ಬದಲು ಅಕ್ಕಿ ರವೆಯನ್ನು ಬಳಸುವುದು. ಇಲ್ಲಿ ಅಕ್ಕಿ ರವೆ ಹಾಕಿ ಮಾಡುವ ವಿಧಾನವನ್ನು ತೋರಿಸಲಾಗಿದೆ. ಇದನ್ನೂ ಓದಿ: ಘಮ ಘಮಿಸುವ ಪಾಲಕ್ ಚಿಕನ್ ಕರಿ ನೀವೂ ಮಾಡಿ

    ಬೇಕಾಗುವ ಸಾಮಗ್ರಿಗಳು:
    ಅಕ್ಕಿ ರವೆ – 1 ಕಪ್
    ಸಾಸಿವೆ – 1 ಚಮಚ
    ಜೀರಿಗೆ – 1 ಚಮಚ
    ಉದ್ದಿನ ಬೇಳೆ -1 ದೊಡ್ಡ ಚಮಚ
    ಕಡಲೆ ಬೇಳೆ- 1 ದೊಡ್ಡ ಚಮಚ

    ಎಣ್ಣೆ – 2 ದೊಡ್ಡ ಚಮಚ
    ಒಣ ಮೆಣಸಿನ ಕಾಯಿ – 1(ಕಟ್ ಮಾಡಿದ)
    ಗೋಡಂಬಿ – 1 ದೊಡ್ಡ ಚಮಚ( ಕಟ್ ಮಾಡಿದ)
    ತೆಂಗಿನ ತುರಿ – ಅರ್ಧ ಕಪ್
    ನೀರು – ಎರಡೂವರೆ ಕಪ್
    ಉಪ್ಪು – ರುಚಿಗೆ ತಕ್ಕಷ್ಟು
    ಕರಿಬೇವು – ಸ್ವಲ್ಪ

    ಮಾಡುವ ವಿಧಾನ:
    * ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಕಡಲೆ ಬೇಳೆ ಮತ್ತು ಕರಿಬೇವಿನ ಎಲೆಗಳನ್ನು ಹಾಕಿ ಹುರಿಯಿರಿ. ಇದನ್ನೂ ಓದಿ: ಸಿಹಿಯಾದ ಅಂಜೂರ ಹಲ್ವಾ ನೀವು ಮಾಡಿ

    * ಇತ್ತ ತುಂಡು ಮಾಡಿದ ಒಣ ಮೆಣಸಿನಕಾಯಿಯನ್ನು ಹಾಗೂ ಗೋಡಂಬಿಯನ್ನು ಹಾಕಿ 8 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಹುರಿಯಿರಿ. ಬಳಿಕ ಎಲ್ಲಾ ಐಟಂಗಳನ್ನು ಒಂದು ತಟ್ಟೆಗೆ ಹಾಕಿಡಿ. ಇನ್ನೊಂದು ಪಾತ್ರೆಯಲ್ಲಿ ಎರಡೂವರೆ ಕಪ್ ನೀರು ಹಾಕಿ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ ನೀರು ಒಂದು ಕುದಿ ಬರುವ ತನಕ ಬಿಡಿ.

    * ನಂತರ ಹುರಿದಿಟ್ಟ ರವೆಯನ್ನು ಹಾಕಿ ಮಿಕ್ಸ್ ಮಾಡಿ ಸಣ್ಣ ಉರಿಯಲ್ಲಿ ಕೈಯಾಡಿಸುತ್ತಾ ಬೇಯಿಸಿ. ನಂತರ ಅರ್ಧ ಕಪ್ ಹಸಿ ತೆಂಗಿನ ತುರಿ ಹಾಕಿ ಚೆನ್ನಾಗಿ ಕಲಸಿ. ಆಗ ಮಿಶ್ರಣವು ಗಟ್ಟಿಯಾಗುತ್ತಾ ಹೋಗುತ್ತದೆ. ಮಿಶ್ರಣವು ತಳ ಬಿಡಲು ಪ್ರಾಂಭಿಸಿದಾಗ ಉರಿಯನ್ನು ನಿಲ್ಲಿಸಿ. ಬಳಿಕ ಮಿಶ್ರಣವನ್ನು ಬೇರೊಂದು ಪಾತ್ರೆಗೆ ಹಾಕಿಕೊಂಡು ಅಂಗೈಯನ್ನು ತಣ್ಣೀರಿನಲ್ಲಿ ಅದ್ದಿಕೊಂಡು ಪುಂಡಿ(ಉಂಡೆ) ಮಾಡಿ.

    * ಇದಾದ ನಂತರ ಒಂದು ಇಡ್ಲಿ ಸ್ಟೀಮರ್ ನಲ್ಲಿ ಪ್ಲೇಟ್ ಇಟ್ಟು ಅದನ್ನು ಎಣ್ಣೆಯಿಂದ ಸವರಿ, ಅದರ ಮೇಲೆ ಈಗಾಗಲೇ ತಯಾರಿಸಿದ ಪುಂಡಿಗಳನ್ನು ಇಡಿ.ಪುಂಡಿಗಳನ್ನು 12 ನಿಮಿಷಗಳ ಕಾಲ ದೊಡ್ಡ ಉರಿಯಲ್ಲಿ ಹಬೆಯಲ್ಲಿ ಬೇಯಿಸಿದರೆ ಅಕ್ಕಿ ಪುಂಡಿ ತಯಾರಾಗುತ್ತದೆ. ಬಿಸಿ ಬಿಸಿಯಾಗಿರುವ ಈ ಪುಂಡಿಯನ್ನುಯ ತೆಂಗಿನ ಕಾಯಿ ಚಟ್ನಿ ಜೊತೆ ಸವಿಯಿರಿ.