Tag: ಪೀಠತ್ಯಾಗ

  • ಲವ್‍ಗಾಗಿ ಸ್ವಾಮೀಜಿ ಪೀಠತ್ಯಾಗ- ಸೋಶಿಯಲ್ ಮೀಡಿಯಾದಲ್ಲಿ ಲವರ್ ಜೊತೆ ಪ್ರತ್ಯಕ್ಷ..!

    ಲವ್‍ಗಾಗಿ ಸ್ವಾಮೀಜಿ ಪೀಠತ್ಯಾಗ- ಸೋಶಿಯಲ್ ಮೀಡಿಯಾದಲ್ಲಿ ಲವರ್ ಜೊತೆ ಪ್ರತ್ಯಕ್ಷ..!

    ಕೊಪ್ಪಳ: ಪ್ರೀತಿಗಾಗಿ ಪೀಠತ್ಯಾಗ ಮಾಡಿ ನಾಪತ್ತೆಯಾಗಿದ್ದ ಸ್ವಾಮೀಜಿಯೊಬ್ಬರು ಪ್ರೀತಿಸಿದ ಹುಡಗಿಯೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರತ್ಯಕ್ಷವಾಗಿದ್ದಾರೆ. ಇಬ್ಬರು ಹುಟ್ಟು ಹಬ್ಬ ಆಚರಣೆ ಮಾಡುತ್ತಿರೋ ಫೋಟೋ ವೈರಲ್ ಆಗಿದೆ.

    ಜಿಲ್ಲೆಯ ಅಳವಂಡಿ ಗ್ರಾಮದ ಸಿದ್ದೇಶ್ವರ ಮಠದ ಸಿದ್ದಲಿಂಗ ಸ್ವಾಮೀಜಿ ಪ್ರೀತಿಗಾಗಿ ಪೀಠತ್ಯಾಗ ಮಾಡಿದ್ದರು. ಕಳೆದ ಜನವರಿಯಲ್ಲಿ ಪೀಠತ್ಯಾಗ ಮಾಡಿ ನಾಪತ್ತೆಯಾಗಿದ್ದ ಸಿದ್ದಲಿಂಗ ಸ್ವಾಮೀಜಿ ಇದೀಗ ಸಾಮಾಜಿಕ ಜಾಲತಾಣದ ಮೂಲಕ ಪತ್ತೆಯಾಗಿದ್ದಾರೆ. ಮುಂಡರಗಿ ಕಾಲೇಜಿನಲ್ಲಿ ಸ್ವಾಮೀಜಿ ಪಾಠ ಮಾಡಲು ಹೋಗುತ್ತಿದ್ದರು. ಆಗ ಕಾಲೇಜಿಗೆ ಬರುತ್ತಿದ್ದ ಹುಡಗಿಯೊಬ್ಬಳ ಮೇಲೆ ಸ್ವಾಮೀಜಿಗೆ ಪ್ರೇಮಾಂಕುರವಾಗಿದೆ. ಬಳಿಕ ಹೇಗೋ ಇಬ್ಬರ ನಡುವೆ ಪ್ರೀತಿ ಹುಟ್ಟಿ, ಕೊನೆಗೆ ಸ್ವಾಮೀಜಿ ಹುಡುಗಿಗಾಗಿ ಪೀಠವನ್ನ ತ್ಯಾಗ ಮಾಡಿ ನಾಪತ್ತೆಯಾಗಿದ್ದರು. ಇದನ್ನೂ ಓದಿ:ಅಳವಂಡಿ ಪೀಠತ್ಯಾಗ ಪ್ರಕರಣ – ಸಾಮಾಜಿಕ ಜಾಲತಾಣದಲ್ಲಿ ಸ್ವಾಮೀಜಿ, ವಿದ್ಯಾರ್ಥಿನಿಯ ಫೋಟೋ ವೈರಲ್

    ಈ ಬಗ್ಗೆ ಮಠದ ಭಕ್ತರು ಹಾಗೂ ಜನರು ಪ್ರಶ್ನಿಸಿದಾಗ, ಸಿದ್ದಲಿಂಗ ಸ್ವಾಮೀಜಿಗಳು ವೈಯಕ್ತಿಕ ಕಾರಣಕ್ಕಾಗಿ ಪೀಠ ತ್ಯಾಗ ಮಾಡಿದ್ದಾರೆಂದು ಮಠದ ಆಡಳಿತ ಮಂಡಳಿ ಉತ್ತರಿಸಿ ಸುಮ್ಮನಾಗಿತ್ತು ಇದೀಗ ಮೂರು ತಿಂಗಳ ಬಳಿಕ ಸ್ವಾಮೀಜಿ ಹುಡಗಿಯೊಂದಿಗೆ ಪ್ರತ್ಯಕ್ಷವಾಗಿದ್ದಾರೆ. ಹುಡುಗಿಯೊಂದಿಗೆ ಸ್ವಾಮೀಜಿ ಹುಟ್ಟುಹಬ್ಬ ಆಚರಿಕೊಳ್ಳುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

  • ಕಾಲೇಜಿಗೆ ಬರುತ್ತಿದ್ದ ಶಿಷ್ಯೆಯನ್ನೇ ಮದ್ವೆಯಾದ್ರಾ ಸ್ವಾಮೀಜಿ..?

    ಕಾಲೇಜಿಗೆ ಬರುತ್ತಿದ್ದ ಶಿಷ್ಯೆಯನ್ನೇ ಮದ್ವೆಯಾದ್ರಾ ಸ್ವಾಮೀಜಿ..?

    ಕೊಪ್ಪಳ: ಜಿಲ್ಲೆಯ ಅಳವಂಡಿ ಗ್ರಾಮದ ಶ್ರೀ ಸಿದ್ದೇಶ್ವರ ಮಠದ ಸ್ವಾಮೀಜಿಯವರು ಪೀಠತ್ಯಾಗ ಮಾಡಿದ್ದು, ಇದೀಗ ಸ್ವಾಮೀಜಿಗಳ ನಡೆ ಭಾರೀ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

    13ನೇ ವಯಸ್ಸಿನಲ್ಲಿಯೇ ಪೀಠಾಧಿಪತಿಯಾಗಿದ್ದ ಸ್ವಾಮೀಜಿಯವರು ಮುಂಡರಗಿಯ ಕಾಲೇಜಿನಲ್ಲಿ ಪಾಠವನ್ನೂ ಮಾಡುತ್ತಿದ್ದರು. ಇದೀಗ ಕಾಲೇಜಿಗೆ ಬರುತ್ತಿದ್ದ ತಮ್ಮ ವಿದ್ಯಾರ್ಥಿನಿಯನ್ನೇ ಪ್ರೀತಿಸಿ ಮದುವೆಯಾಗಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.

    ಈ ಮಠವೂ ಉಜ್ಜಯನಿಯ ಶಾಖಾ ಪೀಠದಲ್ಲೊಂದಾಗಿದೆ. ಇದೇ ಕಾರಣಕ್ಕಾಗಿ ಪೀಠ ತ್ಯಾಗ ಮಾಡಿ ಹೋಗಿದ್ದಾರೆ ಎನ್ನುವ ಗುಮಾನಿಯೂ ಹರಡಿದೆ. ಆದ್ರೆ ಒಂದು ಗುಂಪು ಮಠದ ಅಭಿವೃದ್ಧಿ ಮಾಡಲು ಸಾಧ್ಯವಾಗದೇ ಮನನೊಂದು ಮಠತ್ಯಾಗ ಮಾಡಿದ್ದಾರೆ ಅನ್ನುತ್ತಿದೆ.

    ಈ ಬಗ್ಗೆ ಸ್ವಾಮೀಜಿಗಳ ತಂದೆ ಪ್ರಕಾಶ್ ಇನಾಂದರ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಸ್ವಾಮೀಜಿಗಳು ಪೀಠತ್ಯಾಗ ಮಾಡಿ 2 ದಿನಗಳಾಗಿವೆ. ನಾನು ಅಳವಂಡಿಯಲ್ಲಿಯೇ ಇದ್ದೇನೆ. ಆದ್ರೆ ಯಾಕೆ ಪೀಠ ತ್ಯಾಗ ಮಾಡಿದ್ದಾರೆ ಅಂತ ಗೊತ್ತಿಲ್ಲ ಅಂದ್ರು.

    ನಾನು ಮಠಕ್ಕೆ ಹೋಗಿಲ್ಲ. ಮನಸ್ಸಿಗೆ ಬೇಜರಾಗಿ ಮನೆಯಿಂದ ಹೊರಗಡೆ ಹೋಗಿಯೇ ಇಲ್ಲ. ಹೀಗಾಗಿ ನನಗೇನೂ ಗೊತ್ತಿಲ್ಲ. ಹೋಗುವ ಮೊದಲು ಅವರ ಮೊಬೈಲ್ ನನಗೆ ಕೊಟ್ಟು ಹೋಗಿದ್ದಾರೆ. ಮನನೊಂದು ಹೋಗುತ್ತಿದ್ದೇನೆ ಅಂತ ಹೇಳಿದ್ದಾರೆ ಅಷ್ಟೇ. ಅದಕ್ಕಿಂತ ಹೆಚ್ಚು ನನಗೇನೂ ಗೊತ್ತಿಲ್ಲ. ಎಲ್ಲಿ ಹೋಗಿದ್ದಾರೆ ಅಂತನೂ ನನಗೆ ತಿಳಿದಿಲ್ಲ ಅಂತ ಹೇಳಿದರು.

    ಪೀಠತ್ಯಾಗ ಮಾಡುವ ಬಗ್ಗೆ ಮಠದವರಿಗೆ ತಿಳಿಸಿದ್ದಾರೆ. ಒಟ್ಟಿನಲ್ಲಿ ಪೀಠತ್ಯಾಗ ಮಾಡುವ ಬಗ್ಗೆ ಯಾರ ಜೊತೆಗೂ ಏನೂ ಮಾತನಾಡಿಕೊಂಡಿಲ್ಲ ಅಂತ ಅವರು ತಿಳಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv