Tag: ಪೀಣ್ಯ

  • ಕುಡಿಯಲು ನೀರು ನೀಡದ್ದಕ್ಕೆ ಲಟ್ಟಣಿಗೆಯಿಂದ ಹಲ್ಲೆ- ಪತ್ನಿ ಸಾವು, ಪತಿ ಅರೆಸ್ಟ್

    ಕುಡಿಯಲು ನೀರು ನೀಡದ್ದಕ್ಕೆ ಲಟ್ಟಣಿಗೆಯಿಂದ ಹಲ್ಲೆ- ಪತ್ನಿ ಸಾವು, ಪತಿ ಅರೆಸ್ಟ್

    ಬೆಂಗಳೂರು: ಕುಡಿಯಲು ನೀರು ಕೊಡಲಿಲ್ಲ ಎಂದಿದ್ದಕ್ಕೆ ಪತ್ನಿ (Wife) ಮೇಲೆ ಪತಿ ಮಾರಣಾಂತಿಕ ಹಲ್ಲೆ ನಡೆಸಿದ್ದು, ಇದೀಗ ಪತ್ನಿ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವ ಘಟನೆ ಪೀಣ್ಯದ (Peenya) ಬಳಿಯ ಚೊಕ್ಕಸಂದ್ರದಲ್ಲಿ ನಡೆದಿದೆ.

    ಮಧ್ಯಪ್ರದೇಶ ಮೂಲದ ಪ್ರೀತಿ ಸಿಂಗ್(26) ಮೃತ ಪತ್ನಿ. ಛೋಟೆಲಾಲ್ ಸಿಂಗ್ ಕೊಲೆ ಆರೋಪಿ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಕ್ರಿಕೆಟ್‌ ನೋಡಿ ಮರಳುತ್ತಿದ್ದಾಗ ಬಿತ್ತು ಮರ – ಯುವತಿಯ ಮೃತದೇಹ ವಿಕ್ಟೋರಿಯಾಗೆ ರವಾನೆ

    ಛೋಟೆಲಾಲ್ ಸಿಂಗ್ ಹಾಗೂ ಪ್ರೀತಿ ಸಿಂಗ್ ಇಬ್ಬರೂ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಸೆ.24 ರಂದು ಕುಡಿದು ಮನೆಗೆ ಬಂದ ಛೋಟೆಲಾಲ್ ಹೆಂಡತಿ ಬಳಿ ನೀರು ಕೇಳಿದ್ದ. ನಾನು ಕೆಲಸಕ್ಕೆ ಹೋಗ್ಬೇಕು, ನೀನೇ ನೀರು ತಗೊಂಡು ಕುಡಿ ಎಂದು ಪತ್ನಿ ಹೇಳಿದ್ದಳು ಎನ್ನಲಾಗಿದೆ.

    ಇದರಿಂದ ಕೋಪಗೊಂಡ ಛೋಟೆಲಾಲ್ ಲಟ್ಟಣಿಗೆಯಿಂದ ಪತ್ನಿಯ ತಲೆಗೆ ಹೊಡೆದಿದ್ದ. ಈ ವೇಳೆ ಗಂಭೀರ ಗಾಯಗೊಂಡ ಪ್ರೀತಿ ಅಲ್ಲೇ ಕೋಮಾಗೆ ಜಾರಿದ್ದಳು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೂಡ ನೀಡಲಾಗಿತ್ತು. ಆದ್ರೆ, ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.

    ಇದೀಗ ಕೊಲೆ ಪ್ರಕರಣ ದಾಖಲಿಸಿಕೊಂಡ ಪೀಣ್ಯ ಪೊಲೀಸರು, ಆರೋಪಿ ಛೋಟೆಸಿಂಗ್‌ನನ್ನು ಬಂಧಿಸಿ, ತನಿಖೆ ಮುಂದುವರಿಸಿದ್ದಾರೆ.

  • ಬಿಎಂಟಿಸಿ ಬಸ್ ಅಪಘಾತದಲ್ಲಿ ಯುವತಿ ಬಲಿ ಪ್ರಕರಣ – ಕಂಡಕ್ಟರ್‌ ಅಮಾನತು, ಚಾಲಕ ವಜಾ

    ಬಿಎಂಟಿಸಿ ಬಸ್ ಅಪಘಾತದಲ್ಲಿ ಯುವತಿ ಬಲಿ ಪ್ರಕರಣ – ಕಂಡಕ್ಟರ್‌ ಅಮಾನತು, ಚಾಲಕ ವಜಾ

    – ಕಂಡಕ್ಟರ್, ಡ್ರೈವರ್ ವಿರುದ್ಧ FIR ದಾಖಲು

    ಬೆಂಗಳೂರು: ಬಿಎಂಟಿಸಿ (BMTC) ಎಲೆಕ್ಟ್ರಿಕ್ ಬಸ್ ಹೋಟೆಲ್‌ಗೆ ಡಿಕ್ಕಿಯಾದ ಪರಿಣಾಮ ಯುವತಿಯೊಬ್ಬಳು ಬಲಿಯಾಗಿರುವ ಪ್ರಕರಣ ಸಂಬಂಧ ಕಂಡಕ್ಟರ್ ಹಾಗೂ ಡ್ರೈವರ್ ವಿರುದ್ಧ ಪೀಣ್ಯ ಪೊಲೀಸ್ (Peenya Police) ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

    ಈಗಾಗ್ಲೇ ಕಂಡಕ್ಟರ್‌ನನ್ನು ಬಿಎಂಟಿಸಿ ಅಮಾನತು ಮಾಡಿದೆ. ಇದೀಗ ಬಸ್ ಚಾಲಕನನ್ನೂ ಕೆಲಸದಿಂದ ವಜಾ ಮಾಡಲು ಟಾಟಾ ಮೋಟರ್ ಸಂಸ್ಥೆ ನಿರ್ಧಾರ ಮಾಡಿದೆ. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ- ಎಸ್‍ಐಟಿ ರಚಿಸಿದ ಸರ್ಕಾರ

    ಏನಿದು ಪ್ರಕರಣ?
    ಜುಲೈ 18ರಂದು ಬೆಳಗ್ಗೆ ಪೀಣ್ಯ (Peenya) 2ನೇ ಹಂತದಲ್ಲಿ ಬಸ್ ಡ್ರೈವರ್ ಮತ್ತು ಕಂಡಕ್ಟರ್ ನಡುವೆ ಜಗಳವಾಗಿತ್ತು. ಈ ವೇಳೆ ಡ್ರೈವರ್ ಬಸ್‌ನಿಂದ ಕೆಳಗಿಳಿದು ಹೋಗಿದ್ದ. ಈ ವೇಳೆ ಕಂಡಕ್ಟರ್ ಬಸ್ ಚಲಾಯಿಸಿದ್ದ. ಈ ಸಂದರ್ಭ ಬಸ್ ನಿಯಂತ್ರಣ ತಪ್ಪಿ, ಫುಟ್‌ಪಾತ್ ಏರಿ ಹೋಟೆಲ್‌ಗೆ ಡಿಕ್ಕಿಯಾಗಿದೆ. ಅಪಘಾತದಲ್ಲಿ ಹೋಟೆಲ್ ಬಳಿ ನಿಂತಿದ್ದ ಓರ್ವ ಯುವತಿ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದರು.

  • ಪೀಣ್ಯ ಫ್ಲೈಓವರ್ ಮೇಲೆ ಹೊತ್ತಿ ಉರಿದ ಲಾರಿ – ಚಾಲಕ ಪಾರು

    ಪೀಣ್ಯ ಫ್ಲೈಓವರ್ ಮೇಲೆ ಹೊತ್ತಿ ಉರಿದ ಲಾರಿ – ಚಾಲಕ ಪಾರು

    – ತಾತ್ಕಾಲಿಕವಾಗಿ ಪೀಣ್ಯ ಫ್ಲೈಓವರ್ ಬಂದ್

    ಬೆಂಗಳೂರು: ಫ್ಲೈಓವರ್ ಮೇಲೆ ಲಾರಿಯೊಂದು (Lorry) ಏಕಾಏಕಿ ಹೊತ್ತಿ ಉರಿದ ಘಟನೆ ಬೆಂಗಳೂರಿನ (Bengaluru) ಪೀಣ್ಯದಲ್ಲಿ ನಡೆದಿದೆ.

    ಗುರುವಾರ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಘಟನೆ ನಡೆದಿದೆ. ಲಾರಿಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಚಾಲಕ ಕೂಡಲೇ ಲಾರಿಯಿಂದ ಕೆಳಗಿಳಿದಿದ್ದಾರೆ. ಬೆಂಕಿ ಹೊತ್ತಿಕೊಂಡ ಹಿನ್ನೆಲೆ ನಗರದ ಕಡೆಗೆ ಕೆಲಗಂಟೆಗಳ ಕಾಲ ಪೀಣ್ಯ ಫ್ಲೈಓವರ್ (Peenya Flyover) ತಾತ್ಕಾಲಿಕವಾಗಿ ಬಂದ್ ಮಾಡಲಾಗಿತ್ತು. ನಗರದ ಕಡೆಗೆ ಬರುವವರು ಫ್ಲೈಓವರ್ ಕೆಳಗಡೆ ಬರುವಂತೆ ಸೂಚನೆ ನೀಡಲಾಗಿತ್ತು. ಇದನ್ನೂ ಓದಿ: ಬಿಜೆಪಿ ನೂತನ ರಾಷ್ಟ್ರಾಧ್ಯಕರ ಆಯ್ಕೆ ಪ್ರಕ್ರಿಯೆ ಚುರುಕು – ಶೀಘ್ರದಲ್ಲಿ ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲೂ ಅಧ್ಯಕ್ಷರ ಬದಲಾವಣೆ?

    ಘಟನೆ ನಡೆದ ಕೂಡಲೇ ಸ್ಥಳೀಯರು 112ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಇದನ್ನೂ ಓದಿ:  ನಾವು ಹಿಂದೂಗಳಿಗಿಂತ ವಿಭಿನ್ನ – ಎರಡು ರಾಷ್ಟ್ರ ಥಿಯರಿ ಹೇಳಿ ಪಾಠ ಮಾಡಿದ ಪಾಕಿಸ್ತಾನ ಸೇನಾ ಮುಖ್ಯಸ್ಥ

  • ಬಿಎಂಟಿಸಿ ಬಸ್‍ನಲ್ಲಿ ಜಡೆ ಜಗಳ- ಚಪ್ಪಲಿಯಲ್ಲಿ ಹೊಡೆದಾಡಿಕೊಂಡ ಮಹಿಳೆಯರು

    ಬಿಎಂಟಿಸಿ ಬಸ್‍ನಲ್ಲಿ ಜಡೆ ಜಗಳ- ಚಪ್ಪಲಿಯಲ್ಲಿ ಹೊಡೆದಾಡಿಕೊಂಡ ಮಹಿಳೆಯರು

    ಬೆಂಗಳೂರು: ಬಸ್‍ನ ಕಿಟಕಿ ವಿಚಾರಕ್ಕೆ ಇಬ್ಬರು ಮಹಿಳಾ ಪ್ರಯಾಣಿಕರ ನಡುವೆ ಜಗಳ ನಡೆದು, ಒಬ್ಬರಿಗೊಬ್ಬರು ಚಪ್ಪಲಿಯಲ್ಲಿ ಹೊಡೆದಾಡಿಕೊಂಡ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ನಡೆದಿದೆ.

    ಮೆಜೆಸ್ಟಿಕ್‍ನಿಂದ ಪೀಣ್ಯಕ್ಕೆ ಹೊರಟಿದ್ದ ಕೆಎ 57 ಎಫ್ 4255 ನಂಬರ್‌ನ ಬಿಎಂಟಿಸಿ ಬಸ್‍ನಲ್ಲಿ (BMTC Bus) ಈ ಘಟನೆ ನಡೆದಿದೆ. ಮುಂದಿನ ಸೀಟ್‍ನಲ್ಲಿ ಕುಳಿತಿದ್ದ ಮಹಿಳೆ ಹಾಗೂ ಹಿಂದಿನ ಸೀಟ್‍ನಲ್ಲಿ ಕುಳಿತ ಮಹಿಳೆಯ ನಡುವೆ ಬಸ್‍ನ ಕಿಟಕಿ ವಿಚಾರಕ್ಕೆ ಗಲಾಟೆ ನಡೆದಿದೆ. ಜಗಳ ತಾರಕಕ್ಕೇರಿ ಮುಂದೆ ಕುಳಿತಿದ್ದ ಮಹಿಳೆಯು ಏಕಾಏಕಿಯಾಗಿ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾಳೆ. ಬಳಿಕ ಇಬ್ಬರೂ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಇದನ್ನೂ ಓದಿ: ಪಾಕ್‌ನಲ್ಲಿ ಸಾರ್ವತ್ರಿಕ ಚುನಾವಣೆಗೆ ಇಂದು ಮತದಾನ- ಮೊಬೈಲ್‌ ಸೇವೆ ಸ್ಥಗಿತ

    ಈ ವೇಳೆ ಬಸ್‍ನಲ್ಲಿದ್ದ ಜನ ಮುಂದಿನ ಸೀಟ್‍ನಲ್ಲಿದ್ದ ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಗಲಾಟೆಯ ವೀಡಿಯೋ ಬಸ್‍ನಲ್ಲಿದ್ದ ಸಹ ಪ್ರಯಾಣಿಕರ ಮೊಬೈಲ್‍ನಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಜೆಡಿಎಸ್‌ ತೊರೆದು ಬಿಜೆಪಿ ಸೇರಿದ್ದ ನಾರಾಯಣ ಗೌಡ ಕಾಂಗ್ರೆಸ್‌ ಸೇರ್ಪಡೆ?

  • ವಾಹನ ಸವಾರರಿಗೆ ಗುಡ್‌ನ್ಯೂಸ್ – ಪೀಣ್ಯ ಫ್ಲೈಓವರ್‌ನಲ್ಲಿ ಹೆವಿ ವೆಹಿಕಲ್ ಸಂಚಾರಕ್ಕೆ ಗ್ರೀನ್ ಸಿಗ್ನಲ್

    ವಾಹನ ಸವಾರರಿಗೆ ಗುಡ್‌ನ್ಯೂಸ್ – ಪೀಣ್ಯ ಫ್ಲೈಓವರ್‌ನಲ್ಲಿ ಹೆವಿ ವೆಹಿಕಲ್ ಸಂಚಾರಕ್ಕೆ ಗ್ರೀನ್ ಸಿಗ್ನಲ್

    – ಫೆಬ್ರವರಿ ಮೊದಲ ವಾರದಲ್ಲಿ ವಾಹನ ಸಂಚಾರಕ್ಕೆ ಸಿಗ್ನಲ್ ಕೊಟ್ಟ ಐಐಎಸ್‌ಸಿ

    ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಿಂದ (Bengaluru) ರಾಜ್ಯದ 22 ಜಿಲ್ಲೆಗಳು ಸೇರಿದಂತೆ ಗೋವಾ, ಮಹಾರಾಷ್ಟ್ರಕ್ಕೆ ಸಂಪರ್ಕಿಸುವ ಪೀಣ್ಯ ಫ್ಲೈಓವರ್ (Peenya Flyover) ಮೇಲೆ ಸಂಚರಿಸುವ ವಾಹನ ಸವಾರರಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಹೆವಿ ವಾಹನಗಳ (Heavy Vehicle) ಸಂಚಾರಕ್ಕೆ ಫ್ಲೈಓವರ್ ಫಿಟ್ ಆಗಿರುವ ಬಗ್ಗೆ ಐಐಎಸ್‌ಸಿ (IISC) ತಜ್ಞರ ವರದಿ ಎನ್‌ಹೆಚ್‌ಎಐ ಕೈ ಸೇರಿದೆ.

    ಬೆಂಗಳೂರಿನಿಂದ ರಾಜ್ಯದ ಶೇ.80ರಷ್ಟು ಜಿಲ್ಲೆಗಳಿಗೆ ಸಂಪರ್ಕಿಸುವ ಪೀಣ್ಯ ಫ್ಲೈಓವರ್‌ಗೆ ಹಿಡಿದಿದ್ದ ಗ್ರಹಣ ದೂರಾಗುವ ಸಂದರ್ಭ ಬಂದಿದೆ. ಇದೇ ಫೆಬ್ರವರಿ ಮೊದಲ ವಾರದಿಂದಲೇ ಹೆವಿ ವೆಹಿಕಲ್ ಓಡಾಟಕ್ಕೆ ಸಂಚಾರ ಮುಕ್ತವಾಗುವ ಸಾಧ್ಯತೆ ಇದೆ. ಫ್ಲೈಓವರ್ ಲೋಡ್ ಟೆಸ್ಟಿಂಗ್ ಬಳಿಕ ಫ್ಲೈಓವರ್ ಫಿಟ್ನೆಸ್ ಬಗ್ಗೆ ಪರೀಕ್ಷೆ ಮಾಡಿದ್ದ ಐಐಎಸ್‌ಸಿ ತಜ್ಞರ ತಂಡ ವರದಿ ಸಿದ್ಧಪಡಿಸಿ ಎನ್‌ಹೆಚ್‌ಎಐ ಅಧಿಕಾರಿಗಳಿಗೆ ರಿಪೋರ್ಟ್ ನೀಡಿದೆ. ಇದನ್ನೂ ಓದಿ: ಕೆ.ಎನ್.ರಾಜಣ್ಣ, ಶಾಮನೂರು ಶಿವಶಂಕರಪ್ಪಗೆ ಕೈ ಹೈಕಮಾಂಡ್ ವಾರ್ನಿಂಗ್

    2 ವರ್ಷದಿಂದ ಹೆವಿ ವಾಹನಗಳ ಸಂಚಾರಕ್ಕೆ ಹೇರಿದ್ದ ನಿರ್ಬಂಧ ಸದ್ಯ ಇದೇ ಫೆಬ್ರವರಿ ಮೊದಲ ವಾರದಲ್ಲಿ ತೆರವು ಮಾಡುವ ಸಾಧ್ಯತೆ ಇದೆ. ಫ್ಲೈಓವರ್ ಎರಡು ಪಿಲ್ಲರ್‌ಗಳಲ್ಲಿ ಕಾಣಿಸಿಕೊಂಡ ಸಮಸ್ಯೆಯಿಂದಾಗಿ ಹೆವಿ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಸಮಸ್ಯೆ ಪತ್ತೆಗೆ ಮುಂದಾಗಿದ್ದ ಐಐಎಸ್‌ಸಿ ತಜ್ಞರು ಫ್ಲೈಓವರ್ ಕೇಬಲ್‌ಗಳು ಹಾಳಾಗಿದ್ದ ಕಾರಣವನ್ನು ಪತ್ತೆ ಹಚ್ಚಿದ್ದಾರೆ. ಈ ಹಿಂದೆ ಪಿಲ್ಲರ್‌ಗಳಿಗೆ ಅಳವಡಿಕೆ ಮಾಡಿದ್ದ ಕೇಬಲ್‌ಗಳು ತುಕ್ಕು ಹಿಡಿದಿದ್ದೆ ದೋಷಕ್ಕೆ ಕಾರಣ ಎಂಬ ರಿಪೋರ್ಟ್ ನೀಡಿವೆ. ಇದನ್ನೂ ಓದಿ: ಕೆರೆಗೋಡು ಹನುಮ ಧ್ವಜ ಪ್ರಕರಣ – ಪಿಡಿಓ ಅಮಾನತು

    ಕೇಬಲ್‌ಗಳಿಗೆ ನೀರು ತಗುಲಿದ್ದ ಕಾರಣ ಸಂಪೂರ್ಣ ಕೇಬಲ್ ತುಕ್ಕು ಹಿಡಿದಿದ್ದ ಪರಿಣಾಮ ಪಿಲ್ಲರ್‌ಗಳಲ್ಲಿ ಅಳವಡಿಕೆ ಮಾಡಿದ್ದ ಕೇಬಲ್ ಹಾಳಾಗಿತ್ತು. ಸದ್ಯ ಈಗ ಆ ಎಲ್ಲವನ್ನು ತೆರವು ಮಾಡಿ ಈ ಹಿಂದೆ ಅಳವಡಿಕೆ ಮಾಡಿದ್ದ ಕೇಬಲ್‌ಗಳಿಗಿಂತ 4 ಪಟ್ಟು ಸದೃಢವಾದ ಕೇಬಲ್ ಅಳವಡಿಕೆ ಮಾಡುವುದರ ಜೊತೆಗೆ ತುಕ್ಕು ಹಿಡಿಯದಂತೆ ಗ್ರೀಸ್ ಇರುವ ಕೇಬಲ್ ಅನ್ನು ಅಳವಡಿಕೆ ಮಾಡಲಾಗಿದೆ. ಜೊತೆಗೆ ಮುಂದೆ ಈ ರೀತಿ ಸಮಸ್ಯೆಯಾದರೆ ವಾಹನ ಓಡಾಟ ನಿಲ್ಲಿಸದೇ ಹಾಗೇ ಸರಿ ಮಾಡಬಹುದಾದ ಕ್ಷಮತೆ ಕೂಡ ಕೇಬಲ್‌ಗೆ ಇದೆ ಎಂದು ಐಐಎಸ್‌ಸಿ ವರದಿ ನೀಡಿದೆ. ಇದನ್ನೂ ಓದಿ: ವಿಷ್ಣುವಿನ 11ನೇ ಅವತಾರವಾಗಲು ಮೋದಿ ಪ್ರಯತ್ನಿಸ್ತಿದ್ದಾರೆ: ಮಲ್ಲಿಕಾರ್ಜುನ ಖರ್ಗೆ

    ಸದ್ಯ ಇದೇ ವಾರ ಐಐಎಸ್‌ಸಿ ತಜ್ಞರು ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಭೆ ಮಾಡಲಿದ್ದು, ಸಭೆ ಬಳಿಕ ಸಂಚಾರ ಮುಕ್ತ ಯಾವಾಗ ಎಂಬ ಅಧಿಕೃತ ಮಾಹಿತಿ ನೀಡುವ ಸಾಧ್ಯತೆ ಇದೆ. ಕಳೆದೆರಡು ವರ್ಷಗಳಿಂದ ಟ್ರಾಫಿಕ್‌ನಿಂದ ಪರದಾಡುತ್ತಿದ್ದ ಹೆವಿ ವಾಹನಗಳಿಗೆ ಸದ್ಯ ಗುಡ್‌ನ್ಯೂಸ್ ಸಿಕ್ಕಿದ್ದು, ಇನ್ಮುಂದೆ ಟ್ರಾಫಿಕ್ ಕಿರಿಕಿರಿ ಇಲ್ಲದೆ ಸಂಚಾರ ಮಾಡಬಹುದಾಗಿದೆ. ಇದನ್ನೂ ಓದಿ: ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆದ್ದರೆ ಕಾಂಗ್ರೆಸ್ ಸರ್ಕಾರ ತೆಗೆಯುವ ಗ್ಯಾರಂಟಿ: ಬೊಮ್ಮಾಯಿ

  • ಇಂದಿನಿಂದ 3 ದಿನ ಪೀಣ್ಯ ಫ್ಲೈಓವರ್ ಬಂದ್

    ಇಂದಿನಿಂದ 3 ದಿನ ಪೀಣ್ಯ ಫ್ಲೈಓವರ್ ಬಂದ್

    ಬೆಂಗಳೂರು: ಬರೋಬ್ಬರಿ 22 ಜಿಲ್ಲೆಗಳ ಸಂಚಾರ ರಹದಾರಿ ಪೀಣ್ಯ ಫ್ಲೈಓವರ್ (Peenya Flyover) ಇಂದಿನಿಂದ ಮತ್ತೆ ಮೂರು ದಿನಗಳ ಕಾಲ ಬಂದ್ ಆಗಲಿದೆ. ಲೋಡ್ ಟೆಸ್ಟಿಂಗ್‌ಗಾಗಿ (Load Testing) ಎನ್‌ಹೆಚ್‌ಎ (NHA) ಮನವಿ ಮೇರೆಗೆ ಸಂಚಾರಿ ಪೊಲೀಸರು ಇಂದಿನಿಂದ ಫ್ಲೈಓವರ್ ಕ್ಲೋಸ್ ಮಾಡಲಿದ್ದಾರೆ.

    ಸುಮಾರು ಮೂರು ವರ್ಷದಿಂದ ಪೀಣ್ಯ ಫ್ಲೈಓವರ್ ಭಾರಿ ವಾಹನಗಳಿಗೆ ಬಂದ್ ಆಗಿದೆ. 2021ರಲ್ಲಿ ಪೀಣ್ಯ ಫ್ಲೈಓವರ್‌ನಲ್ಲಿ ತಾಂತ್ರಿಕ ತೊಂದರೆ ಉಂಟಾಗಿ ಭಾರಿ ಪ್ರಮಾಣದ ವಾಹನಗಳ ಸಂಚಾರ ನಿಷೇಧ ಮಾಡಲಾಗಿತ್ತು. ಪೀಣ್ಯ ಫ್ಲೈಓವರ್‌ನ ಗುಣಮಟ್ಟ ಸರಿಯಿಲ್ಲ, ಕಳಪೆ ಕಾಮಾಗಾರಿ, ಇಡೀ ಫ್ಲೈಓವರ್ ಅನ್ನು ಕೆಡವಬೇಕು ಎಂಬ ಚರ್ಚೆ ಆರಂಭವಾಗಿತ್ತು. ಆದರೆ ಕೆಲ ದಿನಗಳ ನಂತರ ಸಣ್ಣಪುಟ್ಟ ಕಾಮಾಗಾರಿ ಮಾಡಿ ಕೆಲ ಕೇಬಲ್‌ಗಳನ್ನು ಅಳವಡಿಸಿ ಸಣ್ಣ ಪ್ರಮಾಣದ ವೆಹಿಕಲ್ ಓಡಾಟಕ್ಕೆ ಅವಕಾಶ ಮಾಡಲಾಗಿತ್ತು. ಫ್ಲೈಓವರ್ ಮೇಲೆ ಸಂಪೂರ್ಣವಾಗಿ ಹೆವಿ ವೆಹಿಕಲ್‌ಗಳ ಓಡಾಟ ನಿರ್ಬಂಧಿಸಲಾಗಿತ್ತು. ಇದೀಗ ಮತ್ತೆ ಮೂರು ದಿನಗಳ ಕಾಲ ಪೀಣ್ಯ ಫ್ಲೈಓವರ್ ಬಂದ್ ಮಾಡಲಾಗುತ್ತದೆ. ಇದನ್ನೂ ಓದಿ: ನನಗೆ ತುಂಬಾ ಖುಷಿಯಾಗಿದೆ: ಅಯೋಧ್ಯೆ ರಾಮಮಂದಿರಕ್ಕೆ ಮಗ ಕೆತ್ತಿರುವ ರಾಮಲಲ್ಲಾ ಮೂರ್ತಿ ಆಯ್ಕೆಯಾಗಿದ್ದಕ್ಕೆ ತಾಯಿ ಸಂತಸ

    ಇಂದು ರಾತ್ರಿ 11 ಗಂಟೆಯಿಂದ ಜನವರಿ 19ರ ಬೆಳಗ್ಗೆ 11 ಗಂಟೆವರೆಗೆ ಪೀಣ್ಯ ಫ್ಲೈಓವರ್ ಬಂದ್ ಮಾಡಲಾಗುತ್ತದೆ. ಎನ್‌ಹೆಚ್‌ಎಐ ಅಧಿಕಾರಿಗಳು ಕೇಬಲ್ ಅಳವಡಿಕೆ ಕಾರ್ಯ ಪೂರ್ಣಗೊಳಿಸಿದ್ದು, ಹೆವಿ ವೆಹಿಕಲ್‌ಗಳ ಓಡಾಟ ನಡೆಸಿ ಪರೀಕ್ಷೆ ನಡೆಸಲಿದ್ದಾರೆ. ಹೆವಿ ವೆಹಿಕಲ್‌ಗಳ ಓಡಾಟಕ್ಕೆ ತಂತ್ರಜ್ಞರು ಯೆಸ್ ಅಂದರೆ ಇನ್ಮುಂದೆ ಬಸ್ಸು, ಲಾರಿಗಳು ಫ್ಲೈಓವರ್ ಮೇಲೆಯೇ ಸಾಗಬಹುದು. ಹೀಗಾಗಿ ಎನ್‌ಹೆಚ್‌ಎಐ ಅಧಿಕಾರಿಗಳ ಮನವಿ ಮೇರೆಗೆ ಮೂರು ದಿನಗಳ ಕಾಲ ಸಂಚಾರಿ ಪೊಲೀಸರು ಫ್ಲೈಓವರ್ ಬಂದ್ ಮಾಡಲಿದ್ದಾರೆ. ಮೂರು ದಿನಗಳ ಕಾಲ ಎನ್‌ಹೆಚ್ 48ರಲ್ಲಿ ಟ್ರಾಫಿಕ್ ಸಮಸ್ಯೆ ಎದುರಾಗಲಿದ್ದು, ವಾಹನ ಸವಾರರು ಪರ್ಯಾಯ ರಸ್ತೆ ಬಳಸುವುದು ಒಳಿತು. ಇದನ್ನೂ ಓದಿ: ಕೆಎಸ್‌ಆರ್‌ಟಿಸಿ ಬಸ್‌ಗೆ ಫುಡ್‌ ಡೆಲಿವರಿ ಬಾಯ್‌ ಬಲಿ

  • ಜ.16ರಿಂದ 3 ದಿನಗಳ ಕಾಲ ಪೀಣ್ಯ ಫ್ಲೈಓವರ್ ಬಂದ್ – ಕಾರಣ ಏನು?

    ಜ.16ರಿಂದ 3 ದಿನಗಳ ಕಾಲ ಪೀಣ್ಯ ಫ್ಲೈಓವರ್ ಬಂದ್ – ಕಾರಣ ಏನು?

    ಬೆಂಗಳೂರು: ಲೋಡ್ ಟೆಸ್ಟಿಂಗ್ (Load Testing) ಮಾಡುವ ಸಲುವಾಗಿ ಜನವರಿ 16ರಿಂದ ಮೂರು ದಿನಗಳ ಕಾಲ ಪೀಣ್ಯ ಫ್ಲೈಓವರ್ (Peenya Flyover) ಬಂದ್ ಆಗಲಿದೆ.

    ಜನವರಿ 16ರ ರಾತ್ರಿ 11 ಗಂಟೆಯಿಂದ ಜನವರಿ 19ರ ಬೆಳಗ್ಗೆ 11 ಗಂಟೆಯವರೆಗೆ ಈ ಫ್ಲೈಓವರ್ ಕ್ಲೋಸ್ ಆಗಲಿದೆ. ಈ ಹಿನ್ನೆಲೆ ಎಲ್ಲಾ ವಾಹನ ಸವಾರರು ಸರ್ವಿಸ್ ರಸ್ತೆ ಬಳಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಇದರಿಂದಾಗಿ ಮುಂದಿನ ವಾರ ತುಮಕೂರು ರಸ್ತೆಯಲ್ಲಿ ಬೃಹತ್ ವಾಹನ ದಟ್ಟಣೆ ಉಂಟಾಗಲಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಮೂರು ಡಿಸಿಎಂ ಚರ್ಚೆ ಹೈಕಮಾಂಡ್ ಅಂಗಳಕ್ಕೆ ಬಂದಿಲ್ಲ: ಖರ್ಗೆ ಸ್ಪಷ್ಟನೆ

    15 ಮೀಟರ್ ಅಗಲದ, 4.2 ಕಿಮೀ ಉದ್ದದ ಮೇಲ್ಸೇತುವೆ ಪೀಣ್ಯದಲ್ಲಿ ಪ್ರಾರಂಭವಾಗಿ ತುಮಕೂರು ರಸ್ತೆಯ ನಾಗಸಂದ್ರದಲ್ಲಿ ಕೊನೆಗೊಳ್ಳುತ್ತದೆ. 2022ರಲ್ಲಿ ಪೀಣ್ಯ ಫ್ಲೈಓವರ್‌ನ ಎರಡು ಪಿಲ್ಲರ್‌ನ ಕೇಬಲ್‌ಗಳಲ್ಲಿ ತಾಂತ್ರಿಕ ಸಮಸ್ಯೆ ಉಂಟಾದ ಕಾರಣ ಹೆವಿ ವೆಹಿಕಲ್‌ಗಳ ಓಡಾಟಕ್ಕೆ ಬ್ರೇಕ್ ಹಾಕಲಾಗಿತ್ತು. ಇದನ್ನೂ ಓದಿ: ವಿಜಯಪುರ ಪಾಲಿಕೆ ಮತ್ತೆ ಕಾಂಗ್ರೆಸ್‌ ತೆಕ್ಕೆಗೆ – ಚುನಾವಣೆ ಬಹಿಷ್ಕರಿಸಿದ ಯತ್ನಾಳ್‌, ಬಿಜೆಪಿ ಸದಸ್ಯರು

    ಈ ಕುರಿತು ಎನ್‌ಹೆಚ್‌ಎಐ ಯೋಜನಾ ನಿರ್ದೇಶಕ ಜಯಕುಮಾರ್ ಮಾತನಾಡಿದ್ದು, ಕಾಮಗಾರಿ ಪೂರ್ಣಗೊಂಡಿದೆ. ಪ್ರಿಸ್ಟ್ರೆಸ್ಡ್ ಕೇಬಲ್‌ಗಳ ಸಾಮರ್ಥ್ಯವನ್ನು ನಿರ್ಣಯಿಸಲು ನಾವು ಲೋಡ್ ಪರೀಕ್ಷೆಗಳನ್ನು ನಡೆಸಬೇಕಾಗಿದೆ. ಲೋಡ್ ಪರೀಕ್ಷೆಯ ಸಮಯದಲ್ಲಿ ತಲಾ 32 ಟನ್‌ಗಳನ್ನು ಹೊತ್ತ 8 ಟ್ರಕ್‌ಗಳನ್ನು 48 ಗಂಟೆಗಳಿಗೂ ಹೆಚ್ಚು ಕಾಲ ಫ್ಲೈಓವರ್ ಮೇಲೆ ಓಡಿಸಲಾಗುತ್ತದೆ. ನಾವು ಎರಡು ಸ್ಪ್ಯಾನ್‌ಗಳನ್ನು ಮಾತ್ರ ಪರಿಶೀಲಿಸುತ್ತೇವೆ. ಇದಕ್ಕಾಗಿ 105-106 ಮತ್ತು 117-118 ಕಂಬಗಳನ್ನು ಸಂಪರ್ಕಿಸುವ ವ್ಯಾಪ್ತಿಯನ್ನು ಎನ್‌ಹೆಚ್‌ಎಐ ಗುರುತಿಸಿದೆ ಎಂದು ತಿಳಿಸಿದರು. ಇದನ್ನೂ ಓದಿ: ಮುಸ್ಲಿಮರ ಜನಸಂಖ್ಯೆ ಹೆಚ್ಚಾದ್ರೆ ಹಿಂದೂಗಳ ಪರಿಸ್ಥಿತಿ ಹೇಗಿರತ್ತೆ ಯೋಚ್ನೆ ಮಾಡಿ: ಹರೀಶ್ ಪೂಂಜಾ ಭಾಷಣ ವೈರಲ್

    ಈ ಫ್ಲೈಓವರ್ 23 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವುದಲ್ಲದೇ ಬೆಂಗಳೂರು ಮತ್ತು ರಾಜ್ಯದ ಇತರೆ ಜಿಲ್ಲೆಗಳಿಗೆ ಒಂದು ರೀತಿಯ ಆರ್ಥಿಕ ಚೇತರಿಕೆಯ ಕೊಂಡಿ ಆಗಿದೆ. ಪೀಣ್ಯ ಮೇಲ್ಸೇತುವೆ ಒಟ್ಟು 120 ಪಿಲ್ಲರ್‌ಗಳನ್ನು ಒಳಗೊಂಡಿದೆ. ಇದನ್ನೂ ಓದಿ: ಮ್ಯಾನ್ಮಾರ್‌ನಲ್ಲಿರುವ ಉಗ್ರರ ಶಿಬಿರದ ಮೇಲೆ ಭಾರತದಿಂದ ಬಾಂಬ್‌ ದಾಳಿ!

  • ಪೀಣ್ಯದಲ್ಲಿ ಕೆಟ್ಟು ನಿಂತ ರೈಲು : ನಾಗಸಂದ್ರ – ಪೀಣ್ಯ ಮೆಟ್ರೋ ಸಂಚಾರ ಸ್ಥಗಿತ

    ಪೀಣ್ಯದಲ್ಲಿ ಕೆಟ್ಟು ನಿಂತ ರೈಲು : ನಾಗಸಂದ್ರ – ಪೀಣ್ಯ ಮೆಟ್ರೋ ಸಂಚಾರ ಸ್ಥಗಿತ

    ಬೆಂಗಳೂರು: ತಾಂತ್ರಿಕ ದೋಷದಿಂದ ಪೀಣ್ಯ ನಿಲ್ದಾಣದಲ್ಲಿ (Peenya Metro Station) ಮೆಟ್ರೋ ರೈಲು ಕೆಟ್ಟು ನಿಂತಿದ್ದು ಪ್ರಯಾಣಿಕರು ಪರದಾಡುತ್ತಿದ್ದಾರೆ.

    ಬೆಳಗ್ಗೆ 10 ಗಂಟೆಯ ವೇಳೆಗೆ ರೈಲು ಕೆಟ್ಟು ನಿಂತಿದ್ದು ಹಸಿರು ಮಾರ್ಗದ ಮೆಟ್ರೋ (Green Line Metro) ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

    ಸದ್ಯ ಯಶವಂತಪುರ – ಸಿಲ್ಕ್ ಇನ್‌ಸ್ಟಿಟ್ಯೂಟ್‌ ವರೆಗೆ ಮಾತ್ರ ಮೆಟ್ರೋ ಸಂಚಾರ ನಡೆಸುತ್ತಿದ್ದು ಪೀಣ್ಯ – ನಾಗಸಂದ್ರ ರೈಲು ಸಂಚಾರ ಸ್ಥಗಿತಗೊಂಡಿದೆ. ಮುಂದಿನ 2 ಗಂಟೆಯ ಒಳಗಡೆ ತಾಂತ್ರಿಕ ದೋಷವನ್ನು ಸರಿಪಡಿಸಲಾಗುವುದು ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

  • ಪೇಯಿಂಟ್ ಮಿಕ್ಸರ್‌ಗೆ ಕೂದಲು ಸಿಲುಕಿ ಮಹಿಳೆ ಸಾವು

    ಪೇಯಿಂಟ್ ಮಿಕ್ಸರ್‌ಗೆ ಕೂದಲು ಸಿಲುಕಿ ಮಹಿಳೆ ಸಾವು

    ಬೆಂಗಳೂರು: ಬಣ್ಣ ಬೆರೆಸುವ ಪೇಯಿಂಟ್ ಮಿಕ್ಸರ್‌ಗೆ (Paint Mixer) ಕೂದಲು (Hair) ಸಿಲುಕಿ ಮಹಿಳೆ (Woman) ದಾರುಣವಾಗಿ ಸಾವನ್ನಪ್ಪಿದ ಘಟನೆ ನೆಲಗದರನಹಳ್ಳಿಯ ಕಾರ್ಖಾನೆಯೊಂದರಲ್ಲಿ (Factory) ನಡೆದಿದೆ.

    ಶ್ವೇತಾ (34) ಸಾವನ್ನಪ್ಪಿದ ಮಹಿಳೆ. ಗಂಡ ಮತ್ತು ಮಗನ ಜೊತೆ ಶ್ವೇತಾ ಮಲ್ಲತ್ತಹಳ್ಳಿಯಲ್ಲಿ ವಾಸವಾಗಿದ್ದರು. ಕಾರ್ಖಾನೆಯಲ್ಲಿ ಕೆಲಸ ಮಾಡುವ ವೇಳೆ ಬಣ್ಣ ಬೆರೆಸುವ ಮಿಕ್ಸರ್‌ಗೆ ಜಡೆ ಸಿಲುಕಿ ಘಟನೆ ನಡೆದಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ರೌಡಿಶೀಟರ್‌ ಬರ್ಬರ ಹತ್ಯೆ

    ಬಣ್ಣ ಗಟ್ಟಿಯಾಗುತ್ತಿದ್ದರಿಂದ ಪರಿಶೀಲಿಸಲು ಮಿಕ್ಸರ್ ಬಳಿ ಬಂದು ಬಗ್ಗಿದಾಗ ಈ ಅವಘಡ ಸಂಭವಿಸಿದೆ. ಜಡೆ ಸಿಲುಕಿದಾಗ ಮಹಿಳೆ ಕೂಗಿಕೊಂಡರೂ ಮಿಕ್ಸರ್ ಶಬ್ದದಿಂದಾಗಿ ಯಾರಿಗೂ ಕೇಳಿಸಿಲ್ಲ. ಬಳಿಕ ಉಳಿದ ಕೆಲಸಗಾರರು ಮಿಕ್ಸರ್ ಬಳಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಪೀಣ್ಯ (Peenya) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಹನಿಟ್ರ್ಯಾಪ್ – ನಾಪತ್ತೆಯಾಗಿದ್ದ ನಿವೃತ್ತ ಯೋಧನ ಮೃತದೇಹ ಪಂಪಿನ ಕೆರೆಯಲ್ಲಿ ಪತ್ತೆ

  • ಬೆಂಗ್ಳೂರಲ್ಲಿ ಕದ್ರು, ಚೆನ್ನೈನಲ್ಲಿ ಮಾರಿದ್ರು- ಕೊನೆಗೂ ಸಿಕ್ಕಿಬಿದ್ದ ಟೊಮೆಟೋ ಕಳ್ಳರು

    ಬೆಂಗ್ಳೂರಲ್ಲಿ ಕದ್ರು, ಚೆನ್ನೈನಲ್ಲಿ ಮಾರಿದ್ರು- ಕೊನೆಗೂ ಸಿಕ್ಕಿಬಿದ್ದ ಟೊಮೆಟೋ ಕಳ್ಳರು

    – ಸಿಸಿಟಿವಿ ಆಧರಿಸಿ ನಾಲ್ವರ ಬಂಧನ

    ಬೆಂಗಳೂರು: ಟೆಮೆಟೋ (Tomato) ತುಂಬಿದ್ದ ಬೊಲೆರೋ ವಾಹನ ಕಳ್ಳತನ ಮಾಡಿದ್ದ ನಾಲ್ವರು ಆರೋಪಿಗಳನ್ನು ಆರ್‍ಎಂಸಿ ಯಾರ್ಡ್ ಪೊಲೀಸರು (Police) ಬಂಧಿಸಿದ್ದಾರೆ.

    ಆರೋಪಿಗಳು ಬೆಂಗಳೂರಲ್ಲಿ (Bengaluru) ವಾಹನವನ್ನು ಕದ್ದು ಬಳಿಕ ಟೊಮೆಟೋವನ್ನು ಚೆನ್ನೈಗೆ ಸಾಗಿಸಿ ಮಾರಾಟ ಮಾಡಿದ್ದಾರೆ. ಬಳಿಕ ಖಾಲಿ ವಾಹನವನ್ನು ಪೀಣ್ಯ ಬಳಿ ನಿಲ್ಲಿಸಿ ಪರಾರಿಯಾಗಿದ್ದರು. ಕಳೆದ 11 ದಿನಗಳಿಂದಲೂ ಈ ಪ್ರಕರಣದ ಹಿಂದೆ ಬಿದ್ದಿದ್ದ ಪೊಲೀಸರು ಕೊನೆಗೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಬೆಲೆ ಏರಿಕೆ ನಡುವೆ 2 ಟನ್ ಟೊಮೆಟೊವಿದ್ದ ವಾಹನವನ್ನೇ ಕದ್ದ ಕಳ್ಳರು

    ಇದೇ ತಿಂಗಳ 10 ರಂದು ರೈತರು ಚಿತ್ರದುರ್ಗದಿಂದ ಆರ್‍ಎಂಸಿ ಯಾರ್ಡ್‍ಗೆ ಟೊಮೆಟೋ ಲೋಡ್ ಅನ್ನು ತಂದಿದ್ದರು. ರೈತರು ಯಾವಾಗ ವಾಹನವನ್ನು ನಿಲ್ಲಿಸಿ, ಟೀ ಕುಡಿಯಲು ಹೋಗಿದ್ದಾರೋ ಆಗ ಬಂದ ಕಳ್ಳರು ವಾಹನ ಸಮೇತವಾಗಿ 2 ಟನ್ ಟೊಮೆಟೋ ಹೊತ್ತೊಯ್ದಿದ್ದರು.

    ಕಾರಿನಲ್ಲಿ ಬಂದಿದ್ದ ಮೂವರು ವಾಹನವನ್ನು ಹೈಜಾಕ್ ಮಾಡಿದ್ದರು. ಟೊಮೆಟೋ ತುಂಬಿದ್ದ ಗಾಡಿ ಫಾಲೋ ಮಾಡಿ ಬಂದ ಆರೋಪಿಗಳು, ಆರ್‍ಎಂಸಿ ಯಾರ್ಡ್ ಬಳಿ ಅಡ್ಡ ಹಾಕಿ ರೈತನಿಗೆ ಅವಾಜ್ ಹಾಕಿದ್ದರು. ಗಾಡಿ ಟಚ್ ಆಗಿದೆ ಎಂದು ನಾಟಕ ಮಾಡಿ ಡ್ರೈವರ್‍ಗೆ ಥಳಿಸಿದ್ದು, ನಂತರ ರೈತನ ಮೇಲೂ ಹಲ್ಲೆ ಮಾಡಿ ಹಣ ಕೊಡು ಬೆದರಿಸಿದ್ದರು. ಬಳಿಕ ಆನ್‍ಲೈನ್ ಮೂಲಕ ಹಣ ತಮ್ಮ ಖಾತೆಗೆ ವರ್ಗಾಯಿಸಿಕೊಂಡು ವಾಹನವನ್ನು ಕದ್ದೊಯ್ದಿದ್ದರು. ಇದನ್ನೂ ಓದಿ: ಬಾಂಗ್ಲಾದಲ್ಲಿ ಹಿಂದೂ ದೇಗುಲ ಧ್ವಂಸ- ಆರೋಪಿಯ ಬಂಧನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]